Category: State

  • ನೇರ ನಡೆ ನುಡಿಯ ಹೃದಯ ಶ್ರೀಮಂತಿಕೆಯ ನಾಯಕ ಮುದ್ನಾಳ : ಹೆಡಗಿಮದ್ರಾ ಶ್ರೀ

    ನೇರ ನಡೆ ನುಡಿಯ ಹೃದಯ ಶ್ರೀಮಂತಿಕೆಯ ನಾಯಕ ಮುದ್ನಾಳ : ಹೆಡಗಿಮದ್ರಾ ಶ್ರೀ

    ಸತ್ಯಕಾಮ ವಾರ್ತೆ ಯಾದಗಿರಿ :

    ಹಿರಿಯ ರಾಜಕಾರಣಿಯಾಗಿದ್ದ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಬದುಕಿನ ಹೆಚ್ಚುಕಾಲ ಜನ ಸೇವೆಯಲ್ಲಿಯೇ ಕಳೆದರು, ಅವರು ಜೀವನದ ಅತಿಹೆಚ್ಚು ದಿನಗಳ ನ್ಯಾಯ, ನೀತಿ, ಧರ್ಮ ಪರಿಪಾಲನೆ ಹೀಗೆ ಸಾಮಾಜಿಕ ಜೀವನದಲ್ಲಿಯೇ ಕಳೆದರು ಎಂದು ಹೆಡಗಿಮದ್ರಾ ಶ್ರೀ ಶಾಂತಶಿವಯೋಗಿಶ್ವರ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.

    ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಸಮಾಜ, ಬಸವ ಉತ್ಸವ ಸಮಿತಿ, ವೆಂಕಟರೆಡ್ಡಿಗೌಡ ಮುದ್ನಾಳ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಯಾದಗಿರಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಸಮಾಜ ಬಸವ ಉತ್ಸವ ಸಮಿತಿ, ವೆಂಕಟರೆಡ್ಡಿಗೌಡ ಮುದ್ನಾಳ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಯಾದಗಿರಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಸಮಾಜ ಬಸವ ಉತ್ಸವ ಸಮಿತಿ, ವೆಂಕಟರೆಡ್ಡಿಗೌಡ ಮುದ್ನಾಳ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ನಾಟಕ ಮಾಡಿ ಬದುಕುವುದಕ್ಕಿಂತ ನೇರ ದಿಟ್ಟ ನಡೆ ನುಡಿಯಿಂದ ಬದುಕುಬೇಕು ಎಂಬುದು ಅವರ ತತ್ವವಾಗಿತ್ತು, ಜೀವನದುದ್ದಕ್ಕೂ ಕೂಡ ಅವರು ನೇರ ನಡೆ ನುಡಿಯ ಹೃದಯ ಶ್ರೀಮಂತಿಕೆಯ ನಾಯಕರಾಗಿಯೇ ಜೀವನ ನಡೆಸಿದರು ಎಂದು ಹೇಳಿದರು.

    ಯಾದಗಿರಿ ಜಿಲ್ಲೆಯಲ್ಲಿ ರಾಜಕೀಯ ಜೀವನದಲ್ಲಿ ಹೆಚ್ಚಿನ ಅಭಿವೃದ್ದಿಗಳನ್ನು ಮಾಡಿದ್ದಾರೆ ಅವರ ಆತ್ಮಕ್ಕೆ ದೇವರು ಶಾತಿ ನೀಡಲಿ ಎಂದು ತಿಳಿಸಿದರು.

    ಶಾಸಕ ಚೆನ್ನಾರಡ್ಡಿ ಪಾಟೀಲ ತುನ್ನೂರ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ಅವರು ರಾಜಕೀಯ ಜೀವನದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ಸದಾ ಜನರ ಕಾಳಜಿವಹಿಸುವ ಓರ್ವ ನಾಯಕರಾಗಿದ್ದರು ನ್ಯಾಯ, ನೀತಿಯಂತೆ ಬದುಕು ನಡೆಸಿದ ಒಬ್ಬ ಜನ ನಾಯಕರು ವೆಂಕಟರೆಡ್ಡಿಗೌಡ ಮುದ್ನಾಳ ಆಗಿದ್ದರು ಎಂದು ಹೇಳಿದರು.

    ದಾಸಬಾಳ ಶ್ರೀ ಮಠದ ಸದ್ಗುರು ವೀರೇಶ್ವರ ಮಹಾಸ್ವಾಮಿಗಳು ಮಾತನಾಡಿ, ವೆಂಕಟರೆಡ್ಡಿಗೌಡ ಮುದ್ನಾಳ ಅವರು ಕೇವಲ ಜನ ನಾಯಕರಾಗಿರದೇ ಜನ ಪ್ರೀತಿಯ ನಾಯಕರಾಗಿದ್ದರು, ಜೀವನವಿಡಿ ಮತಕ್ಷೇತ್ರದ ಜನರ ಒಳಿತಿಗಾಗಿ ಹಗಲಿರುಳು ಶ್ರಮಿಸಿದ ಧೀಮಂತ ನಾಯಕರಾಗಿದ್ದರು ಎಂದು ಹೇಳಿದರು.

    ಸೊಪ್ಪಿಮಠಡ ಶ್ರಿಗಳಾದ ಚನ್ನಕೇಶವ ಮಹಾಸ್ವಾಮಿಗಳು. ವಿಶ್ವಕರ್ಮ ಏಕದಂಡಗಿ ಮಠದ ಕುಮಾರ ಮಹಾಸ್ವಾಮಿಗಳು ಮಾತನಾಡಿದರು.

    ಈ ಸಂದರ್ಭದಲ್ಲಿ ವೀರಶೈವ ಸಮಾಜದ ನಗರ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ. ರಾಚಣ್ಣಗೌಡ ಮುದ್ನಾಳ. ಮಹೇಶರೆಡ್ಡಿ ಗೌಡ ಮುದ್ನಾಳ. ಹಣಮಂತರೆಡ್ಡಿ ಗೌಡ ಮುದ್ನಾಳ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದಪ್ಪ ಎಸ್ ಹೊಟ್ಟಿ. ಶರಣಪ್ಪಗೌಡ ಮಲ್ಹಾರ. ವೀರಶೈವ ಸಮಾಜದ ಗೌರವ ಅಧ್ಯಕ್ಷ ಎಸ್ ಬಿ ಪಾಟೀಲ. ಸಿ ಎಸ್ ಮಾಲಿಪಾಟೀಲ. ಚನ್ನಬಸರೆಡ್ಡಿ ಗೌಡ ಮುದ್ನಾಳ. ಸೋಮಶೇಖರ್ ಮಣ್ಣೂರ. ಬಸವಂತ್ರಾಯ ಗೌಡ ಮಾಲಿ ಪಾಟೀಲ. ಗೂಂಡುರಾವ ಪಂಚೇತ್ರಿ. ಬಸವರಾಜ ಮೋಟ್ನಳ್ಳಿ. ಆರ್ ಮಹಾದೇವಪ್ಪ ಗೌಡ ಅಬ್ಬೆತುಮಕೂರ. ನಾಗರತ್ನ ಕುಪ್ಪಿ. ನಾಗರತ್ನ ಅನಪೂರ. ಅನ್ನಪೂರ್ಣ ಜವಳಿ ವೀಣಾ ಮೋದಿ. ಸುನೀತಾ ಚವ್ಹಾಣ. ನಾಗೇಂದ್ರ ಜಾಜಿ. ಸಿದ್ದರಾಜ ರೆಡ್ಡಿ ರಾಜಶೇಖರ ಕಿಲ್ಲನಕೇರಿ. ಆರ್ ಮಹಾದೇವಪ್ಪ ಗೌಡ ಅಬ್ಬೆತುಮಕೂರ. ಚೆನ್ನಪ್ಪ ಸಾಹುಕಾರ. ಇತರರು ಇದ್ದರು

  • ವಿದ್ಯಾರ್ಥಿಗಳ ಮನೋಭಾವ ಅರಿತು ಶಿಕ್ಷಣ ನೀಡಬೇಕಾಗಿದೆ – ಶ್ರೀನಿವಾಸ

    ವಿದ್ಯಾರ್ಥಿಗಳ ಮನೋಭಾವ ಅರಿತು ಶಿಕ್ಷಣ ನೀಡಬೇಕಾಗಿದೆ – ಶ್ರೀನಿವಾಸ

    ಸತ್ಯಕಾಮ ವಾರ್ತೆ ಗುರುಮಠಕಲ್ :

    ವಿದ್ಯಾರ್ಥಿಗಳ ಭವಿಷ್ಯದ ಬದುಕನ್ನು ರೂಪಿಸುವ ಶಿಕ್ಷಕನ ಮೇಲೆ ಅತಿಹೆಚ್ಚು ಜವಾಬ್ದಾರಿ ಇದೆ. ಗುಣಾತ್ಮಕ ಶಿಕ್ಷಣ ನೀಡುವ ಜೊತೆಗೆ ವಿದ್ಯಾರ್ಥಿಗಳ ಮನೋಭಾವನೆಯನ್ನು ಅರಿತು ಅವರಿಗೆ ಶಿಕ್ಷಣ ನೀಡಬೇಕಿದೆ. ಶಿಕ್ಷಣದ ಆಳವನ್ನು ಅಭ್ಯಾಸ ಮಾಡಿ ವಿದ್ಯಾರ್ಥಿಗಳಿಗೆ ಬೋಧಿಸಬೇಕಿದೆ ಎಂದು ಪ್ರಾದೇಶಿಕ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಪಾಟೀಲ್ ಸೇಡಂ ಹೇಳಿದರು.

    ಪಟ್ಟಣದ ಖಾಸಮಠ ಆವರಣದಲ್ಲಿ ಲಾಯನ್ಸ್ ಕ್ಲಬ್ ಆಫ್ ಇಂಟರ್ನ್ಯಾಷನಲ್ ಗುರುಮಠಕಲ್ ಸೇವಾ ಸದನ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶನಿವಾರ ಗುರುವಂದನಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

    ಇದೇ ಸಂಧರ್ಭದಲ್ಲಿ ಗುರುಮಠಕಲ್ ಲಯನ್ಸ್ ಕ್ಲಬ್ ಸೇವಾ ಸಾಧನ ಅಧ್ಯಕ್ಷ ಸಂತೋಷ ಕುಮಾರ್ ನೀರೇಟಿ ಮಾತನಾಡಿ, ಶಿಕ್ಷಕರು ನಿರಂತರ ಅಧ್ಯಯನ ಶೀಲರಾಗಿದ್ದಾಗ ಮಾತ್ರ ಮಕ್ಕಳಿಗೆ ಪ್ರಾಚೀನ ಮತ್ತು ಪ್ರಸ್ತುತ ಸಮಾಜದ ಆಗುಹೋಗುಗಳ ಕುರಿತು ಭೋದನೆ ಮಾಡಬಹುದು, ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪಾಠಬೋಧನೆ ಮಾಡಿದರೆ ಮಾತ್ರ ನೀವು ಮಕ್ಕಳ ಗಮನ ಸೆಳೆಯಬಹುದು ಎಂದರು.

    ಕಾರ್ಯಕ್ರಮದಲ್ಲಿ ತಾಲೂಕಿನ ಸಮಾರು 300ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು ಹಾಜರಿದ್ದರು.

    ತಮ್ಮ ವೃತ್ತಿಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಪ್ರವೃತ್ತಿಯನ್ನಗಿಸಿಕೊಂಡು ಉತ್ತಮ ಸೇವೆ ಸಲ್ಲಿಸುತ್ತಿರುವ ತಾಲೂಕಿನ ವಿವಿಧ ಕ್ಲಸ್ಟರ್ ನ 17 ಶಿಕ್ಷಕರನ್ನು ಆಯ್ಕೆ ಮಾಡಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಮಾಡಿದರು. ಶಶಿಕಾಂತ್ ಜನಾರ್ಧನ್ ನಿರೂಪಣೆ ಮಾಡಿದರು.

     

    ಈ ಸಂಧರ್ಭದಲ್ಲಿ ಅಖಂಡೇಶ್ವರ ಹಿರೇಮಠ, ಪ್ರಧಾನ ಕಾರ್ಯದರ್ಶಿ ನಾರಾಯಣ ರೆಡ್ಡಿ ಪೊಲೀಸ್ ಪಾಟೀಲ್, ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಭೀಮಪ್ಪ ಮನ್ನೆ, ಉಪಾಧ್ಯಕ್ಷರಾದ ಶ್ರೀನಿವಾಸ್ ಮಡಿವಾಳ,ಸಿಆರ್‌ಪಿ ಸಿದ್ದಲಿಂಗಪ್ಪ ನೆಲ್ಲೋಗಿ, ಬಾಲಪ್ಪ ಸಿರಿಗೆಮ್, ರಾಮಕೃಷ್ಣ, ಪ್ರಕಾಶ್, ವೀರಾಶಾಸ್ತ್ರಿ, ರವೀಂದ್ರ ಚೌಹಾಣ, ಬಾಲಪ್ಪ ಸಿರಿಗಂ, ಸಿದ್ದು ಕಂದಕುರ್,ರಾಜೇಂದ್ರ, ಆಂಜನೇಯ, ವಿಜಯಲಕ್ಷ್ಮಿ ನಿಲ್ಲೋಗಿ, ಗಾಯತ್ರಿ ನಾಯಕಿನ್ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

  • ಸತ್ಯಕಾಮ ಪ್ರತಿಫಲ: “ಶಾಲಾ ಮೆಲ್ಚಾವಣಿಯ ದುರಸ್ಥಿ ಕಾರ್ಯಾರಂಭ”

    ಸತ್ಯಕಾಮ ಪ್ರತಿಫಲ: “ಶಾಲಾ ಮೆಲ್ಚಾವಣಿಯ ದುರಸ್ಥಿ ಕಾರ್ಯಾರಂಭ”

    ಸತ್ಯಕಾಮ ಪ್ರತಿಫಲ: ಎಲ್ಲರಿಗಿಂತ ಮೊದಲು ಸುದ್ದಿ ಪ್ರಕಟಿಸಿದ್ದೇ ನಾವು

     

    ಸತ್ಯಕಾಮ ವಾರ್ತೆ ಗುರುಮಠಕಲ್ :

    ತಾಲೂಕಿನ ಚಿಂತನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ವಿಜ್ಞಾನ ಪ್ರಯೋಗಾಲಯದ ಮೇಲ್ಚಾವಣಿಯ ಕುಸಿತದ ಬಗ್ಗೆ ಇತ್ತೀಚಿಗೆ ದಿ. 21 ಸೆಪ್ಟೆಂಬರ್ ರಂದು “ಶಾಲಾ ಕೊಠಡಿಯ ಮೇಲ್ಪಾವಣಿಯ ಸಿಮೆಂಟ್ ಕುಸಿತ; ತಪ್ಪಿದ ಭಾರಿ ಅನಾಹುತ” ಶೀರ್ಷಿಕೆ ಅಡಿಯಲ್ಲಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಲಾಗಿತ್ತು, ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಶಾಲಾ ಮೆಲ್ಚಾವಣಿಯ ದುರಸ್ಥಿ ಕಾರ್ಯ ಮಾಡುವಲ್ಲಿ ಮುಂದಾಗಿದ್ದಾರೆ.

    ಗುರುಮಠಕಲ್ : ತಾಲೂಕಿನ ಚಿಂತನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ವಿಜ್ಞಾನ ಪ್ರಯೋಗಾಲಯದ ಮೇಲ್ಚಾವಣಿಯ ದುರಸ್ಥಿಗೋಳಿಸುತ್ತಿರುವ ದೃಶ್ಯ.
    ಗುರುಮಠಕಲ್ : ತಾಲೂಕಿನ ಚಿಂತನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ವಿಜ್ಞಾನ ಪ್ರಯೋಗಾಲಯದ ಮೇಲ್ಚಾವಣಿಯ ದುರಸ್ಥಿಗೋಳಿಸುತ್ತಿರುವ ದೃಶ್ಯ.

     

    ತಾಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ ನೂತನ ಕೋಠಡಿಗಳನ್ನು ಹಸ್ಥಾಂತರಿಸಿ ಒಂದು ವರ್ಷವು ಕಳೆಯುವ ಮುನ್ನ ಗುರುವಾರ ಜರುಗಿದ ಅನಾಹುತವನ್ನು ಬೆಳಕಿಗೆ ತಂದ ಕೂಡಲೇ ಶಾಲೆಗೆ ಭೇಟಿ ನೀಡಿ ಮೇಲ್ಚಾವಣಿಯನ್ನು ಸಂಪೂರ್ಣವಾಗಿ ತೆಗೆಸಿ ಮರು ಪ್ಲಾಸ್ಟರ್ ಮಾಡಿಸಲು ಮುಂದಾಗಿರುವುದು ಗ್ರಾಮಸ್ಥರಲ್ಲಿ, ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳಲ್ಲಿ ಸಂತಸ ತಂದಿದೆ ಹಾಗೂ ಮುಂದಿನ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡುವಂತೆ ತಾಕೀತು ಮಾಡಿದರು.

     

    ಕಳೆದ ೨೦೨೨-೨೩ ನೇ ಸಾಲಿನ ಕೆ.ಕೆ.ಆರ್.ಡಿ.ಬಿ ಯೋಜನೆ ಅಡಿಯಲ್ಲಿ ನಿರ್ಮಿತಿ ಕೇಂದ್ರದವರಿಂದ ನಿರ್ಮಿಸಲಾದ ನಾಲ್ಕು ಕೋಠಡಿಗಳನ್ನು ನ. ೦೨ ರಂದು ಶಾಲೆಗೆ ಹಸ್ಥಾಂತರಿಸಲಾಗಿತ್ತು.

    —————————————

    ಪತ್ರಿಕೆಯಲ್ಲಿ ವರದಿ ಬಂದ ಕೂಡಲೇ ಸ್ಥಳಕ್ಕೆ ತೆರಳಿ ಮೆಲ್ಚಾವಣಿಯ ಸಂಪೂರ್ಣವಾಗಿ ತೆಗೆಸಿ ಮರು ಪ್ಲಾಸ್ಟರಿಂಗ್ ಮಾಡಿಸಿಕೊಟ್ಟಿದ್ದೇವೆ.

    ಅಬ್ದುಲ್ ನಭಿ, ಯೋಜನಾ ಅಭಿಯಂತರರು ನಿರ್ಮಿತಿ ಕೇಂದ್ರ.

    ———————–

    ಮೆಲ್ಚಾವಣಿಯ ಪ್ಲಾಸ್ಟರ್ ಅವೈಜ್ಞಾನಿಕವಾಗಿ ಮಾಡಿದ್ದು ಅವಶ್ಯಕತೆಗಿಂತಲು ಹೆಚ್ಚಾಗಿ ಸಿಮೆಂಟ್ ಹಾಕಲಾಗಿದೆ. ಇಂದು ಗಂಗಾವತಿಯ ಅಂಗನವಾಡಿಯಲ್ಲಿಯೂ ಇದೇ ರೀತಿ ಘಟನೆ ಜರುಗಿದ್ದು ಅಧಿಕಾರಿಗಳು ಶಾಲೆಗಳಿಗೆ ಹಸ್ತಂತರಿಸುವ ಮುನ್ನ ಗುಣಮಟ್ಟತೆ ಕಾಯ್ದಕೊಳ್ಳಬೇಕು ಇಲ್ಲವಾದಲ್ಲಿ ಉಗ್ರಹೋರಾಟ ಮಾಡಬೇಕಾಗಿತ್ತದೆ-

    ನಾಗೇಶ ಗದ್ದಗಿ, ಗುರುಮಠಕಲ್ ತಾಲೂಕ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಗುರುಮಠಕಲ್.

  • ನಾಳೆ ಅರಕೇರಾ.ಕೆ ಗ್ರಾಮಕ್ಕೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭೇಟಿ.

    ನಾಳೆ ಅರಕೇರಾ.ಕೆ ಗ್ರಾಮಕ್ಕೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭೇಟಿ.

    ಸತ್ಯಕಾಮ ವಾರ್ತೆ ಯಾದಗಿರಿ:

    ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಶ್ರೀ ಎಸ್. ಮಧು ಬಂಗಾರಪ್ಪ ಅವರು ಬುಧವಾರ ಸೆಪ್ಟೆಂಬರ್ 25 ರಂದು ಬೆಳಿಗ್ಗೆ 11-30 ಗಂಟೆಗೆ ಯಾದಗಿರಿ ತಾಲೂಕಿನ ಅರಕೇರಾ .ಕೆ ಗ್ರಾಮ ದಲ್ಲಿ ಅಜೀಂ ಪ್ರೇಮ್ ಜಿ ಫೌಂಡೇಶನ್ ಇವರ ಸಹಭಾಗಿತ್ವದಲ್ಲಿ 2024-25 ನೇ ಸಾಲಿನಲ್ಲಿ ರಾಜ್ಯದ ಎಲ್ಲ ಸರ್ಕಾರಿ ಪೂರ್ವ ಪ್ರಾಥಮಿಕ, ಪ್ರಾಥಮಿಕ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿ ಗಳಿಗೆ ವಾರದಲ್ಲಿ 6 ದಿನಗಳ ಪೂರಕ ಪೌಷ್ಠಿಕ ಆಹಾರ ವಿತರಿಸುವ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡುವರು.

    ಅಂದು ಮಧ್ಯಾಹ್ನ 2-30ಗಂಟೆಗೆ ಯಾದಗಿರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಲಬುರ್ಗಿ ವಿಭಾಗ ಮಟ್ಟದ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸಂಜೆ 6-30 ಗಂಟೆಗೆ ಕಲಬುರ್ಗಿ ಗೆ ಪ್ರಯಾಣ ಬೆಳೆಸುವರು.

  • ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಗ್ ಶಾಕ್

    ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಗ್ ಶಾಕ್

    ಬೆಂಗಳೂರು: ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಗ್ ಶಾಕ್ ಎದುರಾಗಿದೆ. ಮುಡಾ ಸೈಟು ಅಕ್ರಮ ಹಂಚಿಕೆ ಪ್ರಕರಣವನ್ನು ತನಿಖೆ ನಡೆಸಲು ಗೌರ್ನರ್ ನೀಡಿದ್ದ ಅನುಮತಿ ಪ್ರಕ್ರಿಯೆಗೆ ಹೈಕೋರ್ಟ್ ಅಸ್ತು ಎಂದಿದೆ. ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಗೊಳಿಸಿರುವ ನ್ಯಾಯಮೂರ್ತಿ ನಾಗ ಪ್ರಸನ್ನ ನೇತೃತ್ವದ ಪೀಠ ತನಿಖೆಗೆ ಗ್ರೀನ್ ಸಿಗ್ನಲ್ ನೀಡಿದೆ.

    ಗೌರ್ನರ್ ಆದೇಶವನ್ನು ಹೈಕೋರ್ಟ್ ಪೀಠ ಎತ್ತಿ ಹಿಡಿದಿದ್ದು ದೂರುದಾರರಾದ ಸ್ನೇಹ ಮಯಿ ಕೃಷ್ಣ, ಪ್ರದೀಪ್ ಹಾಗೂ ಟಿ.ಜೆ ಅಬ್ರಹಾಂ ಅವರ ವಾದಕ್ಕೆ ಮನ್ನಣೆ ಸಿಕ್ಕಿದೆ. ಮೂಡ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕುಟುಂಬ ಫಲಾನುಭವಿ ಆಗಿದೆ ಹಾಗಾಗಿ ಈ ಪ್ರಕರಣದ ತನಿಖೆ ನಡೆಸುವುದು ಸೂಕ್ತ ಎಂದು ಪೀಠ ಅಭಿಪ್ರಾಯ ಪಟ್ಟಿದೆ. ಹೈ ಕೋರ್ಟ್ನ ಈ ತೀರ್ಪನ್ನು ವಿಭಾಗಿಯ ಪೀಠದಲ್ಲಿ ಪ್ರಶ್ನೆ ಮಾಡುವುದಾಗಿ ಮತ್ತು ಪ್ರಶ್ನಿಸುವದಾಗಿ ಸಿದ್ದರಾಮಯ್ಯ ಪರ ವಕೀಲರು ಹೇಳಿದ್ದಾರೆ.

    ಮುಡಾ ಅಸ್ತ್ರ ಮುಂದಿಟ್ಟು ಸಿದ್ಧರಾಮಯ್ಯ ಅವರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿದ್ದವು ಆದರೆ ಹೈಕಮಾಂಡ್ ಸಿದ್ದರಾಮಯ್ಯ ಅವರ ಪರ ನಿಂತಿತ್ತು. ಇದೀಗ ಮತ್ತೆ ಪಕ್ಷಗಳ ಬಾಯಲ್ಲಿ ಸಿಎಂ ರಾಜೀನಾಮೆ ಕೊಟ್ಟು ಕೇಳಿ ಬಂದರು ಆಶ್ಚರ್ಯವಿಲ್ಲ.

  • ನೇರ ನುಡಿ ಧೀರ ನಡೆಯ ರಾಜಕಾರಣಿ ಮುದ್ನಾಳ

    ನೇರ ನುಡಿ ಧೀರ ನಡೆಯ ರಾಜಕಾರಣಿ ಮುದ್ನಾಳ

    ಸತ್ಯಕಾಮ ವಾರ್ತೆ ಯಾದಗಿರಿ:

    ಮಾಜಿ ಶಾಸಕರು ಹಾಗೂ ಜನಪ್ರೀಯ ನಾಯಕರಾದ ದಿವಂಗತ ವೆಂಕಟರೆಡ್ಡಿ ಗೌಡ ಮುದ್ನಾಳ ಅವರು ಕೇವಲ ಒಬ್ಬ ವ್ಯಕ್ತಿಯಾಗಿ ಇರದೇ ಪ್ರಬಲ ಶಕ್ತಿ ಆಗಿದ್ದರು ಎಂದು ತಾಲೂಕು ವೀರಶೈವ ಸಮಾಜದ ನಗರ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ ಹೇಳಿದರು.

    ನಗರದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಮುದ್ನಾಳ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ದಿ ವೆಂಕಟರೆಡ್ಡಿ ಗೌಡ ಮುದ್ನಾಳ ಅವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಯಾದಗಿರಿಯಲ್ಲಿ ವೈದ್ಯಕೀಯ ಕಾಲೇಜಿಗಾಗಿ ಮತ್ತು ಜಿಲ್ಲಾ ಕೇಂದ್ರವಾಗಲು ಅವರು ಮಾಡಿದ ಹೋರಾಟ ಮರೆಯಲಾಗದು ಅವರ ರಾಜಕೀಯ ಸಾಮಾಜಿಕ ಶೈಕ್ಷಣಿಕ ಸಾಹಿತಿಕ ಧಾರ್ಮಿಕ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಅಗಾದವಾದದು ಎಂದರು.

    ಹಿರಿಯರಾದ ಸಿ ಎಮ್ ಪಟ್ಟೆದಾರ ಮಾತನಾಡಿ ನೇರ ನುಡಿ ಧೀರ ನಡೆ ಅವರ ಸರಳ ವ್ಯಕ್ತಿತ್ವ ಎಲ್ಲರ ಮನಸ್ಸಿನಲ್ಲಿ ಅಚ್ಚಳೆಯದೆ ಉಳಿದಿದೆ ಯಾದಗಿರಿ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿ ಜಾತ್ಯತೀತ ವ್ಯಕ್ತಿಯಾಗಿ ಬಾಳಿ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದರು.

    ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಧ್ಯಾಕ್ಷರಾದ ಬಸವರಾಜ ಮೋಟ್ನಳ್ಳಿ. ಕಸಾಪ ಗೌರವ ಕಾರ್ಯದರ್ಶಿಯಾದ ಡಾ. ಭೀಮರಾಯ ಲಿಂಗೇರಿ. ಡಾ. ಎಸ್ ಎಸ್ ನಾಯಕ ಮಾತನಾಡಿ ನುಡಿ ನಮನ ಸಲ್ಲಿಸಿದರು.

    ಈ ಕಾರ್ಯಕ್ರಮದಲ್ಲಿ ಸೋಮಶೇಖರ್ ಮಣ್ಣೂರ. ಆರ್ ಮಾಹದೇವಪ್ಪ ಗೌಡ ಅಬ್ಬೆತುಮಕೂರ. ಚನ್ನಪ್ಪ ಸಾಹುಕಾರ ಠಾಣಗುಂದಿ. ಚಂದ್ರಶೇಖರ ಅರಳಿ. ಮಹೇಶ ಹಿರೇಮಠ. ವೆಂಕಟೇಶ ಕಲಕಂಬ. ಮಹೇಶ್ ಪಾಟೀಲ. ಸುಬಾಶರೆಡ್ಡಿ. ನೀಲಕಂಠ ಶಿಲವಂತ. ಡಾ. ರವಿಂದ್ರ ಹೊಸಮನಿ. ವಿಶ್ವನಾಥ ಕಾಜಗಾರ. ರಾಮಚಂದ್ರ ದಿಲ್ಲಿಕರ್. ಬಸವಂತ್ರಾಯಗೌಡ ಮಾಲಿ ಪಾಟೀಲ. ದೇವಿಂದ್ರರೆಡ್ಡಿ ಯಡ್ಡಳ್ಳಿ. ನಾಗೇಂದ್ರ ಜಾಜಿ. ಶರಣು ಇಡ್ಲೂರ. ಮಲ್ಲು ಹಳಕಟ್ಟಿ. ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಮುದ್ನಾಳ ಅಭಿಮಾನಿಗಳು ಪಾಲ್ಗೊಂಡರು.

  • ಕಾಡಂಗೇರಾ(ಬಿ) ವಿದ್ಯಾರ್ಥಿನಿ ತನುಶ್ರೀ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

    ಕಾಡಂಗೇರಾ(ಬಿ) ವಿದ್ಯಾರ್ಥಿನಿ ತನುಶ್ರೀ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

    ಸತ್ಯಕಾಮ ವಾರ್ತೆ ವಡಗೇರಾ:

    ಶಹಾಪೂರ ತಾಲೂಕು ಕ್ರೀಡಾಂಗಣದಲ್ಲಿ ಈಚೆಗೆ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಕಾಡಂಗೇರಾ)ಬಿ) ಗ್ರಾಮದ ಇಂದಿರಾಗಾಂಧಿ ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ತನುಶ್ರೀ ತಂದೆ ಕಾಂತಿಲಾಲ್ 100 ಮೀಟರ್ ಓಟದ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ.

    ಪ್ರಥಮ ಸ್ಥಾನ ವಿಜೇತ ವಿದ್ಯಾರ್ಥಿನಿ ಕು.ತನುಶ್ರೀ ಅವರು ಶಾಲೆಗೆ ಕೀರ್ತಿ ತಂದಿದ್ದಕ್ಕೆ ವಿದ್ಯಾರ್ಥಿನಿಯನ್ನು ಹಾಗೂ ಕ್ರೀಡಾಪಟುಗಳಿಗೆ ಶಾಲೆಯ ಪ್ರಾಂಶುಪಾಲ ನಾಗರೆಡ್ಡಿ, ದೈಹಿಕ ಶಿಕ್ಷಣ ಶಿಕ್ಷಕ ರಾಜು ರಾಠೋಡ್ ಹಾಗೂ ಶಾಲೆಯ ಎಲ್ಲ ಸಿಬ್ಬಂದಿಗಳು ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಮಟ್ಟ ಹಾಗೂ ವಿಭಾಗ ಮಟ್ಟದಲ್ಲಿಯೂ ವಿಜೇತರಾಗಲಿ ಎಂದು ಹಾರೈಸಿದ್ದಾರೆ.

  • ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಶಹಾಪೂರ ತಾಲೂಕು ಪ್ರವೇಶ ಮಾಡದಂತೆ ನಿರ್ಬಂಧ

    ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಶಹಾಪೂರ ತಾಲೂಕು ಪ್ರವೇಶ ಮಾಡದಂತೆ ನಿರ್ಬಂಧ

    ಸತ್ಯಕಾಮ ವಾರ್ತೆ ಯಾದಗಿರಿ :

    ಇಂದಿನಿಂದ ಎರಡು ದಿನಗಳ(ಸೆ.22)ವರೆಗೆ ಸಿದ್ದಲಿಂಗಯ್ಯ ತಂದೆ ಶರಣಯ್ಯ ಗದ್ದುಗೆ ಹಿರೇಮಠ ಸಾ.ಆಂದೋಲ ತಾ.ಜೇವರ್ಗಿ ಹಿಂದೂಪರ ಭಾಷಣಕಾರ ರವರನ್ನು ಯಾದಗಿರಿ ಜಿಲ್ಲೆಯ ಶಹಾಪೂರ ತಾಲ್ಲೂಕಿನಾದ್ಯಂತ ಪ್ರವೇಶ ಮಾಡದಂತೆ ನಿರ್ಬಂಧ ಆದೇಶವನ್ನು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಹೊರಡಿಸಿದ್ದಾರೆ.

    2024ರ ಸೆಪ್ಟೆಂಬರ್ 20 ರಂದು ರಾತ್ರಿ 12 ಗಂಟೆಯಿAದ 2024ರ ಸೆಪ್ಟೆಂಬರ್ 22ರ ಮಧ್ಯಾಹ್ನ 2 ಗಂಟೆಯ ವರೆಗೆ ಶ್ರೀ ಸಿದ್ದಲಿಂಗಯ್ಯ ತಂದೆ ಶರಣಯ್ಯ ಗದ್ದುಗೆ ಹಿರೇಮಠ ಸಾ.ಆಂದೋಲ ತಾ.ಜೇವರ್ಗಿ ಇವರಿಗೆ ಶಹಾಪೂರ ತಾಲ್ಲೂಕು ಪ್ರವೇಶ ಮಾಡದಂತೆ ಸಿ.ಆರ್.ಪಿ.ಸಿ ಕಾಯ್ದೆ ಸೆಕ್ಷನ್ 133, 143, 144ಎ ರನ್ವಯ ನಿರ್ಬಂಧ ಜಾರಿಗೊಳಿಸಿ ಆದೇಶಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ನಾರದಗಡ್ಡೆ ಮಠದ ಆಸ್ತಿ ನಿರ್ವಹಣೆ ಕುರಿತ ಪ್ರಕರಣಕ್ಕೆ ಅಭಿಪ್ರಾಯ ಪಡೆಯಲು ಸೆ.22 ರಂದು ಸಭೆ

    ನಾರದಗಡ್ಡೆ ಮಠದ ಆಸ್ತಿ ನಿರ್ವಹಣೆ ಕುರಿತ ಪ್ರಕರಣಕ್ಕೆ ಅಭಿಪ್ರಾಯ ಪಡೆಯಲು ಸೆ.22 ರಂದು ಸಭೆ

    ಭಕ್ತಾದಿಗಳು, ಸಾರ್ವಜನಿಕರು ಹಾಜರಾಗಲು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಮನವ

    ಸತ್ಯಕಾಮ ವಾರ್ತೆ ಯಾದಗಿರಿ:

    ಗೌರವಾನ್ವಿತ ಉಚ್ಚ ನ್ಯಾಯಲಯದ ನಿರ್ದೇಶನದಂತೆ ರಾಯಚೂರು ಜಿಲ್ಲೆಯ ನಾರದಗಡ್ಡೆ ಮಠದ ಆಸ್ತಿ ನಿರ್ವಹಣೆ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಪಡೆಯಲು ಸೆಪ್ಟೆಂಬರ್ 22 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಏರ್ಪಡಿಸಿದ್ದು, ಆ ಗ್ರಾಮದ ಭಕ್ತಾದಿಗಳು, ಸಾರ್ವಜನಿಕರು ಹಾಜರಾಗಲು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಮನವಿ ಮಾಡಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಪೀಠದ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಪಿಟಿಷನ್ ಸಂಖ್ಯೆ 202656/2014 ಕ್ಕೆ ಸಂಬಂಧಿಸಿದಂತೆ ನಾರದಗಡ್ಡೆ ಮಠದ ಆಸ್ತಿ ನಿರ್ವಹಣೆ ಕುರಿತು ಯಾದಗಿರಿ ಜಿಲ್ಲಾಧಿಕಾರಿಯ ಕಚೇರಿಯ ಸಭಾಂಗಣದಲ್ಲಿ ಸಭೆ ಜರುಗಿಸಿ ಅಲ್ಲಿನ ಗ್ರಾಮದ, ಭಕ್ತಾದಿಗಳ ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ಪಡೆದು ವರದಿಯನ್ನು ಸಲ್ಲಿಸುವಂತೆ ಸೂಚಿಸಿರುತ್ತಾರೆ.

    ಸದರಿ ಮಠದ ಆಸ್ತಿ ನಿರ್ವಹಣೆಯ ಬಗ್ಗೆ ಅಭಿಪ್ರಾಯ ಪಡೆಯಲು ಸೆಪ್ಟೆಂಬರ್ 22 ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಅವಶ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು, ಮಠದ ಪೀಠಾಧಿಪತಿಗಳು, ಭಕ್ತಾದಿಗಳು ಹಾಗೂ ಸಾರ್ವಜನಿಕರು ತಮ್ಮ ಗುರುತಿನ ಚೀಟಿಯೊಂದಿಗೆ ಹಾಜರಾಗಲು ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಮುದ್ದೇಬಿಹಾಳ ಪುರಸಭೆ ಅಧ್ಯಕ್ಷರಾಗಿ ಮೈಬೂಬ, ಉಪಾಧ್ಯಕ್ಷೆಯಾಗಿ ಪ್ರೀತಿ ಆಯ್ಕೆ.

    ಮುದ್ದೇಬಿಹಾಳ ಪುರಸಭೆ ಅಧ್ಯಕ್ಷರಾಗಿ ಮೈಬೂಬ, ಉಪಾಧ್ಯಕ್ಷೆಯಾಗಿ ಪ್ರೀತಿ ಆಯ್ಕೆ.

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ಭಾರಿ ಕುತೂಹಲ ಕೆರಳಿಸಿದ್ದ ಮುದ್ದೇಬಿಹಾಳ ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಮೈಬೂಬ
    ಗೊಳಸಂಗಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರೀತಿ ದೇಗಿನಾಳ ಅವರು ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಹಶಿಲ್ದಾರ ಬಲರಾಮ ಕಟ್ಟಿಮನಿ
    ಅವರು ಅಧಿಕೃತ ಘೋಷಿಸಿದ್ದಂತೆ ಪುರಸಭೆಗೆ ಆಗಮಿಸಿದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು, ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ನೂತನ ಅಧ್ಯಕ್ಷ ಮೈಬೂಬ ಗೊಳಸಂಗಿ ಹಾಗೂ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಅವರನ್ನು ಶಾಲು ಹೊದಿಸಿ ಹೂವಿನ ಹಾರ ಹಾಕಿ ಸನ್ಮಾನಿಸಿ ಸಿಹಿ ತಿನ್ನಿಸಿ ಗೌರವಿಸಿ ಅಭಿನಂದಿಸಿದರು.

    ಬಳಿಕ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು, ಮತ್ತು ಮಾರ್ಜಕ ನಿಗಮದ ಅಧ್ಯಕ್ಷ  ಸಿ ಎಸ್ ನಾಡಗೌಡ(ಅಪ್ಪಾಜಿ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣೆಯಲ್ಲಿ ಮಾತ್ರ ನಾವು ನಮ್ಮ ನಮ್ಮ ಪಕ್ಷ ನಮ್ಮನಮ್ಮ ಬೆಂಬಲಿಗರು ಎಂಬುದು ಮಾತ್ರ ಇರುತ್ತದೆ, ಗೆದ್ದ ನಂತರ ನಾವು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಪಟ್ಟಣದ ಎಲ್ಲವಾರ್ಡುಗಳನ್ನು ಅಭಿವೃದ್ಧಿಗಾಗಿ ಶ್ರಮಿಸಬೇಕು.

    ಕಳೆದ ಒಂದೂವರೇ ವರ್ಷದಿಂದ ಪುರಸಭೆ ಅಧಿಕಾರವಿಲ್ಲದೇ ಅಭಿವೃದ್ಧಿಯಲ್ಲಿ ಸ್ವಲ್ಪ ಕುಂಟಿತಗೊಂಡಿತ್ತು  ಆದರೇ ಸಧ್ಯ ಚುನಾವಣೆಗೊಂಡು ನೂತನ
    ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಗೊಂಡಾಗಿದೆ, ಆದರೇ ಇನ್ನು ಕೇಲವ ಒಂದೇ ವರ್ಷ ಆಡಳಿತ ಮಾಡುವ ಅವಕಾಶವಿದೇ ನಿಮಗಿರುವ ಸಮಯದೊಳಗೆ ಮುದ್ದೇಬಿಹಾಳ  ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಪೂರಕ ಜನಪರ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಮಾದರಿಯ ಪಟ್ಟಣ ನಿರ್ಮಾಣದ ಗುರಿ ನಿಮ್ಮದಾಗಬೇಕು.  ರಾಜ್ಯದಲ್ಲಿ ನಮ್ಮ ಸರಕಾರ ಬಂದು ಒಂದೂವರೇ ವರ್ಷಗಳು ಕಳೆದುಹೋಗಿವೆ ಆದರೇ ಕೇಂದ್ರದ ಬಿಜೆಪಿ ಸರಕಾರ ದೇಶದಲ್ಲೆಡೆ ಏಕಕಾಲಕ್ಕೆ ಒಂದೆ ಚುನಾವಣೆ ನಡೆಸುವ ಕಾನೂನು ಜಾರಿಗೆ ತರುವ ಇಂಗಿತ ವ್ಯಕ್ತಪಡಿಸಿವೆ ಹಾಗೇನಾದರೂ ಸುಮಾರು ೬ ವರ್ಷಕ್ಕೆÀ ಶಾಸಕರ ಅವಧಿ ಹೆಚ್ಚಾಗಲಿದೆ ಹಾಗೇನಾದರೂ ಕಾನೂನು ಜಾರಿಗೊಂಡರೆ ಈಗಿರುವ ಮೂರುವರೇ ವರ್ಷದ ಬದಲಾಗಿದೆ ನಾಲ್ಕುವರೆ ವರ್ಷ ಅಧಿಕಾರ ನಮಗೆ
    ಸಿಗಲಿದೆ.

    ಸರಕಾರದಿಂದ ಹೆಚ್ಚೇಚ್ಚು ಅನುದಾನ ತರುವ ಮೂಲಕ ಮತಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಸಮಯ ಸಿಕ್ಕಂತಾಗುತ್ತದೆ ಜೊತೆಗೆ ಜನರ ವಿಶ್ವಾಸಾರ್ಹ
    ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಾನಿ ಇಲ್ಲಿಯವರೆಗೂ ಯಾವೂದೇ ಕಾನೂನು ಬಾಹಿರವಾಗಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಕಾನೂನಿನ ಅಢಿಯಲ್ಲಿಯೇ ನಾನು ನಡೆದುಕೊಂಡು ಬಂದಿದ್ದೇನೆ, ಯಾರೇ ಯಾಗಲಿ ಹೇಳಿಕೆ ಕೊಡಬೇಕಾದರೇ ಯೋಚನೆಯಿಂದ ಹಿರಿತನದ ಜವಾಬ್ದಾರಿಯಿಂದ ಹೇಳಿಕೆ ಕೋಡಬೇಕು ಯಾರನ್ನೋ ತೇಜೋವಧೆ ಮಾಡಲು ಅಲ್ಲ ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಕು ಹೆಚ್ಚಿಗೆ ಯಾವೂದನ್ನು ಬಿಡಿಸಿ ನಾನು ಹೇಳಲಾರೆ ಎಂದು ಟಾಂಗ ನೀಡಿದರು.

    ————-
    ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ರಿಯಾಜಹ್ಮದ ಢವಳಗಿ ಹಾಗೂ ಬಿಜೆಪಿ ಸದಸ್ಯ ಬಸವರಾಜ ಮುರಾಳ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್‌ನಿAದ ಭಾರತಿ ಪಾಟೀಲ ಹಾಗೂ ಪ್ರೀತಿ ದೇಗಿನಾಳ ಹಾಗೂ ಬಿಜೆಪಿಯಿಂದ ಸಹನಾ ಬಡಿಗೇರ ಅವರು ನಾಮಪತ್ರ ಸಲ್ಲಿಸಿದ್ದರು.೧೧ಗಂಟೆಗೆ ನಾಮತ್ರ ಸಲ್ಲಿಕೆ, ೧೧ರಿಂದ ೧೧.೩೦ರವೆಗೆ ನಾಮಪತ್ರ ಪರಿಶಿಲನೆ, ೧೧.೩೦ರಿಂದ ೧೨ಗಂಟೆಯವರಗೆ ನಾಮಪತ್ರ ಹಿಂಪಡೆಯಲು ಅವಕಾಶ ಬಳಿಕ ೧೨.೩೦ರಿಂದ
    ಚುನಾವಣಾ ಪ್ರಕ್ರಿಯೆ ಕೈಗೊಳ್ಳಲಾಯಿತು. ೮ಜನ ಬಿಜೆಪಿ ಸದಸ್ಯರು, ೮ ಜನ ಕಾಂಗ್ರೇಸ್ ಸದಸ್ಯರು, ೫ ಜನ ಪಕ್ಷೇತರ ಸೇರಿದಂತೆ ಒಟ್ಟು ೨೩ ಸದಸ್ಯರ ಬಲವನ್ನು ಹೊಂದಿದ ಪುರಸಭೆಗೆ ಸದ್ಯ ೫ ಪಕ್ಷೇತರರು ಹಾಗೂ ೮ ಜನ ಬಿಜೆಪಿ ಸದಸ್ಯರು ಪರಸ್ಪರ ಹೊಂದಾಣಿಕೆಯಿAದ ಪಕ್ಷೇತರ ಅಭ್ಯರ್ಥಿ ರಿಯಾಜ್ಮದ ಢವಳಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಲ್ಲಿ ಒಂದು ಬಣ ಹಾಗೂ ಸಂಪೂರ್ಣ ಕಾಂಗ್ರೇಸ್ ಪಕ್ಷದ ೮ ಜನ ಸದಸ್ಯರ ಹಾಗೂ ೪೦ ಜನ ಪಕ್ಷೇತರ ಬಲದಿಂದ ಮೈಬೂಬ ಗೊಳಸಂಗಿಯವರನ್ನು ಅಧ್ಯಕ್ಷ ಸ್ಥಾನ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಪಕ್ಷೇತರ ಅಭ್ಯರ್ಥಿ ಹಾಗೂ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಿಯಾಜಹ್ಮದ ಢವಳಗಿಯವರು ಅವರು ಕಾಂಗ್ರೇಸ್ ಪಕ್ಷದೊAದಿಗೆ ಗುರ್ತಿಸಿಕೊಂಡಿರುವುದು ಮಾತ್ರವಲ್ಲದೇ ಕಾಂಗ್ರೇಸ್ ನ ತಾಲೂಕಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರಾಗಿದ್ದರಿಂದ ಬ್ಲಾಕ್ ಕಾಂಗ್ರೇಸ್ ಗುರು ತಾರನಾಳ ಅವರನ್ನು ಕಳುಹಿಸಿ ಕೆಲ ಹೊತ್ತು ಆಜ್ಞಾತ ಸ್ಥಳಕ್ಕೆ ಕರೆಯಿಸಿಕೊಂಡ ಶಾಸಕ
    ಹಾಗೂ ಕರ್ನಾಟಕ ರಾಜ್ಯ ಸಾಬೂನು, ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಹಾಗೂ ತಾಲೂಕಾ ಪಟ್ಟಣದ ಹಾಗೂ ತಾಲೂಕಿನ ಬಹುತೇಕ ಕಾಂಗ್ರೇಸ್ ಮುಖಂಡರ ಸಮ್ಮುಖದಲ್ಲಿ ಸಮಾಲೋಚನೆ ನಡೆಸಿ ರಿಯಾಜ್ ಹಮ್ಮದ‌ ಡವಳಗಿಯವರ ಮನೋಲಿಸಿ ಮೈಬೂಬ ಗೊಳಸಂಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸರ್ವ ಸದಸ್ಯರನ್ನು ಒಪ್ಪಗೆ ಪಡೆದು ೧೬ ಜನ ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದ್ದರಿಂದ ಮೈಬೂಬ ಗೊಳಸಂಗಿಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಬಳಿಕ ಪ್ರೀತಿ ದೇಗಿನಾಳ ಅವರು ಉಪಾಧ್ಯಕ್ಷರನ್ನಾಗಿ ಆಯ್ಕೆ
    ಗೊಂಡಿದ್ದರಿAದ ಬಿಜೆಪಿ ಸದಸ್ಯ ಬಸವರಾಜ ಮುರಾಳ ಅವರು ನೀಡಿದ್ದ ನಾಮಪತ್ರ ಹಿಂಪಡೆದುಕೊಳ್ಳುವAತೆ ಮಾಡಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸುವ ಮೂಲಕ ಬಿಜೆಪಿ ಬೆಂಬಲಿತ ಅಧ್ಯಕ್ಷ ಸ್ಥಾನ ಎಂದು ಘೊಷಿಸುವ ಬಿಜೆಪಿಯವರಿಗೆ ಕಾಂಗ್ರೇಸ್ ತAತ್ರಗಾರಿಕೆಯಿAದ ಬಿಜೆಪಿಯವರಿಗೆ ಮುಖಭಂಗ ಅನುಭವಿಸುವಂತಾಯಿತು.

     


     

    ಕಾರ್ಯಕರ್ತರ ಹರ್ಷೋದ್ಘಾರ ವಿಜಯೋತ್ಸವ

    ಪುರಸಭೆಯ ನೂತನ ಅಧ್ಯಕ್ಷರಾಗಿ ಮೈಬೂಬ ಗೊಳಸಂಗಿ ಹಾಗೂ ಉಪಾಧ್ಯಕ್ಷರಾಗಿ ಪ್ರೀತಿ ದೇಗಿನಾಳ ಅವರು ಆಯ್ಕೆಗೊಳ್ಳುತ್ತಿದ್ದಂತೆ ಕಾಂಗ್ರೇಸ್
    ಕಾರ್ಯಕರ್ತರು ಪುರಸಭೆ ಕಚೇರಿ ಎದುರು ಪಟಾಕಿ ಸಿಡಿಸಿ ಪರಸ್ಪರ ಅಪ್ಪಿಕೊಂಡು ವಿಕ್ಟರಿ ಚಿನ್ಹೇ ತೊರಿಸಿ ಕೈ ಮಾಡಿ ಗುಲಾಲು ಎರಚಿ ಮೈಬೂಬ ಗೊಳಸಂಗಿಯವರನ್ನು ಮೇಲಕ್ಕೆ ಎತ್ತಿ ಹೆಗಲ ಮೇಲೆ ಹೊತ್ತುಕೊಂಡು ಪಾದಯಾತ್ರೆ ಮೂಲಕ ಪಟ್ಟಣದ
    ಪ್ರಮುಖ ಬೀದಿಗಳಿಗ ಮೂಲಕ ಹಾಯ್ದು ಸಂಭ್ರಮಿಸಿದರು.

    ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಹಿರಿಯ ಮುಖಂಡರಾದ ಸಂಗಮೇಶ ಬಿರಾದಾರ(ಜಿಟಿಸಿ) ಎಂ ಬಿ ನಾವದಗಿ, ಗಫೂರಸಾಬ ಮಕಾಂದಾರ, ಸಿಬಿ ಅಸ್ಕೀ, ಸಿಕಂದರ ಜಾನ್ವೇಕರ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸದಸ್ಯರಾದ ವಿರೇಶ ಹಡಲಗೇರಿ, ಚನ್ನಪ್ಪ ಕಂಠಿ, ಯಲ್ಲಪ್ಪ ನಾಯಕಮಕ್ಕಳ, ಸೋನಾಬಾಯಿ ನಾಯಕ, ರಫೀಕ ದ್ರಾಕ್ಷೀ, ಶಿವು ಶಿವಪುರಿ, ಹಣಮಂತ ಭೋವಿ, ಶಾಹಾಜಾದಬಿ ಹುಣಸಗಿ, ಮಹಮ್ಮದರಫೀಕ ಶಿರೋಳ, ಸದ್ದಾಂ ಕುಂಟೋಜಿ,ಕಾಮರಾಜ ಬಿರಾದಾರ, ಸಂಗಪ್ಪ ಮೇಲಿಮನಿ, ಶ್ರೀಕಾಂತ ಚಲವಾದಿ, ಬಸವರಾಜ ಗೊಳನಾಳ ಸೇರಿದಂತೆ ಅನೇಕರು ಇದ್ದರು.


    ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಯಾವೂದೇ ಅಹಿತಕರ ಗಲಾಟೆಯಾಗದಂತೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಹಾಗೂ ಪಿಎಸೈ ಸಂಜಯ ತಿಪ್ಪಾರೆಡ್ಡಿ ಹಾಗೂ ತಾಳಿಕೋಟಿ ಪಿಎಸೈ ರಾಮನಗೌಡ ಸಂಕನಾಳ, ಕ್ರೈಂಪಿ.ಎ.ಸೈ ಆರ್.ಎಸ್ ಬಂಗಿ, ಆರ್.ಎಲ್ ಮನ್ನಾಭಾಯಿ, ನೇತೃತ್ವದ ೬೦ಪೋಲಿಸ್ ಸಬ್ಬಂದಿ ಹಾಗೂ ಒಂದು ಡಿ ಆರ್ ತುಕಡಿಯೊಂದಿಗೆ  ಪುರಸಭೆ ಕಚೇರಿಯ ಸುತ್ತಲೂ ಬ್ಯಾರಿಕೇಡ ಅಳವಡಿಸಿ ವ್ಯಾಪಕ ಬಗಿ ಪೋಲಿಸ್ ಸರ್ಪಗಾವಲು ಹಾಕಲಾಗಿತ್ತು. ಚುನಾವಣೆ ಮಗಿಯುವವರೆಗೂ ಪೋಲಿಸ ಸಿಬ್ಬಂದಿಗಳು ಆಗಾಗ ತಪಾಸಣೆ ನಡೆಸುವ ಮೂಲಕ ಜಾಗೃತಿ ವಹಿಸಿಕೊಂಡಿದ್ದು ಕಂಡುಬAತು.

    ————————–

    ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್
    ನಾಡಗೌಡ(ಅಪ್ಪಾಜಿ)ಯವರ ಹಾಗೂ ತಾಲೂಕಿನ ಬಹುತೇಕ ಎಲ್ಲ ಕಾಂಗ್ರೇಸ್ ಮುಖಂಡ
    ಆಶಿರ್ವಾದಿAದ ಇಂದು ನಾನು ಅಧ್ಯಕ್ಷನಾಗಿದ್ದೇನೆ ನನ್ನ ಮೇಲೆ ಬಹುದೊಡ್ಡ ಜವಾಬ್ದಾರಿ
    ಹೊರೆಸಿದ್ದಾರೆ. ನಾನಿರುವ ಅಧಿಕಾರವಧಿಯಲ್ಲಿ ಎಲ್ಲ ಸದಸ್ಯರ ವಿಶ್ವಾಸ ಪಡೆದು ಪಟ್ಟಣದ
    ಜನರಿಗೆ ಸಕಾಲಕ್ಕೆ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ, ಉದ್ಯಾನವನಗಳು
    ರಸ್ತೆಗಳ ಅಭಿವೃದ್ಧಿ ಸೇರಿದಂತೆ ಸಮಗ್ರ ಪಟ್ಟಣದ ಅಭಿವೃದ್ಧಿಗೆ ಟೊಂಕ ಕಟ್ಟಿ
    ನಿಲ್ಲುತ್ತೇನೆ. ನಾನು ಅಧ್ಯಕ್ಷನಾಗಲು ಶ್ರಮಿಸಿದ ಶಾಸಕರಿಗೂ, ಎಲ್ಲ ಸ್ನೇಹಿತರಿಗೂ,
    ಮುಖಂಡರಿಗೂ, ಪುರಸಭೆ ಸದಸ್ಯರಿಗೂ ಎಲ್ಲರಿಗೂ ಧನ್ಯವಾದಗಳನ್ನು
    ಸಲ್ಲಿಸುತ್ತೇನೆ.

    ಪುರಸಭೆ ನೂತನ ಅಧ್ಯಕ್ಷ ಮೈಬೂಬ ಗೊಳಸಂಗಿ.
    —————–