ಮನಸ್ಸಿಗೆ ಬಂದ ರೀತಿ ಆಡಬೇಡಿ : ಸಚಿವ ಪಾಟೀಲ್ ಗರಂ
ಸತ್ಯಕಾಮ ವಾರ್ತೆ ಸೇಡಂ:
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲರು ಬುಧವಾರ ದಿಢೀರನೆ ಭೇಟಿ ನೀಡಿದರು.
ಕಾಲೇಜಿನ ಅಧ್ಯಾಪಕರ ಹಾಜರಾತಿ ಪುಸ್ತಕ ಪರಿಶೀಲನೆ ನಡೆಸಿದ ಸಚಿವರು ಕಾಲೇಜಿಗೆ ಮೋಜು, ಮಸ್ತಿ ಮಾಡಲು ಬರುತ್ತೀರಾ ಅಥವಾ ಮಕ್ಕಳಿಗೆ ಪಾಠ ಮಾಡಲು ಬರುವಿರಾ ಎಂದು ಕೋಪಗೊಂಡರು
ಕಳೆದ ಮೂರು ದಿನಗಳಿಂದ ಹಾಜರಾತಿ ಪುಸ್ತಕದಲ್ಲಿ ಅಧ್ಯಾಪಕರ ಸಹಿ ಹಾಕದಿರುವುದನ್ನು ಗಮನಿಸಿದ ಸಚಿವರು ಪ್ರಾಂಶುಪಾಲರ ವಿರುದ್ಧ ಹರಿಹಾಯ್ದರು.
ಪ್ರತಿ ದಿನವೂ ಹಾಜರಾತಿ ಪುಸ್ತಕ ಖಾಲಿ ಇದ್ದರೆ ದಾಖಲೆಗಳನ್ನು ಹೇಗೆ ನಿಭಾಯಿಸುವಿರಿ, ಪದೆ ಪದೆ ಈ ತರ ಅಪಸ್ವರ ಕೇಳಿ ಬರುತ್ತಿದೆ, ಹೀಗೆ ಮುಂದುವರೆದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪ್ರಾಂಶುಪಾಲರಾದ ಬಸವರಾಜ ಕೊನೇರಿ ಅವರಿಗೆ ಎಚ್ಚರಿಕೆ ನೀಡಿದರು.
ಯಾವ ಕಾರಣಕ್ಕೆ ರಜೆ ಮೇಲೆ ತೆರಳಿದ್ದೀರಾ ಎನ್ನುವುದನ್ನು ಸಹ ಹಾಜರಾತಿ ಪುಸ್ತಕದಲ್ಲಿ ನಮೂದಿಸಿಲ್ಲ, ಈ ತರ ವ್ಯವಸ್ಥೆ ಮುಂದುವರೆದರೆ ನಿಜಕ್ಕೂ ನಾನಂತು ಸುಮ್ಮನೆ ಕೂರುವುದಿಲ್ಲ, ಪ್ರಾಂಶುಪಾಲರೇ ಇದಕ್ಕೆ ನೇರ ಹೊಣೆ ಎಂದು ಹೇಳಿದರು.
ಕಳೆದ ಒಂದು ವಾರದಿಂದ ಕಾಲೇಜಿನ ಬಗ್ಗೆ ದೂರುಗಳು ಬಂದಿವೆ, ಸರಿಪಡಿಸಿಕೊಳ್ಳಲು ಅವಕಾಶ ನೀಡಿದರೂ ಸಹ ಆಡಳಿತದಲ್ಲಿ ಬದಲಾವಣೆ ಬರದೇ ಇರುವುದು ಸಚಿವರ ಕೆಂಗಣ್ಣಿಗೆ ಗುರಿಯಾದರು.
ಮನಸ್ಸಿಗೆ ಬಂದಂತೆ ಬರಲು ಹೋಗಲು ಇದು ಮಾರುಕಟ್ಟೆ ಅಲ್ಲ, ಸರಕಾರಿ ಕಾಲೇಜಿದೆ, ಸಹಿ ಹಾಕದೇ ಕಾಲೇಜಿಗೆ ಬರುವುದು ಮನಸ್ಸಿಗೆ ಬಂದಂತೆ ಹೋಗುವುದು ಯಾರ ಜಹಾಗೀರು ಇಲ್ಲ ಎಂದು ಕೋಪಗೊಂಡರು.
ಅನೇಕ ವಿದ್ಯಾರ್ಥಿಗಳ ಕಂಪ್ಲೇಟ್ ಇದೆ, ಸರಿಯಾದ ಬೋಧನೆ ಮಢುವುದಿಲ್ಲ, ಒಂದು ಗಂಟೆಯಲ್ಲಿ ಕಾಲೇಜಿಗೆ ಇರಬೇಕು, ಪ್ರಾಂಶುಪಾಲರ ಸಮೇತ ಸಂಜೆ ಐದು ಗಂಟೆಯವರೆಗೂ ಕಾಲೇಜಿನಲ್ಲಿ ಇರಬೇಕು ಎಂದರು.

