Category: social media

  • ನಿಧನ ವಾರ್ತೆ :

    ನಿಧನ ವಾರ್ತೆ :

    ಗುರುಮಠಕಲ್ : ಪಟ್ಟಣದ ನಿವಾಸಿ ದೇವೀಂದ್ರಮ್ಮ ಗಂ. ಲಕ್ಷ್ಮಪ್ಪ ಯಾದವ (70) ರವಿವಾರ ಬೆಳಿಗ್ಗೆ ಅನಾರೋಗ್ಯಾದಿಂದ ನಿಧನರಾಗಿದ್ದಾರೆ.

    ಪುತ್ರ ನರಸಿಂಹಲು ಶಾಕಾಧಿಕಾರಿ(ಜೇಸ್ಕಾಂ) ಹಾಗೂ ಬುಗ್ಗಪ್ಪ (ಜೆಸ್ಕಾಂ) ಸೇರಿದಂತೆಯೇ ಐವರು ಪುತ್ರರು ಹಾಗೂ ನಾಲ್ವರು ಪುತ್ರಿ, ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ಅಂತ್ಯ ಕ್ರಿಯೆಯು ನಾಳೆ ಮಧ್ಯಾಹ್ನ 2 ಗಂಟೆಗೆ ಗುರುಮಟಕಲನ ಲಕ್ಷ್ಮೀನಗರ ರುದ್ರಭೂಮಿಯಲ್ಲಿ ನೆರೆವೇರಿಸಲಾಗುವುದು ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.

  • ಜಾತಿ ಸಮೀಕ್ಷೆಯಲ್ಲಿ ಹಿಂದೂ ವಿಶ್ವಕರ್ಮ ಎಂದು ಕಡ್ಡಾಯವಾಗಿ ಬರೆಯಿಸಿ : ಮಹೇಶ ವಿಶ್ವಕರ್ಮ

    ಜಾತಿ ಸಮೀಕ್ಷೆಯಲ್ಲಿ ಹಿಂದೂ ವಿಶ್ವಕರ್ಮ ಎಂದು ಕಡ್ಡಾಯವಾಗಿ ಬರೆಯಿಸಿ : ಮಹೇಶ ವಿಶ್ವಕರ್ಮ

    ಸತ್ಯಕಾಮ ವಾರ್ತೆ ಯಾದಗಿರಿ:
    ಇದೇ ಸೆ.22 ರಿಂದ ಆರಂಭವಾಗಲಿರುವ ಜಾತಿ ಸಮೀಕ್ಷೆ ವೇಳೆ ಹಿಂದೂ ವಿಶ್ವಕರ್ಮ ಎಂದು ಕಡ್ಡಾಯವಾಗಿ ಬರೆಯಬೇಕೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆ ಜಿಲ್ಲಾಧ್ಯಕ್ಷ ಮಹೇಶ ವಿಶ್ವಕರ್ಮ ತಿಳಿಸಿದ್ದಾರೆ.

    ಸೋಮವಾರ ಪತ್ರಿಕಾ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಬಾರ, ಬಡಿಗೇರ, ಅಕ್ಕಸಾಲಿಗ, ಪತ್ತಾರ, ವಿಶ್ವಬ್ರಾಹ್ಮಣ ಹೀಗೆ ಉಪಜಾತಿಗಳನ್ನು ಬರೆಯಿಸದೇ ಎಲ್ಲರೂ ಒಂದಾಗಿ ಹಿಂದೂ ವಿಶ್ವಕರ್ಮ ಎಂದೇ ಬರೆಯಬೇಕೆಂದು ಮನವಿ ಮಾಡಿದ್ದಾರೆ.

    ಹಿಂದೇ ನಡೆಸಿದ ಸಮೀಕ್ಷೆ ಸರಿಯಾಗಿಲ್ಲ, ರಾಜ್ಯದಲ್ಲಿ ಒಟ್ಟು ಸುಮಾರು 45 ಲಕ್ಷ ಜನರು ವಿಶ್ವಕರ್ಮ ಜನರಿದ್ದು, ಅಲ್ಲಿ ಕೇವಲ  15 ಲಕ್ಷ ಜನರೆಂದು ತೊರಿಸುವ ಮೂಲಕ ಅನ್ಯಾಯ ಮಾಡಲಾಗಿದೆ. ಕಾರಣ, ಈಗ ನಡೆಯುವ ಸಮೀಕ್ಷೆ ವೇಳೆ ನಾವೇ ಬೇರೆ, ಬೇರೆಯಾಗಿ ಬರೆಸಿದರೇ ನಮ್ಮ ಜನಸಂಖ್ಯೆಯ ನಿಖರ ಮಾಹಿತಿ ಸಿಗುವುದಿಲ್ಲ ಎಂದರು.

    ಸೇ. 17 ರಂದು ನಡೆಯುವ ವಿಶ್ವಕರ್ಮ ಜಯಂತಿಯಲ್ಲಿ ಸಮಾಜದ ಎಲ್ಲರೂ ಭಾಗವಹಿಸಬೇಕು.ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೇ ಶೇ.70 ರಷ್ಟು ಅಂಕಗಳನ್ನು ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದೆಂದರು.

    ಇದಕ್ಕಾಗಿ ಬನ್ನಪ್ಪ ಕಾಳಬೆಳಗುಂದಿ 70194023439, ದೇವೇಂದ್ರಪ್ಪ ತಳವಾರಗೇರಿ 8660620887, ಗಣೇಶ ಪತ್ತಾರ 9980778380, ಮನೋಹರ 9448561261, ಶ್ರೀನಿವಾಸ 8095760145 ಮತ್ತು ಬನ್ನಪ್ಪ ಬಿಳ್ಹಾರ 9901546261 ಗೇ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

    ಮಹಾಸಭೆಯ ಪ್ರಮುಖರಾದ ದೇವೀಂದ್ರಪ್ಪ ವಡಗೇರಿ,ರಮೇಶ ಹತ್ತಿಕುಣಿ, ಶಿವಣ್ಣ ಹೂನುರು, ಮೌನೇಶ ನಾಯ್ಕಲ್, ಹಣಮಂತ್ರಾಯ ಉಳ್ಳೆಸೂಗುರು, ಜೀವಣ್ಣ ನಾಯ್ಕಲ್, ಮೌನಪ್ಪ ಪಸಪುಲ್, ಬನ್ನಪ್ಪ ಕಾಳೆಬೆಳಗುಂದಿ ಮತ್ತು ಶೇಖರ ತಾತಾ ಮುಸ್ಠೂರ ಸೇರಿದಂತೆಯೇ ಇತರರಿದ್ದರು.
  • ಜಿಲ್ಲೆಯ ಸಹಕಾರಿ ವಲಯಕ್ಕೆ ಹೊಟ್ಟಿಯವರು ಕಳಸಪ್ರಾಯ- ವಿಶ್ವನಾಥರೆಡ್ಡಿ ದರ್ಶನಾಪುರ

    ಜಿಲ್ಲೆಯ ಸಹಕಾರಿ ವಲಯಕ್ಕೆ ಹೊಟ್ಟಿಯವರು ಕಳಸಪ್ರಾಯ- ವಿಶ್ವನಾಥರೆಡ್ಡಿ ದರ್ಶನಾಪುರ

    ಯಾದಗಿರಿ: ರಾಷ್ಟ್ರೀಯ ತೋಟಗಾರಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ದೆಹಲಿಯ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಸಿದ್ದಪ್ಪ ಎಸ್ ಹೊಟ್ಟಿ ಅವರಿಗೆ ಹೊಟ್ಟಿಯ ಆತ್ಮೀಯ ಬಳಗದ ವತಿಯಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಲಯದಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.

    ಸನ್ಮಾನ ನೇರವೆರಿಸಿ ಮಾತನಾಡಿದ  ಸಹಕಾರ ಯೂನಿಯನ್ ಅಧ್ಯಕ್ಷ ವಿಶ್ವನಾಥರೆಡ್ಡಿ ದರ್ಶನಪೂರ ಗಿರಿ ಜಿಲ್ಲೆಯ ಸಹಕಾರ ಸಂಘದಲ್ಲಿ ಗುರಿತಿಕೊಂಡಿದ್ದ ಸಿದ್ದಪ್ಪ ಹೊಟ್ಟಿ ದೇಶದ ದೆಹಲಿಯಲ್ಲಿರುವ ನೆಪೆಡ್ ಸಂಸ್ಥೆಯ ಉಪಾಧ್ಯಕ್ಷರಾಗಿ ಹಾಗೂ ರಾಷ್ಟ್ರೀಯ ತೋಟಗಾರಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾಗಿದ್ದು ನಮ್ಮ ಹಿಂದುಳಿದ  ಯಾದಗಿರಿ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.

    ಸಹಕಾರ ಯುನಿಯನ್ ನಿರ್ದೇಶಕ ಕೆಂಚಪ್ಪ ನಗನೂರ ಮಾತನಾಡಿ ಸಿದ್ದಪ್ಪ ಎಸ್ ಹೊಟ್ಟಿ ಅವರು ದೆಹಲಿ ನೆಪೆಡ್ ಸಂಸ್ಥೆಯ ಮತ್ತ ನೂತನವಾಗಿ ಆಯ್ಕೆಯಾದ ಎನ್ ಎಚ್ ಆರ್ ಡಿ ಎಪ್ ಸಂಸ್ಥೆಯ ವತಿಯಿಂದ ಬರುವ ಸವಲತ್ತುಗಳನ್ನು ನಮ್ಮ ಗಿರಿ ಜಿಲ್ಲೆಗೆ ತರುವಂತಹ ಕೆಲಸ ಆಗಬೇಕು ನಮ್ಮ ಸ್ಥಳೀಯ ಸಹಕಾರ ಸಂಘಗಳಿಗೆ ಆರ್ಥಿಕ ಶಕ್ತಿ ತುಂಬುವಂತಹ ಕೆಲಸ ತಾವು ಮಾಡಬೇಕು ಎಂದು ಹೇಳಿದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ದಪ್ಪ ಎಸ್ ಹೊಟ್ಟಿ  ನಾನು ಸಹಕಾರ ಕ್ಷೇತ್ರದಲ್ಲಿ ಇಂದು ಈ ಮಟಕ್ಕೆ ಹೋಗಲು ದಿವಂಗತ ಸದಾಶಿವರೆಡ್ಡಿ ಕಂದಕೂರ ಅವರ ಆಶಿರ್ವಾದದಿಂದ ನಾನು ಸಹಕಾರ ಕ್ಷೇತ್ರದಲ್ಲಿ ಬೇಳೆಯಲು ಸಾದ್ಯವಾಗಿದೆ ಎಂದು ಹೇಳಿದರು.  ನಾನು ತಾಲೂಕು ಒಕ್ಕಲುತನ ಹುಟ್ಟವಳಿ ಮಾರಟ ಸಹಕಾರ ಸಂಘದ ಅಧ್ಯಕ್ಷರಾಗಿ ನಿರ್ದೇಶಕರಾಗಿ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ. ಇನ್ನೂ ಅನೇಕ ಸಂಘಗಳಲ್ಲಿ ಹುದ್ದೆಯನ್ನು ನಿಭಾಯಿಸಲು ನಿಮ್ಮೇಲ್ಲರ ಸಹಕಾರದಿಂದ ಸೇವೆ ಮಾಡುತ್ತಿದ್ದೇನೆ ಎಂದರು.

    ಈ ಸಂದರ್ಭದಲ್ಲಿ ಕಲಬುರಗಿ ಹಾಗೂ ಯಾದಗಿರಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಪವನ ಕುಮಾರ. ಅಯ್ಯಣ್ಣ ಹುಂಡೇಕಾರ.ಪ್ರಕಾಶ ಅಂಗಡಿ ಕನ್ನೆಳ್ಳಿ. ಆರ್ ಮಾಹದೇವಪ್ಪಗೌಡ ಅಬ್ಬೆತುಮಕುರ. ಬಸವಂತ್ರಾಯ ಮಾಲಿಪಾಟೀಲ್. ಬಸವರಾಜ ಮೊಟ್ನಳ್ಳಿ. ಡಾ. ಭೀಮರಾಯ ಲಿಂಗೇರಿ.ಡಾ. ಎಸ್ ಎಸ್ ನಾಯಕ. ಚೆನ್ನಪ್ಪ ಠಾಣಗುಂದಿ, ಸೂಗಪ್ಪ ಪಾಟೀಲ್, ಅಮರಣ್ಣಗೌಡ ಗಡ್ಡೆಸೂಗೂರು, ವೈಜನಾಥ ತುಮಕೂರು, ನಾಗೇಂದ್ರ ಜಾಜಿ. ವಿ ಎಸ್ ಜಾಕಾಮಠ. ವೀರಭದ್ರಯ್ಯ ಮೋಟಾರ. ಶರಣಪ್ಪ ಗುಳಗಿ. ನಾಗಪ್ಪ ಸಜ್ಜನ. ಮಲ್ಲಿನಾಥ ಆಯರಕರ್. ಶೇಖರ ಅರಳಿ. ಲಕ್ಮೀನಾರಯಣ. ಅಯ್ಯಣ್ಣ ಗೌಡ ಕ್ಯಾಸಪನಳ್ಳಿ. ದೇವರಾಜ ವರ್ಕನಳ್ಳಿ,  ಸುಜಾತ ಮಠ.ರೇಖಾ ಮ್ಯಾಗೇರಿ. ಮಲ್ಲು ಸ್ವಾಮಿ,ಸಿದ್ದಪ್ಪ ಹೊಟ್ಟಿಯ ಆತ್ಮೀಯ ಬಳಗದಿಂದ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

  • ಯುವಕರು ನಶೆ ಮುಕ್ತರಾಗಿ ದೇಶಾಭಿಮಾನ ಬೆಳೆಸಿಕೊಳ್ಳಿ- ಸಿದ್ದರಾಮ 

    ಯುವಕರು ನಶೆ ಮುಕ್ತರಾಗಿ ದೇಶಾಭಿಮಾನ ಬೆಳೆಸಿಕೊಳ್ಳಿ- ಸಿದ್ದರಾಮ 

    ಸಿರವಾರ: ಹಲವು ಯುವಕರು ನಶೆ ಅಥವಾ ಮತ್ತು ಭರಿಸುವ ಅಪಾಯಕಾರಿ ಪದಾರ್ಥಗಳನ್ನು ಸೇವಿಸುವ ವ್ಯಸನಗಳಿಗೆ ಬಲಿಯಾಗಿದ್ದಾರೆ. ಇದರಿಂದ ಅವರ ಆರೋಗ್ಯ ಹಾಳಾಗುವುದಷ್ಟೇ ಅಲ್ಲ ದೇಶದ ಅಭಿವೃದ್ಧಿಯೂ ಕುಂಠಿತವಾಗುತ್ತಿದೆ. ಆದ್ದರಿಂದ ಯುವಕರು ನಶೆ ಮುಕ್ತರಾಗಿ ದೇಶಭಕ್ತಿ ಮತ್ತು ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಶಾಲಾ ಮುಖ್ಯ ಗುರು ಸಿದ್ಧರಾಮ ಹೇಳಿದರು.

    ತಾಲೂಕಿನ ತುಪ್ಪದೂರು ಕೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಲೆಯಲ್ಲಿ ನಶಾ ಮುಕ್ತ ಭಾರತ ಅಭಿಯಾನ ಯೋಜನೆಯಡಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತಿ ಹೆಚ್ಚು ಜನರು ಮಾದಕ ವ್ಯಸನಕ್ಕೆ ಬಲಿಯಾಗುತಿದ್ದು, ಇದನ್ನು ತಡೆಗಟ್ಟಲು ಪ್ರತಿಯೊಬ್ಬ ಯುವಕರು ನಶಾಮುಕ್ತ  ಜಿಲ್ಲೆಗೆ ಕೈಜೋಡಿಸಿದಾಗ ಮಾತ್ರ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.

    ಯುವಕರು ಚಿಕ್ಕ ವಯಸ್ಸಿನಲ್ಲಿ ನಶೆ ತರಿಸುವ ಚಟಗಳಿಗೆ ದಾಸರಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಪಂಜಾಬ ಮತ್ತಿತರ ರಾಜ್ಯಗಳಲ್ಲಿ ಇದು ಮಿತಿಮೀರುತ್ತಿದೆ. ಇದರಿಂದ ಸಮಾಜ ಮತ್ತು ದೇಶದ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ. ಯುವಕರೇ ದೇಶದ ಶಕ್ತಿಯಾಗಿದ್ದಾರೆ.

    ಈ ಸಂದರ್ಭದಲ್ಲಿ ಶಾಲೆಯ ಅತಿಥಿ ಶಿಕ್ಷಕರಾದ ನಾಗೇಶ ಭೋವಿ ಕುರುಡಿ, ಶಿವಪ್ಪ ನಾಯಕ ಕಲ್ಲೂರು, ಅಂಗನವಾಡಿ ಶಿಕ್ಷಕಿ ಸುಜಾತ ಮಾಚನೂರು, ಅಡುಗೆ ಸಿಬ್ಬಂದಿ ದೇವಮ್ಮ, ಬಸ್ಸಮ್ಮ, ಹುಲಿಗೆಮ್ಮ ಗ್ರಾಮದ ಯುವಕರಾದ ಹನುಮಂತ ನಾಯಕ, ರವಿ ನಾಯಕ, ಉರುಕುಂದ ನಾಯಕ, ಚೆನ್ನಯ, ಮಾರೆಪ್ಪ ನಾಯಕ, ಯಂಕಪ್ಪ ನಾಯಕ, ಯಲ್ಲಾಲಿಂಗ ನಾಯಕ, ಹುಲಿಗೇಶ ನಾಯಕ, ನಾಗರಾಜ, ಯಂಕಪ್ಪ , ದೇವಯ್ಯ ನಾಯಕ, ಯಲ್ಲಾಲಿಂಗ, ಮಹೇಶ್ ನಾಯಕ ಸೇರಿದಂತೆ ಇತರರಿದ್ದರು.

  • ವಡಗೇರಾ: ಗಣೇಶ ಹಬ್ಬ,ಈದ್ ಮಿಲಾದ್ ಶಾಂತಿ ಸಭೆ

    ವಡಗೇರಾ: ಗಣೇಶ ಹಬ್ಬ,ಈದ್ ಮಿಲಾದ್ ಶಾಂತಿ ಸಭೆ

    ವಡಗೇರಾ: ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಶಾಂತಿ ಸಭೆಯನ್ನು ವಡಗೇರಾ ಪೊಲೀಸ್ ಠಾಣಾ ಅವರಣದಲ್ಲಿ ಆಯೋಜಿಸಲಾಗಿತ್ತು.

    ತಾಲೂಕಿನ ಕಾಡಮಗೇರಾ (ಬಿ), ತುಮಕೂರು, ಐಕೂರು ಗ್ರಾಮಗಳ ಸಮುದಾಯ ಮುಖಂಡರು ಸಭೆಯಲ್ಲಿ ಭಾಗವಹಿಸಿದರು.

    ಪಿಎಸ್ಐ ಮಹಿಬೂಬ್ ಅಲಿ ಮಾತನಾಡಿ – ಗಣೇಶ ಪ್ರತಿಷ್ಠಾಪನೆಗೆ ಸಂಬಂಧಪಟ್ಟ ಇಲಾಖೆಗಳಿಂದ ಪರವಾನಿಗೆ ಕಡ್ಡಾಯ, ಮೂರ್ತಿ ಪ್ರತಿಷ್ಠಾಪನೆ ಬಳಿಕ ಪ್ರತಿದಿನ ಮೂರ್ತಿಯನ್ನು ಕಾಯಲು 1–2 ಮಂದಿ ಕಡ್ಡಾಯವಾಗಿ ಇರತಕ್ಕದ್ದು, ವಿಸರ್ಜನೆ ವೇಳೆ ಕರ್ಕಶ ಡಿಜೆ ನಿಷೇಧ ಎಂದು ಸ್ಪಷ್ಟ ಸೂಚನೆ ನೀಡಿದರು.

    ಈದ್ ಮಿಲಾದ್ ಮೆರವಣಿಗೆಯೂ ಶಾಂತಿಯುತವಾಗಿರಬೇಕು, ಈದ್ ಮಿಲಾದ್ ಹಬ್ಬದ ಮೆರವಣಿಗೆ ಸಂದರ್ಭದಲ್ಲಿ ಶಾಂತ ರೀತಿಯಿಂದ ಯಾವುದೇ ಧರ್ಮಕ್ಕೆ ತೊಂದರೆಯಾಗದಂತೆ, ಹಿಂದೂ–ಮುಸ್ಲಿಂ ಸಹೋದರತ್ವ ಕಾಪಾಡಬೇಕು ಎಂದು ತಿಳಿಸಿದರು.

  • ವಾಲ್ಮೀಕಿ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ – ಮಗ್ದಂಪುರ

    ವಾಲ್ಮೀಕಿ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ – ಮಗ್ದಂಪುರ

    ಸತ್ಯಕಾಮ ವಾರ್ತೆ ಯಾದಗಿರಿ: 

    ವಾಲ್ಮೀಕಿ ಸಮಾಜದ ಪ್ರಮುಖ ಬೇಡಿಕೆಗಳು ಹಾಗೂ ನಕಲಿ ಜಾತಿ ಪ್ರಮಾಣ ಪತ್ರಗಳು ತಡೆಯಲು ನಗರದ ತಹಶಿಲ್ದಾರರ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ಬೃಹತ್ ಪ್ರಮಾಣ ರ್ಯಾಲಿ ಮುಖಾಂತರ ಹೋರಾಟ ಮಾಡಲಾಗುತ್ತದೆ ಎಂದು ಉತ್ತರ ಕರ್ನಾಟಕ ವಾಲ್ಮೀಕಿ ಸಮಾಜದ ಅಧ್ಯಕ್ಷ ಮಾರೆಪ್ಪ ನಾಯಕ ಮಗ್ದಂಪುರ ಹೇಳಿದರು.

    ಪತ್ರಿಕೆ ಹೇಳಿಕೆ ನೀಡಿ ಮಾತನಾಡಿದ ಅವರು ಈ ಬೃಹತ್ ಪ್ರಮಾಣದ ಹೋರಾಟವನ್ನು ದಾವಣಗೇರ ವಾಲ್ಮೀಕಿ ಗುರು ಪೀಠದ ಜಗದ್ಗುರು ಪ್ರಸನ್ನನಂದ ಸ್ವಾಮಿಜಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

    ಈ ಹೋರಾಟದಲ್ಲಿ ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಹಾಗೂ ಯಾದಗಿರಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳ ವಾಲ್ಮೀಕಿ ಸಮಾಜದ ಭಾಂದವರು ಸುಮಾರು ಐದು ಸಾವಿರ ಜನರು ಈ ಹೋರಾಟದಲ್ಲಿ ಭಾಗವಸಲಿದ್ದಾರೆ ಎಂದರು.

    ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸಚಿವರನ್ನು ನೇಮಿಸದೆ ನಮ್ಮ ಸಮಾಜಕ್ಕೆ ಬರುವ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಆಕಿ ತುಳಿತಕ್ಕೆ ಓಳಗಾದ ಸಮಾಜವನ್ನು ಮೂಲೆ ಗುಂಪು ಮಾಡುತ್ತಿರು ಸರ್ಕಾರದ ವಿರುದ್ಧ ಬೃಹತ್ ಹೋರಾಟವನ್ನು ಆಯೋಜಿಸಿದ್ದೇವೆ

    ಪರಿಶಿಷ್ಟ ಪಂಗಡದ ಸಮಾಜದ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮುಖಾಂತರ ಕರ್ನಾಟಕ ರಾಜ್ಯದ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.

  • ನೂತನ ಎಸ್.ಡಿ.ಎಮ್.ಸಿ ಅಸ್ತಿತ್ವಕ್ಕೆ

    ನೂತನ ಎಸ್.ಡಿ.ಎಮ್.ಸಿ ಅಸ್ತಿತ್ವಕ್ಕೆ

    ಗುರುಮಠಕಲ್: ಸರಕಾರಿ ಭಾಷಾ ಅಲ್ಪಸಂಖ್ಯಾತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿ-ಎಂಸಿ) ಅಸ್ತಿತ್ವಕ್ಕೆ ತರಲಾಯಿತು. ಆಯಾಸ್ ಅಲಿ ತಂ ತಾಹೆರ್ ಅಲಿ -ಅಧ್ಯಕ್ಷರು, ವೆಂಕಟಮ್ಮ ತಂದೆ ನಾರಾಯಣ – ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

    ಸಮಿತಿಯು 18 ಸದಸ್ಯರನ್ನು ಒಳಗೊಂಡಿರುತ್ತದೆ. 8 ಪುರುಷ ಸದಸ್ಯರು ಮತ್ತು 8 ಜನ ಮಹಿಳಾ ಸದಸ್ಯರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಮುಖ್ಯ ಗುರುಗಳಾದ ಅನುರಾಧ ತಿಳಿಸಿದ್ದಾರೆ.

    ಸಮೂಹ ಸಂಪನ್ಮೂಲ ವ್ಯಕ್ತಿ ಬಾಲಪ್ಪ ಸೇರಿದಂತೆ ಶಾಲೆಯ ಸಿಬ್ಬಂದಿ, ಎಲ್ಲ ಪಾಲಕ ಬಳಗ ಉಪಸ್ಥಿತರಿದ್ದರು.

  • ಬಾನು ಮುಷ್ತಾಕ್ ಅವರಿಗೆ ಅಧಿಕೃತ ಆಹ್ವಾನ

    ಬಾನು ಮುಷ್ತಾಕ್ ಅವರಿಗೆ ಅಧಿಕೃತ ಆಹ್ವಾನ

    ಬಾನು ಮುಷ್ತಾಕ್ ಅವರಿಗೆ ಅಧಿಕೃತ ಆಹ್ವಾನ

    ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಸುಕ್ಷೇತ್ರ ಗಬ್ಬೂರಿನ ಮಹಾಶೈವ ಧರ್ಮಪೀಠದ 2025ನೇ ಸಾಲಿನಲ್ಲಿ ಕೊಡ ಮಾಡುವ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ ಪ್ರಶಸ್ತಿಗೆ ಆಯ್ಕೆಯಾದ,ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಹಾಸನದ ಅವರ ನಿವಾಸದಲ್ಲಿ ಅಧಿಕೃತವಾಗಿ ಆಹ್ವಾನ ನೀಡಲಾಯಿತು.

    ಅಹ್ವಾನ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾನು ಮುಸ್ತಾಕ್ ಅವರು ಗಬ್ಬೂರಿನ ಮಹಾಶೈವ ಧರ್ಮಪೀಠದ ಅಧ್ಯಕ್ಷರಿಗೂ ಸಮಿತಿಯ ಸರ್ವ ಸದಸ್ಯರಿಗೂ ಅಭಿಮಾನಿಗಳ ವಿಶ್ವಾಸಕ್ಕೆ ಕೃತಜ್ಞತೆ ತಿಳಿಸಿ,ಕಲ್ಯಾಣ ಕರ್ನಾಟಕದ ಅನೇಕ ಶರಣರ ವಿಚಾರಧಾರೆಗಳನ್ನು ಅರಿತು,ನಿಮ್ಮೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಕೊಟ್ಟಿದ್ದಕ್ಕಾಗಿ ಅಭಿನಂದನೆಗಳು ಸಲ್ಲಿಸಿ ಮಾತನಾಡಿದರು.

    ಬಾನು ಮುಸ್ತಾಕ್ ಅವರು ಹೋರಾಟ,ಸಾಹಿತ್ಯ,ಸಾಂಸ್ಕೃತಿಕ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಹಗಲಿರುಳು ಶ್ರಮಿಸುತ್ತಿದ್ದಾರೆ, ಅವರು ರಚಿಸಿರುವ *ಎದೆಯ ಹಣತೆ ಕೃತಿಗೆ 2025ನೇ ಸಾಲಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದ್ದು ಇಡೀ ಕನ್ನಡಿಗರು ಹೆಮ್ಮೆಪಡುವಂಥ ವಿಷಯ ಎಂದು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಡಾ: ಎನ್.ಹೆಚ್. ಪೂಜಾರ ಸಂತೋಷ ವ್ಯಕ್ತಪಡಿಸಿ ಮಾತನಾಡಿದರು.

    ಗಬ್ಬೂರಿನ ಮಹಾಶೈವ ಧರ್ಮ ಪೀಠದಲ್ಲಿ ಆಗಸ್ಟ್ 9ರಂದು ನೂಲು ಹುಣ್ಣಿಮೆಯ ದಿವಸ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಂಡಿರುವ ಕುಮಾರಸ್ವಾಮಿಗಳ ಹುಟ್ಟು ಹಬ್ಬದ ಪ್ರಯುಕ್ತ ಭಾನು ಮುಸ್ತಾಕ್ ಅವರಿಗೆ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಮಿತಿಯ ಕಾರ್ಯದರ್ಶಿಗಳಾದ ಬಸವರಾಜ ಸಿನ್ನೂರ ಹೇಳಿದರು.

  • ಮಹಾನ್ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ರವರ 134ನೇ ಸ್ಮರಣಾ ದಿನಾಚರಣೆ.

    ಮಹಾನ್ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ರವರ 134ನೇ ಸ್ಮರಣಾ ದಿನಾಚರಣೆ.

    ಸತ್ಯಕಾಮ ವಾರ್ತೆ ಯಾದಗಿರಿ:

    ಮಹಾನ್ ಧರ್ಮನಿರಪೇಕ್ಷ- ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ್ ರವರ 134ನೇ ಸ್ಮರಣ ದಿನ ವನ್ನು ಯಾದಗಿರಿಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ (ಟೌನ್) ವಸತಿ ನಿಲಯದಲ್ಲಿ ಹಾಗೂ ಯರಗೋಳ ಗ್ರಾಮದ ಬಸ್ ನಿಲ್ದಾಣದ ಬಳಿ ಆಚರಿಸಲಾಯಿತು.

    ಆಧುನಿಕ ಶಿಕ್ಷಣಕ್ಕೆ ನಾಂದಿ ಹಾಡಿದ, ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದ, ವಿಧವಾ ಪುನರ್ ವಿವಾಹಕ್ಕಾಗಿ ದುಡಿದ ಮಹಾನ್ ಚೇತನ ಈಶ್ವರಚಂದ್ರ ವಿದ್ಯಾಸಾಗರರು ನಮ್ಮೆಲ್ಲರಿಗೂ ಆದರ್ಶವಾಗಬೇಕು. ಸಾರ್ವಜನಿಕ ಶಿಕ್ಷಣ ಉಳಿಸುವ ಹೋರಾಟಕ್ಕೆ ವಿದ್ಯಾಸಾಗರರು ನಮಗೆ ಸ್ಫೂರ್ತಿಯಾಗಬೇಕು ಎಂದು AIDSO ಜಿಲ್ಲಾ ಸಂಚಾಲಕರಾದ ಶಿಲ್ಪಾ ಬಿ ಕೆ ರವರು ಮಾತನಾಡಿದರು.

    ಕಾರ್ಯಕ್ರಮದಲ್ಲಿ AIDSO ಸದಸ್ಯರಾದ ದೇವೀಂದ್ರಮ್ಮ, ಲಕ್ಷ್ಮೀಕಾಂತ, ರೆಡ್ದೆಪ್ಪ, ರಂಜಿತಾ, ಶ್ರವಣಕುಮಾರ, ಮೆಹಬೂಬ್, ನಾಗಿಂದ್ರಮ್ಮ ಹಾಗೂ ಊರಿನ ನಾಗರೀಕರಾದ ಭೀಮರೆಡ್ಡಿ, ಯಂಕಾರೆಡ್ಡಿ ಇನ್ನಿತರರು ಪಾಲ್ಗೊಂಡಿದ್ದರು.

  • ನಾಳೆ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

    ನಾಳೆ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

    ಸತ್ಯಕಾಮ ವಾರ್ತೆ ಯಾದಗಿರಿ:
    ಲಯನ್ಸ್ ಕ್ಲಬ್, ಯಾದಗಿರಿ ಇವರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 30, 2025 (ಬುಧವಾರ) ಸಂಜೆ 5 ಗಂಟೆಗೆ ನಗರದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ತಿಳಿಸಿದೆ.

    ನಾಳೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲಾಧಿಕಾರಿಗಳಾದ ಹರ್ಷಲ್ ಭೋಯರ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲವೀಶ್ ಓರಾಡಿಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಪೃಥ್ವಿಕ್ ಶಂಕರ್ ಅವರು ವಿಶೇಷ ಅತಿಥಿಯಾಗಿದ್ದಾರೆ.

    ಪದಗ್ರಹಣಾಧಿಕಾರಿಯಾಗಿ ಎಲ್.ಎನ್. ಸಿಎ ಮನೋಜ್ ಕುಮಾರ್ ಪುರೋಹಿತ್ ಹಾಗೂ ಎಲ್.ಎನ್. ಸುರೇಶ್ ಜಂಗ್ನಾನಿ ಕಾರ್ಯನಿರ್ವಹಿಸಲಿದ್ದು, ಹರಿನಾರಾಯಣ ಭಟ್ಟಾಡ್ ಮತ್ತು ಸಿಎ ರಾಮು ಪರಿತಾಲಾ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದೆ.

    ಕಾರ್ಯಕ್ರಮದ ನಿರೂಪಣೆಯನ್ನು ಎಲ್.ಎನ್. ಜಾನಾರ್ಧನ್ ಅವರು ನಿಭಾಯಿಸಲಿದ್ದಾರೆ.

    2025-26ನೇ ಸಾಲಿನ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳು

    ಅಧ್ಯಕ್ಷರಾಗಿ Ln. ಭೀಮಣ್ಣಗೌಡ ಕ್ಯಾತ್ನಳ, ಕಾರ್ಯದರ್ಶಿಯಾಗಿ Ln. ಡಾ. ಶಿವಪುತ್ರರೆಡ್ಡಿ ಪಾಟೀಲ ಚಟ್ನಳ್ಳಿ ಹಾಗೂ ಖಜಾಂಚಿಯಾಗಿ Ln. ವೆಂಕಟರೆಡ್ಡಿ ಪಾಟೀಲ ತಂಗಡಗಿ ಅವರನ್ನು ಆಯ್ಕೆ ಮಾಡಲಾಗಿದೆ.

    ಉಪಾಧ್ಯಕ್ಷರಾಗಿ ಮಲ್ಲಣ್ಣಗೌಡ ಹಳಿಮನಿ, ಸದಸ್ಯತ್ವದ ಮುಖ್ಯಸ್ಥ Ln. ಸಿದ್ದರಾಮರೆಡ್ಡಿ ತಿಪ್ಪರೆಡ್ಡಿ, ಜಂಟಿ ಕಾರ್ಯದರ್ಶಿಯಾಗಿ. ಇಂದೂಧರ್ ಶಿನ್ನೂರ, ಸೇವಾ ಕಾರ್ಯದರ್ಶಿಯನ್ನಾಗಿ ಮಲ್ಲಿಕಾರ್ಜುನ ಸಿರ್ಗೋಳ, ಟೇಮರ್ ಶರಣರೆಡ್ಡಿ ಹತ್ತಿಕುಣಿ, ಟೇಲ್ ಟ್ವಿಸ್ಟರ್ ವಿಜಯ ದಿಗ್ಗವಿ ಹಾಗೂ ಮಾರುಕಟ್ಟೆ ಸಂವಹನ ಮುಖ್ಯಸ್ಥೆಯಾಗಿ ಲೀಲಾ ಕೃಷ್ಣ ಅವರನ್ನು ನೇಮಕ ಮಾಡಲಾಗಿದೆ ಹಾಗೂ LCIF ಸಂಯೋಜಕರಾಗಿ ದೀಪಕ್ ಯಲಸತ್ತಿ ಮತ್ತು ಸಹ ಖಜಾಂಚಿಯಾಗಿ ವೀರೇಂದ್ರ ಪಾಟೀಲ ಮೊಸಂಬಿ ಅವರನ್ನು ನೇಮಕ ಮಾಡಲಾಗಿದೆ.

    ಜಿಲ್ಲಾ ಮಟ್ಟದ ಸೇವಾ ವಿಭಾಗಗಳಲ್ಲಿಯೂ ಯಾದಗಿರಿ ಸದಸ್ಯರು ನಾಮನಿರ್ದೇಶಿತರಾಗಿದ್ದು, ಆರೋಗ್ಯ, ಶಿಕ್ಷಣ, ಸ್ವಚ್ಛತಾ ಚಟುವಟಿಕೆ ಹಾಗೂ ಕ್ರೀಡಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

    ಕಾರ್ಯಕ್ರಮಕ್ಕೆ ಲಯನ್ಸ್ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಬೇಕೆಂದು ಕೋರಲಾಗಿದೆ.