amp-web-push-widget button.amp-subscribe { display: inline-flex; align-items: center; border-radius: 5px; border: 0; box-sizing: border-box; margin: 0; padding: 10px 15px; cursor: pointer; outline: none; font-size: 15px; font-weight: 500; background: #4A90E2; margin-top: 7px; color: white; box-shadow: 0 1px 1px 0 rgba(0, 0, 0, 0.5); -webkit-tap-highlight-color: rgba(0, 0, 0, 0); } .web-stories-singleton.alignleft,.web-stories-singleton.alignnone,.web-stories-singleton.alignright{display:block;width:100%}.web-stories-singleton.aligncenter{text-align:initial}.web-stories-singleton .wp-block-embed__wrapper{position:relative}.web-stories-singleton.alignleft .wp-block-embed__wrapper{margin-right:auto}.web-stories-singleton.alignright .wp-block-embed__wrapper{margin-left:auto}.web-stories-singleton.alignnone .wp-block-embed__wrapper{max-width:var(--width)}.web-stories-singleton.aligncenter .wp-block-embed__wrapper{margin-left:auto;margin-right:auto;max-width:var(--width)}.web-stories-singleton-poster{aspect-ratio:var(--aspect-ratio);border-radius:8px;cursor:pointer;overflow:hidden;position:relative}.web-stories-singleton-poster a{aspect-ratio:var(--aspect-ratio);display:block;margin:0}.web-stories-singleton-poster .web-stories-singleton-poster-placeholder{box-sizing:border-box}.web-stories-singleton-poster .web-stories-singleton-poster-placeholder a,.web-stories-singleton-poster .web-stories-singleton-poster-placeholder span{border:0;clip:rect(1px,1px,1px,1px);-webkit-clip-path:inset(50%);clip-path:inset(50%);height:1px;margin:-1px;overflow:hidden;padding:0;position:absolute;width:1px;word-wrap:normal;word-break:normal}.web-stories-singleton-poster img{box-sizing:border-box;height:100%;object-fit:cover;position:absolute;width:100%}.web-stories-singleton-poster:after{background:linear-gradient(180deg,hsla(0,0%,100%,0),rgba(0,0,0,.8));content:"";display:block;height:100%;left:0;pointer-events:none;position:absolute;top:0;width:100%}.web-stories-singleton .web-stories-singleton-overlay{bottom:0;color:var(--ws-overlay-text-color);line-height:var(--ws-overlay-text-lh);padding:10px;position:absolute;z-index:1}.web-stories-embed.alignleft,.web-stories-embed.alignnone,.web-stories-embed.alignright{display:block;width:100%}.web-stories-embed.aligncenter{text-align:initial}.web-stories-embed .wp-block-embed__wrapper{position:relative}.web-stories-embed.alignleft .wp-block-embed__wrapper{margin-right:auto}.web-stories-embed.alignright .wp-block-embed__wrapper{margin-left:auto}.web-stories-embed.alignnone .wp-block-embed__wrapper{max-width:var(--width)}.web-stories-embed.aligncenter .wp-block-embed__wrapper{margin-left:auto;margin-right:auto;max-width:var(--width)}.web-stories-embed:not(.web-stories-embed-amp) .wp-block-embed__wrapper{aspect-ratio:var(--aspect-ratio)}.web-stories-embed:not(.web-stories-embed-amp) .wp-block-embed__wrapper amp-story-player{bottom:0;height:100%;left:0;position:absolute;right:0;top:0;width:100%}.block-editor-block-inspector .web-stories-embed-poster-remove{margin-left:12px} .amp-logo amp-img{width:190px} .amp-menu input{display:none;}.amp-menu li.menu-item-has-children ul{display:none;}.amp-menu li{position:relative;display:block;}.amp-menu > li a{display:block;} .icon-widgets:before {content: "\e1bd";}.icon-search:before {content: "\e8b6";}.icon-shopping-cart:after {content: "\e8cc";}
ಸತ್ಯಕಾಮ ವಾರ್ತೆ ತಾಳಿಕೋಟೆ:
ಬೂದಿಹಾಳ-ಪೀರಾಪೂರ ಏತ ನೀರಾವರಿ ಕಾಮಗಾರಿಗೆ ಸಂಬಂದಿಸಿ ಮುಕ್ತಾಯ ಹಂತದ ಕಾಮಗಾರಿಗೆ ರಾಜ್ಯ ಕಾಂಗ್ರೇಸ್ ಸರ್ಕಾರ ಹಣ ಬಿಡುಗಡೆಗೊಳಿಸದಿರುವದನ್ನು ಖಂಡಿಸಿ ಬುಧವಾರರಂದು ತಾಳಿಕೋಟೆ ಪಟ್ಟಣದಲ್ಲಿ ಕತ್ತೆಗಳ ಮೇರವಣಿಗೆ ನಡೆಸಲಾಗುವದೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅವರು ಹೇಳಿದರು.
ಮಂಗಳವಾರರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಬೂದಿಹಾಳ-ಫೀರಾಪೂರ ಏತ ನೀರಾವರಿ ಎಫ್‌ಐಸಿ ಒಳಗಾಲುವೆ ಪೂರ್ಣಗೊಳಿಸುವ ಕುರಿತು ಕಳೆದ ೪ ದಿನಗಳಿಂದಲೂ ಕೊಡಗಾನೂರ ಕ್ರಾಸ್‌ನಲ್ಲಿ ಸಾವಿರಾರು ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಕೂಡಾ ಸರ್ಕಾರದ ಯಾವ ಜನಪ್ರತಿನಿಧಿಗಳು ಬೆಟ್ಟಿ ನೀಡಿಲ್ಲಾ ಈ ಯೋಜನೆಗೆ ಸಂಪೂರ್ಣ ಮುಕ್ತಾಯಕ್ಕೆ ಸಂಬಂದಿಸಿ ಉಸ್ತುವಾರಿ ಮಂತ್ರಿ ಎಂ.ಬಿ.ಪಾಟೀಲರೂ ಕೂಡಾ ಚಕಾರ ಶಬ್ದವನ್ನು ಎತ್ತುತ್ತಿಲ್ಲಾ ಹೀಗಾಗಿ ರೈತರೆಲ್ಲರ ಒಮ್ಮತದ ನಿರ್ಣಯದೊಂದಿಗೆ ಕತ್ತೆ ಚಳುವಳಿ ಮಾಡಬೇಕೆಂದು ತಿರ್ಮಾಣ ಕೈಗೊಂಡಿದ್ದೇವೆ ಅಂದು ಬೆಳಿಗ್ಗೆ ೧೧ ಗಂಟೆಗೆ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ತಾಳಿಕೋಟೆ ಪಟ್ಟಣದ ಬಸವೇಶ್ವರ ವೃತ್ತದಿಂದ ಕತ್ತೆಗಳ ಮೇರವಣಿಗೆ ಪ್ರಾರಂಭಗೊಳ್ಳಲಿದ್ದು ಬಸ್ ನಿಲ್ದಾಣದ ರಸ್ತೆಯ ಮೂಲಕ ಪ್ರಮುಖ ರಸ್ತೆಗಳಲ್ಲಿ ಹಾಯ್ದು ಮರಳಿ ಬಸವೇಶ್ವರ ಸರ್ಕಲ್‌ಗೆ ಮುಕ್ತಾಗೊಳ್ಳಲಿದ್ದು ಈ ಪ್ರತಿಭಟನೆಯ ನಂತರ ಸರ್ಕಾರಕ್ಕೆ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಗುವದೆಂದು ಹೇಳಿದರು.
ಇನ್ನೋರ್ವ ಅಖಂಡ ಕರ್ನಾಟಕ ರೈತ ಸಂಘದ ತಾಲೂಕಾ ಅಧ್ಯಕ್ಷ ಬಾಲಪ್ಪಗೌಡ ಪಾಟೀಲ ಅವರು ಮಾತನಾಡಿ ಬೂದಿಹಾಳ-ಫೀರಾಪೂರ ಏತ ನೀರಾವರಿಗೆ ಸಂಬಂದಿಸಿ ಈಗಾಗಲೇ ೧೫೦೦ ಕೋಟಿಗೂ ಅಧಿಕ ಹಣ ವೆಚ್ಚ ಮಾಡಲಾಗಿದೆ ಕಾಮಗಾರಿ ಮುಕ್ತಾಯಗೊಂಡು ೨ ವರ್ಷಗಳೇ ಘತಿಸಿ ಹೋಗಿದೆ ಆದರೆ ಸದ್ಯ ಕೊನೆಯ ಹಂತರ ಕಾಮಗಾರಿಗೆ ಕೇವಲ ೧೭೦ ಕೋಟಿ ರೂ. ಅವಶ್ಯವಿದೆ ಈ ಹಣ ಸರ್ಕಾರ ಬಿಡುಗಡೆ ಮಾಡುವಲ್ಲಿ ವಿಳಂಬತೆ ಅನುಸರಿಸುತ್ತಾ ಸಾಗಿದೆ ಕೂಡಲೇ ಕೊನೆಯ ಹಂತದ ಕಾಮಗಾರಿಗೆ ಹಣ ಬಿಡುಗಡೆ ಮಾಡದೇ ಹೋದಲ್ಲಿ ಈ ಹಿಂದೆ ಕೈಗೊಂಡ ೧೫೦೦ ಕೋಟಿ ರೂ. ವೆಚ್ಚದ ಕಾಮಗಾರಿಯೂ ಹಳ್ಳದಲ್ಲಿ ಹುಣಸೇಹಣ್ಣು ತೊಳೆದಂತಾಗಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಜಲಸಂಪನ್ಮೂಲ ಸಚೀವ ಡಿಕೆ ಶಿವಕುಮಾರ ಅವರು ರೈತರ ಸಂಕಷ್ಟದ ಪರಸ್ಥಿತಿಯನ್ನು ಅರೀತು ಮುಂದುವರೆದ ಕಾಮಗಾರಿಗೆ ಡಿಪಿಆರ್ ತಯಾರಿಸಿ ಕೂಡಲೇ ಹಣ ಬಿಡುಗಡೆ ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿದೆ ಈ ವಿಷಯಕ್ಕೆ ಸಂಬಂದಿಸಿ ರೈತರೆಲ್ಲರೂ ಅಹೋರಾತ್ರಿ ಧರಣಿ ನಡೆಸುತ್ತಿರುವ ವಿಷಯ ಜಿಲ್ಲಾ ಉಸ್ತುವಾರಿ ಮಂತ್ರಿ ಎಂ.ಬಿ.ಪಾಟೀಲರಿಗೆ ಗೊತ್ತಿದ್ದರೂ ಕೂಡಾ ರಾಜ್ಯಪ್ರವಾಸದಲ್ಲಿ ಮುಂದಾಗಿರುವದು ಇವರ ರೈತಪರ ನಿಲುವು ಎಷ್ಟೆಂಬುದು ಗೊತ್ತಾಗುತ್ತಾ ಸಾಗಿದೆ ಎಂದರು.
ಇನ್ನೋರ್ವ ರೈತ ಮುಖಂಡ ಪ್ರಭುಗೌಡ ಬಿರಾದಾರ(ಅಸ್ಕಿ) ಅವರು ಮಾತನಾಡಿ ಈ ಕತ್ತೆ ಚಳುವಳಿಕೆ ಸರ್ಕಾರವು ಬಗ್ಗದೇ ಇದ್ದಲ್ಲಿ ನೂರಾರು ಎತ್ತಿನ ಬಂಡೆಗಳೊಂದಿಗೆ ಬಾರಕೋಲ ಚಳುವಳಿ ನಡೆಯಲಿದೆ ಇದಕ್ಕೂ ಸ್ಪಂದಿಸದಿದ್ದರೆ ಈ ಯೋಜನೆ ಅನುಷ್ಠಾನಕ್ಕೆ ಸಂಬಂದಿಸಿ ಸರ್ಕಾರದ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚೀವರು ಹಾಗೂ ಜಿಲ್ಲಾ ಉಸ್ತುವಾರಿ ಸಚೀವರನ್ನೋಳಗೊಂಡು ಕಾಂಗ್ರೇಸ್ ಸರ್ಕಾರವು ರೈತರ ಪಾಲಿಗೆ ಸತ್ತಿದೆ ಎಂದು ತಿಳಿದು ಅಹೋರಾತ್ರಿ ಧರಣಿ ಸತ್ಯಾಗ್ರಹದ ಸ್ಥಳದಲ್ಲಿ ಎಲ್ಲರ ಭಾವಚಿತ್ರಗಳನ್ನಿಟ್ಟು ಪಿಂಡ ಪ್ರಧಾನ ಕಾರ್ಯಕ್ರಮ ನಡೆಸಲು ತಿರ್ಮಾನಿಸಿದ್ದೇವೆಂದು ಹೇಳಿದರು.
ಇನ್ನೋರ್ವ ರೈತ ಮುಖಂಡ ಶಿವಪುತ್ರಪ್ಪ ಚೌದ್ರಿ ಅವರು ಮಾತನಾಡಿ ಸಾವಿರಾರು ಕೋಟಿ ರೂ. ಖರ್ಚು ಮಾಡಿ ರೈತರ ಹಿತಕ್ಕಾಗಿ ಬೂದಿಹಾಳ-ಫೀರಾಪೂರ ಯೋಜನೆಯನ್ನು ಕೈಗೊಳ್ಳಲಾಗಿದೆ ಕಾಂಗ್ರೇಸ್‌ನವರು ಚುನಾವಣೆ ಸಮಯದಲ್ಲಿ ಕಾಂಗ್ರೇಸ್‌ವರು ಈಗೀನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡಿಗೆ ಕೃಷ್ಣೆಯ ಕಡೆಗೆ ಎಂಬ ಪಾದಯಾತ್ರೆಯನ್ನು ಮಾಡಿದರು ಆದರೆ ಸದ್ಯ ಅಧಿಕಾರದ ಖುರ್ಚಿಯ ಮೇಲೆ ಕುಳಿತ ನಂತರ ಕೃಷ್ಣೆಯನ್ನು ರೈತರನ್ನು ಮರೆತ್ತಿದ್ದಾರೆ ಜಿಲ್ಲೆಯ ಇಂಡಿ ಮತಕ್ಷೇತ್ರಕ್ಕೆ ೫ ಸಾವಿರ ಕೋಟಿಯಷ್ಟು ಹಣವನ್ನು ನೀಡಿರುವ ಮುಖ್ಯಮಂತ್ರಿಗಳು ರೈತರಿಗಾಗಿ ಕೇವಲ ೨೦೦ ಕೋಟಿ ಕೊಡಲು ಮೀನ ಮೇಷ ಏಣಿಸುತ್ತಿರುವದು ಇವರ ರೈತರ ಮೇಲಿನ ಪ್ರೀತಿ ಏಷ್ಟಿದೆ ಎಂಬುದು ತೋರಿಸುತ್ತಿದೆ ಎಂದರು.
ಈ ಸಮಯದಲ್ಲಿ ರೈತ ಸಂಘದ ತಾಲೂಕಾ ಉಪಾಧ್ಯಕ್ಷ ರಾಮನಗೌಡ ಹಾದಿಮನಿ, ರೈತ ಮುಖಂಡರುಗಳಾದ ಗುರುರಾಜ ಪಡಶೆಟ್ಟಿ, ಸುರೇಶಕುಮಾರ ಇಂಗಳಗೇರಿ, ನಿಂಗು ಚೌದ್ರಿ, ಚಂದ್ರಶೇಖರ ಸಜ್ಜನ, ಅಶೋಕ ಉಪ್ಪಲದಿನ್ನಿ, ಬಸನಗೌಡ ಹಳ್ಳಿಪಾಟೀಲ, ಶಂಕರಗೌಡ ದೇಸಾಯಿ, ಮಹಾದೇವಪ್ಪ ಅಸ್ಕಿ, ಬಸನಗೌಡ ಪಾಟೀಲ, ಮಂಜು ಬಡಿಗೇರ, ಶಿವನಗೌಡ ಜಾಲಿಕಟ್ಟಿ, ರಮೇಶ ಮದ್ದರಕಿ, ಅಶೋಕ ಕಾಮರಡ್ಡಿ, ಚನ್ನಬಸುಗೌಡ ಹೊಸಳ್ಳಿ, ಮೊದಲಾದವರು ಇದ್ದರು.
ಸ್ಯಾಂಡಲ್‍ವುಡ್ ಚರ್ಚೆಯಲ್ಲಿ ಮತ್ತೆ ದರ್ಶನ್ ಮತ್ತು ಪವಿತ್ರಾ ಗೌಡರ ಹೆಸರು ಕೇಳಿಬರುತ್ತಿದೆ. ಇಬ್ಬರೂ ಒಟ್ಟಿಗೆ ಜೀವನ ನಡೆಸಿದ್ದರು ಎಂಬ ಮಾತು…
ಸತ್ಯಕಾಮ ವಾರ್ತೆ ಯಾದಗಿರಿ: ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾವಾಗಿ ನ.2 ರಂದು ಬೆಳಗ್ಗೆ 10.30 ಕ್ಕೆ…
ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ಐತಿಹಾಸಿಕ ಸಾಧನೆಯನ್ನು ಗೈದು ಫೈನಲ್‌ಗೆ ಪ್ರವೇಶಿಸಿದೆ. ಗುರುವಾರ ನಡೆದ ಸೆಮಿಫೈನಲ್‌ನಲ್ಲಿ…
ನಮ್ಮ ಭಾರತೀಯ ಆಹಾರ ಸಂಸ್ಕೃತಿಯಲ್ಲಿ ಅನ್ನ ಅಂದರೆ ಅಕ್ಕಿ, ಜೀವನದ ಅವಿಭಾಜ್ಯ ಭಾಗವಾಗಿದೆ. ದಿನದ ಮೂರು ಹೊತ್ತು ಊಟದ ಮಾತು…
ಸತ್ಯಕಾಮ ವಾರ್ತೆ ಮುದ್ದೇಬಿಹಾಳ; ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ. ಆರ್ . ಗವಾಯಿ ಮೇಲೆ ಶೂ ಎಸೆದ ಪ್ರಕರಣ ಹಾಗೂ…
ಸತ್ಯಕಾಮ ವಾರ್ತೆ ಯಾದಗಿರಿ: ಯಾದಗಿರಿ ಜಿಲ್ಲಾಧಿಕಾರಿಯವರ ಪ್ರೊಫೈಲ್ ಚಿತ್ರವನ್ನು ಬಳಸಿಕೊಂಡು ವಾಟ್ಸಪ್‌ನಲ್ಲಿ ನಕಲಿ ಖಾತೆ ತೆರೆದು ಆರೋಗ್ಯ ಇಲಾಖೆಯ ಮಹಿಳಾ…