ವರದಿ: ರಮೇಶ ನಾಯಕ್
ಸತ್ಯಕಾಮ ವಾರ್ತೆ ಲಿಂಗಸುಗೂರು:
ತಾಲ್ಲೂಕಿನ ಗ್ರಾಮ ಪಂಚಾಯತಿ ರೋಡಲಬಂಡ ಯುಕೆಪಿ ಗ್ರಾಮ್ ಪಂಚಾಯತ್ ವ್ಯಾಪ್ತಿ ಬರುವ ಜಂಗಿರಾಂಪೂರ ತಾಂಡಾ.ಅಂಜನೇಯ ದೇವಸ್ಥಾನದ ನಾರಾಯಣಪುರ ಮುಖ್ಯ ಕಾಲುವೆಗೆ ರಸ್ತೆ ಹದಗೆಟ್ಟಿದ್ದು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಲಾಗಿತ್ತು. ರಸ್ತೆ ಸಂಪೂರ್ಣ ಅಗೆದು ಮೇಲೆ ಜಲ್ಲಿ ಕಂಕರ್ ಹರವಿದ್ದಾರೆ. ನಾಲ್ಕು ತಿಂಗಳಾದರೂ ಮೇಲೆ ಸಿಮೆಂಟ್ ಕಾಂಕ್ರೀಟ್ ಹಾಕಿ ಪಕ್ಕಾ ರಸ್ತೆ ಮಾಡುತ್ತಿಲ್ಲ. ಹಾಕಿರುವ ಜಲ್ಲಿ ಕಂಕರನಲ್ಲಿ ಬೈಕ್ ಉರುಳಿ ಸವಾರರು ಗಾಯಗೊಂಡಿದ್ದಾರೆ. ಸಾರ್ವಜನಿಕರ ಓಡಾಡಲು ಆಗುತ್ತಿಲ್ಲ. ಈ ಕುರಿತು ಲಿಂಗಸುಗೂರು ಕೆ ಆರ್ ಐ ಡಿ ಎಲ್ ಅಧಿಕಾರಿಗಳಿಗೆ ನಾಲ್ಕು ಬಾರಿ ತಿಳಿಸಿದರು ದುರಸ್ಥಿಗೊಳಿಸುವಂತೆ ಒತ್ತಾಯಿಸಿದ್ದೇವೆ. ಅವರು ಕ್ಯಾರೆ ಅನ್ನುತ್ತಿಲ್ಲ. ಕಾಮಗಾರಿಗೆ ಸಂಬಂಧ ಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇವರ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಕೂಡಲೇ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಬೇಕು ಇಲ್ಲದಿದ್ದರೆ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಶಂಕರ ಪವಾರ, ಅಮರೇಶ ಕರಡಕಲ್ ತಾಂಡ, ಭೀಮಣ್ಣ ಮತ್ತಿತರರು ಎಚ್ಚರಿಕೆ ನೀಡಿದರು.
- Advertisement -

