ಸತ್ಯಕಾಮ ವಾರ್ತೆ ಮುದ್ದೇಬಿಹಾಳ:
ಸುದ್ದಿ ಮಾಧ್ಯಮ, ಸಂವಹನ ಯುಗದಲ್ಲಿ ಪ್ರತಿಯೊಬ್ಬರು ಸುದ್ದಿ ಹಂಚಿಕೊಳ್ಳುತ್ತಿದ್ದಾರೆ. ತಮ್ಮತನವನ್ನು ತೋರಲು ಬಯಸುತ್ತಾರೆ. ಕ್ಷಣಾರ್ಧದಲ್ಲಿ ಜಗತ್ತಿಗೆ ಪರಿಚಯವಾಗಿ ಹಣ, ಕೀರ್ತಿ ಹಾಗೂ ಜನಪ್ರಿಯತೆಯನ್ನು ಗಳಿಸುತ್ತಾರೆ ಇದಕ್ಕೆ ಮುಖ್ಯ ಕಾರಣ ಅಭಿವ್ಯಕ್ತಿ ಸಾಮರ್ಥ್ಯ ಎಂದು ಮಾಜಿ ಶಾಸಕ ಎ ಎಸ್ ಪಾಟೀಲ್ (ನಡಹಳ್ಳಿ) ಹೇಳಿದರು.
ಆಲಮಟ್ಟಿ ರಸ್ತೆ ಪಕ್ಕದ ಅರಿಹಂತಗಿರಿಯಲ್ಲಿರುವ ಅರಿಹಂತ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದ ಅವರು, ಆಧುನಿಕ ಜಗತ್ತು ಮೊಬೈಲ್ ಬಳಕೆಯಿಂದ ಡಿಜಿಟಲ್ ಗ್ರಂಥಾಲಯವಾಗಿ ಪರಿವರ್ತನೆ ಆಗಿದೆ. ವಿಜ್ಞಾನ, ತಂತ್ರಜ್ಞಾನ ಜೊತೆಗೆ ಮಾಹಿತಿ ಜ್ಞಾನ ಇಲ್ಲದಿದ್ದರೆ ಪೂರ್ಣವಾಗುವುದಿಲ್ಲ. ಹಾಗೆಯೇ ಸುಳ್ಳು ಮಾಹಿತಿ ಹಬ್ಬಿಸುವುದರಿಂದ ಒಂದು ದೇಶ, ಒಬ್ಬ ವ್ಯಕ್ತಿಯನ್ನು ಹಾಳು ಮಾಡಬಹುದು. ಹಾಗಾಗಿ ಸುಳ್ಳು ಸುದ್ದಿಗಳನ್ನು ಹರಡಬಾರದು ಮತ್ತು ನಂಬಬಾರದು ಎಂದು ಮಾತನಾಡಿದರು.
ಪತ್ರಿಕೋದ್ಯಮ ಮತ್ತು ಪತ್ರಕರ್ತರ ಕಾರ್ಯಶೈಲಿ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರೊ. ರಾಜನಾರಾಯಣ ನಲವಡೆ ಅವರು, ಪತ್ರಿಕೋದ್ಯಮ ಸದಾ ಕಾಲ ಸಮಾಜಮುಖಿ ಕಾರ್ಯ ನಿರ್ವಹಿಸಿದೆ. ಸ್ವತಂತ್ರ ಹೋರಾಟಗಾರರು, ಸಾಹಿತಿಗಳು ಕರಪತ್ರ ರೂಪದಲ್ಲಿ ಪ್ರಕಟಣೆ ಮಾಡಿದ ಸಾಹಿತ್ಯ ಇಂದು ಸಮೂಹ ಮಾಧ್ಯಮ, ತಂತ್ರಜ್ಞಾನ ಬಳಕೆಯಿಂದ ಸಮಾಜವನ್ನು ಬದಲಿಸಿದೆ. ಪತ್ರಕರ್ತರಾದವರು ಸದಾ ಸಮಾಜದ ಓರೆಕೋರೆಗಳನ್ನು ತಿದ್ದುತ್ತಾ, ಸತ್ಯದ ಪರವಾಗಿ ಬರೆಯಬೇಕು ಎಂದು ಮಾತನಾಡಿದರು.
ಅರಿಹಂತ ಸಂಸ್ಥೆಯ ಅಧ್ಯಕ್ಷರಾದ ಮಹಾವೀರ ಸಗರಿ. ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ.ಬಿ.ವಡವಡಗಿ. ಪ್ರಧಾನ ಕಾರ್ಯದರ್ಶಿ ರವೀಂದ್ರ ನಂದೆಪ್ಪನರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ ವಿದ್ಯಾರ್ಥಿನಿ ಭಾಗ್ಯಶ್ರೀ ಬಸವರಾಜ್ ಕುಂಬಾರ ವಿದ್ಯಾರ್ಥಿನಿಗೆ ಪ್ರತಿಭಾ ಪುರಸ್ಕಾರ. ತಾಲೂಕು ಮಟ್ಟದ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ಪತ್ರಕರ್ತರಾದ ರಿಯಾಜ್‌ಅಹ್ಮದ್ ಮುಲ್ಲಾ, ಹಣಮಂತ ಬೀರಗೊಂಡ, ಈಶ್ವರ ಈಳಗೇರ, ಹಣಮಂತ ಟಕ್ಕಳಕಿ(ಮುತ್ತು), ಕೃಷ್ಣಾ ಕುಂಬಾರ ಅವರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ಬೆಣ್ಣೂರು. ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಪುಲ್ ಸಗರಿ ವೇದಿಕೆ ಮೇಲೆ ಇದ್ದರು. ಸಂಘದ ತಾಲೂಕು ಅಧ್ಯಕ್ಷ ಆರ್.ಬಿ.ವಡವಡಗಿ (ಮುತ್ತು) ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಸಿದ್ದು ಚಲವಾದಿ, ಖಜಾಂಚಿ ಲಾಡ್ಲೇಮಶ್ಯಾಕ ನದಾಫ, ಅಮೀನ ಸಾಬ್ ಮುಲ್ಲಾ. ಪುಂಡಲಿಕ ಮುರಾಳ. ಬಸವರಾಜ ಹುಲಗಣ್ಣಿ. ಮಹಿಬೂಬ ಹಳ್ಳೂರು ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

