ದೋರನಹಳ್ಳಿ: ಆದಿ ಋಷಿ ಮುನಿಗಳು ಹೇಳಿದಂತೆ ಗಾಯತ್ರಿ ಮಂತ್ರವೇ ಮಹಾಮAತ್ರವಾಗಿದೆ.ಭಕ್ತಿಯಿAದ ಗಾಯತ್ರಿ ಮಂತ್ರವು ಪಠಣ ಮಾಡಿದರೆ ಜನ್ಮ ಪಾವನಮಯ ಎಂದು ಶಹಾಪುರ ವಿಶ್ವಕರ್ಮ ಏಕದಂಡಗಿ ಮಠದ ಪೂಜ್ಯ ಶ್ರೀ ಕಾಳಹಸ್ತೇಂದ್ರ ಮಹಾ ಸ್ವಾಮೀಜಿ ಹೇಳಿದರು.
ದೋರನಹಳ್ಳಿ ಗ್ರಾಮದ ಶ್ರೀ ಕಾಳಿಕಾ ದೇವಿ ದೇವಸ್ಥಾನದಲ್ಲಿ ಶ್ರವಾಣ ಮಾಸದ ನೂಲ ಹುಣ್ಣಿಮೆ ಹಿನ್ನಲೆಯಲ್ಲಿ ವಿಶ್ವಕರ್ಮ ಸಮಾಜದಿಂದ ನಡೆದ ಸಾಮೂಹಿಕ ಯಜ್ಞೋಪವೀತ ಧಾರಣೆ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಆಶಿರ್ವಚನ ನೀಡಿ ಮಾತನಾಡಿದರು.ಮನುಷ್ಯ ಹುಟ್ಟುವಾಗ ಸಂಸ್ಕಾರ ರಹಿತನಾಗಿ ಬರುತ್ತಾನೆ. ನಂತರ ಸಂಸ್ಕಾರ ಪಡೆದುಕೊಂಡು ಶ್ರೇಷ್ಠ ವ್ಯಕ್ತಿ ಆಗುತ್ತಾನೆ. ಹಾಗೆ ಸಂಸ್ಕಾರ ಪಡೆದು ಶ್ರೇಷ್ಠ ವ್ಯಕ್ತಿಯಾಗಿಸುವ ಶಕ್ತಿ ಗಾಯತ್ರಿ ಮಂತ್ರಕ್ಕಿದೆ. ಗಾಯತ್ರಿ ಮಂತ್ರ ಕಲಿಯುವ ಕಾಲಘಟ್ಟವೇ ಉಪನಯನ ಅಥವಾ ಬ್ರಹ್ಮಪದೇಶ. ಎಂಟನೇ ವರ್ಷಕ್ಕೆ ಉಪನಯನ ಮಾಡಬೇಕು, ಅದು ಸಾಧ್ಯ ಆಗದಿದ್ದಲ್ಲಿ ಎಂಟರಿAದ ಹದಿನಾರರ ಒಳಗೆ ಮಾಡಬೇಕು. ಅದು ಅವರ ಅನುಕೂಲ ಅಥವಾ ಬೌದ್ಧಿಕ ಮಟ್ಟ ಅವಲಂಬನೆ ಆಗಿದೆ. ಉಪನಯನ ಮಾಡುವಾಗ ಸಮ ವರ್ಷ ಅಥವಾ ವಿಷಮ ಪ್ರಶ್ನೆ ಇಲ್ಲ ಎಂದರು. ಗಾಯತ್ರಿ ಮಂತ್ರ ಬೋಧನೆ ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿದೆ. ಇದನ್ನು ಪಡೆದುಕೊಂಡು ಪಠಣ ಮಾಡುವ ವ್ಯಕ್ತಿ ಶ್ರೇಷ್ಠ ವ್ಯಕ್ತಿ ಆಗುತ್ತಾನೆ, ಗೆಲುವು ಪಡೆಯುತ್ತಾನೆ, ತೇಜಸ್ಸು ಪಡೆಯುತ್ತಾನೆ. ಅಂತಹ ಗಾಯತ್ರಿ ಮಂತ್ರದ ಮಹಿಮೆಯನ್ನು ವಿವರಿಸಿದರು.
ಎಲ್ಲ ಧರ್ಮಗಳಲ್ಲೂ ಮಾನವೀಯ ಮೌಲ್ಯಗಳಿವೆ. ಅವುಗಳನ್ನು ತಿಳಿದುಕೊಂಡು ಬದುಕಿ, ಸಮಾಜದ ಶ್ರೇಯಸ್ಸಿಗೆ ಶ್ರಮಿಸಬೇಕು. ವಿಶ್ವಶಾಂತಿ ಬಯಸಿ, ಜಗತ್ತಿನ ಕಲ್ಯಾಣಕ್ಕಾಗಿ ಧಾರ್ಮಿಕ ಕಾರ್ಯ ಕಲಾಪ ಸತತವಾಗಿ ಸಾಗಬೇಕು ಎಂದರು. ಶ್ರಾವಣ ಮಾಸವು ವಿಶಿಷ್ಠ ಮಾಸವಾಗಿದ್ದು, ಪ್ರತಿ ದಿನವೂ ವೈಶಿಷ್ಟ್ಯವನ್ನು ಹೊಂದಿದೆ. ಶ್ರಾವಣದಲ್ಲಿ ಭಗವಂತನ ಪೂಜೆ, ಕೀರ್ತನೆ ಮತ್ತು ಶ್ರವಣದಿಂದ ಅಜ್ಞಾನ ನಶಿಸಿ, ಜ್ಞಾನವು ಸಿಗಲಿದೆ’ ಎಂದು ಹೇಳಿದರು.
ವಿಶ್ವಕರ್ಮ ಸಮಾದ ಅಧ್ಯಕ್ಷ ಚಂದ್ರಶೇಖರ ಎಚ್.ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು ದೇವಸ್ಥಾನದ ಅರ್ಚಕ ಮನೋಹರ ಪತ್ತಾರ ಅವರಿಂದ ಶ್ರೀಕಾಳಿಕಾದೇವಿ ಮೂರ್ತಿಗೆ ಪೂಜೆ, ಮಹಾಭಿಷೇಕ, ಕುಂಕುಮಾರ್ಚನೆ ,ಆರುತಿ, ಅಲಂಕಾರ ಪೂಜೆ, ತುಪ್ಪದಾರುತಿ, ಮಂಗಳಾರುತಿ ಸೇರಿದಂತೆ, ಘಂಟೆ- ಜಾAಗಟೆಗಳೊAದಿಗೆ ಪೂಜಾ ಕೈಂಕರ್ಯಗಳು ನೆರವೇರಿದವು.ನಂತರ ವಿಶ್ವಕರ್ಮ ಸಮಾಜದ ಬಾಂಧವರು ಸಾಮೂಹಿಕ ಯಜ್ಞೋಪವೀತ ಧಾರಣೆ ಕಾರ್ಯಕ್ರಮವನ್ನು ಪೂಜ್ಯ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಿತು. ನಂತರ ಮಹಾ ಪ್ರಸಾದ ನೆರವೇರಿತು.
ಈ ಸಂದರ್ಭದಲ್ಲಿವಿಶ್ವಕರ್ಮ ಸಮಾದ ಅಧ್ಯಕ್ಷ ಚಂದ್ರಶೇಖರ ಎಚ್.ಪತ್ತಾರ, ಉಪಾಧ್ಯಕ್ಷ ಮಹೇಶ ಡಿ.ಪತ್ತಾರ,ಮತ್ತು ಸಮಾಜದ ಹಿರಿಯ ಮುಖಂಡರಾದ ಕಾಳಪ್ಪ ಪತ್ತಾರ,ಮನೋಹರ ಪತ್ತಾರ,ಮಲಕಪ್ಪ ಕಂಚಗಾರ,ಮಲ್ಲೇಶಪ್ಪ ಕಂಬಾರ,ಚAದ್ರಶೇಖರ ಪತ್ತಾರ,ಕಾಳಪ್ಪ ಕಂಚಗಾರ,ಇAದ್ರಪ್ಪ ಕಂಚಗಾರ,ಮಾನಪ್ಪ ಕಂಬಾರ,ಗುರುನಾಥ ಕAಚಗಾರ, ಮಹೇಶ ಕಂಚಗಾರ,ವಿರೇಶ ಕಂಬಾರ,ಕಾಶಿನಾಥ ಕಂಚಗಾರ ಮುAತಾದ ಸಮಾಜದ ಬಂಧುಗಳು ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡಿದ್ದರು.

