ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸತ್ಯಪರೀಕ್ಷೆಗೆ ಬಲಿಷ್ಠ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮತ್ತೆ ಕಣಕ್ಕಿಳಿಯಲು ಸಜ್ಜಾಗಿವೆ. ಕಳೆದ ವರ್ಷದ ವಿಶ್ವಕಪ್ ಫೈನಲ್‌ನಲ್ಲಿ ಆಸೀಸ್ ವಿರುದ್ಧ ಸೋಲಿನ ಕಹಿ ಅನುಭವಿಸಿದ ಭಾರತಕ್ಕೆ, ಈ ಸರಣಿ ಒಂದು ರೀತಿಯ ಪ್ರತೀಕಾರದ ವೇದಿಕೆಯಾಗಿದೆ. ಇತ್ತ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ್ದ ನೆನಪು ಇದ್ದರೂ, ಈ ಬಾರಿ ಪರಿಸ್ಥಿತಿ ಸಂಪೂರ್ಣ ವಿಭಿನ್ನವಾಗಿದೆ ಸ್ಥಳ, ಪಿಚ್, ತಂಡದ ಸಂಯೋಜನೆ ಎಲ್ಲವೂ ಭಾರತಕ್ಕೆ ಹೊಸ ಸವಾಲುಗಳು.
ಪರ್ತ್‌ನ ವಾಕಾ ಮೈದಾನ ಎಂದರೆ ಬೌನ್ಸಿಗೆ ಪ್ರಸಿದ್ಧ ಅಲ್ಲಿ ವೇಗಿಗಳೇ ಮೇಲುಗೈ ಅದಕ್ಕಾಗಿಯೇ ಎಷ್ಟು ಪೇಸರ್‌ಗಳೊಂದಿಗೆ ಕಣಕ್ಕಿಳಿಯಬೇಕು ಎಂಬ ಪ್ರಶ್ನೆ ಈಗ ತಂಡದ ಮುಂದಿದೆ.
ಈ ಹಿನ್ನೆಲೆಯಲ್ಲಿ ಕನ್ನಡಿಗರ ಹೆಸರುಗಳೂ ಚರ್ಚೆಯಲ್ಲಿವೆ
ಕೆಎಲ್ ರಾಹುಲ್, ತಂಡದ ವಿಕೆಟ್‌ಕೀಪರ್ ಬ್ಯಾಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅವರ ಅನುಭವ, ತಾಳ್ಮೆ ಮತ್ತು ಮಧ್ಯ ಕ್ರಮದಲ್ಲಿ ನಿಲ್ಲುವ ಶಕ್ತಿ ಭಾರತಕ್ಕೆ ಅಗತ್ಯವಾದ ಅಂಶಗಳಾಗಿವೆ.
ಮತ್ತೊಂದು ಹೆಸರು ಪ್ರಸಿದ್ಧ ಕೃಷ್ಣ ವೇಗದ ಬೌಲರ್. ವಾಕಾದಂತಹ ಪಿಚ್‌ನಲ್ಲಿ ಅವರ ಉದ್ದದ ಬೌನ್ಸ್ ಎದುರಾಳಿಗಳಿಗೆ ಕಠಿಣ ಪರೀಕ್ಷೆಯಾಗಬಹುದು. ಆದರೂ ಅವರ ಸ್ಥಾನ ಖಚಿತವೆಂದು ಹೇಳಲು ಸಾಧ್ಯವಿಲ್ಲ, ಏಕೆಂದರೆ ಯುವ ವೇಗಿ ಹರ್ಷಿತ್ ರಾಣಾ ಅವರ ಪ್ರದರ್ಶನವೂ ಆಯ್ಕೆದಾರರ ಗಮನ ಸೆಳೆದಿದೆ.
ಇತ್ತ ನಾಯಕ ಶುಭಮನ್ ಗಿಲ್ ನೇತೃತ್ವದ ಹೊಸ ತಂಡದತ್ತ ಎಲ್ಲರ ಕಣ್ಣು, ಏಷ್ಯಾ ಕಪ್ ಗೆಲುವಿನ ನಂತರ, ವಿಂಡೀಸ್ ವಿರುದ್ಧ ಟೆಸ್ಟ್ ಸರಣಿಯ ಕ್ಲೀನ್ ಸ್ವೀಪ್ ಮಾಡಿ ಈ ಎಲ್ಲ ಯಶಸ್ಸುಗಳ ನಡುವೆ ತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. ಆದರೆ ಆಸ್ಟ್ರೇಲಿಯಾದಂತಹ ಬಲಿಷ್ಠ ಎದುರಾಳಿಯ ಮುಂದೆ ಅದು ಸಾಕಾಗುತ್ತದೆಯಾ ಎಂಬುದು ಈಗಿನ ಪ್ರಶ್ನೆ.
ಅಕ್ಟೋಬರ್ 19ರಂದು ಭಾನುವಾರ ನಡೆಯಲಿರುವ ಈ ಮೊದಲ ಏಕದಿನ ಪಂದ್ಯ ಕೇವಲ ಪಂದ್ಯವಲ್ಲ ಅದು ಗೌರವ, ಆತ್ಮಗೌರವ ಮತ್ತು ಪ್ರತೀಕಾರದ ಪರ್ತ್‌ನ ಬೌನ್ಸಿ ಪಿಚ್‌ನಲ್ಲಿ ವೇಗಿಗಳ ರಣಭೂಮಿ ಸಜ್ಜಾಗಿದೆ.

