ಸತ್ಯಕಾಮ ವಾರ್ತೆ ಯಾದಗಿರಿ:-
ಪ್ರಧಾನಿ ನರೇಂದ್ರ ಮೋದಿಜಿ ಅವರು ದೇಶದ ಅಭಿವೃದ್ಧಿಗಾಗಿ 4,078 ದಿನಗಳ ಕಾಲ ದೇಶದ ಪ್ರಧಾನಿಯಾಗಿ ನಿರಂತರ ಸೇವೆ ಮಾಡುವುದರೊಂದಿಗೆ, ಮಾಜಿ ಪ್ರಧಾನಿ ಮಂತ್ರಿ ಇಂದಿರಾ ಗಾಂಧಿಯವರ ಸೇವಾವಧಿ (4077 ದಿನ) ಅನ್ನು ಹಿಂದಿಕ್ಕಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ದೇಶದ ಇತಿಹಾಸದಲ್ಲಿ ಎರಡನೇ ಅತಿ ದೀರ್ಘಾವಧಿಯ ಪ್ರಧಾನಮಂತ್ರಿ, ರಾಜಕೀಯ ಪಕ್ಷದ ನಾಯಕರಾಗಿ, ಸತತ ಆರು ಸಲ ವಿಜಯಗಳಿಸಿ ಸಾಂವಿಧಾನಿಕ ಹುದ್ದೆಯ ಜವಾವ್ದಾರಿ ನಿರ್ವಹಿಸಿರುವ ಹೆಗ್ಗಳಿಕೆ, ನೆಹರೂ ಹೊರತಾಗಿ ಸತತ ಮೂರು ಭಾರಿ ಪ್ರಧಾನಿ ಹುದ್ದೆಯ ಜವಾಬ್ದಾರಿ ಹಾಗೂ ದೀರ್ಘಾವಧಿ ಸೇವೆ ಸಲ್ಲಿಸಿದ ಕಾಂಗ್ರೆಸ್ಸೇತರ ಹಾಗೂ ಹಿಂದಿಯೇತರ ಪ್ರಧಾನಿ ಎಂಬ ಕೀರ್ತಿಯೂ ಸನ್ಮಾನ್ಯ ಪ್ರಧಾನಿಗಳದ್ದಾಗಿದೆ.
ಮೋದಿಜಿಯವರು ಸಿಎಂ ಮತ್ತು ಪ್ರಧಾನಿಯಾಗಿ ಸುಮಾರು 24 ವರ್ಷಗಳ ಸುದೀರ್ಘ ಆಡಳಿತದೊಂದಿಗೆ, ರಾಷ್ಟ್ರದ ಪ್ರಗತಿಗೆ ದೃಢಸಂಕಲ್ಪ, ತ್ಯಾಗ ಮತ್ತು ಅವಿರತ ಬದ್ಧತೆಯ ಸಂಕೇತವಾಗಿ ಉಳಿದಿದ್ದಾರೆ. ಇದು ಮೋದಿಜೀಯವರು ನಿರ್ಮಿಸಿದ ಮೈಲಿಗಲ್ಲಿನ ಸಂಭ್ರಮಾಚರಣೆ ಮಾತ್ರವಲ್ಲ, ಪರಿವರ್ತನೆಯ ಯುಗ ಮತ್ತು ನಿರ್ಣಾಯಕ, ದೂರದೃಷ್ಟಿಯ ನಾಯಕತ್ವವನ್ನು ಆಚರಿಸುವ ಸಂಭ್ರಮದ ಕ್ಷಣವಾಗಿದೆ ಎಂದು ಹೇಳಿದರು.

