ಸತ್ಯಕಾಮ ವಾರ್ತೆ ಸುರಪುರ:
ಮಾನವ ಕಳ್ಳ ಸಾಗಣೆ ಎನ್ನುವುದು ಇದೊಂದು ಸಮಾಜಕ್ಕೆ ಅಂಟಿದ ಪಿಡುಗಾಗಿದೆ ಎಂದು ಹಿರಿಯ ನ್ಯಾಯವಾದಿ ಗುರುಪಾದಪ್ಪ ಬನ್ನಾಳ ತಿಳಿಸಿದರು.
ತಾಲೂಕಿನ ಲಕ್ಷಿö್ಮÃಪುರ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ತಾಲ್ಲೂಕ ಕಾನೂನು ಸೇವಾ ಸಮಿತಿ,ತಾಲ್ಲೂಕ ನ್ಯಾಯವಾದಿಗಳ ಸಂಘ ಮತ್ತು ಸರಕಾರಿ ಪ್ರೌಢ ಶಾಲೆ ಲಕ್ಷಿö್ಮÃಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಮಾನವ ಕಳ್ಳ ಸಾಗಣೆಗೆ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಬಲಿಯಾಗುತ್ತಿದ್ದಾರೆ.ಕಾರಣ ಶಕ್ತಿಶಾಲಿಗಳಲ್ಲದವರು ಎನ್ನುವ ಕಾರಣಕ್ಕೆ ಮಕ್ಕಳನ್ನು ಕಳ್ಳ ಸಾಗಣೆ ಮಾಡುತ್ತಾರೆ,ಇಂತಹ ಸಮಾಜ ವಿರೋಧಿ ಚಟುವಟಿಕೆಯನ್ನು ಯಾರೂ ಬೆಂಬಲಿಸದೆ ಇದನ್ನು ತಡೆಗಟ್ಟಲು ಎಲ್ಲರು ಧ್ವನಿ ಎತ್ತಬೇಕು ಎಂದರು.
ಇಂತಹ ಪ್ರಕರಣದಲ್ಲಿ ತೊಡಗಿದವರಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದೆ ಎನ್ನುವುದನ್ನು ಎಲ್ಲರು ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಸರಕಾರಿ ಅಭಿಯೋಜಕ ಸುರೇಶ ಪಾಟೀಲ್ ಮಾತನಾಡಿ,ಮಾನವ ಕಳ್ಳ ಸಾಗಣೆ ಎನ್ನುವುದು ಅತ್ಯಂತ ಘೋರ ಅಪರಾಧವಾಗಿದೆ,ಇಂತಹ ಕೃತ್ಯದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಇದೆ.ಅಲ್ಲದೆ ಮಾನವ ಕಳ್ಳ ಸಾಗಾಣಿಕೆ ಯಾಕೆ ಮಾಡುತ್ತಾರೆ ಎಂದರೆ ಕಳ್ಳ ಸಾಗಾಣಿಕೆಯಿಂದ ಅವರನ್ನು ಅತ್ಯಂತ ಕೆಟ್ಟ ಕಾರ್ಯಗಳಿಗೆ ಉಪಯೋಗಿಸಲು ಕಳ್ಳ ಸಾಗಣೆ ಮಾಡುತ್ತಾರೆ.ಯಾರೂ ಇದಕ್ಕೆ ಸಹಕರಿಸಬಾರದು ಇಂತಹ ಘಟನೆ ತಮಗೆ ಎಲ್ಲಿಯಾದರು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಅಥವಾ ಸಂಭಂದಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕು ಎಂದರು.
ಮನುಷ್ಯನನ್ನು ಮನುಷ್ಯನೆ ಕಳ್ಳತನ ಮಾಡುವುದು ಮಾನವ ಸಮಾಜ ತಲೆ ತಗ್ಗಿಸುವ ಕಾರ್ಯ ಇದಾಗಿದೆ ಎಂದರು.ಅಲ್ಲದೆ ಮಹಿಳೆಯರು ಮತ್ತು ಮಕ್ಕಳು ಸದಾಕಾಲ ಜಾಗೃತಿ ವಹಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಹಸೀನಾಬಾನು ಪಟೇಲ್ ವಹಿಸಿ ಮಾತನಾಡಿದರು.ಪ್ರಾಥಮಿಕ ಶಾಲೆಯ ಮುಖ್ಯಗುರು ರಾಯಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಶಿವರಾಜ ನೆರವೇರಿಸಿದರು,ಶಿಕ್ಷಕ ಮಲ್ಲಿಕಾರ್ಜುನತ್ತ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಶಿಕ್ಷಕರು,ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಭೀಮು ಬನಸೋಡೆ ಸೇರಿದಂತೆ ಎಲ್ಲಾ ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು.

