ಸತ್ಯಕಾಮ ವಾರ್ತೆ ಸಿರವಾರ :
ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ್ದರು ಎಂದು ಪಟ್ಟಣ ಪಂಚಾಯತಿ ಸದಸ್ಯ ಸೂರಿ ದುರುಗಣ್ಣ ನಾಯಕ ಹೇಳಿದರು.
ಪಟ್ಟಣ ಪಂಚಾಯತಿ ಕಾರ್ಯಲಯದಲ್ಲಿ ಗುರುವಾರ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಡಪದ ಅಪ್ಪಣ್ಣನವರು ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು. ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದ ಇವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗರವಾಗದಂತೆ ಕಾರ್ಯನಿರ್ವಹಿಸುತ್ತಿದ್ದರು. ಅವರ ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪಗಳಾಗಿವೆ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ವೈ ಭೂಪನಗೌಡ, ಪ.ಪಂ ಸದಸ್ಯರದ ಸೇನಅಲಿ, ಕೃಷ್ಣ ನಾಯಕ, ಮುಖಂಡರಾದ ಈಶಪ್ಪ ಹೂಗಾರ, ಚಂದ್ರಶೇಖರ ಹಡಪದÀ, ಬಸವರಾಜ ಹರವಿ, ಶರಣಪ್ಪ ನಾಗನೂರ, ಬಸವರಾಜ ಹೀರಾ, ಬಸವರಾಜ ಬೂದೂರು, ಭೀಮಣ್ಣ, ಮಲ್ಲಿಕಾರ್ಜುನ, ಅಮರೇಶ, ಮೌನೇಶ, ಆನಂದ ನವಲಕಲ್, ವೀರೇಶ, ಯಮುನಪ್ಪ, ಸಿಬ್ಬಂದಿಗಳಾದ ಹಂಪಯ್ಯ, ಚಾಂದ್‌ಸಾಬ್ ಇತರರು ಇದ್ದರು.
- Advertisement -

