Category: Latest News

  • ಕನ್ನಡ ಶಾಲೆಗಳ ನಿರ್ಲಕ್ಷ್ಯ: ರಾಜ್ಯೋತ್ಸವದಂದು ಕರಾಳ ದಿನವಾಗಿ ಆಚರಣೆ

    ಕನ್ನಡ ಶಾಲೆಗಳ ನಿರ್ಲಕ್ಷ್ಯ: ರಾಜ್ಯೋತ್ಸವದಂದು ಕರಾಳ ದಿನವಾಗಿ ಆಚರಣೆ

    ಸತ್ಯಕಾಮ ವಾರ್ತೆ ಗುರುಮಠಕಲ್ :

    ಕನ್ನಡ ಮಾಧ್ಯಮ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ರಾಜ್ಯದ ಖಾಸಗಿ ಶಾಲೆಗಳಲ್ಲಿ ಕರಾಳ ದಿನ ಆಚರಿಸಲು ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ನಿರ್ಣಯ ಕೈಗೊಂಡಿದೆ ಎಂದು ಬಸವೇಶ್ವರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅಖಂಡೇಶ್ವರ ಹಿರೇಮಠ ಹೇಳಿದರು.

     

    ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಕಪ್ಪುಪಟ್ಟಿ ಧರಿಸಿ ಕರಾಳ ದಿನಕ್ಕೆ ಸಾಥ್ ನೀಡಿ ಮಾತನಾಡಿದ ಅವರು, 1995 ರ ನಂತರ ಆರಂಭವಾದ ಖಾಸಗಿ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಅನೇಕ ವರ್ಷಗಳಿಂದ ಬೇಡಿಕೆ ಇದೆ. ಆದರೆ, ಸರ್ಕಾರಗಳು ಇದಕ್ಕೆ ಮನ್ನಣೆ ನೀಡಿಲ್ಲ.

     

    ದಶಕಗಳ ಕಾಲ ಪಾಠ ಮಾಡಿದ ಶಿಕ್ಷಕರು ಅನುದಾನದ ವೇತನ ಇಲ್ಲದೆ ನಿವೃತ್ತರಾಗಿದ್ದಾರೆ.ಶಾಲೆಗಳಿಗೆ ಮಾನ್ಯತೆ ನವೀಕರಣ, ಆರ್‌ಟಿಇಗೆ ಚಾಲನೆ, ಆರ್‌ಟಿಇ ಶುಲ್ಕ ಮರುಪಾವತಿ, ಗ್ರಾಚ್ಯುಟಿ ಪಾವತಿ ಸೇರಿದಂತೆ ಇನ್ನಿತರ ಸಮಸ್ಯೆಗಳು ಇತ್ಯಾರ್ಥವಾಗಬೇಕಾಗಿದೆ ಎಂದರು.

  • ರೈಲ್ವೆ ಇಲಾಖೆಯಲ್ಲಿ 60 ಸಾವಿರ ಹುದ್ದೆಗಳ ನೇಮಕಾತಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಈ ಬಾರಿ ಅವಕಾಶ – ವಿ ಸೋಮಣ್ಣ

    ರೈಲ್ವೆ ಇಲಾಖೆಯಲ್ಲಿ 60 ಸಾವಿರ ಹುದ್ದೆಗಳ ನೇಮಕಾತಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಈ ಬಾರಿ ಅವಕಾಶ – ವಿ ಸೋಮಣ್ಣ

    ಮೈಸೂರು: ಭಾರತೀಯ ರೈಲ್ವೆ ಇಲಾಖೆಯಲ್ಲಿ ಈ ವರ್ಷ 60 ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವರಾದ ವಿ ಸೋಮಣ್ಣ ಅವರು ತಿಳಿಸಿದರು.

    ಇಂದು ವಾಕ್ ಮತ್ತು ಶ್ರವಣ ಸಂಸ್ಥೆಯ ವಿಜ್ಞಾನ ಭವನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಉದ್ಯೋಗಗಳಲ್ಲಿ ಆಯ್ಕೆಯಾದ 51000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳ ವಿತರಣೆ ಹಾಗೂ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರಿಂದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ರಾಷ್ಟ್ರೀಯ ರೋಜಗಾರ್ ಯೋಜನೆಯನ್ನು ಜಾರಿಗೆ ತಂದರು. 2014 ರಿಂದ 12 ಆವೃತ್ತಿಯಲ್ಲಿ ಉದ್ಯೋಗ ಮೇಳವನ್ನು ಮಾಡಿ ಇಲ್ಲಿಯವರೆಗೆ 14 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಇದರಿಂದ ಪ್ರತಿಭಾವಂತರಿಗೆ ಉದೋಗಗಳನ್ನು ನೀಡಲಾಗುತ್ತಿದೆ. ರೈಲ್ವೆ ಇಲಾಖೆಯಲ್ಲಿ 2014 ರಿಂದ ಇಲ್ಲಿಯವರೆಗೆ ಮಿಶನ್ ಮೋಡ್ ನಲ್ಲಿ 5.2 ಲಕ್ಷ ಉದ್ಯೋಗಳನ್ನು ನೀಡಲಾಗಿದೆ ಎಂದರು.

    ಅಂಚೆ ಇಲಾಖೆಯಲ್ಲಿ ಹೆಚ್ಚಿನ ನೇಮಕಾತಿಗಳು ನಡೆಯುತ್ತಿವೆ. ಭಾರತದಲ್ಲಿ ಕರ್ನಾಟಕ ಸಾಂಸ್ಕೃತಿಕ ರಾಜ್ಯ, ಕರ್ನಾಟಕದಲ್ಲಿ ಮೈಸೂರು ಸಾಂಸ್ಕೃತಿಕ ರಾಜಧಾನಿ.ಪ್ರಧಾನ ಮಂತ್ರಿ ಜನ ಧನ್ ಯೋಜನೆಯಡಿ ಸೌಲಭ್ಯ, ಆರೋಗ್ಯ ಸೌಲಭ್ಯ ಹೆಚ್ಚಿಸಲು ಆಯುಷ್ಮನ ಭಾರತ್ ಯೋಜನೆ, ಮುದ್ರ ಯೋಜನೆ, ಬೇಟಿ ಬಚಾವ್ ಬೇಟಿ ಪಡವೋ ಯೋಜನೆ, ಮುಂತಾದ ಯೋಜನೆಗಳನ್ನು ಜಾರಿಗೆ ನರೇಂದ್ರ ಮೋದಿಯವರ ಸರ್ಕಾರ ಜಾರಿಗೆ ತಂದು ಅಭಿವೃದ್ದಿ ಮಾಡಿದೆ. ವಾಕ್ ಮತ್ತು ಶ್ರವಣ ಸಂಸ್ಥೆಗೆ 150 ಕೋಟಿ ಅನುಧಾನ ನೀಡಿ ಇದರ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೊಡುಗೆ ನೀಡಿದೆ ಎಂದರು

    ದೇಶಕ್ಕೆ ತನ್ನದೇ ಅದ ಪರಂಪರೆ ಇದೆ ಇತಿಹಾಸ ಇದೆ. ಪ್ರತಿಯೊಬ್ಬರೂ ದೇಶ ಪ್ರೇಮವನ್ನು ಬೆಳೆಸಿಕೊಳ್ಳಿ. ಉದೋಗವನ್ನು ಪಡೆದ 51 ಸಾವಿರ ಅಭ್ಯರ್ಥಿಗಳಿಗೆ ಶುಭವಾಗಲಿ. ಮೈಸೂರು ವಿಭಾಗದಲ್ಲಿ 171 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

    ಕೊಡಗು ಮೈಸೂರು ಲೋಕಸಭಾ ಸಂಸದರಾದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ ಕಳೆದ 10 ವರ್ಷಗಳಲ್ಲಿ ಮಾನ್ಯ ಪ್ರಧಾನ ಮಂತ್ರಿ ಗಳು ವಿಕಸಿತ ಭಾರತಕ್ಕೆ ಅಡಿಪಾಯ ಇಟ್ಟಿದ್ದಾರೆ. ವಿಕಸಿತ ಭಾರತ 2047 ಕ್ಕೇ ಅಭಿವೃದ್ದಿ ಗುರಿಯನ್ನು ರೂಪಿಸಿದ್ದಾರೆ. ಸರ್ಕಾರದ ಹಲವು ಇಲಾಖೆಗಳು ದೇಶದ ಅಭಿವೃದ್ದಿ ಹಾಗೂ ಉದ್ಯೋಗ ನೀಡುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿವೆ. ಭಾರತ ಉತ್ತಮ ಭವಿಷ್ಯವನ್ನು ಹೊಂದಿದ್ದು, ವಿಕಸಿತ ಭಾರತದ ಅಬಿವೃದ್ದಿಗೆ ಪ್ರತಿಯೊಬ್ಬರೂ ಕೈಜೋಡಿಸಿ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ, ದಕ್ಷಿಣ ಕರ್ನಾಟಕ ವಿಭಾಗದ ಅಂಚೆ ಇಲಾಖೆಯ ನಿರ್ದೇಶಕರಾದ ಸಂದೇಶ್ ಮಹದೇವಪ್ಪ, ರೈಲ್ವೆ ಇಲಾಖೆಯ ಡಿ ಆರ್ ಎಂ ಶಿಲ್ಪಿ ಅಗರವಾಲ್, ಆಯುಷ್ ಸಂಸ್ಥೆ ನಿರ್ದೇಶಕರಾದ ಪುಷ್ಪಾವತಿ,

    ದಕ್ಷಿಣ ಭಾರತದ ಪೋಸ್ಟ್ ಮಾಸ್ಟರ್ ಜನರಲ್ ಮ್ಯಾನೇಜರ್ ಚಂದ್ರಶೇಖರ್ ಕಾಕುಮಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ: ಸಂಸದ ಜಿ ಕುಮಾರ ನಾಯಕ

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ: ಸಂಸದ ಜಿ ಕುಮಾರ ನಾಯಕ

    ಸತ್ಯಕಾಮ ವಾರ್ತೆ ಬೆಂಗಳೂರು:

    ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆರವರು ಅಧ್ಯಕ್ಷರಾಗಿ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆ ರಾಯಚೂರು ಸಂಸದ  ಜಿ ಕುಮಾರ ನಾಯಕ ಅವರು ಬೆಂಗಳೂರಿನಲ್ಲಿರುವ ಖರ್ಗೆಯವರ ನಿವಾಸಕ್ಕೆ ತೆರಳಿ ಅವರಿಗೆ ಶುಭ ಹಾರೈಸಿದರು.

    ಈ ವೇಳೆ ಮಾತನಾಡಿದ ಸಂಸದ ಜಿ ಕುಮಾರ ನಾಯಕ ಅವರು ಸಾರ್ವಜನಿಕರ ನೋವಿಗೆ ಸದಾ ಮಿಡಿಯುವ ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ಇನ್ನಷ್ಟು ಬಲಪಡಿಸುತ್ತಿರುವ ಖರ್ಗೆ ಅವರಿಗೆ ಶುಭ ಹಾರೈಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ‌, ಅವರ ಮಾರ್ಗದರ್ಶನದ ಮೂಲಕ ಕಾಂಗ್ರೆಸ್‌ ಪಕ್ಷ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಆಶಿಸುತ್ತೇನೆ ಎಂದರು.

    ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜ್ ರವರು ಉಪಸ್ಥಿತರಿದ್ದರು.

  • ದೇಶೀಯ ಕ್ರೀಡೆ ಕಬಡ್ಡಿಗೆ ಪ್ರೋತ್ಸಾಹ ಸಿಗಲಿ : ಶಾಸಕ ಕಂದಕೂರ

    ದೇಶೀಯ ಕ್ರೀಡೆ ಕಬಡ್ಡಿಗೆ ಪ್ರೋತ್ಸಾಹ ಸಿಗಲಿ : ಶಾಸಕ ಕಂದಕೂರ

    ಸತ್ಯಕಾಮ ವಾರ್ತೆ ಯಾದಗಿರಿ : 

    ಕ್ರಿಕೆಟ್ ಗೆ ಸಿಗುವಷ್ಟು ಮಹತ್ವ ದೇಶೀಯ ಕ್ರೀಡೆ ಕಬಡ್ಡಿಗೆ ಸಿಗಬೇಕು. ದೇಶಿಯ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹಗಳು ಸಿಗಬೇಕು, ಹಳಿಗೇರಾ ಗ್ರಾಮದ ಯುವಕರು ಉತ್ತಮ ರೀತಿಯಲ್ಲಿ ಆಯೋಜನೆ ಮಾಡಿದ್ದು ಸಂತಸವಾಗಿದೆ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

    ಮತಕ್ಷೇತ್ರದ ಹಳಿಗೇರಾ ಗ್ರಾಮದಲ್ಲಿ ಮೈಲಾಪೂರ ಶ್ರೀ ಮೈಲಾರಲಿಂಗೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

    ಕ್ರೀಡಾಪಟುಗಳ ಸಾಧನೆಯ ಹಾದಿಯಲ್ಲಿ ಸಾಕಷ್ಟು ಅಡೆತಡೆಗಳು ಬರಲಿದ್ದು, ಅವೆಲ್ಲವನ್ನು ಮೆಟ್ಟಿ ನಿಂತು ಸಾಧನೆಗೈವುದು ಅತೀ ಮುಖ್ಯ ಎಂದು ಹೇಳಿದರು.

     

    ಕಳೆದೆರಡು ದಶಕಗಳಿಂದ ಕಬ್ಬಡ್ಡಿ ಸೇರಿದಂತೆ ಯುವಕರಿಗೆ ಕ್ರೀಡಾ ಪ್ರೋತ್ಸಾಹ ನಮ್ಮ ಕುಟುಂಬದ ವತಿಯಿಂದ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುವಂತೆ ಕ್ರೀಡಾಪಟುಗಳಿಗೆ ನೀಡಲಾಗುತ್ತಿದ್ದು, ಮುಂದಿನ ದಿನದಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ನಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ಹೇಳಿದರು.

     

    ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಭೀಮರಾಯ ಮಾನಿ ಹಳಿಗೇರಾ, ಸಿದ್ದಪ್ಪ ಧರ್ಮಣ್ಣೋರ್, ಶೇಷಪ್ಪ ಹಾವನೋರ್, ನಾಗನಗೌಡ ಹಳಿಗೇರಾ, ಬಸವರಾಜ ಖಂಡಪ್ಪನೋರ್, ಜಗದೀಶ ನಾಯಕ, ಶರಣಪ್ಪಗೌಡ ಆರ್. ಹೊಸಳ್ಳಿ, ದೇವಿಂದ್ರಪ್ಪ ಗೌಡಗೇರಾ ಸೇರಿದಂತೆ ಇತರರಿದ್ದರು.

  • ಗುರಿ ಮುಟ್ಟಲು ಸತತ ಪ್ರಯತ್ನ ಮುಖ್ಯ

    ಗುರಿ ಮುಟ್ಟಲು ಸತತ ಪ್ರಯತ್ನ ಮುಖ್ಯ

    ಸತ್ಯಕಾಮ ವಾರ್ತೆ ಯಾದಗಿರಿ;

    ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿ‌ ಮುಟ್ಟಲು ಸತತ ಅಧ್ಯಾಯ, ದೃಢ ವಿಶ್ವಾಸ ನಂಬಿಕೆ ಇರಬೇಕು ಆಗ ಮಾತ್ರ ನಾವು ಗುರಿ ಮುಟ್ಟಲು ಸಾಧ್ಯವೆಂದು ಶಾಸಕ‌ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.

     

    ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಯಾದಗಿರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 2021-22ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯೋಜನೆಯಡಿಯಲ್ಲಿ ಮಂಜೂರಾದ ನಗರದ ಗಂಜ್ ಏರಿಯಾದ ಮೆಟ್ರಿಕ್ ನಂತರದ ಮಾದರಿ ಬಾಲಕರ ವಸತಿ ನಿಲಯದ ಕಟ್ಟಡ ನಿರ್ಮಾಣ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.

     

    ಸರ್ಕಾರ ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಅದನ್ನು ಸದುಪಯೋಗ ಪಡೆಸಿಕೊಂಡು ಉತ್ತರ ಶಿಕ್ಷಣ ಪಡೆದು ಉನ್ನತ ಹುದ್ದೆಗೆಳನ್ನು ಅಲಂಕರಿಸಿಕೊಳ್ಳಬೇಕೆಂದು‌ ಕಿವಿ ಮಾತು ಹೇಳಿದರು.

     

    ಉತ್ತಮ ವಸತಿ ನಿಲಯ ನಿಮ್ಮಗಾಗಿ ನಿರ್ಮಾಣಮಾಡಿದ್ದಾರೆ. ನಿಮ್ಮ ಸಮಸ್ಯೆಗಳು ಯಾವುದೇ ಇದ್ದರು ನನ್ನ ಗಮನಕ್ಕೆ ತರುವಂತೆ ಹೇಳಿದ ಅವರು ಹೆಚ್ಚಿನ ಸಮಯ ವಿದ್ಯಾಭಾಸಕ್ಕೆ ನೀಡಬೇಕು ಎಂದು ಹೇಳಿದರು.

     

    ವಸತಿ ನಿಯಮದಲ್ಲಿ ವಾರ್ಡ್ ಇರುವುದೇ ಇಲ್ಲಾ ಈ ಕುರಿತು ಅನೇಕ ದುರುಗಳು ಬರುತ್ತಿದೆ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳು ಯಾರಿಗೆ ಹೇಳಬೇಕು. ವಸತ ನಿಲಯದಲ್ಲಿ ವಾರ್ಡ್ ಇಲ್ಲದೆ ಹೋದರೆ ನೇರವಾಗಿ ನನ್ನಗೆ ಪೋನ್ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಶಾಸಕರು ಹೇಳಿದರು.

     

    ಶೌಚಾಲಯ, ವಸತಿ ನಿಲಯ, ಕಂಪ್ಯೂಟರ್ ಕೋಟೆಗಳನ್ನು ಶಾಸಕರು ವಿಕ್ಷಣೆ ಮಾಡಿದರು. ಇನ್ನೂ ಕೆಲವು ಸಣ್ಣ ಪುಟ್ಟ ಕೆಲಸಗಳನ್ನು ಪೂರ್ಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

     

    ತಾಲ್ಲೂಕ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ‌ ಸಂತೋಷ ರೆಡ್ಡಿ ಮಾತನಾಡಿ, ವಸತಿ ನಿಯದ ಅವಶ್ಯಕತೆ ನಮ್ಮ ಇತ್ತು. ಇಂದು ಉದ್ಘಾಟನೆಗೊಂಡಿರುವ ವಸತಿ ನಿಲಯದ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಂಡು ಒಳ್ಳೆಯ ವಿದ್ಯಾಭ್ಯಾಸ ಮಾಡಬೇಕು ಎಂದರು.

     

    ಈ ಸಂದರ್ಭದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಯಮಿತ ಇಲಾಖೆಯ ಕಾರ್ಯ ಪಾಲಕ ಅಭಿಯಂತರರಾದ ಧನಂಜಯ ಆರ್ , ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ಶಿವರಾಜ ಹಿಡೇದ, ಇಂಜನೀಯರ ಹೋನಪ್ಪ ಪೂಜಾರಿ, ಸುರೇಶ ರೆಡ್ಡಿ ದೇಸಾಯಿ ಸೇರಿದಂತೆ ವಸತಿ ನಿಲಯ ಮೇಲ್ವಿಚಾರಣೆ ಇದ್ದರು.

  • ಕಂದಕೂರ ನಿಷ್ಠೆಗೊಲಿದ ಜೆಡಿಎಸ್ ಜಿಲ್ಲಾಧ್ಯಕ್ಷ ಪಟ್ಟ

    ಕಂದಕೂರ ನಿಷ್ಠೆಗೊಲಿದ ಜೆಡಿಎಸ್ ಜಿಲ್ಲಾಧ್ಯಕ್ಷ ಪಟ್ಟ

    • ಯಾದಗಿರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಸುಭಾಷ ಕಟಕಟಿ ನೇಮಕ,
    • ನೇಮಕ ಪತ್ರ ಪಡೆಯುವ ವೇಳೆ ಭಾವುಕರಾದ ಕಟಕಟಿ

    ——

    ಸತ್ಯಕಾಮ ವಾರ್ತೆ ಯಾದಗಿರಿ:

    ಜೆಡಿಎಸ್ ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಸುಭಾಷ ಕಟಕಟಿಯವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಆದೇಶ ಹೊರಡಿಸಿದ್ದು, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಆದೇಶ ಪತ್ರವನ್ನು ನೀಡಿದರು.

    ಆದೇಶ ಪತ್ರ ನೀಡಿದ ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಸುಭಾಷ ಕಟಕಟಿಯವರು ಕಂದಕೂರ ಕುಟುಂಬದೊAದಿಗೆ ಹಲವು ದಶಕಗಳಿಂದಲೂ ಸಂಪರ್ಕದಿAದಿದ್ದು, ಪಕ್ಷನಿಷ್ಠೆಗೆ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ದೊರಕಿದೆ ಎಂದು ಹೇಳಿದರು.

    ಯಾದಗಿರಿ ಜಿಲ್ಲೆಯಲ್ಲಿ ಎರಡು ರಾಷ್ಟಿçÃಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಮೇಲ್ವರ್ಗದ ವ್ಯಕ್ತಿಗಳಿಗೆ ತಮ್ಮ ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿವೆ. ನಮ್ಮ ಪಕ್ಷದಿಂದ ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಬೇಕು ಎನ್ನುವ ದೃಷ್ಠಿಯಿಂದ ಹಿಂದುಳಿದ ವರ್ಗದ ಕೋಲಿ ಸಮಾಜದ ಸುಭಾಷ ಕಟಕಟಿಯವರನ್ನು ಆಯ್ಕೆ ಮಾಡಲಾಗಿದೆ. ನಮ್ಮ ಪಕ್ಷ ಪ್ರತಿಯೊಂದು ಸಮಾಜಕ್ಕೆ ಆದ್ಯತೆ ನೀಡುತ್ತದೆ, ಹಿಂದುಳಿದ ವರ್ಗವನ್ನು ಮೇಲತ್ತಬೇಕು ಎನ್ನುವ ದೃಷ್ಠಿಕೋನ ನಮ್ಮ ನಾಯಕರದ್ದಾಗಿದೆ ಎಂದು ಹೇಳಿದರು.

    ನೂತನ ಜಿಲ್ಲಾಧ್ಯಕ್ಷರು ಜಿಲ್ಲೆಯಲ್ಲಿ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸುವುದರೊAದಿಗೆ, ಜಿಲ್ಲೆಯಾದ್ಯಂತ ಕನಿಷ್ಠ ೩ ಲಕ್ಷ ಸದಸ್ಯರನ್ನು ನೋಂದಾಯಿಸಬೇಕು, ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನವನ್ನು ಅತಿಹೆಚ್ಚು ಮಾಡುವದರೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದರು.

    ಮುಂಬರುವ ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಪಕ್ಷವನ್ನು ಸದೃಢಗೊಳಿಸಿ ಅತಿಹೆಚ್ಚು ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಈಗಿನಿಂದಲೇ ಪಕ್ಷ ಸಂಘಟೆಗೆ ಒತ್ತು ನೀಡಬೇಕು ಎಂದು ಹೇಳಿದರು.

    ಸುಭಾಷ ಕಟಕಟಿಯವರು ಅಪ್ಪಾಜಿ ಕಾಲದಿಂದಲೂ ಕೂಡ ನಮ್ಮೊಂದಿಗಿದ್ದು, ಅವರು ಪಕ್ಷ ನಿಷ್ಠೆಯೊಂದಿಗೆ ನಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ, ಪಕ್ಷ ಸಂಘಟನೆಯಲ್ಲಿ ಅವರ ಪಾತ್ರವು ಇದೆ, ಅದರ ಜೊತೆಗೆ ಕಳೆದ ಬಾರಿ ಯಾದಗಿರಿ ಜಿಲ್ಲಾ ಪಂಚಾಯತಿಗೆ ಜೆಡಿಎಸ್‌ನ ಏಕೈಕ ಸದಸ್ಯರಾಗಿ ಅವರ ಧರ್ಮಪತ್ನಿ ಆಯ್ಕೆಯಾಗಿದ್ದರು ಎಂದು ಹೇಳಿದರು.

     

    ===================

    ಅಪ್ಪಾಜಿ ಆಶೀರ್ವಾದ ನನ್ನ ಮೇಲಿದೆ ಎನ್ನುವುದಕ್ಕೆ ಇದೇ ಸಾಕ್ಷಿ

    ಯಾದಗಿರಿ : ಮಾಜಿ ಶಾಸಕರಾದ ದಿ. ನಾಗನಗೌಡ ಕಂದಕೂರ ಅವರ ಆಶೀರ್ವಾದ ಸದಾ ನನ್ನ ಮೇಲಿದೆ ಎನ್ನುವುದಕ್ಕೆ ಈ ಹುದ್ದೆ ನನಗೊಲಿದಿರುವುದೇ ಸಾಕ್ಷಿಯಾಗಿದೆ ಎಂದು ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಸುಭಾಷ ಕಟಕಟಿ ಹೇಳಿದರು.

    ಆದೇಶ ಪತ್ರ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಕಳೆದ ಹಲವು ದಶಕಗಳಿಂದ ನಾನು ಕಂದಕೂರ ಕುಟುಂಬದೊAದಿಗಿದ್ದೇನೆ. ನಾನು ಹಿಂದುಳಿದ ಕೋಲಿ ಸಮಾಜಕ್ಕೆ ಸೇರಿದವನಾಗಿದ್ದರೂ ನಾಗನಗೌಡ ಕಂದಕೂರ ಅಪ್ಪಾಜಿ ಮತ್ತು ಯುವ ನಾಯಕರಾದ ಶರಣಗೌಡ ಕಂದಕೂರ ಅವರು ನನ್ನನ್ನು ಎಂದಿಗೂ ಹಿಂದುಳಿದನು ಎಂದು ನೋಡಿಲ್ಲ, ತಮ್ಮ ಮನೆಯ ಮಗನಂತೆ ನನ್ನನ್ನು ಕಂಡಿದ್ದಾರೆ, ಅದರಂತೆ ಕಳೆದ ಬಾರಿ ನನ್ನ ಧರ್ಮಪತ್ನಿಗೆ ಜಿಲ್ಲಾ ಪಂಚಾಯತ್ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದಿದ್ದರು, ಜಿಲ್ಲೆಯಲ್ಲಿ ಏಕೈಕ ಜೆಡಿಎಸ್ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದಲ್ಲದೇ, ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಲು ಕೂಡ ಕಾರಣಿಕರ್ತರಾಗಿದ್ದರೂ, ಅವರ ಅಭಿಮಾನ ಮತ್ತು ಕಾಳಜಿಯ ಭಾಗವಾಗಿ ನಮ್ಮ ಹಿಂದು ವರ್ಗಕ್ಕೆ ಜಿಲ್ಲಾಧ್ಯಕ್ಷ ಪಟ್ಟ ದೊರಕಿದೆ ಎಂದು ಸಂತಸವ್ಯಕ್ತಪಡಿಸಿದರು.

    ಜಿಲ್ಲೆಯಲ್ಲಿ ಹಿಂದುಳಿದ ವರ್ಗಕ್ಕೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಇನ್ನೂ ಹೆಚ್ಚಿನ ಬಲಬಂದAತಾಗಿದ್ದು, ಪ್ರತಿಯೊಂದು ಹೋಬಳಿ, ಗ್ರಾಮ ಮಟ್ಟದಲ್ಲಿ ಜೆಡಿಎಸ್ ಪಕ್ಷ ಸಂಘಟನೆಯನ್ನು ಕಟ್ಟಿ, ಶಾಸಕ ಶರಣಗೌಡ ಕಂದಕೂರ ನನ್ನ ಮೇಲಿಟ್ಟಿರುವ ವಿಶ್ವಾಸದೊಂದಿಗೆ ಅತಿಹೆಚ್ಚು ಸದಸ್ಯರನ್ನು ಮಾಡಿ ಜಿಲ್ಲೆಯಲ್ಲಿ ಸದೃಢ ಪಕ್ಷವಾಗಿ ಹೊರಹೊಮ್ಮಲು ಕೆಲಸ ಮಾಡುತ್ತೇನೆ ಎಂದು ಹೇಳಿದರು.

    ==========================

     

    ರಾಷ್ಟಿçÃಯ ಪಕ್ಷಗಳಿಗೆ ಸೆಡ್ಡೊಡೆಯಲು ಜೆಡಿಎಸ್ ಅಹಿಂದಕ್ಕೆ ಮಣೆ

    ಯಾದಗಿರಿ : ಜಿಲ್ಲೆಯಲ್ಲಿ ರಾಷ್ಟಿçÃಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಸೆಡ್ಡು ಹೊಡೆಯಲು ಜೆಡಿಎಸ್ ಪೂರ್ವ ತಯಾರಿ ನಡೆಸಿದ್ದು, ತಾಪಂ ಮತ್ತು ಜಿಪಂ ಚುನಾವಣೆ ಪೂರ್ವ ಹಿಂದುಳಿದ ವರ್ಗದ ಮೇಲೆ ಕಣ್ಣಿಟ್ಟು ಜಿಲ್ಲಾಧ್ಯಕ್ಷ ಪಟ್ಟವನ್ನು ಅಹಿಂದ ವರ್ಗವಾದ ಕೋಲಿ ಸಮಾಜಕ್ಕೆ ನೀಡಿದೆ.

    ಬಿಗು ಧೋರಣೆ, ಸೌಮ್ಯ ಸ್ವಭಾವ ಶಿಸ್ತಿನ ಕಾರ್ಯಕರ್ತರಾಗಿ ಪಕ್ಷದಲ್ಲಿನಿಷ್ಠೆಯಿಂದ ಕೆಲಸ ನಿರ್ವಹಿಸಿದ ಸುಭಾಷ ಕಟಕಟಿಯವರಿಗೆ ಅಧ್ಯಕ್ಷ ಪಟ್ಟ ದಕ್ಕಿರುವದು ಔಚಿತ್ಯಪೂರ್ಣವಾದದ್ದು. ಕಟಕಟಿಯವರು ಎಲ್ಲರ ಸಹಾಯ ಸಹಕಾರದೊಂದಿಗೆ ಹಿರಿಯರ ಸಲಹೆ,ಸೂಚನೆಗಳ ಮೇರೆಗೆ ಪಕ್ಷವನ್ನು ಸಂಘಟಿಸಿ, ಬಲಿಷ್ಠಗೊಳಿಸಿ ಕಾರ್ಯಕರ್ತರಿಗೆ ಸಮಾನವಾಗಿ ನೊಡಿಕೊಳ್ಳುವಂತೆ ಶಾಸಕರು ಸೂಚಿಸಿರುವುದು ಅವರಲ್ಲಿ ಕಾರ್ಯಕರ್ತರ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ.

    ಜೆಡಿಎಸ್ ಜಿಲ್ಲಾ ನೂತನ ಅಧ್ಯಕ್ಷರಾಗಿ ಸುಭಾಷ ಕಟಕಟಿ ನೇಮಕಗೊಂಡಿರುವುದು ಅವರ ಅಭಿಮಾನಗಳಲ್ಲಿ ಹರುಷದ ಹೊನಲು ಹರಿದಿದೆ.

  • ಕೃಷ್ಣ ಸೇತುವೆ ನಿರ್ಮಾಣ ವಿಳಂಬ ಅಧಿಕಾರಿಗಳ ಮೇಲೆ ಸಂಸದ ಜಿ ಕುಮಾರ ನಾಯಕ ಗರಂ

    ಕೃಷ್ಣ ಸೇತುವೆ ನಿರ್ಮಾಣ ವಿಳಂಬ ಅಧಿಕಾರಿಗಳ ಮೇಲೆ ಸಂಸದ ಜಿ ಕುಮಾರ ನಾಯಕ ಗರಂ

    • ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ
    •  ಜಲಜೀವನ್ ಮಿಷನ್ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಿರ್ವಹಿಸಿ; ಜಿ.ಕುಮಾರ್ ನಾಯಕ

    ಸತ್ಯಕಾಮ ವಾರ್ತೆ ರಾಯಚೂರು:

    ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ತ್ವರಿತ ಮತ್ತು ಪರಿಣಾಮಕಾರಿ ಜಾರಿಗೆ ಸೂಚಿಸಿದ ರಾಯಚೂರು ಲೋಕಸಭಾ ಕ್ಷೇತ್ರ ಸಂಸದರಾದ ಜಿ ಕುಮಾರ್ ನಾಯಕ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಕಾರ್ಯವೈಕರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

     

    ಶುಕ್ರವಾರ  ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮಸ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾದ ಜಿ ಕುಮಾರ ನಾಯಕರವರು ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ರಾಷ್ಟ್ರೀಯ ಹೆದ್ದಾರಿ 167 ರಸ್ತೆ ನಿರ್ಮಾಣ ಭಾಗದ ಕೃಷ್ಣಾ ನದಿ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕಾರಿಗಳ ಬೇಜವಾಬ್ದಾರಿ ಹೇಳಿಕೆಗೆ ಪ್ರತಿಕ್ರಿಯಿಸಿದವರು, ಸೇತುವೆ ನಿರ್ಮಾಣದಲ್ಲಿ ಭಾರಿ ವಿಳಂಬಕ್ಕೆ ಅಧಿಕಾರಿಗಳು ಮತ್ತು ಗುತ್ತೇದಾರರ ಕಂಪನಿ ಕಾರಣ ಎಂದು ದೂರಿದರು.

     

    ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಿರ್ವಹಿಸಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮ ವಹಿಸುವಂತೆ ಸಂಸದ ಜಿ.ಕುಮಾರ ನಾಯಕ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಲಜೀವನ್ ಮಿಷನ್ ಯೋಜನೆಯು ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ವೈಯಕ್ತಿಕವಾಗಿ  ನಳಿ ಸಂಪರ್ಕಗಳ ಮೂಲಕ ಸುರಕ್ಷಿತವಾಗಿ ಸಮರ್ಪಕ ಶುದ್ಧ ಕುಡಿಯುವ ನೀರು ಒದಗಿಸುವ  ಗುರಿಯನ್ನು ಹೊಂದಿದೆ. ಈ ಯೋಜನೆಯಡಿಯಲ್ಲಿ ನಿರ್ವಹಿಸುತ್ತಿರುವ ಕಾಮಗಾರಿಯನ್ನು ಗ್ರಾಮದಲ್ಲಿ ನೀರಿನ ಮೂಲಗಳನ್ನು ಗುರುತಿಸಿ ವೈಜ್ಞಾನಿಕವಾಗಿ ಪೈಪ್ ಅಳವಡಿಸಿ ಸಮರ್ಪಕವಾಗಿ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ವಹಿಸಿ, ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

    ಪ್ರಧಾನ ಮಂತ್ರಿ ಕೃಷಿ ಚಿಂಚ ಚಿಂಚಾಯಿ ಯೋಜನೆಗೆ ಸೌಲಭ್ಯವನ್ನು ಒದಗಿಸಬೇಕು ಯೋಜನೆಯ ಉದ್ದೇಶವನ್ನು ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಮಾಡಬೇಕು ಅಲ್ಲದೆ ಮಣ್ಣು ಆರೋಗ್ಯ ಕಾಡು ಹೆಚ್ಚಿನ ರೈತರಿಗೆ ವಿತರಣೆ ಮಾಡಬೇಕು ಆರೋಗ್ಯ ಕಾರ್ಡ್ ವಿತರಣೆ ಲಾಭದ ಕುರಿತು ಅವರಿಗೆ ಮನವರಿಕೆ ಮಾಡಬೇಕು.

    ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಜಿಲ್ಲೆಯಲ್ಲಿ ಹೆಚ್ಚಿನ ರೈತರು ನೋಂದಾವಣೆ ಮಾಡಲು ಕ್ರಮ ವಹಿಸಬೇಕು. ಯೋಜನೆಯಡಿ ಯಾವುದೇ ಲೋಪದೋಷಗಳು ಆಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಕೆಲ ಭಾಗದಲ್ಲಿ ಹೆಚ್ಚಿನ ಮಳೆಯಾಗಿದ್ದು, ಹತ್ತಿ ಬೆಳೆೆ ಹಾನಿಯಾಗಿದೆ. ರೈತರು ಸಂಬAಧಿಸಿದ ಇಲಾಖೆಯನ್ನು ಸಂಪರ್ಕ ಮಾಡಿದ್ದಲಿ ಇಲಾಖೆಯ ಅಧಿಕಾರಿಗಳು ರೈತರ ನೆರವಿಗೆ ಸ್ಪಂದಿಸಬೇಕೆAದರು.

    ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ ಅರ್ಹ ರೈತರಿಗೆ ಹೆಚ್ಚಿನ ಸಹಕಾರ ನೀಡಬೇಕು. ಅಲ್ಲದೆ ತೋಟಗಾರಿಕೆ ಇಲಾಖೆಯ ಸೌಲಭ್ಯವುಗಳನ್ನು ಒದಗಿಸಬೇಕು. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಜಿಲ್ಲೆಯಲ್ಲಿ ಉತ್ತಮ ರಸ್ತೆ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿಯಲ್ಲಿ ಯಾವುದೇ ಕಳಪೆ ಕಂಡುಬಾರದ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕು. ಜಿಲ್ಲೆಯಲ್ಲಿ ಇತ್ತೀಚಿಗೆ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಅಪಘಾತಗಳಾಗುತ್ತಿದ್ದು, ರಸ್ತೆಗಳನ್ನು ಕೂಡಲೇ ರಿಪೇರಿ ಮಾಡಿ ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲ ಮಾಡಬೇಕು. ಅಲ್ಲದೆ ರಸ್ತೆಗಳ ಮೇಲೆ ರೋಡ್ ಬ್ರೇಕ್‌ಗಳನ್ನು ಹಾಕಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕಾ ಸಂಸ್ಥೆಗಳನ್ನು ಸ್ಥಾಪಿಸಿ, ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸಬೇಕು. ಸ್ವಯಂ ಉದ್ಯೋಗ ಪ್ರಾರಂಭ ಮಾಡುವವರಿಗೆ ಹೆಚ್ಚಿನ ಸಾಲ-ಸೌಲಭ್ಯವನ್ನು ಬ್ಯಾಂಕ್‌ಗಳಿAದ ಒದಗಿಸಬೇಕೆಂದು ಹೇಳಿದರು.

    ಇದೇ ಸಂದರ್ಭದಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕರಾಮ್ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಮ್.ಪುಟ್ಟಮಾದಯ್ಯ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

  • ಜಿಲ್ಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ನೇರ ನೇಮಕಾತಿ ಪರೀಕ್ಷೆ

    ಜಿಲ್ಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ನೇರ ನೇಮಕಾತಿ ಪರೀಕ್ಷೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಜಿಲ್ಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ನೇರ ನೇಮಕಾತಿ ಪರೀಕ್ಷೆ 2024ರ ಅಕ್ಟೋಬರ್ 26 ರಂದು ಯಾದಗಿರಿ ನಗರದ 03 ಪರೀಕ್ಷಾ ಕೇಂದ್ರಗಳಲ್ಲಿ 1491 ವಿದ್ಯಾರ್ಥಿಗಳು ಮಧ್ಯಾಹ್ನ 2.30 ರಿಂದ ಸಂಜೆ 4.30ರ ವರೆಗೆ ಮತ್ತು 2024ರ ಅಕ್ಟೋಬರ್ 27 ರಂದು ಜಿಲ್ಲೆಯ 21 ಪರೀಕ್ಷಾ ಕೇಂದ್ರಗಳಲ್ಲಿ 8836 ವಿದ್ಯಾರ್ಥಿಗಳು ಬೆಳಿಗ್ಗೆ 10.30 ರಿಂದ 12.30 ಗಂಟೆಯ ವರೆಗೆ ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 4.30ರ ವರೆಗೆ 02 ಅವಧಿಗಳಲ್ಲಿ ಈ ಕೆಳಗಿನ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ತಿಳಿಸಿದ್ದಾರೆ.

     2153 ಸ ಪ ಪೂ ಕಾಲೇಜು ಯಾದಗಿರಿ, 2154–ಜವಹಾರ ಪ ಪೂ ಕಾಲೇಜು ಯಾದಗಿರಿ, 2155– ಬಾಲಕೀಯರ ಸರಕಾರಿ ಪದವಿ ಪೂರ್ವ ಕಾಲೇಜು ಯಾದಗಿರಿ, 2156–ನ್ಯೂ ಕನ್ನಡ ಪ ಪೂ ಕಾಲೇಜು ಯಾದಗಿರಿ, 2157–ಮಹಾತ್ಮ ಗಾಂಧಿ ಪ ಪೂ ಕಾಲೇಜು ಯಾದಗಿರಿ, 2158–ಡಾನ್ ಬಾಸ್ಕೊ ಪ ಪೂ ಕಾಲೇಜು ಯಾದಗಿರಿ, 2159–ಎಲ್‌ಕೆಇಟಿ ಬಾಲಕೀಯರ ಪ ಪೂ ಕಾಲೇಜು ಯಾದಗಿರಿ, 2160–ಸಭಾ ಪ ಪೂ ಕಾಲೇಜು ಯಾದಗಿರಿ, 2161–ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲೆ ವಿಭಾಗ) ಯಾದಗಿರಿ, 2162–ಸರಕಾರಿ ಪ್ರಥಮ ದರ್ಜೆ ಕಾಲೇಜು ಯಾದಗಿರಿ, 2163–ಬಾಲಕೀಯರ ಸರಕಾರಿ ಪ್ರಥಮ ದರ್ಜೆ ಕಾಲೇಜು ಯಾದಗಿರಿ, 2164–ಸ ಪ ಪೂ ಕಾಲೇಜು ಗುರುಮಿಠಕಲ್ , 2165-ಬಾಲಕೀಯರ ಸ ಪ ಪೂ ಕಾಲೇಜು ಗುರುಮಿಠಕಲ್ , 2166-ಸರಕಾರಿ ಪ್ರಥಮ ದರ್ಜೆ ಕಾಲೇಜು ಗುರುಮಿಠಕಲ್, 2167-ಸರಕಾರಿ ಪದವಿ ಪೂರ್ವ ಕಾಲೇಜು ಶಹಪ್ಮರ, 2168-ಎಸ್‌ಸಿ ಬಾಲಕೀರ ಪ ಪೂ ಕಾಲೇಜು ಶಹಪ್ಮರ, 2169–ಬಾಲಕೀಯರ ಸ ಪ ಪೂ ಕಾಲೇಜು ಶಹಪುರ, 2170-ಪ್ರಭು ಪ ಪೂ ಕಾಲೇಜು ಸುರಪ್ಮರ, 2171-ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪ ಪೂ ಕಾಲೇಜು ರಂಗAಪೇಟ, 2172–ಸ ಪ ಪೂ ಕಾಲೇಜು ರಂಗAಪ್ಭೆಟ, 2173-ಪ್ರೀಯದರ್ಶಿನಿ ಪ ಪೂ ಕಾಲೇಜು ರಂಗAಪೇಟ ಪರೀಕ್ಷೆ ಕೇಂದ್ರಗಳು ಇದೆ.

    ಪರೀಕ್ಷಾ ಕೇಂದ್ರಗಳ ಸೂತ್ತಲು 300 ಮೀಟರ ನಿಷೇದಿತ ಪ್ರದೇಶವೆಂದು ಘೋಷಿಸಲಾಗಿದೆ ಮತ್ತು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಅಳವಡಿಸಲಾಗಿ ಪರೀಕ್ಷೆಯ ಎಲ್ಲಾ ಮುಂಜಾಗೃತ ಕ್ರಮಗಳನ್ನು  ಕೈಗೊಳ್ಳಲಾಗಿದ್ದು ವಿಶೇಷವಾಗಿ ವಿದ್ಯಾರ್ಥಿಗಳು/ಪೋಷಕರ ಗಮನಕ್ಕೆ ಸದರಿ ಸ್ಪರ್ದಾತ್ಮಕ ಪರೀಕ್ಷೆಗೆ ವಸ್ತç ಸಂಹಿತೆ ಹಾಗೂ ವಿಶೇಷ ಸೂಚನೆಗಳು ಈ ಕೆಳಗಿನಂತಿರುತ್ತವೆ. ಪುರುಷ ಅಭ್ಯರ್ಥಿಗಳ ವಸ್ತç ಸಂಹಿತೆ ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಶರ್ಟ್ಗಳನ್ನು ಅನುಮತಿಸಲಾಗುವುದಿಲ್ಲವಾದ್ದರಿಂದ ಪುರಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್ಗಳನ್ನು ಧರಿಸುವುದು ಸಾದ್ಯವಾದಷ್ಟು ಕಾಲರ್‌ರಹಿತ ಶರ್ಟ್ಧರಿಸಲು ಆದ್ಯತೆ ನೀಡುವುದು. ಪ್ಯಾಂಟ್ ಮತ್ತು ಸರಳ ಪ್ಯಾಂಟ್ (ಜೇಬುಗಳು ಇಲ್ಲದಿರುವ/ಕಮ್ಮಿ ಜೇಬುಗಳಿರುವ) ಪುರುಷ ಅಭ್ಯರ್ಥಿಗಳಿಗೆ ಆದ್ಯತೆಯ ಡ್ರೆಸ್ ಕೋಡ್ ಆಗಿದೆ. ಕುರ್ತಾ ಪೈಜಾಮನ್ನು, ಜೀನ್ಸ್ ಪ್ಯಾಂಟ್ ಅನುಮತಿಸುವುದಿಲ್ಲ. ಪುರುಷ ಅಭ್ಯರ್ಥಿಗಳು ಧರಿಸುವ ಬಟ್ಟೆಗಳು ಹಗುರವಾಗಿರಬೇಕು ಅಂದರೆ ಜಿಪ್ ಪಾಕೆಟ್‌ಗಳು, ಪಾಕೆಟ್‌ಗಳು, ದೊಡ್ಡ ಬಟನ್‌ಗಳು ಮತ್ತು ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳು ಇರಬಾರದು. ಪರಿಕ್ಷಾ ಹಾಲ್ ಒಳಗೆ ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಸ್ಯಾಂಡಲ್ ಅಥವಾ ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸುವುದು ಸೂಕ್ತ. ಅಭ್ಯರ್ಥಿಗಳು ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣಗಳನ್ನು ಧರಿಸುವುದು ಅಥವಾ ಕಿವಿಯೋಲೆಗಳು, ಉಂಗುರಗಳು ಮತ್ತು ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ.

    ಮಹಿಳಾ ಅಭ್ಯರ್ಥಿಗಳ ವಸ್ತç ಸಂಹಿತೆ ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷೇಶಿಸಲಾಗಿದೆ. ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಪಟ್ಟೆಗಳನ್ನು/ಜೀನ್ಸ್ ಪ್ಯಾಂಟ್ ಧರಿಸಬಾರದು, ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಅವರಿಗೆ ಮುಜುಗರವಾಗದಂತೆ ಮತ್ತು ನಾವು ಉಲ್ಲೇಖಿಸಿರುವ ನಿಯಮದಂತೆ ಧರಿಸುವಂತೆ ನಿರ್ದೇಶಿಸಲಾಗಿದೆ.ಎತ್ತರವಾದ ಹಿಮ್ಮಡಿಯ ಶೂಗಳನ್ನು/ಚಪ್ಪಲಿಗಳನ್ನು ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂಗಳನ್ನಾಗಲಿ/ಚಪ್ಪಲಿಗಳನ್ನಾಗಲಿ ಧರಿಸಬಾರದು, ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸುವುದು ಕಡ್ಡಾಯವಾಗಿದೆ.ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಿದೆ. (ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ). ಪರೀಕ್ಷೆಯಲ್ಲಿ ಪರೀಕ್ಷಾ ದುರಾಚರಣೆಯನ್ನು ತಡೆಗಟ್ಟಲು ಪ್ರತಿ ಕೇಂದ್ರಕ್ಕೆ ವಿಶೇಷ ಜಾಗೃತದಳ ಮತ್ತು ವಿಕ್ಷಕರನ್ನು ನೇಮಿಸಿದೆ, ಪರೀಕ್ಷಾ ನಡೆಯುವ ದಿನಗಳಂದು ಯಿರಾಕ್ಸ ಅಂಗಡಿ, ಪುಸ್ತಕ ಮಳಿಗೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಪರೀಕ್ಷ ಕೇಂದ್ರಗಳಲ್ಲಿ ಯಾವುದೇ ತರಹದ ಎಲೆಕ್ಟಾçನಿಕ್ ವಸ್ತುಗಳು ಮೊಬೈಲ್, ಪೆನ್ ಡ್ರೆöÊವ್‌ಗಳು, ಇಯರ್ ಪೋನ್, ಮೈಕ್ರೋಪೋನ್‌ಗಳೂ, ಬ್ಲೂ ಟೂಥ್ ಸಾಧನಗಳು ಮತ್ತು ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿ ಒಳಗೆ ಅನುಮತಿಸಲಾಗುವುದಿಲ್ಲ. ಪರೀಕ್ಷೆಗಳನ್ನು ಪಾರದರ್ಶಕವಾಗಿ ಕೈಗೊಳ್ಳಲು ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಜಿಲ್ಲೆಯ  ಸಮಗ್ರ ಅಭಿವೃದ್ಧಿಗೆ ಬದ್ಧ – ಸಂಸದ ಜಿ ಕುಮಾರ ನಾಯಕ

    ಜಿಲ್ಲೆಯ  ಸಮಗ್ರ ಅಭಿವೃದ್ಧಿಗೆ ಬದ್ಧ – ಸಂಸದ ಜಿ ಕುಮಾರ ನಾಯಕ

    ಸತ್ಯಕಾಮ ವಾರ್ತೆ ರಾಯಚೂರು:

    ಜಿಲ್ಲೆಯ ಜನರು ಅಭಿವೃದ್ಧಿಗಾಗಿ ಕೆಲಸ  ಮಾಡುವ ಅವಕಾಶ ನೀಡಿದ್ದು ಜಿಲ್ಲೆಯಲ್ಲಿ ಜನಪರ ಸೇವೆಯನ್ನು ನೀಡಿಲು ಸಿದ್ದನಿದ್ದೇನೆ, ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವ ಜತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿರುವೆ ಎಂದು ಸಂಸದ ಜಿ ಕುಮಾರ್‌ ನಾಯಕ್‌ ಹೇಳಿದರು.

     

    ನಗರದ ಎಪಿಎಂಸಿ ಆವರಣದಲ್ಲಿನ ರೈತ ಭವನದಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವತಿಯಿಂದ ಆಯೋಜಿಸಿದ್ದ ನೂತನ ಸಂಸದರಾದ ಜಿ ಕುಮಾರ ನಾಯಕ ಹಾಗೂ ವಿಧಾನಪರಿಷತ್ ಸದಸ್ಯರಾದ ಎಂ ವಸಂತ ಕುಮಾರವರಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು  ಮಾತನಾಡಿದರು ಈ ಹಿಂದೆ ಜಿಲ್ಲಾಧಿಕಾರಿ ಸೇವೆ ಸಲ್ಲಿಸಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಕೂಡ ಸೇವೆಯನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ಅನೇಕ ಕಡತಗಳ ಪರಿಶೀಲನೇಯ ಅನುಭವವಿದೆ ವಿಶೇಷವಾಗಿ ಈ ರಾಯಚೂರು ನನ್ನ ಕರ್ಮ ಭೂಮಿಯಾಗಿದ್ದು ಈ ಭಾಗದ ಸಂಪೂರ್ಣ ಅಭಿವೃದ್ಧಿ ನನ್ನ ಧ್ಯೇಯವಾಗಿದೆ ಎಂದರು.

    ಈ ಸಂದರ್ಭದಲ್ಲಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಸನಗೌಡ ದದ್ದಲ್ ರವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಪಾಟೀಲ ಇಟಗಿ ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಗಳಾದ ಕೆ ಶಾಂತಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಹಿಳಾ ಘಟಕದ ಅಧ್ಯಕ್ಷರು ಕಾರ್ಯಕರ್ತರು ಅಭಿಮಾನಿಗಳು ಸಾರ್ವಜನಿಕ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

  • ವಿಮಾನ ನಿಲ್ದಾಣದ ಕನಸು ನನಸು : ಸಂಸದ ಜಿ ಕುಮಾರ್ ನಾಯಕ್

    ವಿಮಾನ ನಿಲ್ದಾಣದ ಕನಸು ನನಸು : ಸಂಸದ ಜಿ ಕುಮಾರ್ ನಾಯಕ್

    ಸತ್ಯಕಾಮ ವಾರ್ತೆ ರಾಯಚೂರು:

    ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ವಿಮಾನ ನಿಲ್ದಾಣದ ಕನಸಿಗೆ ಈಗ ನನಸಾಗಿದೆ ಹಲವಾರು ತೊಡಕುಗಳಿದ್ದ ಕಾರಣ ಈವರೆಗೆ ಸೈಟ್‌ ಕ್ಲಿಯರೆನ್ಸ್‌ ಸಿಕ್ಕಿರಲಿಲ್ಲ. ಈಗ ಅದು ದೊರೆತಿರುವುದು ಸಂತಸದ ಸಂಗತಿ ಎಂದು ರಾಯಚೂರು-ಯಾದಗಿರಿ ಲೋಕಸಭಾ ಸಂಸದರಾದ ಜಿ ಕುಮಾರ್‌ ನಾಯಕ್‌ ಅವರು ಹೇಳಿದರು.

     

    ಬಹುದಿನದ ಬೇಡಿಕೆಯಾದ ರಾಯಚೂರಿನ ವಿಮಾನ ನಿಲ್ದಾಣಕ್ಕೆ ಕೇಂದ್ರದ ಸಮ್ಮತಿ ದೊರೆತಿರುವ ಹಿನ್ನೆಲೆಯಲ್ಲಿ ಗುರವಾರ ರಾಯಚೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಸಂಬಂಧ ಕೇಂದ್ರ ವಿಮಾನಯಾನ ಸಚಿವರಾದ ಶ್ರೀ ರಾಮ ಮೋಹನ್‌ ನಾಯ್ಡು ಅವರನ್ನು ಎರಡು ಬಾರಿ ಭೇಟಿಯಾಗಿ ಯೋಜನೆಯ ಪ್ರಾಮುಖ್ಯತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆ. ಇದರ ಪರಿಣಾಮವಾಗಿ ಇಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ಅವರಿಂದ ಸೈಟ್ ಕ್ಲಿಯರೆನ್ಸ್ ಬಗ್ಗೆ ದಾಖಲೆಗಳನ್ನು ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.