Author: Satyakam NewsDesk

  • ಅನೈತಿಕ ಸಂಬಂಧ ಪತ್ನಿಯಿಂದಲೇ ಪತಿಯ ಹತ್ಯೆ !

    ಅನೈತಿಕ ಸಂಬಂಧ ಪತ್ನಿಯಿಂದಲೇ ಪತಿಯ ಹತ್ಯೆ !

     

    ಗುರುಮಠಕಲ್ :— ತಾಲೂಕಿನ ಕೊಂಕಲ್ ಗ್ರಾಮದಲ್ಲಿ ದಿನಾಂಕ 16 .06 .2023 ರಂದು ಕಾಶಪ್ಪ ತಂದೆ ನಾಗಪ್ಪ ಮಲ್ಲಪ್ಪೋಳ ಸಾಕಿನ್ ಕೊಂಕಲ ಗ್ರಾಮ ಈತನ ಮೃತ ದೇಹ ಬನ್ನಿ ಗಿಡಕ್ಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ದೊರೆತಿದ್ದರಿಂದ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಮೃತನ ಅಕ್ಕ ಕಾಶಮ್ಮ ಗಂಡ ರಾಜು ಕುಡ್ಲೂರು ಸಾಕಿನ್ ತೊಟ್ಟೂರ್ ಇವರ ಫಿರ್ಯಾದಿನ ಮೇರೆಗೆ ಇವರ ತಮ್ಮನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಯುಡಿಆರ್ ಸಂಖ್ಯೆ 08/2023 ಕಲಂ 174( ಸಿ) ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿತ್ತು.

    ಯಾದ್ಗೀರ್ ಪೊಲೀಸ್ ಅಧೀಕ್ಷಕರು ಹಾಗೂ ಉಪವಿಭಾಗ ಡಿಎಸ್ಪಿ ಯವರ ಘನ ಮಾರ್ಗದರ್ಶನದಲ್ಲಿ ದೌಲತ್ ಎನ್ಕೆ ಗುರುಮಿಟ್ಕಲ್ ಠಾಣೆ ಇವರ ನೇತೃತ್ವದಲ್ಲಿ ಪಿಎಸ್ಐ ಹಾಗೂ ಸಿಬ್ಬಂದಿಗಳಾದ ನರಸಿಂಗರಾವ್ ವಿಶ್ವನಾಥ್ ರೆಡ್ಡಿ ದೇವೇಂದ್ರ ನಾಗೇಂದ್ರ ರೆಡ್ಡಿ ರಹೀಮ್ ಮೊಹಮ್ಮದ್ ಶರೀಫ್ ನರಸರೆಡ್ಡಿ ಸಾಹೇಬ್ ರೆಡ್ಡಿ ಅಶೋಕ್ ಮತ್ತು ರಾಮಲಿಂಗಪ್ಪ ಇವರನ್ನೊಳಗೊಂಡ ತಂಡವನ್ನು ರಚಿಸಿದರು.
    ಸಾರಾಂಶ :- ಪ್ರಕರಣದ ಜಾಲವನ್ನು ಹಿಡಿದು ವ್ಯಾಪಕ ತನಿಖೆ ಕೈಕೊಂಡು ದಿನಾಂಕ್ 21.07.2023 ರಂದು ಮೃತನ ಹೆಂಡತಿ ಅನಿತಾ ಗಂಡ ಕಾಶಪ್ಪ ಸಾಕಿನ್ ಕೊಂಕಲ್ ಮತ್ತು ನಾಗರಾಜ್ ಅಲಿಯಾಸ್ ನಾಗೇಶ್ ತಂದೆ ಮಲ್ಲಪ್ಪ ಹತ್ತಿಕುಣಿ ಇವರಿಬ್ಬರನ್ನು ದಸ್ತಗೀರ್ ಮಾಡಿ ವಶಕ್ಕೆ ಪಡೆದುಕೊಂಡು ವ್ಯಾಪಕ ತನಿಖೆಗೊಳಪಡಿಸಿದಾಗ ಇವರಿಬ್ಬರು ಸೇರಿ ದಿನಾಂಕ 15 .6. 2023 ರಂದು ರಾತ್ರಿ ವೇಳೆಯಲ್ಲಿ ಕಾಶಪ್ಪ ತನ್ನ ಮನೆಯಲ್ಲಿ ಮಲಗಿದ್ದಾಗ ಸಿನಿಮಯ ಶೈಲಿಯಲ್ಲಿ ಆತನ ಕುತ್ತಿಗೆಗೆ ಹಗ್ಗ ಬಿಗಿದು ಮೃತಪಟ್ಟ ನಂತರ ಸಾಕ್ಷಾಧಾರಗಳನ್ನು ನಾಶಪಡಿಸಿದ ನಂತರ ನಾಗರಾಜ್ ತನ್ನ ಮೋಟರ್ ಸೈಕಲ್ ಮೇಲೆ ಶವ ವನ್ನು ತೆಗೆದುಕೊಂಡು ಹೋಗಿ ಕೊಂಕಲ್ ಗ್ರಾಮದ ಸೀಮೆಯಲ್ಲಿರುವ ಹೊಲಕ್ಕೆ ಸಾಗಿಸಿ ಗಿಡವೊಂದಕ್ಕೆ ಕಾಶಪ್ಪನೆ ಸ್ವತಃ ನೇಣು ಹಾಕಿಕೊಂಡು ವೃತ್ತಪಟ್ಟಿರುವಂತೆ ಸೀನ್ ಕ್ರಿಯೇಟ್ ಮಾಡಿ ಹೆಣವನ್ನು ತೂಗಿ ಹಾಕಿದ್ದಾಗಿ, ತನಿಖೆ ಯಿಂದ ತಿಳಿದು ಬಂದಿದೆ. ಈ ಕೊಲೆಗೆ ಅನಿತಾ ಮತ್ತು ನಾಗರಾಜನ ಅನೈತಿಕ ಸಂಬಂಧ ಇರುವದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಲಾಗಿದೆ. ಸದರಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
    ಈ ಪ್ರಕರಣದಲ್ಲಿ ಶ್ರಮಿಸಿದ ಎಲ್ಲಾ ಸಿಬ್ಬಂದಿಗಳಿಗೆ ಪೊಲೀಸ್ ವರಿಷ್ಠಾಧಿಕಾರಿಗಳು ಯಾದಗೀರ್ ರವರು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.

  • ಜಾನಪದ ಕಲೆ ಉಳಿಸಿ ಬೆಳೆಸಲು ಕರೆ – ಸಿ.ಎಸ್.ಮಾಲಿ ಪಾಟೀಲ

    ಜಾನಪದ ಕಲೆ ಉಳಿಸಿ ಬೆಳೆಸಲು ಕರೆ – ಸಿ.ಎಸ್.ಮಾಲಿ ಪಾಟೀಲ


    ಕಲಬುರಗಿ : ನಗರದ ಸಂತ ಗಾಡಗೆ ಬಾಬಾ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತ ಕಲಬುರಗಿ ಘಟಕದಿಂದ ಕಲಬುರಗಿ ಜಿಲ್ಲೆಯ ತಾಲ್ಲೂಕು ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಿ.ಜಾನಪದ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೇಲ್ಲರ ಆದ್ಯ ಕರ್ತವ್ಯ ಎಂದು ಅದೇಶ ಪತ್ರ ನೀಡಿ ಗೌರವಿಸಿ.ಎಲ್ಲರೂ ಒಗ್ಗಟಿನಿಂದ ಕೆಲಸ ಮಾಡೊಣ ಎಂದು ಕಲಬುರಗಿ ಜಿಲ್ಲಾಧ್ಯಕ್ಷರಾದ ಸಿ.ಎಸ್.ಪಾಟೀಲ ಅವರು ಕರೆ ನೀಡಿದರು.
    ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಸಲಹಾ ಸಮಿತಿಯ ಅಧ್ಯಕ್ಷರಾದ ಎ.ಕೆ.ರಾಮೇಶ್ವರ ,ಕಾರ್ಯದರ್ಶಿ ಮಲ್ಲಿಕಾರ್ಜುನ ರೋಣದ,ಸಂಘಟನಾ ಕಾರ್ಯದರ್ಶಿ ಡಿ.ಪಿ.ಸಜ್ಜನ,ಖಜಾಂಚಿ ಭಾನುಕುಮಾರ ಗೀರೆಗೋಳ,ಮಹಿಳಾ ಪ್ರತಿನಿಧಿ ಮಹಾಲಕ್ಷ್ಮಿ ಪಾಟೀಲ,ಶಹಾಬಾದ ತಾಲ್ಲೂಕು ಅಧ್ಯಕ್ಷರಾದ ಎನ್.ಸಿ.ವಾರದ,ಸೇಡಂ ತಾಲ್ಲೂಕು ಅಧ್ಯಕ್ಷರಾದ ವೀರಯ್ಯ ಮಠಪತಿ,ಯಡ್ರಾಮಿ ತಾಲ್ಲೂಕು ಅಧ್ಯಕ್ಷರಾದ ಬಸವರಾಜ ಬೋರಗಿ,ಕಮಲಾಪುರ ತಾಲ್ಲೂಕು ಅಧ್ಯಕ್ಷರಾದ ಶ್ರೀಕಾಂತ ಪಾಟೀಲ,ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
    ಪ್ರಾರ್ಥನ ಗೀತೆ ಮಹಾಲಕ್ಷ್ಮಿ ಪಾಟೀಲ, ಸ್ವಾಗತ ಮಲ್ಲಿಕಾರ್ಜುನ ರೋಣದ,ನಿರೂಪಣೆ ಡಿ.ಪಿ.ಸಜ್ಜನ,ವಂದನಾರ್ಪಣೆ ಬಾನುಕುಮಾರ ಗೀರೆಗೊಳ ವಹಿಸಿದರು. ಎಂದು ಪತ್ರಿಕಾ ಪ್ರಕಟಣೆಗಾಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಿ.ಪಿ.ಸಜ್ಜನ ಅವರು ತಿಳಿಸಿದರು.

  • ಜೈನ ಮುನಿಗಳಾದ ಕಾಮಕುಮಾರ ನಂದಿ ಹತ್ಯೆ ಪ್ರಕರಣ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ವಿ.ಹೆಚ್.ಪಿ ಆಗ್ರಹ

    ಕಲಬುರಗಿ…… ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಪೂಜ್ಯ ಜೈನ ಮುನಿಗಳಾದ ಕಾಮಕುಮಾರ ನಂದಿ ಅವರನ್ನು ದುಷ್ಕರ್ಮಿಗಳು ಬಬ೯ರವಾಗಿ,ಅಮಾನವೀಯವಾಗಿ ಹತ್ಯೆ ಮಾಡಿದ್ದು,ವಿಶ್ವ ಹಿಂದೂ ಪರಿಷತ್ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರಿಯ ಧಮಾ೯ಚಾಯ೯ ಸಂಪರ್ಕ ಪ್ರಮುಖರಾದ ಬಸವರಾಜ ಹಿರೇಮಠ ತಿಳಿಸಿದರು.

    ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಸಾಧು ಸಂತರಿಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಹೇಳಿದರು.

    ಸಮಾಜಕ್ಕಾಗಿ ಬದುಕುವ ಸಾಧು ಸಂತರನ್ನು ಈ ರೀತಿ ಬಬ೯ರವಾಗಿ ಕೊಲೆ ಮಾಡಿದ್ದು,ಸಮಾಜಕ್ಕೆ ಅವಮಾನವಾದ ಸಂಗತಿಯಾಗಿದ್ದು,ಕೂಡಲೇ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಪರಿಹಾರ ನೀಡುವಲ್ಲಿಯೂ ಸಹ ಚಿಂತನೆ ಮಾಡಬೇಕು ಎಂದರು.

    ಭಾರತ ದೇಶದಲ್ಲಿರುವ ಎಲ್ಲರಿಗೂ ಸಮಾನ ಕಾನೂನು ಇರಬೇಕೆಂಬ ಉದ್ದೇಶದಿಂದ ಶೀಘ್ರವೇ ಸಮಾನ ನಾಗರೀಕ ಸಂಹಿತೆ ದೇಶದಲ್ಲಿ ಜಾರಿಗೊಳಿಸಬೇಕು. ರಾಷ್ಟದಲ್ಲಿ ಎಲ್ಲರಿಗೂ ಒಂದೆ ಕಾನೂನು ಮೂಲಕ ರಾಷ್ಟ್ರದ ಹಿತ ಕಾಪಾಡಲು ಸಮಾನ ನಾಗರೀಕ ಸಂಹಿತೆಯನ್ನು ಆದಷ್ಟು ಬೇಗ ತರಬೇಕು ಎಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

    ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ಲಿಂಗರಾಜಪ್ಪಾ ಅಪ್ಪಾ,ವಿಭಾಗದ ಕಾಯ೯ದಶಿ೯ ಶಿವರಾಜ್ ಸಂಗೋಳಗಿ,ನಗರ ಅಧ್ಯಕ್ಷ ಶ್ರೀಮಂತ ನವಲದಿ,ನಗರ ಕಾಯ೯ದಶಿ೯ ಅಶ್ವಿನ್ ಕುಮಾರ್ ಉಪಸ್ಥಿತರಿದ್ದರು.

  • ಜಿಲ್ಲಾ ಉಸ್ತುವಾರಿ ಪ್ರಿಯಾಂಕ್ ಖರ್ಗೆ ಅವರಿಗೆ ಫೋಟೋಗ್ರಾಫರ್ಸ ಅಸೋಸಿಯೇಷನ್ ವತಿಯಿಂದ ನೆನಪಿನ ಕಾಣಿಕೆ


    ಕಲಬುರಗಿ: ಇಂದು ಕಲಬುರಗಿಯಲ್ಲಿ ಐ.ಟಿ.ಬಿ.ಟಿ ಮತ್ತು ಪಂಚಾಯತ ರಾಜ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವರು. ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಗಳಾದ ಶ್ರೀ ಪ್ರಿಯಾಂಕ್ ಎಮ್ ಖರ್ಗೆಜಿ ಅವರಿಗೆ ಕಲಬುರಗಿ ಜಿಲ್ಲಾ ಫೋಟೊಗ್ರಾಫರ್ಸ ಅಸೋಸಿಯೇಷನ್ ವತಿಯಿಂದ ಅದ್ಯಕ್ಷರಾದ ಬಸವರಾಜ ಸಿ ತೋಟದ ಹಾಗೂ ಅಸೋಸಿಯೇಷನ್ ಸದಸ್ಯರಾದ ಪ್ರಕಾಶ ಎಂ ಶೆರಖಾನೆ . ಅನೀಲಕುಮಾರ ಗಣೇಶಕರ್. ಗಂಗಾರಾಮ ರಾಠೊಡ ಮಂಜುನಾಥ ಜಂಬಗಿ ಆಕಾಶ ಎಸ್ ಪೂಜಾರಿ. ಶ್ರೀನಿವಾಸ ಮಡಕಿ. ಸುನೀಲ್ ಕಟ್ಟಿಮನಿ ಛಾಯಾಗ್ರಾಹಕರಾದ ಷಣ್ಮುಖ ಹಾಗೂ ಅನೇಕ ಛಾಯಾಗ್ರಾಹಕರಿಂದ ನೆನಪಿನ ಕಾಣಿಕೆ . ಪುಸ್ತಕ ನಿಡಿ ಗೌರವಿಸಲಾಯಿತು.

  • ಹುಮ್ನಾಬಾದ್ :ಸಿಂಥೆಟಿಕ್ ಮಾದಕ ವಸ್ತು ಜಪ್ತಿ ಜಿಲ್ಲೆಯಲ್ಲಿಯೇ ಪ್ರಥಮ ಪ್ರಕರಣ : ಎಸ್ ಪಿ.


    ಹುಮ್ನಾಬಾದ್
    :—– ಬೀದರ್ ಜಿಲ್ಲಾಧ್ಯಂತ
    ಸಿಂಥೆಟಿಕ್ ಮಾದಕ ವಸ್ತು ಪ್ರಕರಣ ದಾಖಲಾಗಿದ್ದು, ಇದು ಜಿಲ್ಲೆಯಲ್ಲಿಯೇ ಪ್ರಥಮ ಪ್ರಕರಣ ವಾಗಿದೆ ಎಂದು ಬೀದರ್ ಜಿಲ್ಲಾ ಎಸ್ ಪಿ ಶ್ರೀ ಚನ್ನ ಬಸಣ್ಣ ಎಸ್ ಎಲ್ ರವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹುಮ್ನಾಬಾದ್ ನಲ್ಲಿ ಈ ಪ್ರಕರಣ ಪತ್ತೆಯಾಗಿದ್ದು ,ಅಪರಾಧ ತಡೆಗೆ ವ್ಯಾಪಕ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದ್ದು ಹೆದ್ದಾರಿಗಳಲ್ಲಿ ಪ್ರತಿಯೊಂದು ಅನುಮಾನಾಸ್ಪದ ವಾಹನಗಳ ತಪಾಸಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಅಪರಾಧ ಸಂಖ್ಯೆ ಬಹುತೇಕ ಇಳಿಮುಖ ಕಂಡುಬರುತ್ತಿದೆ ಎಂದು ಅವರು ತಿಳಿಸಿದರು.
    ಹುಮ್ನಾಬಾದ್ ಮಾರ್ಗದಿಂದ ಹಾದುಹೋಗುವ ಮುಂಬೈಯಿಂದ ಹೈದರಾಬಾದಕ್ಕೆ ಹೋಗುತ್ತಿದ್ದ ಕಾರು ಒಂದರಲ್ಲಿ ಸಿಂಥೆಟಿಕ್ ಮಾದಕ ವಸ್ತು ಕೊಂಡೊಯ್ಯಲಾಗುತ್ತಿದೆ ಎಂದು ಖಚಿತ ಮಾಹಿತಿ ಮೇರೆಗೆ ಆಂಟಿ ನೆರಕೊಟಿಕ್ಸ್ ಕಾರ್ಡ್ ಶಿವಂಶೂ ರಜಪೂತ್ ಎಸ್‌ಪಿ ರವರ ನೇತೃತ್ವದಲ್ಲಿ ರಚಿತಗೊಂಡ ಸ್ಕಾಡ ಹಠಾತನೆ ದಾಳಿ ನಡೆಸಿ 499 ಗ್ರಾಂ ಅಂದಾಜು 49 ಲಕ್ಷ 90,000 ರೂಪಾಯಿ ಮುದ್ದೆಮಾಲು ಹಾಗೂ ಕಾರು ಎರಡು ಮೊಬೈಲ್ ಹೀಗೆ 55 ಲಕ್ಷ 8 500 ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ.

  • ಸಾರ್ವಜನಿಕರ ವಾಹನ ಸಂಚಾರಕ್ಕೆ ತಡೆ ಬೇಡ- ಪೊಲೀಸರಿಗೆ ಸಚಿವರ ಸೂಚನೆ

    ಕಲಬುರಗಿ: ತಾವು ಸಂಚರಿಸುವಾಗ ಸಾರ್ವಜನಿಕರ ವಾಹನ‌ ಸಂಚಾರಕ್ಕೆ ತಡೆ ಮಾಡಬೇಡಿ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ ಶರಣಪ್ರಕಾಶ ಪಾಟೀಲ ಪೊಲೀಸರಿಗೆ ಸೂಚಿಸಿದರು.

    ಕಲಬುರಗಿಯಲ್ಲಿ ಇಂದು ಪೊಲೀಸ್ ಕಮೀಷನರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕುರಿತಂತೆ ಮಾಹಿತಿ ಪಡೆದುಕೊಂಡು ಮಾತನಾಡುತ್ತಿದ್ದ ಸಚಿವರು, ತಮ್ಮ ಬೆಂಗಾವಲು ಪಡೆಯ ಸಂಚಾರಕ್ಕಾಗಿ ಯಾವುದೇ ರೀತಿಯಲ್ಲೂ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಅಡ್ಡಿ ಅಥವಾ ನಿರ್ಬಂಧ ಮಾಡದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

    ಸಚಿವರ ಅಥವಾ ಯಾವುದೇ ಜನಪ್ರತಿನಿಧಿಗಳ ಓಡಾಟ ಸಾರ್ವಜನಿಕರ ಓಡಾಟಕ್ಕೆ ಅನಗತ್ಯ ವಿಳಂಬ ಉಂಟು ಮಾಡುವುದು ಸಮಂಜಸವಲ್ಲ. ಈ ನಿಟ್ಟಿನಲ್ಲಿ ಜೀರೋ ಟ್ರಾಫಿಕ್/ತಡೆ ಮಾಡದಂತೆ ಅಧಿಕಾರಿಗಳಿಗೆ ಹೇಳಿದರು

  • ಕಲಬುರಗಿ ವಿಮಾನ ನಿಲ್ದಾಣ ಜನೋಪಯೋಗಿ ಮಾಡುವಲ್ಲಿ ರಾಜ್ಯ ಸರ್ಕಾರದ ಸಹಕಾರ- ಸಚಿವ ಪ್ರಿಯಾಂಕ್ ಖರ್ಗೆ

    ಕಲಬುರಗಿ :ವಿಮಾನ ನಿಲ್ದಾಣದ ಕಾರ್ಯಾಚರಣೆ ಕುರಿತು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ವಿಮಾನ ನಿಲ್ದಾಣದ ನಿರ್ದೇಶಕರಾದ ಡಾ. ಮಹೇಶ್‌ ಅವರಿಂದ ಮಾಹಿತಿ ಪಡೆದುಕೊಂಡರು.

    ಆ ಸಂದರ್ಭದಲ್ಲಿ ಕೆಲ ಸಮಸ್ಯೆಗಳನ್ನು ನಿರ್ದೇಶಕರು ಸಚಿವರ ಗಮನಕ್ಕೆ ತಂದು, ಮುಖ್ಯವಾಗಿ ವಿಮಾನ ಸೇವೆಗಳ ಸಂಖ್ಯೆಯಲ್ಲಿ ಕಡಿತವಾಗಿದ್ದು, ಇದನ್ನು ಹೆಚ್ಚಿಸುವಂತೆ ಮನವಿ ಮಾಡಿದರು. ಈ ಕುರಿತು ಕೇಂದ್ರ ವಿಮಾನಯಾನ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಸಚಿವರು ತಿಳಿಸಿದರು.

    ಕಲಬುರ್ಗಿ ವಿಮಾನ ನಿಲ್ದಾಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುತ್ತದೆ. ನಿಲ್ದಾಣದ ಕಸ ವಿಲೇವಾರಿ ಸಮಸ್ಯೆ ಉಂಟಾಗುತ್ತಿದ್ದು, ಇದರಿಂದ ನಿಲ್ದಾಣದ ಕಾರ್ಯ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂದು ನಿರ್ದೇಶಕರು ಸಚಿವರ ಗಮನಕ್ಕೆ ತಂದಾಗ ಕೂಡಲೇ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ದೂರವಾಣಿ ಕರೆ ಮಾಡಿ ಕೂಡಲೇ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು.

    ಕಲ್ಯಾಣ ಕರ್ನಾಟಕ ಭಾಗದ ಬಹುಮುಖ್ಯ ಸಂಪರ್ಕ ಕೊಂಡಿಯಾಗಿರುವ ನಮ್ಮ ಕಲಬುರ್ಗಿ ವಿಮಾನ ನಿಲ್ದಾಣದ ಉಪಯುಕ್ತ ಬಳಕೆ ಹೆಚ್ಚಿಸಲು ಹಾಗೂ ಮತ್ತಷ್ಟು ಜನಸ್ನೇಹಿ ಹಾಗೂ ಜನಪಯೋಗಿಯಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮತ್ತು ಜಿಲ್ಲಾಡಳಿತದ ವತಿಯಿಂದ ಆಗಬೇಕಾದ ಎಲ್ಲಾ ಕೆಲಸಗಳಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.

  • ‘ಸರ್ಕಾರದ ದ್ರಾಕ್ಷಿ, ಗೋಡಂಬಿ ತಿನ್ನಲು ಬಂದಿದ್ದೀರಾ?’ : ಅಧಿಕಾರಿಗಳ ವಿರುದ್ದ ಹರಿಹಾಯ್ದ ಖರ್ಗೆ

    ಕಲಬುರಗಿ:-ಕರ್ನಾಟಕ ನಗರ ಕುಡಿಯುವ ನೀರು ಯೋಜನೆಯ ಸೂಪರಿಂಟೆಂಡಿಂಗ್ ಎಂಜಿನಿಯರ್ ಕಾಂತರಾಜ್ ಹಾಗೂ ಎಲ್ ಅಂಡ್ ಟಿ ಕಂಪನಿಯ ಅಧಿಕಾರಿ ಸಂಜಯ್ ಅವರು ಪೈಪ್ ಲೈನ್ ಗಾಗಿ ನೆಲ ಅಗೆದು ಹಾಗೆಯೇ ಬಿಟ್ಟಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ, ಟೆಕ್ಸ್ ಮೊ ಕಂಪನಿಯ ಎಚ್ ಡಿಪಿ ಪೈಪ್ ನ ಸಾಮರ್ಥ್ಯದ ಬಗ್ಗೆ ಮೈಸೂರಿನ ಸಿಪೆಟ್ ಸಂಸ್ಥೆಯು ವರದಿ ನೀಡಿದ್ದು, ಉತ್ತಮ ಗುಣಮಟ್ಟ ಹೊಂದಿಲ್ಲ ಎಂದಿದೆ. ಆದರೂ ಅದೇ ಕಂಪನಿಯ ಪೈಪ್ ಅಳವಡಿಸಿದ್ದೇಕೆ ? ಈ ಕುರಿತಾದ ಸೆಪೆಟ್ ವರದಿಗಳು ನಿಮ್ಮ ಬಳಿ ಇವೆಯಾ? ಎಂದು ಪ್ರಶ್ನಿಸಿದರು.

    ಆಗ ಸರಿಯಾದ ಉತ್ತರ ನೀಡಲು ಹಾಗೂ ದಾಖಲೆ ಒದಗಿಸಲು ವಿಫಲವಾದ ಅಧಿಕಾರಿಗಳ ವಿರುದ್ದ ಹರಿಹಾಯ್ದ ಖರ್ಗೆ, ಯೋಜನೆ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಸುಮ್ಮನೇ ಸರ್ಕಾರಿ ದ್ರಾಕ್ಷಿ ಗೋಡಂಬಿ ತಿಂದು ಹೋಗಲು ಬಂದಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು.

    ಮುಂದುವರೆದು ಮಾತನಾಡಿದ ಅವರು ಎಲ್ಲಿ ಬೇಕೆಂದರಲ್ಲಿ ನೆಲವನ್ನು ಅಗೆದು ಅದನ್ನು ಮುಚ್ಚಿ‌ ಮರಳಿ ಡಾಂಬರೀಕರಣ ಮಾಡಿಲ್ಲ. ಜನರಿಗೆ ತೊಂದರೆಯಾಗುತ್ತಿರುವುದು ನೀವೆಲ್ಲ ಗಮನಿಸಿಲ್ಲವೇ? ಎಂದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂತರಾಜ, ಹೈಡ್ರೊ ಟೆಸ್ಟಿಂಗ್ ಮಾಡುತ್ತಿರುವುದರಿಂದ ಅಗೆದ ನೆಲ ಮುಚ್ಚಿಲ್ಲ ಎಂದರು.

    ಆಗ ಮಧ್ಯೆ ಪ್ರವೇಶ ಮಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ ಮಾತನಾಡಿ 120 ಕಿ.ಮೀ. ಪೈಪ್ ಲೈನ್ ಅಳವಡಿಸಿದರೂ ಕೇವಲ 2 ಕಿ.ಮೀ. ಮಾತ್ರ ಹೈಡ್ರೊ ಟೆಸ್ಟಿಂಗ್ ಆಗಿದೆ ಎಂದರೆ ಹೇಗೆ? ಟೆಸ್ಟಿಂಗ್ ಆಗದೇ ಅಷ್ಟು ಉದ್ದದವರೆಗೆ ಪೈಪ್ ಹಾಕಲು ಅನುಮತಿ ಏಕೆ ಕೊಟ್ಟಿರಿ ? ಸಾರ್ವಜನಿಕರ ಸಮಸ್ಯೆ ನಿವಾರಿಸಲು ಎಲ್ & ಟಿ ಸ್ಪಂದನಾ ತಂಡ ರಚಿಸಬೇಕು. ಪ್ರಸ್ತುತ ಮಳೆಗಾಲ ಇರುವುದರಿಂದ ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಳ್ಳಬೇಕು. ಕಾಮಗಾರಿ ಪ್ರಗತಿ ಕುರಿತು ಸ್ಥಳೀಯ ಶಾಸಕರೊಂದಿಗೆ ಹಂಚಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    700 ಕಾರ್ಮಿಕರ ಬದಲಾಗಿ 300 ಕಾರ್ಮಿಕರಿಂದ ಕುಡಿಯುವ‌ ನೀರು ಕಾಮಗಾರಿ ನಿರ್ವಹಿಸುತ್ತಿರುವುದರಿಂದ ಕಾಮಗಾರಿ ಆಮೆ ಗತಿ ಸಾಗುತ್ತಿದೆ. ಕಾಮಗಾರಿಯು ನಿಧಾನಗತಿಗೆ ಕಾರಣ ಕೇಳಿ ಕೂಡಲೆ ಎಲ್‌ & ಟಿ ಕಂಪನಿಗೆ ನೋಟಿಸ್ ನೀಡುವಂತೆ
    ಮಹಾನಗರ ಪಾಲಿಕೆ ಆಯುಕ್ತ‌ ಭುವನೇಶ ಪಾಟೀಲ ಅವರಿಗೆ ಸೂಚಿಸಿದ‌ ಸಚಿವ ಪ್ರಿಯಾಂಕ್ ಖರ್ಗೆ ಕಾಮಗಾರಿ ವೇಗ ಪಡೆದುಕೊಳ್ಳದಿದ್ದಲ್ಲಿ ಎಲ್ & ಟಿ ಕಂಪನಿಂದ ಗುತ್ತಿಗೆ ಹಿಂಪಡೆದು ಬೇರೆಯವರಿಗೆ ನೀಡಲು‌ ಸಚಿವ‌ ಸಂಪುಟ‌ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದರು.

    ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ, ಕಮೀಷನರ್ ಭುವನೇಶ ಪಾಟೀಲ ಕುರಿತು, ನೀವು ಕಮಿಷನರ್ ಇದ್ದೀರಾ? ಅಧಿಕಾರಿಗಳು ಯಾಕೆ ಕೆಲಸ ಮಾಡುತ್ತಿಲ್ಲ ಗೊತ್ತಿಲ್ಲ ಎಂದರೆ ಹೇಗೆ ? ನಿಮಗೆ ಸರ್ಕಾರ ಎಲ್ಲ ಸವಲತ್ತು ನೀಡಿದೆ. ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಯಾರು‌ ಸರಿಯಾಗಿ ಕೆಲಸ ಮಾಡುವುದಿಲ್ಲ ಅಂತವರ ವಿರುದ್ದ‌ ಕ್ರಮ ಕೈಗೊಳ್ಳಿ. ಕಷ್ಟಪಟ್ಟು ವಿಶ್ವಬ್ಯಾಂಕ್ ನಿಂದ ಸಾಲ ತಂದರೆ ಸಮರ್ಪಕ ಕುಡಿಯುವ ನೀರಿನ ಯೋಜನೆ ಜಾರಿ ಮಾಡದಿದ್ದರೆ ಹೇಗೆ? ಎಂದು ಪ್ರಶ್ನಿಸಿದರು

    ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ‌ ಪಂಚಾಯತ್ ಸಿ.ಇ.ಓ ಭಂವಾರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ಎಂ.ರಾಚಪ್ಪ ಸೇರಿದಂತೆ‌ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

    ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಈಓ ಭಂವಾರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಚಪ್ಪ, ಮಹಾನಗರ ಪಾಲಿಕೆ‌ ಕಮೀಷನರ್ ಭುವನೇಶ್ ಪಾಟೀಲ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

  • ಅಪ್ರಾಪ್ತ ಬಾಲಕಿಯ ಮೇಲೆ ಬಲತ್ಕಾರ : ಆರೋಪಿಗಳು ಫರಾರಿ

    ಕಲಬುರಗಿ :—- ವಿದ್ಯಾನಗರ ಬಡಾವಣೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಬಲತ್ಕಾರ ಎಸಗಿ ಪರಾರಿಯಾದ ಮೂವರು ಬಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅವರ ಪತ್ತೆಗಾಗಿ ಪೊಲೀಸರು ತೀವ್ರಗತಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

    ದಿನಾಂಕ 05-07-2023 ರಂದು ನಗರದ ದಟ್ಟ ಜನಸಂದಣಿ ಇರುವ ವಿದ್ಯಾನಗರ ಬಡಾವಣೆಯಲ್ಲಿ ಹಾಡು ಹಗಲೇ ಬಾಲಕಿ ಯೋರ್ವಳನ್ನು ಹತ್ತು ರೂಪಾಯಿ ಕೊಡುವ ಹಾಗೂ ಚಾಕಲೇಟ್ ನೀಡುವ ಆಮೀಷ ಒಡ್ಡಿಅವಳನ್ನುರೂಮವೊಂದಕ್ಕೆ ಕರೆದುಕೊಂಡು ಹೋಗಿ ಬಲತ್ಕಾರ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಈ ವಿಷಯ ತಾಯಿ ತಂದೆ ಗಮನಕ್ಕೆ ತಂದಳು. ವಿಷಯ ಅರಿತು ತಂದೆ ಕಲಬುರ್ಗಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು. ದೂರು ದಾಖಲಿಸ ಕೊಂಡ ಪಿಎಸ್ಐ ಬಾಲಕಿಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆಗೊಳಪಡಿಸಲಾಗಿದೆ. ಫರಾರಿಯಾದ ಆರೋಪಿತರನ್ನು ತೀವ್ರಗತಿಯಲ್ಲಿ ಬಂಧಿಸಲು ಪೊಲೀಸರು ವ್ಯಾಪಕ ಜಾಲ ಬೀಸಿದ್ದಾರೆ.

  • ಸಂಚಾರಿ.ಪೊ.ಠಾ- ಪೇದೆಯ ಆತ್ಮಹತ್ಯೆಗೆ ಯತ್ನ

    ಕಲಬುರಗಿ, ಪೋಲಿಸ್ ಮೇಲಾಧಿಕಾರಿ ಕಿರುಕುಳದಿಂದ ಸಂಚಾರಿ.ಪೊ.ಠಾಯ ಚಂದ್ರಕಾಂತ ಎಂಬ ಪೊಲೀಸ್ ಪೊಲೀಸ್ ಪೇದೆಯು ಇಂದು ಆತ್ಮಹತ್ಯೆಗೆತ್ನಿಸಿದ್ದಾನೆ.
    ಮೇಲಾಧಿಕಾರಿ ಅವರ ಕಿರುಕುಳದಿಂದ ಇಂದು ಬೆಳಗ್ಗೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ