ಯೋಗಮಯವಾದ ಯಾದಗಿರಿ ಸ್ವಪ್ನಾ ಮೈದಾನ – ಸಾವಿರಾರು ಜನರು ಭಾಗಿ
ಸತ್ಯಕಾಮ ವಾರ್ತೆ ಯಾದಗಿರಿ:
ಆದಿ,ಅನಾದಿ ಕಾಲದಿಂದಲೂ ಯೋಗ, ವ್ಯಾಯಾಮ,ಧ್ಯಾನ ಋಷಿ ಮುನಿಗಳು ಮಾಡಿಕೊಂಡ ಬಂದ ಪರಿಣಾಮ ಅವರಿಗೆ ಆಯುಷ್ಯ ಹೆಚ್ಚಿಗೆ ಇತ್ತು ಮತ್ತುಉತ್ತಮ ಆರೋಗ್ಯ ಹೊಂದಿದ್ದರೆಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.
ಜಿಲ್ಲಾ ಪಂಚಾಯತ, ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ, ಪತಂಜಲಿ ಯೋಗ ಸಮಿತಿ, ಹಾಗೂ ಸರ್ಕಾರದ ಇತರೆ ಇಲಾಖೆ ಮತ್ತು ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಇಲ್ಲಿನ ಸ್ವಪ್ನಾ ಮೈದಾನದಲ್ಲಿ ಆಯೋಜಿಸಿದ್ದ “11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
- Advertisement -
ಭಾರತೀಯರು ಯೋಗದ ಮೂಲಕವೇ ಅನೇಕ ರೋಗಗಳನ್ನು ಗುಣಪಡಿಸಿಕೊಳ್ಳುವ ಕಾಲವೊಂದಿತ್ತು. ಆದರೆ, ಮುಂದೆ ಇಂಗ್ಲಿಷ್ ಔಷಧಿಗಳಿಗೆ ಮೊರೆ ಹೋಗುವ ಮೂಲಕ ಈ ದೇಸಿ ಪದ್ದತಿ ಮೇಲಿನ ಕಾಳಜಿ ಕಡಿಮೆ ಆಯಿತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮತ್ತೆ ಜನರು ಯೋಗ ಇತರೆ ದೈಹಿಕ ಕಸರತ್ತಿನ ಮೂಲಕ ತಮ್ಮ, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಮರಳಿದ್ದಾರೆಂದು ಶಾಸಕರು ವಿವರಿಸಿದರು.
ಪ್ರತಿ ನಿತ್ಯ ಬೆಳಗ್ಗೆ ಯೋಗ ಮಾಡುವುದರಿಂದ ಒತ್ತಡ ಕಡಿಮೆ ಆಗಿ ಲವ,ಲವಿಕೆಯಿಂದ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಬಬಹುದೆಂದು ಹೇಳಿದರು.
ಚಟಗಳ ದಾಸರಾಗದೇ ಉತ್ತಮ ಆರೋಗ್ಯ ಹೊಂದಿ,ಮೊಬೈಲ್ ಬಳಕೆ ಆದಷ್ಟು ಕಡಿಮೆ ಮಾಡಿ, ಶುದ್ಧ ಆಹಾರ ಸೇವನೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಶಾಸಕರು ಸಲಹೆ ನೀಡಿದರು.
ನಮ್ಮ ಈ ವಿದ್ಯೆ ಈಗ ಅಂತರ ರಾಷ್ಟ್ರಮಟ್ಟದಲ್ಲಿ ಭಾರಿ ಚಲಾವಣೆಗೆ ಬಂದಿದೆ. ಇದೇ ಭಾರತದ ಶಕ್ತಿ ಎಂದರು.
- Advertisement -
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರಾದಾರ್, ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ನಗರಸಭೆ ಆಯುಕ್ತರಾದ ಉಮೇಶ ಚವ್ಹಾಣ, ಜಿಲ್ಲಾ ಆಯುಷ್ ಅಧಿಕಾರಿ ಡಾ. ವಂದನಾ ಜೆ.ಗಾಳಿ, ಯೋಗ ಗುರುಗಳಾದ ಸೋಮನಾಥರೆಡ್ಡಿ ಎಲ್ಹೇರಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನಿರ್ದೇಶ ಪಂಡೀತರಾವ, ರೇಶ್ಮೆ ಇಲಾಖೆ ಸಹಾಯಕ ಸಂತೋಷ,
ವೈದ್ಯಾಧಿಕಾರಿ ಪ್ರಕಾಶ ರಾಜಾಪೂರೆ, ಬ್ರಹ್ಮಾಕುಮಾರಿ ವೀಣಾ ಅಕ್ಕಾ ಇದ್ದರು,

