ಯಾದಗಿರಿ : ಗುರುಮಠಕಲ್ ಮತಕ್ಷೇತ್ರದ ಮಾಜಿ ಶಾಸಕರು ಹಾಗೂ ಹಾಲಿ ಶಾಸಕರದ ತಂದೆ ಜೆಡಿಎಸ್ ಪಕ್ಷದ ಹಿರಿಯ ರಾಜಕಾರಣಿಗಳಾದ ನಾಗನಗೌಡ ಕಂದಕೂರ ಅವರು ತೀವ್ರ ಹೃದಯಾಘಾತದಿಂದ ಇಂದು ( ರವಿವಾರ ) ವಿಧಿವಶರಾಗಿದ್ದಾರೆ.
ನಾಗನಗೌಡ ಕಂದಕೂರ ಅವರಿಗೆ 79 ವರ್ಷ ವಯಸ್ಸಾಗಿತ್ತು ಎದೆ ನೋವು ಕಾಣಿಸಿಕೊಂಡ ತಕ್ಷಣ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು ಅದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನೊಪ್ಪಿದ್ದಾರೆ.
ನಾಗನಗೌಡ ಕಂದಕೂರ್ ಅವರು 2018ರಲ್ಲಿ ಯಾದಗಿರಿ ಜಿಲ್ಲೆ ಗುರುಮಠಕಲ್ ಶಾಸಕರಾಗಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ ಮೊದಲ ಬಾರಿಗೆ ನಾಗನಗೌಡ ಕಂದಕೂರ್ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.
ಕಳೆದ ೫೦ ವರ್ಷಗಳಿಂದ ರಾಜಕೀಯ ಜೀವನದಲ್ಲಿ ಸೋಲು ಗೆಲುವುಗಳನ್ನು ಕಂಡು ಕಲ್ಯಾಣ ಕರ್ನಾಟಕ ಭಾಗದ ಜೆಡಿಎಸ್ ಪಕ್ಷದ ಹಿರಿಯ ಅನುಭವಿ ರಾಜಕಾರಣಿ ಯಾಗಿದ್ದ ಇವರ ಅಗಲಿಕೆ ಪಕ್ಷಕ್ಕೆ ಹಾಗೂ ಕಂದಕೂರ ಕುಟುಂಬದ ಅಭಿಮಾನಿ ಬಳಗಕ್ಕೆ ತುಂಭಲಾರದ ನಷ್ಟವನ್ನು ಉಂಟು ಮಾಡಿದೆ.
- Advertisement -

