Category: Latest News

  • ವಡಗೇರಾದಲ್ಲಿ ‘ಮನೆ ಮನೆಗೆ ಪೊಲೀಸ್’ ಅಭಿಯಾನ

    ವಡಗೇರಾದಲ್ಲಿ ‘ಮನೆ ಮನೆಗೆ ಪೊಲೀಸ್’ ಅಭಿಯಾನ

    ವಡಗೇರಾ: ಪೊಲೀಸ್‌ ವ್ಯವಸ್ಥೆ ಕುರಿತು ಜನರಲ್ಲಿ ಭಯ ದೂರಮಾಡಿ ಮನೆ ಬಾಗಿಲಿಗೆ ಪೊಲೀಸರು ಭೇಟಿ ನೀಡಿ ಸ್ಪಂದಿಸುವ ಸದುದ್ದೇಶದಿಂದ ಜಾರಿಗೊಳಿಸುತ್ತಿರುವ ಮನೆ ಮನಗೆ ಪೊಲೀಸ್ ಅಭಿಯಾನಕ್ಕೆ ಪಟ್ಟಣದಲ್ಲಿ ಪಿಎಸ್ಐ ಮೆಹಬೂಬ್‌ ಅಲಿ ಚಾಲನೆ ನೀಡಿದರು.
     
    ಪಟ್ಟಣದಲ್ಲಿನ  ಮನೆಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಪೊಲೀಸ್‌ ವ್ಯವಸ್ಥೆ ಬಗ್ಗೆ ಜನರಲ್ಲಿರುವ ಆತಂಕ ದೂರ ಮಾಡಲು ಸ್ಥಳೀಯ ಪೊಲೀಸ್‌ ಸಿಬ್ಬಂದಿ ಮನೆ ಮನೆಗೆ ಬಂದು ಜನರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು.
     
    ಇದೇ ವೇಳೆ ಕರಪತ್ರ, ಭಿತ್ತಿಪತ್ರ ಹಂಚಿ, ಕಾನೂನು ಬಾಹಿರ ಚಟುವಟಿಕೆಗಳು, ಮಕ್ಕಳಿಗೆ ತೊಂದರೆ, ಅಥವಾ ಶಂಕಾಸ್ಪದ ಘಟನೆಗಳ ಬಗ್ಗೆ ಮುಕ್ತವಾಗಿ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳುವಂತೆ ಮನವಿ ಮಾಡಲಾಯಿತು.
     

    ಸಾರ್ವಜನಿಕರಿಗೆ ಸೈಬರ್ ಅಪರಾಧ, ಮಾದಕ ವಸ್ತು ಡ್ರಗ್ಸ್, ಬಾಲಾಪರಾಧ, ಪೋಕ್ಸೋ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಸೇರಿದಂತೆ ಸಾಮಾನ್ಯರು ಕಷ್ಟದ ಸಮಯದಲ್ಲಿ ಬಳಸಬಹುದಾದ ತುರ್ತು ಕರೆಗಳ ಬಗ್ಗೆ ನಿವಾಸಿಗಳಿಗೆ ಮಾಹಿತಿ ನೀಡಿದರು.

    ಈ ಸಂಧರ್ಭದಲ್ಲಿ ವಡಗೇರಾ ಪೊಲೀಸ್ ಠಾಣೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಗೌರವಧನ ಹೆಚ್ಚಳಕ್ಕಾಗಿ ಆಶಾ ಕಾರ್ಯಕರ್ತೆಯರ  ಧರಣಿ

    ಗೌರವಧನ ಹೆಚ್ಚಳಕ್ಕಾಗಿ ಆಶಾ ಕಾರ್ಯಕರ್ತೆಯರ  ಧರಣಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಪ್ರತಿ ತಿಂಗಳು ಕನಿಷ್ಠ ₹10,000 ಗೌರವಧನ ನೀಡಬೇಕು ಮತ್ತು ಪ್ರೋತ್ಸಾಹಧನ ಸೇರಿಸಿ ಏಪ್ರಿಲ್ 2025ರಿಂದ ಜಾರಿಗೆ ತರಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (ರಿ) ಯಾದಗಿರಿ ಜಿಲ್ಲಾ ಸಮಿತಿಯ ಆಶಾ ಕಾರ್ಯಕರ್ತೆಯರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದರು.

    ಜಿಲ್ಲಾಧ್ಯಕ್ಷೆ ಡಿ. ಉಮಾದೇವಿ ಮಾತನಾಡಿ, ಜನವರಿಯಲ್ಲಿ ಬೆಂಗಳೂರು ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ₹10,000 ಗೌರವಧನ ನೀಡುವುದಾಗಿ ಭರವಸೆ ನೀಡಿದ್ದರೂ, ಅದು ಈವರೆಗೂ ಜಾರಿಯಾಗಿಲ್ಲವೆಂದು ಆರೋಪಿಸಿದರು. ಬಜೆಟ್ ನಲ್ಲೂ ಸಹ ಘೋಷಣೆ ಮಾಡದೆ ನಮಗೆ ಮೋಸ ಮಾಡಿದ್ದಾರೆ. ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಅದಕ್ಕಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ. ಘೋಷಣೆ ಮಾಡಿದ ೧೦ ಸಾವಿರ ಗೌರವಧನವನ್ನು ಕೂಡಲೇ ಜಾರಿಗೆ ತರಬೇಕು, ಇಲ್ಲದಿದ್ದರೆ ತೀವ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.

    ಕಾರ್ಯದರ್ಶಿ ದೇವಕ್ಕಿ ವನದುರ್ಗ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್, ಪುಷ್ಪಲತಾ, ನೀಲಮ್ಮ, ತಾಯಮ್ಮ, ಶಾಂತವ್ವ, ನಿಂಗಮ್ಮ, ಅಮೃತ, ದಾನಮ್ಮ, ಗೀತಾ, ಮೀನಾಕ್ಷಿ, ಗೌರಮ್ಮ, ಶಾರದಾದೇವಿ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಧರಣಿಯಲ್ಲಿ ಭಾಗವಹಿಸಿದರು.

  • ವಡಗೇರಾ: ಗಣೇಶ ಹಬ್ಬ,ಈದ್ ಮಿಲಾದ್ ಶಾಂತಿ ಸಭೆ

    ವಡಗೇರಾ: ಗಣೇಶ ಹಬ್ಬ,ಈದ್ ಮಿಲಾದ್ ಶಾಂತಿ ಸಭೆ

    ವಡಗೇರಾ: ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಶಾಂತಿ ಸಭೆಯನ್ನು ವಡಗೇರಾ ಪೊಲೀಸ್ ಠಾಣಾ ಅವರಣದಲ್ಲಿ ಆಯೋಜಿಸಲಾಗಿತ್ತು.

    ತಾಲೂಕಿನ ಕಾಡಮಗೇರಾ (ಬಿ), ತುಮಕೂರು, ಐಕೂರು ಗ್ರಾಮಗಳ ಸಮುದಾಯ ಮುಖಂಡರು ಸಭೆಯಲ್ಲಿ ಭಾಗವಹಿಸಿದರು.

    ಪಿಎಸ್ಐ ಮಹಿಬೂಬ್ ಅಲಿ ಮಾತನಾಡಿ – ಗಣೇಶ ಪ್ರತಿಷ್ಠಾಪನೆಗೆ ಸಂಬಂಧಪಟ್ಟ ಇಲಾಖೆಗಳಿಂದ ಪರವಾನಿಗೆ ಕಡ್ಡಾಯ, ಮೂರ್ತಿ ಪ್ರತಿಷ್ಠಾಪನೆ ಬಳಿಕ ಪ್ರತಿದಿನ ಮೂರ್ತಿಯನ್ನು ಕಾಯಲು 1–2 ಮಂದಿ ಕಡ್ಡಾಯವಾಗಿ ಇರತಕ್ಕದ್ದು, ವಿಸರ್ಜನೆ ವೇಳೆ ಕರ್ಕಶ ಡಿಜೆ ನಿಷೇಧ ಎಂದು ಸ್ಪಷ್ಟ ಸೂಚನೆ ನೀಡಿದರು.

    ಈದ್ ಮಿಲಾದ್ ಮೆರವಣಿಗೆಯೂ ಶಾಂತಿಯುತವಾಗಿರಬೇಕು, ಈದ್ ಮಿಲಾದ್ ಹಬ್ಬದ ಮೆರವಣಿಗೆ ಸಂದರ್ಭದಲ್ಲಿ ಶಾಂತ ರೀತಿಯಿಂದ ಯಾವುದೇ ಧರ್ಮಕ್ಕೆ ತೊಂದರೆಯಾಗದಂತೆ, ಹಿಂದೂ–ಮುಸ್ಲಿಂ ಸಹೋದರತ್ವ ಕಾಪಾಡಬೇಕು ಎಂದು ತಿಳಿಸಿದರು.

  • ಸೂಗಯ್ಯ ಸ್ವಾಮಿ ನಾಪತ್ತೆ ಪ್ರಕರಣ: ಚನ್ನಪಟ್ಟಣ ಶಾಂತಗೌಡ ಆರೋಪ ಗಂಭೀರ ಆರೋಪ

    ಸೂಗಯ್ಯ ಸ್ವಾಮಿ ನಾಪತ್ತೆ ಪ್ರಕರಣ: ಚನ್ನಪಟ್ಟಣ ಶಾಂತಗೌಡ ಆರೋಪ ಗಂಭೀರ ಆರೋಪ

    ಯಾದಗಿರಿ: 2022ರ ಜನವರಿಯಿಂದ ನಾಪತ್ತೆಯಾಗಿರುವ ಸುರಪುರ ತಾಲೂಕಿನ ರೈತ ಕುಟುಂಬದ ಸೂಗಯ್ಯ ಸ್ವಾಮಿ ಪ್ರಕರಣ (ಕೈಂ. ನಂ. 30/2022) ತನಿಖೆಯಲ್ಲಿ ಪೊಲೀಸ್ ಇಲಾಖೆ ಗಂಭೀರ ನಿರ್ಲಕ್ಷ್ಯ ವಹಿಸಿದ್ದು, ಅಧಿಕಾರಿಗಳು ರಾಜಕೀಯ ಮತ್ತು ಹಣಬಲಕ್ಕೆ ಮಣಿದಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಜ್ಯಾಧ್ಯಕ್ಷ ಚನ್ನಪಟ್ಟಣ ಶಾಂತಗೌಡ ಗಂಭೀರ ಆರೋಪ ಮಾಡಿದ್ದಾರೆ.

    ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೂಗಯ್ಯ ಸ್ವಾಮಿ ಅವರು ಯಾದಗಿರಿ ಜಿಲ್ಲೆಯ ಪ್ರಭಾವಿಶಾಲಿ ಜೈನ್ ಸಹೋದರರಿಗೆ 25 ವರ್ಷಗಳ ಕಾಲ ಚಾಲಕರಾಗಿ ಸೇವೆ ಸಲ್ಲಿಸಿದ್ದರು. ಗ್ಯಾನಚಂದ್ ಜೈನ್ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ, ಜೈನ್ ಸಹೋದರರು ಸುಪಾರಿ ಕೊಟ್ಟು ಸೂಗಯ್ಯನನ್ನು ಕೊಲ್ಲಿಸಿದ ಶಂಕೆ ವ್ಯಕ್ತವಾಗಿದೆ.

    ಪ್ರಕರಣ ದಾಖಲಾಗಿ ಮೂರು ವರ್ಷವಾದರೂ, ತನಿಖೆಯಲ್ಲಿ ಯಾವುದೇ ಪ್ರಗತಿ ಇಲ್ಲ. ಶಾಂತಗೌಡ ಅವರ ದೂರಿನ ಪ್ರಕಾರ, ಇದೇ ಜೈನ್ ಸಹೋದರರ ವಿರುದ್ಧ 2019ರಲ್ಲಿ ಕಲಬುರ್ಗಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ (ಕ್ರೈಂ. ನಂ. 83/2019) ದಾಖಲಾದರೂ, ಕೇವಲ ಒಂದು ತಿಂಗಳಲ್ಲಿ ‘ಬಿ ಅಂತಿಮ ತರದಿ’ ಸಲ್ಲಿಸಿ ಮುಚ್ಚಲಾಗಿದೆ ಎಂದರು.

    ಇದಲ್ಲದೆ, ಸೂಗಯ್ಯ ಸ್ವಾಮಿಯ ಪತ್ನಿ ಅವರ ಹೆಸರಿನ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡು ಮಾರಾಟಕ್ಕೆ ಮುಂದಾಗಿರುವುದು, ಕುಟುಂಬದವರು ನಾಪತ್ತೆ ಪ್ರಕರಣದ ವಿಚಾರದಲ್ಲಿ ಆಸಕ್ತಿ ತೋರದಿರುವುದು — ಇವೆಲ್ಲವೂ ಹಣಬಲ ಮತ್ತು ರಾಜಕೀಯ ಬಲದ ಪ್ರಭಾವದ ಸೂಚನೆ ಎಂದು ಶಾಂತಗೌಡ ಆರೋಪಿಸಿದ್ದಾರೆ.

    ಸತ್ಯವನ್ನು ಬೆಳಕಿಗೆ ತರುವುದೇ ನನ್ನ ನೈತಿಕ ಕರ್ತವ್ಯ ಎಂದು ಶಾಂತಗೌಡ ಹೇಳಿದ್ದು, ಪ್ರಕರಣವನ್ನು ಗಂಭೀರವಾಗಿ ಪುನರ್‌ ತನಿಖೆ ಮಾಡಲು ಪೊಲೀಸರು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.

    ಈ ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಲಕ್ಷೀಕಾಂತ ಪಾಟೀಲ್, ಯಾದಗಿರಿ ಜಿಲ್ಲಾಧ್ಯಕ್ಷ ಮಹಾವೀರ ಲಿಂಗೇರಿ, ಜಿಲ್ಲಾ ಉಪಾಧ್ಯಕ್ಷ ಸುಭಾಷ್ ನಡುವಿನಕೇರಿ, ತಾಲೂಕು ಅಧ್ಯಕ್ಷ ಮಹಿಪಾಲ ರೆಡ್ಡಿ ಕಟಗಿ ಶಹಾಪುರ, ಅಶೋಕ್ ನಾಯಕ, ಭಾಷಾ ಕುರಕುಂಧಿ, ಮಲ್ಲಿಕಾರ್ಜುನ, ರೆಡ್ಡಿ ಖಾನಾಪುರ ಸೇರಿದಂತೆ ಇನ್ನಿತರರು ಇದ್ದರು.

  • ಮೈಕ್ ಡಿ.ಜೆ ಕುರಿತಾಗಿ ಪೊಲೀಸ್ ಠಾಣೆಯಲ್ಲಿ ಸಭೆ

    ಮೈಕ್ ಡಿ.ಜೆ ಕುರಿತಾಗಿ ಪೊಲೀಸ್ ಠಾಣೆಯಲ್ಲಿ ಸಭೆ

    ಸತ್ಯಕಾಮ ವಾರ್ತೆ ಗುರುಮಠಕಲ್ :

    ಮುಂಜಾನೆ 6 ರಿಂದ ಸಾಯಾಂಕಾಲ 10 ಗಂಟೆಯೊಳಗೆ ಸೌಂಡ ಸಿಸ್ಟಮ್ ಆಳವಡಿಸುವದು. ಇದಕ್ಕೆ ಮೀರಿ ನಡೆದರೆ ಜೈಲು ಶಿಕ್ಷೆ ಮತ್ತು ಭಾರಿ ಜುಲ್ಮಾನೆಗೂ ಹೊಣೆಗಾರರಾಗಿರುತ್ತೀರಿ ಎಂದು ಗುರುಮಠಕಲ್ ಪಿ. ಐ. ಈರಣ್ಣ ದೊಡ್ಡಮನಿ ಹೇಳಿದರು.

    ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುಮಠಕಲ್ ವಲಯ ಸೌಂಡ್ ಮತ್ತು ಲೈಟಿಂಗ್ ಮಾಲೀಕರ ಕ್ಷೇಮಭಿವೃದ್ಧಿ ಸಂಘದ ಸದಸ್ಯರೊಂದಿಗೆ ಅವರು ಸಮಾಲೋಚನೆ ನಡೆಸಿ ಸರಕಾರದಿಂದ ಹೊರಡಿಸಿದ ನಡಾವಳಿ ಕುರಿತು ಮನವರಿಕೆ ಮಾಡಿದರು.

    ಗಣೇಶ ಹಬ್ಬದಲ್ಲಿ ಪ್ರತಿ ಬಡಾವಣೆ ಸೇರಿದಂತೆ ಮುಖ್ಯ ಬೀದಿಗಳಲ್ಲಿ ಗಣೇಶ ಕೂಡಿಸಿದ ಸಂಧರ್ಭದಲ್ಲಿ ಸರಕಾರದ ನಿಯಮಾವಳಿಯಂತೆ ಸಮಯ ಪಾಲನೆ ಮಾಡಿ ಸೌಂಡ್ ಬಳಸಬೇಕು.

    ಸಾರ್ವಜನಿಕರಿಗೆ ತೊಂದರೆಯಾಗುವ ನಿಟ್ಟಿನಲ್ಲಿ ಸೌಂಡ್ ಬಳಸದೆ ಹಾಗೂ ವಿಸರ್ಜನೆ ಸಮಯದಲ್ಲಿ ರಾತ್ರಿ 10-11 ಘಂಟೆಯ ಒಳಗೆ ಮೆರವಣಿಗೆ ಮುಗಿಯುವಂತೆ ನೋಡಿಕೊಳ್ಳಬೇಕು ಕಟ್ಟು ನಿಟ್ಟಾಗಿ ಹೇಳಿದರು.

    ಈ ಸಂಧರ್ಭದಲ್ಲಿ ಪೊಲೀಸ್ ಸಿಬ್ಬಂಧಿ ಶಿವರಾಮ್ ರೆಡ್ಡಿ, ಮೈಕ್ ಸಂಘದ ಪಾಪಣ್ಣ ಎ ಅಧ್ಯಕ್ಷ, ಅಬ್ದುಲ್ ರೌಫ್ ಗೌ. ಉಪಾಧ್ಯಕ್ಷ, ಮಲ್ಲೇಶಪ್ಪ ಮಳಖೆಡ್ಕರ್, ಮೋಹನ್ ಕುಮಾರ್ ಬುರ್ಬುರೆ ಉಪಾಧ್ಯಕ್ಷ, ರಮೇಶ ಚಕ್ಕೊಲೆ ಖಜಾಂಚಿ, ನರಸಪ್ಪ ಕಾವಲಿ, ನರಸಿಂಹಲು ಗಂಗನೋಳ್, ರಮೇಶ ಅಲ್ಲಿಪುರ, ರಾಮು ಚಾವ್ಲ, ಸುರೇಶ ಸ್ವಾಮಿ ಕಾಕಲವಾರ, ವಿಜಯ ಬೆಟ್ಟದಹಳ್ಳಿ, ಮನೋಹರ ಟಪ್ಪ, ರವಿ ಡಿ. ಜೆ ಬುದುರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • ಕೆರೆ ತುಂಬಿಸುವ ಯೋಜನೆಗೆ ಕೊಳ್ಳಿ: ಅಧಿಕಾರಿಗಳ ವಿರುದ್ಧ ಮುದ್ನಾಳ್ ಆಕ್ರೋಶ

    ಕೆರೆ ತುಂಬಿಸುವ ಯೋಜನೆಗೆ ಕೊಳ್ಳಿ: ಅಧಿಕಾರಿಗಳ ವಿರುದ್ಧ ಮುದ್ನಾಳ್ ಆಕ್ರೋಶ

    ಕಿಲ್ಲನಕೇರಾ: ಒಣಬೇಸಾಯಕ್ಕೆ ಅನುಕೂಲವಾಗುವಂತೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸಲು ಸರ್ಕಾರ ಜಾರಿಗೆ ತಂದಿದ್ದ ಕೆರೆ ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಕಿಲ್ಲನಕೇರಾ ಗ್ರಾಮದಲ್ಲಿ ವಿಫಲವಾಗಿದೆ. ಸಣ್ಣ ನೀರಾವರಿ ಇಲಾಖೆಯ ಅವೈಜ್ಞಾನಿಕ ನಿರ್ಮಾಣದಿಂದಾಗಿ ಕಳೆದ ಎರಡು ವರ್ಷಗಳಿಂದ ಕೆರೆಗೆ ನೀರು ಸೇರದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ನೇತೃತ್ವದಲ್ಲಿ ರೈತರು ಕೆರೆಯ ತೀರದಲ್ಲಿ ಪ್ರತಿಭಟನೆ ನಡೆಸಿ, ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದರು. ಯೋಜನೆ ಇದ್ದೂ, ನೀರು ಬಂದಿಲ್ಲ; ಅಧಿಕಾರಿಗಳ ನಿರ್ಧಾರದಿಂದ ರೈತರ ಜೀವನ ಹಾಳಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಭರ್ಜರಿ ಮಳೆಯಿಂದ ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿಗಳು ತುಂಬಿ ಹರಿಯುತ್ತಿದ್ದರೂ, ಕಿಲ್ಲನಕೇರಾ ಗ್ರಾಮದ ಮೂರು ಕೆರೆಗಳು ಖಾಲಿಯಾಗಿವೆ. ಕೆರೆಗೆ ಪೈಪ್‌ಲೈನ್ ಇದ್ದರೂ, ಕೆಲವರ ಅರ್ಜಿಯ ಆಧಾರದಲ್ಲಿ ಇಲಾಖೆಯವರು ನೀರು ಬಿಡದೇ ತಡೆಹಿಡಿದಿರುವುದಾಗಿ ರೈತರು ಆರೋಪಿಸಿದರು.

    ಪ್ರತಿಭಟನೆಯಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷ ಮರೆಪ್ಪ ನಾಟೇಕಾರ ಸೇರಿದಂತೆ ಅನೇಕ ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಿದರು.

  • ಗಾಯತ್ರಿ ಮಂತ್ರದಿಂದ ಜನ್ಮ ಪಾವನ – ಕಾಳಹಸ್ತೇಂದ್ರ ಮಹಾ ಸ್ವಾಮೀಜಿ

    ಗಾಯತ್ರಿ ಮಂತ್ರದಿಂದ ಜನ್ಮ ಪಾವನ – ಕಾಳಹಸ್ತೇಂದ್ರ ಮಹಾ ಸ್ವಾಮೀಜಿ

    ದೋರನಹಳ್ಳಿ:  ಆದಿ ಋಷಿ ಮುನಿಗಳು ಹೇಳಿದಂತೆ ಗಾಯತ್ರಿ ಮಂತ್ರವೇ ಮಹಾಮAತ್ರವಾಗಿದೆ.ಭಕ್ತಿಯಿAದ ಗಾಯತ್ರಿ ಮಂತ್ರವು ಪಠಣ ಮಾಡಿದರೆ ಜನ್ಮ ಪಾವನಮಯ ಎಂದು ಶಹಾಪುರ ವಿಶ್ವಕರ್ಮ ಏಕದಂಡಗಿ ಮಠದ ಪೂಜ್ಯ ಶ್ರೀ ಕಾಳಹಸ್ತೇಂದ್ರ ಮಹಾ ಸ್ವಾಮೀಜಿ ಹೇಳಿದರು.

    ದೋರನಹಳ್ಳಿ ಗ್ರಾಮದ ಶ್ರೀ ಕಾಳಿಕಾ ದೇವಿ ದೇವಸ್ಥಾನದಲ್ಲಿ ಶ್ರವಾಣ ಮಾಸದ ನೂಲ ಹುಣ್ಣಿಮೆ ಹಿನ್ನಲೆಯಲ್ಲಿ ವಿಶ್ವಕರ್ಮ ಸಮಾಜದಿಂದ ನಡೆದ ಸಾಮೂಹಿಕ ಯಜ್ಞೋಪವೀತ ಧಾರಣೆ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಆಶಿರ್ವಚನ ನೀಡಿ ಮಾತನಾಡಿದರು.ಮನುಷ್ಯ ಹುಟ್ಟುವಾಗ ಸಂಸ್ಕಾರ ರಹಿತನಾಗಿ ಬರುತ್ತಾನೆ. ನಂತರ ಸಂಸ್ಕಾರ ಪಡೆದುಕೊಂಡು ಶ್ರೇಷ್ಠ ವ್ಯಕ್ತಿ ಆಗುತ್ತಾನೆ. ಹಾಗೆ ಸಂಸ್ಕಾರ ಪಡೆದು ಶ್ರೇಷ್ಠ ವ್ಯಕ್ತಿಯಾಗಿಸುವ ಶಕ್ತಿ ಗಾಯತ್ರಿ ಮಂತ್ರಕ್ಕಿದೆ. ಗಾಯತ್ರಿ ಮಂತ್ರ ಕಲಿಯುವ ಕಾಲಘಟ್ಟವೇ ಉಪನಯನ ಅಥವಾ ಬ್ರಹ್ಮಪದೇಶ. ಎಂಟನೇ ವರ್ಷಕ್ಕೆ ಉಪನಯನ ಮಾಡಬೇಕು, ಅದು ಸಾಧ್ಯ ಆಗದಿದ್ದಲ್ಲಿ ಎಂಟರಿAದ ಹದಿನಾರರ ಒಳಗೆ ಮಾಡಬೇಕು. ಅದು ಅವರ ಅನುಕೂಲ ಅಥವಾ ಬೌದ್ಧಿಕ ಮಟ್ಟ ಅವಲಂಬನೆ ಆಗಿದೆ. ಉಪನಯನ ಮಾಡುವಾಗ ಸಮ ವರ್ಷ ಅಥವಾ ವಿಷಮ ಪ್ರಶ್ನೆ ಇಲ್ಲ ಎಂದರು. ಗಾಯತ್ರಿ ಮಂತ್ರ ಬೋಧನೆ ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿದೆ. ಇದನ್ನು ಪಡೆದುಕೊಂಡು ಪಠಣ ಮಾಡುವ ವ್ಯಕ್ತಿ ಶ್ರೇಷ್ಠ ವ್ಯಕ್ತಿ ಆಗುತ್ತಾನೆ, ಗೆಲುವು ಪಡೆಯುತ್ತಾನೆ, ತೇಜಸ್ಸು ಪಡೆಯುತ್ತಾನೆ. ಅಂತಹ ಗಾಯತ್ರಿ ಮಂತ್ರದ ಮಹಿಮೆಯನ್ನು ವಿವರಿಸಿದರು.

    ಎಲ್ಲ ಧರ್ಮಗಳಲ್ಲೂ ಮಾನವೀಯ ಮೌಲ್ಯಗಳಿವೆ. ಅವುಗಳನ್ನು ತಿಳಿದುಕೊಂಡು ಬದುಕಿ, ಸಮಾಜದ ಶ್ರೇಯಸ್ಸಿಗೆ ಶ್ರಮಿಸಬೇಕು. ವಿಶ್ವಶಾಂತಿ ಬಯಸಿ, ಜಗತ್ತಿನ ಕಲ್ಯಾಣಕ್ಕಾಗಿ ಧಾರ್ಮಿಕ ಕಾರ್ಯ ಕಲಾಪ ಸತತವಾಗಿ ಸಾಗಬೇಕು ಎಂದರು. ಶ್ರಾವಣ ಮಾಸವು ವಿಶಿಷ್ಠ ಮಾಸವಾಗಿದ್ದು, ಪ್ರತಿ ದಿನವೂ ವೈಶಿಷ್ಟ್ಯವನ್ನು ಹೊಂದಿದೆ. ಶ್ರಾವಣದಲ್ಲಿ ಭಗವಂತನ ಪೂಜೆ, ಕೀರ್ತನೆ ಮತ್ತು ಶ್ರವಣದಿಂದ ಅಜ್ಞಾನ ನಶಿಸಿ, ಜ್ಞಾನವು ಸಿಗಲಿದೆ’ ಎಂದು ಹೇಳಿದರು.

    ವಿಶ್ವಕರ್ಮ ಸಮಾದ ಅಧ್ಯಕ್ಷ ಚಂದ್ರಶೇಖರ ಎಚ್.ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು ದೇವಸ್ಥಾನದ ಅರ್ಚಕ ಮನೋಹರ ಪತ್ತಾರ ಅವರಿಂದ ಶ್ರೀಕಾಳಿಕಾದೇವಿ ಮೂರ್ತಿಗೆ ಪೂಜೆ, ಮಹಾಭಿಷೇಕ, ಕುಂಕುಮಾರ್ಚನೆ ,ಆರುತಿ, ಅಲಂಕಾರ ಪೂಜೆ, ತುಪ್ಪದಾರುತಿ, ಮಂಗಳಾರುತಿ ಸೇರಿದಂತೆ, ಘಂಟೆ- ಜಾAಗಟೆಗಳೊAದಿಗೆ ಪೂಜಾ ಕೈಂಕರ್ಯಗಳು ನೆರವೇರಿದವು.ನಂತರ ವಿಶ್ವಕರ್ಮ ಸಮಾಜದ ಬಾಂಧವರು ಸಾಮೂಹಿಕ ಯಜ್ಞೋಪವೀತ ಧಾರಣೆ ಕಾರ್ಯಕ್ರಮವನ್ನು ಪೂಜ್ಯ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಿತು. ನಂತರ ಮಹಾ ಪ್ರಸಾದ ನೆರವೇರಿತು.

    ಈ ಸಂದರ್ಭದಲ್ಲಿವಿಶ್ವಕರ್ಮ ಸಮಾದ ಅಧ್ಯಕ್ಷ ಚಂದ್ರಶೇಖರ ಎಚ್.ಪತ್ತಾರ, ಉಪಾಧ್ಯಕ್ಷ ಮಹೇಶ ಡಿ.ಪತ್ತಾರ,ಮತ್ತು ಸಮಾಜದ ಹಿರಿಯ ಮುಖಂಡರಾದ ಕಾಳಪ್ಪ ಪತ್ತಾರ,ಮನೋಹರ ಪತ್ತಾರ,ಮಲಕಪ್ಪ ಕಂಚಗಾರ,ಮಲ್ಲೇಶಪ್ಪ ಕಂಬಾರ,ಚAದ್ರಶೇಖರ ಪತ್ತಾರ,ಕಾಳಪ್ಪ ಕಂಚಗಾರ,ಇAದ್ರಪ್ಪ ಕಂಚಗಾರ,ಮಾನಪ್ಪ ಕಂಬಾರ,ಗುರುನಾಥ ಕAಚಗಾರ, ಮಹೇಶ ಕಂಚಗಾರ,ವಿರೇಶ ಕಂಬಾರ,ಕಾಶಿನಾಥ ಕಂಚಗಾರ ಮುAತಾದ ಸಮಾಜದ ಬಂಧುಗಳು ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡಿದ್ದರು.

  • ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ

    ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ

    ಸತ್ಯಕಾಮ ವಾರ್ತೆ ಯಾದಗಿರಿ:

    ನಗರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಠಾಣಾಧಿಕಾರಿಗಳಿಗೆ, ಸಿಬ್ಬಂದಿಗೆ ಹಾಗೂ ಊರಿನ ಕೆಲ ಯುವಕರಿಗೆ ರಾಖಿಯನ್ನು ಕಟ್ಟುವ ಮುಖಾಂತರ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು.

    ಈ ಸಂದರ್ಭದಲ್ಲಿ ಠಾಣಾಧಿಕಾರಿ ಮಂಜನಗೌಡ ರಕ್ಷಾ ಬಂಧನ ಸ್ವೀಕರಿಸಿ ಮಾತನಾಡಿದ ಅವರು ಹಬ್ಬವು ಜಾತಿ,ಬೇಧ ಹೋಗಲಾಡಿಸಿ ಸಹೋದರತೆಯ ಭಾವವನ್ನು ಬಿಂಬಿಸುವುದಾಗಿದೆ. ನಮ್ಮ ದೇಶದಲ್ಲಿ ಸಂಬಂಧಗಳಿಗಿರುವ ಮಹತ್ವ ಜಗತ್ತಿನ ಯಾವ ದೇಶದಲ್ಲಿಯೂ ಕಂಡು ಬರುವುದಿಲ್ಲ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನಿತಾ ಚೌವ್ಹಾಣ್ ಮಾತನಾಡಿ ಅಣ್ಣತಂಗಿಯರ ಹಬ್ಬ, ಅಕ್ಕತಮ್ಮಂದಿರ ಹಬ್ಬ. ಅಕ್ಕತಂಗಿಯರ ರಕ್ಷಣೆಗಾಗಿ ನಡುಕಟ್ಟಿ ನಿಲ್ಲುವ ಅಣ್ಣತಮ್ಮಂದಿರನ್ನು ಪ್ರೀತಿಯಿಂದ ಹರಸಿ ಹಾರೈಸುವ ಹಬ್ಬ. ದೇಶದಾದ್ಯಂತ ಈ ಹಬ್ಬವನ್ನು ಎಲ್ಲ ಅಕ್ಕತಂಗಿಯರು ತಮ್ಮ ಅಣ್ಣತಮ್ಮಂದಿರಿಗಾಗಿ ಆಚರಿಸುತ್ತಾರೆ. ಅಣ್ಣತಮ್ಮಂದಿರ ಕ್ಷೇಮ ಅವರ ಆರೋಗ್ಯ ಆಯಸ್ಸು ಚೆನ್ನಾಗಿರಲೆಂದು ಪ್ರಾರ್ಥಿಸುತ್ತಾರೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯೆ ವೀಣಾ ಮೋದಿ,ಪ್ರಧಾನ ಕಾರ್ಯದರ್ಶಿ ರಮಾದೇವಿ ಕಾವಲಿ, ಕಾರ್ಯದರ್ಶಿ ಶಕುಂತಲಾ ಗುಜನೂರು,ಉಪಾಧ್ಯಕ್ಷೆ ಮಂಜುಳಾ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು..

  • ಮಹಿಳಾ ಪೂರಕ ಆಹಾರ ಉತ್ಪಾದನಾ ಘಟಕಕ್ಕೆ ಲವೀಶ್ ಒರ್ಡಿಯಾ ಭೇಟಿ

    ಮಹಿಳಾ ಪೂರಕ ಆಹಾರ ಉತ್ಪಾದನಾ ಘಟಕಕ್ಕೆ ಲವೀಶ್ ಒರ್ಡಿಯಾ ಭೇಟಿ

    ಯಾದಗಿರಿ (ಗುರುಮಠಕಲ್) : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಕ್ಕಳು ಹಾಗೂ ತಾಯಂದಿರಿಗೆ ನೀಡಲಾಗುತ್ತಿರುವ ಆಹಾರ ಪದಾರ್ಥಗಳ ತಯಾರಿಕಾ ಘಟಕದಲ್ಲಿ ಗುಣಮಟ್ಟ ಹಾಗೂ ಶುಚಿತ್ವ ಕಾಪಾಡುತ್ತಿರುವ ಬಗ್ಗೆ ಪರಿಶೀಲನೆ ಮಾಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಲವೀಶ್ ಒರ್ಡಿಯಾ ಮಹಿಳಾ ಪೂರಕ ಆಹಾರ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ಮಕ್ಕಳ ಹಾಗೂ ಮಹಿಳೆಯರ ಆರೋಗ್ಯ ರಕ್ಷಣೆ ಕಾಪಾಡುವ ನಿಟ್ಟಿನಲ್ಲಿ ಯಾದಗಿರಿಯಲ್ಲಿರುವ ಗುರುಮಠಕಲ್ ಮಹಿಳಾ ಪೂರಕ ಆಹಾರ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಅವರು ಯಂತ್ರಗಳ ಸಹಾಯದಿಂದ ಮಕ್ಕಳಿಗೆ ನೀಡಲಾಗುವ ಪೌಷ್ಟಿಕಾಂಶ ಆಹಾರಗಳ ತಯಾರಿಕೆಯನ್ನು ವೀಕ್ಷಿಸಿದರು.

    ಮಹಿಳೆಯರ ತಂಡ ಮಕ್ಕಳಿಗೆ ಅಗತ್ಯವಾಗಿ ಬೇಕಿರುವ ಪೌಷ್ಟಿಕಾಂಶಗಳನ್ನು ಉತ್ಪಾದಿಸುವ ರೀತಿಯನ್ನು ಪರಿಶೀಲಿಸಿದರು. ಅಕ್ಕಿ, ಗೋದಿ, ಹೆಸರು ಬೇಳೆ, ಹೆಸರು ಕಾಳು, ಕಡಲೇ ಬೇಳೆ, ಬೆಲ್ಲ, ಎಣ್ಣೆ ಮುಂತಾದ ವಸ್ತುಗಳ ವರ್ಗೀಕರಣ ಮಾಡುವ ವಿಧಾನವನ್ನೂ ಪರಿಶೀಲಿಸಿದರು. ಆಹಾರ ಧಾನ್ಯಗಳ ಗುಣಮಟ್ಟವನ್ನು ಪರೀಕ್ಷಿಸಿ, ಕಚ್ಚಾವಸ್ತುಗಳ ದಾಸ್ತಾನು ಕ್ರಮವನ್ನು ಸರಿಪಡಿಸಿಕೊಳ್ಳುವಂತೆ ಸಲಹೆ ಮಾಡಿದರು.

    ಮಹಿಳಾ ಪೂರಕ ಆಹಾರ ಉತ್ಪಾದನಾ ಘಟಕದಲ್ಲಿ ಶುಚಿತ್ವ ಹಾಗೂ ಗುಣಮಟ್ಟವನ್ನು ಕಾಪಾಡಿಕೊಂಡಿರುವ ಕುರಿತು ಸಮಾಧಾನ ವ್ಯಕ್ತಪಡಿಸಿದರು.

    ಈ ಸಂಧರ್ಭದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖಾ ಉಪ ನಿರ್ದೇಶಕ ತಿಪ್ಪಣ್ಣ ಶಿರಸಿಗಿ ಹಾಗೂ ಅಧಿಕಾರಿ ಭೀಮರಾಯ, ಗುರುಮಠಕಲ್ ಸಿ. ಡಿ. ಪಿ. ಓ ಶರಣಬಸವ, ಶಿಶು ಅಭಿವೃದಿ ಯೋಜನಾ ಅಧಿಕಾರಿಗಳು ಸೇರಿದಂತೆ ಮಹಿಳಾ ಪೂರಕ ಉತ್ಪಾದನಾ ಘಟಕದ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

  • ಚೆನ್ನಾರೆಡ್ಡಿಗೌಡ ಬಿಳಾರ್ ಅಭಿಮಾನಿಗಳಿಂದ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ಕಿಟ್ ವಿತರಣೆ

    ಚೆನ್ನಾರೆಡ್ಡಿಗೌಡ ಬಿಳಾರ್ ಅಭಿಮಾನಿಗಳಿಂದ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ಕಿಟ್ ವಿತರಣೆ

    ಯಾದಗಿರಿ: ಬಿಜೆಪಿ ಮುಖಂಡ ಚೆನ್ನಾರೆಡ್ಡಿಗೌಡ ಬಿಳಾರ್ ಅವರ ಹುಟ್ಟುಹಬ್ಬದ ಅಂಗವಾಗಿ, ಅವರ ಅಭಿಮಾನಿ ಬಳಗದ ವತಿಯಿಂದ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ಆಹಾರ ಪದಾರ್ಥಗಳ ಕಿಟ್‌ಗಳನ್ನು ವಿತರಿಸಲಾಯಿತು. ಸಮಾಜ ಸೇವೆಯೊಂದಿಗೆ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಲಾಯಿತು.

    ನಗರದಲ್ಲಿನ ವೃದ್ದಾಶ್ರಮ ಮತ್ತು ಅನಾಥಾಶ್ರಮಗಳಿಗೆ ಭೇಟಿ ನೀಡಿ, ಅಲ್ಲಿನ ನಿರ್ಗತಿಕರಿಗೆ ಮತ್ತು ವೃದ್ಧರಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಿದರು. ಈ ಕಿಟ್‌ಗಳಲ್ಲಿ ಅಕ್ಕಿ, ದಾಲ್, ಎಣ್ಣೆ, ಸಕ್ಕರೆ, ಬಿಸ್ಕತ್, ತಿಂಡಿಪದಾರ್ಥಗಳು ಸೇರಿದಂತೆ ದಿನಬಳಕೆಯ ಪದಾರ್ಥಗಳಿದ್ದವು.

    ಚೆನ್ನಾರೆಡ್ಡಿಗೌಡ ಬಿಳಾರ್ ಅವರು ಸದಾ ಜನಸೇವೆಗಾಗಿ ಶ್ರಮಿಸುತ್ತಾರೆ. ಅವರ ಸೇವಾ ಮನೋಭಾವದಿಂದ ಪ್ರೇರಿತರಾಗಿ ನಾವು ಸಹ ಸಮಾಜ ಸೇವೆಗೆ ಕೈಜೋಡಿಸಿದ್ದೇವೆ. ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಲ್ಲಿ ವಾಸಿಸುವವರಿಗೆ ಸಹಾಯ ಮಾಡಿದ ಸಂತೋಷವೇ ನಮ್ಮಿಗೆ ನಿಜವಾದ ಹುಟ್ಟುಹಬ್ಬದ ಸಂಭ್ರಮ ಎಂದು ಅಭಿಮಾನಿಗಳು ತಿಳಿಸಿದರು.

    ಈ ಸಂದರ್ಭದಲ್ಲಿ ಬಸವರಾಜ್ ಸಾವೂರ್, ಬಾಬಾ ಖಾನ್, ಮರಿಗೌಡ, ರೆಡ್ಡಿ ತಂಗಡಗಿ, ಚೇತನ್ ಟಿಂಗ್ರೆ, ವಿಶ್ವ ಮುರಗನೂರ್, ಮಾರ್ಥಂಡಪ್ಪ ಸೇರಿದಂತೆ ಇನ್ನಿತರರು ಇದ್ದರು.