ಸತ್ಯಕಾಮ ವಾರ್ತೆ ಯಾದಗಿರಿ:
ಲಯನ್ಸ್ ಕ್ಲಬ್, ಯಾದಗಿರಿ ಇವರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 30, 2025 (ಬುಧವಾರ) ಸಂಜೆ 5 ಗಂಟೆಗೆ ನಗರದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ತಿಳಿಸಿದೆ.
ನಾಳೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲಾಧಿಕಾರಿಗಳಾದ ಹರ್ಷಲ್ ಭೋಯರ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲವೀಶ್ ಓರಾಡಿಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪೃಥ್ವಿಕ್ ಶಂಕರ್ ಅವರು ವಿಶೇಷ ಅತಿಥಿಯಾಗಿದ್ದಾರೆ.
ಪದಗ್ರಹಣಾಧಿಕಾರಿಯಾಗಿ ಎಲ್.ಎನ್. ಸಿಎ ಮನೋಜ್ ಕುಮಾರ್ ಪುರೋಹಿತ್ ಹಾಗೂ ಎಲ್.ಎನ್. ಸುರೇಶ್ ಜಂಗ್ನಾನಿ ಕಾರ್ಯನಿರ್ವಹಿಸಲಿದ್ದು, ಹರಿನಾರಾಯಣ ಭಟ್ಟಾಡ್ ಮತ್ತು ಸಿಎ ರಾಮು ಪರಿತಾಲಾ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದೆ.
ಕಾರ್ಯಕ್ರಮದ ನಿರೂಪಣೆಯನ್ನು ಎಲ್.ಎನ್. ಜಾನಾರ್ಧನ್ ಅವರು ನಿಭಾಯಿಸಲಿದ್ದಾರೆ.
2025-26ನೇ ಸಾಲಿನ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳು
ಅಧ್ಯಕ್ಷರಾಗಿ Ln. ಭೀಮಣ್ಣಗೌಡ ಕ್ಯಾತ್ನಳ, ಕಾರ್ಯದರ್ಶಿಯಾಗಿ Ln. ಡಾ. ಶಿವಪುತ್ರರೆಡ್ಡಿ ಪಾಟೀಲ ಚಟ್ನಳ್ಳಿ ಹಾಗೂ ಖಜಾಂಚಿಯಾಗಿ Ln. ವೆಂಕಟರೆಡ್ಡಿ ಪಾಟೀಲ ತಂಗಡಗಿ ಅವರನ್ನು ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಮಲ್ಲಣ್ಣಗೌಡ ಹಳಿಮನಿ, ಸದಸ್ಯತ್ವದ ಮುಖ್ಯಸ್ಥ Ln. ಸಿದ್ದರಾಮರೆಡ್ಡಿ ತಿಪ್ಪರೆಡ್ಡಿ, ಜಂಟಿ ಕಾರ್ಯದರ್ಶಿಯಾಗಿ. ಇಂದೂಧರ್ ಶಿನ್ನೂರ, ಸೇವಾ ಕಾರ್ಯದರ್ಶಿಯನ್ನಾಗಿ ಮಲ್ಲಿಕಾರ್ಜುನ ಸಿರ್ಗೋಳ, ಟೇಮರ್ ಶರಣರೆಡ್ಡಿ ಹತ್ತಿಕುಣಿ, ಟೇಲ್ ಟ್ವಿಸ್ಟರ್ ವಿಜಯ ದಿಗ್ಗವಿ ಹಾಗೂ ಮಾರುಕಟ್ಟೆ ಸಂವಹನ ಮುಖ್ಯಸ್ಥೆಯಾಗಿ ಲೀಲಾ ಕೃಷ್ಣ ಅವರನ್ನು ನೇಮಕ ಮಾಡಲಾಗಿದೆ ಹಾಗೂ LCIF ಸಂಯೋಜಕರಾಗಿ ದೀಪಕ್ ಯಲಸತ್ತಿ ಮತ್ತು ಸಹ ಖಜಾಂಚಿಯಾಗಿ ವೀರೇಂದ್ರ ಪಾಟೀಲ ಮೊಸಂಬಿ ಅವರನ್ನು ನೇಮಕ ಮಾಡಲಾಗಿದೆ.
ಜಿಲ್ಲಾ ಮಟ್ಟದ ಸೇವಾ ವಿಭಾಗಗಳಲ್ಲಿಯೂ ಯಾದಗಿರಿ ಸದಸ್ಯರು ನಾಮನಿರ್ದೇಶಿತರಾಗಿದ್ದು, ಆರೋಗ್ಯ, ಶಿಕ್ಷಣ, ಸ್ವಚ್ಛತಾ ಚಟುವಟಿಕೆ ಹಾಗೂ ಕ್ರೀಡಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಲಯನ್ಸ್ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಬೇಕೆಂದು ಕೋರಲಾಗಿದೆ.

