ಸತ್ಯಕಾಮ ವಾರ್ತೆ ಮುದ್ದೇಬಿಹಾಳ:
ಅಮರ ಶಿಲ್ಪಿ ಜಕಣಾಚಾರಿಯವರಿಂದ ನಿರ್ಮಿಸಲಾಗಿದೆ ಎಂದು ಪ್ರತೀತಿ ಹೊಂದಿರುವ ತಾಲೂಕಿನ ಕುಂಟೋಜಿ (ನಂದಿ) ಬಸವೇಶ್ವರ ಸಂಗಮೇಶ್ವರ ದೇವಸ್ಥಾನದ ಜಾತೆಯು ಪ್ರತಿ ಶ್ರಾವಣ ಮಾಸದ ಕೊನೆಯ ಸೋಮವಾರದಿಂದ 5 ದಿನಗಳವರೆಗೆ ನಡೆಯುತ್ತಾ ಬಂದಿದೆ.
ಈ ವರ್ಷ ಇಲ್ಲಿನ ಜಾತ್ರೆಯು ಬಹಳ ವಿಶೇಷವಾಗಿ ನಡೆಯಲಿದೆ. ಈ ದೇವಸ್ಥಾನಕ್ಕೆ ಈ ವರ್ಷದಿಂದ ಅಂದರೆ ಮೊಟ್ಟ ಮೊದಲಬಾರಿಗೆ ಕುಂಟೋಜಿ ಬಸವೇಶ್ವರ (ನಂದಿ) ಹಾಗೂ ಸಂಗಮೇಶ್ವರ ರಥೋತ್ಸವ ಜರುಗಲಿದೆ. ಕುಂಟೋಜಿ ಗ್ರಾಮದ ಮತ್ತು ಸುತ್ತಮುತ್ತಲಿನ ಊರುಗಳು, ನಗರ ಮತ್ತು ಬೇರೆ ಬೇರೆ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಬಸವಣ್ಣನ ಭಕ್ತರು ಬಹಳ ಭಕ್ತಿಪೂರ್ವಕವಾಗಿ ದೇಣಿಗೆ ನೀಡಿ, ಕೊಪ್ಪಳದ ಜಕಣಾಚರ‍್ಯ ಮತ್ತು ಅಮೋಘವರ್ಷ ನೃಪತುಂಗ ಪ್ರಶಸ್ತಿ ವಿಜೇತರಾದ ರಥಶಿಲ್ಪಿ ಮಲ್ಲಪ್ಪ ಬಡಿಗೇರ ಇವರು ತಮ್ಮ ಎಂ.ಜಿ.ರಥಶಿಲ್ಪಿ ಕಲಾ ಕೇಂದ್ರದಲ್ಲಿ ಸಂಪೂರ್ಣ ಉಚಿತವಾಗಿ ನಿರ್ಮಿಸಿರುವ, ಸಾಗುವಾಣಿ ಮರದ ರಥವನ್ನು ಇದೇ ಜುಲೈ 30 ರಂದು ತಾಲೂಕಾ ಕೇಂದ್ರವಾದ ಮುದ್ದೇಬಿಹಾಳ ನಗರದ ಶ್ರೀದೇವಿ ಪಿಲೇಕೆಮ್ಮ ದೇವಿ ದೇವಸ್ಥಾನದಿಂದ ಕುಂಟೋಜಿ ಗ್ರಾಮದವರೆಗೆ ಭವ್ಯ ಮೆರವಣಿಗೆಯ ಮುಖಾಂತರ ಸ್ವಾಗತಿಸಲಿದ್ದಾರೆ.
ಜುಲೈ 27 ರಂದು ರಥವನ್ನು ತರಲು ಕುಂಟೋಜಿಯಿAದ ಭಕ್ತರು ಮತ್ತು ದೇವಸ್ಥಾನ ಕಮೀಟಿಯವರು ಟ್ರಾö್ಯಕ್ಟರ್ ಮುಖಾಂತರ ಕೊಪ್ಪಳಕ್ಕೆ ತೆರಳಿಲಿದ್ದಾರೆ. ಜುಲೈ 29 ರಂದು ಬೆಳಿಗ್ಗೆ ಕೊಪ್ಪಳದಿಂದ ರಥವನ್ನು ತೆಗೆದುಕೊಂಡು ಹೊರಟು ಅಂದೇ ಸಂಜೆ ಮುದ್ದೇಬಿಹಾಳ ನಗರದ ಶ್ರೀ ದೇವಿ ಪಿಲೇಕೆಮ್ಮ ದೇವಾಸ್ಥಾನಕ್ಕೆ ಬಂದು ತಲುಪಲಿದೆ. ಮರುದಿನ 30 ರಂದು ಬೆಳಿಗ್ಗೆ ಪ್ರಥಮ ರಥವನ್ನು ಮತ್ತು ಅದರ ಜೊತೆಗೆ 21 ಕಿಲೋ ತೂಕದ ಬಸವಣ್ಣ ಮತ್ತು ಸಂಗಮೇಶ್ವರನ ಬೆಳ್ಳಿಯ ಮುಖವಾಡಗಳನ್ನು, ನಾಗರ ಹೆಡೆಯನ್ನು, ತೇರು ಎಳೆಯುವ ಹಗ್ಗ, ತೇರಿಗೆ ರುದ್ರಾಕ್ಷಿ ಮಾಲೆ, ಕಳಸ, ಇವುಗಳನ್ನು ಕುಂಟೋಜಿ ಮತ್ತು ಸುತ್ತಮುತ್ತಲ ಗ್ರಾಮಗಳ ಮಹಿಳಾ ಸಂಘಗಳ ನೇತೃತ್ವದಲ್ಲಿ ಸುಮಂಗಲೆಯರಿAದ ಭವ್ಯ ಕುಂಭ ಮೆರವಣಿಗೆ, ಮತ್ತು ಡೊಳ್ಳು, ಕರಡಿಮಜಲು, ಬೆಂಡುಬಾಜಿ, ಕೋಲಾಟ ನೃತ್ಯ ಸಂಗೀತಗಳ ಸಹಿತ ಸಾಂಪ್ರದಾಯಿಕ ವಾದನಗಳ ಭವ್ಯ ಮೆರವಣಿಗೆಯ ಜೊತೆಗೆ ಕುಂಟೋಜಿ ಗ್ರಾಮಕ್ಕೆ ಕರೆತರಲಾಗುತ್ತದೆ. ಮರುದಿನ ಜುಲೈ 31 ರಂದು ಬೆಳಿಗ್ಗೆ ಗೋಧೂಳಿ ಸಮಯದಲ್ಲಿ ಮುತೈದೆಯರಿಗೆ ಉಡಿ ತುಂಬುವ ಮೂಲಕ ರಥ ಜೋಡಿಸುವ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ಎಂದು ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ಹೇಳಿದರು.
- Advertisement -
ಅವರು ಶನಿವಾರ ಬೆಳಿಗ್ಗೆ ಕುಂಟೋಜಿ ಗ್ರಾಮದ ಗುರು ಹಿರಿಯರ ನೇತೃತ್ವದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಜಾತ್ರಾ ಮಹೋತ್ಸವ ಹಾಗೂ ರಥವನ್ನು ತರುವ ಕುರಿತು ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ನಾಗಲಿಂಗಯ್ಯ ಮಠ, ರಥದ ಸ್ವಾಗತದ ಸಂದರ್ಭದಲ್ಲಿ ನಡೆಯವಬೇಕಾದ ಸಿದ್ಧತೆಗಳ ಕುರಿತು ಮಾರ್ಗದರ್ಶನ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ದೇವಸ್ಥನ ಕಮೀಟಿಯ ಉಪಾಧ್ಯಕ್ಷ ಆನಂದ ಗಸ್ತಿಗಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ನಾಟೀಕಾರ, ರಾಮಣ್ಣ ಹುಲಗಣ್ಣಿ, ಮಲ್ಲಿಕಾರ್ಜುನ ಹುಲಬೆಂಚಿ, ಗುರುಪಾದಪ್ಪ ಹೆಬ್ಬಾಳ, ಅಶೋಕ ಕಾಟಿ, ಈರನಗೌಡ ಬಿರಾದಾರ, ಬಸಲಿಂಗಪ್ಪಗೌಡ ಬಿರಾದಾರ, ಶರಣಬಸಪ್ಪ ಪಲ್ಲೇದ, ಸಂಗಮೇಶ ಕುಂಬಾರ, ಸಂಗನಗೌಡ ಪಾಟೀಲ, ಗುರುಪಾದಪ್ಪ ಹೆಬ್ಬಾಳ, ಶಿವಲಿಂಗಪ್ಪ ಗಸ್ತಿಗಾರ, ಬಸಪ್ಪ ಹೂಗಾರ, ಪ್ರಕಾಶ ಹೂಗಾರ, ಸಂಗಯ್ಯ ಮಠ, ಮಮಾತೆಪ್ಪ ಯರಝರಿ, ಮಲ್ಲನಗೌಡ ಬಿರಾದಾರ, ರಾಚಯ್ಯ ಮಠ, ಸಂಗಯ್ಯ ಮಠ, ಪವಾಡೆಪ್ಪ ತಾಂಬ್ರಳ್ಳಿ, ಸಂತೋಷ ಬಿರಾದಾರ, ಶಿವಪ್ಪ ಕೋಲಕಾರ, ಅಂಬ್ರೇಶ ಕಾಟಿ, ಶರಣಬಸ್ಸು ಫಣೇದಕಟ್ಟಿ, ಶರಣಗೌಡ ಬಿರಾದಾರ, ಮಂಜೂ ಅಬ್ಬಿಹಾಳಮಠ, ಶಿವು ಅಂದೇಲಿ, ಸಂಗಮೇಶ ಯರಝರಿ ಮತ್ತೀತರರು ಇದ್ದರು.

