ಸತ್ಯಕಾಮ ವಾರ್ತೆ ಸುರಪುರ:
ಕಾಂಗ್ರೆಸ್ ಪಕ್ಷದ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಅವರಿಗೆ ತಾಲೂಕಿನ ಅವರ ಸ್ವಗ್ರಾಮ ಆಲ್ದಾಳ ಗ್ರಾಮದಲ್ಲಿ ಅಭಿನಂದನಾ ಸಮಾರಂಭ ನಡೆಸಲಾಯಿತು.ರಮೇಶ ದೊರೆಗೆ ಬೃಹತ್ ಗಾತ್ರದ ಹೂಮಾಲೆ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ರಮೇಶ ದೊರೆ ಅವರು ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಸಮಾಜ ಸೇವೆಯನ್ನು ಮಾಡುತ್ತಾ ಬರುತ್ತಿದ್ದು,ಅವರ ಸೇವೆಯನ್ನು ಗುರುತಿಸಿ ಇಂದು ತಮಿಳುನಾಡಿನ ಏಷ್ಯಾ ಅಂತರಾಷ್ಟಿçÃಯ ಸಂಸ್ಕೃತಿ ಸಂಶೋಧನಾ ವಿವಿಯೂ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿದ್ದು,ಇದರಿಂದಾಗಿ ನಮ್ಮ ಆಲ್ದಾಳ ಗ್ರಾಮಕ್ಕೆ ನಾಡಿನಲ್ಲಿ ಬಹುದೊಡ್ಡ ಕೀರ್ತಿ ಬಂದAತಾಗಿದೆ.ಅದಕ್ಕೆ ಕಾರಣರಾದ ರಮೇಶ ದೊರೆ ಅವರನ್ನು ಇಂದು ನಾವೆಲ್ಲರು ಅಭಿನಂದಿಸುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದರು.
ಅಲ್ಲದೆ ಇನ್ನೂ ಹೆಚ್ಚೆಚ್ಚು ಜನರ ಸೇವೆ ಮಾಡುವ ಶಕ್ತಿ ದೇವರು ಅವರಿಗೆ ಕೊಡಲಿ,ಇನ್ನೂ ರಾಜ್ಯ,ರಾಷ್ಟç ಮಟ್ಟದ ಪ್ರಶಸ್ತಿಗಳು ಅವರಿಗೆ ಲಭಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾನಪ್ಪ ಸಾಹುಕಾರ,ನ್ಯಾಯವಾದಿ ಬಸವರಾಜ ಅನಸೂರ,ದುರಗಪ್ಪ ಮಾಸ್ತರ ಮಾತನಾಡಿದರು.
- Advertisement -
ಗ್ರಾಮಸ್ಥರ ಸನ್ಮಾನ ಸ್ವೀಕರಿಸಿದ ರಮೇಶ ದೊರೆ ಮಾತನಾಡಿ, ನಾನು ಯಾವುದೇ ಪದವಿ,ಪ್ರಶಸ್ತಿಗಾಗಿ ಸಮಾಜ ಸೇವೆ ಮಾಡುತ್ತಿಲ್ಲ.ಆದರೆ ನಮ್ಮಿಂದಾದ ಸಹಾಯವನ್ನು ಜನರಿಗೆ ಮಾಡಬೇಕು,ಸಮಾಜದ ಅಭಿವೃಧ್ಧಿಗೆ ನಮ್ಮಿಂದಾದ ಕೆಲಸ ಮಾಡೋಣ ಎಂದು ಮಾಡುತ್ತಿರುವೆನು.ಮುಂದೆಯೂ ನನ್ನ ಸೇವೆ ಹೀಗೆಯೇ ಮುಂದುವರೆಯಲಿದೆ.ನನ್ನ ಸೇವೆಯನ್ನು ಗುರುತಿಸಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ನನ್ನ ಜವಬ್ದಾರಿಯನ್ನು ಹೆಚ್ಚಿಸಿದೆ.ಅಲ್ಲದೆ ನನಗೆ ಇನ್ನಷ್ಟು ಕೆಲಸ ಮಾಡಲು ಇಂದು ಅಭಿನಂದನೆ ಸಮಾರಂಭದ ಮೂಲಕ ಶಕ್ತಿ ತುಂಬಿರುವ ಇಡೀ ಗ್ರಾಮದ ಎಲ್ಲ ಮುಖಂಡರು ಮತ್ತು ಜನತೆಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿ,ಇನ್ನಷ್ಟು ಹೆಚ್ಚಿನ ಸೇವೆ ಮಾಡಲು ಭಗವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ್, ಕರವೇ ತಾ.ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮರಡಿ,ರಾಮಸ್ವಾಮಿ ಕಿಲ್ಲೇದಾರ,ನಿಂಗಯ್ಯ ಕಿಲ್ಲೇದಾರ,ಪ್ರಧಾನೆಪ್ಪ ಸಕ್ರಾಪೂರ,ವೈಜನಾಥ ಹುದ್ದಾರ, ಸಂಜೀವಪ್ಪ ಕಟ್ಟಿಮನಿ,ಬಸವರಾಜ ಜಂಬಲದಿನ್ನಿ,ನರಸಿAಗ ಜಮಾದಾರ,ಬಾಬು ಪಟೇಲ್,ಮಲ್ಲಣ್ಣ ರಾಜಾಪುರ,ಮಾನಪ್ಪ ಕಟ್ಟಿಮನಿ, ಲಕ್ಷಿö್ಮÃಪತಿ ದೊರೆ ಹಾಗೂ ನಾಗರಾಳ ಗ್ರಾಮದ ಭೀಮರಾಯ ಠಾಣಾಗುಂದಿ,ತಿಪ್ಪಣ್ಣ ಚೆನ್ನೂರ,ಮಾನಪ್ಪಗೌಡ,ತಿರುಪತಿ ಹುದ್ದಾರ,ಅಯ್ಯಣ್ಣ ಕಟ್ಟಿಮನಿ,ಯಂಕಪ್ಪ ಹುದ್ದಾರ,ಸೋಮು ಕಟ್ಟಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ನಿವೃತ್ತ ಶಿಕ್ಷಕ ಭೀಮಣ್ಣ ಹುದ್ದಾರ ನಿರೂಪಿಸಿದರು,ನಿಂಗಯ್ಯ ಕಿಲ್ಲೆದಾರ ವಂದಿಸಿದರು.

