ಇಲ್ಲಿನ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸಂಸ್ಕ್ರತ ಭಾಷೆ ಚನ್ನಾಗಿ ಬಲ್ಲವರಾಗಿದ್ದಾರೆ. ಸಂಧರ್ಭಕ್ಕೆ ಅನುಸಾರವಾಗಿ ಅಧಿವೇಶನದಲ್ಲಿ ಹಾಡಿದ್ದಾರೆ ಅಷ್ಠೆ, ಬಿಜೆಪಿ ನಾಯಕ ಬಿ.ಎಲ್. ಸಂತೋಷ ಅವರನ್ನು ಟೀಕಿಸಿದ ಮಹೇಶ ತಿಮುರುಡಿ ಅವರನ್ನು ಒದ್ದು ಒಳಗೆ ಹಾಕಿದ್ದವೆ ಎಂಬ ಮಾತು ಕೂಡಾ ದೂರು ಬಂದ ಹಿನ್ನಲೆಯಲ್ಲಿ ಹೇಳಿದ್ದಾಗಿದೆ. ಈ ಎರಡನ್ನು ಬೇರೆ ರೀತಿಯಲ್ಲಿ ಹೊಲಿಕೆ ಮಾಡುವುದು ಸರಿಯಲ್ಲ ಎಂದರು.
ಮುಂದಿನ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಕ್ರಾಂತಿ ನಡೆಯುತ್ತಾ ಎಂಬ ಪ್ರಶ್ನೆಗೆ ಅಂತಹದ್ದು ಏನು, ಅದೆಲ್ಲ ಪಕ್ಷದ ಕೇಂದ್ರ ಸಮಿತಿಗೆ ಬಿಟ್ಟಿದ್ದು ಎಂದರು. ಮಾಜಿ ಸಚಿವ ರಾಜಣ್ಣ ಅವರು ದೆಹಲಿಗೆ ಹೋಗಿ ನಾಯಕರನ್ನು ಭೇಟಿ ಮಾಡಿ ಆಗಿರುವ ಘಟನೆ ವಿವರಿಸುತ್ತಾರೆ, ಮುಂದಿನದು ಹೈಕಮಾಂಡಗೆ ಬಿಟ್ಟಿದ್ದು ಎಂದರು. ವಾಲ್ಮೀಕಿ ಸಮುದಾಯವನ್ನು ತುಳಿಯುವ ಕೆಲಸ ಈ ಸರ್ಕಾರ ಮತ್ತು ಪಕ್ಷದಿಂದ ನಡೆಯುತ್ತಿದೆ ಎಂಬುವುದು ಸುಳ್ಳು ಎಂದರು.
ಬೇರೆಯವರಂತೆಯೇ ನಮ್ಮ ನಾಯಕ ರಾಹುಲ್ ಗಾಂಧಿ ಅವರು ರಿವೆಂಜ್ ಪಾಲಿಟಿಕ್ಸ್ ಮಾಡುವವರಲ್ಲ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬುರುಡೆ ಚಿನ್ನಯ್ಯ ಅರೆಸ್ಟ್ ಆದ ಬಗ್ಗೆ ಕೇಳಿದ ಪ್ರಶ್ನೆಗೆ ಧರ್ಮಸ್ಥಳ ಒಂದು ಊರು. ಅದೇನು ರಾಜ್ಯ, ರಾಷ್ಟ್ರದ ಸಮಸ್ಯೆ ಅಲ್ಲ. ಕೋರ್ಟ್ ಆದೇಶದಂತೆಯೇ ಸರ್ಕಾರ ತನಿಖೆ ನಡೆಸಿದೆ. ಅದರಿಂದ ಏನೇನು ಹೊರಬರಬೇಕು ಅದು ಬರುತ್ತದೆ. ನೀವೇ ಅದು ದೊಡ್ಡದಾಗಿ ನಿತ್ಯ ಬಿಂಬಿಸುತ್ತಿದ್ದಿರಿ ಎಂದು ಮಾಧ್ಯಮದವರ ಕಡೆ ಸಚಿವರು ಬೊಟ್ಟು ಮಾಡಿದರು.
ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಇದ್ದರು.
ಬೆಳೆ ಹಾನಿ: ಸಮೀಕ್ಷೆ ವರದಿ ನಂತರ ಪರಿಹಾರ ವಿತರಣೆ.
ಅಕಾಲಿಕ ಮಳೆಯಿಂದ ಹಾನಿಯಾದ ಬೆಳೆ ಬಗ್ಗೆ ಜಿಲ್ಲಾಡಳಿತ ಸಮೀಕ್ಷೆ ನಡೆಸಿ ವರದಿ ಕೊಟ್ಟ ನಂತರ ಪರಿಹಾರ ವಿತರಣೆಯಾಗುತ್ತದೆ. ಈ ಸರ್ಕಾರದಲ್ಲಿ ಇದುವರೆಗೂ ಒಂದು ಬ್ರೀಜ್ ನಿರ್ಮಿಸಿಲ್ಲ. ಈಗ ಆ ಕೆಲಸ ಶುರು ಮಾಡುತ್ತವೆ. ಹೊಸ ಸೇತುವೆಗಳ ನಿರ್ಮಾಣ, ಶಿಥಿಲಗೊಂಡ ಸೇತುವೆಗಳ ದುರಸ್ತಿ ಕೆಲಸ ಕೈಗೊಳ್ಳಲಾಗುವುದು.
ನಕಲಿ ಜಾತಿ ಪ್ರಮಾಣ ನೀಡುವುದನ್ನು ಜಿಲ್ಲಾಧಿಕಾರಿಗಳು ತಡೆಯುತ್ತಾರೆ ಎಂದು ಸಚಿವ ಜಾರಕಿಹೊಳಿ ಹೇಳಿದರು.

