ಭಾರತೀಯ ಅಡುಗೆಮನೆಯಲ್ಲಿ ಮೆಂತ್ಯ (Fenugreek) ಒಂದು ಸಾಮಾನ್ಯ ಮತ್ತು ಅಗತ್ಯ ಪದಾರ್ಥ. ಇದು ಕೇವಲ ಅಡುಗೆಯ ರುಚಿಯನ್ನು ಹೆಚ್ಚಿಸುವುದಲ್ಲದೆ, ಅನೇಕ ಆರೋಗ್ಯಕರ ಗುಣಗಳಿಂದ ಕೂಡಿದೆ. ಪಾರಂಪರಿಕ ಆಯುರ್ವೇದದಲ್ಲೂ ಮೆಂತ್ಯ ಬೀಜಗಳಿಗೆ ಮಹತ್ತರ ಸ್ಥಾನವಿದೆ. ಇತ್ತೀಚಿನ ದಿನಗಳಲ್ಲಿ, ನೈಸರ್ಗಿಕ ಹಾಗೂ ಸರಳ ಗೃಹೌಷಧಿಗಳತ್ತ ಜನರು ಮತ್ತೆ ಮುಖಮಾಡುತ್ತಿರುವ ಹಿನ್ನೆಲೆಯಲ್ಲಿ ಮೆಂತ್ಯ ನೀರು ಕುಡಿಯುವ ಅಭ್ಯಾಸ ಒಂದು ಟ್ರೆಂಡ್ ಆಗಿದೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೆನೆಸಿದ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಿಂದ ಹಿಡಿದು ತೂಕ ಇಳಿಕೆವರೆಗೆ ಹಲವು ಲಾಭಗಳು ದೊರೆಯುತ್ತವೆ. ಕೇವಲ ಒಂದೇ ವಾರದಲ್ಲಿ ಈ ನೈಸರ್ಗಿಕ ಪಾನೀಯವು ದೇಹದಲ್ಲಿ ಹಿತಕರ ಬದಲಾವಣೆಗಳನ್ನು ತರುವ ಸಾಮರ್ಥ್ಯವಿದೆ. ಇದೀಗ ಮೆಂತ್ಯ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ದೊರೆಯುವ ಪ್ರಮುಖ ಆರೋಗ್ಯ ಲಾಭಗಳನ್ನು ಬಗ್ಗೆ ತಿಳಿದುಕೊಳ್ಳೋಣ.
ರಕ್ತದಲ್ಲಿನ ಸಕ್ಕರೆ ನಿಯಂತ್ರಣ:
ಮೆಂತ್ಯ ಬೀಜಗಳಲ್ಲಿ ಫೈಬರ್ (ನಾರಿನಾಂಶ) ಅಧಿಕ ಪ್ರಮಾಣದಲ್ಲಿದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ, ರಕ್ತದಲ್ಲಿ ಸಕ್ಕರೆಯ ಹಠಾತ್ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಡಯಾಬಿಟೀಸ್ ನಿಯಂತ್ರಣಕ್ಕೆ ಮೆಂತ್ಯ ನೀರು ಸಹಾಯಕ ಎಂದು ಹಲವು ಅಧ್ಯಯನಗಳು ಸೂಚಿಸುತ್ತವೆ.
ಜೀರ್ಣಕ್ರಿಯೆ ಸುಧಾರಣೆ ಮತ್ತು ಮಲಬದ್ಧತೆ ನಿವಾರಣೆ:
ಮೆಂತ್ಯ ನೆನೆಸಿದ ನೀರು ನಾರಿನಾಂಶದಿಂದ ಸಮೃದ್ಧವಾಗಿರುವುದರಿಂದ, ಅಜೀರ್ಣ, ಮಲಬದ್ಧತೆ ಹಾಗೂ ಕರುಳಿನ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ನಿಯಮಿತ ಸೇವನೆ ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸಲು ಸಹಕಾರಿ.
ಹೃದಯದ ಆರೋಗ್ಯಕ್ಕೆ ಪೋಷಕ:
ಮೆಂತ್ಯ ಹಾಕಿ ಕುದಿಸಿದ ನೀರು ‘ಕೆಟ್ಟ’ ಕೊಲೆಸ್ಟ್ರಾಲ್ (LDL) ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ತಗ್ಗುತ್ತದೆ ಮತ್ತು ಹೃದಯದ ಆರೋಗ್ಯ ಸುಧಾರಿಸುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಳ:
ಮೆಂತ್ಯ ಬೀಜಗಳಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ದೇಹದ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತವೆ. ನಿಯಮಿತವಾಗಿ ಮೆಂತ್ಯ ನೀರು ಕುಡಿಯುವುದು ವೈರಲ್ ಅಥವಾ ಸೀಸನಲ್ ಸೋಂಕುಗಳ ವಿರುದ್ಧ ದೇಹವನ್ನು ಬಲಪಡಿಸಲು ಸಹಾಯಕ.
ತೂಕ ನಿಯಂತ್ರಣ ಮತ್ತು ಹೊಟ್ಟೆ ಕೊಬ್ಬು ಕರಗಿಸಲು ಸಹಾಯಕ:
ಫೈಬರ್ ಅಧಿಕ ಪ್ರಮಾಣದಲ್ಲಿರುವುದರಿಂದ ಮೆಂತ್ಯ ನೀರು ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ, ಅತಿಯಾಗಿ ತಿನ್ನುವ ಅಭ್ಯಾಸವನ್ನು ಕಡಿಮೆ ಮಾಡುತ್ತದೆ. ಇದು ಮೆಟಾಬಾಲಿಸಂ ಅನ್ನು ಸುಧಾರಿಸಿ ಕೊಬ್ಬು ಕರಗಿಸಲು ಸಹಕಾರಿ.
ಚರ್ಮದ ಆರೋಗ್ಯದಲ್ಲಿ ಸುಧಾರಣೆ:
ಮೆಂತ್ಯ ನೀರಿನ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿ–ಇನ್‌ಫ್ಲಮೇಟರಿ ಗುಣಗಳು ಚರ್ಮದ ಸೋಂಕುಗಳು, ಮೊಡವೆ, ಹಾಗೂ ಉರಿಯೂತಗಳನ್ನು ತಗ್ಗಿಸಲು ಸಹಾಯ ಮಾಡುತ್ತವೆ. ನಿಯಮಿತ ಸೇವನೆ ಚರ್ಮವನ್ನು ಒಳಗಿನಿಂದಲೇ ತೇಜೋಮಯಗೊಳಿಸುತ್ತದೆ.
ಮೆಂತ್ಯ ನೀರು ನೈಸರ್ಗಿಕವಾಗಿದ್ದರೂ, ಪ್ರತಿಯೊಬ್ಬರ ದೇಹದ ಪ್ರತಿಕ್ರಿಯೆ ವಿಭಿನ್ನವಾಗಿರಬಹುದು. ಯಾವುದೇ ಹೊಸ ಪೌಷ್ಟಿಕ ಅಥವಾ ಆರೋಗ್ಯ ಕ್ರಮವನ್ನು ಆರಂಭಿಸುವ ಮೊದಲು ವೈದ್ಯರು ಅಥವಾ ಪೌಷ್ಟಿಕತಜ್ಞರ ಸಲಹೆ ಪಡೆಯುವುದು ಅತ್ಯಾವಶ್ಯಕ. ವಿಶೇಷವಾಗಿ ಗರ್ಭಿಣಿಯರು, ಶಿಶುವಿಗೆ ಹಾಲುಣಿಸುವ ತಾಯಂದಿರು ಮತ್ತು ಡಯಾಬಿಟೀಸ್ ಔಷಧಿಗಳನ್ನು ಸೇವಿಸುತ್ತಿರುವವರು ತಜ್ಞರ ಮಾರ್ಗದರ್ಶನ ಪಡೆಯುವುದು ಸೂಕ್ತ.
ಮೆಂತ್ಯ ನೀರು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಸುಲಭವಾಗಿದ್ದು, ಅದರ ಲಾಭಗಳು ಅಪಾರ. ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಗೆ ಒಂದು ಗ್ಲಾಸ್ ಮೆಂತ್ಯ ನೀರು ನಿಮ್ಮ ದೇಹದ ಆರೋಗ್ಯದಲ್ಲಿ ನೈಸರ್ಗಿಕ ಬದಲಾವಣೆ ತರಬಲ್ಲ ಚಿಕ್ಕ ಹೆಜ್ಜೆ.

