Category: Latest News

  • ಮುದ್ದೇಬಿಹಾಳ ಪುರಸಭೆ ಅಧ್ಯಕ್ಷರಾಗಿ ಮೈಬೂಬ, ಉಪಾಧ್ಯಕ್ಷೆಯಾಗಿ ಪ್ರೀತಿ ಆಯ್ಕೆ.

    ಮುದ್ದೇಬಿಹಾಳ ಪುರಸಭೆ ಅಧ್ಯಕ್ಷರಾಗಿ ಮೈಬೂಬ, ಉಪಾಧ್ಯಕ್ಷೆಯಾಗಿ ಪ್ರೀತಿ ಆಯ್ಕೆ.

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ಭಾರಿ ಕುತೂಹಲ ಕೆರಳಿಸಿದ್ದ ಮುದ್ದೇಬಿಹಾಳ ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಮೈಬೂಬ
    ಗೊಳಸಂಗಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರೀತಿ ದೇಗಿನಾಳ ಅವರು ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಹಶಿಲ್ದಾರ ಬಲರಾಮ ಕಟ್ಟಿಮನಿ
    ಅವರು ಅಧಿಕೃತ ಘೋಷಿಸಿದ್ದಂತೆ ಪುರಸಭೆಗೆ ಆಗಮಿಸಿದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು, ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ನೂತನ ಅಧ್ಯಕ್ಷ ಮೈಬೂಬ ಗೊಳಸಂಗಿ ಹಾಗೂ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಅವರನ್ನು ಶಾಲು ಹೊದಿಸಿ ಹೂವಿನ ಹಾರ ಹಾಕಿ ಸನ್ಮಾನಿಸಿ ಸಿಹಿ ತಿನ್ನಿಸಿ ಗೌರವಿಸಿ ಅಭಿನಂದಿಸಿದರು.

    ಬಳಿಕ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು, ಮತ್ತು ಮಾರ್ಜಕ ನಿಗಮದ ಅಧ್ಯಕ್ಷ  ಸಿ ಎಸ್ ನಾಡಗೌಡ(ಅಪ್ಪಾಜಿ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣೆಯಲ್ಲಿ ಮಾತ್ರ ನಾವು ನಮ್ಮ ನಮ್ಮ ಪಕ್ಷ ನಮ್ಮನಮ್ಮ ಬೆಂಬಲಿಗರು ಎಂಬುದು ಮಾತ್ರ ಇರುತ್ತದೆ, ಗೆದ್ದ ನಂತರ ನಾವು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಪಟ್ಟಣದ ಎಲ್ಲವಾರ್ಡುಗಳನ್ನು ಅಭಿವೃದ್ಧಿಗಾಗಿ ಶ್ರಮಿಸಬೇಕು.

    ಕಳೆದ ಒಂದೂವರೇ ವರ್ಷದಿಂದ ಪುರಸಭೆ ಅಧಿಕಾರವಿಲ್ಲದೇ ಅಭಿವೃದ್ಧಿಯಲ್ಲಿ ಸ್ವಲ್ಪ ಕುಂಟಿತಗೊಂಡಿತ್ತು  ಆದರೇ ಸಧ್ಯ ಚುನಾವಣೆಗೊಂಡು ನೂತನ
    ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಗೊಂಡಾಗಿದೆ, ಆದರೇ ಇನ್ನು ಕೇಲವ ಒಂದೇ ವರ್ಷ ಆಡಳಿತ ಮಾಡುವ ಅವಕಾಶವಿದೇ ನಿಮಗಿರುವ ಸಮಯದೊಳಗೆ ಮುದ್ದೇಬಿಹಾಳ  ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಪೂರಕ ಜನಪರ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಮಾದರಿಯ ಪಟ್ಟಣ ನಿರ್ಮಾಣದ ಗುರಿ ನಿಮ್ಮದಾಗಬೇಕು.  ರಾಜ್ಯದಲ್ಲಿ ನಮ್ಮ ಸರಕಾರ ಬಂದು ಒಂದೂವರೇ ವರ್ಷಗಳು ಕಳೆದುಹೋಗಿವೆ ಆದರೇ ಕೇಂದ್ರದ ಬಿಜೆಪಿ ಸರಕಾರ ದೇಶದಲ್ಲೆಡೆ ಏಕಕಾಲಕ್ಕೆ ಒಂದೆ ಚುನಾವಣೆ ನಡೆಸುವ ಕಾನೂನು ಜಾರಿಗೆ ತರುವ ಇಂಗಿತ ವ್ಯಕ್ತಪಡಿಸಿವೆ ಹಾಗೇನಾದರೂ ಸುಮಾರು ೬ ವರ್ಷಕ್ಕೆÀ ಶಾಸಕರ ಅವಧಿ ಹೆಚ್ಚಾಗಲಿದೆ ಹಾಗೇನಾದರೂ ಕಾನೂನು ಜಾರಿಗೊಂಡರೆ ಈಗಿರುವ ಮೂರುವರೇ ವರ್ಷದ ಬದಲಾಗಿದೆ ನಾಲ್ಕುವರೆ ವರ್ಷ ಅಧಿಕಾರ ನಮಗೆ
    ಸಿಗಲಿದೆ.

    ಸರಕಾರದಿಂದ ಹೆಚ್ಚೇಚ್ಚು ಅನುದಾನ ತರುವ ಮೂಲಕ ಮತಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಸಮಯ ಸಿಕ್ಕಂತಾಗುತ್ತದೆ ಜೊತೆಗೆ ಜನರ ವಿಶ್ವಾಸಾರ್ಹ
    ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಾನಿ ಇಲ್ಲಿಯವರೆಗೂ ಯಾವೂದೇ ಕಾನೂನು ಬಾಹಿರವಾಗಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಕಾನೂನಿನ ಅಢಿಯಲ್ಲಿಯೇ ನಾನು ನಡೆದುಕೊಂಡು ಬಂದಿದ್ದೇನೆ, ಯಾರೇ ಯಾಗಲಿ ಹೇಳಿಕೆ ಕೊಡಬೇಕಾದರೇ ಯೋಚನೆಯಿಂದ ಹಿರಿತನದ ಜವಾಬ್ದಾರಿಯಿಂದ ಹೇಳಿಕೆ ಕೋಡಬೇಕು ಯಾರನ್ನೋ ತೇಜೋವಧೆ ಮಾಡಲು ಅಲ್ಲ ಎಂಬುದನ್ನು ಅರ್ಥ ಮಾಡಿಕೊಂಡರೆ ಸಾಕು ಹೆಚ್ಚಿಗೆ ಯಾವೂದನ್ನು ಬಿಡಿಸಿ ನಾನು ಹೇಳಲಾರೆ ಎಂದು ಟಾಂಗ ನೀಡಿದರು.

    ————-
    ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ರಿಯಾಜಹ್ಮದ ಢವಳಗಿ ಹಾಗೂ ಬಿಜೆಪಿ ಸದಸ್ಯ ಬಸವರಾಜ ಮುರಾಳ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್‌ನಿAದ ಭಾರತಿ ಪಾಟೀಲ ಹಾಗೂ ಪ್ರೀತಿ ದೇಗಿನಾಳ ಹಾಗೂ ಬಿಜೆಪಿಯಿಂದ ಸಹನಾ ಬಡಿಗೇರ ಅವರು ನಾಮಪತ್ರ ಸಲ್ಲಿಸಿದ್ದರು.೧೧ಗಂಟೆಗೆ ನಾಮತ್ರ ಸಲ್ಲಿಕೆ, ೧೧ರಿಂದ ೧೧.೩೦ರವೆಗೆ ನಾಮಪತ್ರ ಪರಿಶಿಲನೆ, ೧೧.೩೦ರಿಂದ ೧೨ಗಂಟೆಯವರಗೆ ನಾಮಪತ್ರ ಹಿಂಪಡೆಯಲು ಅವಕಾಶ ಬಳಿಕ ೧೨.೩೦ರಿಂದ
    ಚುನಾವಣಾ ಪ್ರಕ್ರಿಯೆ ಕೈಗೊಳ್ಳಲಾಯಿತು. ೮ಜನ ಬಿಜೆಪಿ ಸದಸ್ಯರು, ೮ ಜನ ಕಾಂಗ್ರೇಸ್ ಸದಸ್ಯರು, ೫ ಜನ ಪಕ್ಷೇತರ ಸೇರಿದಂತೆ ಒಟ್ಟು ೨೩ ಸದಸ್ಯರ ಬಲವನ್ನು ಹೊಂದಿದ ಪುರಸಭೆಗೆ ಸದ್ಯ ೫ ಪಕ್ಷೇತರರು ಹಾಗೂ ೮ ಜನ ಬಿಜೆಪಿ ಸದಸ್ಯರು ಪರಸ್ಪರ ಹೊಂದಾಣಿಕೆಯಿAದ ಪಕ್ಷೇತರ ಅಭ್ಯರ್ಥಿ ರಿಯಾಜ್ಮದ ಢವಳಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಲ್ಲಿ ಒಂದು ಬಣ ಹಾಗೂ ಸಂಪೂರ್ಣ ಕಾಂಗ್ರೇಸ್ ಪಕ್ಷದ ೮ ಜನ ಸದಸ್ಯರ ಹಾಗೂ ೪೦ ಜನ ಪಕ್ಷೇತರ ಬಲದಿಂದ ಮೈಬೂಬ ಗೊಳಸಂಗಿಯವರನ್ನು ಅಧ್ಯಕ್ಷ ಸ್ಥಾನ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಪಕ್ಷೇತರ ಅಭ್ಯರ್ಥಿ ಹಾಗೂ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಿಯಾಜಹ್ಮದ ಢವಳಗಿಯವರು ಅವರು ಕಾಂಗ್ರೇಸ್ ಪಕ್ಷದೊAದಿಗೆ ಗುರ್ತಿಸಿಕೊಂಡಿರುವುದು ಮಾತ್ರವಲ್ಲದೇ ಕಾಂಗ್ರೇಸ್ ನ ತಾಲೂಕಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರಾಗಿದ್ದರಿಂದ ಬ್ಲಾಕ್ ಕಾಂಗ್ರೇಸ್ ಗುರು ತಾರನಾಳ ಅವರನ್ನು ಕಳುಹಿಸಿ ಕೆಲ ಹೊತ್ತು ಆಜ್ಞಾತ ಸ್ಥಳಕ್ಕೆ ಕರೆಯಿಸಿಕೊಂಡ ಶಾಸಕ
    ಹಾಗೂ ಕರ್ನಾಟಕ ರಾಜ್ಯ ಸಾಬೂನು, ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಹಾಗೂ ತಾಲೂಕಾ ಪಟ್ಟಣದ ಹಾಗೂ ತಾಲೂಕಿನ ಬಹುತೇಕ ಕಾಂಗ್ರೇಸ್ ಮುಖಂಡರ ಸಮ್ಮುಖದಲ್ಲಿ ಸಮಾಲೋಚನೆ ನಡೆಸಿ ರಿಯಾಜ್ ಹಮ್ಮದ‌ ಡವಳಗಿಯವರ ಮನೋಲಿಸಿ ಮೈಬೂಬ ಗೊಳಸಂಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸರ್ವ ಸದಸ್ಯರನ್ನು ಒಪ್ಪಗೆ ಪಡೆದು ೧೬ ಜನ ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದ್ದರಿಂದ ಮೈಬೂಬ ಗೊಳಸಂಗಿಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಬಳಿಕ ಪ್ರೀತಿ ದೇಗಿನಾಳ ಅವರು ಉಪಾಧ್ಯಕ್ಷರನ್ನಾಗಿ ಆಯ್ಕೆ
    ಗೊಂಡಿದ್ದರಿAದ ಬಿಜೆಪಿ ಸದಸ್ಯ ಬಸವರಾಜ ಮುರಾಳ ಅವರು ನೀಡಿದ್ದ ನಾಮಪತ್ರ ಹಿಂಪಡೆದುಕೊಳ್ಳುವAತೆ ಮಾಡಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸುವ ಮೂಲಕ ಬಿಜೆಪಿ ಬೆಂಬಲಿತ ಅಧ್ಯಕ್ಷ ಸ್ಥಾನ ಎಂದು ಘೊಷಿಸುವ ಬಿಜೆಪಿಯವರಿಗೆ ಕಾಂಗ್ರೇಸ್ ತAತ್ರಗಾರಿಕೆಯಿAದ ಬಿಜೆಪಿಯವರಿಗೆ ಮುಖಭಂಗ ಅನುಭವಿಸುವಂತಾಯಿತು.

     


     

    ಕಾರ್ಯಕರ್ತರ ಹರ್ಷೋದ್ಘಾರ ವಿಜಯೋತ್ಸವ

    ಪುರಸಭೆಯ ನೂತನ ಅಧ್ಯಕ್ಷರಾಗಿ ಮೈಬೂಬ ಗೊಳಸಂಗಿ ಹಾಗೂ ಉಪಾಧ್ಯಕ್ಷರಾಗಿ ಪ್ರೀತಿ ದೇಗಿನಾಳ ಅವರು ಆಯ್ಕೆಗೊಳ್ಳುತ್ತಿದ್ದಂತೆ ಕಾಂಗ್ರೇಸ್
    ಕಾರ್ಯಕರ್ತರು ಪುರಸಭೆ ಕಚೇರಿ ಎದುರು ಪಟಾಕಿ ಸಿಡಿಸಿ ಪರಸ್ಪರ ಅಪ್ಪಿಕೊಂಡು ವಿಕ್ಟರಿ ಚಿನ್ಹೇ ತೊರಿಸಿ ಕೈ ಮಾಡಿ ಗುಲಾಲು ಎರಚಿ ಮೈಬೂಬ ಗೊಳಸಂಗಿಯವರನ್ನು ಮೇಲಕ್ಕೆ ಎತ್ತಿ ಹೆಗಲ ಮೇಲೆ ಹೊತ್ತುಕೊಂಡು ಪಾದಯಾತ್ರೆ ಮೂಲಕ ಪಟ್ಟಣದ
    ಪ್ರಮುಖ ಬೀದಿಗಳಿಗ ಮೂಲಕ ಹಾಯ್ದು ಸಂಭ್ರಮಿಸಿದರು.

    ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಹಿರಿಯ ಮುಖಂಡರಾದ ಸಂಗಮೇಶ ಬಿರಾದಾರ(ಜಿಟಿಸಿ) ಎಂ ಬಿ ನಾವದಗಿ, ಗಫೂರಸಾಬ ಮಕಾಂದಾರ, ಸಿಬಿ ಅಸ್ಕೀ, ಸಿಕಂದರ ಜಾನ್ವೇಕರ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸದಸ್ಯರಾದ ವಿರೇಶ ಹಡಲಗೇರಿ, ಚನ್ನಪ್ಪ ಕಂಠಿ, ಯಲ್ಲಪ್ಪ ನಾಯಕಮಕ್ಕಳ, ಸೋನಾಬಾಯಿ ನಾಯಕ, ರಫೀಕ ದ್ರಾಕ್ಷೀ, ಶಿವು ಶಿವಪುರಿ, ಹಣಮಂತ ಭೋವಿ, ಶಾಹಾಜಾದಬಿ ಹುಣಸಗಿ, ಮಹಮ್ಮದರಫೀಕ ಶಿರೋಳ, ಸದ್ದಾಂ ಕುಂಟೋಜಿ,ಕಾಮರಾಜ ಬಿರಾದಾರ, ಸಂಗಪ್ಪ ಮೇಲಿಮನಿ, ಶ್ರೀಕಾಂತ ಚಲವಾದಿ, ಬಸವರಾಜ ಗೊಳನಾಳ ಸೇರಿದಂತೆ ಅನೇಕರು ಇದ್ದರು.


    ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಯಾವೂದೇ ಅಹಿತಕರ ಗಲಾಟೆಯಾಗದಂತೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಹಾಗೂ ಪಿಎಸೈ ಸಂಜಯ ತಿಪ್ಪಾರೆಡ್ಡಿ ಹಾಗೂ ತಾಳಿಕೋಟಿ ಪಿಎಸೈ ರಾಮನಗೌಡ ಸಂಕನಾಳ, ಕ್ರೈಂಪಿ.ಎ.ಸೈ ಆರ್.ಎಸ್ ಬಂಗಿ, ಆರ್.ಎಲ್ ಮನ್ನಾಭಾಯಿ, ನೇತೃತ್ವದ ೬೦ಪೋಲಿಸ್ ಸಬ್ಬಂದಿ ಹಾಗೂ ಒಂದು ಡಿ ಆರ್ ತುಕಡಿಯೊಂದಿಗೆ  ಪುರಸಭೆ ಕಚೇರಿಯ ಸುತ್ತಲೂ ಬ್ಯಾರಿಕೇಡ ಅಳವಡಿಸಿ ವ್ಯಾಪಕ ಬಗಿ ಪೋಲಿಸ್ ಸರ್ಪಗಾವಲು ಹಾಕಲಾಗಿತ್ತು. ಚುನಾವಣೆ ಮಗಿಯುವವರೆಗೂ ಪೋಲಿಸ ಸಿಬ್ಬಂದಿಗಳು ಆಗಾಗ ತಪಾಸಣೆ ನಡೆಸುವ ಮೂಲಕ ಜಾಗೃತಿ ವಹಿಸಿಕೊಂಡಿದ್ದು ಕಂಡುಬAತು.

    ————————–

    ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್
    ನಾಡಗೌಡ(ಅಪ್ಪಾಜಿ)ಯವರ ಹಾಗೂ ತಾಲೂಕಿನ ಬಹುತೇಕ ಎಲ್ಲ ಕಾಂಗ್ರೇಸ್ ಮುಖಂಡ
    ಆಶಿರ್ವಾದಿAದ ಇಂದು ನಾನು ಅಧ್ಯಕ್ಷನಾಗಿದ್ದೇನೆ ನನ್ನ ಮೇಲೆ ಬಹುದೊಡ್ಡ ಜವಾಬ್ದಾರಿ
    ಹೊರೆಸಿದ್ದಾರೆ. ನಾನಿರುವ ಅಧಿಕಾರವಧಿಯಲ್ಲಿ ಎಲ್ಲ ಸದಸ್ಯರ ವಿಶ್ವಾಸ ಪಡೆದು ಪಟ್ಟಣದ
    ಜನರಿಗೆ ಸಕಾಲಕ್ಕೆ ಕುಡಿಯುವ ನೀರು ಪೂರೈಕೆ, ಸ್ವಚ್ಛತೆ, ಉದ್ಯಾನವನಗಳು
    ರಸ್ತೆಗಳ ಅಭಿವೃದ್ಧಿ ಸೇರಿದಂತೆ ಸಮಗ್ರ ಪಟ್ಟಣದ ಅಭಿವೃದ್ಧಿಗೆ ಟೊಂಕ ಕಟ್ಟಿ
    ನಿಲ್ಲುತ್ತೇನೆ. ನಾನು ಅಧ್ಯಕ್ಷನಾಗಲು ಶ್ರಮಿಸಿದ ಶಾಸಕರಿಗೂ, ಎಲ್ಲ ಸ್ನೇಹಿತರಿಗೂ,
    ಮುಖಂಡರಿಗೂ, ಪುರಸಭೆ ಸದಸ್ಯರಿಗೂ ಎಲ್ಲರಿಗೂ ಧನ್ಯವಾದಗಳನ್ನು
    ಸಲ್ಲಿಸುತ್ತೇನೆ.

    ಪುರಸಭೆ ನೂತನ ಅಧ್ಯಕ್ಷ ಮೈಬೂಬ ಗೊಳಸಂಗಿ.
    —————–

     

  • ಬೈಕ್ ಓವರ್ ಸ್ಪೀಡ್’ಗೆ ನಾಲ್ವರ ಬಲಿ.?

    ಬೈಕ್ ಓವರ್ ಸ್ಪೀಡ್’ಗೆ ನಾಲ್ವರ ಬಲಿ.?

    ವರದಿ; ಶ್ರೀಶೈಲ್ ಪೂಜಾರಿ

    ಮುದ್ದೇಬಿಹಾಳ; ತಾಲೂಕಿನ ಕುಂಟೋಜಿ ಗ್ರಾಮದ ಸಮೀಪ ಬೈಕ್ ಗುದ್ದಿದ ಪರಿಣಾಮವಾಗಿ ಸವಾರರು ಹಾಗೂ ಪಾದಚಾರಿ ಸೇರಿ ಮೂವರು ಮೂವರು ಮೃತಪಟ್ಟರೆ, ನಾಲ್ವರ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿದೆ. ನಾಲ್ವರಲ್ಲಿ ಇಂದು(ಶುಕ್ರವಾರ) ಬೆಳಗಿನ ಜಾವದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

    ಮೃತಪಟ್ಟ ಮೂವರಲ್ಲಿ ಬೈಕ್ ಸವಾರ ನಿಂಗರಾಜ ಚೌದರಿ(22) ತಾಳಿಕೋಟಿ ತಾಲೂಕಿನ ಗೊಟಗುನಕಿ ಗ್ರಾಮ, ಬೈಕ್ ನ ಹಿಂಬದಿ ಸವಾರ ಅನಿಲ ವನೂರು (27) ದೇವರ ಹಿಪ್ಪರಗಿ ತಾಲೂಕಿನ ಹಂಚಿನಾಳ ಗ್ರಾಮ, ಪಾದಾಚಾರಿ ಕುಮಾರ ಪ್ಯಾಟಿ(18) ಮಲಗಲದಿನ್ನಿ ಗ್ರಾಮದವನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅಸುನೀಗಿದ ಯುವಕನ ಹೆಸರು ತಿಳಿದುಬಂದಿಲ್ಲ.

    ಶಾಹೀದ್ ಹುನಗುಂದ(19), ಪ್ರಶಾಂತ ಕುರುಬಗೌಡರ(16), ಹಣಮಂತ ಕುರುಬಗೌಡರ(18), ರಾಯಪ್ಪ ಬಾಗೇವಾಡಿ(24) ಅವರ ಆರೋಗ್ಯ ಚಿಂತಾಜನಕವಾಗಿದೆ. ಈ ನಾಲ್ವರು ಮಲಗದಿನ್ನಿ ಗ್ರಾಮದವರಾಗಿದ್ದು, ಬಾಗಲಕೋಟೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ತಾಳಿಕೋಟಿಯಿಂದ ಮುದ್ದೇಬಿಹಾಳಕ್ಕೆ ಬೈಕ್ ಸವಾರರು ಎನ್.ಎಸ್ 200 ಬೈಕ್ ನಲ್ಲಿ ಕುಂಟೋಜಿ ಗ್ರಾಮವನ್ನು ದಾಟಿ ಮುದ್ದೇಬಿಹಾಳಕ್ಕೆ ಬರುವಾಗ ಈ ಅಪಘಾತ ಸಂಭವಿಸಿದೆ.

    ಕುಂಟೋಜಿ ಗ್ರಾಮದಲ್ಲಿ ಬಸವಣ್ಣನ ಜಾತ್ರೆ ನಿಮಿತ್ಯ ವಿವಿಧ ಮನರಂಜನೆ ಹಾಗೂ ಸ್ಪರ್ಧೆಗಳು ಇದ್ದವು. ಇವುಗಳನ್ನು ನೋಡಲು ಮಲಗಲದಿನ್ನಿ ಗ್ರಾಮದಿಂದ ಟಾಟಾ ಎಸ್ ನಲ್ಲಿ ಬಂದಿದ್ದರು. ಮಲಗಲದಿನ್ನಿ ಯುವಕರು ಶೌಚಾಲಯಕ್ಕೆ ಹೋಗಿ ರಸ್ತೆ ಪಕ್ಕದಲ್ಲಿ ಬರುವಾಗ ಬೈಕ್ ಸವಾರನ ಓವರ್ ಸ್ಪೀಡ್ ನಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

    ಒಟ್ಟು 6 ಪಾದಚಾರಿಗಳಿಗೆ ಈ ಬೈಕ್ ಗುದ್ದಿದ್ದು, ಬೈಕ್ ಸವಾರರು ಇಬ್ಬರು ಹಾಗೂ ಇಬ್ಬರು ಪಾದಚಾರಿಗಳು ಇಬ್ಬರು ಮೃತಪಟ್ಟಿದ್ದಾರೆ. ಪಾದಾಚಾರಿ ಒಬ್ಬರು ಆರೋಗ್ಯಗೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಈ ನಾಲ್ವರಲ್ಲಿ ಒಬ್ಬರು ಮೃತಟ್ಟಿದ್ದಾರೆ ಎನ್ನಲಾಗಿದೆ. ಆದರೆ ಪೊಲೀಸ್ ಇಲಾಖೆ ಈ ಮಾಹಿತಿಯನ್ನು ತಳ್ಳಿ ಹಾಕಿದೆ.

    ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಎಸ್.ಪಿ ಎಸ್.ಕೆ ಮಾರಿಹಾಳ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ಐ ಸಂಜೀವ್ ತಿಪ್ಪಾರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು.

  • ಮಾಸ್‌ಕೋಟ್ ತಂಡದಿಂದ ಗೇಟ್‌ಗಳ ಪರಿಶೀಲನೆ

    ಮಾಸ್‌ಕೋಟ್ ತಂಡದಿಂದ ಗೇಟ್‌ಗಳ ಪರಿಶೀಲನೆ

    • ಮಾಸ್‌ಕೋಟ್ ತಂಡದಿಂದ ಗೇಟ್‌ಗಳ ಪರಿಶೀಲನೆ ;ಸ್ಕಾಡಾ ಗೆಟ್ ಅಳವಡಿಕೆ, ರೈತರಲ್ಲಿ ಸಂತಸ

    ಸತ್ಯಕಾಮ ನ್ಯೂಸ್ ಡೆಸ್ಕ್

    ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆ ಆಧುನಿಕರಣ, ಸ್ಕಾಡಾ ಗೇಟ್‌ಗಳ ಅಳವಡಿಕೆ ನಂತರ ಜಲಾಶಯದಲ್ಲಿ ಬಳಕೆ ಆಗುತ್ತಿರುವ ನೀರು, ಕಾಲುವೆ ನಿರ್ವಹಣೆ ಹಾಗೂ ನೀರು ಬಳಕೆದಾರ ಸಹಕಾರ ಸಂಘಗಳ ಕಾರ್ಯ ಚಟುವಟಿಕೆ ಕುರಿತು “ಮಾಸಕೊಟ್ ಸಂಸ್ಥೆ” ಸೂಚನೆಯಂತೆ ಗುರುವಾರ ಅಧಿಕಾರಿಗಳೂ ಇಂಜನೀಯರುಗಳೂ ಹಾಗೂ ಸದಸ್ಯರು ಯೋಜನಾ ಪ್ರದೇಶದ ನಾರಾಯಣಪುರದಿಂದ ಹುಣಸಗಿಯ ತನಕ ಭೇಟಿ ನೀಡಿ ಪರಿಶೀಲನೆ ಮಾಡಿದರು.

    ನಾರಾಯಣಪುರ ಜಲಾಶಯದ ಕಾಲುವೆ ಹಾಗೂ ನೀರು ನಿರ್ವಹಣೆ ತಂಡಗಳೊಂದಿಗೆ ಜಲ, ಗೆಟ್, ನೀರಿನ ವಿತರಣೆ, ನೀರು ಬಳಕೆದಾರ ಸಹಕಾರ ಸಂಗಗಳ ಕಾರ್ಯ ಚಟುವಟಿಕೆ ಕುರಿತು ಸರಕಾರಕ್ಕೆ ವರದಿ ಸಲ್ಲಿಸುವದಕ್ಕಾಗಿ ಅಧ್ಯಯನ ನಡೆಸುತ್ತಿರುವದಾಗಿ ಕೆ.ಇ.ಆರ್.ಎಸ್ ಮುಖ್ಯ ಎಂಜಿನಿಯರ್ ಕೆ.ಜಿ.ಮಹೇಶ ಹೇಳಿದರು.

     

    ಹುಣಸಗಿ ತಾಲೂಕಿನ ನಾರಾಯಣಪುರ ಎಡದಂಡೆ ನಾಲೆಯ ಸ್ಕಾಡಾ ಗೇಟ್‌ಗಳ ಅಳವಡಿಕೆ ನಂತರ ಅದರ ಫಲಶ್ರುತಿ ಕುರಿತು ಮುಖ್ಯ ಅಭಿಯಂತರರಾದ ಕೆ.ಜಿ.ಮಹೇಶ ಭೇಟಿ ನೀಡಿ ಪರೀಶಿಲಿಸಿದರು.
    ಹುಣಸಗಿ ತಾಲೂಕಿನ ನಾರಾಯಣಪುರ ಎಡದಂಡೆ ನಾಲೆಯ ಸ್ಕಾಡಾ ಗೇಟ್‌ಗಳ ಅಳವಡಿಕೆ ನಂತರ ಅದರ ಫಲಶ್ರುತಿ ಕುರಿತು ಮುಖ್ಯ ಅಭಿಯಂತರರಾದ ಕೆ.ಜಿ.ಮಹೇಶ ಭೇಟಿ ನೀಡಿ ಪರೀಶಿಲಿಸಿದರು.

    ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆ ನಿರ್ಮಾಣದ ಹಲವು ದಶಕಗಳಿಂದ ನಿರಂತರವಾಗಿ ಕುಸಿತದಿಂದಾಗಿ, ಕಾಲುವೆ ನೀರು ಅಧಿಕ ಪ್ರಮಾಣದಲ್ಲಿ ಪೊಲಾಗುತ್ತಿತ್ತು. ಕಾಲುವೆ ಅಧುನಿಕರಣಕ್ಕಾಗಿ ಬೇಡಿಕೆ ಕಂಡು ಬಂತು.ತದ ನಂತರ ಕಾಲುವೆ ಅಧುನಿಕರಣ (ಇಆರ್‌ಎಮ್) ಕೈಗೊಳ್ಳಲಾಯಿತು.

    ಮುಂದುವರೆದು ದೇಶದಲ್ಲಿ ಮೊದಲ ಬಾರಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸ್ಕಾಡಾ ಅಡಿಯಲ್ಲಿ ೫ಸಾವಿರ ಕೊಟಿ ರೂಗಳಲ್ಲಿ ಸುರಕ್ಷಿತ ಗೇಟ್ ಅಳವಡಿಸಿದ ನಂತರ ನೀರು ಪೋಲಾಗುವದು ತಪ್ಪಿಸಿದಂತಾಗಿದೆ. ಅಲ್ಲದೆ ರೈತರಿಗೆ ಸಮಯಕ್ಕೆ ಸರಿಯಾಗಿ ನೀರು ಲಭ್ಯವಾಗುತ್ತಿದ್ದು, ಇದರಿಂದಾಗಿ ನೀರಾವರಿ ಕ್ಷೇತ್ರ, ಅಧಿಕ ಇಳುವರ, ರೈತರ ಗುಳೆ ತಪ್ಪಿದಂತಾಗಿದೆ ಎಂಬುದು ಅಧ್ಯಯನದಿಂದ ಕಂಡು ಬಂದಿದೆ ಎಂದು ಮಹೇಶ ಹೇಳಿದರು.

    ನೀರು ಬಳಕೆದಾರರ ಸಹಕಾರಿ ಸಂಘಗಳ ಪ್ರಮುಖ ಎಂ.ಆರ್.ಖಾಜಿ ಮಾತನಾಡಿ, ರೈತರಿಗೆ ನೀರನ್ನು

    ಮುಟ್ಟಿಸುವಲ್ಲಿ ಸಂಗಗಳ ಚಟುವಟಿಕೆ ಉತ್ತಮವಾಗಿದ್ದು, ಆಡಳಿತದಲ್ಲಿ ಇರುವ ಯಾವುದೇ ಸರಕಾರ ಸಂಘಗಳನ್ನು ಬಲಡಪಸುವಲ್ಲಿ ತಮ್ಮ ಇಚ್ಛಾಶಕ್ತಿ ತೋರುತ್ತಿಲ್ಲಾ. ಕೃಷ್ಣಾ ಕಾಡಾ ಅಡಿಯಲ್ಲಿನ ನಾರಾಯಣಪುರ ವಲಯದ ನೀರು ಬಳಕೆದಾರ

    ಸಹಕಾರ ಸಂಘಗಳು ಮಾತ್ರ ನೀರಿನ ಕರವನ್ನು ಮುಂಗಡವಾಗಿ ಪಾವತಿ ಮಾಡುತ್ತಿವೆ ಎಂದು ಹೇಳಿದರು.

    ಈ ನಿಟ್ಟಿನಲ್ಲಿ ಸಂಘಗಳಿಗೆ ಉತ್ತೇಜನ ನೀಡುವದು ಅಗತ್ಯವಾಗಿದೆ ಎಂದು ಮನವಿ ಮಾಡಿದರು.

    ನಾರಾಯಣಪುರ ಜಲಾಶಯ, ಸ್ಕಾಡಾ ಸೆಂಟರ್, ನಾರಾಯಣಪುರ ಎಡದಂಡೆ ಮುಖ್ಯ ನಾಲೆ, ಎಸ್ಕೇಪ ಗೆಟ್‌ಗಳನ್ನು ಪರೀಶಿಲನೆ ಮಾಡಿದರು.

    ಈ ಸಂದರ್ಭದಲ್ಲಿ ಅಧಿಕ್ಷಕ ಅಭಿಯಂತರ ರಮೇಶ.ಜಿ. ರಾಠೋಡ. ಇಇಗಳಾದ ಹಣಮಂತ ಕೊಣ್ಣುರು, ರವಿಕುಮಾರ, ನಾಗೇಶ, ಎಇಇ ಆರ್.ಎಸ್.ರಾಠೋಡ, ಮಾನಪ್ಪ,ಮಹಾಲಿಂಗ ಹೊಕ್ರಾಣಿ, ವಿಜಯಕುಮಾರ ಅರಳಿ, ರಾಜಶೇಖರ ವಂದಲಿ, ವಿಶಾಲ ಇತರ ಅಧಿಕಾರಿಗಳು ಇದ್ದರು.

  • ಟ್ರಾನ್ಸ್ಫರ್ ಗೆ ಲಂಚ ತೋಗುತ್ತಾರ ಡಿಡಿಪಿಐ..? ಚರ್ಚೆಗೆ ಗ್ರಾಸವಾದ ಕೇಂದ್ರ ಸಚಿವರ ಭಾಷಣ

    ಟ್ರಾನ್ಸ್ಫರ್ ಗೆ ಲಂಚ ತೋಗುತ್ತಾರ ಡಿಡಿಪಿಐ..? ಚರ್ಚೆಗೆ ಗ್ರಾಸವಾದ ಕೇಂದ್ರ ಸಚಿವರ ಭಾಷಣ

    ಟ್ರಾನ್ಸಪರ್ ಗೆ ಕಾಸು ಇಸ್ಕೋಬೇಡ್ರಿ ಡಿಡಿಪಿಐ ಕೇಂದ್ರ ಸಚಿವ ಗರಂ..!

    ಚರ್ಚೆಗೆ ಗ್ರಾಸವಾದ ಕೇಂದ್ರ ಸಚಿವರ ಭಾಷಣ

    ಸತ್ಯಕಾಮ  ವಾರ್ತೆ ಯಾದಗಿರಿ:

    ಶಿಕ್ಷಕರ ವರ್ಗಾವಣೆ ಮಾಡಲು ಡಿಡಿಪಿಐ ಅವರು ಹಣ ಪಡೆಯುತ್ತಾರೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

    ಜಿಲ್ಲೆಯ ತಡಿಬಿಡಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಸಂಪೂರ್ಣತಾ ಅಭಿಯಾನ ಮೇಳ ಉದ್ಘಾಟಿಸಿ ಸಚಿವರು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ, ಏನ್ರೀ ಡಿಡಿಪಿಐ ಅವರೇ, ಟ್ರಾನ್ಸ್ಫರ್ ಮಾಡಲು ಕಾಸು ಇಸ್ಕೊತಿರಂತೆ ಎಂದು ಹೇಳಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

    ಯಾದಗಿರಿ ಜಿಲ್ಲೆಯೂ ಶಿಕ್ಷಣದಲ್ಲಿ ಕೊನೆಯ ಸ್ಥಾನದಲ್ಲಿದೆ ಎನು ಮಾಡುತ್ತಿರಿ ಶಿಕ್ಷಣ ಇಲಾಖೆಯಲ್ಲಿ 3 ಸಾವಿರ ಶಿಕ್ಷಕರಿಲ್ಲ ಇಲಾಖೆ ಮಾತ್ರ ಇದೆ ಎನು ಮಾಡತ್ತೀರಿ ರೀ ಡಿಡಿಪಿಐ ಹೋದ ಪುಟ್ಟ ಬಂದ ಪುಟ್ಟ ಎನ್ರೀ ಮಂಜುನಾಥ ಚಾಮರಾಜನಗರದಿಂದ ಯಾದಗಿರಿ ಬಂದಿದ್ದೂ ನಾಮಕಾವಸ್ಥೆ ಚಾಮರಾಜನಗರ ಅಂತಾ ಹೇಳಿದ್ರೆ ನನಗೆ ನಾಚಿಕೆಯಾಗುತ್ತೆ ಟ್ರಾನ್ಸಪರ್ ಗೆ ದುಡ್ಡು ತಗೋಬೇಡಿ ಹೀಗ ಕಾಲ ಮೊದಲಿನಂತಿಲ್ಲ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಶಿಕ್ಷಣ ಇಲಾಖೆ ಅವ್ಯವಸ್ಥೆಯ ಕುರಿತು ಗರಂ ಆಗಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಅವರಿಗೆ ತರಾಟೆ ತೆಗೆದುಕೊಂಡರು.

    ವಿಡಿಯೋ: ಟ್ರಾನ್ಸಪರ್ ಗೆ ಕಾಸು ಇಸ್ಕೋಬೇಡ್ರಿ ಡಿಡಿಪಿಐ ಕೇಂದ್ರ ಸಚಿವ ಗರಂ..!

    ಜಿಲ್ಲೆಯ ಶಿಕ್ಷಣ ಇಲಾಖೆಯ ಅವ್ಯವಸ್ಥೆ ಹಾಗೂ ವರ್ಗಾವಣೆಗೆ ಹಣ ಪಡೆಯುತ್ತಾರೆ ಎಂಬ ಆರೋಪಗಳಿಗೆ ಕೇಂದ್ರ ರೇಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಗರಂ ಮಾತು ಮತ್ತಷ್ಟು ಬಲ ತಂದಿದೆ. ಇದರ ಕುರಿತು ತನಿಖೆ ಮಾಡುವಂತೆ ಸಾರ್ವಜನಿಕ ವಲಯದಲ್ಲಿ ಆಗ್ರಹಗಳು ಕೇಳಿಬಂದವು.

  • ಅತಿವೃಷ್ಠಿಯಿಂದ ಆದ ಹಾನಿ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಿ; ಸಚಿವ  ಶರಣಬಸಪ್ಪ ದರ್ಶನಾಪುರ

    ಅತಿವೃಷ್ಠಿಯಿಂದ ಆದ ಹಾನಿ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಿ; ಸಚಿವ ಶರಣಬಸಪ್ಪ ದರ್ಶನಾಪುರ

    ಅತಿವೃಷ್ಠಿಯಿಂದ ಆದ ಹಾನಿಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಿ; ಬಾಕಿ ಮನೆ ಹಾನಿ ಪರಿಹಾರ ಶೀಘ್ರ ವಿತರಿಸಿ: ಸಚಿವ ಶರಣಬಸಪ್ಪ ದರ್ಶನಾಪುರ

    ಸತ್ಯಕಾಮ ವಾರ್ತೆ ಯಾದಗಿರಿ;

    ಅತಿವೃಷ್ಠಿಯಿಂದಾದ ಬೆಳೆ ಹಾನಿ ಮತ್ತು ಮನೆ ಹಾನಿ ಕುರಿತಂತೆ ಪರಿಶೀಲನೆ ನಡೆಸಿ ಶೀಘ್ರ ವರದಿ ಸಲ್ಲಿಸುವುದರ ಜೊತೆಗೆ ಈ ಹಿಂದೆ ಮನೆ ಹಾನಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಪರಿಹಾರವನ್ನು ಆಧ್ಯತೆ ಮೇಲೆ ವಿತರಿಸುವಂತೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಇಂದು ಪ್ರಕೃತಿ ವಿಕೋಪದ ಅಡಿಯಲ್ಲಿ ಬೆಳೆ,ರಸ್ತೆ, ಮೂಲಸೌಕರ್ಯ ಹಾನಿಯಾದ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

    ಜಿಲ್ಲೆಯ ವಿವಿಧ ತಾಲೂಕಗಳಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಬೆಳೆ ನಷ್ಟವಾಗಿರುವ ಬಗ್ಗೆ ಜಂಟಿ ಸಮೀಕ್ಷೆ ನಡೆಸಬೇಕು. ಅದರಂತೆ ಮನೆ ಹಾನಿ,ರಸ್ತೆ ಮೂಲಸೌಕರ್ಯಗಳ ಹಾನಿ ಕುರಿತು ಶೀಘ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿದರು.

    ಜಿಲ್ಲೆಯ ಸಿರವಾಳದಿಂದ ಅಣಬಿ ವರೆಗೆ ಹಾಗೂ ಶಹಾಪುರದಿಂದ ಶಿರವಾಳದವರೆಗೆ ಹಾಗೂ ಇಬ್ರಾಹಿಂಪುರದಿಂದ ಚಟ್ನಳ್ಳಿ ವರೆಗೆ ರಸ್ತೆ ಹಾನಿಯಾಗಿದೆ. ಈ ರಸ್ತೆಗಳ ಮಧ್ಯೆ ಭಾರತಮಾಲಾ, ರೈಲ್ವೆ ಕಾಮಗಾರಿ ನಡೆಯುತ್ತಿರುವುದರಿಂದ ಈ ಕುರಿತಂತೆ ಜಂಟಿ ಸಹಯೋಗದೊಂದಿಗೆ ಸಾಧ್ಯತೆ ಇದ್ದಲ್ಲಿ ರಸ್ತೆ ದುರಸ್ತಿ ಕೈಗೊಳ್ಳುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ, ಅವಶ್ಯಕ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

    ಸಚಿವರು ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಆಗಿರುವ ಬಿತ್ತನೆ, ಬೆಳೆ ಹಾನಿ, ಭೀಮಾ, ಕೃಷ್ಣ ನದಿ ವ್ಯಾಪ್ತಿಯಲ್ಲಿ ಬೆಳೆ ಪರಿಸ್ಥಿತಿ, ರಸಗೊಬ್ಬರದ ಅವಶ್ಯಕತೆ, ಬೆಳೆವಿಮೆ ಪರಿಹಾರ ವಿತರಣೆ, ತೋಟಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿ ಆದ ಬೆಳೆ ಹಾನಿ, ಪ್ರೂಟ್ಸ್ ತಂತ್ರಾಂಶದಲ್ಲಿ ರೈತರ ನೋಂದಣಿ ಕುರಿತಂತೆ ಪರಿಶೀಲನೆ ನಡೆಸಿದರು.

    ಈ ಸಂದರ್ಭದಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಜಿಲ್ಲಾಧಿಕಾರಿ ಡಾ.ಸುಶೀಲ ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರು ಸೇರಿದಂತೆ ಎಲ್ಲಾ ತಾಲೂಕಿನ ತಹಶೀಲ್ದಾರರ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  • ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು

    ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು

    ಅತಿವೃಷ್ಟಿ-ಪ್ರವಾಹ ಎದುರಿಸಲು ಸರ್ವ ರೀತಿಯಿಂದ ಅಧಿಕಾರಿಗಳು ಸನ್ನದ್ಧಗೊಳ್ಳಿ; ಜಿಲ್ಲಾಧಿಕಾರಿ ಡಾ.ಸುಶೀಲ ಬಿ.

    ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು

    ಸತ್ಯಕಾಮ ವಾರ್ತೆ ಯಾದಗಿರಿ : 

    ಜಿಲ್ಲೆಯಲ್ಲಿ ನಿರಂತರ ಆಗುತ್ತಿರುವ ಮಳೆಯ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಕೃಷ್ಣ ಹಾಗೂ ಭೀಮಾ ನದಿಗಳಿಗೆ ಬರಬಹುದಾದ ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಸಾರ್ವಜನಿಕರು, ನದಿ ಪಾತ್ರದ ಜನರು ಹಾಗೂ ಜಾನುವಾರುಗಳಿಗೆ ತೊಂದರೆ ಯಾಗದಂತೆ ಅವಶ್ಯಕ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

     

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರದಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಿತಿ ಸಭೆ ನಡೆಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಆಲಮಟ್ಟಿ, ನಾರಾಯಣಪುರ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ, ಹೊರ ಹರಿವು ಹೆಚ್ಚು ಆದ ಸಂದರ್ಭದಲ್ಲಿ ತುರ್ತಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇತರೆ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಅವರು ಸೂಚನೆ ನೀಡಿದರು.

    ಕೃಷ್ಣ ಮತ್ತು ಭೀಮಾ ನದಿ ತೀರಗಳ ವ್ಯಾಪ್ತಿಯಲ್ಲಿ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳು ಈಗಿನಿಂದಲೇ ಸನ್ನದ್ದರಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

     

    ಸದ್ಯ ಯಾವುದೇ ರೀತಿಯ ಪ್ರವಾಹದ ಭೀತಿ ಇಲ್ಲದಿದ್ದರೂ ಕೂಡ, ಮಳೆ ಪ್ರಮಾಣ ಹೆಚ್ವಾಗಿ ಕೃಷ್ಣ ಮತ್ತು ಭೀಮಾ ನದಿ ನೀರು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

    ಈ ಹಿಂದಿನ ವರ್ಷಗಳಲ್ಲಿ ಪ್ರವಾಹ ಸಂದರ್ಭಗಳಲ್ಲಿ ಬಾಧಿತವಾಗಿದ್ದ ಗ್ರಾಮಗಳ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕರ್ತವ್ಯಗಳೊಂದಿಗೆ ನಿಭಾಯಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಖುದ್ದಾಗಿ ನಿಗಾ ಇಟ್ಟು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

     

    ಜಿಲ್ಲೆಯ ಆಯಾ ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು, ಅಭಿಯಂತರರು, ಆರ್.ಡಿ.ಪಿ.ಆರ್ ಇಲಾಖೆ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಅತಿವೃಷ್ಟಿ, ಹಾಗೂ ಪ್ರವಾಹ ದಿಂದ ಯಾವುದೇ ಮಾನವ ಜೀವ ಹಾನಿ ಹಾಗೂ ಜಾನುವಾರುಗಳ ಜೀವ ಹಾನಿ ಆಗದಂತೆ ಮುಂಜಾಗ್ರತೆವಹಿಸಬೇಕು. ಪ್ರತಿ ಹೋಬಳಿವಾರು ನೇಮಿಸಿದ ನೋಡಲ್ ಅಧಿಕಾರಿಗಳು ಕೂಡ ಕೃಷ್ಣ ಮತ್ತು ಭೀಮಾ ನದಿ ಪಾತ್ರದ ವ್ಯಾಪ್ತಿಯಲ್ಲಿ ಸೂಕ್ತ ನಿಗಾ ವಹಿಸಬೇಕು . ನಾರಾಯಣಪುರ ಹಾಗೂ ಸನ್ನತಿ, ಗುರಸಣಗಿ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ನೀರು ನಿರ್ವಹಣೆ ಹಾಗೂ ನಿಗಾಕ್ಕೆ ನೇಮಿಸಿರುವ ನೋಡಲ್ ಅಧಿಕಾರಿಗಳು ಸೂಕ್ತ ಗಮನ ನೀಡುವಂತೆ ಅವರು ಸೂಚನೆ ನೀಡಿದರು.

     

    ಆಯಾ ತಹಸೀಲ್ದಾರರು, ನಗರಸ್ಥಳಿಯ ಸಂಸ್ಥೆಗಳ ಮುಖ್ಯಾಧಿಕಾರಿಗಳು , ತಾಲೂಕ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ಒಳ ಚರಂಡಿ ಗಳನ್ನು ಸ್ವಚ್ಛಗೊಳಿಸಬೇಕು, ನೀರು ಸರಾಗವಾಗಿ ಹರಿದುಹೋಗುವಂತೆ ಚರಂಡಿಗಳ ತ್ಯಾಜ್ಯ ಬೇರೆ ಕಡೆ ಸ್ಥಳಾಂತರಿಸಲು ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ತಗ್ಗು ಪ್ರದೇಶಗಳಲ್ಲಿ ಓವರ್ ಫ್ಲೊವ್ ಆಗುವಂತಹ ಸೇತುವೆಗಳ ಹಾಗೂ ಸಿಡಿ ಗಳ ಬಗ್ಗೆ ಮಾಹಿತಿ ಕಲೆ ಹಾಕಿ ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

     

    ಅಗ್ನಿಶಾಮಕ ಇಲಾಖೆ ವ್ಯಾಪ್ತಿಯ ಎಲ್ಲ ಬೋಟ್‌ಗಳನ್ನು, ಸಾಧನ ಸಲಕರಣೆಗಳನ್ನು, ವಾಹನಗಳನ್ನು ಸುಸ್ಥಿಯಲ್ಲಿ ಇಟ್ಟುಕೊಳ್ಳಬೇಕು. ಜೆಸ್ಕಾಮ್ ಅಧಿಕಾರಿಗಳು ತುರ್ತು ಸಂದರ್ಭಗಳಲ್ಲಿ ಖುದ್ದಾಗಿ ಭೇಟಿ ನೀಡಿ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಪಿಡಿಓ ಗಳು ಮುನ್ನೆಚ್ಚರಿಕೆ ಯಾಗಿ ಆಯಾ ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರ ಮೂಲಕ ಡಂಗುರಾ ಮೂಲಕ ಅರಿವಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

     

    ವಿವಿಧ ಆಸ್ಪತ್ರೆಗಳಲ್ಲಿ ಔಷಧಿ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಅವಶ್ಯಕ ಕ್ರಮ ಕೈಗೊಳ್ಳವ ಬಗ್ಗೆ ಸಿದ್ಧತೆಯಲ್ಲಿರಬೇಕು. ಪ್ರವಾಹದ ವೇಳೆ ಕುಡಿಯುವ ನೀರಿಗೆ ಕಲುಷಿತ ನೀರು ಸೇರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪ್ರವಾಹದ ಸಂದರ್ಭದಗಳಲ್ಲಿ ಜಾನುವಾರುಗಳ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಬಗ್ಗೆ ಸೂಕ್ತ ಪ್ರದೇಶ ಗಳನ್ನು, ತಾತ್ಕಾಲಿಕ ಶೆಡ್‌ಗಳನ್ನು ಗುರುತಿಸಿ ಇಟ್ಟು ಕೊಳ್ಳುವಂತೆ ಅವರು ಸೂಚನೆ ನೀಡಿದರು.

     

    ಅದರಂತೆ ಇತ್ತೀಚಿಗೆ ಸುರಿದ ಮಳೆ ಯಿಂದಾದ ಮನೆಹಾನಿ ಮತ್ತು ಇತರೆ ಹಾನಿಗಳ ಬಗ್ಗೆ ಜಂಟಿ ತಪಾಸಣೆ ನಡೆಸಿ ಸೂಕ್ತ ವರದಿ ಸಲ್ಲಿಸಬೇಕು . ವಿಶೇಷವಾಗಿ ಅತಿವೃಷ್ಟಿ ಮತ್ತು ಪ್ರವಾಹ ಗಳಿಂದ ಮುಂದೆ ಆಗಬಹುದಾದ ಹಾನಿಗಳ ಬಗ್ಗೆ ವಾಸ್ತವ ವರದಿ ಸಲ್ಲಿಕೆಗೆ ಸಂಬಂಧಿಸಿದ ಇಲಾಖೆ ಗಳ ಅಭಿಯಂತರರು ವಾಸ್ತವಾಂಶ ವರದಿ ಸಲ್ಲಿಸಲು ಸೂಚಿಸಿದ ಅವರು, ಭೀಮಾ ಮತ್ತು ಕೃಷ್ಣ ನದಿ ತೀರಗಳಲ್ಲಿ ಬಾಧಿತವಾಗುವ ಗ್ರಾಮಗಳ ಬಗ್ಗೆ, ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ, ಸಂಭವಿಸಬಹುದಾದ ಮಾನವ ಜೀವಹಾನಿ ಹಾಗೂ ಜಾನುವಾರು ಜೀವಹಾನಿ ತಡೆಯುವ ಬಗ್ಗೆ ಅಧಿಕಾರಿಗಳು ಸೂಕ್ತ ನಿಗಾ ಇಡಬೇಕು.

     

    ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತರು ಹಂಪಣ್ಣ ಸಜ್ಜನ, ಡಿವೈಎಸ್‌ಪಿ ಅರುಣಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೀರನಗೌಡ, ವಿದ್ಯುತ್ ಜೆಸ್ಕಾಂ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ, ಸಹಾಯಕ ಇಲಾಖೆ ಉಪನಿರ್ದೇಶಕ ಪವನ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎಲ್ಲಾ ತಾಲ್ಲೂಕು ತಹಸೀಲ್ದಾರರು ಉಪಸ್ಥಿತರಿದ್ದರು.

  • ವಡಗೇರಾ ಪಡಿತರ ಚೀಟಿ ವಿತರಣೆಯಲ್ಲಿ ಹೆಚ್ಚಿನ ಹಣ ವಸೂಲಿ: ರೈತ ಸಂಘ ಆರೋಪ

    ವಡಗೇರಾ ಪಡಿತರ ಚೀಟಿ ವಿತರಣೆಯಲ್ಲಿ ಹೆಚ್ಚಿನ ಹಣ ವಸೂಲಿ: ರೈತ ಸಂಘ ಆರೋಪ

    ಸತ್ಯಕಾಮ ವಾರ್ತೆ ವಡಗೇರಾ:
    ಪಡಿತರ ಕಾರ್ಡ ವಿತರಣೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ವಡಗೇರಾ ತಾಲೂಕು ಅಧ್ಯಕ್ಷ ವಿದ್ಯಾಧರ ಜಾಕ ನೇತೃತ್ವದಲ್ಲಿ ವಡಗೇರಾ ತಹಸೀಲ್ದಾರರಿಗೆ ದೂರು ಸಲ್ಲಿಸಿದರು.

     

    ಈ ವೇಳೆ ಮಾತನಾಡಿದ ಅವರು ಪಡಿತರ ಚೀಟಿಗಾಗಿ ನೂತನವಾಗಿ ಅರ್ಜಿ ಸಲ್ಲಿಸಿ ಎರಡು ಮೂರು ವರ್ಷಗಳ ಕಳೆದರೂ ಕೂಡಾ ಪಡಿತರ ಚೀಟಿಗಳನ್ನು ನೀಡದೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಸಿಬ್ಬಂದಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

     

    ತಾಲೂಕಿನ ದೂರದ ಗ್ರಾಮಗಳಿಂದ ದಿನನಿತ್ಯ ನೂರಾರು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರು ಪಡಿತರ ಚೀಟಿ ಪಡೆದುಕೊಳ್ಳಲು ಅಲೆದಾಡಿ ಹೈರಾಣಗುತ್ತಿದ್ದಾರೆ ಬಹಳಷ್ಟು ಅರ್ಜಿದಾರರಿಗೆ ಆಸ್ಪತ್ರೆಯ ಚಿಕಿತ್ಸೆಯ ಕೆಲಸಕ್ಕೆ ಪಡಿತರೆ ಚೀಟಿಗೆ ಅವಶ್ಯಕತೆ ಇದೆ ಪಡಿತರ ಚೀಟಿ ಇಲ್ಲದಿರುವುದರಿಂದ ರೋಗಿಗಳು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

     

    ಪಡಿತರ ಚೀಟಿ ಇಲ್ಲದ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗಿ ಲಕ್ಷಾನುಗಟ್ಟಲೆ ಹಣವನ್ನು ಸುರಿಯುತ್ತಿದ್ದಾರೆ ಆದರೆ ಆಹಾರ ಇಲಾ ಅಧಿಕಾರಿಗಳು ತೀವ್ರ ನಿರ್ಲಕ್ಷ ವಹಿಸಿ ಸರ್ವರ್ ನೆಪ ಹೇಳಿ ವಾಪಸ್ ಕಳಿಸುತ್ತಿದ್ದಾರೆ ಹೆಚ್ಚಿನ ದುಡ್ಡು ನೀಡಿದವರಿಗಷ್ಟೇ ಪಡಿತರ ಚೀಟಿ ವಿತರಣೆ ಮಾಡುತ್ತಿರುವುದು ಈಗಾಗಲೇ ನಮ್ಮ ರೈತ ಸಂಘದ ಗಮನಕ್ಕೆ ಬಂದಿದೆ ತಹಸೀಲ್ದಾರರು ತಪ್ಪಿಸ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಬಾಕಿ ಉಳಿದಿರುವ ಪಡಿತರ ಚೀಟಿಗಳನ್ನು ಕೂಡಲೇ ವಿತರಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.

     

    ಮನವಿಗೆ ಸ್ಪಂದಿಸಿದ ತಹಸೀಲ್ದಾರರು ಬಾಕಿ ಪಡಿತರ ಚೀಟಿಗಳ ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಯಾರಾದರೂ ಹಣದ ಬೇಡಿಕೆ ಇಟ್ಟಿದ್ದು ಕಂಡುಬAದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

     

    ಈ ಸಂದರ್ಭದಲ್ಲಿ ರೈತ ಸಂಘಟನೆಯ ಮುಖಂಡರುಗಳಾದ ಶರಣು ಜಡಿ, ಸತೀಶ್ ಪೂಜಾರಿ, ನಿಂಗಪ್ಪ ಕುರ್ಕಳ್ಳಿ, ಅಶೋಕ್ ಚಿನ್ನಿ, ಹಳ್ಳೆಪ್ಪ ತೇಜೇರ, ನಾಗರಾಜ್ ಸ್ವಾಮಿ ಇನ್ನಿತರರು ಇದ್ದರು

  • ರೈತರ ಬದುಕಿನ ಜತೆ ಚೆಲ್ಲಾಟ ಬೇಡ; ಸರ್ಕಾರಕ್ಕೆ ದೇಸಾಯಿ ಅಭಿಮಾನಿಗಳ ಆಗ್ರಹ.!

    ರೈತರ ಬದುಕಿನ ಜತೆ ಚೆಲ್ಲಾಟ ಬೇಡ; ಸರ್ಕಾರಕ್ಕೆ ದೇಸಾಯಿ ಅಭಿಮಾನಿಗಳ ಆಗ್ರಹ.!

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ:

    ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಆರಂಭಿಸಲಾಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಡೆತನದ ಸಿದ್ಧಸಿರಿ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯಾಚರಣೆಗೆ ಸಮ್ಮತಿ ಪತ್ರ ನೀಡುವಂತೆ ಹೈಕೋರ್ಟ್‌ ಆದೇಶಿಸಿದ್ದರೂ ರಾಜ್ಯದ ವಾಯುಮಾಲಿನ್ಯ ಇಲಾಖೆ ಅಧಿಕಾರಿಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನಿಯ ಎಂದು ಮಾಜಿ ಜಿ.ಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.

     

    ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಿದ್ಧಸಿರಿ ಸಕ್ಕರೆ ಕಾರ್ಖಾನೆ ರೈತರಿಗೆ ಕಬ್ಬು ನುರಿಅಲು ಅನುಕೂಲ ಆಗಲೆಂದು ಪ್ರಾರಂಭವಾಗಿದೆ. ಈ ಕಾರ್ಖಾನೆ ಆರಂಭ ಮಾಡಿದರೆ ಈ ಭಾಗದ ಹಲವು ನಿರುದ್ಯೋಗಿಗಳಿಗೆ ಉದ್ಯೋಗ ದೊರಕಲಿದೆ. ಇದರಿಂದ ಗುಣಮಟ್ಟದ ಶಿಕ್ಷಣ, ಆರೋಗ್ಯ, ರೈತರಿಗೆ ಉತ್ತಮ ಬೆಂಬಲ ಬೆಲೆ ಸೇರಿ ಹಲವು ಅನುಕೂಲ ಆಗಲಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ವಾಯುಮಾಲಿನ್ಯದ ನೆಪ ಹೇಳಿ ಕಾರ್ಖಾನೆ ಬಂದ್ ಮಾಡಿಸಿದೆ. ಸಿದ್ಧಸಿರಿ ಕಾರ್ಖಾನೆಯಿಂದ ಮಾತ್ರ ಮಾಲಿನ್ಯ ಆಗುತ್ತಿದೆಯಾ? ಸಿಮೆಂಟ್ ಕಾರ್ಖಾನೆಗಳು, ಪವರ್ ಪ್ಲಾಂಟ್‌ಗಳು ಸೇರಿ ಇತರೆ ಕಂಪನಿಗಳಿಂದ ಮಾಲಿನ್ಯ ಆಗುತ್ತಿಲ್ಲವೇ ಎಂದು ದೇಸಾಯಿ ಅಭಿಮಾನಿಗಳು ಪ್ರಶ್ನಿಸಿದರು.

     

    ಕಾರ್ಖಾನೆ ಆರಂಭಿಸಿದರೆ 2 ಸಾವಿರ ಜನರಿಗೆ ಉದ್ಯೋಗ ದೊರೆಯುತ್ತದೆ. ಸಾವಿರಾರು ರೈತರಿಗೆ ಲಾಭವಾಗುತ್ತಿದೆ. ಆದರೆ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಹೈಕೋರ್ಟ್ ಆದೇಶವಿದ್ದರೂ ಕಾರ್ಖಾನೆ ಮರು ಆರಂಭಕ್ಕೆ ಅನುಮತಿ ನೀಡುತ್ತಿಲ್ಲ. ಈ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಿದೆ ಎಂದರು.

     

    ಇದು ಕೇವಲ ರಾಜಕೀಯ ಪ್ರೇರಿತ. ಕಾಂಗ್ರೆಸ್ ಸರ್ಕಾರದ ಈ ಧೋರಣೆಯನ್ನು ರೈತರು ಗಮನಿಸುತ್ತಿದ್ದಾರೆ. ಕಾರ್ಖಾನೆ ಬಂದ್ ಆದ ಪರಿಣಾಮ ಕಬ್ಬು ಬೆಳೆದ ರೈತರು ಕಂಗಾಲಾಗಿದ್ದಾರೆ. ಈ ಕೂಡಲೇ ವಾಯುಮಾಲಿನ್ಯ ಇಲಾಖೆ ಅಧಿಕಾರಿಗಳು ಕೋರ್ಟ್‌ನ ಆದೇಶ ಪಾಲಿಸಿ ಅನುಮತಿ ನೀಡಬೇಕು ಎಂದು ಪ್ರಭುಗೌಡ ದೇಸಾಯಿ ಅಭಿಮಾನಿಗಳು ಆಗ್ರಹಿಸಿದರು.

     

    ಸಿಎಂ ಸಿದ್ದರಾಮಯ್ಯ ಯಾರಿಗೂ ಬಗ್ಗದೆ, ಅರಣ್ಯ ಇಲಾಖೆ ಸಚಿವರಾದ ಈಶ್ವರ ಖಂಡ್ರೆ ಅವರು ನಿಮ್ಮ ಅಧಿಕಾರಿಗಳಿಗೆ ರಾಜಕೀಯ ಮಾಡುವುದನ್ನು ಬಿಟ್ಟು ಯತ್ನಾಳವರ ಕಾರ್ಖಾನೆ ಪ್ರಾರಂಭ ಮಾಡಲು ಸೂಚನೆ ನೀಡಿ, ಪ್ರಾರಂಭ ಮಾಡಲು ಅನುಮತಿ ನೀಡದೆ ಇದ್ದರೆ ನಿಮ್ಮ ವಿರುದ್ಧ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುದ್ದೇಬಿಹಾಳ ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಪ್ರಭುಗೌಡ ದೇಸಾಯಿ ಅಭಿಮಾನಿಗಳ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಪ್ರಕಾಶ್ ಗೌಡ ಪಾಟೀಲ್ ಶಿವು ದಡ್ಡಿ, ಶಶಿಧರ ಹಿರೇಮಠ, ಬಸಯ್ಯ ಹಿರೇಮಠ ಇದ್ದರು.

     

    ಯಾವುದೇ ಸರ್ಕಾರವಿರಲಿ, ಎಲ್ಲ ಸರ್ಕಾರಗಳು ರೈತರ ಹಿತಕ್ಕಾಗಿ ಇದೆ. ಆದರೇ ಅದೆಲ್ಲವನ್ನು ಬಿಟ್ಟು ರೈತರ ಕೃಷಿ ಜೀವನದ ಜತೆಗೆ ಆಟವಾಡುವಲ್ಲಿ ಸರ್ಕಾರ ಸಾಮಥ್ರ್ಯ ತೋರುತ್ತಿದೆ. ಪಕ್ಷಬೇಧ ಮರೆತು ಸರ್ಕಾರ ರೈತರ ಹಿತದೃಷ್ಟಿಯನ್ನು ಕಾಪಾಡಬೇಕೆಂದರೆ, ಸಿದ್ದಸಿರಿ ಇಥೆನಾಲ್ ಘಟಕ ಪ್ರಾರಂಭಗೊಳಿಸಿಬೇಕು.

    ಭೀಮನಗೌಡ ಟಕ್ಕಳಕಿ

  • ಬೃಹನ್ಮಠದ ಆಶಯದಂತೆ ಶ್ರೀಗಳಿಂದ ಬಸವತತ್ವ ಪ್ರಚಾರ:ಶಿವಾನಂದ ಕಳಸದ.

    ಬೃಹನ್ಮಠದ ಆಶಯದಂತೆ ಶ್ರೀಗಳಿಂದ ಬಸವತತ್ವ ಪ್ರಚಾರ:ಶಿವಾನಂದ ಕಳಸದ.

    ಸತ್ಯಕಾಮ ವಾರ್ತೆ ಗುರುಮಠಕಲ್:

    ಚಿತ್ರದುರ್ಗದ ಶ್ರೀ ಬೃಹನ್ಮಠದ ಅಶಯದಂತೆ ಬಸವತತ್ವ ಪ್ರಚಾರ ಗಡಿನಾಡಿನಲ್ಲಿ ಖಾಸಾಮಠದ ಶ್ರೀಗಳು ಬಸವತತ್ವ ಪ್ರಚಾರಕಾರ್ಯ ಶ್ಲಾಘನೀಯವಾಗಿದೆ ಎಂದು ಚಿತ್ರದುರ್ಗ ಬೃಹನ್ಮಠ ವಿದ್ಯಾಪೀಠದ ಅಧ್ಯಕ್ಷ ಶಿವಯೋಗಿ.ಸಿ.ಕಳಸದ ಹೇಳಿದರು.

     

    ಪಟ್ಟಣದ ಖಾಸಾಮಠ ಆವರಣದಲ್ಲಿ ಅನುಭಾವ ಶ್ರಾವಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,ಯಾವುದೇ ಮಠ ಮಾನ್ಯಗಳು ಬೆಳೆಯಲು ಭಕ್ತರ ಸಹಕಾರ ಅತಿ ಮುಖ್ಯ,ಐತಿಹಾಸಿಕ ಮತ್ತು ಚಾರಿತ್ರಿಕ ಇತಿಹಾಸವುಳ್ಳ ಖಾಸಾಮಠವನ್ನು ಅಭಿವೃದ್ಧಿ ಗೊಳಿಸಲು ಶ್ರೀ ಮಠದ ಸದ್ಭಕ್ತರ ಸೇವೆ ಸಹಕಾರ ಅನನ್ಯವಾಗಿದೆ ಹೇಳಿದರು.

     

    ಮಾನವನ ಜೀವನವು ವಚನ ಸಾಹಿತ್ಯ ಎಂಬ ದರ್ಶನಗಳ ಮೇಲೆ ಅವಲಂಬಿತವಾಗಿದೆ.ಬಸವಾದಿ ಶರಣರ ಜೀವನ ಇಂದಿಗೂ ಪ್ರೇರಕವಾಗಿವೆ. ಯಾವುದೇ ಜಾತಿ ಬೇಧವಿಲ್ಲದೆ ಬಸವಾದಿ ಶರಣರ ಶರಣತತ್ವಚಿಂತನೆ, ದಾಸೋಹ,ಅಕ್ಷರ,ಶಿಕ್ಷಣ ಸೇರಿದಂತೆ ಪ್ರತಿ ಶ್ರಾವಣಮಾಸದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಮಾಜಕ್ಕೆ ಪರಿಚಯಿಸುವ ಜೊತೆಗೆ ಹಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕ ತಮ್ಮದೇ ಆದ ವಿಶಿಷ್ಟ ಕಾಯಕ ಸೇವೆ ಸಲ್ಲಿಸುತ್ತಿರುವ ಖಾಸಾಮಠದ ಶ್ರೀ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮಿಗಳ ಕಾರ್ಯವೈಖರಿ ಬೃಹನ್ಮಠ ಆಡಳಿತ ಮಂಡಳಿಗೆ ತೃಪ್ತಿ ತಂದಿದೆ ಎಂದರು.

     

    ರಾಯಷೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಹಾಂತಗೌಡ ಪಾಟೀಲ್ ಭಾಗೋಡಿ ಮಾತನಾಡಿ,ಬಸವಾದಿ ಶರಣರ ವಚನ ಸಾಹಿತ್ಯದ ಅನುಭಾವವನ್ನು ಜೀವನದಲ್ಲಿ ಆಚರಿಸಿ ನಡೆದರೆ ಜೀವನದ ಏರು ತೊಡರು,ಕಷ್ಟಗಳನ್ನು ಸಲೀಸಾಗಿ ದಾಟಬಹುದು.ನನ್ನ ಜೀವನದಲ್ಲಿ ನಡೆದ ಅನೇಕ ಘಟನೆಗಳು ಸನ್ನಿವೇಶಗಳೇ ಸಾಕ್ಷಿಯಾಗಿದೆ. ಖಾಸಾಮಠದ ಶ್ರೀಗಳ ಮಾರ್ಗದರ್ಶನ ನಮಗೆಲ್ಲಾ ತುಂಬ ಪ್ರೇರಣೆ ನೀಡಿದೆ ಎಂದರು.

     

    ೧೧ ದಿನಗಳ ಅನುಭಾವ ಶ್ರಾವಣ ಪ್ರವಚನ ಮಾಲಿಕೆ ಕಾರ್ಯಕ್ರಮಕ್ಕೆ ಸಹಕರಿಸಿದ ಭಕ್ತರನ್ನು ಸನ್ಮಾನಿಸಲಾಯಿತು.

     

    ಕಾರ್ಯಕ್ರಮದಲ್ಲಿ ಅಖಿಲ ಭಾರತ ಚೀರಶೈವ ಮಹಾಸಭಾ ಯಾದಗಿರಿ ಜಿಲ್ಲಾ ಅಧ್ಯಕ್ಷ ಚನ್ನಪ್ಪಗೌಡ ಮೋಸಂಬಿ,ಎಸ್ ಎಲ್ ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಉದ್ಯಮಿ ನರೇಂದ್ರ ರಾಠೋಡ,ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ,ನಾಗಭೂಷಣ ಅವಂಟಿ,ಸರಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಸಂತೋಷ ಕುಮಾರ ನೀರಟ್ಟಿ,ಶ್ರಾವಣಮಾಸಾಚರಣೆ ಸಮೀತಿ ಅಧ್ಯಕ್ಷ ನರಸರೆಡ್ಡಿ ಪೊಲೀಸ್ ಪಾಟೀಲ್ ಗಡ್ಡೆಸೂಗೂರ,ಕಾರ್ಯಕ್ರಮ ನಿರೂಪಿಸಿದ ಶಿಕ್ಷಕ ಕರಿಬಸವರಾಜ ಸಜ್ಜನ್ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು,ಗಣ್ಯರು,ಮಹಿಳೆಯರು ಭಾಗವಹಿಸಿದ್ದರು.

  • ಕುಂಟೋಜಿ ಬಸವೇಶ್ವರ ಜಾತ್ರೆ ಆರಂಭ.!

    ಕುಂಟೋಜಿ ಬಸವೇಶ್ವರ ಜಾತ್ರೆ ಆರಂಭ.!

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ;

    ತಾಲೂಕಿನ ಕುಂಟೋಜಿ ಗ್ರಾಮದ ಶ್ರೀ ಬಸವೇಶ್ವರ ಐತಿಹಾಸಿಕ ದೇವಾಲಯವಾಗಿದ್ದು ಸಾವಿರಾರು ವರ್ಷಗಳ ಇತಿಹಾಸದಾಗಿದೆ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಜಾತ್ರೆ ಜರುಗುತ್ತದೆ ಅದರಂತೆ ಸೆಪ್ಟೆಂಬರ್ 2 ಸೋಮವಾರದಿಂದ ಶುಕ್ರವಾರದವರೆಗೆ ಐದು ದಿನಗಳ ಕಾಲ ಅತಿ ವಿಜೃಂಭಣೆ ಜಾತ್ರೆ ಜರುಗಲಿದೆ ಎಂದು ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ತಿಳಿಸಿದರು.

    ಶನಿವಾರ ದೇವಸ್ಥಾನದ ಯಾತ್ರಾ ನಿವಾಸದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಸವೇಶ್ವರ ಜಾತ್ರಾ ಮಹೋತ್ಸವ ಸೆ.2 ರಿಂದ 6 ರವರೆಗೆ ನಡೆಯಲಿದ್ದು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೋಮವಾರದಂದು ಬೆಳಿಗ್ಗೆ ಬಸವಣ್ಣನಿಗದ ಮಹಾಪೂಜೆ, ಮಧ್ಯಾಹ್ನ ಕಳಸದ ಮೆರವಣಿಗೆ ನಂತರ ಕಳಸ ಶಿಖರಕ್ಕೇರುವುದು. ಅಂದೇ ರಾತ್ರಿ ‘ಖಾನಾವಳಿ ಚನ್ನಿ’ ನಾಟಕ ಇರಲಿದ್ದು, ಕುಂಟೋಜಿ ಸಂಸ್ಥಾನ ಮಠದ ಗುರು ಚನ್ನವೀರ ಶಿವಾಚಾರ್ಯ ಸಾನಿಧ್ಯ, ಉದ್ಘಾಟನೆಯನ್ನು ಶಾಸಕ ಸಿ.ಎಸ್ ನಾಡಗೌಡ, ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.

    ಸೆ.3 ರಂದು ಬೆಳಿಗ್ಗೆ ಸಕಲ ವಾಧ್ಯ-ವೈಭವದೊಂದಿಗೆ ಪಲ್ಲಕ್ಕಿ ಉತ್ಸವದ ಬಳಿಕ ಸಂಗ್ರಾಣಿ ಕಲ್ಲು, ಚೀಲ, ಗುಂಡು, ಉಸುಕಿನ ಚೀಲ ಎತ್ತುವುದು. ಹಗ್ಗ ಜಗ್ಗುವ ಸ್ಪರ್ಧೆ, ಕಾಮಿಡಿ ಕಿಲಾಡಿ ಹಾಸ್ಯ ಕಾರ್ಯಕ್ರಮ ಇರಲಿವೆ. ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಸಾನಿಧ್ಯವಹಿಸುವರು. ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ದೇವಸ್ಥಾನ ಕಮಿಟಿ ಉಪಾಧ್ಯಕ್ಷ ಆನಂದ ಗಸ್ತಿಗಾರ ವಹಿಸಲಿದ್ದಾರೆ.

    ಸೆ. 4 ರಂದು ಎತ್ತಿನಗಾಡಿ ರೇಸ್, ಪುಟ್ಟಿ ಗಾಡಿಯ ಸುತ್ತು ಗಾಡಿ ರೇಸ್, ಟ್ರ್ಯಾಕ್ಟರ್ ಇಂಜಿನ್ ಸ್ಪರ್ಧೆ ಹಾಗೂ ಕಲಾಚಿಂಚನ ಬಳಗದಿಂದ ರಸಮಂಜರಿ ಕಾರ್ಯಕ್ರಮ ಇರಲಿದ್ದು ಯಂಕಂಚಿ ಹಿರೇಮಠ ಸಂಸ್ಥಾನ ಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಸಾನಿಧ್ಯ ವಹಿಸಿದರೆ, ಉದ್ಘಾಟನೆಯನ್ನು ಎಂ.ಎನ್ ಮದರಿ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ರಾಮಣ್ಣ ಹುಲಗಣ್ಣಿ ವಹಿಸುವರು.

    ಸೆ.5 ರಂದು ಗಾಡಿ ರೇಸ್, ತೆರಬಂಡಿ ರೇಸ್, ಟ್ರ್ಯಾಕ್ಟರ್ ಹಿಂಬದಿಯ ಬಲ ಪ್ರದರ್ಶನ, ಪಗಡಿ ಸ್ಪರ್ಧೆ ಇರಲಿದೆ. ಅಂದೆ ರಾತ್ರಿ ‘ಮಗ ಹೋದರು ಮಾಂಗಲ್ಯ ಮುಖ್ಯ’ ನಾಟಕ ಇದೆ. ಜಾತ್ರೆ ನಡೆಯುವ ಐದು ದಿನಗಳು ಅನ್ನಸಂತರ್ಪಣೆ ಇರಲಿದೆ.

    ಈ ದೇವಸ್ಥಾನದ ಉತ್ತರಕ್ಕೆ ಅಲ್ಲಿಸಾಬ ದರ್ಗಾ, ದಕ್ಷಿಣಕ್ಕೆ ಗಂಗಪ್ಪಯ್ಯನ ಗುಡಿ, ಪಶ್ಚಿಮಕ್ಕೆ ಘನಮಠೇಶ್ವರ, ಪೂರ್ವಕ್ಕೆ ಮಳಿ(ಮಳೆ) ಬಸವೇಶ್ವರ ದೇವಸ್ಥಾನಗಳ ಮದ್ಯಭಾಗದಲ್ಲಿ ನೆಲೆಸಿರುವನೇ ಕುಂಟೋಜಿ ನಂದಿ ಬಸವಣ್ಣ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ದೇವಸ್ಥಾನಕ್ಕೆ ಕಲ್ಯಾಣ ಚಾಲುಕ್ಯ ಜಯಸಿಂಹ-2, ಸೋಮೇಶ್ವರ- ಮತ್ತು ಮಾದವಸಿಂಗನವರು ದಾನಧರ್ಮ ಮಾಡಿದ ಮಾಹಿತಿಯು “ಸೌತ್ ಇಂಡಿಯನ್ ಇನ್ಸಕ್ರೀಪ್ಸ್‌ಷನ್” ಬುಕ್ಕಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ ಎಂದು ಜಾತ್ರಕಮಿಟಿಯ ಬಸವರಾಜ ಹುಲಗಣ್ಣಿ ಹೇಳಿದರು.

    ಪ್ರತಿ ವರ್ಷ ಶ್ರಾವನ ಮಾಸದ ಕೊನೆಯ ಸೋಮವಾರದಂದು ನಡೆಯುವ ಕುಂಟೋಜಿ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನದ ಜಾತ್ರೆ ದೊಡ್ಡ ಪ್ರಾಮಾಣದಲ್ಲಿ ನಡೆಯುತ್ತಿದೆ. ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಅದರಂತೆ ಎಲ್ಲಾ ಭಕ್ತರು ಬಂದು ಪಾಲ್ಗೊಂಡು ಬಸವಣ್ಣನ ಕೃಪೆಗೆ ಪಾತ್ರರಾಗಿ, ಜಾತ್ರೆ ನಡೆಯುವ ಐದು ದಿನವೂ ಉಪಹಾರ ವವ್ಯಸ್ಥೆ ಕಲ್ಪಿಸಲಾಗಿದೆ ಎಂದು ಜಾತ್ರಾ ಕಮಿಟಿ ಅಧ್ಯಕ್ಷ ತಿಳಿಸಿದರು.

    ಈ ಸಂದರ್ಭದಲ್ಲಿ ಜಾತ್ರಾ ಕಮಿಟಿ ಉಪಾಧ್ಯಕ್ಷ ಆನಂದ್ ಗಸ್ತಿಗಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ನಾಟೇಕಾರ, ಖಜಾಂಚಿ ಬಸನಗೌಡ ಬಿರಾದಾರ, ಸದಸ್ಯರಾದ ಸಂಗಯ್ಯ ಮಠ್, ನಾಗಳಿಂಗಯ್ಯ ಮಠ, ವೀರಭದ್ರ ಪತ್ತಾರ, ನಾಗೇಶ ಸಜ್ಜನ್, ಪ್ರಕಾಶ ಹೂಗಾರ್, ವೀರಬಸ್ಸು ಊರಾನ, ಬಸವರಾಜ ಮಡಿವಾಳರ, ಹುಚ್ಛೆಸಾಬ ನಾಲತವಾಡ, ಹಣಮಂತ ಕುಂಬಾರ, ಮುತ್ತು ಜಾವುರ, ಕುಮಾರ ಹಡಪದ, ಹಣಮಂತ ಭಜಂತ್ರಿ, ಹಣಮಂತ ನಾಯಕ, ಲಕ್ಷ್ಮಣ ಮುರಾಳ, ದುರ್ಗಪ್ಪ ಕವಡಿಮಟ್ಟಿ ಹಾಗೂ ಗುರುಪಾದಪ್ಪ ಹೆಬ್ಬಾಳ, ಸಿದ್ದಪ್ಪ ಹೂಗಾರ, ಮಾಜಿ ಸೈನಿಕ ಬಸಯ್ಯ್ ಮಠ, ಅಧ್ಯಕ್ಷರು ಡಿಜೆ ಮಲಿಕರು ಸಂಘ ಶಿವಪ್ಪ ಕೋಲಕರ, ಗಂಗಾಧರ್ ಹುಲಗಣ್ಣಿ, ಮಲ್ಲಿಕಾರ್ಜುನ ಹೆಬ್ಬಾಳ, ಸಂತೋಷ ಬಿರಾದಾರ್, ಬಸವರಾಜ ಹುಲಗಣ್ಣಿ ಇದ್ದರು.