ಸತ್ಯಕಾಮ ವಾರ್ತೆ ಸಿರವಾರ:
ತಳ ಸಮುದಾಯದ ಯುವಜನರಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ಮೌಢ್ಯ ಹೋಗಲಾಡಿಸಲು ಜಾಗೃತಿ ಅತ್ಯಗತ್ಯ ಎಂದು ಮಾನವ ಬಂಧುತ್ವ ವೇದಿಕೆಯ ಗ್ರಾಮ ಸಂಚಾಲಕ ಸಿಕಿಂದ ದೊಡ್ಡಮನಿ ಹೇಳಿದರು.
ತಾಲೂಕಿನ ಅತ್ತನೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾನವ ಬಂದತ್ವ ವೇದಿಕೆಯಿಂದ ಬಸವ ಪಂಚಮಿ ಆಚರಣೆ ಮಾಡಲಾಯಿತು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮೌಢ್ಯದಿಂದ ಜ್ಞಾನದತ್ತ, ಕತ್ತಲಿಂದ ಬೆಳಕಿನೆಡೆಗೆ ಎನ್ನುವ ಮಹತ್ತರ ಯೋಜನೆಗಳು ವೇದಿಕೆಯ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ. ಯುವ ಪೀಳಿಗೆ ಶಿಕ್ಷಣ ಪಡೆದು ಮೌಢ್ಯ ಧಿಕ್ಕರಿಸಿ ಪ್ರಜ್ಞಾವಂತ ಸಮಾಜ ಕಟ್ಟಲು ಮುಂದಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸಣ್ಣ ಈರಣ್ಣ, ಕೆ ದುರ್ಗಣ್ಣ, ಅಯ್ಯಪ್ಪ ಮ್ಯಾದರ್, ಗ್ರಾಮ ಪಂಚಾಯತ ಸದಸ್ಯ ಅಂಬರೀಶ ಜಗ್ಲಿ, ಬೆಟ್ಟಪ್ಪ, ಕಸ್ತೂರಿ, ಮಂಜುನಾಥ ನಾಯಕ, ಪಂಪಾಪತಿ ನಾಯಕ ಶಿಕ್ಷಕರಾದ ಮಂಜುನಾಥ, ಗುಂಡೇಶ ಹಾಗೂ ವಿದ್ಯಾರ್ಥಿಗಳಿದ್ದರು.

