Category: National

  • ಅಗ್ನಿವೀರ್ 2025: ಫಲಿತಾಂಶ ಪ್ರಕಟ

    ಅಗ್ನಿವೀರ್ 2025: ಫಲಿತಾಂಶ ಪ್ರಕಟ

    ನವದೆಹಲಿ: ಭಾರತೀಯ ಸೇನೆಯು ಅಗ್ನಿವೀರ್ ನೇಮಕಾತಿ 2025ರ ಭಾಗವಾಗಿ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಯ ಫಲಿತಾಂಶಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಜೂನ್ 30 ರಿಂದ ಜುಲೈ 10, 2025 ರವರೆಗೆ ನಡೆದ ಈ ಪರೀಕ್ಷೆಯಲ್ಲಿ ಪಾಲ್ಗೊಂಡಿರುವ ಅಭ್ಯರ್ಥಿಗಳು ಈಗ ತಮ್ಮ ಫಲಿತಾಂಶಗಳನ್ನು joinindianarmy.nic.in ನಲ್ಲಿ ಪರಿಶೀಲಿಸಬಹುದು ಹಾಗೂ ಡೌನ್‌ಲೋಡ್ ಮಾಡಬಹುದು.

     

     ಫಲಿತಾಂಶ ಪರಿಶೀಲನೆಗಾಗಿ ಹಂತಗಳು: 
    • ಮುಖಪುಟದಲ್ಲಿ “Agneepath CEE Result 2025” ಎಂಬ ಲಿಂಕ್ ಕ್ಲಿಕ್ ಮಾಡಿ
    • ನಿಮ್ಮ ಲಾಗಿನ್ ವಿವರಗಳು (ರಿಜಿಸ್ಟರ್ಡ್ ಇಮೇಲ್ ಐಡಿ/ಫೋನ್ ನಂಬರ್ ಮತ್ತು ಪಾಸ್ವರ್ಡ್) ನಮೂದಿಸಿ
    • ಫಲಿತಾಂಶ ಪರದೆಯ ಮೇಲೆ ತೋರಿಸಲಿದೆ
    • ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್‌ ಔಟ್ ತೆಗೆದುಕೊಳ್ಳಿ

    ಪರೀಕ್ಷೆಯ ಕುರಿತು ಸಂಕ್ಷಿಪ್ತ ವಿವರ:

    • ಪರೀಕ್ಷೆಯ ದಿನಾಂಕಗಳು: ಜೂನ್ 30 – ಜುಲೈ 10, 2025

    • ಪರೀಕ್ಷಾ ಮಾದರಿ: ಬಹು ಆಯ್ಕೆ ಪ್ರಶ್ನೆಗಳು (MCQ), ವಸ್ತುನಿಷ್ಠ ಮಾದರಿ

    • ಅರ್ಜಿ ಪ್ರಕಾರ:

      • ಕೆಲವೊಂದು ವರ್ಗದ ಅಭ್ಯರ್ಥಿಗಳಿಗೆ 1 ಗಂಟೆಯಲ್ಲಿ 50 ಪ್ರಶ್ನೆಗಳು

      • ಇತರರಿಗೆ 2 ಗಂಟೆಯಲ್ಲಿ 100 ಪ್ರಶ್ನೆಗಳು

    • ಪರೀಕ್ಷಾ ಭಾಷೆಗಳು (13): ಇಂಗ್ಲಿಷ್, ಹಿಂದಿ, ಕನ್ನಡ, ಮಲಯಾಳಂ, ತಮಿಳು, ತೆಲುಗು, ಪಂಜಾಬಿ, ಒಡಿಯಾ, ಬೆಂಗಾಲಿ, ಉರ್ದು, ಗುಜರಾತಿ, ಮರಾಠಿ, ಅಸ್ಸಾಮಿ

    ಅಗ್ನಿವೀರ್‌ ಆಗಿ ಸೇನೆಯ ಸೇರುವ ಕನಸು ಹೊಂದಿರುವ ಅಭ್ಯರ್ಥರಿಗೆ ಇದು ಮಹತ್ವದ ಹಂತ,

    ಸೂಚನೆ: ಹೆಚ್ಚಿನ ಮಾಹಿತಿಗಾಗಿ ಅಥವಾ ಯಾವುದೇ ಸ್ಪಷ್ಟತೆಗಾಗಿ, ಅಭ್ಯರ್ಥಿಗಳು joinindianarmy.nic.in ಗೆ ಭೇಟಿ ನೀಡಲು ಸೂಚಿಸಲಾಗಿದೆ.

    ನೇಮಕಾತಿ ಸುದ್ದಿಗಳು ಹಾಗೂ ಶಿಕ್ಷಣ ಮಾಹಿತಿ ಪಡೆಯಲು, ತಕ್ಷಣವೇ ಸತ್ಯಕಾಮ ಗ್ರೂಪ್‌ ಸೇರಿಕೊಳ್ಳಿ! 

  • ಗೌಡಾ ಪಡೆದ ರಮೇಶ ದೊರೆ ಅಭಿನಂದನಾ ಸಮಾರಂಭ

    ಗೌಡಾ ಪಡೆದ ರಮೇಶ ದೊರೆ ಅಭಿನಂದನಾ ಸಮಾರಂಭ

    ಸತ್ಯಕಾಮ ವಾರ್ತೆ ಸುರಪುರ:
    ಕಾಂಗ್ರೆಸ್ ಪಕ್ಷದ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಅವರಿಗೆ ತಾಲೂಕಿನ ಅವರ ಸ್ವಗ್ರಾಮ ಆಲ್ದಾಳ ಗ್ರಾಮದಲ್ಲಿ ಅಭಿನಂದನಾ ಸಮಾರಂಭ ನಡೆಸಲಾಯಿತು.ರಮೇಶ ದೊರೆಗೆ ಬೃಹತ್ ಗಾತ್ರದ ಹೂಮಾಲೆ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.

    ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ರಮೇಶ ದೊರೆ ಅವರು ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಸಮಾಜ ಸೇವೆಯನ್ನು ಮಾಡುತ್ತಾ ಬರುತ್ತಿದ್ದು,ಅವರ ಸೇವೆಯನ್ನು ಗುರುತಿಸಿ ಇಂದು ತಮಿಳುನಾಡಿನ ಏಷ್ಯಾ ಅಂತರಾಷ್ಟಿçÃಯ ಸಂಸ್ಕೃತಿ ಸಂಶೋಧನಾ ವಿವಿಯೂ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿದ್ದು,ಇದರಿಂದಾಗಿ ನಮ್ಮ ಆಲ್ದಾಳ ಗ್ರಾಮಕ್ಕೆ ನಾಡಿನಲ್ಲಿ ಬಹುದೊಡ್ಡ ಕೀರ್ತಿ ಬಂದAತಾಗಿದೆ.ಅದಕ್ಕೆ ಕಾರಣರಾದ ರಮೇಶ ದೊರೆ ಅವರನ್ನು ಇಂದು ನಾವೆಲ್ಲರು ಅಭಿನಂದಿಸುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದರು.

    ಅಲ್ಲದೆ ಇನ್ನೂ ಹೆಚ್ಚೆಚ್ಚು ಜನರ ಸೇವೆ ಮಾಡುವ ಶಕ್ತಿ ದೇವರು ಅವರಿಗೆ ಕೊಡಲಿ,ಇನ್ನೂ ರಾಜ್ಯ,ರಾಷ್ಟç ಮಟ್ಟದ ಪ್ರಶಸ್ತಿಗಳು ಅವರಿಗೆ ಲಭಿಸಲಿ ಎಂದು ಹಾರೈಸಿದರು.

    ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾನಪ್ಪ ಸಾಹುಕಾರ,ನ್ಯಾಯವಾದಿ ಬಸವರಾಜ ಅನಸೂರ,ದುರಗಪ್ಪ ಮಾಸ್ತರ ಮಾತನಾಡಿದರು.

    ಗ್ರಾಮಸ್ಥರ ಸನ್ಮಾನ ಸ್ವೀಕರಿಸಿದ ರಮೇಶ ದೊರೆ ಮಾತನಾಡಿ, ನಾನು ಯಾವುದೇ ಪದವಿ,ಪ್ರಶಸ್ತಿಗಾಗಿ ಸಮಾಜ ಸೇವೆ ಮಾಡುತ್ತಿಲ್ಲ.ಆದರೆ ನಮ್ಮಿಂದಾದ ಸಹಾಯವನ್ನು ಜನರಿಗೆ ಮಾಡಬೇಕು,ಸಮಾಜದ ಅಭಿವೃಧ್ಧಿಗೆ ನಮ್ಮಿಂದಾದ ಕೆಲಸ ಮಾಡೋಣ ಎಂದು ಮಾಡುತ್ತಿರುವೆನು.ಮುಂದೆಯೂ ನನ್ನ ಸೇವೆ ಹೀಗೆಯೇ ಮುಂದುವರೆಯಲಿದೆ.ನನ್ನ ಸೇವೆಯನ್ನು ಗುರುತಿಸಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ನನ್ನ ಜವಬ್ದಾರಿಯನ್ನು ಹೆಚ್ಚಿಸಿದೆ.ಅಲ್ಲದೆ ನನಗೆ ಇನ್ನಷ್ಟು ಕೆಲಸ ಮಾಡಲು ಇಂದು ಅಭಿನಂದನೆ ಸಮಾರಂಭದ ಮೂಲಕ ಶಕ್ತಿ ತುಂಬಿರುವ ಇಡೀ ಗ್ರಾಮದ ಎಲ್ಲ ಮುಖಂಡರು ಮತ್ತು ಜನತೆಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿ,ಇನ್ನಷ್ಟು ಹೆಚ್ಚಿನ ಸೇವೆ ಮಾಡಲು ಭಗವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

    ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ್, ಕರವೇ ತಾ.ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮರಡಿ,ರಾಮಸ್ವಾಮಿ ಕಿಲ್ಲೇದಾರ,ನಿಂಗಯ್ಯ ಕಿಲ್ಲೇದಾರ,ಪ್ರಧಾನೆಪ್ಪ ಸಕ್ರಾಪೂರ,ವೈಜನಾಥ ಹುದ್ದಾರ, ಸಂಜೀವಪ್ಪ ಕಟ್ಟಿಮನಿ,ಬಸವರಾಜ ಜಂಬಲದಿನ್ನಿ,ನರಸಿAಗ ಜಮಾದಾರ,ಬಾಬು ಪಟೇಲ್,ಮಲ್ಲಣ್ಣ ರಾಜಾಪುರ,ಮಾನಪ್ಪ ಕಟ್ಟಿಮನಿ, ಲಕ್ಷಿö್ಮÃಪತಿ ದೊರೆ ಹಾಗೂ ನಾಗರಾಳ ಗ್ರಾಮದ ಭೀಮರಾಯ ಠಾಣಾಗುಂದಿ,ತಿಪ್ಪಣ್ಣ ಚೆನ್ನೂರ,ಮಾನಪ್ಪಗೌಡ,ತಿರುಪತಿ ಹುದ್ದಾರ,ಅಯ್ಯಣ್ಣ ಕಟ್ಟಿಮನಿ,ಯಂಕಪ್ಪ ಹುದ್ದಾರ,ಸೋಮು ಕಟ್ಟಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.ನಿವೃತ್ತ ಶಿಕ್ಷಕ ಭೀಮಣ್ಣ ಹುದ್ದಾರ ನಿರೂಪಿಸಿದರು,ನಿಂಗಯ್ಯ ಕಿಲ್ಲೆದಾರ ವಂದಿಸಿದರು.

  • ಮಹಿಪಾಲರೆಡ್ಡಿ ಸೇರಿ ಐವರಿಗೆ `ಕನ್ನಡ ನಿತ್ಯೋತ್ಸವ’ ಪ್ರಶಸ್ತಿ

    ಮಹಿಪಾಲರೆಡ್ಡಿ ಸೇರಿ ಐವರಿಗೆ `ಕನ್ನಡ ನಿತ್ಯೋತ್ಸವ’ ಪ್ರಶಸ್ತಿ

    ಬೆಂಗಳೂರು, ಸೆ.7- ಸುಗಮ ಸಂಗೀತ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾಗಿರುವ ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿಯು 2023 ನೇ ಸಾಲಿನ ರಾಜ್ಯಮಟ್ಟದ ಪ್ರತಿಷ್ಠಿತ `ಕನ್ನಡ ನಿತ್ಯೋತ್ಸವ ಪ್ರಶಸ್ತಿ’ಯನ್ನು ಪ್ರಕಟಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
    ಕಲ್ಯಾಣ ಕರ್ನಾಟಕದ ಕಲಬುರಗಿಯ ಕವಿ, ಲೇಖಕರಾದ ಮಹಿಪಾಲರೆಡ್ಡಿ ಮುನ್ನೂರ್, ಖ್ಯಾತ ಗಾಯಕಿ ಶಶಿಕಲಾ ಸುನೀಲ್, ಪ್ರತಿಷ್ಠಿತ ಸಂಸ್ಥೆ ವೀಣಾ ಮ್ಯೂಸಿಕಲ್‌ನ ಮಾಲೀಕರಾದ ಪಿ.ನಾಗರಾಜ್, ಕನ್ನಡ ಕಾರ್ಯಕರ್ತ, ಸಂಘಟಕ ಜಾವಗಲ್ ಪ್ರಸನ್ನಕುಮಾರ, ರಂಗಕರ್ಮಿ, ನಟ ಬೆಳ್ಳಿಚುಕ್ಕಿ ವೀರೇಂದ್ರ ಅವರುಗಳಿಗೆ ಕನ್ನಡ ನಿತ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
    ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಉದಯಭಾನು ಕಲಾ ಸಂಘದಲ್ಲಿ ಸೆ.10 ರಂದು ಸಂಜೆ 6 ಕ್ಕೆ ಆಯೋಜಿಸಲಾಗಿದೆ. ಮಾಜಿ ವಿಧಾನಸಭಾಧ್ಯಕ್ಷರಾದ ಪ್ರೊ.ಬಿ.ಕೆ.ಚಂದ್ರಶೇಖರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಅಕಾಡೆಮಿ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ಬಸವನಗುಡಿ ಶಾಸಕರಾದದ ಎಲ್.ಎ.ರವಿ ಸುಬ್ರಮಣ್ಯ ಅವರು ಪ್ರಶಸ್ತಿ ಪ್ರದಾನ ಮಾಡುವರು. ಹಿರಿಯ ಸಾಹಿತಿ ಮತ್ತು ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಭೈರಮಂಗಲ ರಾಮೇಗೌಡ ಅವರು ಸಮಾರೋಪ ನುಡಿಗಳಾಡುವರು. ನಾಡಿನ ಖ್ಯಾತ ಕಲಾವಿದರಿಂದ ಸುಗಮ ಸಂಗೀತ ಗಾಯನ, ಹೆಚ್.ಬಿ.ಜಯರಾಂ, ರಾಘವೇಂದ್ರ ಜೋಶಿ, ಜೈಕುಮಾರ ತಂಡದವರಿಂದ ವಾದ್ಯ ವೈಭವ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

  • 12 ಜನ ಸಾಧಕರಿಗೆ” ಸಾಹಿತ್ಯ ಸಾರಥಿ” ಪ್ರಶಸ್ತಿ

    ಕಲಬುರಗಿ : ಸಾಹಿತ್ಯ ಸಾರಥಿ ರಾಜ್ಯಮಟ್ಟದ ಸಾಹಿತಿಕ ಪತ್ರಿಕೆಯ 6ನೇ ವರ್ಷದ ಸಂಭ್ರಮದ ಪ್ರಯುಕ್ತ 12 ಜನ ಸಾಧಕರನ್ನು ಸಾಹಿತ್ಯ ಸಾರಥಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಹಾಗೂ ಸಾಹಿತಿ ಬಿ.ಎಚ್ .ನಿರಗುಡಿ ತಿಳಿಸಿದ್ದಾರೆ.
    ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು
    “ಸಾಹಿತ್ಯಕ್ಷೇತ್ರ ಡಾ. ಲಕ್ಷ್ಮಣ ಕೌಂಟೆ, ಡಾ. ವಿಕ್ರಮ್ ವಿಸಾಜಿ, ಡಾ ಅಮೃತಾ ಕಟಕೆ
    ” ಮಾಧ್ಯಮ ಕ್ಷೇತ್ರ ” ಶ್ರೀ ಸ, ದಾ, ಜೋಶಿ ಶ್ರೀ,ಸುಭಾಸ ಬಣಗಾರ,ಶ್ರೀ ಪ್ರಭುಲಿಂಗ ನೀಲೂರೆ, ವಿಜ್ಞಾನ ಕ್ಷೇತ್ರ ಡಾ ಶ್ರೀಶೈಲ ಘೂಳಿ, ವೈದ್ಯಕೀಯ ಕ್ಷೇತ್ರ ಡಾ ಈರಣ್ಣಾ ಹೀರಾಪೂರ, ಶಿಕ್ಷಣ ಕ್ಷೇತ್ರ ಶ್ರೀ ಶಿವಾನಂದ ಖಜೂರಗಿ ,ನಾಟಕ ಕ್ಷೇತ್ರ ಬಸಯ್ಯಸ್ವಾಮಿ ಪ್ಯಾಠಿಮಠ, ಚಿತ್ರಕಲಾ ಕ್ಷೇತ್ರ ಶಾಹೀದ್ ಪಾಶಾ ಸಮಾಜಸೇವೆ ಉಮಾ ಪಾಟೀಲ ಮುಂತಾದವರ ಸಮಗ್ರ ಸಾಧನೆಯನ್ನು ಪರಿಗಣಿಸಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
    2023 ಸೆಪ್ಟೆಂಬರ್ 3 ರಂದು ಕಲಬುರಗಿ ನಗರದ ಚೇಂಬರ್ ಆಪ್ ಕಾಮರ್ಸ್
    ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗುವುದು. ಎಂದು ತಿಳಿಸಿದ್ದಾರೆ.

  • ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಾದಂಬರಿ ಪುರಸ್ಕಾರ 2023′

    ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಾದಂಬರಿ ಪುರಸ್ಕಾರ 2023′


    ಬೆಂಗಳೂರು:
    ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಾದಂಬರಿ ಪುರಸ್ಕಾರ 2023′ ರ ಅಂತಿಮ ಸುತ್ತನ್ನು ಪ್ರವೇಶಿಸಿದ 5 ಅತ್ಯುತ್ತಮ ಕಾದಂಬರಿಗಳ ಪಟ್ಟಿ  ಹಾಗೂ ಕನ್ನಡ ಕಥಾಲೋಕ ಕುತೂಹಲದಿಂದ ಕಾಯುತ್ತಿದ್ದ ‘ಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ- 2023’ಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ 25 ಕಥೆಗಾರರ ಪಟ್ಟಿ ಪ್ರಕಟವಾಗಿದೆ. 

    ಅಂತಿಮ ಸುತ್ತಿನಲ್ಲಿರುವ ಕಾದಂಬರಿಗಳು:

    ಡಾ.ಎಚ್.ಎಸ್. ಅನುಪಮಾ ಅವರ ‘ಬೆಳಗಿನೊಳಗು ಮಹಾದೇವಿಯಕ್ಕ’ (ಲಡಾಯಿ ಪ್ರಕಾಶನ)
    ಉಷಾ ನರಸಿಂಹನ್ ಅವರ ‘ಕೆಂಡದ ರೊಟ್ಟಿ’ (ಅಂಕಿತ ಪುಸ್ತಕ)
    ಕಾ.ತ. ಚಿಕ್ಕಣ್ಣ ಅವರ ‘ಪುರಾಣ ಕನ್ಯೆ’ (ರಶ್ಮಿ ಪುಸ್ತಕ)
    ಪೂರ್ಣಿಮಾ ಮಾಳಗಿಮನಿ ಅವರ ‘ಅಗಮ್ಯ’ (ಸಪ್ನ ಬುಕ್ ಹೌಸ್)
    ಎಂ.ಆರ್. ದತ್ತಾತ್ರಿ ಅವರ ‘ಒಂದೊಂದು ತಲೆಗೂ ಒಂದೊಂದು ಬೆಲೆ’ (ಅಂಕಿತ ಪುಸ್ತಕ)

    ಈ ಐದು ಕಾದಂಬರಿಗಳಲ್ಲಿ ಒಂದು ಅತ್ಯುತ್ತಮ ಕಾದಂಬರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತಿದೆ. ಈ ಒಂದು ಲಕ್ಷದಲ್ಲಿ 75 ಸಾವಿರ ರೂ. ಲೇಖಕರಿಗೆ ಹಾಗೂ 25 ಸಾವಿರ ರೂ. ಪ್ರಕಾಶಕರಿಗೆ ವಿತರಿಸಲಾಗುತ್ತಿದೆ. ಮೆಚ್ಚುಗೆ ಪಡೆಯುವ ನಾಲ್ಕು ಕಾದಂಬರಿಗಳಿಗೆ ತಲಾ 5 ಸಾವಿರ ರೂ. ಬಹುಮಾನ ನೀಡಲಾಗುತ್ತಿದ್ದು, ಈ ಪೈಕಿ 3 ಸಾವಿರ ರೂ. ಲೇಖಕರಿಗೆ ಹಾಗೂ 2 ಸಾವಿರ ರೂ. ಪ್ರಕಾಶಕರಿಗೆ ನೀಡಲಾಗುತ್ತದೆ.

    ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ- 2023’ರ ಅಂತಿಮ ಸುತ್ತಿನಲ್ಲಿರುವ 25 ಕಥೆಗಾರರು: 

    ದೀಪ್ತಿ ಭದ್ರಾವತಿ
    ಜಯರಾಮಚಾರಿ

    ಮಾಧವಿ ಭಂಡಾರಿ ಕೆರೆಕೋಣ
    ಪ್ರವೀಣ್ ಕುಮಾರ್ ಜಿ. 
    ಲಕ್ಷ್ಮಣ ಬಾದಾಮಿ
    ಸ್ಮಿತಾ ಅಮೃತರಾಜ್. ಸಂಪಾಜೆ
    ಗಿರೀಶ್ ಎಂ.ಬಿ
    ಇಂದ್ರಕುಮಾರ್ ಎಚ್.ಬಿ
    ಕವಿತ ಹೆಗಡೆ ಅಭಯಂ 
    ಮಂಜುನಾಥ್ ಚಾಂದ್
    ಸಂದೀಪ ನಾಯಕ
    ಪೂರ್ಣಿಮಾ ಭಟ್ಟ ಸಣ್ಣಕೇರಿ
    ಶರತ್ ಭಟ್ ಸೇರಾಜೆ
    ಸುರೇಶ ರುದ್ರಪ್ಪ ಮುದ್ದಾರ
    ಮಂಜುನಾಥ ನಾಯ್ಕ್ 
    ಶಿವಾಗ್ 
    ಮಹಾದೇವ ಹಡಪದ ಸಾಲಾಪೂರ 
    ವಿಜಯಶ್ರೀ ಎಂ. ಹಾಲಾಡಿ
    ಪೂರ್ಣಿಮಾ ಮಾಳಗಿಮನಿ
    ಸದಾಶಿವ್ ಸೊರಟೂರು
    ಕರುಣಾಕರ ಹಬ್ಬುಮನೆ
    ಎನ್.ಸಿ. ಮಹೇಶ್
    ಜೆ.ಆರ್. ರವಿಕುಮಾರ್ ಜನಿವಾರ
    ಅಕ್ಷಯ ಪಂಡಿತ್, ಸಾಗರ
    ವಿಕಾಸ್ ನೇಗಿಲೋಣಿ 

    ಈ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಕಥೆಗೆ 50 ಸಾವಿರ ರೂಪಾಯಿ ನಗದು ಬಹುಮಾನ ಇರಲಿದೆ. ದ್ವೀತಿಯ ಸ್ಥಾನ ಪಡೆಯುವ ಕಥೆಗೆ 25 ಸಾವಿರ ರೂಪಾಯಿ, ತೃತೀಯ ಸ್ಥಾನಕ್ಕೆ 15 ಸಾವಿರ ರೂಪಾಯಿ ನಗದು ಬಹುಮಾನ ಇರಲಿದೆ. ಉಳಿದಂತೆ ಐದು ಕಥೆಗಳಿಗೆ ತಲಾ 5 ಸಾವಿರ ನಗದನ್ನು ಒಳಗೊಂಡ ಸಮಾಧಾನಕರ ಬಹುಮಾನ ಹಾಗೂ ಅಂತಿಮ ಸುತ್ತಿಗೆ ಆಯ್ಕೆಯಾಗುವ ಉಳಿದ17 ಕಥೆಗಳಿಗೆ ತಲಾ ಎರಡು ಸಾವಿರ ರೂಪಾಯಿ ನೀಡಲಾಗುತ್ತದೆ. ಆಯ್ಕೆಯಾದ ಈ 25 ಕಥೆಗಳನ್ನು ಒಳಗೊಂಡ ಪುಸ್ತಕ ಪ್ರಕಟಿಸಲಾಗುತ್ತದೆ.

    ಆಗಸ್ಟ್ 15, 2023 ರಂದು ಬೆಂಗಳೂರಿನ ಸುಚಿತ್ರ ಫಿಲ್ಮ್‌ ಸೊಸೈಟಿಯಲ್ಲಿ  ನಡೆಯಲಿರುವ ಪ್ರಶಸ್ತಿ ವಿತರಣಾ ಸಮಾರಂಭದ  ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರನ್ನು ಪ್ರಕಟಿಸಲಾಗುತ್ತದೆ.

  • ಶ್ರೀ ಆಕಾಶ ಶೇರಖಾನೆ ಅವರಿಗೆ ಶ್ರೀ ಬಸವರಾಜ ಭೀಮಳ್ಳಿರವರಿಂದ ಸನ್ಮಾನ

    75ನೇ ವರ್ಷಾಚರಣೆ ಮಾಡುತ್ತಿರುವ ಪಿಎಂ ಮಣ್ಣೂರರವರ ಜೀವನ ಆಧಾರಿತ ಚಿತ್ರಕಥೆ ಬಿಡುಗಡೆ ಮಾಡಿದ್ದಕ್ಕೆ ಫಸ್ಟ ಫಿಲ್ಂ ಪ್ರೋ ಮಾಲಿಕರಾದ ಶ್ರೀ ಆಕಾಶ ಶೇರಖಾನೆ ಅವರಿಗೆ ಶ್ರೀ ಬಸವರಾಜ ಭೀಮಳ್ಳಿರವರು ಸನ್ಮಾನ ಮಾಡಿ ನೆನಪಿನ ಕಾಣಿಕೆ ನೀಡಿದರು, ಈ ಅದ್ಭುತ ಸಮಾರಂಭದಲ್ಲಿ ಶ್ರೀ ಲಿಂಗರಾಜ ಅಪ್ಪಾಜಿ ಅಧ್ಯಕ್ಷತೆವಹಿಸಿದ್ದರು ಹಾಗೂ ಸಂಪಾದಕರಾದ ಶ್ರೀ ಆನಂದ ಪ. ಮಣ್ಣೂರ ಜೊತೆಗಿದ್ದರು.

  • ಇಂದು ಮಣ್ಣೂರ್ ರವರ  ಹುಟ್ಟುಹಬ್ಬ ಆಚರಣೆ : ಸನ್ಮಾನ ಸಮಾರಂಭ

    ಇಂದು ಮಣ್ಣೂರ್ ರವರ ಹುಟ್ಟುಹಬ್ಬ ಆಚರಣೆ : ಸನ್ಮಾನ ಸಮಾರಂಭ

    ಕಲಬುರಗಿ :— ಸತ್ಯಕಾಮ ಪತ್ರಿಕೆಯ ಪ್ರಧಾನ ಸಂಪಾದಕರು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾದ ಸನ್ಮಾನ್ಯ ಶ್ರೀ ಪಿ ಎಂ ಮಣ್ಣೂರ ಅವರ 75ನೇ ಹುಟ್ಟು ಹಬ್ಬದ ಭವ್ಯ ಸಮಾರಂಭ ಶ್ರೀ ಶ್ರೀನಿವಾಸರಾವ್ ಆರ್ ರಘೋಜಿ ಸಭಾ ಗ್ರಹ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸೂಪರ್ ಮಾರ್ಕೆಟ್ ಕಲಬುರಗಿಯಲ್ಲಿ ದಿನಾಂಕ 01-07-2023 ರಂದು ಸಾಯಂಕಾಲ 5-00 ಗಂಟೆಗೆ ವಿಜ್ರಮಣೆಯಿಂದ ಆಚರಿಸಲಾಗುತ್ತಿದೆ ಎಂದು ಸತ್ಯಕಾಮ ಪತ್ರಿಕೆಯ ಕಲಬುರಗಿ ಸ್ಥಾನಿಕ ಸಂಪಾದಕ ಶ್ರೀ ಆನಂದ್ ಮಣ್ಣೂರ ರವರು ತಿಳಿಸಿದ್ದಾರೆ.
    ಪರಮಪೂಜ್ಯ ಶ್ರೀ ಜಗದ್ಗುರು ಡಾ .ಸಾರಂಗಧರ , ಸಾರಂಗ ಮಠ ಶ್ರೀಶೈಲಂ, ಸುಲಫಲ ಮಠ ಶಹ ಬಜಾರ್ ಕಲಬುರಗಿ ರವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸನ್ಮಾನ್ಯ ಶ್ರೀ ತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್ ಸದಸ್ಯರು ಸತ್ಯಕಾಮ ವೆಬ್ಸೈಟ್ ಉದ್ಘಾಟಿಸಲಿದ್ದಾರೆ. ಸನ್ಮಾನ್ಯ ಶ್ರೀ ಪ್ರೊಫೆಸರ್ ದಯಾನಂದ ಅಗಸರ ಉಪಕುಲಪತಿಗಳು ಗುಲ್ಬರ್ಗ ವಿವಿ ಕಲಬುರಗಿ ಸಮಾರಂಭದ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆ ಸನ್ಮಾನ್ಯ ಶ್ರೀ ಲಿಂಗರಾಜಪ್ಪ ಅಪ್ಪ ಉಪಾಧ್ಯಕ್ಷರು ವಿಶ್ವ ಹಿಂದೂ ಪರಿಷತ್( ಉತ್ತರ) ವಹಿಸಲಿದ್ದಾರೆ. ಪಿ ಪಿ ಟಿ ಚಾಲನೆ ಸನ್ಮಾನ್ಯ ಶ್ರೀ ಬಸವರಾಜ ಮತ್ತಿಮೂಡ ಮಾನ್ಯ ಶಾಸಕರು ಕಲಬುರ್ಗಿ ಗ್ರಾಮೀಣ ಮತಕ್ಷೇತ್ರ ರವರ ಅಮೃತ ಹಸ್ತಗಳಿಂದ ನೆರವೇರಲಿದೆ. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಶ್ರೀ ಟಿ ವಿ ಶಿವಾನಂದನ್ ಹಾಗೂ ಶಶಿಕಾಂತ್ ಬಿ ಪಾಟೀಲ್ ಅಧ್ಯಕ್ಷರು ಕೆ ಕೆ ಸಿ ಸಿ ಐ ಕಲಬುರಗಿ ಆಗಮಿಸಲಿದ್ದಾರೆ.

    ಭವ್ಯ ಸನ್ಮಾನ:- ಇದೆ ಸನ್ಮಾನ ಸಮಾರಂಭದಲ್ಲಿ ಸತ್ಯಕಾಮ ಪತ್ರಿಕೆಯು ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದು, ಹಿರಿಯ ಹಾಗೂ ಯುವ ಪತ್ರಕರ್ತರನ್ನು ಸನ್ಮಾನಿಸಲಾಗುವುದು ಎಂದು ಆನಂದ್ ಮಣ್ಣೂರ ತಿಳಿಸಿದ್ದಾರೆ. ಸನ್ಮಾನಿತ ಪುರಸ್ಕೃತರಲ್ಲಿ ಶ್ರೀ ಶಿವಕಾಂತಾಚಾರ್ಯ ಮಣ್ಣೂರ ಹಿರಿಯ ಪತ್ರಕರ್ತರು, ಶ್ರೀ ಎಸ್ ಬಿ ಜೋಶಿ ಹಿರಿಯ ವರದಿಗಾರರು ಪಿಟಿಐ ಕಲಬುರಗಿ, ಶ್ರೀಮತಿ ಶೀಲಾ ತಿವಾರಿ ಸಂಪಾದಕರು ಕನ್ನಡ ಚಿಂತಕ ಪತ್ರಿಕೆ, ಶ್ರೀ ಕೇದಾರ ಲಿಂಗಯ್ಯ ಹಿರೇಮಠ ಕಲಬುರ್ಗಿ ವಾಣಿ ಕನ್ನಡ ಪತ್ರಿಕೆ, ಶ್ರೀ ಮುಹಿಯುದ್ದೀನ್ ಪಾಷಾ ಸಂಪಾದಕರು ಇನ್ ಕ್ಲಾಬ್ ಎ ಡೆಕ್ಕನ್ ಸಂಪಾದಕರು ಉರ್ದು ಪತ್ರಿಕೆ ಹಾಗೂ ಶ್ರೀ ಮಹಿಪಾಲ ರೆಡ್ಡಿ ಮುನೂರ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳು ಇವರನ್ನು ಸನ್ಮಾನಿಸಲಾಗುವುದು ಎಂದು ಆನಂದ್ ಮಣ್ಣೂರ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.