ಸತ್ಯಕಾಮ ವಾರ್ತೆ ಯಾದಗಿರಿ:
ಹುಟ್ಟುಹಬ್ಬದ ಅಂಗವಾಗಿ ಆಡಂಬರದ ಆಚರಣೆ ಮಾಡಿಕೊಳ್ಳುವವರ ಮದ್ಯೆ ಅನಾಥ ಮಕ್ಕಳಿಗೆ ನೆರವಾಗುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಮಾದರಿಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ಮಾದರಿಯಾಗಿದೆ ಎಂದು ಬಿಜೆಪಿ ಯುವ ಮುಖಂಡ ಮಹೇಶರಡ್ಡಿಗೌಡ ಮುದ್ನಾಳ ಹೇಳಿದರು.
ನಗರದ ನಮ್ಮ ಕರುನಾಡ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಲಯದಲ್ಲಿ ವೇದಿಕೆ ಜಿಲ್ಲಾದ್ಯಕ್ಷ ರವಿ ಕೆ. ಮುದ್ನಾಳ 34 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಗುಳೆ ಹೋಗುವ ಕೂಲಿಕಾರರ ಮಕ್ಕಳ ಆಶ್ರಮದ ಮಕ್ಕಳಿಗೆ ನೊಟ್ ಬುಕ್ ಪೆನ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಮಾತನಾಡಿದರು.
ಹುಟ್ಟುಹಬ್ಬ ಆಚರಣೆ ನಮ್ಮ ಸಂಸ್ಕೃತಿ ಅಲ್ಲವಾದರೂ ಇದನ್ನು ಒಂದು ನೆಪವಾಗಿಸಿಕೊಂಡು ಸಮಾಜಕ್ಕೆ ಸಹಾಯವಾಗುವಂತಹ ಕಾರ್ಯ ಮಾಡಬೇಕು ಆ ಮೂಲಕ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಇತರರಿಗೆ ಮಾದರಿಯಗುತ್ತದೆ ಎಂದು ಅವರು ಅಬಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೇವರಾಜ ನಾಯಕ ಉಳ್ಳೆಸುಗೂರು ಮಾತನಾಡಿ ಹುಟ್ಟುಹಬ್ಬದ ನೆಪದಲ್ಲಿ ಜನತೆಗೆ ಉಪಯೋಗವಾಗುವ ಮಾದರಿ ಕಾರ್ಯ ಮಾಡುವುದೇ ನಿಜವಾದ ಹುಟ್ಟುಹಬ್ಬದ ಆಚರಣೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಮಾರಡ್ಡಿಗೌಡ ನಾಯ್ಕಲ್, ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ವಿಲಾಸ ಪಾಟೀಲ್, ಬಿಜೆಪಿ ನಗರಾಧ್ಯಕ್ಷ ನಿಂಗಪ್ಪ ಹತ್ತಿಮನಿ, ತಾಪಂ ಮಾಜಿ ಸದಸ್ಯ ಯಂಕಪ್ಪ ರಾಠೋಡ, ಟೆಂಟ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಖಾಸಿಮ್ ಸಾಬ್ ಗಡ್ಡೆಸುಗೂರು, ವೀರಶೈವ ಮಹಾಸಭೆ ಕೋಶಾಧ್ಯಕ್ಷ ಬಂದನಗೌಡ ಕನ್ಯಾಕೌಳೂರು ಸೇರಿದಂತೆ ವೇದಿಕೆ ಪದಾಧಿಕಾರಿಗಳಾದ ಶಂಕರಗೌಡ ಯಲ್ಸತ್ತಿ, ವಿಶ್ವನಾಥ ತಂಗಡಗಿ, ಅಶೋಕರಡ್ಡಿ ವಂಕಸAಭ್ರ, ಸಿದ್ದು ಸಾಹುಕಾರ ಮಾಧ್ವಾರ, ತಿಪ್ಪಯ್ಯ, ವಸಂತಕುಮಾರ ಯಲ್ಸತ್ತಿ, ವೆಂಕಟೇಶ ಚವ್ಹಾಣ, ಭೀಮುರಾಠೋಡ, ವೆಂಕಟೇಶ ಸೇರಿದಂತೆ ಅನೇಕರು ಪಾಲ್ಗೊಂಡರು.

