ಯಾದಗಿರಿ: ಬಿಜೆಪಿ ಮುಖಂಡ ಚೆನ್ನಾರೆಡ್ಡಿಗೌಡ ಬಿಳಾರ್ ಅವರ ಹುಟ್ಟುಹಬ್ಬದ ಅಂಗವಾಗಿ, ಅವರ ಅಭಿಮಾನಿ ಬಳಗದ ವತಿಯಿಂದ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸಲಾಯಿತು. ಸಮಾಜ ಸೇವೆಯೊಂದಿಗೆ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಲಾಯಿತು.
ನಗರದಲ್ಲಿನ ವೃದ್ದಾಶ್ರಮ ಮತ್ತು ಅನಾಥಾಶ್ರಮಗಳಿಗೆ ಭೇಟಿ ನೀಡಿ, ಅಲ್ಲಿನ ನಿರ್ಗತಿಕರಿಗೆ ಮತ್ತು ವೃದ್ಧರಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಿದರು. ಈ ಕಿಟ್‌ಗಳಲ್ಲಿ ಅಕ್ಕಿ, ದಾಲ್, ಎಣ್ಣೆ, ಸಕ್ಕರೆ, ಬಿಸ್ಕತ್, ತಿಂಡಿಪದಾರ್ಥಗಳು ಸೇರಿದಂತೆ ದಿನಬಳಕೆಯ ಪದಾರ್ಥಗಳಿದ್ದವು.
ಚೆನ್ನಾರೆಡ್ಡಿಗೌಡ ಬಿಳಾರ್ ಅವರು ಸದಾ ಜನಸೇವೆಗಾಗಿ ಶ್ರಮಿಸುತ್ತಾರೆ. ಅವರ ಸೇವಾ ಮನೋಭಾವದಿಂದ ಪ್ರೇರಿತರಾಗಿ ನಾವು ಸಹ ಸಮಾಜ ಸೇವೆಗೆ ಕೈಜೋಡಿಸಿದ್ದೇವೆ. ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಲ್ಲಿ ವಾಸಿಸುವವರಿಗೆ ಸಹಾಯ ಮಾಡಿದ ಸಂತೋಷವೇ ನಮ್ಮಿಗೆ ನಿಜವಾದ ಹುಟ್ಟುಹಬ್ಬದ ಸಂಭ್ರಮ ಎಂದು ಅಭಿಮಾನಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಬಸವರಾಜ್ ಸಾವೂರ್, ಬಾಬಾ ಖಾನ್, ಮರಿಗೌಡ, ರೆಡ್ಡಿ ತಂಗಡಗಿ, ಚೇತನ್ ಟಿಂಗ್ರೆ, ವಿಶ್ವ ಮುರಗನೂರ್, ಮಾರ್ಥಂಡಪ್ಪ ಸೇರಿದಂತೆ ಇನ್ನಿತರರು ಇದ್ದರು.

