ಯಾದಗಿರಿ: ಕರ್ನಾಟಕ ಅಧಿವೇಶನದಲ್ಲಿ ಗುರಮಠಕಲ್ ಶಾಸಕ ಶರಣಗೌಡ ಕಂದಕೂರ ಕ್ಷೇತ್ರದ ಸಮಸ್ಯೆಗಳ ಬಗ್ಗೆ, ಕಲ್ಯಾಣ ಕರ್ನಾಟಕದ ಧ್ವನಿಯಾಗಿ ಅಭಿವೃದ್ದಿ ಬಗ್ಗೆ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯುವುದನ್ನು ಪ್ರಶ್ನಿಸಿದ ಸೋಲ್ಡ್ ಔಟ್ ಸಾಯಿಬಣ್ಣ ಬೋರಬಂಡಾ ನೀವು ಯಾವ ಪಕ್ಷದಲ್ಲಿ ಇರುತ್ತೀರಿ ಅಂತ ನಿಮಗೆ ಗೊತ್ತಿಲ್ಲಾ ಎಂದು ಜೆಡಿಎಸ್ ಯಾದಗಿರಿ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ವಿಧಾನಸಭೆ ಚುನಾವಣೆಯ ನಂತರ ಹಲವು ದಿನಗಳಿಂದ ನಾಪತ್ತೆಯಾಗಿರುವ ನೀವು ಈಗ ಯಾವ ಪಕ್ಷದಲ್ಲಿದ್ದೀರಿ, ಒಂದ್ ವರ್ಷ ಬಿಜೆಪಿ, ಒಂದ್ ವರ್ಷ ಕಾಂಗ್ರೆಸ್ ಅಂತ ತಿರುಗುವ ನೀವು ಮೊದಲು ಯಾವ ಪಕ್ಷದಲ್ಲಿದ್ದೀರಿ ಎಂದು ಜನತೆಗೆ ತಿಳಿಸಿ, ಆ ನಂತರ ನೀವು ನಮ್ ಶಾಸಕರ ಬಗ್ಗೆ ಹೇಳಿಕೆ ನೀಡಿ, ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವ, ಹೇಳಿಕೆ ನೀಡುವ ಚಾಳಿಬಿಟ್ಟು ಅಭಿವೃದ್ಧಿ ಪರ ಮಾತನಾಡುವ ಶಾಸಕರಿಗೆ ಬೆಂಬಲ ಕೊಡುವುದನ್ನು
ಕಲಿಯಿರಿ ಎಂದು ತಿಳಿಹೇಳಿದ್ದಾರೆ.
ಅಧಿವೇಶನದ ಸಂದರ್ಭಗಳಲ್ಲಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ ಶಾಸಕರ ಕೆಲಸ ಅದನ್ನು ಅವರು ಸರಿಯಾಗಿ ಮಾಡುತ್ತಿದ್ದಾರೆ, ಕಳೆದ ಹಲವು ದಶಕಗಳವರೆಗೆ ಗುರುಮಠಕಲ್ ಕ್ಷೇತ್ರದಿಂದಲೇ
ಆಯ್ಕೆಯಾಗಿ ಹೋದವರು ಇಲ್ಲಿಯ ವರೆಗೂ ಯಾರು ಅಧಿವೇಶನದಲ್ಲಿ ಧ್ವನಿ ಎತ್ತಿಲ್ಲಾ ಎನ್ನುವುದು ನಿಮಗೆ ನೆನಪಿರಲಿ ಎಂದಿದ್ದಾರೆ.
ಹತ್ತಿಕುಣಿ ಮತ್ತು ಸೌದಾಗರ ಜಲಾಶಯಗಳ ಬಗ್ಗೆ ಸದನದಲ್ಲಿ ರೈತರ ಪರವಾಗಿ ಧ್ವನಿ ಎತ್ತಿ ಆ ಡ್ಯಾಂಗಳ ಅಭಿವೃದ್ಧಿಗಾಗಿ ಸರ್ಕಾರದ ಗಮನ ಸೆಳೆದರೆ ತಮಗೇಕೆ ಸಿಟ್ಟು ಆ ಭಾಗದ ಜನರ ಅಭಿವೃದ್ಧಿ ನಿಮಗೆ ಬೇಡವೆ ಇದನ್ನಿಟ್ಟುಕೊಂಡು ನೀವು ಹೇಳಿಕೆ ನೀಡಿದ್ದೀರಿಲ್ಲ
ಜನರ ಅಭಿವೃದ್ಧಿಗಾಗಿ ಸದನದಲ್ಲಿ ಧ್ವನಿ ಎತ್ತಿರುವುದರಲ್ಲಿ ತಪ್ಪೇನಿದೆ ಎಂಬುದು ನೀವೇ ಹೇಳಬೇಕು ಎಂದಿದ್ದಾರೆ.
ವಿಧಾಸಭೆ ಅಧಿವೇಶನದಲ್ಲಿ ನಮ್ಮ ಭಾಗದ ಧ್ವನಿಯಾಗಿ ನಮ್ ಶಾಸಕರು ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಯ ದೃಷ್ಠಿಕೋನವನ್ನಿಟ್ಟುಕೊಂಡು ಮಾತನಾಡುತ್ತಾರೆ, ಅದರಲ್ಲಿ ನಮ್ಮ ಗುರುಮಠಕಲ್ ಕ್ಷೇತ್ರದ ಪ್ರತಿಯೊಂದು ಹಳ್ಳಿಯ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಅವರ ಅಭಿವೃದ್ಧಿ ಸಹಿಸದ ನೀವು ಇಲ್ಲ ಸಲ್ಲದ ಹೇಳಿಕೆ ನೀಡುತ್ತಾ ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಾ ಕಾಲಹರಣ ಮಾಡುತ್ತಿರುವ ನೀಮ್ಮಿಂದ ನಮ್ ಶಾಸಕರು ಕಲಿಯಬೇಕಾಗಿಲ್ಲಾ, ನಮ್ ಶಾಸಕರು ಸದನದಲ್ಲಿ ಮಾತನಾಡಿದಾಗ ಪಕ್ಷಾತೀತವಾಗಿ ರಾಜ್ಯದ ಹಲವು ಶಾಸಕರು ಬೆಂಬಲ ನೀಡುತ್ತಿದ್ದಾರೆ ಅಂತದರಲ್ಲಿ ನೀವು ಯಾದಗಿರಿ ಜಿಲ್ಲೆಯವರಾಗಿ ವಿರೋಧ ಹೇಳಿಕೆ ನೀಡುತ್ತಿದ್ದೀರಿಲ್ಲ ಇದರಲ್ಲೆ ತಿಳಿಯುತ್ತೆ ನಿಮ್ಮ ಮೂರ್ಖತನದ ಬುದ್ದಿ. ನೀವು ಇದೆ ರೀತಿ ಮುಂದುವರೆಸಿದರೆ ನಾವು ನಿಮ್ಮ ಭಾಷೆಯಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

