Category: Crime

  • ಪತ್ರಕರ್ತರ ಮೇಲೆ ಮಾರಣಾಂತಿಕ ಹಲ್ಲೆ

    ಕಲಬುರಗಿ: ಕಲ್ಯಾಣ ಕಹಳೆ ಪತ್ರಿಕೆಯ ಸಂಪಾದಕರಾದ ಶರಣ ಗೌಡ ಪಾಟೀಲ್ ಪಾಳಾ ಇವರು ಇಂದು ಮದ್ಯಾನ ಸೇಡಂ ರೋಡ್ ಎರ್ ಪೋರ್ಟ ಹತ್ತಿರ ತಮ್ಮ ಗೆಳೆಯನ ಕಾರಲ್ಲಿ ಕೊಂಕನಹಳ್ಳಿಗೆ ಹೋಗುವಾಗ ಕೆಲ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿ ಆಗಿದ್ದಾರೆ.
    ಪೋಲಿಸರಿಗೆ ಈಗಾಗಲೆ ದೂರು ನೀಡಿದ್ದು ಶರಣ ಗೌಡ ಇವರು ಕಲಬುರಗಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ವಶಕ್ಕೆ | ಪರೀಕ್ಷಾರ್ಥಿಗಳು ಅಸಮಾಧಾನ

    ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ವಶಕ್ಕೆ | ಪರೀಕ್ಷಾರ್ಥಿಗಳು ಅಸಮಾಧಾನ

    ಯಾದಗಿರಿ: ಪಿಎಸ್‌ಐ ಪರೀಕ್ಷಾ ಹಗರಣ ಮಾಸುವ ಮುನ್ನವೇ, ಈಗ ಅಂತಹದ್ದೇ ಮತ್ತೊಂದು ಹಗರಣವೊಂದು ಯಾದಗಿರಿಯಲ್ಲಿ ಬಯಲಾಗಿದೆ. ಕೆಪಿಎಸ್‍ಸಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ನಕಲು ಮಾಡುತ್ತಿದ್ದ ಯುವಕ ಹಾಗೂ ಆತನಿಗೆ ಸಹಕರಿಸಿದ ಇಬ್ಬರು ಆರೋಪಿಗಳನ್ನು ಸಹ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ವಶಕ್ಕೆ ಪಡೆದ ಆರೋಪಿಯನ್ನು ಅಫಜಲಪುರದ ಸೊನ್ನಾ ಗ್ರಾಮದ ಪುಟ್ಟು ಎಂದು ಗುರುತಿಸಲಾಗಿದೆ. ಮತ್ತಿಬ್ಬರ ಹೆಸರನ್ನು ಪೊಲೀಸರು ಬಹಿರಂಗ ಪಡಿಸಿಲ್ಲ. ಆರೋಪಿ ಬ್ಲೂಟೂತ್ ಬಳಸಿಕೊಂಡು ಪರೀಕ್ಷೆ ಬರೆಯುತ್ತಿದ್ದ. ಈ ವೇಳೆ ವಿಚಾರಣೆ ನಡೆಸಿದಾಗ ಆತ ನಕಲಿ ಅಭ್ಯರ್ಥಿ ಎಂದು ತಿಳಿದು ಬಂದಿದೆ.

    ಸುದ್ದಿ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಠಾಣೆಗೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಹಾಗೂ ಎಸ್ಪಿ ಜಿ.ಸಂಗೀತಾ ದೌಡಾಯಿಸಿ, ಕೆಲಹೊತ್ತು ಚರ್ಚೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ ಇಂದು ಮತ್ತು ನಾಳೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ ಮಾಡುವ ಮಾಹಿತಿ ಎಸ್ ಪಿ ಗೆ ಬಂದಿದೆ. ಈ ಹಿನ್ನಲೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಬ್ಲೂಟೂತ್ ಬಳಕೆ ಮಾಡಿ ಪರೀಕ್ಷೆ ಬರೆಯುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದು ಬ್ಲೂಟೂತ್ ಡಿವೈಸ್, ಮೊಬೈಲ್ ಜಪ್ತಿ ಮಾಡಲಾಗಿದೆ. ಇಲ್ಲಿವರಗೇ ಮೂವರನ್ನು ವಿಚಾರಣೆ ಮಾಡಲಾಗುತ್ತಿದೆ. ವಿಚಾರಣೆ ನಡೆಸಿದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದರು.

    ರಾಜ್ಯಾದ್ಯಂತ 350 ಕೇಂದ್ರಗಳಲ್ಲಿ ಶನಿವಾರ ಮತ್ತು ಭಾನುವಾರ ಸರಕಾರಿ ವಿವಿಧ ನಿಗಮಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಯುತ್ತಿದ್ದು, ಯಾದಗಿರಿ ಜಿಲ್ಲೆಯ 17 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ, ನಾಳೆಯ ಕೂಡ ಪರೀಕ್ಷೆ ನಡೆಯಲಿದೆ,

    ಒಟ್ಟಾರೆಯಾಗಿ ಯಾದಗಿರಿಯಲ್ಲಿ ಐದಾರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು. ಈ ಅಕ್ರಮದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ,

  • ಅಕ್ರಮ ಸರಾಯಿ ಮಾರಾಟ ಮಾಲು ಜಪ್ತಿ ಪ್ರಕರಣ ದಾಖಲು

    ಅಕ್ರಮ ಸರಾಯಿ ಮಾರಾಟ ಮಾಲು ಜಪ್ತಿ ಪ್ರಕರಣ ದಾಖಲು

    ಬೀದರ : ಗಣೇಶ್ ಚತುರ್ಥಿಯ ಹಬ್ಬದ ನಿಮಿತ್ಯ ಬೀದರ್ ಜಿಲ್ಲಾಧಿಕಾರಿಗಳಾದ ಶ್ರೀ ಗೋವಿಂದ ರೆಡ್ಡಿ ಅವರು ಸರಾಯಿ ಮಾರಾಟ ನಿಷೇಧ ಘೋಷಣೆ ಮಾಡಿದ್ದರು. ಆದೇಶ ಉಲ್ಲಂಘನೆ ಮಾಡಿ ಸರಾಯಿ ಮಾರಾಟ ಮಾಡಿ ಪೊಲೀಸರ ಜಾಲಕ್ಕೆ ಸಿಕ್ಕಿ ಬಿದ್ದ ಆರೋಪಿಗಳ ಸ್ಟೋರಿ ಒಂದು ಬೆಳಕಿಗೆ ಬಂದಿದೆ.
    ಬೀದರ್ ನಗರದ ನೂತನ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಖಚಿತ ವರದಿಯ ಮೇರೆಗೆ ವರಿಷ್ಠ ಪೊಲೀಸ್ ಅಧಿಕಾರಿ ಶ್ರೀ ಚನ್ನಬಸಣ್ಣ ಎಸ್ ಎಲ್ ಹಾಗೂ ಮಹೇಶ್ ಮೇಘಣ್ಣನವರ್ ಹೆಚ್ಚುವರಿ ಎಸ್ಪಿ ರವರ ದಿವ್ಯ ಮಾರ್ಗದರ್ಶನದಲ್ಲಿ ಠಾಣೆ ಪ್ರಭಾರಿ ಪಿಐ ಶ್ರೀವಿಜಯಕುಮಾರ್, ಶ್ರೀಮತಿ ತಸ್ಲೀಮ್ ಸುಲ್ತಾನಾ ಪಿ ಎಸ್ ಐ, ಮುಖ್ಯಪೇದೆ ಹನುಮ ಗೌಡರು ಹಾಗೂ ಇತರ ಪೊಲೀಸ್ ಪೇದೆಗಳೊಂದಿಗೆ ಹಠಾತ್ತನೆ ದಾಳಿ ನಡೆಸಿ ವಿವಿಧ ನಮೂನೆಯ ಅಂದಾಜು ರೂಪಾಯಿ 83,553/- ಬೆಲೆಬಾಳುವ ಸರಾಯಿ ಮತ್ತು 13,000/- ರೂಪಾಯಿ ಬೆಲೆಬಾಳುವ ಎರಡು ಮೊಬೈಲ್ ಹೀಗೆ ಒಟ್ಟು ರೂಪಾಯಿ 96,553/- ಮೌಲ್ಯದ ಮಾಲನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡ ಘಟನೆಯೊಂದು ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • ಜುಜಾಟದ ಅಡ್ಡೆಮೇಲೆ ದಾಳಿ  ಬೃಹತ್ ಪ್ರಮಾಣದ ಮೊತ್ತ ವಶ !

    ಜುಜಾಟದ ಅಡ್ಡೆಮೇಲೆ ದಾಳಿ ಬೃಹತ್ ಪ್ರಮಾಣದ ಮೊತ್ತ ವಶ !


    ಹುಮ್ನಾಬಾದ :— ಬೀದರ್ ಜಿಲ್ಲಾ ಎಸ್ ಪಿ ಶ್ರೀ ಚನ್ನಬಸಣ್ಣ ಎಸ್ ಎಲ್ ರವರ ದಿವ್ಯ ಮಾರ್ಗದರ್ಶನದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಐತಿಹಾಸಿಕ ಗ್ರಾಮ ಜಲಸಂಗಿ ಯಲ್ಲಿ ಮಹಾದೇವ ಮಂದಿರದ ಸಮ್ಮುಖದಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಜೂಜಾಟ ನಡೆದಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಹುಮನಾಬಾದ್ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ಪಿಎಸ್ಐ ಶ್ರೀ ತಿಮ್ಮಯ್ಯ ಬಿಕೆ ಸಿಬ್ಬಂದಿಗಳಾದ ಭಗವಾನ್ ಪ್ರಭುಲಿಂಗ ಸ್ವಾಮಿ ಬಸವರಾಜ್ ಬಾಲಾಜಿ ಸೂರ್ಯಕಾಂತ ಆಕಾಶ್ ವಜೀರ್ ಬಾಬುರಾವ್ ಕೋರೆ ಆಕಾಶ್ ರವರೊಂದಿಗೆ ಗ್ರಾಮಕ್ಕೆ ತೆರಳಿ ಜೂಜುಗಾರರ ಮೇಲೆ ದಾಳಿ ನಡೆಸಿ ಅವರಿಂದ 1,50,000 ರೂಪಾಯಿಗಳನ್ನು,ಅವರು ಬಳಸಿದ್ದ 52 ಇಷ್ಟು ಎಲೆಗಳು ಹಾಗೂ ಆರು ಮೊಬೈಲ್ ಐದು ದ್ವಿಚಕ್ರ ವಾಹನ ಸೇರಿ 4,15,000 ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡು 15 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳಿಂದ ವರದಿಯಾಗಿದೆ.

  • ಅನೈತಿಕ ಸಂಬಂಧ ಪತ್ನಿಯಿಂದಲೇ ಪತಿಯ ಹತ್ಯೆ !

    ಅನೈತಿಕ ಸಂಬಂಧ ಪತ್ನಿಯಿಂದಲೇ ಪತಿಯ ಹತ್ಯೆ !

     

    ಗುರುಮಠಕಲ್ :— ತಾಲೂಕಿನ ಕೊಂಕಲ್ ಗ್ರಾಮದಲ್ಲಿ ದಿನಾಂಕ 16 .06 .2023 ರಂದು ಕಾಶಪ್ಪ ತಂದೆ ನಾಗಪ್ಪ ಮಲ್ಲಪ್ಪೋಳ ಸಾಕಿನ್ ಕೊಂಕಲ ಗ್ರಾಮ ಈತನ ಮೃತ ದೇಹ ಬನ್ನಿ ಗಿಡಕ್ಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ದೊರೆತಿದ್ದರಿಂದ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಮೃತನ ಅಕ್ಕ ಕಾಶಮ್ಮ ಗಂಡ ರಾಜು ಕುಡ್ಲೂರು ಸಾಕಿನ್ ತೊಟ್ಟೂರ್ ಇವರ ಫಿರ್ಯಾದಿನ ಮೇರೆಗೆ ಇವರ ತಮ್ಮನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಯುಡಿಆರ್ ಸಂಖ್ಯೆ 08/2023 ಕಲಂ 174( ಸಿ) ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿತ್ತು.

    ಯಾದ್ಗೀರ್ ಪೊಲೀಸ್ ಅಧೀಕ್ಷಕರು ಹಾಗೂ ಉಪವಿಭಾಗ ಡಿಎಸ್ಪಿ ಯವರ ಘನ ಮಾರ್ಗದರ್ಶನದಲ್ಲಿ ದೌಲತ್ ಎನ್ಕೆ ಗುರುಮಿಟ್ಕಲ್ ಠಾಣೆ ಇವರ ನೇತೃತ್ವದಲ್ಲಿ ಪಿಎಸ್ಐ ಹಾಗೂ ಸಿಬ್ಬಂದಿಗಳಾದ ನರಸಿಂಗರಾವ್ ವಿಶ್ವನಾಥ್ ರೆಡ್ಡಿ ದೇವೇಂದ್ರ ನಾಗೇಂದ್ರ ರೆಡ್ಡಿ ರಹೀಮ್ ಮೊಹಮ್ಮದ್ ಶರೀಫ್ ನರಸರೆಡ್ಡಿ ಸಾಹೇಬ್ ರೆಡ್ಡಿ ಅಶೋಕ್ ಮತ್ತು ರಾಮಲಿಂಗಪ್ಪ ಇವರನ್ನೊಳಗೊಂಡ ತಂಡವನ್ನು ರಚಿಸಿದರು.
    ಸಾರಾಂಶ :- ಪ್ರಕರಣದ ಜಾಲವನ್ನು ಹಿಡಿದು ವ್ಯಾಪಕ ತನಿಖೆ ಕೈಕೊಂಡು ದಿನಾಂಕ್ 21.07.2023 ರಂದು ಮೃತನ ಹೆಂಡತಿ ಅನಿತಾ ಗಂಡ ಕಾಶಪ್ಪ ಸಾಕಿನ್ ಕೊಂಕಲ್ ಮತ್ತು ನಾಗರಾಜ್ ಅಲಿಯಾಸ್ ನಾಗೇಶ್ ತಂದೆ ಮಲ್ಲಪ್ಪ ಹತ್ತಿಕುಣಿ ಇವರಿಬ್ಬರನ್ನು ದಸ್ತಗೀರ್ ಮಾಡಿ ವಶಕ್ಕೆ ಪಡೆದುಕೊಂಡು ವ್ಯಾಪಕ ತನಿಖೆಗೊಳಪಡಿಸಿದಾಗ ಇವರಿಬ್ಬರು ಸೇರಿ ದಿನಾಂಕ 15 .6. 2023 ರಂದು ರಾತ್ರಿ ವೇಳೆಯಲ್ಲಿ ಕಾಶಪ್ಪ ತನ್ನ ಮನೆಯಲ್ಲಿ ಮಲಗಿದ್ದಾಗ ಸಿನಿಮಯ ಶೈಲಿಯಲ್ಲಿ ಆತನ ಕುತ್ತಿಗೆಗೆ ಹಗ್ಗ ಬಿಗಿದು ಮೃತಪಟ್ಟ ನಂತರ ಸಾಕ್ಷಾಧಾರಗಳನ್ನು ನಾಶಪಡಿಸಿದ ನಂತರ ನಾಗರಾಜ್ ತನ್ನ ಮೋಟರ್ ಸೈಕಲ್ ಮೇಲೆ ಶವ ವನ್ನು ತೆಗೆದುಕೊಂಡು ಹೋಗಿ ಕೊಂಕಲ್ ಗ್ರಾಮದ ಸೀಮೆಯಲ್ಲಿರುವ ಹೊಲಕ್ಕೆ ಸಾಗಿಸಿ ಗಿಡವೊಂದಕ್ಕೆ ಕಾಶಪ್ಪನೆ ಸ್ವತಃ ನೇಣು ಹಾಕಿಕೊಂಡು ವೃತ್ತಪಟ್ಟಿರುವಂತೆ ಸೀನ್ ಕ್ರಿಯೇಟ್ ಮಾಡಿ ಹೆಣವನ್ನು ತೂಗಿ ಹಾಕಿದ್ದಾಗಿ, ತನಿಖೆ ಯಿಂದ ತಿಳಿದು ಬಂದಿದೆ. ಈ ಕೊಲೆಗೆ ಅನಿತಾ ಮತ್ತು ನಾಗರಾಜನ ಅನೈತಿಕ ಸಂಬಂಧ ಇರುವದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಲಾಗಿದೆ. ಸದರಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
    ಈ ಪ್ರಕರಣದಲ್ಲಿ ಶ್ರಮಿಸಿದ ಎಲ್ಲಾ ಸಿಬ್ಬಂದಿಗಳಿಗೆ ಪೊಲೀಸ್ ವರಿಷ್ಠಾಧಿಕಾರಿಗಳು ಯಾದಗೀರ್ ರವರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.

  • ಹುಮ್ನಾಬಾದ್ :ಸಿಂಥೆಟಿಕ್ ಮಾದಕ ವಸ್ತು ಜಪ್ತಿ ಜಿಲ್ಲೆಯಲ್ಲಿಯೇ ಪ್ರಥಮ ಪ್ರಕರಣ : ಎಸ್ ಪಿ.


    ಹುಮ್ನಾಬಾದ್
    :—– ಬೀದರ್ ಜಿಲ್ಲಾಧ್ಯಂತ
    ಸಿಂಥೆಟಿಕ್ ಮಾದಕ ವಸ್ತು ಪ್ರಕರಣ ದಾಖಲಾಗಿದ್ದು, ಇದು ಜಿಲ್ಲೆಯಲ್ಲಿಯೇ ಪ್ರಥಮ ಪ್ರಕರಣ ವಾಗಿದೆ ಎಂದು ಬೀದರ್ ಜಿಲ್ಲಾ ಎಸ್ ಪಿ ಶ್ರೀ ಚನ್ನ ಬಸಣ್ಣ ಎಸ್ ಎಲ್ ರವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹುಮ್ನಾಬಾದ್ ನಲ್ಲಿ ಈ ಪ್ರಕರಣ ಪತ್ತೆಯಾಗಿದ್ದು ,ಅಪರಾಧ ತಡೆಗೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದ್ದು ಹೆದ್ದಾರಿಗಳಲ್ಲಿ ಪ್ರತಿಯೊಂದು ಅನುಮಾನಾಸ್ಪದ ವಾಹನಗಳ ತಪಾಸಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಅಪರಾಧ ಸಂಖ್ಯೆ ಬಹುತೇಕ ಇಳಿಮುಖ ಕಂಡುಬರುತ್ತಿದೆ ಎಂದು ಅವರು ತಿಳಿಸಿದರು.
    ಹುಮ್ನಾಬಾದ್ ಮಾರ್ಗದಿಂದ ಹಾದುಹೋಗುವ ಮುಂಬೈಯಿಂದ ಹೈದರಾಬಾದಕ್ಕೆ ಹೋಗುತ್ತಿದ್ದ ಕಾರು ಒಂದರಲ್ಲಿ ಸಿಂಥೆಟಿಕ್ ಮಾದಕ ವಸ್ತು ಕೊಂಡೊಯ್ಯಲಾಗುತ್ತಿದೆ ಎಂದು ಖಚಿತ ಮಾಹಿತಿ ಮೇರೆಗೆ ಆಂಟಿ ನೆರಕೊಟಿಕ್ಸ್ ಕಾರ್ಡ್ ಶಿವಂಶೂ ರಜಪೂತ್ ಎಸ್‌ಪಿ ರವರ ನೇತೃತ್ವದಲ್ಲಿ ರಚಿತಗೊಂಡ ಸ್ಕಾಡ ಹಠಾತನೆ ದಾಳಿ ನಡೆಸಿ 499 ಗ್ರಾಂ ಅಂದಾಜು 49 ಲಕ್ಷ 90,000 ರೂಪಾಯಿ ಮುದ್ದೆಮಾಲು ಹಾಗೂ ಕಾರು ಎರಡು ಮೊಬೈಲ್ ಹೀಗೆ 55 ಲಕ್ಷ 8 500 ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ.

  • ಅಪ್ರಾಪ್ತ ಬಾಲಕಿಯ ಮೇಲೆ ಬಲತ್ಕಾರ : ಆರೋಪಿಗಳು ಫರಾರಿ

    ಕಲಬುರಗಿ :—- ವಿದ್ಯಾನಗರ ಬಡಾವಣೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಬಲತ್ಕಾರ ಎಸಗಿ ಪರಾರಿಯಾದ ಮೂವರು ಬಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅವರ ಪತ್ತೆಗಾಗಿ ಪೊಲೀಸರು ತೀವ್ರಗತಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

    ದಿನಾಂಕ 05-07-2023 ರಂದು ನಗರದ ದಟ್ಟ ಜನಸಂದಣಿ ಇರುವ ವಿದ್ಯಾನಗರ ಬಡಾವಣೆಯಲ್ಲಿ ಹಾಡು ಹಗಲೇ ಬಾಲಕಿ ಯೋರ್ವಳನ್ನು ಹತ್ತು ರೂಪಾಯಿ ಕೊಡುವ ಹಾಗೂ ಚಾಕಲೇಟ್ ನೀಡುವ ಆಮೀಷ ಒಡ್ಡಿಅವಳನ್ನುರೂಮವೊಂದಕ್ಕೆ ಕರೆದುಕೊಂಡು ಹೋಗಿ ಬಲತ್ಕಾರ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಈ ವಿಷಯ ತಾಯಿ ತಂದೆ ಗಮನಕ್ಕೆ ತಂದಳು. ವಿಷಯ ಅರಿತು ತಂದೆ ಕಲಬುರ್ಗಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು. ದೂರು ದಾಖಲಿಸ ಕೊಂಡ ಪಿಎಸ್ಐ ಬಾಲಕಿಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆಗೊಳಪಡಿಸಲಾಗಿದೆ. ಫರಾರಿಯಾದ ಆರೋಪಿತರನ್ನು ತೀವ್ರಗತಿಯಲ್ಲಿ ಬಂಧಿಸಲು ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ.

  • ಪೊಲೀಸರ ಮಿಂಚಿನ ದಾಳಿ ಲಕ್ಷಾಂತರ ರೂ. ಗಾಂಜಾ ಜಪ್ತಿ


    ಬೀದರ
    :— ಬೀದರ ಪೊಲೀಸರ ಸಾಹಸಕ್ಕೆ ಮತ್ತೊಂದು ವಿಜಯದ ಗರಿ ಸೇರಿದೆ. ಅಪರಾಧ ಜಗತ್ತಿನ ಕಾಳ ಸಂತೆಯಲ್ಲಿ ನಿರ್ಭೀತಿಯಿಂದ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಪಡೆದ ಬೀದರ ಜಿಲ್ಲಾ ರೌಡಿ ನಿಗ್ರಹದಳದ ಪೊಲೀಸರು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಖದೀಮರನ್ನು ಬಂಧಿಸಿ ಗಾಂಜ ಜಪ್ತಿ ಮಾಡಿ ಪ್ರಕರಣ ಒಂದು ದಾಖಲಿಸಿಕೊಂಡ ಘಟನೆಯೊಂದು ವರದಿಯಾಗಿದೆ .
    ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀ ಚೆನ್ನಬಸಣ್ಣ ಎಸ್ ಎಲ್, ಹೆಚ್ಚುವರಿ ಎಸ್ಪಿ ಮಹೇಶ್ ಮೇಘಣ್ಣನವರ್ ದಿವ್ಯ ನಿರ್ದೇಶನದಲ್ಲಿ ಖಚಿತ ಮಾಹಿತಿ ಪಡೆದ ಬೀದರ್ ನಗರದ ರೌಡಿ ನಿಗ್ರಹದಳದ ಅಧಿಕಾರಿ ಶ್ರೀ ಹಣಮರೆಡ್ಡೆಪ್ಪ ಪಿ ಐ ಗಾಂಧಿ ಪೊಲೀಸ್ ಠಾಣೆ ತಮ್ಮ ತಂಡದವರೊಂದಿಗೆ ಗಾಂಧಿ ಗಂಜ್ ಠಾಣೆ ವ್ಯಾಪ್ತಿಯಲ್ಲಿರುವ ಮಕ್ದುಮ್ ಜಿ ಬಡಾವಣೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಿಂಚಿನ ದಾಳಿ ನಡೆಸಿ 23. 498 ಕಿಲೋ ಗಾಂಜಾ ಹಾಗೂ 20,000 ರೂ .ನಗದು ಮತ್ತು ಒಂದು ಮೊಬೈಲ್ ಹೀಗೆ 23 ಲಕ್ಷ 70 ಸಾವಿರ 300 ರೂ. ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ತೀವ್ರ ಗತಿಯಲ್ಲಿ ನಡೆಸಿದ್ದಾರೆ.
    ಈ ಕಾರ್ಯಕ್ರಮದಲ್ಲಿ ಶ್ರಮಿಸಿದ ರೌಡಿನಿಗ್ರಹದಳದ ಟೀಮ್ಗೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಜಿಲ್ಲೆಯಲ್ಲಿ ಅಹಿತಕರ ಚಟುವಟಿಕೆಗೆ ಕಡಿವಾಣ ಹಾಕಲು ಪೊಲೀಸರು ಹೆಚ್ಚಿನ ನಿಗ ವಹಿಸಿದ್ದಾರೆ ಎಂದು ಎಸ್ ಪಿ ಶ್ರೀ ಚನ್ನಬಸಣ್ಣ ರವರು ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.