ಸ್ಯಾಂಡಲ್‍ವುಡ್ ಚರ್ಚೆಯಲ್ಲಿ ಮತ್ತೆ ದರ್ಶನ್ ಮತ್ತು ಪವಿತ್ರಾ ಗೌಡರ ಹೆಸರು ಕೇಳಿಬರುತ್ತಿದೆ. ಇಬ್ಬರೂ ಒಟ್ಟಿಗೆ ಜೀವನ ನಡೆಸಿದ್ದರು ಎಂಬ ಮಾತು ಹಲವಾರು ಬಾರಿ ಕೇಳಿಬಂದಿದ್ದರೂ, “ಇವರು ಮದುವೆಯಾಗಿದ್ದಾರೆ” ಎಂಬ ವಿಷಯಕ್ಕೆ ಎಂದಿಗೂ ಅಧಿಕೃತ ದೃಢೀಕರಣ ಬಂದಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈಗ ತೆರೆದುಕೊಂಡಿರುವ ಹಳೆ ಫೋಟೋಗಳು, ಚರ್ಚೆಗೆ ಮತ್ತಷ್ಟು ಆಹಾರ ನೀಡಿದ್ದಾರೆ.
ಇತ್ತೀಚೆಗಷ್ಟೇ ವೈರಲ್ ಆದ ರೀಲ್ ವಿಡಿಯೋದಲ್ಲಿ ದರ್ಶನ್ ಮತ್ತು ಪವಿತ್ರಾ ಮದುವೆಯ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಫೋಟೋದಲ್ಲಿ ಪವಿತ್ರಾ ಅವರ ಕತ್ತಿನಲ್ಲಿರುವ ಅರಿಶಿಣದ ದಾರ, ದರ್ಶನ್ ಅವರ ಉಡುಗೆ ಹಾಗೂ ಇಬ್ಬರ ಭಾವಭಂಗಿ, ಅಭಿಮಾನಿಗಳಲ್ಲಿ “ಇದು ಅವರ ಮದುವೆಯ ಫೋಟೋವೇ?” ಎಂಬ ಪ್ರಶ್ನೆಯನ್ನು ಹುಟ್ಟಿಸಿದೆ. ಸುಮಾರು ಹತ್ತು ವರ್ಷಗಳ ಹಿಂದೆ ತೆಗೆಯಲ್ಪಟ್ಟಿದೆ ಎನ್ನಲಾಗಿರುವ ಈ ಫೋಟೋಗಳು ಈಗ ಮತ್ತೆ ವೈರಲ್ ಆಗುತ್ತಿದ್ದು, ಅನೇಕ ವಾದ ಪ್ರತಿವಾದಗಳಿಗೆ ಕಾರಣವಾಗಿವೆ.
ಆ ಸಮಯದಲ್ಲೇ ದರ್ಶನ್ ಅವರಿಗೆ ಅಪಘಾತವಾಗಿ ಕೈಗೆ ಗಾಯವಾಗಿದ್ದ ಸಂದರ್ಭದಲ್ಲಿ, ಪವಿತ್ರಾ ಅವರು ಅವರಿಗೆ ಊಟ ಮಾಡಿಸುತ್ತಿರುವ ಕ್ಷಣಗಳೂ ಫೋಟೋಗಳಲ್ಲಿ ಕಾಣಿಸುತ್ತಿವೆ. ಈ ಅನೌಪಚಾರಿಕ ದೃಶ್ಯಗಳು ಇಬ್ಬರ ನಡುವಿನ ಆತ್ಮೀಯತೆಯನ್ನು ಮತ್ತೊಮ್ಮೆ ನೆನಪಿಗೆ ತರುತ್ತಿವೆ.
ಆದರೆ, ಗಮನಿಸಬೇಕಾದ ಸಂಗತಿ ಏನೆಂದರೆ ಈವರೆಗೆ ಇವರು ಮದುವೆಯಾಗಿರುವುದಕ್ಕೆ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ. ಈ ಹಳೆಯ ಫೋಟೋಗಳ ಮೇಲಿನ ಚರ್ಚೆ ಹೆಚ್ಚುತ್ತಿದ್ದಂತೆಯೇ, ಅಭಿಮಾನಿಗಳಲ್ಲಿ ಕುತೂಹಲ ತಾರಕ್ಕೇರಿದೆ.
ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು “ಇದು ನಿಜವಾದ ಮದುವೆಯೇ? ಇಲ್ಲಾ ಫೋಟೋಶೂಟ್‌ನಾ?” ಎಂದು ಅಚ್ಚರಿಯ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ
ಫೋಟೋಗಳು ವೈರಲ್ ಆದರೂ, ನಿಜ ಏನು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟತೆ ಸಿಗಬೇಕಿದೆ. ಇಷ್ಟರಲ್ಲೇ, ದರ್ಶನ್ ಪವಿತ್ರಾ ಜೋಡಿ ಕುರಿತು ಊಹಾಪೋಹಗಳು ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದು ಆಗಿವೆ.
