Author: Satyakam NewsDesk

  • ಹಿಂಗುಲಾಂಬಿಕಾ ಸೊಸೈಟಿಯಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ

    ಹಿಂಗುಲಾಂಬಿಕಾ ಸೊಸೈಟಿಯಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ

    ಕಲಬುರಗಿ :— ಇಂದಿನ ಕಂಪ್ಯೂಟರ್ ಯುಗದಲ್ಲಿ ಮೊಬೈಲ್, ಕಂಪ್ಯೂಟರ್ ಗಳ ಬಳಕೆ ಅವಶ್ಯಕತೆಗಿಂತ ಜಾಸ್ತಿ ಉಪಯೋಗಿಸಿ ಅವುಗಳನ್ನೇ ಅವಲಂಬಿಸಿ, ಒಂದು ವೇಳೆ ಅವುಗಳಿಂದ ನಾವು ದೂರ ಉಳಿದರೆ ನಮ್ಮ ಸರ್ವಸ್ವವನ್ನೇ ಕಳೆದುಕೊಳ್ಳುತ್ತೇವೆ ಎಂಬ ಮಟ್ಟಿಗೆ ಅನೇಕ ಯುವಕ ಯುವತಿಯರು ಅದರಲ್ಲಿಯೂ ವಿದ್ಯಾರ್ಥಿಗಳು ತೀರ್ಮಾನಕ್ಕೆ ಬಂದಿದ್ದಾರೆ . ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ಕೆಲವು ವಿದ್ಯಾರ್ಥಿಗಳು ಇವುಗಳಿಂದ ದೂರ ಉಳಿದು ಕೇವಲ ತಮ್ಮ ವಿದ್ಯಾಭ್ಯಾಸದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡು ಪಿಯುಸಿ ದ್ವಿತೀಯ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತಮಟ್ಟದ ಅಂಕಗಳನ್ನು ಪಡೆದು ರಾಜ್ಯ ,ಜಿಲ್ಲಾಮಟ್ಟದ ಹಾಗೂ ಶಾಲೆಗೆ ,ಸಮಾಜಕ್ಕೆ, ಹಾಗೂ ಕುಟುಂಬಕ್ಕೆ ಕೀರ್ತಿ ತಂದಿದ್ದಾರೆಂದು ಶ್ರೀ ಎಂ ಜಿ ಘನಾತೆ ಅಧ್ಯಕ್ಷರು ಶ್ರೀ ಹಿಂಗುಲಾಂಬಿಕಾ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಹಾಗೂ ಭಾವಸಾರ್ ಛತ್ರಿ ಸಮಾಜದ ಮುಖಂಡರು ಮಾತನಾಡುತ್ತಿದ್ದರು.

    ಅವರು ನಗರದ ಪ್ರತಿಷ್ಠಿತ ಶ್ರೀ ಹಿಂಗುಲಾಂಬಿಕಾ ಶಿಕ್ಷಣ ಸಂಸ್ಥೆ ಏರ್ಪಡಿಸಿದ ಭಾವಸಾರ್ ಸಮಾಜದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ವಿಷಯ ವ್ಯಕ್ತಪಡಿಸಿದರು.
    ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಕುಮಾರಿ ಭೂಮಿಕಾ ಕಠಾರೆ 86. 83 ಪ್ರತಿಶತ ಅಂಕ ಪಡೆದು ಟಾಪ್ ಮಾಡಿದ ಅವಳಿಗೆ 5,000 ಕ್ಯಾಶ್ ಪ್ರೈಸ್, 79 ಪ್ರತಿಶತ ಅಂಕ ಪಡೆದ ದೀಕ್ಷಾಗೆ 2500 ರೂಪಾಯಿ ಹಾಗೂ ಶ್ರೇಯಸ್ ವೈಚೋಲೆ ಇವರಿಗೆ 1100 ಕ್ಯಾಶ್ ಪ್ರೈಸ್ ನೀಡಿ ಸನ್ಮಾನಿಸಲಾಯಿತು.
    ಅದೇ ತರಹ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಟಾಪ್ ಮಾಡಿದ ಭಾವಸಾರ್ ಕ್ಷತ್ರಿಯ ಸಮಾಜದ ವಿವಿಧ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದ ಟಾಪ್ ಮಾಡಿದ ಪ್ರಿಯಾಲ್ ನೌಲೇ 5000 ಕ್ಯಾಶ್ ಪ್ರೈಸ್, ದೀಕ್ಷಾ ಹಿಬಾರೆ 2500 ಹಾಗೂ ಕೃಪಾ ರಂಗದಾಳಗೆ 1100 ರೂಪಾಯಿ ಕ್ಯಾಶ್ ಪ್ರೈಸ್ ಹಾಗೂ ಭವ್ಯ ಸನ್ಮಾನ ಮಾಡಿ ಗೌರವಿಸಲಾಯಿತು.
    ವೇದಿಕೆಯಲ್ಲಿ ಹಿಂಗುಲಾಂಬಕಾ ಸಂಸ್ಥೆಯ ಉಪಾಧ್ಯಕ್ಷ ಲಕ್ಷ್ಮಿಕಾಂತ್ ರಂಗ ದಾಳ ನಿರ್ದೇಶಕರಾದ ನಂದ ಕಿಶೋರ್ ಚೌಹಾಣ ರಮೇಶ್ ರಂಗದಾಲ್ ನಂದಕುಮಾರ್ ಪುಕಾಳೆ ಸುನಿಲ್ ರಂಗ ದಾಳ ದೇವಿ ದಾಸ್ ಪಿಸ್ಸೆ ದತ್ತ ಕಠಾರೆ ರಾಜಕುಮಾರ್ ರಂಗ ದಾಳ ದಯಾನಂದ್ ಕಬಾಡೆ ಸುರೇಶ್ ತಲ್ವಾರ್ ಸುರೇಖಾ ಘನಾತೆ ಹಾಗೂ ಸದಸ್ಯರಾದ ವಿಠಾಬಾಯಿ ಹಿಬಾರಿ ಉಪಸ್ಥಿತರಿದ್ದರು.

  • ಸಿರಸಿ ಮಡ್ಡಿಯ ಸಾಯಿ ದರ್ಬಾರ್ ನಲ್ಲಿ ವಿಜೃಂಭಣೆಯ ಗುರುಪೂರ್ಣಿಮೆ ಆಚರಣೆ !

    ಸಿರಸಿ ಮಡ್ಡಿಯ ಸಾಯಿ ದರ್ಬಾರ್ ನಲ್ಲಿ ವಿಜೃಂಭಣೆಯ ಗುರುಪೂರ್ಣಿಮೆ ಆಚರಣೆ !

    ಕಲಬುರಗಿ :- ನಗರದ ಶರಣ ಸಿರಸಿ, ಮಡ್ಡಿಯ ನಿಸರ್ಗ ಕಾಲೋನಿಯ ಶ್ರೀ ಸಾಯಿ ದರ್ಬಾರ್ ಮಂದಿರದಲ್ಲಿ ವಿಜೃಂಭಣೆಯ ಗುರುಪೂರ್ಣಿಮೆ ಕಾರ್ಯಕ್ರಮ ಜರುಗಿತು.
    ಬೆಳಗಿನ ಜಾವ 8:00 ಗಂಟೆಗೆ ಸಾಯಿಬಾಬಾರವರ ಭವ್ಯಮೂರ್ತಿಗೆ ಮಹಾ ಅಭಿಷೇಕ ಅನೇಕ ಸದ್ಭಕ್ತರ ಉಪಸ್ಥಿತಿಯಲ್ಲಿ ಗುರುಗಳಾದ ಶ್ರೀ ಸುರೇಶ್ ಬಾಬಾ ಗುರೂಜಿಯವರ ನೇತೃತ್ವದಲ್ಲಿ ಜರುಗಿತ್ತು. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಸಾಯಿಬಾಬಾರವರ ಮಧ್ಯದ ಆರತಿ ಗುರೂಜಿ ಅವರ ನೇತೃತ್ವದಲ್ಲಿ ನೆರವೇರಿತು.
    ಗುರುಪೂರ್ಣಿಮೆಯ ಮಹಾ ಅಭಿಷೇಕ ಮತ್ತು ಆರತಿಯಲ್ಲಿ ಪತ್ರಕರ್ತ ಶ್ರೀ ಆನಂದ್ ಪಿ ಮಣ್ಣೂರ್ ಪತ್ರಕರ್ತ ಶ್ರೀ ದಸ್ತಯ್ಯ ಗುತ್ತೇದಾರ್ ಪತ್ರಕರ್ತ ಹಾಗೂ ಸಾಹಿತಿ ಶ್ರೀ ಕಿರಣ್ ಪಾಟೀಲ್ ಅಶೋಕ್ ಗುತ್ತೇದಾರ್ ಶಿವರಾಜ್ ಬಿರಾದಾರ್ ಜನರಲ್ ಮ್ಯಾನೇಜರ್ ನಿವೃತ್ತ, ಶ್ರೀ ದಶರಥ ಏಖೆಳ್ಳಿಕರ್ ಇನ್ನು ಅನೇಕರು ಉಪಸ್ಥಿತರಿದ್ದರು. ಆರತಿಯ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಹುಮನಾಬಾದ್ ತಾಲೂಕಿನ ಶ್ರೀಮತಿ ಸುಗಂಧಾ ನರೂಣಿ ರವರು ಏರ್ಪಡಿಸಿದರು.

  • ಇಂದು ಮಣ್ಣೂರ್ ರವರ  ಹುಟ್ಟುಹಬ್ಬ ಆಚರಣೆ : ಸನ್ಮಾನ ಸಮಾರಂಭ

    ಇಂದು ಮಣ್ಣೂರ್ ರವರ ಹುಟ್ಟುಹಬ್ಬ ಆಚರಣೆ : ಸನ್ಮಾನ ಸಮಾರಂಭ

    ಕಲಬುರಗಿ :— ಸತ್ಯಕಾಮ ಪತ್ರಿಕೆಯ ಪ್ರಧಾನ ಸಂಪಾದಕರು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾದ ಸನ್ಮಾನ್ಯ ಶ್ರೀ ಪಿ ಎಂ ಮಣ್ಣೂರ ಅವರ 75ನೇ ಹುಟ್ಟು ಹಬ್ಬದ ಭವ್ಯ ಸಮಾರಂಭ ಶ್ರೀ ಶ್ರೀನಿವಾಸರಾವ್ ಆರ್ ರಘೋಜಿ ಸಭಾ ಗ್ರಹ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸೂಪರ್ ಮಾರ್ಕೆಟ್ ಕಲಬುರಗಿಯಲ್ಲಿ ದಿನಾಂಕ 01-07-2023 ರಂದು ಸಾಯಂಕಾಲ 5-00 ಗಂಟೆಗೆ ವಿಜ್ರಮಣೆಯಿಂದ ಆಚರಿಸಲಾಗುತ್ತಿದೆ ಎಂದು ಸತ್ಯಕಾಮ ಪತ್ರಿಕೆಯ ಕಲಬುರಗಿ ಸ್ಥಾನಿಕ ಸಂಪಾದಕ ಶ್ರೀ ಆನಂದ್ ಮಣ್ಣೂರ ರವರು ತಿಳಿಸಿದ್ದಾರೆ.
    ಪರಮಪೂಜ್ಯ ಶ್ರೀ ಜಗದ್ಗುರು ಡಾ .ಸಾರಂಗಧರ , ಸಾರಂಗ ಮಠ ಶ್ರೀಶೈಲಂ, ಸುಲಫಲ ಮಠ ಶಹ ಬಜಾರ್ ಕಲಬುರಗಿ ರವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಸನ್ಮಾನ್ಯ ಶ್ರೀ ತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್ ಸದಸ್ಯರು ಸತ್ಯಕಾಮ ವೆಬ್ಸೈಟ್ ಉದ್ಘಾಟಿಸಲಿದ್ದಾರೆ. ಸನ್ಮಾನ್ಯ ಶ್ರೀ ಪ್ರೊಫೆಸರ್ ದಯಾನಂದ ಅಗಸರ ಉಪಕುಲಪತಿಗಳು ಗುಲ್ಬರ್ಗ ವಿವಿ ಕಲಬುರಗಿ ಸಮಾರಂಭದ ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆ ಸನ್ಮಾನ್ಯ ಶ್ರೀ ಲಿಂಗರಾಜಪ್ಪ ಅಪ್ಪ ಉಪಾಧ್ಯಕ್ಷರು ವಿಶ್ವ ಹಿಂದೂ ಪರಿಷತ್( ಉತ್ತರ) ವಹಿಸಲಿದ್ದಾರೆ. ಪಿ ಪಿ ಟಿ ಚಾಲನೆ ಸನ್ಮಾನ್ಯ ಶ್ರೀ ಬಸವರಾಜ ಮತ್ತಿಮೂಡ ಮಾನ್ಯ ಶಾಸಕರು ಕಲಬುರ್ಗಿ ಗ್ರಾಮೀಣ ಮತಕ್ಷೇತ್ರ ರವರ ಅಮೃತ ಹಸ್ತಗಳಿಂದ ನೆರವೇರಲಿದೆ. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಶ್ರೀ ಟಿ ವಿ ಶಿವಾನಂದನ್ ಹಾಗೂ ಶಶಿಕಾಂತ್ ಬಿ ಪಾಟೀಲ್ ಅಧ್ಯಕ್ಷರು ಕೆ ಕೆ ಸಿ ಸಿ ಐ ಕಲಬುರಗಿ ಆಗಮಿಸಲಿದ್ದಾರೆ.

    ಭವ್ಯ ಸನ್ಮಾನ:- ಇದೆ ಸನ್ಮಾನ ಸಮಾರಂಭದಲ್ಲಿ ಸತ್ಯಕಾಮ ಪತ್ರಿಕೆಯು ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದು, ಹಿರಿಯ ಹಾಗೂ ಯುವ ಪತ್ರಕರ್ತರನ್ನು ಸನ್ಮಾನಿಸಲಾಗುವುದು ಎಂದು ಆನಂದ್ ಮಣ್ಣೂರ ತಿಳಿಸಿದ್ದಾರೆ. ಸನ್ಮಾನಿತ ಪುರಸ್ಕೃತರಲ್ಲಿ ಶ್ರೀ ಶಿವಕಾಂತಾಚಾರ್ಯ ಮಣ್ಣೂರ ಹಿರಿಯ ಪತ್ರಕರ್ತರು, ಶ್ರೀ ಎಸ್ ಬಿ ಜೋಶಿ ಹಿರಿಯ ವರದಿಗಾರರು ಪಿಟಿಐ ಕಲಬುರಗಿ, ಶ್ರೀಮತಿ ಶೀಲಾ ತಿವಾರಿ ಸಂಪಾದಕರು ಕನ್ನಡ ಚಿಂತಕ ಪತ್ರಿಕೆ, ಶ್ರೀ ಕೇದಾರ ಲಿಂಗಯ್ಯ ಹಿರೇಮಠ ಕಲಬುರ್ಗಿ ವಾಣಿ ಕನ್ನಡ ಪತ್ರಿಕೆ, ಶ್ರೀ ಮುಹಿಯುದ್ದೀನ್ ಪಾಷಾ ಸಂಪಾದಕರು ಇನ್ ಕ್ಲಾಬ್ ಎ ಡೆಕ್ಕನ್ ಸಂಪಾದಕರು ಉರ್ದು ಪತ್ರಿಕೆ ಹಾಗೂ ಶ್ರೀ ಮಹಿಪಾಲ ರೆಡ್ಡಿ ಮುನೂರ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳು ಇವರನ್ನು ಸನ್ಮಾನಿಸಲಾಗುವುದು ಎಂದು ಆನಂದ್ ಮಣ್ಣೂರ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.