ಗುರುಮಠಕಲ್: ಸರಕಾರಿ ಭಾಷಾ ಅಲ್ಪಸಂಖ್ಯಾತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿ-ಎಂಸಿ) ಅಸ್ತಿತ್ವಕ್ಕೆ ತರಲಾಯಿತು. ಆಯಾಸ್ ಅಲಿ ತಂ ತಾಹೆರ್ ಅಲಿ -ಅಧ್ಯಕ್ಷರು, ವೆಂಕಟಮ್ಮ ತಂದೆ ನಾರಾಯಣ – ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಸಮಿತಿಯು 18 ಸದಸ್ಯರನ್ನು ಒಳಗೊಂಡಿರುತ್ತದೆ. 8 ಪುರುಷ ಸದಸ್ಯರು ಮತ್ತು 8 ಜನ ಮಹಿಳಾ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಮುಖ್ಯ ಗುರುಗಳಾದ ಅನುರಾಧ ತಿಳಿಸಿದ್ದಾರೆ.
ಸಮೂಹ ಸಂಪನ್ಮೂಲ ವ್ಯಕ್ತಿ ಬಾಲಪ್ಪ ಸೇರಿದಂತೆ ಶಾಲೆಯ ಸಿಬ್ಬಂದಿ, ಎಲ್ಲ ಪಾಲಕ ಬಳಗ ಉಪಸ್ಥಿತರಿದ್ದರು.

