ಸತ್ಯಕಾಮ ವಾರ್ತೆ ದೋರನಹಳ್ಳಿ:
ವಿದ್ಯಾರ್ಥಿ ಜೀವನಕ್ಕೆ ಆಟ,ಪಾಠ, ಮನರಂಜನೆ ಅವಶ್ಯವಾಗಿರಬೇಕು. ವಿದ್ಯಾರ್ಥಿಗಳು ಕೇವಲ ಓದುತ್ತ ಇದ್ದರೆ ಸಾಲದು, ದೈಹಿಕವಾಗಿ ದಂಡನೆ ಬೇಕು. ಕ್ರೀಡೆಗಳಲ್ಲಿ ಭಾಗವಹಿಸಿದರೆ ಓದಲು ಏಕಾಗ್ರತೆ ಬರುವುದಿಲ್ಲ ಎನ್ನುವುದು ತಪ್ಪು ಕಲ್ಪನೆ,ಪಾಠದೊಂದಿಗೆ ಆಟವಿದ್ದರೆ ಮಾನಸಿಕ ಮತ್ತು ದೈಹಿಕವಾಗಿ ಶಸಕ್ತರಾಗುತ್ತಾರೆ ಎಂದು ಶಾಲೆಯ ಮುಖ್ಯಗುರು ಪ್ರಕಾಶ ಬಳ್ಳಾರಿ ಹೇಳಿದರು.
ದೋರನಹಳ್ಳಿ ಗ್ರಾಮದ ಡಿ.ಡಿ.ಯು ಸಿಬಿಎಸ್‌ಇ ಪ್ರೌಢ ಶಾಲೆ ಮತ್ತು ಡಿಡಿಯು ಪಿಯು ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು. ಶಾಲೆಯ ದೈಹಿಕ ಶಿಕ್ಷಕ ಬಸವರಾಜ ಗೋಗಿ ಮಾತನಾಡಿ ಇಂದು ಮಕ್ಕಳು, ಚಿಕ್ಕ ವಿದ್ಯಾರ್ಥಿಗಳು ಒತ್ತಡದಲ್ಲಿ ಕಲಿಯುವ ಪರಿಸ್ಥಿತಿಯಿದೆ. ಒತ್ತಡದಲ್ಲಿ ಓದಿ ಚೆನ್ನಾಗಿ ಕಲಿತು ವಿದ್ಯೆ ಕಲಿಯುವುದರಲ್ಲಿ ಯಶಸ್ಸು ಗಳಿಸುತ್ತಿದ್ದಾರೆ, ಮುಂದೆ ನೌಕರಿಯೂ ಸಿಗುತ್ತದೆ. ಆದರೆ, ಆ ಹೊತ್ತಿಗೆ ಒತ್ತಡದ
ಕಾರಣಕ್ಕೆ ದೇಹಾರೋಗ್ಯವೂ ಕೆಟ್ಟು ಹೋಗಿರುತ್ತದೆ. ಆರೋಗ್ಯ ಕಾಪಾಡಿಕೊಳ್ಳುತ್ತಲೇ ಬದುಕಿನಲ್ಲೂ ಯಶಸ್ಸು ಗಳಿಸಲು ಯೋಗ, ಧ್ಯಾನ ಅನಿವಾರ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಇಂದು ಒತ್ತಡದಲ್ಲಿಯೇ ಓದು, ಕಲಿಕೆ ಮಾಡುತ್ತಿದ್ದು ಇವರಿಗೆ ಯೋಗ, ಧ್ಯಾನ ಕಲಿಸುವ ಅನಿವಾರ್ಯತೆಯಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು,ಕಾಲೇಜಿನ ಉಪನ್ಯಾಸಕರು,ವಸತಿ ನಿಲಯ ಪಾಲಕರಿದ್ದರು.
- Advertisement -

