ವಾರ್ಡ ನಂ 5 ರಲ್ಲಿ ಲಲಿತಾ ಅನಪುರ ಮಿಂಚಿನ ಸಂಚಾರ.
ಸತ್ಯಕಾಮ ವಾರ್ತೆ ಯಾದಗಿರಿ:
ತಾವು ಪ್ರತಿನಿಧಿಸುವ ವಾರ್ಡ ನಂ 5 ರ ದೊಡ್ಡ ಕೆರೆ ಏರಿಯಾ ಮತ್ತು ದುರ್ಗಾ ನಗರದ ವಿವಿಧಡೆ ಬುಧವಾರ ಮಿಂಚಿನ ಸಂಚಾರ ನಡೆಸಿದ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು, ಅಲ್ಲಿನ ದೊಡ್ಡಕರೆ ಮಳೆ ಬಂದರೆ ನೀರು ಶಾಲೆಗೆ ಹಾಗೂ ಅಕ್ಕ,ಪಕ್ಕದ ಮನೆಗಳಿಗೆ ನುಗ್ಗುತ್ತಿದ್ದು, ಕೂಡಲೇ ತಡೆಗೊಡೆ ನಿರ್ಮಿಸಲು ಅಂದಾಜು ವೆಚ್ಚ ತಯಾರಿಸುವಂತೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಅದೇ ವಾರ್ಡನ ದುರ್ಗಾ ನಗರದ ಸ್ಲಂ ಏರಿಯಾಕ್ಕೂ ಭೇಟಿ ನೀಡಿದ ಅವರು,ಅಕ್ಕ,ಪಕ್ಕ ಮನೆಗಳಿಗೆ ನೀರು ನುಗ್ಗಬಾರದು ಮತ್ತು ತಾಂಬರ್ ಕೆರೆ ಪಕ್ಕದಲ್ಲಿ ರಸ್ತೆ ಹಾಳಾಗಬಾರದೆಂದು ಸ್ಟೋನ್ ಪೆಚಿಂಗ್ ಮಾಡಲು ಸಹ ಹೇಳಿದರು.
ಪ್ರಕೃತಿ ವಿಕೋಪ ನಿಧಿಯಡಿ ಮಂಜೂರು ಆಗಿರುವ 25 ಲಕ್ಷ ರೂ.ದಲ್ಲಿ ಈ ಎರಡು ಕೆಲಸ ಜೊತೆಗೆ ಸಣ್ಣ,ಪುಟ್ಟ ಕೆಲಸಗಳನ್ನು ಮಾಡಲು ಅಧ್ಯಕ್ಷರು ಸೂಚಿಸದರು. ಸುಮಾರು ಒಂದು ತಾಸು ತಮ್ಮ ವಾರ್ಡಿನ ವಿವಿಧಡೆ ಸಂಚರಿಸಿದ ಅವರು ಅಲ್ಲಿನ ಕೆಲ ಸ್ಥಳಗಳಲ್ಲಿ ವಿದ್ಯುತ್ ಕಂಬಗಳು ಚರಂಡಿ ಒಳಗಡೆ ಹೂತಿದ್ದ ಗಮನಿಸಿದ ಅವರು ಅವುಗಳನ್ನು ಸ್ಥಳಾಂತರಿಸಲು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಶಾಲೆಯ ಮುಂಭಾಗದಲ್ಲಿರುವ ಕಂಬಕ್ಕೆ ದೀಪ ಹಾಕಲು ಸೂಚನೆ ನೀಡಿದರು.
ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವಿಶ್ವನಾಥ ಪಾಟೀಲ್, ನಗರಸಭೆ ನಾಮ ನಿರ್ದೇಶಕ ಸದಸ್ಯರಾದ ವೆಂಕಟೇಶ ನಾಗುಂಡಿ, ನಿಂಗಪ್ಪ ಜಾಲಗಾರ್, ದುರ್ಗಪ್ಪ, ಸುಗಪ್ಪ ಸೇರಿದಂತೆಯೇ ಇತರರಿದ್ದರು.

