ಸಮರ್ಪಕ ರಸಗೊಬ್ಬರ ಪೂರೈಕೆ ಮಾಡದ ರಾಜ್ಯ ಸರ್ಕಾರದ ನಡೆ ಖಂಡಿಸಿ ಯಾದಗಿರಿಯಲ್ಲಿ ಜೆಡಿಎಸ್ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಕಳೆದ ೨ ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರ ಲಂಚಗುಳಿತನ, ದುರಾಡಳಿತ ಮತ್ತು ವೈಫಲ್ಯತೆಯಿಂದ ರಾಜ್ಯದ ಜನತೆ ಆಕ್ರೋಶದಿಂದ ಬೇಸತ್ತು ಬಸವಳಿದಿದ್ದಾರೆ. ರಾಜ್ಯದಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರುನಲ್ಲಿ ಉತ್ತಮ ಮಳೆಯಾಗಿದ್ದು, ರಾಜ್ಯದ ರೈತರು ತಮ್ಮ ಬಹುತೇಕ ಕೃಷಿ ವಿಸ್ತೀರ್ಣದಲ್ಲಿ ಕೃಷಿ ಚಟುವಟಿಕೆ ಪ್ರಾರಂಭಿಸಿ ಬಿತ್ತನೆಯಲ್ಲಿ ತೊಡಗಿದ್ದಾರೆ ಹಾಗೂ ರಾಜ್ಯದಲ್ಲಿ ಬಹುತೇಕ ಜಲಾಶಯಗಳು ಹಾಗೂ ಕೆರೆ ಕಟ್ಟೆಗಳು ಭರ್ತಿಗೊಂಡಿದ್ದು, ನೀರಾವರಿ ಅಚ್ಚುಕಟ್ಟಿನಲ್ಲಿ ರೈತರು ಸಾಗುವಳಿ ಪ್ರಾರಂಭಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ರೈತರಿಗೆ ಅಗತ್ಯವಿರುವ ರಸ ಗೊಬ್ಬರವನ್ನು ಪೂರೈಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸದರು.
ಮಳೆ ಮತ್ತು ನೆರೆ ಹಾವಳಿಯಿಂದ ಫಸಲು ನಷ್ಟಕ್ಕೆ ಮತ್ತು ಮಳೆ ಅಭಾವದಿಂದ ಹಾಳಾದ ಬೆಳೆ ನಷ್ಟಕ್ಕೆ ಸಂಬAಧಿಸಿದ ಫಸಲು ವಿಮಾ ಕಂಪನಿಗಳಿAದ ರೈತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಈ ಎಲ್ಲಾ ವೈಫಲ್ಯಗಳಿಂದ ರಾಜ್ಯದಲ್ಲಿರುವ ಕಾಂಗ್ರೇಸ್ ಸರ್ಕಾರ ಆಡಳಿತ ನಡೆಸಲು ನೈತಿಕವಾಗಿ ಅಧಿಕಾರ ಕಳೆದುಕೊಂಡಿದೆ. ಗೌರವಾನ್ವಿತ ರಾಜ್ಯಪಾಲರು, ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನವಿತ್ತು ಎಚ್ಚರಿಕೆ ನೀಡಿ, ರೈತರ ಸಮಸ್ಯೆ ಹಾಗೂ ನೆರೆ ಹಾವಳಿಯಿಂದ ನೊಂದ ಸಂತ್ರಸ್ತರಿಗೆ ಹಾಗೂ ಮಳೆ ಅಭಾವದಿಂದ ಫಸಲನ್ನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.
ಒಂದು ವೇಳೆ ರಾಜ್ಯ ಸರ್ಕಾರ ಸಂವಿಧಾನ ರೀತಿ ಕಾರ್ಯನಿರ್ವಹಿಸದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚನ್ನಪ್ಪಗೌಡ ಮೊಸಂಬಿ, ನವಾಜರೆಡ್ಡಿ ಚಪೇಟ್ಲಾ, ರಾಮಣ್ಣ ಕೋಟಗೇರಾ, ಬಸವರಾಜಪ್ಪಗೌಡ ಗೊಂದಡಗಿ, ಬಸವರಾಜ ಕಣೇಕಲ್, ಈಶಪ್ಪ ರಾಖಾ, ರಾಜೇಶ ಉಡುಪಿ ಸೈದಾಪೂರ, ದೇವಿಂದ್ರಪ್ಪ ಸುರಪೂರ, ಶಿವು ಮೊಟಗಿ ಶಹಾಪೂರ, ಶಿವಣ್ಣ ಸುರಪೂರ, ವಿಶ್ವನಾಥ ಶಿರವಾಳ, ಬಂದಪ್ಪ ಅರಳಿ, ನರಸಪ್ಪ ಕವಡೆ, ಶರಣು ಆವಂಟಿ, ಪ್ರಕಾಶ ನೀರಟ್ಟಿ, ಬಸ್ಸಣ್ಣ ದೇವರಹಳ್ಳಿ, ರವಿ ಪಾಟೀಲ್ ಗುರುಮಿಠಕಲ್, ಮಲ್ಲಣ್ಣಗೌಡ ಕೌಳೂರು, ಬಸ್ಸುಗೌಡ ಚಾಮನಹಳ್ಳಿ, ಬಸರಡ್ಡಿ ಹೆಗ್ಗಣಗೇರಾ ಚಂದ್ರಾಯಗೌಡ ಹತ್ತಿಕುಣಿ, ಶರಣಗೌಡ ಚಾಮನಹಳ್ಳಿ, ರವಿ ಪಾಟೀಲ್ ಹತ್ತಿಕುಣಿ, ಮಲ್ಲಿಕಾರ್ಜುನ ಅರುಣಿ, ಈಶ್ವರ ನಾಯಕ,ಜಯೇಂದ್ರ ಚವ್ಹಾಣ, ಪರಮರೆಡ್ಡಿ ಕಂದಕೂರ, ದೊಡ್ಡಣ್ಣಗೌಡ ಅರಕೇರಾ (ಬಿ), ಮಾರ್ಥಂಡ ಮಾನೇಗಾರ, ನಿಂಗಾರೆಡ್ಡಿ ಯಡ್ಡಳ್ಳಿ, ತಾಯಪ್ಪ ಬದ್ದೇಪಲ್ಲಿ, ಅನಂತಪ್ಪ ಮುಕಡಿ, ಶರಣು ಗಾಡಿ ಮೋಟ್ನಳ್ಳಿ, ಲಕ್ಷ್ಮಣನಾಯಕ ಕುಡ್ಲೂರ, ಅಲ್ಲಾವುದ್ದೀನ್ ನೀಲಹಳ್ಳಿ ಸೇರಿದಂತೆ ಇತರರಿದ್ದರು.
ರಾಜ್ಯ ಸರ್ಕಾರ ಕೇಳಿದ್ದಕ್ಕಿಂತ ಹೆಚ್ಚಿಗೆ ಕೊಟ್ಟಾರಲ್ರಿ |
---|
ಕಾಳಸಂತೆಕೋರರು ಸಾಕಷ್ಟು ಪ್ರಮಾಣದಲ್ಲಿ ಶೇಖರಣೆ ಮಾಡಿ ವಿತರಿಸದೇ ಇರುವುದರಿಂದ ರೈತರು ಪರದಾಡುತ್ತಿದ್ದಾರೆ. ಈ ರಸ ಗೊಬ್ಬರಗಳು ಕಾಳಸಂತೆಯಲ್ಲಿ ವರ್ತಕರು ಮನಸೋ ಇಚ್ಚಾ ಬಂದ ಧರದಲ್ಲಿ ಮಾರಾಟ ಮಾಡುತ್ತಿದ್ದಾರೆ. ರಾಜ್ಯ ರಾಜ್ಯಕ್ಕೆ ಕೊರತೆ ಇರುವ ರಸ ಗೊಬ್ಬರಗಳನ್ನು ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ಸಂಪರ್ಕಿಸಿ ಪಡೆಯಲು ವಿಫಲವಾಗಿದೆ. ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ೬.೩೧೦೦೦ ಮೆಟ್ರಿಕ ಟನ್ ರಸ ಗೊಬ್ಬರ ಬೇಡಿಕೆ ಇಟ್ಟಿರುತ್ತಾರೆ. ಆದರೂ ಕೇಂದ್ರ ಸರ್ಕಾರ ನಿರೀಕ್ಷೆಗೆ ಮೀರಿ ೮.೭೩೦೦೦ ಮೆಟ್ರಿಕ ಟನ್ ರಸಗೊಬ್ಬರ ಪೂರೈಸಿದ್ದಾರೆ. ಈ ಪೈಕಿ ಕೇವಲ ೫.೨೭ ಲಕ್ಷ ಟನ್ ರಸ ಗೊಬ್ಬರ ನೀಡಿರುವುದಾಗಿ ರಾಜ್ಯ ಸರ್ಕಾರ ಆಪಾದನೆ ಮಾಡುತ್ತಿದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದತ್ತ ಕೈಮಾಡಿ ತೋರಿಸಿ ರಾಜ್ಯದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
|

