ಕಲಬುರಗಿ: ಶರಣಬಸವೇಶ್ವರ ಸಂಸ್ಥಾನ ಮಠದ 8ನೇ ಪೀಠಾಧಿಪತಿ, ಕಲಬುರಗಿಯ ಮಹಾ ದಾಸೋಹಿ ಪರಂ ಪೂಜ್ಯ ಶರಣಬಸಪ್ಪ ಅಪ್ಪ (92) ಅವರು ಇಂದು ರಾತ್ರಿ 9.23ಕ್ಕೆ ದಾಸೋಹ ಮಹಾ ಮನೆಯಲ್ಲಿ ಲಿಂಗೈಕ್ಯರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅಪ್ಪಾಜಿ, ಕೆಲವು ದಿನಗಳಿಂದ ಮಠದಲ್ಲೇ ವೆಂಟಿಲೇಟರ್‌ನಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಪರಮಧಾಮ ಪ್ರವೇಶಿಸಿದರು.
ಕುಟುಂಬಸ್ಥರು ದೇವಸ್ಥಾನದ ಮುಂಭಾಗದಲ್ಲಿಯೇ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿದ್ದು, ಭಕ್ತರ ಭಾರಿ ಆಗಮನದ ಹಿನ್ನಲೆ ಕಲಬುರಗಿ ಪೊಲೀಸ್ ಇಲಾಖೆ ಕಠಿಣ ಬಂದೋಬಸ್ತ್ ಕೈಗೊಂಡಿದೆ. ಅಂತಿಮ ದರ್ಶನದ ವೇಳೆಯನ್ನು ಕುಟುಂಬ ಸಮಾಲೋಚನೆ ಬಳಿಕ ಪ್ರಕಟಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ತಿಳಿಸಿದ್ದಾರೆ.

