ಸತ್ಯಕಾಮ ವಾರ್ತೆ ಯಾದಗಿರಿ:
ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಗುಣಮಟ್ಟದ ರಸ್ತೆಗಳ ಸುಧಾರಣೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಕ್ಷೇತ್ರ ವ್ಯಾಪ್ತಿಯ ಕೆಟ್ಟು ಹೋದ ರಸ್ತೆಗಳನ್ನು ಮರು ನಿರ್ಮಿಸಲಾಗುತ್ತಿದೆ. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರು ಆದ್ಯತೆ ನೀಡಬೇಕು, ಅಧಿಕಾರಿಗಳು ಹಾಗಾಗ ಪರಿಶೀಲಿಸಬೇಕು, ೬ ತಿಂಗಳ ಗಡುವಿನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ಗುರುಮಠಕಲ್ ತಾಲೂಕಿನ ಮಾಧ್ವಾರ ಗ್ರಾಮದಲ್ಲಿ ಮುಧೋಳ – ಯಲಗೇರಾ ಆಂಧ್ರ ಬಾರ್ಡ್ರ್ ವರೆಗೆ೪ ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಮತಕ್ಷೇತ್ರದ ಎಲ್ಲ ಸಮುದಾಯವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು, ಸಿಸಿ ರಸ್ತೆ ಸೇರಿದಂತೆ ಗುಣಮಟ್ಟದ ರಸ್ತೆಗಳ ಸುಧಾರಣೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯಿಂದ ಮಾತ್ರ ಹಳ್ಳಿಗಳ ಪ್ರಗತಿ ಸಾಧ್ಯವಿದ್ದು, ತಾಲೂಕಿನ ಎಲ್ಲಾ ಗ್ರಾಮಗಳಿಗೂ ಪಕ್ಕಾ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು. ರಸ್ತೆ ಸುಧಾರಣೆ ಕಾರ್ಯ ನಡೆಯುವಾಗ ಯಾವುದೇ ತೊಂದರೆಯಾಗದAತೆ ಸಾರ್ವಜನಿಕರೂ ಸಹ ಸಹಕರಿಸಬೇಕು ಎಂದು ಹೇಳಿದರು.
- Advertisement -
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಪಿಡಬ್ಲುಡಿ ಎಇಇ ಪರಶುರಾಮ ಮುಷ್ಟೂಕರ್, ತಾಪಂ ಇಒ ಅಮರೇಶ ಪಾಟೀಲ, ಅಮರನಾಥರಡ್ಡಿ ವಂಕಸAಬ್ರ, ಬನ್ನಪ್ಪಗೌಡ ವಂಕಸAಬ್ರ, ಶಂಕ್ರಪ್ಪ ಕಾಳಗಿ, ಶರಣಗೌಡ, ಸಾಯಪ್ಪ, ಗೋಪಾಲ, ಶಿವರಾಜ, ಜಾನಪ್ಪ, ಶಂಕರರಡ್ಡಿ ಯಲಸತ್ತಿ, ವೀರೇಂದ್ರರಡ್ಡಿ ಯಲಸ್ತಿ÷್ತ, ರಾಘವೇಂದ್ರ ರಡ್ಡಿ ವಡವಟ್, ಆನಂದ ವಡವಟ್, ಗುರುನಾಥರಡ್ಡಿ, ಮಲ್ಲಿಕಾರ್ಜುನ ಅರುಣಿ, ನರಸಪ್ಪ ಕವಡೆ, ಪರ್ವತರಡ್ಡಿ ಕಾಳಬೆಳಗುಂದಿ, ರಾಘವೇಂದ್ರ ಜೈಗ್ರಾಮ, ಭೀಮರಾಯ ಗುಡ್ಲಗುಂಟಾ ಸೇರಿದಂತೆ ಇತರರಿದ್ದರು.
ಮಾಧ್ವಾರ ಗ್ರಾಮದಲ್ಲಿ ಜನರ ಸಮಸ್ಯೆ ಆಲಿಸಿದ ಶಾಸಕ ಕಂದಕೂರ
ಸತ್ಯಕಾಮ ವಾರ್ತೆ ಯಾದಗಿರಿ:
ಯಾದಗಿರಿ : ಮಾಧ್ವಾರ ಗ್ರಾಮದ ವಾರ್ಡ್ ನಂ ೧ರಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಮಳೆ ಬಂದರೆ ಸಾಕು ಇಡಿ ಅಂಗನವಾಡಿಯಲ್ಲಿ ನೀರು ನಿಲ್ಲುತ್ತವೆ. ಇದರಿಂದ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಶಾಸಕ ಶರಣಗೌಡ ಕಂದಕೂರ ಅವರಲ್ಲಿ ಮನವಿ ಮಾಡಿದರು.
ಇದೇ ವೇಳೆ ತಾಪಂ ಇಒ ಅವರಿಗೆ ಕ್ರಮಕೈಗೊಳ್ಳುವಂತೆ ಸೂಚಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗೆ ಪೋನ್ ಮಾಡಿ ಅಂಗನವಾಡಿ ಸಮಸ್ಯೆಯನ್ನು ಪರಿಶೀಲಿಸಿ, ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದರು. ಅಧಿಕಾರಿಗಳು ಬಂದು ಪರಿಶೀಲಿಸಿದ ನಂತರ ಹೊಸ ಅಂಗನವಾಡಿ ಕಟ್ಟಡ ಕಟ್ಟಬೇಕಾದ್ರು ಕಟ್ತಿವಿ ಅಥವಾ ಅದನ್ನೇ ಮೇಲ್ದಜೇಗೇರಿಸಬೇಕಾದರು ಅದನ್ನು ಮಾಡ್ತಿವಿ ಒಟ್ಟಿನಲ್ಲಿ ನಿಮ್ಮೂರಿನ ಅಂಗನವಾಡಿ ಸಮಸ್ಯೆ ಬಗೆಹರಿಸ್ತೇನೆ ಎಂದು ಹೇಳಿದರು.
ಗ್ರಾಮೀಣ ಭಾಗದ ಪ್ರತಿಯೊಂದು ಹಳ್ಳಿಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮಕೈಗೊಳ್ಳಬೇಕಿದೆ, ಪಿಡಿಒಗಳು ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು, ಪ್ರತಿಯೊಂದು ಹಳ್ಳಿಯಲ್ಲಿನ ಆರ್‌ಒ ಪ್ಲಾಂಟ್ ಪರಿಶೀಲಿಸಬೇಕು, ಆರ್‌ಡಬ್ಲುಎಸ್‌ಗೆ ಹೇಳಿದೆ, ತಾಪಂ ಗೆ ಹೇಳಿದೆ ಅಂತ ಸಬೂಬು ಹೇಳಬೇಡಿ ಪೈಲ್ ಕಳಿಸಿ ಕೂಡಬೇಡಿ ಎಲ್ಲಾ ವಾಟರ್ ಪ್ಲಾಂಟ್‌ಗಳನ್ನು ಪರಿಶೀಲಿಸಿ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು, ತಾಪಂ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು ಎಂದು ತಾಕಿತು ಮಾಡಿದರು.
- Advertisement -
ಕಳೆದ ೨ ವರ್ಷಗಳಿಂದ ಹಲವು ಗ್ರಾಮ ಮತ್ತು ತಾಂಡಾಗಳಲ್ಲಿ ಶಾಲೆ, ಆಸ್ಪತ್ರೆ, ಅಂಗನವಾಡಿ ನಿರ್ಮಾಣ ಮಾಡಿದ್ದೇವೆ, ಆದರೂ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾಮಗಾರಿಗಳನ್ನು ನಿರ್ವಹಿಸುತ್ತೇವೆ, ಮುಂದಿನ ದಿನಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಹಲವು ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ನೀಡುತ್ತೇನೆ ಎಂದು ಹೇಳಿದರು.
ವಂಕ್ರಸAಬ್ರ ಗ್ರಾಮದ ಜನರ ಮನವಿ ಆಲಿಸಿದ ಶಾಸಕರು, ಕೂಡಲೇ ವಿದ್ಯುತ್ ಸಮಸ್ಯೆ ನಿವಾರಿಸಬೇಕು ಎಂದು ಜೆಸ್ಕಾಂ ಅಧಿಕಾರಿ ರಾಠೋಡ ಅವರಿಗೆ ಸೂಚಿಸಿದರು.
——————
- Advertisement -
ಪಿಡಿಒಗಳು ಪೋನ್ ಸ್ವಿಚ್ ಮಾಡ್ಬೇಡಿ : ಪಿಡಿಒ ಗಿರಿಮಲ್ಲಣ್ಣಗೆ ಶಾಸಕರ ತರಾಟೆ
ಸತ್ಯಕಾಮ ವಾರ್ತೆ ಯಾದಗಿರಿ:
ಗ್ರಾಮೀಣ ಭಾಗದಲ್ಲಿ ಜನ ಸಮಸ್ಯೆ ಪರಿಹರಿಸಲು ಸರ್ಕಾರದ ಸೌಲತ್ತುಗಳನ್ನು ಜನರಿಗೆ ತಲುಪಿಸಬೇಕಾದ ಪಿಡಿಒಗಳು ಪೋನ್ ಸ್ವಿಚ್ ಆಫ್ ಮಾಡಬಾರದು, ಹೀಗೆ ಮಾಡಿದರೆ ಹೇಗೆ ಎಂದು ಮಾಧ್ವಾರ ಗ್ರಾಮದ ಗ್ರಾಪಂ ಅಭಿವೃದ್ಧಿ ಅಧಿಕಾರಿ(ಪಿಡಿಒ) ಗಿರಿಮಲ್ಲಣ್ಣರವರನ್ನು ತರಾಟೆಗೆ ತೆಗೆದುಕೊಂಡರು.
ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕಾರ್ಯಕ್ರಮದಲ್ಲಿ ಜನ ಸಮಸ್ಯೆ ಕೇಳುತ್ತಿರುವ ಸಂದರ್ಭದಲ್ಲಿ ಅಲ್ಲಿನ ಜನರು ಪಿಡಿಒ ಪೋನ್ ಸ್ವಿಚ್ ಆಫ್ ಮಾಡಿರುತ್ತಾರೆ, ಯಾರಿಗೆ ಮಾತನಾಡಬೇಕು ಎಂದು ಶಾಸಕರ ಬಳಿ ದೂರಿದಾಗ ಸ್ಥಳದಲ್ಲಿ ತಾಪಂ ಇಒ ರವರಿಗೆ ನಿಮ್ಮ ಪಿಡಿಒಗಳು ಯಾವುದೇ ಕಾರಣಕ್ಕೂ ಪೋನ್ ಸ್ವಿಚ್ ಆಫ್ ಮಾಡದಂತೆ ಕ್ರಮಕೈಗೊಳ್ಳಿ, ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಗ್ರಾಪಂ ಅನುದಾನದಲ್ಲಿ ಕ್ರಮಕೈಗೊಳ್ಳಬೇಕು, ಒಂದು ವೇಳೆ ೧ ಲಕ್ಷಕ್ಕೂ ಮೀರಿದರೆ ನಾನು ಶಾಸಕರ ಅನುದಾನದಲ್ಲಿ ಹಣ ನೀಡುತ್ತೇನೆ ಯಾವುದೇ ಕಾರಣಕ್ಕೂ ಸಬೂಬು ಹೇಳದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ತಾಕೀತು ಮಾಡಿದರು.

