- ‘ದಕ್ಷ ಆಡಳಿತ ನೀಡುತ್ತಿರುವ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ, ಪ್ರಜಾಪ್ರಭುತ್ವ ದುರ್ಬಲಗೊಳಿಸಲು ಕೈ ಯತ್ನ’
ಸತ್ಯಕಾಮ ವಾರ್ತೆ ಯಾದಗಿರಿ:
ದೇಶಧ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆಡಳಿತ ಅವಧಿಯನ್ನು ಹಿಂದಿಕ್ಕಿ ಅತಿ ಹೆಚ್ಚು ಅವಧಿಯ ಎರಡನೇ ಪ್ರಧಾನ ಮಂತ್ರಿಗಳಾಗಿದ್ದುದು ದೇಶದ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ಜಿಲ್ಲಾ ವಕ್ತಾರ ಹಣಮಂತ ಇಟಗಿ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಇಂದಿರಾಗಾAದಿಯವರ ಅಧಿಕಾರ ಅವಧಿಯ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಇಂದು ನಿರ್ಮಿಸಿದ್ದು, ನಾಗಾಲೋಟದಲ್ಲಿ ಮುಂದೆ ಸಾಗುತ್ತಿದ್ದಾರೆ. ಮೋದಿಜಿ ಅವರ ಆಡಳಿತಕ್ಕೆ ದೇಶದ ಜನತೆ ಹೆಮ್ಮೆ ಪಡುತ್ತಿದ್ದು, ಇನ್ನು ಹಲವು ದಾಖಲೆ ನಿರ್ಮಿಸಲಿ ಎಂದು ವಿಶ್ವದಾದ್ಯಂತ ಇರುವ ಭಾರತೀಯರು ಹಾರೈಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ದೇಶವನ್ನು ಅಭೂತಪೂರ್ವವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಅವರ ಆಡಳಿತವನ್ನು ನೋಡಿ ವಿರೋಧ ಪಕ್ಷವಾದ ಕಾಂಗ್ರೆಸ್ ಹತಾಶಗೊಂಡು ನಿರಾಧಾರವಾದ ಆರೋಪಗಳನ್ನು ದಿನನಿತ್ಯ ಮಾಡುವುದನ್ನೇ ಒಂದು ಚಟವಾಗಿಸಿಕೊಂಡಿದೆ. ದೇಶದ ಅಭಿವೃದ್ಧಿಗಾಗಿ ಹಗಲು ರಾತ್ರಿ ಶ್ರಮಿಸುತ್ತ ಭಾರತ ದೇಶವನ್ನು ಪ್ರಪಂಚದ 4ನೇ ಅತಿದೊಡ್ಡ ಆರ್ಥಿಕತೆಯ ಸ್ಥಾನಕ್ಕೆ ಹೆಚ್ಚಿಸಿ ಎಲ್ಲರಂಗಗಳಲ್ಲಿಯೂ ಅಭಿವೃದ್ಧಿ ಪಥದಲ್ಲಿ ದೇಶ ಕೊಂಡೊಯ್ಯುತ್ತಿದ್ದಾರೆ.
ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಮತ್ತು ಸ್ವಚ್ಛ ಭಾರತ ಅಭಿಯಾನದಂತಹ ದೂರದೃಷ್ಟಿಯ ಕಾರ್ಯಕ್ರಮಗಳು ನೀಡಿದ್ದಾರೆ.
ರೈತರಿಗೆ ಅನುಕೂಲವಾಗುವಂತೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡಿದೆ. ರಾಜತಾಂತ್ರಿಕ ಪ್ರಯತ್ನಗಳು ಭಾರತಕ್ಕೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ಇತರ ದೇಶಗಳೊಂದಿಗೆ ಬಲವಾದ ಸಂಬAಧಗಳAತಹ ಉಪಕ್ರಮಗಳೊಂದಿಗೆ ಜಾಗತಿಕ ವೇದಿಕೆಯಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿಕೊಟ್ಟಿವೆ. ಇಂದಿರಾಗಾAದಿಗಿAತಲೂ ಸಮರ್ಥವಾಗಿ ದೇಶವನ್ನು ಮುನ್ನಡೆಸುತ್ತಿರುವ ಮೋದಿಜಿ ಅವರ ನೇತೃತ್ವದ ಕೇಂದ್ರದ ಸುಸ್ಥಿರ ಸರ್ಕಾರದ ಕೂದಲು ಕೊಂಕಿಸಲು ಆಗದೆ ಇರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಹತಾಶರಾಗಿದ್ದು, ಕ್ಷÄಲ್ಲಕ ಕಾರಣ ಮುಂದೆ ಮಾಡಿ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿಯ ವಿರುದ್ಧ ಇಲ್ಲಸಲ್ಲದ ಸುಳ್ಳುಗಳನ್ನು ಮುಂದೆ ಮಾಡಿ ತಾವು ಜೀವಂತ ಇದ್ದೇವೆ ಎಂದು ತೋರಿಸಿಕೊಳ್ಳಲು ಹೆಣಗುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಕರ್ನಾಟಕದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಸೇರಿದಂತೆ ಹತ್ತಾರು ಹಗರಣಗಳು ಮಾಡಿ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದ್ದು, ಒಟ್ಟಾರೆ ದೇಶದಾದ್ಯಂತ ಸುಳ್ಳಿನ ಆಸರೆಯೊಂದಿಗೆ ಪ್ರಜಾಪ್ರಭುತ್ವ ಮತ್ತು ಕೇಂದ್ರದ ಉತ್ತಮ ಆಡಳಿತವನ್ನು ದುರ್ಬಲಗೊಳಿಸಲು ಇನ್ನಿಲ್ಲದಂತೆ ಹೆಣಗುತ್ತಿದೆ. ಆದರೆ ದೇಶದ ಹಾಗೂ ರಾಜ್ಯದ ಜನತೆ ಕಾಂಗ್ರೆಸ್ ನ ಸುಳ್ಳಿಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

