Author: Satyakam NewsDesk

  • ಯಾದಗಿರಿ ಜಿಲ್ಲಾ ಮಾಧ್ಯಮಪಟ್ಟಿಯಲ್ಲಿದ್ದವರಿಗೆ ಮಾತ್ರ ಪತ್ರಕರ್ತರ ಸಂಘಕ್ಕೆ ಸದಸ್ಯತ್ವವಂತೆ..!ಅದ್ಯಕ್ಷರ  ಹೊಸ ವರಾತ

    ಯಾದಗಿರಿ ಜಿಲ್ಲಾ ಮಾಧ್ಯಮಪಟ್ಟಿಯಲ್ಲಿದ್ದವರಿಗೆ ಮಾತ್ರ ಪತ್ರಕರ್ತರ ಸಂಘಕ್ಕೆ ಸದಸ್ಯತ್ವವಂತೆ..!ಅದ್ಯಕ್ಷರ ಹೊಸ ವರಾತ


    (ವರದಿ: ಕುದಾನ್‌ ಸಾಬ್‌)

    ಸತ್ಯಕಾಮ ವಾರ್ತೆ ಯಾದಗಿರಿ:
    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಯಾದಗಿರಿ ಜಿಲ್ಲಾ ಘಟಕವು ಜಿಲ್ಲೆಯ ಪತ್ರಕರ್ತರ ಕ್ಷೇಮಾಭಿವೃದ್ದಿ ಮತ್ತು ವೃತ್ತಿಪರ ಉನ್ನತೀಕರಣಕ್ಕೆ ಸಕ್ರೀಯವಾಗಿ ಕೆಲಸ ಮಾಡಬೇಕೇ ಹೊರತು ತಮ್ಮ ಸ್ವಹಿತಾಸಕ್ತಿಗಾಗಿ ನೈಜ ಪತ್ರಕರ್ತರಿಗೆ ಸದಸ್ಯತ್ವ ನೀಡುವಲ್ಲಿ ಹಿಂದೇಟು ಹಾಕುತ್ತಿರುವುದು ಎಷ್ಟರ ಮಟ್ಟಿಗೆ ಸರಿ.? ಎಂಬ ಪ್ರಶ್ನೆ ಜಿಲ್ಲೆಯಲ್ಲಿ ಉದ್ಭವಿಸಿದೆ.

    ಸದಾ ಸಂಘಟನೆಯ ಸ್ಥಾನಮಾನಗಳಲ್ಲೆ ಇರಬೇಕು ಎಂಬ ಹಪಾಹಪಿಗೆ ಬಿದ್ದಿರುವ ಇಲ್ಲಿನ ಸಂಘದ ಜಿಲ್ಲಾಧ್ಯಕ್ಷ ಸದಸ್ಯತ್ವವನ್ನು ಹೊಸಬರಿಗೆ ಸದಸ್ಯತ್ವ ನಿರಾಕರಿಸಿ ಪತ್ರಕರ್ತ ಸಮೂಹದಲ್ಲಿ ಕುತಂತ್ರ ನಡೆಸುತ್ತಿದ್ದಾರೆ ಒಂದರ್ಥದಲ್ಲಿ ಪಟ್ಟ ಭದ್ರ ಮಾಡಿಕೊಳ್ಳುವ ಕುತಂತ್ರ ನಡೆಸಿರುವುದು ಸ್ಪಷ್ಟವಾಗಿದೆ ಎಂದು ಕಾರ್ಯನಿರತ ಪತ್ರಕರ್ತರು ಆರೋಪಿಸುತ್ತಿದ್ದಾರೆ.

    ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ಪಡೆಯಬೇಕಾದಾರೆ ಜಿಲ್ಲೆಯ ಮಾಧ್ಯಮ ಪಟ್ಟಿಯಲ್ಲಿ ಇದ್ದರೆ ಮಾತ್ರ ಸದಸ್ಯತ್ವ ಕೊಡಲಾಗುವುದು ಇಲ್ಲದಿದ್ದರೆ ಕೊಡಲು ಸಾಧ್ಯವಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕಿನ್ ಹೇಳುತ್ತಾರೆ. ಆದರೆ ಈ ಕುರಿತು ಯಾವುದಾದರೂ ಆದೇಶ ಇಲ್ಲವೇ ಪತ್ರಕರ್ತರ ಸಂಘದ ನಿರ್ಣಯ ಇದ್ದರೆ ನೀಡುವಂತೆ ಮಾಡುವ ಮನವಿಗೂ ನಕಾರಾತ್ಮಕವಾಗಿ ಅಸಂಬಂದ್ದ ಉತ್ತರ ನೀಡುತ್ತಾರೆ.

    ಪತ್ರಕರ್ತರ ಸಂಘದ ಬೈಲಾ ನೀಡುವಂತೆ ಕೇಳಿದರೆ ಕೊಡಲು ಬರುವುದಿಲ್ಲ ಎಂದು ಒಬ್ಬರು ಹೇಳಿದರೆ ಇನ್ನೊಬ್ಬ ಪದಾಧಿಕಾರಿ ರಾಜ್ಯಕ್ಕೆ ಎಲ್ಲ ಕಡೆ ಒಂದೇ ಬೈಲಾ ಇದೆ ಬೇಕಿದ್ದರೆ ಅಲ್ಲಿ ಹೋಗಿ ನೋಡಿಕೊಳ್ಳಿ ಎಂದು ಪರೋಕ್ಷವಾಗಿ ಹೇಳುತ್ತಿರುವುದು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

    ಇದಲ್ಲದೇ ಹೊಸದಾಗಿ ಬಂದ ಪತ್ರಕರ್ತರಿಗೆ ಹಾಗೂ ನೈಜ ಪತ್ರಕರ್ತರಿಗೆ ಸದಸ್ಯತ್ವ ಮಾಡಿಸುವ ಮೂಲಕ ಸಂಘವನ್ನು ಬಲಪಡಿಸಬೇಕಾದ ಜವಬ್ದಾರಿಯುತ ಸ್ಥಾನದಲ್ಲಿರುವ ಅಧ್ಯಕ್ಷರು ಯಾವುದೇ ಮಾಹಿತಿ ಕೇಳಿದರೆ ಸಾಕು ಸರ್ವಾಧಿಕಾರಿಯಂತೆ ವರ್ತಿಸಿ ಪತ್ರಿಕಾ ಭವನದ ಗ್ರೂಪ್ ನಿಂದ ರಿಮೂವ್ ಮಾಡುವುದು ಪತ್ರಕರ್ತರ ಸಂಘದ ಗ್ರೂಪ್ ನಿಂದ ರಿಮೂವ್ ಮಾಡುವುದು ಮಾಡುವ ಮೂಲಕ ಪತ್ರಕರ್ತರ ವಿರುದ್ಧವೇ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ನಡೆಯುತ್ತಿದೆ.

    ಪರಿಸ್ಥಿತಿ ಹೀಗೆ ಮುಂದುವರೆದರೆ ಅನ್ಯಾಯದ ಬಗ್ಗೆ ಪ್ರಶ್ನಿಸುವ ಪತ್ರಕರ್ತರ ಸಂಘದಲ್ಲಿಯೇ ಅನ್ಯಾಯ ನಡೆದರೆ ಇನ್ನಾರಿಗೆ ಪ್ರಶ್ನಿಸುವುದು ಎಂಬುದನ್ನು ಸಂಬಂಧಿಸಿದವರೇ ಹೇಳಬೇಕಿದೆ.

  • ಪ್ರಸ್ತುತ ವರ್ಷವನ್ನೇ ಮರೆತ ಅಧಿಕಾರಿಗಳು

    ಪ್ರಸ್ತುತ ವರ್ಷವನ್ನೇ ಮರೆತ ಅಧಿಕಾರಿಗಳು

    *ಸತ್ಯಕಾಮ ವಾರ್ತೆ ಯಾದಗಿರಿ:*
    Lkg ಮಕ್ಕಳನ್ನು ಪ್ರಸ್ತುತ ವರ್ಷ ಯಾವುದೆಂದು ಕೇಳಿದರೆ 2024 ಎಂದು ಉತ್ತರಿಸುತ್ತಾರೆ. ಆದರೆ ಈ ಇಲಾಖೆಯ ಅಧಿಕಾರಿಗಳಿಗೆ ಪ್ರಸ್ತುತ ವರ್ಷ ಯಾವುದೆಂದೆ ಗೊತ್ತಿಲ್ಲ, ಇಂತಹ ಅಧಿಕಾರಗಳಿಂದ ಜಿಲ್ಲೆ ಅಭಿವೃದ್ಧಿ ಹೇಗೆ ಕಾರ್ಯಗತವಾಗುತ್ತೆಂದು ಸಾರ್ವಜನಿಕರು ಮಾತನಾಡಿಕೊಳ್ಳುವಂತೆ ಈ ಅಧಿಕಾರಿಗಳು ಮಾಡಿದ್ದಾರೆ.

    ಹೌದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಯಾದಗಿರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾದಗಿರಿ, ಶಿಕ್ಷಣಾ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಯಾದಗಿರಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿಯಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಲಿಂಗಾನುಪಾತಕ್ಕೆ ಸಂಬಂಧಿಸಿದಂತೆ, ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರವಿಧಾನಗಳ PCPNDT ( ಲಿಂಗ ಆಯ್ಕೆಯ ನಿಷೇಧ ಅಧಿನಿಯಮ,1994)ರ ಕುರಿತು ಜಿಲ್ಲೆಯ ಎಲ್ಲಾ ಸ್ಕಾನಿಂಗ್ ಸೆಂಟರ್ ಹೊಂದಿರುವ ವೈದ್ಯರು ಹಾಗೂ ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಆರೋಗ್ಯ ಇಲಾಖೆಯ ಸಿಬ್ಬಂದಿಯವರೆಗೆ ತರಬೇತಿ ಕಾರ್ಯಗಾರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಇರುವ ಹಲವು ಲೋಪದೋಷಗಳು ಓದುಗರನ್ನು ಪೇಚಿಗೆ ಸಿಲುಕಿದ ಪ್ರಸಂಗ ಜರುಗಿದೆ.

    ಫೆ.16 ರಿಂದ ಮತ್ತು 17 ರಂದು ನಡೆಯುತ್ತಿರುವ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಕಾರ್ಯಕ್ರಮದ ಸಿಬ್ಬಂದಿಯವರೆಗೆ ತರಬೇತಿ ಕಾರ್ಯಗಾರದ ಆಮಂತ್ರಣ ಪತ್ರಿಕೆಯಲ್ಲಿ ಪ್ರಸುತ್ತ ವರ್ಷವನ್ನೇ ಬದಲಾಯಿಸಲಾಗಿದೆ, ಆಮಂತ್ರಣವನ್ನು ಒಮ್ಮೆ ಗಮನಿಸಿದರೆ, ಅಧಿಕಾರಿಗಳು ಇನ್ನೂ 2023ನೇ ವರ್ಷದಲ್ಲೆ ಇದ್ದಂತೆ ಕಾಣುತ್ತದೆ, ಅಷ್ಟೇ ಅಲ್ಲದೇ ಮುಖ್ಯ ಅತಿಥಿಗಳು ಪಟ್ಟಿಯಲ್ಲಿ ಶ್ರೀಮತಿ ಸಂಗೀತಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಯಾದಗಿರಿ ಜಿಲ್ಲಾ ಪಂಚಾಯತ್ ಎಂದು ಮುದ್ರಿಸಿಲಾಗಿದೆ,

    ಅಧಿಕಾರಿಗಳೇ ಈ ರೀತಿ ಮಾಡಿದರೆ ಹೇಗೆ ಎಂದು ಪ್ರಜ್ಞಾವಂತರು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
    ಇನ್ನುಮುಂದಾದರೂ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ ಮುದ್ರಿಸುವ ಮೊದಲು ಇಲಾಖೆ ಅಧಿಕಾರಿಗಳು, ಪರಿಣಿತಿ ಹೊಂದಿರುವ ನುರಿತ ಕನ್ನಡ ಪಂಡಿತರಲ್ಲಿ ವಿಷಯ ಬರೆಯಿಸಿಕೊಂಡು ಪ್ರಕಟಣೆ ಅಥವಾ ಆಮಂತ್ರಣ ಪತ್ರಿಕೆಗಳನ್ನು ಮುದ್ರಣ ಮಾಡಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

    *ಬಾಕ್ಸ್:*
    *ಆಮಂತ್ರಣ ಪತ್ರಿಕೆಯಲ್ಲಿರುವ ತಪ್ಪುಗಳು*

    *ಪ್ರಸ್ತುತ ಸಾಲಿನ ವರ್ಷ 2024 ರ ಬದಲಿಗೆ 2023

    * ಯಾದಗಿರಿ ಜಿಲ್ಲೆಯ ಹೆಸರನ್ನು ಯಾದಗಿರಿರಿ

    * ಫೆಬ್ರವರಿ ಬದಲಿಗೆ ಪೇಬ್ರವರಿ

    *ತಾರತಮ್ಯ ಬದಲಿಗೆ ತಾರತಮ್ಮ

    *ಸ್ವಾಗತ ಬದಲಿಗೆ ಸಾಗತ ಎಂದು ಮುದ್ರಿಸಲಾಗಿದೆ.

  • ಸರಕಾರಿ ಜಾಲತಾಣದಲ್ಲಿ ತನ್ನ ವೈಯಕ್ತಿಕ ಪ್ರಚಾರಕ್ಕೆ ದುರ್ಬಳಕೆ

    ಸರಕಾರಿ ಜಾಲತಾಣದಲ್ಲಿ ತನ್ನ ವೈಯಕ್ತಿಕ ಪ್ರಚಾರಕ್ಕೆ ದುರ್ಬಳಕೆ

    ತಪ್ಪು ಹ್ಯಾಶ್ ಟ್ಯಾಗ್ : ಸಾರ್ವಜನಿಕರಲ್ಲಿ ಗೊಂದಲ

    ಮೇಲಧಿಕಾರಿಗಳಿಗಿಂತ ಈತನೇ ದೊಡ್ಡವನಾ.?

    ಕಲಬುರ್ಗಿ: ಸರ್ಕಾರಿ ನೌಕರರು ಇತ್ತಿಚೀನ ದಿನಗಳಲ್ಲಿ ಸರ್ಕಾರದ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಪೋಸ್ಟಗಳಲ್ಲಿ ತಮ್ಮ ವೈಯಕ್ತಿಕ ಹ್ಯಾಶ್ ಟ್ಯಾಗ್ ಬಳಸುವುದರಿಂದ ಸಾರ್ವಜನಿಕರಿಗೆ ಯಾವ ರೀತಿಯ ಸಂದೇಶವನ್ನು ನೀಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ.

    ಹೌದು ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ರಚಿಸಲಾಗಿರುವ DIPR Kalaburgi ಪೇಜ್ ನಲ್ಲಿ ಸರ್ಕಾರಿ ಕಾರ್ಯಕ್ರಮಗಳ ಮಾಹಿತಿಯನ್ನು ಅಪ್ಲೋಡ್ ಮಾಡುವ ವೇಳೆ ಇಲಾಖೆಯ ಸಿಬ್ಬಂದಿ ರವಿ ಮೀರಾಸ್ಕಾರ್ ತಮ್ಮ ವೈಯಕ್ತಿಕ ಹ್ಯಾಶ್ ಟ್ಯಾಗ್ ಬಳಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಉದ್ಭವಗೊಂಡಿದೆ.

    ಅದೇನೆಂದರೆ ರವಿ ಮಿರಾಸ್ಕರ್ DIPR Kalaburgi ಪೇಜ್ ನಲ್ಲಿ ದಿನ ನಿತ್ಯ ಅಪ್ಲೋಡ್ ಮಾಡುವ ಪೋಸ್ಟ್ ನಲ್ಲಿ ರವಿ ಮೀರಾಸಕರ್ ಪ್ರಾದೇಶಿಕ ಆಯುಕ್ತರು ಕಲಬುರ್ಗಿ ವಿಭಾಗ ಎಂಬ ಹ್ಯಾಶ್ಟ್ಯಾಗ್ ಕಾಣಿಸುತ್ತದೆ, ಇದು ನೋಡುಗರಿಗೆ ಬೇರೆ ರೀತಿಯ ಸಂದೇಶವನ್ನೇ ರವಾನಿಸುತ್ತದೆ,

    ಹಾಗಾದ್ರೆ ಕಲಬುರಗಿ ಇಲಾಖೆಯ ಪ್ರಾದೇಶಿಕ ಆಯುಕ್ತರಾದ್ರು ಯಾರು.?

    ಸಿಬ್ಬಂದಿಗಳು ಈ ರೀತಿಯಾಗಿ ತಮ್ಮ ಹೆಸರನ್ನು ಬಳಸಿ ಇಲಾಖೆಯ ಮೇಲಾಧಿಕಾರಿಗಳ ಹ್ಯಾಶ್ಟ್ಯಾಗ್ ಬಳಸಿದಾಗ DIPR ಕಲಬುರಗಿ ವಿಭಾಗದ ಆಯುಕ್ತರು ಇವರೇನಾ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ, ಇದ್ದರಿಂದ ಇಲಾಖೆಗೆ ಅರ್ಜಿ ಬರೆಯುವವರಿಗೆ ಇದು ತಪ್ಪು ಮಾಹಿತಿ ತಿಳಿಸುತ್ತದೆ ಅಲ್ಲದೆ ದೇಶದ ಯಾವುದೇ ಮೂಲೆಯಲ್ಲಿ ಕುಳಿತು ನೋಡುವರಿಗೂ ಕೂಡ ಇಂತಹ ಹ್ಯಾಶ್ಟ್ಯಾಗ್ ತಪ್ಪು ಮಾಹಿತಿ ನೀಡುತ್ತದೆ.

    ರವಿ ಮಿರಾಸ್ಕರ್ ಎಂಬತಾ ಪೋಸ್ಟ್ ಮಾಡುವ ವೇಳೆ ಹ್ಯಾಶ್ಟ್ಯಾಗ್ ನಲ್ಲಿ ಅಲ್ಪವಿರಾಮ ಚಿಹ್ನೆ ಬಳಸದೆ ಇಲಾಖೆಯ ಮುಖ್ಯಸ್ಥರ ಸ್ಥಾನದ ಹ್ಯಾಶ್ಟ್ಯಾಗ್ ಬಳಸಿರುವುದರಿಂದ ಈ ಪ್ರಶ್ನೆ ಉದ್ಭವವಾಗಿದೆ.

    ಇಲ್ಲಿ ಮತ್ತೊಂದು ವಿಷಯವೇನೆಂದರೆ ಸಚಿವರು ಹೆಸರಿನ ಮುಂದೆಯೇ ಮೇಲಾದಿಕಾರಿಗಳ ಹೆಸರು ಬಳಸಬೇಕೆಂಬ ಪರಿಜ್ಞಾನತೆ ಇವರಿಗಿಲ್ವಾ. ಹಾಗಾದ್ರೆ ಮೇಲಾದಿಕಾರಿಗಳಿಗಿಂತ ಇವರೇ ದೊಡ್ಡವರಾ.?

    ಓರ್ವ ಸರ್ಕಾರಿ ನೌಕರನು ಸಮಾಜದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಸರ್ಕಾರಿ ನೌಕರರು ಅಂತರ್ಜಾಲದ ವೆಬ್‌ಸೈಟ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಿಯಮಗಳ ಅವಕಾಶಗಳನ್ನು ಮೀರಿ ಸರ್ಕಾರ ಮತ್ತು ಇತರೆ ಸರ್ಕಾರಿ ನೌಕರರಿಗೆ ಮುಜುಗರ ಉಂಟುಮಾಡುವಂತೆ ವ್ಯಕ್ತಪಡಿಸುವುದು ಕಂಡುಬರುತ್ತಿದೆ.

    ಮಾಹಿತಿ ಮತ್ತು ಸಂವಹನ ತಂತ್ರ ಜ್ಞಾನವನ್ನು ಸದ್ಬಳಕೆ ಮಾಡಿ ಕೊಂಡು ಫೇಸ್‌ಬುಕ್, ಟ್ವಿಟರ್, ಯೂ ಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳ ಮೂಲಕ ಸಾರ್ವಜನಿಕರಿಗೆ ಕ್ಷಣಕ್ಷಣದ ಮಾಹಿತಿ ನೀಡಲು ವಾರ್ತಾ ಇಲಾಖೆ ಮುಂದಾಗಿದೆ. ಆದ್ರೆ ಸಿಬ್ಬಂದಿಗಳು ತಮ್ಮ ವೈಯಕ್ತಿಕ ಹ್ಯಾಶ್ ಟ್ಯಾಗ್ ಬಳಸಿ ಮುಂದೆ ಇಲಾಖೆಯ ಹ್ಯಾಶ್ ಟ್ಯಾಗ್ ಬಳಸಿದರೆ ಮೇಲಾಧಿಕಾರಿಗಳಿಗೆ ಇರುವ ಬೆಲೆಯಾದರು ಏನು?

  • ಮಾಜಿ ಶಾಸಕ ಕಂದಕೂರ ಇನ್ನಿಲ್ಲ

    ಮಾಜಿ ಶಾಸಕ ಕಂದಕೂರ ಇನ್ನಿಲ್ಲ

    ಯಾದಗಿರಿ : ಗುರುಮಠಕಲ್ ಮತಕ್ಷೇತ್ರದ ಮಾಜಿ ಶಾಸಕರು ಹಾಗೂ ಹಾಲಿ ಶಾಸಕರದ ತಂದೆ ಜೆಡಿಎಸ್ ಪಕ್ಷದ ಹಿರಿಯ ರಾಜಕಾರಣಿಗಳಾದ ನಾಗನಗೌಡ ಕಂದಕೂರ ಅವರು ತೀವ್ರ ಹೃದಯಾಘಾತದಿಂದ ಇಂದು ( ರವಿವಾರ ) ವಿಧಿವಶರಾಗಿದ್ದಾರೆ.

    ನಾಗನಗೌಡ ಕಂದಕೂರ ಅವರಿಗೆ 79 ವರ್ಷ ವಯಸ್ಸಾಗಿತ್ತು ಎದೆ ನೋವು ಕಾಣಿಸಿಕೊಂಡ ತಕ್ಷಣ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು ಅದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನೊಪ್ಪಿದ್ದಾರೆ.
    ನಾಗನಗೌಡ ಕಂದಕೂರ್ ಅವರು 2018ರಲ್ಲಿ ಯಾದಗಿರಿ ಜಿಲ್ಲೆ ಗುರುಮಠಕಲ್‌ ಶಾಸಕರಾಗಿದ್ದರು. ಜೆಡಿಎಸ್‌ನಿಂದ ಸ್ಪರ್ಧಿಸಿದ ಮೊದಲ ಬಾರಿಗೆ ನಾಗನಗೌಡ ಕಂದಕೂರ್ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.

    ಕಳೆದ ೫೦ ವರ್ಷಗಳಿಂದ ರಾಜಕೀಯ ಜೀವನದಲ್ಲಿ ಸೋಲು ಗೆಲುವುಗಳನ್ನು ಕಂಡು ಕಲ್ಯಾಣ ಕರ್ನಾಟಕ ಭಾಗದ ಜೆಡಿಎಸ್ ಪಕ್ಷದ ಹಿರಿಯ ಅನುಭವಿ ರಾಜಕಾರಣಿ ಯಾಗಿದ್ದ ಇವರ ಅಗಲಿಕೆ ಪಕ್ಷಕ್ಕೆ ಹಾಗೂ ಕಂದಕೂರ ಕುಟುಂಬದ ಅಭಿಮಾನಿ ಬಳಗಕ್ಕೆ ತುಂಭಲಾರದ ನಷ್ಟವನ್ನು ಉಂಟು ಮಾಡಿದೆ.

  • ನಮ್ಮ ಸೇವೆ ಜನರು ಮೆಚ್ಚುವಂತಿರಬೇಕು:

    ನಮ್ಮ ಸೇವೆ ಜನರು ಮೆಚ್ಚುವಂತಿರಬೇಕು:

    ಸತ್ಯಕಾಮ ವಾರ್ತೆ ಯಾದಗಿರಿ:
    ಸರಕಾರಿ ಅಧಿಕಾರಿಗಳಿಗೆ ಅಧಿಕಾರ ಶಾಶ್ವತವಲ್ಲ, ಆದರೇ, ಅಧಿಕಾರ ಅವಧಿಯಲ್ಲಿ ನಾವು ಪ್ರಾಮಾಣಿಕ, ನಿಷ್ಠೆಯಿಂದ ಮಾಡುವ ಸೇವೆ ಸಲ್ಲಿಸುವ ಜತೆ ಜನಮಾನಸದಲ್ಲಿ ಸದಾ ನೆನಪಿರುವ ಕೆಲಸ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್.ಆರ್.ಲಕ್ಷ್ಮಿಪತಿ ಅವರು ಹೇಳಿದರು.

    ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ೬೫೯ ಸ್ಥಳೀಯ ಸಮಿತಿ ವತಿಯಿಂದ ನಗರದ ಹೊಸಳ್ಳಿ ರಸ್ತೆಯಲ್ಲಿ ಇರುವ ಕೆಇಬಿ ಸಭಾ ಭವನದಲ್ಲಿ ನಡೆದ ಸುರಕ್ಷತಾ ಕಾರ್ಯಗಾರ ಸಂಘಟನಾ ಸಭೆ ಹಾಗು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಿಸ್ವಾರ್ಥ, ಸೇವೆ, ಸರಳತೆ ಗುಣಗಳು ಹಾಗೂ ಸೂಕ್ತ ಮಾರ್ಗದರ್ಶನದ ಮೂಲಕ ನಿವು ಬೆಳೆಸಿದಂತ ನಾಯಕ ಇಂದು ಬೃಹತ್ ಆಗಿ ನೌಕರರ ಸಂಘದಲ್ಲಿ ಬೆಳೆದ ಶ್ರೀನಿವಾಸ ಅವರ ವ್ಯಕ್ತಿತ್ವ, ಕೆಲಸದ ಮಾದರಿ ಕುರಿತು ಗುಣಗಾನ ಮಾಡಿದ ಅವರು, ಯಾವುದೇ ನಾಯಕ ಬೆಳೆಯಲು ಅವರಲ್ಲಿ ನಾಯಕತ್ವದ ಗುಣಗಳ ಜತೆ ನಿಸ್ವಾರ್ಥ, ಪ್ರಮಾಣಿಕತೆ ಇರಬೇಕು ಎಂದರು.

    ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ವೇತನ ಪರಿಷ್ಕೃಕಣೆ ಮಾಡಿ ಕೊಡಲು ಹೋರಾಟ ಮಾಡಿದೆ. ಸಂಘ ಬಲಿಷ್ಠವಾಗಿದೆ ಹಿಡಿದ ಕೆಲಸ ಮಾಡಿಯೇ ತೀರುತ್ತಾರೆ. ಎಂಬ ನಂಬಿಕೆಯ ಹೆಸರು ನಮ್ಮ ಸಂಘಕ್ಕೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಆಸ್ತಿ, ನೌಕರಿ ಸಂಪಾದನೆ ಮಾಡಬಹುದು ಆದರೆ ಯಾದಗಿರಿ ಶ್ರೀನಿವಾಸ ಅವರು ಎಲ್ಲರನ್ನು ವಿಶ್ವಸಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅವರ ಮಾರ್ಗದರ್ಶನ ಇಲಾಖೆ ಎಲ್ಲಾ ಸಿಬ್ಬಂದಿಗೆ ಅಗತ್ಯವಾಗಿದೆ ಎಂದು ಹೇಳಿದರು.

    ವಿದ್ಯುತ್ ಕ್ಷೇತ್ರ ಅತ್ಯಂತ ಸಮಸ್ಯೆಯಿಂದ ಕೂಡಿದೆ. ಬದಲಾದ ಸಂಸ್ಕರಣೆ ಮೂಲಕ ವಿದ್ಯುತ್ ಅವಲಂಬನೆ ಹೆಚ್ಚಾಗಲಿದೆ. ಎದೆ ಗುಂದದೆ ಇಲಾಖೆ ಕೆಲಸ ಮಾಡುತ್ತಿದೆ. ವಿದ್ಯುತ್ ಅವಘಡದಿಂದ ಸಾವನ್ನಪ್ಪುತ್ತಾರೆ, ಅಂಗವಿಲರಾಗುತ್ತಾರೆ. ಆದರೂ, ಸಾರ್ವಜನಿಕ ಕೆಲಸ ಬಿಟ್ಟು ಹೋಗಿಲ್ಲ ಎಂದು ಸಿಬ್ಬಂದಿಗಳ ಕಾರ್ಯಕ್ಷಮತೆ ಸಮರ್ಥಿಸಿಕೊಂಡರು. ವಿದ್ಯುತ್ ಕಾಯ್ದೆಯ ಖಾಸಗಿಕರಣ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ಹೋರಾಡಲು ನಾವು ಸಂಘಟಿತರಾಗಿ, ಸಿದ್ದರಾಗಬೇಕು ಎಂದು ಸಲಹೆ ನೀಡಿದರು.
    ಸಂಘದ ಉಪಾಧ್ಯಕ್ಷ ಬಾಬು ಕೊರೆ ಮಾತನಾಡಿ, ಸಂಘಟನೆಯ ಮೂಲಕ ಎಲ್ಲಾ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಹಕಾರವಾಗಿದೆ ಎಂದು ಹೇಳಿದರು.

    ಕಾರ್ಮಿಕ ಮುಖಂಡ ಹಾಗೂ ಸಂಘದ ಕಾರ್ಯಧ್ಯಕ್ಷ ಶ್ರೀನಿವಾಸ ಅವರ ವಯೋನಿವೃತ್ತಿ ಹೊಂದಿದ್ದು,. ಇಲಾಖೆಯಲ್ಲಿ ಅವರು ಸಲ್ಲಿಸಿದ ಸೇವೆ ಅತ್ಯಂತ ಸಂತಸದ ಸಂಗತಿ ಇಲಾಖೆಗೆ ಇಂತಹ ಅಧಿಕಾರಿಗಳ ಸೇವೆ ಇನ್ನೂ ಅವಶ್ಯಕತೆ ಇದೆ ಎಂದು ಹೇಳಿದರು.

    ರಾಜ್ಯ ಪ್ರಧಾನ ಕಾರ್ಯದರ್ಶಿ ಬಲರಾಮ ಮಾತನಾಡಿ, ಸಭಾ ಭವನಕ್ಕೆ ಶ್ರೀನಿವಾಸ ಅವರ ಕೋಡುಗೆ ಅಪಾರವಾಗಿದೆ. ಅವರು ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಮಾರ್ಗದಲ್ಲಿ ಸಿಬ್ಬಂದಿಗಳು ನಡೆಯಬೇಕು ಎಂದು ಹೇಳಿದರು.

    ಖಚಾಂಚಿ ಮಂಜುನಾಥ, ಸಂಘಟನೆ ಕಾರ್ಯದರ್ಶಿ ಹಣಮಂತ ರೆಡ್ಡಿ, ಸ್ಥಳಿಯ ಸಮಿತಿ ಅಧ್ಯಕ್ಷರಾದ ಯಮುನಪ್ಪ ತನಿಕೆದಾರ ಚಂದಪ್ಪ, ಸುರೇಖಾ, ಸಹಾಯ ಕಾರ್ಯನಿರ್ವಾಹ ಅಭಿಯಂತರ ಮರೆಪ್ಪ ಕಡೆಕರ್, ಸಹಾಯಕ ಕಾರ್ಯ ನಿವಾಹಕ ಚಂದ್ರಕಾಂತ, ಮಾರಖಂಡೇಶ್ವರ, ರಾಜು ಪತ್ತಾರ್, ಮಹಾದೇವಪ್ಪ. ಸಂತೋಷ ಯಾದವ, ಇದ್ದರು.

  • ಅಧಿಕಾರಿಗಳ ವಾಹನಗಳೂ ಕಪ್ಪು ಗ್ಲಾಸ್‌ಮಯ

    ಅಧಿಕಾರಿಗಳ ವಾಹನಗಳೂ ಕಪ್ಪು ಗ್ಲಾಸ್‌ಮಯ


    *ಕಣ್ಮುಚ್ಚಿ ಕುಳಿತ ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳು*

    *ಸುಪ್ರೀಂಕೋರ್ಟ್ ಆದೇಶಕ್ಕೂ ಇಲ್ಲಿಲ್ಲ ಕವಡೆ ಕಾಸಿನ ಕಿಮ್ಮತ್ತು*

    *ವರದಿ:ಕುದಾನ್ ಸಾಬ್*
    *ಸತ್ಯಕಾಮ ವಾರ್ತೆ ಯಾದಗಿರಿ :*
    ವಾಹನಗಳಿಗೆ ಕೂಲಿಂಗ್ ಪೇಪರ್ ಹಾಕಿಕೊಂಡು ಖಾಸಗಿ ವಾಹನಗಳು ತಿರುಗಾಡುವುದು ಅಂತಹ ದೊಡ್ಡ ವಿಷಯವೇನಲ್ಲವೆಂದರೂ ಸಹ ಅದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯೇ ಆಗಿದೆ.ಆದರೆ ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಯ ಅನೇಕ ವಾಹನಗಳೇ ಸುಪ್ರಿಂ ಆದೇಶ ಧಿಕ್ಕರಿಸಿ ಕಪ್ಪು ಬಣ್ಣದ ಪೇಪರ್ ಹಾಕಿಕೊಂಡು ರಾಜಾರೋಷವಾಗಿ ತಿರುಗುತ್ತಿರುವುದು ಸೋಜಿಗ ಮೂಡಿಸಿದೆ.

    ಹೌದು ಸುಪ್ರಿಂ ಕೋರ್ಟ್ ಆದೇಶ ಉಲ್ಲಂಘಿಸುವ ಮೂಲಕ ಅಂಧಾ ದರ್ಬಾರ್ ನಡೆಸುತ್ತಿರುವುದಕ್ಕೆ ಹತ್ತು ಹಲವು ಉದಾಹರಣೆಗಳು ನಿತ್ಯ ಕಂಡು ಸಿಗುತ್ತವೆ ಇವುಗಳ ಪೈಕಿ ಕಪ್ಪು ಪರದೆ ಅಳವಡಿಸಿಕೊಂಡು ತಿರುಗುವ ವಾಹನಗಳು ಅದರಲ್ಲೂ ಸರ್ಕಾರಿ ವಾಹನಗಳ ತಿರುಗುವುದು ಜಿಲ್ಲೆಯಲ್ಲಿ ಸರ್ವೇ ಸಾಮಾನ್ಯವಾಗಿರುವುದು ತಾಜಾ ಉದಾಹರಣೆ ಇಲ್ಲಿದೆ ನೋಡಿ,

    ಕಾನೂನು ಕಾಪಾಡಬೇಕಾದ ಅಧಿಕಾರಿಗಳು ತಮ್ಮ ಸರ್ಕಾರಿ ಕಾರಿಗೆ ಕಪ್ಪು ಪರದೆ (ಕೂಲಿಂಗ್ ಪೇಪರ್) ಹಾಕಿಕೊಂಡಿರುವ ಪ್ರಕರಣಗಳು ಪತ್ರಿಕೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿದವು.

    ಜಿಲ್ಲೆಯಲ್ಲಿ ಕೆಲ ಸರ್ಕಾರಿ ಅಧಿಕಾರಿಗಳು ತಾವು ಬಳಸುವ ಇಲಾಖೆ ಕಾರುಗಳಿಗೆ ಇಂತಹ ಕಪ್ಪು ಪರದೆ ಟಿಂಟೆಡ್ ಗ್ಲಾಸ್ ಅಳವಡಿಸಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

    ಸುಪ್ರಿಂ ಆದೇಶ ಮತ್ತು ಸರ್ಕಾರದ ಸುತ್ತೋಲೆಗಳ ನಿಯಮದ ಪ್ರಕಾರ ಕಾರಿನ ವಿಂಡೋಗೆ ಟಿಂಟೆಡ್ ಗ್ಲಾಸ್ ಹಾಕುವಂತಿಲ್ಲ. ಟಿಂಟೆಡ್ ಗ್ಲಾಸ್‌ಅನ್ನು ಹಾಕಿಕೊಂಡು ತಿರುಗಾಡುವುದು ನಿಯಮಕ್ಕೆ ವಿರುದ್ಧವಾದುದು. ಆದಾಗ್ಯೂ ಕೆಲ ಸರ್ಕಾರಿ ಕಾರುಗಳಿಗೆ ಈ ರೀತಿಯ ಗ್ಲಾಸ್ ಬಳಕೆ ಆಗುತ್ತಿದೆ.

    ಶೇ. 70 ರಷ್ಟು ಪಾರದರ್ಶಕವಾಗಿರಬೇಕು ಎಂಬ ನಿಯಮವನ್ನು ಅಧಿಕಾರಿಗಳ ಕಾರುಗಳೇ ಸ್ಪಷ್ಟವಾಗಿ ಉಲ್ಲಂಘನೆ ಮಾಡಿ ತಿರುಗುತ್ತಿದ್ದರೂ ಕ್ಯಾರೆ ಎನ್ನುವವರಿಲ್ಲ. ಕೆಎ 33 ಎಂ 3090 ನಂಬರಿನ ವಾಹನ ಹಾಗೂ ಅರಣ್ಯ ಇಲಾಖೆಯ ಕೆಎ 04 ಜಿ 1879 ವಾಹನಗಳು ಕಾನೂನು ನಿಯಮಗಳನ್ನು ಉಲ್ಲಂಘಿಸಿದ್ದು ಪತ್ರಿಕೆ ಕ್ಯಾಮೆರಾ ಕಣ್ಣಿಗೆ ಕಂಡುಬಂತು.

    ಈ ಇಲಾಖೆಗಳ ಅಧಿಕಾರಿಗಳೇ ಸ್ವತಃ ಕಾರುಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿರುವುದನ್ನು ನೋಡಿ ನಾಗರಿಕರು “ಏನು ಮಾಡೊಕ್ಕಾಗೊದಿಲ್ಲ” ಎಂದುಕೊಳ್ಳುತ್ತಾ ಮುಂದಕ್ಕೆ ಹೋಗುತ್ತಿರುವುದು ಕಂಡುಬಂತು.

    ಸಾಮಾನ್ಯ ಜನರು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ದಂಡ ಹಾಕುವ ಆರ್‌ಟಿಒ ಅಧಿಕಾರಿಗಳು, ಮತ್ತು ಪೋಲಿಸ್ ಇಲಾಖೆಯ ಸಿಬ್ಬಂದಿಗಳು, ಸುಪ್ರೀಂ ಆದೇಶ ಉಲ್ಲಂಘನೆ ಮಾಡಿ ಕೂಲಿಂಗ್ ಟಿಂಟ್ ಅಳವಡಿಸಿರುವ ಕಾರು ಬಳಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಯಾಕೆ ಕೈಗೊಳ್ಳುತ್ತಿಲ್ಲ ಸುಪ್ರಿಂ ಕೋರ್ಟ್ ಆದೇಶವೂ ಈ ಅಧಿಕಾರಿಗಳಿಗೂ ಗೊತ್ತಿಲ್ಲವೋ ಅಥವಾ ಏನು ಮಾಡಿದರೂ ನಡೆಯುತ್ತದೆ ಎಂಬ ಅಸಡ್ಡೆಯೋ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

  • ರೈತರ ಬದುಕಿಗೆ ಕೊಳ್ಳಿಯಿಟ್ಟ ಸರ್ಕಾರ | 22ನೇ ದಿನಕ್ಕೆ ಮುಂದುವರೆದ ಧರಣಿ: ರೈತ ಹನುಮಂತ ತಂದೆ ಮಾನಪ್ಪ ಪೂಜಾರಿ ಮದ್ರಿಕಿ ವಿಷ ಸೇವಿಸಲು ಪ್ರಯತ್ನ

    ರೈತರ ಬದುಕಿಗೆ ಕೊಳ್ಳಿಯಿಟ್ಟ ಸರ್ಕಾರ | 22ನೇ ದಿನಕ್ಕೆ ಮುಂದುವರೆದ ಧರಣಿ: ರೈತ ಹನುಮಂತ ತಂದೆ ಮಾನಪ್ಪ ಪೂಜಾರಿ ಮದ್ರಿಕಿ ವಿಷ ಸೇವಿಸಲು ಪ್ರಯತ್ನ

    *ಕೆಬಿಜೆಎನ್‌ಎಲ್ ಕಚೇರಿ ಮುಂದೆ ನೀರಿಗಾಗಿ ಪ್ರತಿಭಟನೆ*

    ರೈತರೊಂದಿಗೆ ಮಾತನಾಡದೆ ಹೊರಟು ಹೋದ ಜಿಲ್ಲಾಧಿಕಾರಿ

    *ಜಿಲ್ಲಾಧಿಕಾರಿ ನಡೆಗೆ ಆಕ್ರೋಶಗೊಂಡ ರೈತರು ತಹಶೀಲ್ದಾರ್‌ಗೆ ಘೇರಾವ:*

    *ರೈತರ ಕಣ್ಣೀರು, ನಿಟ್ಟುಸಿರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ: ಸತ್ಯಂಪೇಟೆ*

    *ಸತ್ಯಕಾಮ ವಾರ್ತೆ ಶಹಾಪುರ:*
    ರೈತರು ಬೆಳೆದ ಕೋಟ್ಯಾಂತರ ರೂಪಾಯಿ ಮೌಲ್ಯದ ಮೆಣಸಿನಕಾಯಿ ಬೆಳೆ ದಿನಗಳೆದಂತೆ ಕಮರುತಿದ್ದು, ಈ ಕುರಿತು ರೈತ ಸಂಘದ ಹೋರಾಟ 22ನೇ ದಿನಕ್ಕೆ ಕಾಲಿಟ್ಟರು ಸರ್ಕಾರ ಹೋರಾಟವನ್ನು ಹಗುರವಾಗಿ ತೆಗೆದುಕೊಂಡಿದ್ದು, ರೈತರ ಸಹನೆ ಕಟ್ಟೆಯೊಡೆದು ಹೋಗಿದ್ದು ಶುಕ್ರವಾರ ರೈತರು ಮಾಡು ಇಲ್ಲವೇ ಮಡಿ ಎನ್ನುವ ಸ್ಥಿತಿಗೆ ಮುಟ್ಟಿತ್ತು. ಆಳುವ ಸರ್ಕಾರ ನಮ್ಮ ಪಾಲಿಗೆ ಸತ್ತು ಹೋಗಿದೆ, ಬೆಳೆಗೆ ನೀರು ಬಿಡಿ ಎಂದರು ಮುಖ್ಯಮಂತ್ರಿಯಿಂದ ತಹಶೀಲ್ದಾರರವರೆಗೆ ಹಾರಿಕೆ ಉತ್ತರಗಳು ಬರುತ್ತಿವೆ, ರೈತರ ಕಣ್ಣೀರು, ನಿಟ್ಟುಸಿರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲವೆಂದು, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

    ಸಮೀಪದ ಭೀಮರಾಯನಗುಡಿ ಕೆಬಿಜೆಎನ್‌ಎಲ್ ಆಡಳಿತ ಕಚೇರಿ ಎದುರು ಶುಕ್ರವಾರ ಬೆಳಗ್ಗೆ ಪ್ರಾರಂಭವಾದ ಹೋರಾಟದಲ್ಲಿ ಜಿಲ್ಲಾಧಿಕಾರಿಗಳು ಪಾಲ್ಗೊಂಡು, ಸರ್ಕಾರದ ನಿರ್ಧಾರ ತಿಳಿಸುವ ಬಗ್ಗೆ ಕಾಯುವಂತೆ ತಿಳಿಸಿ, ರೈತರನ್ನು ಕೂಡಿಸಿ ತಾವು ಹೇಳದ ಕೇಳದೆ ಹೊರಟು ಹೋದದ್ದು, ಇದೆಂಥ ನ್ಯಾಯ? ರೈತರ ನೋವು ಹತಾಶೆ, ಸಂಕಟ ಅರ್ಥವಾಗದಿರುವುದು ಎಂತಹ ವಿಪರ್ಯಾಸ? ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲೇ ಹನುಮಂತ ತಂದೆ ಮಾನಪ್ಪ ಪೂಜಾರಿ ಮದ್ರಿಕಿ ವಿಷ ಸೇವಿಸಲು ಪ್ರಯತ್ನಿಸಿದ್ದು ಕ್ಷಣದಲ್ಲಿ ದುರಂತ ತಪ್ಪಿದೆ, ಇಷ್ಟಾದರೂ ಸರಕಾರ ರೈತರ ಸ್ಥಿತಿಯ ಗಂಭೀರ ಅರಿತುಕೊಳ್ಳುತ್ತಿಲ್ಲವೆಂದು ಆರೋಪಿಸಿದರು.

    ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರು ಮುಖ್ಯಮಂತ್ರಿಗಳಿಗೆ ಮಾತನಾಡಿದ್ದು, ನೀರಾವರಿ ಎಮ್.ಡಿ ಅವರಿಂದ ಸಲಹೆ ಪಡೆದಿದ್ದು, ನೀರಾವರಿ ಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂಬ ಭರವಸೆಯು ರೈತರ ಪ್ರತಿಭಟನೆಯ ಕಾವು ಸ್ವಲ್ಪ ತಣ್ಣಗಾಗಿತ್ತು.

    ಆದರೆ ಸಂಜೆಯಾಗುತ್ತಲೇ ಎಲ್ಲಾ ಅಧಿಕಾರಿಗಳು ಉತ್ತರ ನೀಡದೆ ಹೋಗಿದ್ದು, ರೈತರ ಸಹನೆ ಕೆಣಕಿದ್ದು, ತಹಶೀಲ್ದಾರರಲ್ಲಿ ಘೇರಾವು ಹಾಕಿ ಪ್ರತಿಭಟಿಸಿದರು, ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪೋಲಿಸರ ಮನವರಿಕೆಯಿಂದ ಸ್ವಲ್ಪಮಟ್ಟಿಗೆ ಶಾಂತವಾಯಿತು.

    *ಸರ್ಕಾರದ ಹಠ ಸರಿಯಲ್ಲ:* 22 ದಿನಗಳಿಂದ ಪ್ರತಿಭಟನೆ ನಡೆದರೂ ಸರ್ಕಾರದ ಮೊಂಡತನ ರೈತರ ಬದುಕಿಗೆ ಸಂಕಟ ತಂದಿದೆ, ಲಕ್ಷಾಂತರ ರೂ ಮೆಣಸಿನಕಾಯಿ ಬೆಳೆ ಹಾಳಾಗುತ್ತಿದ್ದು, ರೈತರನ್ನು ರೊಚ್ಚಿಗೇಳಿಸುತ್ತಿದೆ, ಇನ್ನಾದರೂ ಸಕಾರಾತ್ಮಕ ನಿಲುವು ತೆಗೆದುಕೊಂಡು ರೈತರ ನೆರವಿಗೆ ಸರ್ಕಾರ ಬರಬೇಕಾಗಿದೆ.

    ಈ ಸಂದರ್ಭದಲ್ಲಿ ರೈತ ಮುಖಂಡರಾದ ಶರಣು ಮಂದ್ರವಾಡ, ನಾಗರತ್ನ ಪಾಟೀಲ್, ಮಲ್ಲಣ್ಣ ಪರಿವಾಣ, ಮಹೇಶ ಸುಬೇದಾರ ಸೇರಿದಂತೆ ನೂರಾರು ರೈತರು ಇದ್ದರು.

  • ಸರಕಾರದ ಆದೇಶಕ್ಕಿಲ್ಲಿಲ್ಲ ಕವಡೆ ಕಿಮ್ಮತ್ತು

    ಸರಕಾರದ ಆದೇಶಕ್ಕಿಲ್ಲಿಲ್ಲ ಕವಡೆ ಕಿಮ್ಮತ್ತು

    ಗುರುತಿನ ಚೀಟಿ ಧರಿಸಿ ಕರ್ತವ್ಯ ನಿರ್ವಹಿಸಲು ಅಧಿಕಾರಿ/ಸಿಬ್ಬಂದಿಗಳ ದಿವ್ಯ ನಿರ್ಲಕ್ಷ್ಯ

    ವರದಿ:ಕುದಾನ್ ಸಾಬ್
    ಯಾದಗಿರಿ: ಜಿಲ್ಲೆಯ ವಡಗೇರ ತಾಲ್ಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಯಾವೊಬ್ಬ ಸಿಬ್ಬಂದಿಯೂ ಕಚೇರಿಯ ಕರ್ತವ್ಯಯವಧಿಯಲ್ಲಿ ಸಿಬ್ಬಂದಿಯ ಗುರುತಿನ ಚೀಟಿ ಧರಿಸದೇ ಸರ್ಕಾರದ ಆದೇಶ ಉಲ್ಲಂಘನೆ ಮಾಡುತ್ತಿರುವುದು ನಡೆಯುತ್ತಿದೆ.

    ಈ ಕುರಿತು ಪತ್ರಿಕೆ ರಿಯಾಲಿಟಿ ಚೆಕ್ ಮಾಡಿದಾಗ ಈ ಸಂಗತಿ ಬೆಳಕಿಗೆ ಬಂದಿದೆ. ಐಡಿ ಕಾರ್ಡ್ ಬಗ್ಗೆ ಸಿಬ್ಬಂದಿಯವರಿಗೆ ಕೇಳಿದರೆ, ಟ್ಯಾಗ್ ಇಲ್ಲಾ, ಐಡಿ ಕಾರ್ಡ್ ಕೊಟ್ಟಿಲ್ಲ ಎಂಬ ಸಬೂಬುಗಳ ಕಥೆ ಕಟ್ಟುತ್ತಾರೆ ಹೊರತು ಅದನ್ನು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ಐಡಿ ಕಾರ್ಡ್ ತೆಗೆದುಕೊಳ್ಳುವ ಕನಿಷ್ಠ ಸೌಜನ್ಯವು ಇವರಿಗಿಲ್ಲ,

    ಮೊದಲೇ ಹೊಸ ತಾಲ್ಲೂಕು ಆಗಿದ್ದು, ಅಲ್ಲದೇ ತೀರ ಹಿಂದುಳಿದ ಭಾಗವಾಗಿರುವುದರಿಂದ ಯಾವುದೇ ಜಿಲ್ಲಾ ಇಲ್ಲವೇ ರಾಜ್ಯಮಟ್ಟದ ಅಧಿಕಾರಿಗಳು ಇಲ್ಲವೇ ಪ್ರಮುಖರು ಬರುವ ಸಾಧ್ಯತೆಯೂ ಇಲ್ಲದಿರುವುದರಿಂದ ಸಿಬ್ಬಂದಿಗೆ ಕಾನೂನು ಪಾಲನೆ ಮಾಡಬೇಕು ಎಂಬುದರ ಬಗ್ಗೆ ಎಳ್ಳಷ್ಟು ಚಿಂತೆ ಇಲ್ಲದಿರುವುದು ಕಂಡುಬಂತು.

    ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು 16.03.2021 ರಂದು ಈ ಕುರಿತು ಸ್ಪಷ್ಟ ಆದೇಶ (ಸಂಖ್ಯೆ: ಸಿ.ಆ.ಸು.ಇ 12 ಕತವ 2021) ಹೊರಿಡಿಸಿದ್ದು, ಇಲಾಖೆ ನೌಕರರು ಅಧಿಕಾರಿಗಳು ತಮ್ಮ ತಮ್ಮ ಹೆಸರಿನ ಹುದ್ದೆಯ ಗುರುತಿನ ಚೀಟಿ ಕಡ್ಡಾಯವಾಗಿ ಧರಿಸಬೇಕೆಂಬ ಸುತ್ತೋಲೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಕಳಿಸಿಕೊಟ್ಟಿದ್ದು ಇರುತ್ತದೆ. ಇದರ ಪ್ರಕಾರ ಎಲ್ಲ ಸರ್ಕಾರಿ ನೌಕರರು, ನಿಗಮಗಳ ನೌಕರರುಗಳಿಗೆ ಇದು ಅನ್ವಯವಾಗುತ್ತದೆ.

    ಆದರೆ ವಡಗೇರಾ ತಾಲ್ಲೂಕಿನಲ್ಲಿ ಇದರ ಪಾಲನೆ ಮಾತ್ರ ಆಗುತ್ತಿಲ್ಲ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಈ ಕುರಿತು ತಹಸೀಲ್ದಾರ ಶ್ರೀನಿವಾಸ ಚಾಪಲ್ ರನ್ನು ವಿಚಾರಿಸಿದರೆ ಈ ಬಗ್ಗೆ ಐಡಿ ಕಾರ್ಡ್ ಹಾಕಿಕೊಂಡು ಕುಳಿತುಕೊಳ್ಳಬೇಕೆಂದು ಏನಾದರು ಇದೆಯಾ, ಆ ರೀತಿ ನಿಯಮವೇನು ಇಲ್ಲಾ ಎಂದು ಪತ್ರಿಕೆಗೆ ನಿರ್ಲಕ್ಷ್ಯದಿಂದ ಪ್ರತಿಕ್ರಿಯಿಸಿದರು.

    ಹೀಗಾಗಿ ತಾಲ್ಲೂಕಿನಲ್ಲಿ ಮುಖ್ಯಸ್ಥರೇ ಹೀಗೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದರೆ ಇನ್ನು ಸಿಬ್ಬಂದಿಯವರ ಕಥೆ ಹೇಗಿರಬೇಡ? ಇದನ್ನಂತೂ ಹೇಳಲು ಬಾರದು, ಗ್ರಾಮೀಣ ಪ್ರದೇಶದಲ್ಲಿ ಒಂದು ಜನಪದರ ಗಾದೆ ಚಾಲ್ತಿಯಲ್ಲಿದೆ ಅದೇನೆಂದರೆ ಶಾಲೆಲಿ ಮಾಸ್ತರ ನಿಂತು ಸೂಸೂ ಮಾಡಿದರೆ ಮಕ್ಕಳು ಓಡಾಡಿ ಮಾಡಿದರು ಎಂಬ ಮಾತಿದೆ.

    ಹೀಗೆಯೇ ಜಿಲ್ಲೆಯಲ್ಲಿಯೂ ಸಹ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಇದ್ದು, ಪ್ರಮುಖ ಸ್ಥಾನದಲ್ಲಿರುವ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಜ್ಞಾನ ಇಲ್ಲದಿದ್ದರೆ ಸಿಬ್ಬಂದಿಯವರಂತೂ ಇನ್ನು ಅಧ್ವಾನವಾಗಿ ವರ್ತಿಸುವುದು ಸರ್ವೆ ಸಾಮಾನ್ಯ. ಎಷ್ಟೋ ಕಚೇರಿಯಲ್ಲಿ ಸರ್ಕಾರದ ಸುತ್ತೋಲೆ ಸೂಚನೆ ಆದೇಶಗಳು ಇರಲಿ ಹೈಕೋರ್ಟ್ ಸುಪ್ರಿಂ ಕೋರ್ಟ್ ಆದೇಶಗಳನ್ನೇ ಪಾಲಿಸದೇ ಜಾಣ ಕುರುಡು ಇಲ್ಲವೇ ಮೈಗಳ್ಳ ಕುರುಡು ಇಲ್ಲವೇ ಅಸಡ್ಡೆ ಕುರುಡು/ಕಿವುಡು ಅನುಸರಿಸುತ್ತಿರುವುದರಿಂದ ಶ್ರೀಸಾಮಾನ್ಯರಿಂದ ಹಿಡಿದು ಜಿಲ್ಲೆ ರಾಜ್ಯದ ಏಳ್ಗೆಯೂ ಕನಸೇ? ಎಂಬ ಪ್ರಶ್ನೆ ಉದ್ಭವಿಸುತ್ತಿದೆ ಎಂಬುದಂತೂ ಸುಳ್ಳಲ್ಲ.

  • *ತಿಂಥಣಿ ಮೌನೇಶ್ವರ ದೇವಸ್ಥಾನದ ಬಳಿ ಹುಲಿ ಚರ್ಮ ಪತ್ತೆ*

    *ತಿಂಥಣಿ ಮೌನೇಶ್ವರ ದೇವಸ್ಥಾನದ ಬಳಿ ಹುಲಿ ಚರ್ಮ ಪತ್ತೆ*

    *ಸತ್ಯಕಾಮ ವಾರ್ತೆ ಸುರಪುರ:*
    ತಾಲೂಕಿನ ತಿಂಥಣಿ ಗ್ರಾಮದಲ್ಲಿನ ಜಗದ್ಗುರು ಮೌನೇಶ್ವರ ದೇವಸ್ಥಾನದ ಬಳಿಯಲ್ಲಿನ ಈಶ್ವರ ದೇವಸ್ಥಾನದ ಮುಂಭಾಗದಲ್ಲಿನ ಪಾನ್ ಡಬ್ಬಿಯ ಮೇಲೆ ಹುಲಿ ಚರ್ಮ ಪತ್ತೆಯಾಗಿದ್ದು,ಎಲ್ಲರಲ್ಲಿ ಆಶ್ಚರ್ಯ ಮೂಡಿಸಿದೆ.

    ಶನಿವಾರ ರಾತ್ರಿ ಈಶ್ವರ ದೇವಸ್ಥಾನದ ಬಳಿಯಲ್ಲಿನ ಪಾನ್ ಡಬ್ಬಾದ ಮೇಲೆ ಪ್ಲಾಸ್ಟಿಕ್ ಇರುವುದನ್ನು ನೋಡಿದ ಸ್ಥಳಿಯರು ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿಯನ್ನು ನೀಡಿದ್ದಾರೆ,ನಂತರ ತಡರಾತ್ರಿ 1 ಗಂಟೆಯ ವೇಳೆಗೆ ಸುರಪುರ ಠಾಣೆಯ ಪಿಎಸ್‌ಐ ಕೃಷ್ಣಾ ಸುಬೇದಾರ ಮತ್ತು ತಂಡ ಆಗಮಿಸಿ ನೋಡಿದಾಗ, ಪ್ಲಾಸ್ಟಿಕ್‌ನಲ್ಲಿ ಹುಲಿ ಚರ್ಮ ಇರುವುದು ಗೊತ್ತಾಗಿದೆ.ನಂತರ ಅದನ್ನು ಠಾಣೆಗೆ ತರಲಾಗಿದೆ.ನಂತರ ರವಿವಾರ ಮುಂಜಾನೆ ತಿಂಥಣಿ ಗ್ರಾಮದಲ್ಲಿ ಹುಲಿ ಚರ್ಮ ದೊರೆತ ಸ್ಥಳಕ್ಕೆ ತೆರಳಿ ಪಂಚನಾಮೆ ಮಾಡಲಾಗಿದೆ.

    ನಂತರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹುಲಿ ಚರ್ಮವನ್ನು ಒಪ್ಪಿಸಲಾಗಿದೆ.ಈ ಸಂದರ್ಭದಲ್ಲಿ ಭಾಗವಹಿಸಿದ್ದ ತಿಂಥಣಿ ಗ್ರಾಮ ಪಂಚಾಯತಿ ಸದಸ್ಯ ಬೈರಣ್ಣ ಅಂಬಿಗೇರ ಮಾತನಾಡಿ, ಈಶ್ವರ ದೇವಸ್ಥಾನದಲ್ಲಿ ಸಂಗಯ್ಯ ಎನ್ನುವಂತೆ ಸಾಧು ಒಬ್ಬರು ಇರುತ್ತಿದ್ದರು,ಅವರು ಇತ್ತೀಚೆಗೆ ಕೆಲ ದಿನಗಳ ಹಿಂದೆ ಕಾಣೆಯಾಗಿದ್ದಾರೆ,ಅವರ ಕೊಠಡಿಯ ಬೀಗವನ್ನು ತೆಗೆಯಲಾಗಿದೆ, ಈ ಹುಲಿ ಚರ್ಮ ಅವರ ಕೊಠಡಿಯಲ್ಲೆ ಇರುವುದಾಗಿರಬಹುದು ಎಂದು ಅನುಮಾನ ವ್ಯಕ್ತ ಪಡಿಸಿದ್ದಾರೆ.

    ಅಲ್ಲದೆ ದಲಿತ ಸೇನೆ ತಾಲೂಕು ಅಧ್ಯಕ್ಷ ಮರಿಲಿಂಗಪ್ಪ ಗುಡಿಮನಿ ಹುಣಸಿಹೊಳೆ ಮಾತನಾಡಿ, ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ತನಿಖೆ ಮಾಡಿ ಹುಲಿ ಚರ್ಮ ಯಾರಿಗೆ ಸೇರಿದ್ದು,ಇದು ಎಲ್ಲಿಂದ ಬಂತು ಮತ್ತು ಇದರ ಹಿಂದೆ ಯಾರಿದ್ದಾರೆ ಎನ್ನುವುದು ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    1)
    ಹುಲಿ ಚರ್ಮದಂತೆ ಕಾಣಿಸುತ್ತದೆ ಆದರೆ ಇದು ಅಸಲಿಯೋ ನಕಲಿಯೋ ಎನ್ನುವುದು ಪ್ರಯೋಗಾಲಯದಿಂದ ತಿಳಿದು ಬರಲಿದೆ,ಇದು ಎಲ್ಲಿಂದ ಬಂತು ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡಬೇಕಿದೆ-

    *ಕೃಷ್ಣಾ ಸುಬೇದಾರ, ಪಿಎಸ್‌ಐ*
    ——————–

    2)
    ಹುಲಿಯ ಚರ್ಮ ಈಶ್ವರ ದೇವಸ್ಥಾನದಲ್ಲಿದ್ದ ಸಂಗಯ್ಯ ಎನ್ನುವ ಸಾಧುವಿಗೆ ಸೇರಿದ್ದು ಎನ್ನುವ ಅನುಮಾನವಿದೆ ಸರಿಯಾದ ತನಿಖೆ ನಡೆಸಿ ಆರೋಪಿಗಳ ಪತ್ತೆ ಮಾಡಿ ಕಠಿಣ ಶಿಕ್ಷೆ ನೀಡಬೇಕು

    *ಬೈರಣ್ಣ ಅಂಬಿಗೇರ,*
    *ಗ್ರಾ.ಪಂ ಸದಸ್ಯ ತಿಂಥಣಿ*
    —————–

    3)
    ರಾಷ್ಟ್ರ ಪ್ರಾಣಿ ಹುಲಿಯ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಹುಲಿಯನ್ನು ಕೊಂದಿರುವುದು ಮಹಾ ಅಪರಾಧವಾಗಿದ್ದು, ಸರಿಯಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ನಮ್ಮ ಸಂಘಟನೆ ಹೋರಾಟ ನಡೆಸಲಿದೆ

    *ಮರಿಲಿಂಗಪ್ಪ ಗುಡಿಮನಿ*
    *ದಲಿತ ಸೇನೆ ತಾ.ಅಧ್ಯಕ್ಷ*

  • ಪ್ರಧಾನ ಮಂತ್ರಿ ಜನೌಷದಿ ಕೇಂದ್ರಕ್ಕೆ ಬೀಗ

    ಪ್ರಧಾನ ಮಂತ್ರಿ ಜನೌಷದಿ ಕೇಂದ್ರಕ್ಕೆ ಬೀಗ

    *ಸತ್ಯಕಾಮ ವಾರ್ತೆ ಶಹಾಪುರ*
    *ವರದಿ:ಕುದಾನ್ ಸಾಬ್*
    ಶಹಾಪುರ : ನಗರದ ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷದಿ ಕೇಂದ್ರಕ್ಕೆ ಬೆಳ್ಳಗೆ 10ಗಂಟೆಯಾದರು ಬೀಗ ಹಾಕಿರುವುದು ಕಂಡು ಬಂದಿದೆ,

    ಬೆಳ್ಳಗೆ 9 ಗಂಟೆಗೆ ತೆರಯಬೇಕಾದ ಈ ಜನೌಷಧ ಕೇಂದ್ರ ಬೆಳ್ಳಗೆ 10ಗಂಟೆಯಾದರು ತೆರೆದಿಲ್ಲಾ, ಇದ್ದರಿಂದ್ದಾಗಿ ಔಷದಿ ಪಡೆಯಲು ಬಂದಿದ್ದ ರೋಗಿಗಳು ಸಂಕಷ್ಟ ಅನುಭವಿಸಿದರು.

    ದುಬಾರಿ ಬೆಲೆತೆತ್ತು ಖರೀದಿಸಲು ಸಂಕಷ್ಟ ಎದುರಿಸುತ್ತಿದ್ದ ಬಡ ಜನರಿಗೆ ಅಗ್ಗದ ಬೆಲೆಯಲ್ಲಿ ಮಾತ್ರೆ-ಔಷಧಗಳು ದೊರೆಯಲೆಂದು ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರಗಳನ್ನು ತೆರೆದಿದೆ.