ಸತ್ಯಕಾಮ ವಾರ್ತೆ ಯಾದಗಿರಿ:
ಗ್ರಾಮದ ಅವರ ಮನೆಗೆ ತೆರಳಿದ್ದ ಶಾಸಕರು ಮಕ್ಕಳನ್ನು ಕಳೆದಕೊಂಡ ಹೆತ್ತವರ ದುಖಃ ಕಂಡು ಮರುಗಿದರು. ನಾನು ಮಾಡುವ ಈ ವೈಯಕ್ತಿಕ ಸಹಾಯ ದೊಡ್ಡದಲ್ಲ, ಈ ಬಗ್ಗೆ ಸಿಎಂ ಗಮನಕ್ಕೆ ತಂದು ಹೆಚ್ಚಿನ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದೆಂದರು.
ಬೆಂಗಳೂರಿನಲ್ಲಿ ಮೃತ ಪಟ್ಟ ಯಾದಗಿರಿ ಮತಕ್ಷೇತ್ರ ಕುರಕುಂದಾ ಗ್ರಾಮದ ಚಾಂದಪಾಶಾ ಎಂಬುವವರ ಮಕ್ಕಳ ಕಳಬರಹಕ್ಕೇ ಅಂತಿಮ ನಮನ ಸಲ್ಲಿಸಿದ ಶಾಸಕ ಚನ್ನಾರಡ್ಡಿ ಪಾಟೀಲ್ ಅವರು, ಚಿಕ್ಕ ಮಕ್ಕಳ ಸಾವು ದುಖಃ ತಂದಿದೆ. ಹೆತ್ತವರ ಮುಂದೆ ಮಕ್ಕಳು ಸಾಯಿಬಾರದು, ಆ ದುಖಃಕ್ಕೆ ಕೊನೆಯೇ ಇಲ್ಲ, ಆದರೂ ಧೈರ್ಯದಿಂದ ಇದ್ದು ಜೀವನ ನಡೆಸಿರಿ ಎಂದು ಸಾಂತ್ವನ ಹೇಳಿದರು.
ಗ್ರಾಮದ ಅವರ ಮನೆಗೆ ತೆರಳಿದ್ದ ಶಾಸಕರು ಮಕ್ಕಳನ್ನು ಕಳೆದಕೊಂಡ ಹೆತ್ತವರ ದುಖಃ ಕಂಡು ಮರುಗಿದರು. ನಾನು ಮಾಡುವ ಈ ವೈಯಕ್ತಿಕ ಸಹಾಯ ದೊಡ್ಡದಲ್ಲ, ಈ ಬಗ್ಗೆ ಸಿಎಂ ಗಮನಕ್ಕೆ ತಂದು ಹೆಚ್ಚಿನ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದೆಂದರು.
ಈ ವೇಳೆ ಕಾಸೀಮ ಮುತ್ತ್ಯಾ, ಡಾ. ರಾಜು ಬೆಳಗೇರಿ,ಕಾಶೀಮ್ ಗುಲಾಮಿ, ಮಕಧುಮ್, ಶರಣಬಸವ ಕುರಕುಂದಿ, ಮೆಹಬೂಬ್, ಶರಣ ಗೌಡ, ಬಸನಗೌಡ, ಅಂಬ್ರೆಷ್, ರಫಿ ಬೆಳಗೇರ, ಮೋಸಪ್ಪಾ, ಹಾಗೂ ಕುರಕುಂದಿ ಗ್ರಾಮಸ್ಥರು ಇದ್ದರು.