ಸತ್ಯಕಾಮ ವಾರ್ತೆ ಯಾದಗಿರಿ:
ಜಿಲ್ಲೆಯಲ್ಲಿ ಅಕ್ರಮ ಮರಮ್ ಗಣಿಗಾರಿಕೆ ತಡೆಗಟ್ಟಲು ಆಡಳಿತ ಕ್ರಮ ಕೈಗೊಂಡಿರುವ ವೇಳೆಯಲ್ಲಿ, ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೇ ದಂಧೆಗೆ ಬೆನ್ನೆಲುಬಾಗಿ ನಿಂತಿರುವ ಆಡಿಯೋ ಬಯಲಾಗಿದೆ.
ಕಂದಾಯ ನಿರೀಕ್ಷಕ ಮಹೇಂದ್ರ ಲಂಚ ಪಡೆದು ಗಣಿಗಾರಿಕೆ ಮುಂದುವರಿಯಲು ಅವಕಾಶ ನೀಡುತ್ತಿದ್ದಾನೆಂಬುದು ಆಡಿಯೋದಲ್ಲಿ ಬಯಲಾಗಿದ್ದು, ಮೀನು ಸಾಗಾಟಕ್ಕೆ ಹುಂಡಾ ಹೊಡೆದಿದ್ದೇವೆ ಎಂದು ತಹಶೀಲ್ದಾರ್‌ಗೆ ಹೇಳ್ತೀನಿ ಎಂಬ ಮಾತು ಸ್ವತಃ RI ಬಾಯಿಂದಲೇ ಕೇಳಿಬಂದಿದೆ.
ಮೇಲಾಧಿಕಾರಿಗಳಿಗೆ RI ಯಾವ ರೀತಿ ತಪ್ಪು ಮಾಹಿತಿಯನ್ನು ಕೊಡುತ್ತೇನೆ ಎಂಬುದಕ್ಕೆ ಈ ಆಡಿಯೋ ಸಾಕ್ಷಿಯಾಗಿದ್ದೂ. ಗ್ರಾಮ ಲೆಕ್ಕಾಧಿಕಾರಿ ದೇವೇಂದ್ರ ಅವರ ಹೆಸರೂ ಈ ಆಡಿಯೋದಲ್ಲಿ ಕೇಳಿಬರುತ್ತಿದೆ.
ಪಟ್ಟಾ ಲ್ಯಾಂಡ್‌ನಲ್ಲೇ ಮರಮ್ ಗಣಿಗಾರಿಕೆ ಸಾಗುತ್ತಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದೂ,RI–VA ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಹಾಗೆಯೇ ಅಕ್ರಮಕ್ಕೆ ಸಾಥ್ ನೀಡುತ್ತಿರುವ ತಹಶೀಲ್ದಾರ್ ಮೇಲೂ ತನಿಖೆ ನಡೆಯಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.
ಹಲವೆಡೆ ಅಕ್ರಮ ಗಣಿಗಾರಿಕೆ;ಶಹಾಪುರ ತಾಲೂಕಿನ ವಿಭೂತಿಹಳ್ಳಿ, ಗೋಗಿ, ಇಬ್ರಾಹಿಂಪುರ, ಹುರಸುಗುಂಡಿಗಿ, ದೋರನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನಿರ್ಬಂಧವಿಲ್ಲದೆ ಅಕ್ರಮ ಗಣಿಗಾರಿಕೆ ಸಾಗುತ್ತಿದೆ. ಅಧಿಕಾರಿಗಳ ಕುಮ್ಮಕ್ಕಿನಿಂದಲೇ ನಡೆಯುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

