ಯಾದಗಿರಿ: ಲಿಂಗೇರಿ ತಾಂಡದ ಮೋಹನ್ ಚೌಹಾಣ್ ಅವರನ್ನು ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ (ರಿ) ಯಾದಗಿರಿ ಜಿಲ್ಲಾ ವಕ್ತಾರನಾಗಿ ನೇಮಕ ಮಾಡಲಾಗಿದೆ.
ನಗರದ ಹಳೆ ಐಬಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಂಗಾರು ಜೆ.ಬಿ. ರಾಠೋಡ ಅವರ ನೇತೃತ್ವದಲ್ಲಿ ನೇಮಕಾತಿ ಆದೇಶ ಪತ್ರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರು, ಸಂಘದ ಪರವಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸಿ, ಬಂಜಾರ ಸಮುದಾಯದ ಅಭಿವೃದ್ಧಿಗೆ ಬದ್ಧತೆಯಿಂದ ಸಹಕರಿಸಬೇಕು ಎಂದು ಹೇಳಿದರು.
ಹೊಸ ವಕ್ತಾರನ ನೇಮಕಾತಿ ಸಂಘದ ಚಟುವಟಿಕೆಗಳು, ಸಮುದಾಯದ ಹಕ್ಕು-ಹೆಮ್ಮೆಗಳು ಹಾಗೂ ಸಮಸ್ಯೆಗಳ ಕುರಿತು ಜಿಲ್ಲಾ ಮಟ್ಟದಲ್ಲಿ ಪ್ರಾಬಲ್ಯದಿಂದ ಧ್ವನಿ ಎತ್ತಲು ನೆರವಾಗಲಿದೆ ಎಂದು ಸಂಘದ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರ. ಕಾರ್ಯದರ್ಶಿ ವಿಜಯ್ ಜಾದವ್, ಜಿಲ್ಲಾ ಉಪಾಧ್ಯಕ್ಷ ಅಂಬರೇಶ್ ಅರಕೇರಾ, ಯಾದಗಿರಿ, ತಾ. ಅಧ್ಯಕ್ಷ ವಿಕ್ರಮ್ ಚೌಹಾಣ್, ಖಜಾಂಜಿ ಗೋಪಾಲ ಚೌಹಾಣ್, ವಡಗೇರಾ ತಾ. ಅಧ್ಯಕ್ಷ ಗೋವಿಂದ ರಾಠೋಡ, ಯುವ ಘಟಕ ಜಿಲ್ಲಾಧ್ಯಕ್ಷ ರಾಜು ರಾಠೋಡ, ಉಪಾಧ್ಯಕ್ಷ ಕುಮಾರ್, ಮೋಹನ್ ಜಾದವ್, ಪರಮೇಶ್ ಸೌದಾಗರ್ ತಾಂಡ ಸೇರಿದಂತೆ ಹಲವರು ಭಾಗವಹಿಸಿದರು.

