ಸತ್ಯಕಾಮ ವಾರ್ತೆ ಯಾದಗಿರಿ:
ಸುರಪುರ ವಿಧಾನಸಭಾ ಮತ ಕ್ಷೇತ್ರದ ಜನಪ್ರಿಯ ಶಾಸಕರಾಗಿದ್ದ ದಿ: ರಾಜಾ ವೆಂಕಟಪ್ಪನಾಯಕರ ಪುತ್ರರಾದ ಜನಪ್ರಿಯ ಶಾಸಕರಾದ ರಾಜಾ ವೇಣುಗೋಪಾಲ್ ನಾಯಕರಿಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಕೆಪಿಸಿಸಿ ಹಿಂದುಳಿದ ವಿಭಾಗದ ರಾಜ್ಯ ಕಾರ್ಯದರ್ಶಿ ರಂಗನಗೌಡ ಪಾಟೀಲ್ ದೇವಕೇರಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಲ್ಯಾಣ ಕರ್ನಾಟಕ ಇತಿಹಾಸದಲ್ಲಿ ಪಕ್ಷ ನಿಷ್ಠೆಗೆ ಹೆಸರು ವಾಸಿಯಾದ ಕುಟುಂಬ ಅಂದರೆ ಅದು ರಾಜಾ ವೆಂಕಟಪ್ಪ ನಾಯಕರ ಕುಟುಂಬ ವೆಂಕಟಪ್ಪ ನಾಯಕರು 4 ಸಲ ಶಾಸಕರಾಗಿ ಸುರಪುರ ಮತ ಕ್ಷೇತ್ರದ ಅಭಿವೃದ್ಧಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತೆ ಕಳೆದ 2023ರ ಚುನಾವಣೆಯಲ್ಲಿ ಆಯ್ಕೆಯಾದ ಮೇಲೆ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಆಯ್ಕೆಯಾದರು ಆದರೆ ಅಧಿಕಾರ ವಹಿಸಿಕೊಂಡ ಸ್ವಲ್ಪ ದಿನದಲ್ಲೇ ನಿಧನವಾದರೂ 2024 ರ ಉಪ ಚುನಾವಣೆಯಲ್ಲಿ ಅವರ ಪುತ್ರರಾದ ರಾಜಾ ವೇಣುಗೋಪಾಲ್ ನಾಯಕ ಸ್ಪರ್ಧೆ ಮಾಡಿ ಅತಿ ಹೆಚ್ಚು ಅಂತರದಿಂದ ಶಾಸಕರಾದರು ಆದ್ದರಿಂದ ಹಿಂದುಳಿದ ಭಾಗದ ಅಭಿರುದ್ದಿ ವಿಚಾರವಾಗಿ ಸುರಪುರ ಮತ ಕ್ಷೇತ್ರದ ಜನಪ್ರಿಯ ಶಾಸಕರಾದ ರಾಜಾ ವೇಣುಗೋಪಾಲ್ ನಾಯಕರಿಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಎ.ಐ.ಸಿ.ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಹಾಗೂ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿಗಳಾದ ರಂಗನಗೌಡ ಪಾಟೀಲ್ ದೇವಿಕೇರಿ ಮನವಿ ಮಾಡಿಕೊಂಡಿದ್ದಾರೆ

