ಬೆಂಗಳೂರು, ಸೆ.7- ಸುಗಮ ಸಂಗೀತ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾಗಿರುವ ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿಯು 2023 ನೇ ಸಾಲಿನ ರಾಜ್ಯಮಟ್ಟದ ಪ್ರತಿಷ್ಠಿತ `ಕನ್ನಡ ನಿತ್ಯೋತ್ಸವ ಪ್ರಶಸ್ತಿ’ಯನ್ನು ಪ್ರಕಟಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಕಲಬುರಗಿಯ ಕವಿ, ಲೇಖಕರಾದ ಮಹಿಪಾಲರೆಡ್ಡಿ ಮುನ್ನೂರ್, ಖ್ಯಾತ ಗಾಯಕಿ ಶಶಿಕಲಾ ಸುನೀಲ್, ಪ್ರತಿಷ್ಠಿತ ಸಂಸ್ಥೆ ವೀಣಾ ಮ್ಯೂಸಿಕಲ್‌ನ ಮಾಲೀಕರಾದ ಪಿ.ನಾಗರಾಜ್, ಕನ್ನಡ ಕಾರ್ಯಕರ್ತ, ಸಂಘಟಕ ಜಾವಗಲ್ ಪ್ರಸನ್ನಕುಮಾರ, ರಂಗಕರ್ಮಿ, ನಟ ಬೆಳ್ಳಿಚುಕ್ಕಿ ವೀರೇಂದ್ರ ಅವರುಗಳಿಗೆ ಕನ್ನಡ ನಿತ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಉದಯಭಾನು ಕಲಾ ಸಂಘದಲ್ಲಿ ಸೆ.10 ರಂದು ಸಂಜೆ 6 ಕ್ಕೆ ಆಯೋಜಿಸಲಾಗಿದೆ. ಮಾಜಿ ವಿಧಾನಸಭಾಧ್ಯಕ್ಷರಾದ ಪ್ರೊ.ಬಿ.ಕೆ.ಚಂದ್ರಶೇಖರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಅಕಾಡೆಮಿ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸುವರು. ಬಸವನಗುಡಿ ಶಾಸಕರಾದದ ಎಲ್.ಎ.ರವಿ ಸುಬ್ರಮಣ್ಯ ಅವರು ಪ್ರಶಸ್ತಿ ಪ್ರದಾನ ಮಾಡುವರು. ಹಿರಿಯ ಸಾಹಿತಿ ಮತ್ತು ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಭೈರಮಂಗಲ ರಾಮೇಗೌಡ ಅವರು ಸಮಾರೋಪ ನುಡಿಗಳಾಡುವರು. ನಾಡಿನ ಖ್ಯಾತ ಕಲಾವಿದರಿಂದ ಸುಗಮ ಸಂಗೀತ ಗಾಯನ, ಹೆಚ್.ಬಿ.ಜಯರಾಂ, ರಾಘವೇಂದ್ರ ಜೋಶಿ, ಜೈಕುಮಾರ ತಂಡದವರಿಂದ ವಾದ್ಯ ವೈಭವ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
Author: Satyakam NewsDesk
-

ಮಹಿಪಾಲರೆಡ್ಡಿ ಸೇರಿ ಐವರಿಗೆ `ಕನ್ನಡ ನಿತ್ಯೋತ್ಸವ’ ಪ್ರಶಸ್ತಿ
-
12 ಜನ ಸಾಧಕರಿಗೆ” ಸಾಹಿತ್ಯ ಸಾರಥಿ” ಪ್ರಶಸ್ತಿ

ಕಲಬುರಗಿ : ಸಾಹಿತ್ಯ ಸಾರಥಿ ರಾಜ್ಯಮಟ್ಟದ ಸಾಹಿತಿಕ ಪತ್ರಿಕೆಯ 6ನೇ ವರ್ಷದ ಸಂಭ್ರಮದ ಪ್ರಯುಕ್ತ 12 ಜನ ಸಾಧಕರನ್ನು ಸಾಹಿತ್ಯ ಸಾರಥಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಹಾಗೂ ಸಾಹಿತಿ ಬಿ.ಎಚ್ .ನಿರಗುಡಿ ತಿಳಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು
“ಸಾಹಿತ್ಯಕ್ಷೇತ್ರ ಡಾ. ಲಕ್ಷ್ಮಣ ಕೌಂಟೆ, ಡಾ. ವಿಕ್ರಮ್ ವಿಸಾಜಿ, ಡಾ ಅಮೃತಾ ಕಟಕೆ
” ಮಾಧ್ಯಮ ಕ್ಷೇತ್ರ ” ಶ್ರೀ ಸ, ದಾ, ಜೋಶಿ ಶ್ರೀ,ಸುಭಾಸ ಬಣಗಾರ,ಶ್ರೀ ಪ್ರಭುಲಿಂಗ ನೀಲೂರೆ, ವಿಜ್ಞಾನ ಕ್ಷೇತ್ರ ಡಾ ಶ್ರೀಶೈಲ ಘೂಳಿ, ವೈದ್ಯಕೀಯ ಕ್ಷೇತ್ರ ಡಾ ಈರಣ್ಣಾ ಹೀರಾಪೂರ, ಶಿಕ್ಷಣ ಕ್ಷೇತ್ರ ಶ್ರೀ ಶಿವಾನಂದ ಖಜೂರಗಿ ,ನಾಟಕ ಕ್ಷೇತ್ರ ಬಸಯ್ಯಸ್ವಾಮಿ ಪ್ಯಾಠಿಮಠ, ಚಿತ್ರಕಲಾ ಕ್ಷೇತ್ರ ಶಾಹೀದ್ ಪಾಶಾ ಸಮಾಜಸೇವೆ ಉಮಾ ಪಾಟೀಲ ಮುಂತಾದವರ ಸಮಗ್ರ ಸಾಧನೆಯನ್ನು ಪರಿಗಣಿಸಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
2023 ಸೆಪ್ಟೆಂಬರ್ 3 ರಂದು ಕಲಬುರಗಿ ನಗರದ ಚೇಂಬರ್ ಆಪ್ ಕಾಮರ್ಸ್
ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗುವುದು. ಎಂದು ತಿಳಿಸಿದ್ದಾರೆ. -

ಜುಜಾಟದ ಅಡ್ಡೆಮೇಲೆ ದಾಳಿ ಬೃಹತ್ ಪ್ರಮಾಣದ ಮೊತ್ತ ವಶ !

ಹುಮ್ನಾಬಾದ :— ಬೀದರ್ ಜಿಲ್ಲಾ ಎಸ್ ಪಿ ಶ್ರೀ ಚನ್ನಬಸಣ್ಣ ಎಸ್ ಎಲ್ ರವರ ದಿವ್ಯ ಮಾರ್ಗದರ್ಶನದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಐತಿಹಾಸಿಕ ಗ್ರಾಮ ಜಲಸಂಗಿ ಯಲ್ಲಿ ಮಹಾದೇವ ಮಂದಿರದ ಸಮ್ಮುಖದಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಜೂಜಾಟ ನಡೆದಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹುಮನಾಬಾದ್ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ಪಿಎಸ್ಐ ಶ್ರೀ ತಿಮ್ಮಯ್ಯ ಬಿಕೆ ಸಿಬ್ಬಂದಿಗಳಾದ ಭಗವಾನ್ ಪ್ರಭುಲಿಂಗ ಸ್ವಾಮಿ ಬಸವರಾಜ್ ಬಾಲಾಜಿ ಸೂರ್ಯಕಾಂತ ಆಕಾಶ್ ವಜೀರ್ ಬಾಬುರಾವ್ ಕೋರೆ ಆಕಾಶ್ ರವರೊಂದಿಗೆ ಗ್ರಾಮಕ್ಕೆ ತೆರಳಿ ಜೂಜುಗಾರರ ಮೇಲೆ ದಾಳಿ ನಡೆಸಿ ಅವರಿಂದ 1,50,000 ರೂಪಾಯಿಗಳನ್ನು,ಅವರು ಬಳಸಿದ್ದ 52 ಇಷ್ಟು ಎಲೆಗಳು ಹಾಗೂ ಆರು ಮೊಬೈಲ್ ಐದು ದ್ವಿಚಕ್ರ ವಾಹನ ಸೇರಿ 4,15,000 ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡು 15 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳಿಂದ ವರದಿಯಾಗಿದೆ. -

ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಾದಂಬರಿ ಪುರಸ್ಕಾರ 2023′

ಬೆಂಗಳೂರು:ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಾದಂಬರಿ ಪುರಸ್ಕಾರ 2023′ ರ ಅಂತಿಮ ಸುತ್ತನ್ನು ಪ್ರವೇಶಿಸಿದ 5 ಅತ್ಯುತ್ತಮ ಕಾದಂಬರಿಗಳ ಪಟ್ಟಿ ಹಾಗೂ ಕನ್ನಡ ಕಥಾಲೋಕ ಕುತೂಹಲದಿಂದ ಕಾಯುತ್ತಿದ್ದ ‘ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ- 2023’ಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ 25 ಕಥೆಗಾರರ ಪಟ್ಟಿ ಪ್ರಕಟವಾಗಿದೆ.ಅಂತಿಮ ಸುತ್ತಿನಲ್ಲಿರುವ ಕಾದಂಬರಿಗಳು:
ಡಾ.ಎಚ್.ಎಸ್. ಅನುಪಮಾ ಅವರ ‘ಬೆಳಗಿನೊಳಗು ಮಹಾದೇವಿಯಕ್ಕ’ (ಲಡಾಯಿ ಪ್ರಕಾಶನ)
ಉಷಾ ನರಸಿಂಹನ್ ಅವರ ‘ಕೆಂಡದ ರೊಟ್ಟಿ’ (ಅಂಕಿತ ಪುಸ್ತಕ)
ಕಾ.ತ. ಚಿಕ್ಕಣ್ಣ ಅವರ ‘ಪುರಾಣ ಕನ್ಯೆ’ (ರಶ್ಮಿ ಪುಸ್ತಕ)
ಪೂರ್ಣಿಮಾ ಮಾಳಗಿಮನಿ ಅವರ ‘ಅಗಮ್ಯ’ (ಸಪ್ನ ಬುಕ್ ಹೌಸ್)
ಎಂ.ಆರ್. ದತ್ತಾತ್ರಿ ಅವರ ‘ಒಂದೊಂದು ತಲೆಗೂ ಒಂದೊಂದು ಬೆಲೆ’ (ಅಂಕಿತ ಪುಸ್ತಕ)ಈ ಐದು ಕಾದಂಬರಿಗಳಲ್ಲಿ ಒಂದು ಅತ್ಯುತ್ತಮ ಕಾದಂಬರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತಿದೆ. ಈ ಒಂದು ಲಕ್ಷದಲ್ಲಿ 75 ಸಾವಿರ ರೂ. ಲೇಖಕರಿಗೆ ಹಾಗೂ 25 ಸಾವಿರ ರೂ. ಪ್ರಕಾಶಕರಿಗೆ ವಿತರಿಸಲಾಗುತ್ತಿದೆ. ಮೆಚ್ಚುಗೆ ಪಡೆಯುವ ನಾಲ್ಕು ಕಾದಂಬರಿಗಳಿಗೆ ತಲಾ 5 ಸಾವಿರ ರೂ. ಬಹುಮಾನ ನೀಡಲಾಗುತ್ತಿದ್ದು, ಈ ಪೈಕಿ 3 ಸಾವಿರ ರೂ. ಲೇಖಕರಿಗೆ ಹಾಗೂ 2 ಸಾವಿರ ರೂ. ಪ್ರಕಾಶಕರಿಗೆ ನೀಡಲಾಗುತ್ತದೆ.
ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ- 2023’ರ ಅಂತಿಮ ಸುತ್ತಿನಲ್ಲಿರುವ 25 ಕಥೆಗಾರರು:
ದೀಪ್ತಿ ಭದ್ರಾವತಿ
ಜಯರಾಮಚಾರಿಮಾಧವಿ ಭಂಡಾರಿ ಕೆರೆಕೋಣ
ಪ್ರವೀಣ್ ಕುಮಾರ್ ಜಿ.
ಲಕ್ಷ್ಮಣ ಬಾದಾಮಿ
ಸ್ಮಿತಾ ಅಮೃತರಾಜ್. ಸಂಪಾಜೆ
ಗಿರೀಶ್ ಎಂ.ಬಿ
ಇಂದ್ರಕುಮಾರ್ ಎಚ್.ಬಿ
ಕವಿತ ಹೆಗಡೆ ಅಭಯಂ
ಮಂಜುನಾಥ್ ಚಾಂದ್
ಸಂದೀಪ ನಾಯಕ
ಪೂರ್ಣಿಮಾ ಭಟ್ಟ ಸಣ್ಣಕೇರಿ
ಶರತ್ ಭಟ್ ಸೇರಾಜೆ
ಸುರೇಶ ರುದ್ರಪ್ಪ ಮುದ್ದಾರ
ಮಂಜುನಾಥ ನಾಯ್ಕ್
ಶಿವಾಗ್
ಮಹಾದೇವ ಹಡಪದ ಸಾಲಾಪೂರ
ವಿಜಯಶ್ರೀ ಎಂ. ಹಾಲಾಡಿ
ಪೂರ್ಣಿಮಾ ಮಾಳಗಿಮನಿ
ಸದಾಶಿವ್ ಸೊರಟೂರು
ಕರುಣಾಕರ ಹಬ್ಬುಮನೆ
ಎನ್.ಸಿ. ಮಹೇಶ್
ಜೆ.ಆರ್. ರವಿಕುಮಾರ್ ಜನಿವಾರ
ಅಕ್ಷಯ ಪಂಡಿತ್, ಸಾಗರ
ವಿಕಾಸ್ ನೇಗಿಲೋಣಿಈ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಕಥೆಗೆ 50 ಸಾವಿರ ರೂಪಾಯಿ ನಗದು ಬಹುಮಾನ ಇರಲಿದೆ. ದ್ವೀತಿಯ ಸ್ಥಾನ ಪಡೆಯುವ ಕಥೆಗೆ 25 ಸಾವಿರ ರೂಪಾಯಿ, ತೃತೀಯ ಸ್ಥಾನಕ್ಕೆ 15 ಸಾವಿರ ರೂಪಾಯಿ ನಗದು ಬಹುಮಾನ ಇರಲಿದೆ. ಉಳಿದಂತೆ ಐದು ಕಥೆಗಳಿಗೆ ತಲಾ 5 ಸಾವಿರ ನಗದನ್ನು ಒಳಗೊಂಡ ಸಮಾಧಾನಕರ ಬಹುಮಾನ ಹಾಗೂ ಅಂತಿಮ ಸುತ್ತಿಗೆ ಆಯ್ಕೆಯಾಗುವ ಉಳಿದ17 ಕಥೆಗಳಿಗೆ ತಲಾ ಎರಡು ಸಾವಿರ ರೂಪಾಯಿ ನೀಡಲಾಗುತ್ತದೆ. ಆಯ್ಕೆಯಾದ ಈ 25 ಕಥೆಗಳನ್ನು ಒಳಗೊಂಡ ಪುಸ್ತಕ ಪ್ರಕಟಿಸಲಾಗುತ್ತದೆ.
ಆಗಸ್ಟ್ 15, 2023 ರಂದು ಬೆಂಗಳೂರಿನ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ನಡೆಯಲಿರುವ ಪ್ರಶಸ್ತಿ ವಿತರಣಾ ಸಮಾರಂಭದ ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರನ್ನು ಪ್ರಕಟಿಸಲಾಗುತ್ತದೆ.
-

ಕಮಲಾನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಡೆಂಗ್ಯೂ ಜನ ಜಾಗೃತಿ ಕಾರ್ಯಕ್ರಮ

ಕಮಲಾನಗರ-
ಇಂದು ಆಳಂದ ತಾಲೂಕಿನ ಕಮಲಾನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಡೆಂಗ್ಯೂ ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಿಲ್ಲಾ ಕೀಟ ಶಾಸ್ತ್ರಜ್ಞ ಚಾಮರಾಜ ದೊಡಮನಿ ಮಾತನಾಡಿ ಡೆಂಗ್ಯ ಮತ್ತು ಚಿಕೂನ್ ಗುನ್ಯಾ ರೋಗಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ರೋಗ ಬಂದ ಮೇಲೆ ಆಸ್ಪತ್ರೆಗಳಿಗೆ ಪರದಾಡುವುದಕ್ಕಿಂತ ರೋಗದ ಕುರಿತು ತಿಳಿದುಕೊಂಡು ನಮ್ಮ ಮನೆ ಒಳಗೆ ಹೊರಗೆ ಸುತ್ತ ಮುತ್ತ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವುದರ ಮೂಲಕ ರೋಗ ಬರದಂತೆ ನಾವು ನಮ್ಮನ್ನು ಸಂರಕ್ಷಿಸಿಕೊಳ್ಳ ಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡುವುದರು.ಹಾಗೂ ಸೊಳ್ಳೆಗಳಿಂದ ಸಂರಕಗಷಣೆ ಮಾಡಿಕೊಳ್ಳುವ ಸರಳ ವಿಧಾನಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟರು.
ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಹಾಸ್ಯ ಕಲಾವಿದರಾದ ಗುಂಡಣ್ಣ ಡಿಗ್ಗಿ ತಮ್ಮ ಹಾಸ್ಯಚಟಾಕೆಗಳನ್ನು ಹಾರಿಸುವುದರ ಜೊತೆಗೆ ಮಕ್ಕಳಿಗೆ ಸಾಮಾನ್ಯದ ಆರೋಗ್ಯದ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಮೇಲ್ವಿಚಾರಕರಾದ ಸಂಜೀವ ಅರಳೆ,ಶಫಿ ಪಟೇಲ್,ಆರೋಗ್ಯ ಅಧಿಕಾರಿ ಅಮಿತಕುಮಾರ,ಆರೋಗ್ಯ ಸುರಕ್ಷತಾ ಅಧಿಕಾರಿ ಸುನಿತಾ ಶಿಕ್ಷಕರಾದ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶೈಲಾ , ವಹಿಸಿಕೊಂಡಿದ್ದರು.ಶಿಕ್ಷಕರಾದ ಮಡಿವಾಳಪ್ಪ. ಬಿರಾದಾರ,ಜೈಪ್ರಕಾಶ ಸ್ವಾಗತಿಸಿ ನಿರೂಪಣೆ ಮಾಡಿದರು. -

ಆಧಾರ್ ಗೆ ಮೊಬೈಲ್ ಲಿಂಕ್ ಮಾಡಲು ಡಿ.ಸಿ. ಸೂಚನೆ

ಕಲಬುರಗಿ,ಆ.2- ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ 30,05,090 ಜನರು ಆಧಾರ್ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 7,74,644 ಜನರ ಆಧಾರ್ ಗೆ ಮೋಬೈಲ್ ಲಿಂಕ್ ಮಾಡಿಲ್ಲ. ಸರ್ಕಾರದ ಹಲವಾರು ಯೋಜನೆಗಳು ಆಧಾರ್, ಡಿ.ಬಿ.ಟಿ ಮೂಲಕ ಜಾರಿಗೆ ತರಲಾಗುತ್ತಿರುವುದರಿಂದ ಆಧಾರ್ ಗೆ ಮೋಬೈಲ್ ಲಿಂಕ್ ಅನಿವಾರ್ಯವಾಗಿದೆ. ಆಧಾರ್ ಗೆ ಇದೂವರೆಗೆ ಮೋಬೈಲ್ ಲಿಂಕ್ ಮಾಡಿಸದವರು ಕೂಡಲೇ ಲಿಂಕ್ ಮಾಡಿಸುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಮಂಗಳವಾರ ತಮ್ಮ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಆಧಾರ್ ನೋಂದಣಿ ಮೇಲುಸ್ತುವಾರಿ ಸಮಿತಿ ಸಭೆ ನಡೆಸಿ ಅವರು ಮಾತನಾಡಿದ್ದರು.
ಇದಲ್ಲದೆ 5 ವರ್ಷ ಮತ್ತು ಮೇಲ್ಪಟ್ಟ 1,66,849 ಜನರು ಮತ್ತು 15 ವರ್ಷ ಮತ್ತು ಮೇಲ್ಪಟ್ಟ 6,03,331 ಜನರ ಆಧಾರ್ ಕಾರ್ಡ್ ಗೆ ಬಯೋಮೆಟ್ರಿಕ್ ಅಪ್ಲೋಡ್ ಆಗಿಲ್ಲ. ಕೂಡಲೆ ಇವರೆಲ್ಲರು ಬಯೋಮೆಟ್ರಿಕ್ ನೀಡಬೇಕು. ಅದೇ ರೀತಿ 9,80,037 ಜನರು ಗುರುತಿನ ಚೀಟಿ ಮತ್ತು ವಾಸಸ್ಥಳ ಕುರಿತು ಡಾಕೂಮೆಂಟ್ ಅಪಲೋಡ್ ಮಾಡಬೇಕಿದೆ ಎಂದರು.
*199 ಆಧಾರ್ ನೋಂದಣಿ ಕೇಂದ್ರಗಳು:*
ಕಲಬುರಗಿ-40, ಅಫಜಲಪೂರ-38, ಆಳಂದ-29, ಚಿಂಚೋಳಿ-19, ಚಿತ್ತಾಪೂರ-29, ಜೇವರ್ಗಿ-18 ಹಾಗೂ ಸೇಡಂ-26 ಸೇರಿದಂತೆ ಜಿಲ್ಲೆಯಾದ್ಯಂತ 199 ಆಧಾರ್ ನೋಂದಣಿ ಕೆಂದ್ರಗಳನ್ನು ತೆರಯಲಾಗಿದೆ. ಬಿ.ಎಸ್.ಎನ್.ಎಲ್, ಬ್ಯಾಂಕ್, ಅಂಚೆ ಕಚೇರಿ, ನಾಡ ತಹಶೀಲ ಕಚೇರಿ, ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಗಳು ಆಧಾರ್ ನೋಂದಣಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಸಮೀಪದ ಕೇಂದ್ರಕ್ಕೆ ಹೋಗಿ ಡಾಕೂಮೆಂಟ್, ಬಯೋಮೆಟ್ರಿಕ್ ಅಪಲೋಡ್ ಮತ್ತು ಮೋಬೈಲ್ ಲಿಂಕ್ ಮಾಡಿಸಬಹುದಾಗಿದೆ ಎಂದು ಡಿ.ಸಿ. ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಬೆಂಗಳೂರು ಪ್ರಾದೇಶಿಕ ಕಚೇರಿಯ ಯೋಜನಾ ವ್ಯವಸ್ಥಾಪಕ ವಿಜಯ, ಜಿಲ್ಲಾ ಆಧಾರ್ ಕನ್ಸಲಟೆಂಟ್ ಆನಂದ ಗಢಾಳೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.
-

ಮಳೆಯಿಂದ 283 ಮನೆಗಳು ಭಾಗಶಃ ಹಾನಿ -ಡಿ.ಸಿ. ಬಿ.ಫೌಜಿಯಾ ತರನ್ನುಮ್

ಕಲಬುರಗಿ-ಕಳೆದ ಜೂನ್ 1 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ 283 ಮನೆಗಳು ಭಾಗಶ: ಹಾನಿಗೊಂಡಿದ್ದು, ಹಾನಿಯಾದ ಮನೆಗಳ ಕುರಿತು ಜಂಟಿ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
ಇದಲ್ಲದೇ 20 ಕಿ.ಮೀ. ರಾಜ್ಯ ಹೆದ್ದಾರಿ, 27.50 ಕಿ.ಮೀ. ಜಿಲ್ಲಾ ಹೆದ್ದಾರಿ, 100 ಕಿ.ಮೀ. ಗ್ರಾಮೀಣ ರಸ್ತೆಗಳು ಸೇರಿದಂತೆ ಒಟ್ಟು 147.50 ಕಿ.ಮೀ. ರಸ್ತೆ, 84 ಸೇತುವೆಗಳು, 89 ಶಾಲಾ ಕೊಠಡಿಗಳು ಹಾಗೂ 38 ಅಂಗನವಾಡಿ ಕೇಂದ್ರಗಳು ಸಹ ಹಾನಿಗೊಳಗಾಗಿವೆ ಎಂದು ಅವರು ತಿಳಿಸಿದ್ದಾರೆ.
ತೀವ್ರ ಮಳೆಯಿಂದ ಜಿಲ್ಲೆಯಾದ್ಯಂತ 281 ವಿದ್ಯುತ್ ಕಂಬ್‌ಗಳು, 35 ಟ್ರಾನ್ಸ್ಫಾರ್ಮರ್‌ಗಳು ಹಾನಿಗೊಂಡಿದ್ದು, ಈ ಪೈಕಿ ಕ್ರಮವಾಗಿ 203 ವಿದ್ಯುತ್ ಕಂಬಗಳು ಮತ್ತು 31 ಟ್ರಾನ್ಸ್ಫಾರ್ಮರ್‌ಗಳನ್ನು ದುರಸ್ತಿಗೊಳಿಸಿ ವಿದ್ಯುತ್ ಪ್ರಸರಣಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇನ್ನೂ ಜಿಲ್ಲೆಯಾದ್ಯಂತ ಮಳೆಯಿಂದ ಯಾವುದೇ ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಯಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿನ ಮಳೆಯ ಪರಿಸ್ಥಿತಿ ಕುರಿತು ಈಗಾಗಲೇ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ್ದು, ಅವರು ಅಗತ್ಯ ಸಲಹೆ ಸೂಚನೆ ನೀಡಿದ್ದು, ಅದನ್ನು ಪಾಲಿಸಲಾಗುತ್ತಿದೆ ಎಂದಿದ್ದಾರೆ.
*5 ಲಕ್ಷ ರೂ. ಪರಿಹಾರ ವಿತರಣೆ:*
ಕಳೆದ ಜುಲೈ 24 ರಂದು ಜೇವರ್ಗಿ ತಾಲೂಕಿನ ಬಿರಾಳ (ಬಿ) ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿತ ಪರಿಣಾಮ ಗ್ರಾಮದ 38 ವರ್ಷದ ಬಸಮ್ಮ ಗಂಡ ಬಸವರಾಜ ಬಳಗಾರ ಅವರು ಮೃತಪಟ್ಟಿದ್ದು, ಮೃತರ ವಾರಸುದಾರರಿಗೆ ಸರ್ಕಾರದ ಮಾರ್ಗಸೂಚಿಯಂತೆ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಲಾಗಿದೆ. ಇನ್ನು ಜಿಲ್ಲೆಯಾದ್ಯಂತ ಯಾವುದೇ ಜಾನುವಾರುಗಳ ಪ್ರಾಣ ಹಾನಿ ಕುರಿತು ವರದಿಯಾಗಿಲ್ಲ ಎಂದು ಡಿ.ಸಿ. ಬಿ. ಫೌಜಿಯಾ ತರನ್ನುಮ್ ಅವರು ಸ್ಪಷ್ಟಪಡಿಸಿದ್ದಾರೆ.
*ಸಹಾಯವಾಣಿ ಸ್ಥಾಪನೆ:*
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ಭಾರಿ ಮಳೆಯಿಂದ ಸಾರ್ವಜನಿಕರಿಗೆ ಏನಾದರೂ ತೊಂದರೆಯಾದಲ್ಲಿ ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರದ ಸಹಾಯವಾಣಿ ಸಂಖ್ಯೆ 08472-278677, ಟೋಲ್ ಫ್ರೀ ಸಂಖ್ಯೆ 1077ಗೆ ಸಂಪರ್ಕಿಸಲು ಕೋರಿದೆ.
ಇದಲ್ಲದೇ ತಾಲೂಕು ಹಂತದಲ್ಲಿ ಅಫಜಲಪುರ 08470-282020, ಆಳಂದ-08477-202428, ಚಿಂಚೋಳಿ-8475200113, ಚಿತ್ತಾಪುರ-08474-236250, ಜೇವರ್ಗಿ 08442-236024, ಕಲಬುರಗಿ-08472-278657/ 278636, ಕಾಳಗಿ 9741680444, ಕಮಲಾಪುರ-7411843393, ಸೇಡಂ 08441-276184, ಶಹಾಬಾದ-08477-202428 ಹಾಗೂ ಯಡ್ರಾಮಿ 8147003348ಗೆ ಸಂಪರ್ಕಿಸಬಹುದಾಗಿದೆ.
-

26 ರಂದು ಶಾಲಾ, ಅಂಗನವಾಡಿ ಕೇಂದ್ರಗಳಿಗೆ ರಜೆ: ಜಿಲ್ಲಾಧಿಕಾರಿ

ಕಲಬುರ್ಗಿ:26 ಹವಾಮಾನ ಇಲಾಖೆಯ ವರದಿನ್ವಯ ಕಲಬುರ್ಗಿ ಜಿಲ್ಲೆಯಲ್ಲಿ ಭಾರಿ ಮಳೆ ಯಾಗುವ ಸಾಧ್ಯತೆ ಇರುವ ಪ್ರಯುಕ್ತ ಹವಾಮಾನ ಇಲಾಖೆಯಿಂದ ಕಲಬುರ್ಗಿ ಜಿಲ್ಲೆಗೆ Red alert ಎಂದು ಉಲ್ಲೇಖಿತ ಮೂಲಕ ಮುನ್ಸೂಚನೆ ನೀಡಲಾಗಿದೆ.
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವ ಕಾರಣ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂದು ( ಜುಲೈ 26) ಬುಧವಾರ ದಂದು ಕಲಬುರಗಿ ಜಿಲ್ಲೆಯ ಎಲ್ಲಾ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ವಿಪತ್ತು ನಿರ್ವಹಣಾ ಕಾಯ್ದೆ 2005 ಕಲಂ 34( ಎಂ) ರ ಅಡಿಯಲ್ಲಿ ಪ್ರದತ್ತ ವಾದ ಅಧಿಕಾರವನ್ನು ಚಲಾಯಿಸಿ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -

ಮನರಂಜಿಸಿದ ಮುಸ್ಸಂಜೆಯ ಮನೋಹರ ಗಾನ ಸಂಭ್ರಮ

ಕಲಬುರಗಿ. ಮಸ್ಸಂಜೆಯ ಮನೋಹರ ಗಾನ ಸಂಭ್ರಮ ಪ್ರೇಕ್ಷಕರ ಮನ ರಂಜಿಸಿರುವುದು ನನಗೂ ಖುಷಿ ಎನಿಸಿದೆ ಎಂದು ಚಲನ ಚಿತ್ರ ಸಂಗೀತ ನಿರ್ದೇಶಕರಾದ ವಿ ಮನೋಹರ ಹೇಳಿದರು.
ನಗರದ ಕಲಾ ಮಂಡಲದಲ್ಲಿ ಸುಕಿ ಸಂಸ್ಕೃತಿಕ ಸಂಸ್ಥೆ ಹಾಗೂ ರಾಷ್ಟ್ರ ಕೂಟ ಪುಸ್ತಕ ಮನೆ ಸಹಯೋಗದಲ್ಲಿ ನಡೆದ ಮಹಿಪಾಲ ರೆಡ್ಡಿ ಮುನ್ನೂರು ಅವರ ಮುಗಿಲು ಸುರಿದ ಮುತ್ತು ಪುಸ್ತಕ ಲೋಕಾರ್ಪಣೆ ಹಾಗೂ ವಿ ಮನೋಹರ ಅವರ ರಚನೆ ಹಾಗೂ ಸಂಗೀತ ನಿರ್ದೇಶನದ ಗೀತೆಗಳ ಗಾನ ಸಂಭ್ರಮ ದಲ್ಲಿ ಸುಕಿ ಮೆಲೋಡಿಸ್ ತಂಡದವರಿಂದ ಮನೋಹರ ಗಾನ ಸಂಭ್ರಮ ದಲ್ಲಿ ಗಾಯಕರ ಗಾನಗಳನ್ನು ಕೇಳಿ ಆನಂದಿಸಿದ್ದೇನೆ ಅವರುಗಳು ಬಲು ಸಂಭ್ರಮ ದಿಂದ ನನ್ನ ಹಾಡುಗಳನ್ನು ಹಾಡಿದ್ದು ಒಂದು ಕುಟುಂಬ ಕಾರ್ಯಕ್ರಮ ವೆಂದು ಅನಿಸುತ್ತದೆ ಇಂತಹ ಮಳೆಯ ವಾತಾವರಣದಲ್ಲಿ ಅದರಲ್ಲೂ ಬಾನುವಾರ ವಾಗಿದ್ದು ಮನೆಯಲ್ಲಿ ಹಾಯಾಗಿ ಮಿರ್ಚಿ ಬಝಿ ಮಂಡಕ್ಕಿ ತಿನ್ನುತ್ತಾ ಟಿವಿ ನೋಡುತ್ತಾ ಕೂಡ್ರುವ ಜಾಯಮಾನದಲ್ಲಿ ಇಲ್ಲಿ ಅದೆಂತಹ ಸಂಭ್ರಮ ದಲ್ಲಿ ಕೂತು ಹಾಡು ಕೇಳುತ್ತಿರುವುದು ಇದೊಂದು ಸ್ವರ್ಗದ ಹಾಗೆ ಆಗಿದೆ ಎಂದು ಹೇಳುತ್ತ ಪ್ರೇಕ್ಷಕರ ಕೋರಿಕೆಯ ಮೆರೆಗೆ ಓ ಮಲ್ಲಿಗೆ ಹಾಡನ್ನು ಹಾಡಿ ಮನರಂಜಸಿದರು.
ಕಲಾ ಮಂಡಳ ಗಾಯನ ಅಭಿಮಾನಿಗಳಿಗೆ ಕಿಕ್ಕಿರಿದು ತುಂಬಿ ಮನೋಹರ ಗಾನ ಸಂಭ್ರಮದ ವಾತಾವರಣಕ್ಕೆ ಸಾಕ್ಷಿ ಆದರು.
ಗಾಯನದಲ್ಲಿ ಕಿರಣ್ ಪಾಟೀಲ ಕವಿರಾಜ್ ಕಾವೇರಿ ಹಿರೇಮಠ ಮಹೇಶ ಕುಮಾರ. ಪ್ರಕಾಶ ದಂಡೋತಿ ಆನಂದ ಪಾಟೀಲ್ ಸಿದ್ದಣ್ಣ ಡಿಗ್ಗಾವಿ. ಶರಣು ವಿಜಯಲಕ್ಷ್ಮಿ ಮುಂತಾದ ಗಾನದಲ್ಲಿ ಬಾಗಿಯಾಗಿ ಮನೋಹರ ಅವರ ಹಾಡುಗಳನ್ನು ಹಾಡಿದರು. -

ಪತ್ರಕರ್ತರ ಸಂಘದಿಂದ 20 ಜನ ಸಾಧಕ ಪತ್ರಕರ್ತರನ್ನು 25ರಂದು ಬೆಂಗಳೂರಿನಲ್ಲಿ ಸತ್ಕಾರ

ಕಲಬುರಗಿ, ಜು.೨4- ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಾಧಕ ಪತ್ರಕರ್ತರಿಗೆ ಜು.25 ರಂದು ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಲಬುರಗಿ ಜಿಲ್ಲೆಯ ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರನ್ನು ಸತ್ಕರಿಸಲಾಗುವುದು.ಕರ್ನಾಟಕದ ಸುಮಾರು 20 ಜನ ಸಾಧಕ ಪತ್ರಕರ್ತರನ್ನು ಸತ್ಕರಿಸುವ ಈ ಸಮಾರಂಭದಲ್ಲಿ ಭಾರತೀಯ ಪತ್ರಕರ್ತರ ಒಕ್ಕೂಟದ 132 ನೇ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಹಾಗೂ ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ಜು.25 ರಂದು ಬೆಂಗಳೂರಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಗಿನ 10.30 ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಕ್ಕೂಟದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ, ಕೆಯುಡಬ್ಲೂಜೆ ಅಧ್ಯಕ್ಷ ಶಿವಾನಂದ ತಡಗೂರು ಸೇರಿದಂತೆ ಅನೇಕರು ಭಾಗವಹಿಸುವರು.
ಮಧ್ಯಾಹ್ನ 3.30 ಕ್ಕೆ ನಡೆಯಲಿರುವ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಾರಿಗೆ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಪ್ರಿಯಕೃಷ್ಣ, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡಿ.ಡೊಳ್ಳಿನ್, ಕೆಯುಡಬ್ಲೂಜೆ ಕಾರ್ಯದರ್ಶಿ ಬಿ.ಸಿ.ಲೋಕೇಶ, ಶೇಷಚಂದ್ರಿಕ ಭಾಗವಹಿಸುವರು. ಸುಮಾರು 20 ಜನ ಪತ್ರಕರ್ತ ಸಾಧಕರನ್ನು ಸತ್ಕರಿಸಲಿದ್ದು, ಕಲಬುರಗಿ ಜಿಲ್ಲೆಯ ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರನ್ನು ಸಹ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
