Category: Latest News

  • ಬಿರನಕಲ್ ತಾಂಡಾ ಶಾಲೆಗೆ ನ್ಯಾಯಾಧೀಶ ಕೆ .ಮರಿಯಪ್ಪ ಭೇಟಿ

    ಬಿರನಕಲ್ ತಾಂಡಾ ಶಾಲೆಗೆ ನ್ಯಾಯಾಧೀಶ ಕೆ .ಮರಿಯಪ್ಪ ಭೇಟಿ

    ಸತ್ಯಕಾಮ ವಾರ್ತೆ ವಡಗೇರಾ:

    ತಾಲೂಕಿನ ಬೀರನಕಲ್ ತಾಂಡದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರದಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಹಾಗೂ ನ್ಯಾಯಾಧೀಶರಾದ ಗೌರವಾನ್ವಿತ ಕೆ. ಮರಿಯಪ್ಪ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಸಾಮಾಜಿಕ ಹೋರಾಟಗಾರ್ತಿ ರುದ್ರಾಂಬಿಕ ಆರ್ .ಪಾಟೀಲ್ .ಚಟ್ನಳ್ಳಿ ರವರು ಮೇಲ್ಚಾವಣಿ ದುರಸ್ತಿ ಹಾಗೂ ಮೂಲಭೂತ ಸೌಕರ್ಯಗಳು ಒದಗಿಸುವಂತೆ ಪತ್ರಿಕೆ ಹೇಳಿಕೆ ಮೂಲಕ ಮನವಿ ಮಾಡಿಕೊಂಡಿದ್ದರು. ಶುಕ್ರವಾರ ಭೇಟಿ ನೀಡಿದ ನ್ಯಾಯಾಧೀಶರು ಬಿಸಿ ಊಟದ ವ್ಯವಸ್ಥೆ ಶಾಲಾ ಕೊಣೆ ಶೌಚಾಲಯ ಹಾಗೂ ಕುಡಿಯುವ ನೀರಿನ ಪೂರೈಕೆ ಕುರಿತು ಮಾಹಿತಿ ಪಡೆದರು ಬಿಸಿ ಊಟಕ್ಕೆ ಸಂಬಂಧಿಸಿದಂತೆ ಸ್ವಚ್ಛತೆ ಕಾಪಾಡಿಕೊಳ್ಳಲು ಸಿಬ್ಬಂದಿಗಳಿಗೆ ಹೇಳಿದರು.

    ವಿದ್ಯಾರ್ಥಿಗಳೊಂದಿಗೆ ಅವರ ಸಮಸ್ಯೆಗಳ ಕುರಿತು ಚರ್ಚಿಸಿ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಿ ಕೊಡುವ ಭರವಸೆ ನೀಡಿದರು ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

  • ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳ ಥ್ರೋಬಾಲ್ ಕ್ರೀಡಾಕೂಟ ಕಾರ್ಯಕ್ರಮ

    ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ, ಪ್ರೌಢ ಶಾಲಾ ಮಕ್ಕಳ ಥ್ರೋಬಾಲ್ ಕ್ರೀಡಾಕೂಟ ಕಾರ್ಯಕ್ರಮ


    ಸತ್ಯಕಾಮ ವಾರ್ತೆ ಯಾದಗಿರಿ:
    2024-25ನೇ ಸಾಲಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಯಾದಗಿರಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಕಲಬುರಗಿ ವಿಭಾಗ ಮಟ್ಟದ 14/17 ವಯೋಮಿತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಥ್ರೋಬಾಲ್ ಕ್ರೀಡಾಕೂಟವನ್ನು ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 2024ರ ಡಿಸೆಂಬರ್ 2ರ ಸೋಮವಾರ ರಂದು ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
    ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ  ಶರಣಬಸಪ್ಪ ದರ್ಶನಾಪೂರ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ  ಎಸ್.ಮಧು ಬಂಗಾರಪ್ಪ, ಹಾಗೂ ಕರ್ನಾಟಕ ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕಛಲವಾದಿ ಟಿ.ನಾರಾಯಣಸ್ವಾಮಿ ಅವರ ಘನ ಉಪಸ್ಥಿತಿಯಲ್ಲಿ ನೆರವೇರಿಸುವರು.
    ಯಾದಗಿರಿ ವಿಧಾನಸಭಾ ಕ್ಷೇತ್ರದ ಶಾಸಕ  ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅಧ್ಯಕ್ಷತೆ ವಹಿಸುವರು. ರಾಯಚೂರು ಲೋಕಸಭಾ ಸದಸ್ಯರು  ಜಿ.ಕುಮಾರ ನಾಯಕ, ಕಲಬುರಗಿ ಲೋಕಸಭಾ ಸದಸ್ಯರು  ರಾಧಾಕೃಷ್ಣ ದೊಡ್ಡಮನಿ, ವಿಧಾನ ಪರಿಷತ್ತು ಸದಸ್ಯರು ಬಿ.ಜಿ.ಪಾಟೀಲ್, ಡಾ.ಚಂದ್ರಶೇಖರ ಬಿ.ಪಾಟೀಲ್,  ಶಶೀಲ್ ಜಿ.ನಮೋಶಿ, ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಶಾಸಕ  ಶರಣಗೌಡ ಕಂದಕೂರ, ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ  ರಾಜಾ ವೇಣುಗೋಪಾಲ ನಾಯಕ, ಯಾದಗಿರಿ ನಗರಸಭೆ ಅಧ್ಯಕ್ಷರು ಕುಮಾರಿ ಲಲಿತಾ ಅನಪೂರ, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು  ವಿನಾಯಕ ಮಾಲಿ ಪಾಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸುವರು.
    ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ, ಕಲಬುರಗಿ ಶಾಲಾ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತರು ಡಾ.ಆಕಾಶ ಎಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಗೌರವಾನ್ವಿತರಾಗಿ ಪಾಲ್ಗೊಳ್ಳುವರು.
  • ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸಂವಿಧಾನ ದಿನಾಚರಣೆ.

    ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸಂವಿಧಾನ ದಿನಾಚರಣೆ.

    ಸತ್ಯಕಾಮ ವಾರ್ತೆ ಯಾದಗಿರ:-
    ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನ ಪ್ರಸ್ತಾವನೆ ಓದಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಅವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಈ ದೇಶದಲ್ಲಿ ಜಾರಿಗೊಳಿಸಿದ ದಿನವಾದ   ನ 26 ನ್ನು  ಇಡೀ ದೇಶ ಸಂಭ್ರಮದಿಂದ ಸಂವಿಧಾನ ದಿನ ಎಂದು ಆಚರಣೆ ಮಾಡುವಂತೆ ಸರಕಾರಿ ಕಾರ್ಯಕ್ರಮ ಆಗಿ ಆದೇಶ ಮಾಡಿದವರು ಪ್ರಧಾನಿ  ನರೇಂದ್ರ ಮೋದಿ,ಅವರು ಪ್ರಧಾನಿ ಯಾದ ನಂತರ 2015 ರಲ್ಲಿ ಮಾಡಿದ ಮೊದಲ ಕೆಲಸ ಇದಾಗಿದ್ದು. ಅಂದಿನಿಂದ ಪ್ರತಿವರ್ಷ ಸಂವಿಧಾನ ದಿನ ಎಂದು ಆಚರಿಸಿಕೊಂಡು ಬಂದಿದೆಯೆಂದು ಹೇಳಿದ್ದಾರೆ.

    ಸಂವಿಧಾನವನ್ನು ಆಡಳಿತದ ಧರ್ಮ ಗ್ರಂಥವಾಗಿದೆ ಇದನ್ನು ರಚಿಸಿ ಭಾರತ ಸರ್ಕಾರಕ್ಕೆ ಸಮರ್ಪಿಸಿದ ಅತ್ಯಂತ ಸ್ಮರಣೀಯ ದಿನವಾಗಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ ಮಾತನಾಡಿದ ಅವರು ಇತ್ತೀಚಿಗೆ ಸಂವಿಧಾನದ ತಿದ್ದುಪಡಿ ಬಗ್ಗೆ ಅಥವಾ ಬದಲಾಯಿಸುವ ಬಗ್ಗೆ ಸಾಕಷ್ಟು ಚರ್ಚೆಗಳು ರಾಜಕೀಯ ವಲಯ ಹಾಗೂ ಸಾಮಾಜಿಕ ವಲಯಗಳಲ್ಲಿ ನಡೆಯುತ್ತಿದೆ ಕಳೆದ ಲೋಕಸಭಾ ಚುನಾವಣೆಯಲ್ಲಿ ವಿಶೇಷವಾಗಿ ಕಾಂಗ್ರೆಸ್ ಪಕ್ಷ ಎಲ್ಲಾ  ಪ್ರಚಾರ ಸಭೆಗಳಲ್ಲಿ ಭಾರತ ಸಂವಿಧಾನದ ಸಣ್ಣ ಪುಸ್ತಕವನ್ನು ಕೈಯಲ್ಲಿ ಹಿಡಿದು ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತದೆ ಹಾಗೂ ಈಗ ಇರುವ ರಿಸರ್ವೇಶನ್  ತೆಗೆಯುತ್ತಾರೆ ಎಂದು ವಿಷ ಬೀಜ ಬಿತ್ತಿದರು ಎಂದರು.

    ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಮಾತನಾಡಿದ ಅವರು ಕಾಂಗ್ರೆಸ್ ಪಾರ್ಟಿ ತನ್ನ ಸ್ವಾರ್ಥ ಹಿತಾಸಕ್ತಿಗಾಗಿ  ಸಂವಿಧಾನದ ತಿದ್ದುಪಡಿ ಮಾಡಿರುವುದನ್ನು, ಸಂವಿಧಾನದ ಮೂಲ ಆಶಯಗಳಿಗೆ ವಿರೋಧವಾಗಿ ನಡೆದುಕೊಂಡಿರುವುದನ್ನು  ಜನರಿಗೆ ತಿಳಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

    ಈ ಸಂದರ್ಭದಲ್ಲಿ ನಿಗಮದ ಮಾಜಿ ಅಧ್ಯಕ್ಷ ದೇವಿಂದ್ರನಾಥ ನಾದ,ವೆಂಕಟರೆಡ್ಡಿ ಅಬ್ಬೆತುಮಕೂಮಕೂರಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ,ಬಸವರಾಜ್ ಚಂಡರಕಿ,ಜಿಲ್ಲಾ ಬಿಜೆಪಿ ವಕ್ತಾರರಾದ ಹಣಮಂತ ಇಟಗಿ,ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ಸೊನ್ನದ ಮತ್ತು ಮಾರುತಿ ಕಲಾಲ್ ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೇರಿ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊನಗೇರಿ,ಮೌನೇಶ್ ಬೆಳಗೆರೆ,ಸ್ನೇಹ ರಾಸಳಕರ,ರಾಜಶೇಖರ ಕಾಡಮನೋರ, ಗೋಪಾಲ ದಾಸನಕೇರಿ,ಮಲ್ಲಿಕಾರ್ಜುನ ಜಲ್ಲಪ್ಪನೂರ,ಚಂದ್ರಶೇಖರ ಕಡೆಸೂರ,ಭೀಮಬಾಯಿ,ನಾಗಪ್ಪ ಗಚ್ಚಿನಮನಿ,ಶ್ರೀಕಾಂತ್ ಸುಂಗಲ್ಕರ,ನಾಗರೆಡ್ಡಿ ಸೇರಿದಂತೆ ಅನೇಕಕಾರ್ಯಕರ್ತರು  ಪಕ್ಷದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
  • ಮುಖ್ಯಮಂತ್ರಿಗಳ ಜೊತೆ ಸಂವಾದ ಕಾರ್ಯಕ್ರಮಕ್ಕೆ ಗ್ರಾಮೀಣ ವಿದ್ಯಾರ್ಥಿಗಳ ಆಯ್ಕೆಗೆ ಹರ್ಷ 

    ಮುಖ್ಯಮಂತ್ರಿಗಳ ಜೊತೆ ಸಂವಾದ ಕಾರ್ಯಕ್ರಮಕ್ಕೆ ಗ್ರಾಮೀಣ ವಿದ್ಯಾರ್ಥಿಗಳ ಆಯ್ಕೆಗೆ ಹರ್ಷ 

    ಸತ್ಯಕಾಮ ವಾರ್ತೆ ಗುರುಮಠಕಲ್ :

    ತಾಲೂಕಿನ ಯಲೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿಯ ಸಣ್ಣಾಮೀರ ತಂ. ಸಾಬಣ್ಣಾ ಕಟಗಿ ಶಾಪುರ ವಿದ್ಯಾರ್ಥಿ ಹಾಗೂ ಸರ್ಕಾರಿ ಪ್ರೌಢ ಶಾಲೆ ಹತ್ತೀಗೂಡುರನ ಭಾಗ್ಯ ಶ್ರೀ ತಂ. ಭೀಮರಾಯ ಯಕ್ಷಂತೀ ಗ್ರಾಮದ 10ನೇ ತರಗತಿಯ ವಿದ್ಯಾರ್ಥಿನಿ ಯಾದಗೀರ ಜಿಲ್ಲಾಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಸಭೆಯಿಂದ ರಾಜ್ಯ ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಗೆ ಆಯ್ಕೆಯಾಗಿದ್ದಾರೆ.

    ಇದೇ ದಿ 25.11.2024 ರಂದು ಕರ್ನಾಟಕ ರಾಜ್ಯ ದ ಸನ್ಮಾನ್ಯ ಮುಖ್ಯ ಮಂತ್ರಿಗಳ ಜೊತೆ ನಡೆಯುವ ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದು ಯಾದಗಿರಿ ಜಿಲ್ಲಾ ಸಂಘಟಕರು ಹಾಗೂ ಅನಂತ ಸೇವಾ ಟ್ರಸ್ಟ ನ ನಿರ್ದೇಶಕರಾದ ಶರಣಪ್ಪ. ಎಸ್. ಕಂದಕೂರ ತಿಳಿಸಿದರು.

    ಯಾದಗಿರಿ ಜಿಲ್ಲೆಯ ಮಕ್ಕಳ ಸಮಸ್ಯೆಗಳು ಹಾಗೂ ಅವರ ಅಭಿಪ್ರಾಯಗಳನ್ನು ಹೊತ್ತು ಜಿಲ್ಲೆಯ ಪ್ರತಿನಿದಿಗಳಾಗಿ ಭಾಗವಹಿಸಲಿದ್ದು ಈ ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರು ಸರ್ವ ಸಿಬ್ಬಂದಿ, ಎಸ್ ಡಿ ಎಮ್ ಸಿ ಅಧ್ಯಕ್ಷರು, ಹಾಗೂ ಎಲ್ಹೇರಿ, ಕಟ್ಟಿಗೆ ಶಾಪುರ್ ಹಾಗೂ ಯಕ್ಷಿಂತೀ, ಹತ್ತಿಗೂಡುರ್ ಗ್ರಾಮಸ್ಥರು ಅಭಿನಂದಿಸಿದ್ದಾರೆ.

    ——-

    ಗ್ರಾಮೀಣ ಪ್ರದೇಶದ ಬಡ ಮತ್ತು ಪ್ರತಿಭಾವಂತ ಮಕ್ಕಳು ಇರುವದನ್ನು ಅನಂತ ಸೇವಾ ಟ್ರಸ್ಟ ಗುರುತಿಸುತ್ತಿದ್ದು ಇದೇ ತರಹ ಹೆಚ್ಚಿನ ಅವಕಾಶಗಳು ಬಡ ವಿದ್ಯಾರ್ಥಿಗಳಿಗೆ ಸಿಗಲಿ ಎಂದು ಸಂಯೋಜಕ ಆನಂದಕುಮಾರ ಬೂದಿ ಅನಂತ ಟ್ರಸ್ಟ್ ಆಶಿಸಿದ್ದಾರೆ.

  • ನಳಗಳಿಗೆ ನಿಯಮ ಮೀರಿ ಮೋಟಾರು ಅಳವಡಿಸಿದರೆ ಕ್ರಮಕ್ಕೆ ಸೂಚನೆ

    ನಳಗಳಿಗೆ ನಿಯಮ ಮೀರಿ ಮೋಟಾರು ಅಳವಡಿಸಿದರೆ ಕ್ರಮಕ್ಕೆ ಸೂಚನೆ

    ಸತ್ಯಕಾಮ ವಾರ್ತೆ ಯಾದಗಿರಿ :

    ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರಿನ ನಳಗಳಿಗೆ ಮೋಟಾರ ಅಳವಡಿಸಬಾರದು ಎಂದು ಯಾದಗಿರಿ ನಗರಸಭೆ ಪೌರಾಯುಕ್ತರು ರಜನಿಕಾಂತ ಶೃಂಗೇರಿ ಅವರು ತಿಳಿಸಿದ್ದಾರೆ.

     

    ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರಿನ ನಳಗಳಿಗೆ ನಿಯಮ ಮೀರಿ ಮೋಟಾರುಗಳನ್ನು ಅಳವಡಿಸುತ್ತಿರುವುದರಿಂದ ಬಡಾವಣೆಯ ಕೊನೆಯ ಭಾಗದ ಮನೆಗಳಿಗೆ ಪೈಪಿನಲ್ಲಿ ನೀರು ತಲುಪದೇ ಇರುವುದರಿಂದ ಇದರಿಂದ ಅನೇಕ ಮನೆಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರು ಬರದೇ ತೊಂದರೆಯಾಗುತ್ತಿದ್ದು, ಕುಡಿಯುವ ನೀರಿನ ಕೊರತೆ ಉಂಟಾಗುತ್ತಿದೆ ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಮೋಟಾರು ಬಳಸುವುದನ್ನು ನಿಲ್ಲಿಸಿದಲ್ಲಿ ಎಲ್ಲಾ ಮನೆಗಳಿಗೆ ನೀರು ಸಿಗುವ ಸಾಧ್ಯತೆ ಇರುತ್ತದೆ. ಯಾದಗಿರಿ ನಗರದ ಸಾರ್ವಜನಿಕರಲ್ಲಿ ನಗರಸಭೆದಿಂದ ಮನವಿ ತಾವುಗಳು ತಮ್ಮ ನಳಗಳಿಗೆ ಮೋಟಾರ ಅಳವಡಿಸುವುದನ್ನು ನಿಲ್ಲಿಸಬೇಕು, ತಪ್ಪಿದಲ್ಲಿ ನಗರಸಭೆದಿಂದ ದಂಡ ವಿಧಿಸಲಾಗುವುದು ಮತ್ತು ನಗರದಲ್ಲಿರುವ ಅಕ್ರಮ ಸಂಪರ್ಕಗಳನ್ನು 2024ರ ಡಿಸೆಂಬರ್ 15ರ ಒಳಗೆ ನಗರಸಭೆದಿಂದ ನಿಗಧಿಪಡಿಸಲಾದ ಶುಲ್ಕವನ್ನು ಪಾವತಿಸಿ ಸಕ್ರಮ ಮಾಡಿಕೊಳ್ಳಲು ಸಾರ್ವಜನಿಕ ಗಮನಕ್ಕೆ ತಿಳಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಜೆಜೆಎಂ ಕಾಮಗಾರಿಯಲ್ಲಿ ಗೋಲ್ ಮಾಲ್: ಎಇಇ ವಿರುದ್ದ ಎಫ್ಐಆರ್ 

    ಜೆಜೆಎಂ ಕಾಮಗಾರಿಯಲ್ಲಿ ಗೋಲ್ ಮಾಲ್: ಎಇಇ ವಿರುದ್ದ ಎಫ್ಐಆರ್ 

    ಸತ್ಯಕಾಮ ವಾರ್ತೆ ಯಾದಗಿರಿ: 

    ಜಲಜೀವನ ಯೋಜನೆಯ ಕಾಮಗಾರಿಯಲ್ಲಿ ಸುರಪುರ ಎಇಇ ಹಣಮಂತರಾಯ ಪಾಟೀಲ್ ಅವರು ನಕಲಿ ಬಿಲ್ ಸೃಷ್ಟಿಸಿ ಗೋಲ್ ಮಾಲ್ ಮಾಡಿದ್ದಾರೆಂದು ಆರೋಪಿಸಿ ಆರ್‌ಡಬ್ಲೂಎಸ್ ಇಲಾಖೆಯ ಇಇ ಆನಂದ್ ಅವರು ಬುಧವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

     

    ಸುರಪುರ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರಾರದ ಎಇಇ ಹನುಮಂತ ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡದೇ ಕಾಮಗಾರಿಯ ಛಾಯಾಚಿತ್ರಗಳು ಕಂಪ್ಯೂಟರ್ ಮಿಕ್ಸಿಂಗ್ ಪೋಟೋ ಸೃಷ್ಠಿಸಿ, ಸರ್ಕಾರದ ಅನುದಾನ ದುರುಪಯೋಗ ಮಾಡಲು ನಕಲಿ ದಾಖಲೆಗಳನ್ನು ತಯಾರಿಸಿರುವದು ಕಂಡು ಬಂದಿದ್ದೂ, ಸಾರ್ವಜನಿಕ ಅಧಿಕಾರಿಯು ದಾಖಲೆಗಳನ್ನು ನಕಲಿಯಾಗಿ ಸೃಷ್ಠಿಸುವುದು ಅಪರಾಧ ಆಗಿರುವದರಿಂದ ಮತ್ತು ಸರ್ಕಾರದ ಅನುದಾನ ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸಿರುವದು ಕಂಡು ಬಂದಿರುವ ಹಿನ್ನಲೆ ಎಇಇ ಹಣಮಂತರಾಯ ವಿರುದ್ದ ಬಿ.ಎನ್.ಎಸ್-2023 ಆಕ್ಟ್ ಕಲಂ 336, 340 ನೇದ್ದರಡಿಯಲ್ಲಿ ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಡಾ.ಮಹೇಶ್ ಬಿರಾದಾರ ಅಧಿಕಾರ ಸ್ವೀಕಾರ

    ಡಾ.ಮಹೇಶ್ ಬಿರಾದಾರ ಅಧಿಕಾರ ಸ್ವೀಕಾರ

    ಸತ್ಯಕಾಮ ವಾರ್ತೆ ಯಾದಗಿರಿ:

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಡಾ.ಮಹೇಶ್ ಬಿರಾದಾರ ಅವರು ಅಧಿಕಾರ ಸ್ವೀಕರಿಸಿದರು.

    ಬೀದರ್ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಿಕರಾಗಿ ಸೇವೆ ಸಲ್ಲಿಸಿ ಈಗ ಯಾದಗಿರಿ ಡಿಎಚ್ ಓ ಹುದ್ದೆಗೆ ಆರೋಗ್ಯ ಇಲಾಖೆಯು ವರ್ಗಾವಣೆ ಮಾಡಿದ್ದು,ಹೀಗಾಗಿ ಡಿಎಚ್ ಓ ಆಗಿ ಡಾ.ಮಹೇಶ್ ಬಿರಾದಾರ ಅವರು ಅಧಿಕಾರ ಸ್ವೀಕರಿಸಿದರು.

    ಆರೋಗ್ಯ ಇಲಾಖೆಯಲ್ಲಿ ಸುದೀರ್ಘವಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. ಬೀದರ್ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಿಕರಾಗಿ ಎರಡುವರೆ ಸೇವೆ ಸಲ್ಲಿಸಿ ಈಗ ವರ್ಗಾವಣೆಗೊಂಡಿದ್ದಾರೆ.

  • ಗೊರುಚ ಆಯ್ಕೆಗೆ ಜಿಲ್ಲಾ ಕಸಾಪ ಹರ್ಷ

    ಗೊರುಚ ಆಯ್ಕೆಗೆ ಜಿಲ್ಲಾ ಕಸಾಪ ಹರ್ಷ

    ಸತ್ಯಕಾಮ ವಾರ್ತೆ ಯಾದಗಿರಿ :

    ಮಂಡ್ಯದಲ್ಲಿ ಆಯೋಜಿಸುತ್ತಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಾಕ್ಷರಾಗಿ ನಾಡಿನ ಹಿರಿಯ ಸಾಹಿತಿ ಗೊ. ರು. ಚನ್ನಬಸಪ್ಪ ಅವರ ಆಯ್ಕೆಯಾಗಿರುವುದಕ್ಕೆ ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಪ್ಪ ಎಸ್ ಹೊಟ್ಟಿ ಅವರು ಹರ್ಷ ವ್ಯಕ್ತಪಡಿಸಿದರು.

    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಬುಧವಾರ ನಡೆದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮೋದಲನೇಯದಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ ಜೋಷಿ ಮಾತನಾಡಿ ಈ ಸಭೆಯ ಮುಖ್ಯ ಉದ್ದೇಶ ಮಂಡ್ಯದಲ್ಲಿ ಆಯೋಜಿಸುತ್ತಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಯ ಕುರಿತು ಪ್ರಸ್ತಾಪಿಸಲಾಗುವುದು ಎಂದು ಸಭೆಗೆ ತಿಳಿಸಿದರು.

    ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಮಲೇಶಬಾಬು ಮಾತನಾಡಿ, ಸಮ್ಮೇಳನದ ಸರ್ವಾಧ್ಯಕ್ಷರನ್ನೂ ಹಿರಿಯ ಸಾಹಿತಿಗಳನ್ನು, ಸಾಹಿತ್ಯ ಕ್ಷೇತ್ರದಲ್ಲಿಯೇ ದುಡಿದವರನ್ನು ಪರಿಗಣಿಸಬೇಕು ಎಂದು ಪ್ರಸ್ತಾಪಿಸಿದರು.

    ತದನಂತರ ಯಾದಗಿರಿ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಎಸ್ ಹೊಟ್ಟಿ ಸಭೆಯಲ್ಲಿ ಮಾತನಾಡಿ, ಮಂಡ್ಯದಲ್ಲಿ ಆಯೋಜಿಸಿದ ೮೭ ನೇ ಅಖಲಿ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಹಿರಿಯ ಸಾಹಿತಿ ಜನಪದ ವಿದ್ವಾಂಸರು ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಿ ಬೆಳಿಸಿದವರಾದ ಗೊ ರು ಚನ್ನಬಸಪ್ಪ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿದರೆ ಈ ಸಮ್ಮೇಳನಕ್ಕೆ ಒಂದು ಶೋಭೆ ಬರಲಿದೆ ಎಂದು ಅವರು ಪ್ರಸ್ತಾಪಿಸಿದಾಗ ಎಲ್ಲಾ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರ ಒಪ್ಪಿಗೆ ಸೂಚಿಸಿ, ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಅಯ್ಯಣ್ಣ ಹುಂಡೇಕಾರ. ಡಾ. ಸುಭಾಷಚಂದ್ರ ಕೌಲಗಿ. ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ. ಭೀಮರಾಯ ಲಿಂಗೇರಿ. ಡಾ. ಸಿದ್ದರಾಜರೆಡ್ಡಿ. ಗೌರವ ಕೋಶ್ಯಾಧ್ಯಕ್ಷ ಬಸವರಾಜ ಅರಳಿ ಮೊಟ್ನಳಿ. ಬಸವಂತ್ರಾಯ ಗೌಡ ಮಾಲಿ ಪಾಟೀಲ. ಆರ್ ಮಹಾದೇವಪ್ಪಗೌಡ ಅಬ್ಬೆತುಮಕೂರ. ಸಿ ಎಮ್ ಪಟ್ಟೆದಾರ. ನಾಗೆಂದ್ರ ಜಾಜಿ. ಸೋಮಶೇಖರ್ ಮಣ್ಣೂರ. ನೂರಂದಪ್ಪ ಲೇವಡಿ. ಚೆನ್ನಪ್ಪ ಸಾಹು ಠಾಣಗುಂದಿ. ಡಾ. ಎಸ್ ಎಸ್ ನಾಯಕ. ಸ್ವಾಮಿದೇವ ದಾಸನಕೇರಿ. ಡಾ. ಗಾಳೆಪ್ಪ ಪೂಜಾರಿ ಜಿಲ್ಲೆಯ ಎಲ್ಲಾ ಕನ್ನಡ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು.

  • ಮಕ್ಕಳಲ್ಲಿ ಸೇವಾ ಮನೋಭಾವ ಬೆಳಸಿ: ಮಲ್ಲಿಕಾರ್ಜುನರೆಡ್ಡಿ ಕೌಳೂರು

    ಮಕ್ಕಳಲ್ಲಿ ಸೇವಾ ಮನೋಭಾವ ಬೆಳಸಿ: ಮಲ್ಲಿಕಾರ್ಜುನರೆಡ್ಡಿ ಕೌಳೂರು

    ಸತ್ಯಕಾಮ ವಾರ್ತೆ ಯಾದಗಿರಿ:

    ದೇಶದ ಸ್ವಾತಂತ್ರ್ಯ, ಐಕ್ಯತೆಗೆ ಪ್ರತೀಕವಾಗಿರುವ ಭಾರತ ಸೇವಾದಳವನ್ನು ಪ್ರತಿ ಶಾಲೆಯಲ್ಲಿ ಸಂಘಟಿಸಿ, ಶಿಕ್ಷಕರು ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಸಬೇಕು. ಮಾನವೀಯ ಮೌಲ್ಯಗಳ ಮಹತ್ವ ತಿಳಿಸಬೇಕು ಎಂದು ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನರೆಡ್ಡಿ ಕೌಳೂರು ಹೇಳಿದರು.

    ನಗರದ ಹೊರವಯದಲ್ಲಿರುವ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಯಾದಗಿರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಯಾದಗಿರಿರವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕ/ ಶಿಕ್ಷಕಿಯರಿಗೆ ಒಂದು ವಾರದ ಜಿಲ್ಲಾ ಜಿಲ್ಲಾಮಟ್ಟದ ಸಹಾಯಕ ಶಿಕ್ಷಣ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಡಾ.ನಾ.ಸು.ಹರ್ಡಿಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರಿಗೆ ಅಗತ್ಯ ತರಬೇತಿ ನೀಡುವುದಕ್ಕಾಗಿ ಈ ಕಾರ್ಯಾಗಾರ ಏರ್ಪಡಿಸಲಾಗಿದೆ. ಇಲ್ಲಿ ತಾವು ಪಡೆದ ತರಬೇತಿ ಮಕ್ಕಳಿಗೆ ವರ್ಗಾವಣೆ ಆಗುವಂತೆ ನೋಡಿಕೊಂಡಾಗ ಮಾತ್ರ ಅದಕ್ಕೊಂದು ಬೆಲೆ ಸಿಗುತ್ತದೆ ಎಂದರು.

    ಉಪನಿರ್ದೇಶಕ ಕಾರ್ಯಾಲಯದ ವಿಷಯ ಪರಿವೀಕ್ಷಕರಾದ ಎಚ್ ಹಣಮಂತನವರು ಮಾತನಾಡಿ ಕರ್ನಾಟಕ ಗಾಂಧಿ ಹೆಸರಿನಿಂದ ಖ್ಯಾತಿ ಪಡೆದಿರುವ ನಾ.ಸು.ಹರ್ಡೀಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಶಿಸ್ತು, ಧೈರ್ಯ ಹಾಗೂ ತ್ಯಾಗ ಮನೋಭಾವನೆಯನ್ನು ಹಿಂದೂಸ್ತಾನಿ ಸೇವಾದಳದ ಮೂಲಕ ಪರಿಚಯಿಸಿ ಸ್ವಾತಂತ್ರ್ಯ ಸಂಗ್ರಾಮವನ್ನು ಚುರುಕುಗೊಳಿಸಿದ ಮಹನೀಯರಲ್ಲಿ ಪ್ರಮುಖರು, ಅವರ ಸ್ಥಾಪಿತದ ಸೇವಾದಳ ಸೇವೆಯಲ್ಲಿ ಸಾರ್ಥಕತೆ ಕಂಡುಕೊಳ್ಳುವ ಸಂಸ್ಥೆಯಾಗಿದ್ದು. ಎಲ್ಲಾ ಕಾಲದಲ್ಲೂ ಈ ಸಂಸ್ಥೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜದ ಗೌರವಕ್ಕೆ ಪಾತ್ರವಾಗಿದೆ. ಮಕ್ಕಳಲ್ಲಿ ಸೇವಾದಳದ ಕುರಿತು ಅರಿವು ಮೂಡಿ ಬರಬೇಕು. ಶ್ರದ್ಧೆ, ಸಂಯಮ, ದೇಶಾಭಿಮಾನ ಹಾಗೂ ನಾಗರಿಕ ಪ್ರಜ್ಞೆಯನ್ನು ಸೇವಾದಳದ ಚಟುವಟಿಕೆಗಳಿಂದ ಬೆಳೆಯುತ್ತದೆ. ಶಿಕ್ಷಕರು ತಮ್ಮ ಕರ್ತವ್ಯದ ಜತೆ ಸೇವಾದಳದ ಚಟುವಟಿಕೆಗಳನ್ನು ರೂಢಿಸಿಕೊಂಡು ಮಕ್ಕಳಲ್ಲಿ ದೇಶಾಭಿಮಾನ ಬಿತ್ತಿ ಉತ್ತಮ ಪ್ರಜೆಗಳನ್ನಾಗಿ ನಿರ್ಮಿಸಬೇಕು, ಅಲ್ಲದೆ ಈ ಸೇವಾದಳ ರಾಷ್ಟ್ರಧ್ವಜದ ಕುರಿತು ಗೌರವ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

    ಸೇವಾದಳದ ವಿಶೇಷ ಆರು ದಿನಗಳ ಶಿಬಿರವನ್ನು ಕುರಿತು ಶಿಕ್ಷಕಿ ಆರ್.ಪಿ ಶರಣಮ್ಮ ಮಾತನಾಡಿ ಶಿಸ್ತು, ಸಮಯ ಪ್ರಜ್ಞೆ, ಉತ್ತಮ ನಡವಳಿಕೆ ಹೊಂದುವುದನ್ನು ಈ ಶಿಬಿರದಲ್ಲಿ ಕಲಿತ್ತಿದ್ದೇವೆ, ತರಬೇತಿಯು ಅತ್ಯುತ್ತಮವಾಗಿ ಮೂಡಿ ಬಂದಿದ್ದು ನಮ್ಮ ಶಾಲಾ ಮಕ್ಕಳಿಗೆ ಅನುಕೂಲಕರವಾಗಿರುವ ಹಲವು ವಿಚಾರಗಳನ್ನು ತಿಳಿದುಕೊಂಡಿದ್ದೇವೆ, ಅದನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಮೂಲಕ ಉತ್ತಮ ಸಮಾಜದ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಮುಂದಾಗುತ್ತೇವೆ ಎಂದರು.

    ನಂತರ ಶಿಕ್ಷಕಿ ಭೀಮವ್ವ ಮಾತನಾಡಿ ಸಾಮಾನ್ಯವಾಗಿ ನಾವೆಲ್ಲ ನಮ್ಮ ಶಾಲೆಗಳಲ್ಲಿ ಒಂದು ವಿಷಯಕ್ಕೆ ಸೀಮಿತವಾಗಿರುವ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತೇವೆ. ಆದರೆ ನಾವು ಎಲ್ಲಾ ವಿಷಯಗಳಲ್ಲೂ ಆಸಕ್ತಿಯುಳ್ಳ ವ್ಯಕ್ತಿತ್ವ ಹೊಂದಿರಬೇಕು ಹಾಗೂ ನೃತ್ಯ ಹಾಡುಗಾರಿಕೆ ಬರವಣಿಗೆ ಎಲ್ಲಾ ವಿಷಯಗಳನ್ನು ಬೋಧಿಸುವ ಅಭ್ಯಾಸ ಮಾಡಿಕೊಳ್ಳಬೇಕಿದೆ ಎಂಬುದು ಈ ಶಿಬಿರದಿಂದ ನನಗೆ ಅರ್ಥವಾಗಿದೆ. ಹಿರಿಯ ಶಿಬಿರರ್ಥಿಗಳ ಮಾರ್ಗದರ್ಶನದಿಂದ ಹಲವು ವಿಚಾರಗಳನ್ನು ಕಲಿತಿದ್ದೇವೆ ಎಂದರು ಹಾಗೂ ಇದೇ ಸಂದರ್ಭದಲ್ಲಿ ಶಿಬಿರಾವಧಿಯಲ್ಲಿ ತಮಗೆ ಹಿರಿಯ ತರಬೇತಿದಾರರು ನೀಡಿದ ಸಹಕರವನ್ನು ನೆನೆದರು.

    ಊಟದ ರೊಟ್ಟಿ ಬುತ್ತಿ ಅಳಸಬಹುದು ಆದರೆ ಜ್ಞಾನದ ಬಂಡಾರ ಎಂದಿಗೂ ಅಳಸುವುದಿಲ್ಲ ಎಂದು ಶಿಕ್ಷಕಿಯೊಬ್ಬರು ಅಭಿಪ್ರಾಯಪಟ್ಟರು.

    ಬಳಿಕ ಆರು ದಿನಗಳ ಶಿಬಿರದಲ್ಲಿ ಭಾಗವಹಿಸಿದ ಶಿಕ್ಷಕ/ ಶಿಕ್ಷಕಿಯರಿಗೆ, ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.

    ಬಸವಂತಪುರ ಶಾಲೆಯ ದೈಹಿಕ ಶಿಕ್ಷಕರಾದ ತುಳಜಾರವರು ನಿರೂಪಿಸಿದರು. ದೈಹಿಕ ಶಿಕ್ಷಕರಾದ ಜೋಗಪ್ಪನವರ ಸ್ವಾಗತಿಸಿದರು, ಭಾ. ಸೇ. ದಳದ ಜಿಲ್ಲಾ ಸಂಘಟೀಕರಾದ ಸೈಯದ್ ಕಮರುದ್ದೀನ್, ವಂದಿಸಿದರು.

    ಈ ಸಂದರ್ಭದಲ್ಲಿ ಭಾ. ಸೇ. ದಳದ ರಾಜ್ಯ ಉಪಾಧ್ಯಕ್ಷರಾದ ಚೆನ್ನಾರೆಡ್ಡಿ ಗೌಡ ಬಿಲಾರ್, ಪ್ರಭಾರಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳಾದ ಅನೀಲ ಕುಮಾರ, ಸರ್ಕಾರಿ ಆದರ್ಶ ವಿದ್ಯಾಲಯದದ ಮುಖ್ಯಗುರುಗಳಾದ ಶಂಕರಮ್ಮ, ನಿ. ದೈಹಿಕ ಶಿಕ್ಷಕರು ಹಾಗೂ ಭಾರತ ಸೇವಾದಳದ ನಿವೃತ್ತ ತಾಲೂಕು ಸಂಘಟಿಕರಾದ ಮಲ್ಲಿಕಾರ್ಜುನ ಬಳೆ, ಭಾ.ಸೇ.ದಳದ ಕಲ್ಬುರ್ಗಿ ಜಿಲ್ಲಾ ಸಂಘಟಿಕರಾದ ಚಂದ್ರಶೇಖರ್ ಜಮಾದಾರ್, ಚಿತ್ತಾಪುರ ತಾಲೂಕಿನ ನಿವೃತ್ತ ಸಂಘಟಿಕರಾದ ಸೈಯದ್ ಮೈಚೋದ್ದೀನ್, ಪತ್ರಕರ್ತ ಕುದಾನ್ ಸಾಬ್, ಅಜೀವ ಸದಸ್ಯರಾದ ಉಪನ್ಯಾಸಕ ಎಲ್. ಎನ್ ರೆಡ್ಡಿ, ವಿರೂಪಕ್ಷಯ್ಯ ದಂಡಗಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

  • “ಸುರಕ್ಷಿತ ನೈರ್ಮಲ್ಯ-ಶುಚಿತ್ವ ಕುರಿತು ಅರಿವು ಮೂಡಿಸಿ,ಶೌಚಾಲಯ ನಿರ್ಮಾಣಕ್ಕೆ ಪ್ರೇರೇಪಿಸಿ”:ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ

    “ಸುರಕ್ಷಿತ ನೈರ್ಮಲ್ಯ-ಶುಚಿತ್ವ ಕುರಿತು ಅರಿವು ಮೂಡಿಸಿ,ಶೌಚಾಲಯ ನಿರ್ಮಾಣಕ್ಕೆ ಪ್ರೇರೇಪಿಸಿ”:ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ

    ಯಾದಗಿರಿ:ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ ನೈರ್ಮಲ್ಯ, ಶುಚಿತ್ವ ಕುರಿತು ಅರಿವು ಮೂಡಿಸುವ ಜೊತೆಗೆ  ನಮ್ಮ ಶೌಚಾಲಯ-ನಮ್ಮ ಗೌರವ ಘೋಷ ವಾಕ್ಯದೊಂದಿಗೆ ಜಿಲ್ಲೆಯಾದ್ಯಂತ ಡಿಸೆಂಬರ್ 10 ರವರೆಗೆ ಜಾಗೃತಿ ಆಂದೋಲನವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾ ಪಂಚಾಯತ್ ಸಿಇಓ ಕಾರ್ಯಾಲಯದಲ್ಲಿ “ವಿಶ್ವ ಶೌಚಾಲಯ ಹಾಗೂ ವಿಶ್ವ ಮಾನವ ಹಕ್ಕುಗಳ ದಿನಾಚರಣೆ” ಅಂಗವಾಗಿ ಇಂದಿನಂದ ಡಿಸೆಂಬರ್ 10 ರವರೆಗೆ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ  ಅಂದದ ಶೌಚಾಲಯ- ಆನಂದದ ಜೀವನ ಎಂಬ ಉದ್ದೇಶದೊಂದಿಗೆ ಶೌಚಾಲಯ ಬಳಸಲು ಪ್ರೇರೇಪಿಸುವ   ಈ ವಿಶೇಷ ಆಂದೋಲನ ಯಶಸ್ವಿಯಾಗಿ ಹಮ್ಮಿಕೊಳ್ಳುವ ಕುರಿತು  ಚರ್ಚಿಸಲು  ನಡೆದ ಜಿಲ್ಲಾ ಮತ್ತು  ನೈರ್ಮಲ್ಯ ಮಿಷನ್  ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು  ಮಾತನಾಡಿದರು.

    ಈ ಆಂದೋಲನ ಅಂಗವಾಗಿ ವೈಯಕ್ತಿಕ ಗೃಹ ಶೌಚಾಲಯ  ಪರಿಶೀಲನೆ,ಸಮುದಾಯ ಶೌಚಾಲಯಗಳ ಪರಿವೀಕ್ಷಣೆ ನಡೆಸಬೇಕು.ಶೌಚಾಲಯ ರಹಿತ ಕುಟುಂಬಗಳನ್ನು  ಗುರುತಿಸಿ ಶೌಚಾಲಯ ನಿರ್ಮಾಣಕ್ಕೆ  ಪ್ರೇರೇಪಿಸುವಂತೆ ಅವರು ಸೂಚಿಸಿದರು.

    ಅದರಂತೆ ಈ ಆಂದೋಲನ ಅಂಗವಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ವಚ್ಛ, ಸುಂದರ ವೈಯಕ್ತಿಕ  ಗೃಹ ಉತ್ತಮ ಶೌಚಾಲಯ ಸ್ಪರ್ಧೆ ಹಾಗೂ  ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಉತ್ತಮ ಸಮುದಾಯ ಶೌಚಾಲಯ ಸ್ಪರ್ಧೆ ಆಯೋಜಿಸಬೇಕು.ಅದರಂತೆ  ವಿವಿಧ ಗ್ರಾಮ, ಶಾಲೆ, ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರಗಳಲ್ಲಿ ಸ್ಚಚ್ಛವಾದ ಶೌಚಾಲಯಗಳು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.  ಸಮುದಾಯ ಶೌಚಾಲಯಗಳ ನಿರ್ವಹಣೆ ಹಾಗೂ ನೀರಿನ ವ್ಯವಸ್ಥೆ, ಸುತ್ತಲೂ ಸ್ವಚ್ಛತೆ,ಇದಕ್ಕೆ ಸೂಕ್ತ ರಸ್ತೆಗಳು ಇರುವ ಬಗ್ಗೆ ಆಯಾ ಗ್ರಾಮ ಪಂಚಾಯತ್ ಅಧ್ಯಕ್ಷರು,  ಸದಸ್ಯರು ಹಾಗೂ ಪಿಡಿಓ ಗಳಿಂದ ಭೇಟಿ ಮಾಡಿಸಿ ಪರಿಶೀಲಿಸಬೇಕು. ನೀರು ಕಡ್ಡಾಯವಾಗಿ ಇರುವ ಬಗ್ಗೆ ಹಾಗೂ ನಿರ್ವಹಣಾ ಸಿಬ್ಬಂದಿ ಇರುವಂತೆ ನೋಡಿಕೊಳ್ಳಲು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

    ಶೌಚಾಲಯ ಬಳಕೆ, ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸುವ ನಿಟ್ಟಿನಲ್ಲಿ ವಿಶೇಷ ಗಮನ ನೀಡಿ, ಸೂಕ್ತ ಜಾಗೃತಿ ಮೂಡಿಸಬೇಕು.ವೈಯಕ್ತಿಕ ಶೌಚಾಲಯ  ನಿರ್ಮಿಸಿಕೊಳ್ಳುವ ಕುಟುಂಬಗಳಿಗೆ ಪ್ರೋತ್ಸಾಹಿಸುವಂತೆ  ಅವರು ಸೂಚಿಸಿದರು.

    ಇದೇ ಸಂದರ್ಭದಲ್ಲಿ ಜಲಜೀವನ್ ಮಿಷನ್ ಯೋಜನೆ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸೂಕ್ತ ಪ್ರಗತಿ ಸಾಧಿಸಲು ಅವರು ಸೂಚಿಸಿದರು.

    ತಡಿಬಿಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಮಾರೆಡ್ಡಿ ಹಾಗೂ ದೋರಣಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಚಂದ್ರಕಲಾ ಅವರಿಗೆ ಶೌಚಾಲಯ ನಿರ್ಮಾಣದ ಕಾರ್ಯಾದೇಶ ನೀಡಲಾಯಿತು.

    ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್  ಒರಡಿಯಾ,ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ಸಿ.ಬಿ.ದೇವರಮನಿ,ಸಹಾಯಕ ಕಾರ್ಯಕ್ರಮ ಅಧಿಕಾರಿ ಸಂತೋಷಕುಮಾರ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಮ್.ಎಸ್ ಪಾಟೀಲ್,ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆನಂದ  ಸೇರಿದಂತೆ ಜಿಲ್ಲಾ ಪಂಚಾಯತ್ ,ಆರೋಗ್ಯ, ಶಿಕ್ಷಣ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ  ಹಾಗೂ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.