Author: Satyakam NewsDesk

  • ಸುಕ್ಷೇತ್ರ ಅಬ್ದುಲ್ ಭಾಷಾ ದೇವಸ್ಥಾನದ ಬಳಿ ಜೂಜಾಟ ಜೋರು

    ಸುಕ್ಷೇತ್ರ ಅಬ್ದುಲ್ ಭಾಷಾ ದೇವಸ್ಥಾನದ ಬಳಿ ಜೂಜಾಟ ಜೋರು

    ಸತ್ಯಕಾಮ ವಾರ್ತೆ ಯಾದಗಿರಿ:
    ಜಿಲ್ಲೆಯ ಶಹಾಪುರ ತಾಲೂಕಿನ ಇಬ್ರಾಹಿಂಪುರದ ಸುಕ್ಷೇತ್ರ ಅಬ್ದುಲ್ ಭಾಷ ದೇವಾಲಯದ ಬಳಿ ಗುರುವಾರ ಮದ್ಯಾಹ್ನ ಜೂಜುಕೋರರು ಯಾರ ಭಯವಿಲ್ಲದೆ ರಾಜಾರೋಷವಾಗಿ ಜೂಜಾಟದಲ್ಲಿ ತೊಡಗಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹೌದು ಇಬ್ರಾಹಿಂಪುರದ ಸುಕ್ಷೇತ್ರ ಅಬ್ದುಲ್ ಭಾಷ ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬರುತ್ತದೆ. ಭಕ್ತಿ ಭಾವದಿಂದ ದೇವರ ಮೊರೆ ಹೋಗುತ್ತಾರೆ. ಕಷ್ಟಗಳನ್ನು ನಿಭಾಯಿಸುವ ಶಕ್ತಿ ನೀಡೆಂದು ಭಕ್ತರು ದೇವರ ಬಳಿ ಅಂಗಲಾಚುತ್ತಾರೆ. ಆದರೆ ಇತ್ತೀಚಿಗೆ ಇಂತಹ ಪುಣ್ಯಕ್ಷೇತ್ರದ ಬಳಿ ಜೂಜಾಕೋರರು ಯಾರ ಭಯವಿಲ್ಲದೆ ಜೂಜಾಟವಾಡುತ್ತಿದ್ದೂ, ದೇವಸ್ಥಾನದ ಸುತ್ತಮುತ್ತಲಿನ ಜಾಗವನ್ನು ಜೂಜುಕೋರರು ಇಸ್ಪೀಟ್ ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದರೆ ಎಂದು ಭಕ್ತರು ಆರೋಪಿಸುತ್ತಿದ್ದಾರೆ.

    ಭಗವಂತನ ಸನ್ನಿಧಿ ಅಕ್ರಮ ಚಟುವಟಿಕೆ ತಾಣವಾಗಿರುವುದು ಸರಿಯಲ್ಲ. ಈ ತಾಣಗಳು ವಿಶೇಷವಾಗಿ ದೇವಾಲಯಕ್ಕೆ ಬರುವ ಭಕ್ತರನ್ನು ಕೈಬೀಸಿ ಕರೆಯುತ್ತಿವೆ, ಇದ್ದರಿಂದ ದೇವಾಲಯಕ್ಕೆ ಬಂದ ಭಕ್ತರು ಜೂಜಾಟದಲ್ಲಿ ತೊಡಗಿಕೊಂಡು ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ, ಆದ್ದರಿಂದ ಇಂತಹ ಚಟುವಟಿಕೆ ನಡೆಸುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಒಂದು ವೇಳೆ ಪೊಲೀಸರು ಜೂಜಾಟ ತಡೆಯದಿದ್ದರೆ ದೇವಸ್ಥಾನದ ಸ್ಥಳಗಳು ಮುಂದಿನ ದಿನಗಳಲ್ಲಿ ನಾನಾ ಅಕ್ರಮಗಳ ತಾಣವಾಗಿ ಮಾರ್ಪಡುತ್ತವೆ ಎಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.

    ಪೊಲೀಸರು ಇತ್ತ ಗಮನಹರಿಸಿ ಜೂಜಾಟ ನಿಯಂತ್ರಣಕ್ಕೆ ಬ್ರೇಕ್ ಹಾಕುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

  • ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಘದ ಪದಾಧಿಕಾರಿಗಳ ಅವಿರೋಧ ಆಯ್ಕೆ

    ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಘದ ಪದಾಧಿಕಾರಿಗಳ ಅವಿರೋಧ ಆಯ್ಕೆ

     


    ಕಲಬುರಗಿ: ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಘದ ಸಭೆಯು ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೆಸ್ವಾಮ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಸಂಪಾದಕರ ಸಮಸ್ಯೆಗಳು ಹಾಗು ಅದರ ಪರಿಹಾರ ಹೇಗೆ ಕಂಡುಕೊಳ್ಳಬೇಕೆಂದು ಎಳೆ ಎಳೆಯಾಗಿ ವಿವರಿಸಿದರು. ತದ ನಂತರ ಕಲಬುರಗಿ ಜಿಲ್ಲಾ ಸಮಿತಿ ರಚನೆಗಾಗಿ ಹೆಸರುಗಳನ್ನು ಸೂಚಿಸಲು ತಿಳಿಸಿದಾಗ ಎಲ್ಲ ಸಂಪಾದಕರು ಒಮ್ಮತದ ಅಭ್ಯರ್ಥಿಗಳನ್ನು ಅವಿರೋಧವಾಗಿ ಕಲಬುರಗಿ ಜಿಲ್ಲಾ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘಕ್ಕೆ ಆಯ್ಕೆಯಾದರು.
    ಜಿಲ್ಲಾ ಅಧ್ಯಕ್ಷರಾಗಿ ಸಿದ್ರಾಮಪ್ಪ ಮಾಲಿಬಿರಾದಾರ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಪಿ. ಮಣ್ಣೂರ, ಉಪಾಧ್ಯಕ್ಷರಾಗಿ ಸುರೇಶ ಗೌರೆ, ಅಜೀಜುಲ್ಲಾ ಸರ್ಮಸ್ತ, ಚಂದ್ರಕಾಂತ ಹಾವನೂರ, ಭರತ ಖಮಿತಕರ, ವಾಸುದೇವ ದೇಸಾಯಿ, ಖಜಾಂಚಿಯಾಗಿ ಗುರುರಾಜ ಕುಲಕರ್ಣಿ, ಕಾರ್ಯದರ್ಶಿಗಳಾಗಿ ಹಣಮಂತ ಬೋಧನಕರ್, ಶಿವಕುಮಾರ ಸಿಂಧೆ, ಸಹ ಕಾರ್ಯದರ್ಶಿಗಳಾಗಿ ವಿಜಯಕುಮಾರ ಜಿಡಗಿ, ಮಲ್ಲಿಕಾರ್ಜುನ ಜೋಗ, ಜಂಟಿ ಕಾರ್ಯದರ್ಶಿಗಳಾಗಿ ಜಯಪ್ರಕಾಶ ಪೂಜಾರಿ, ಅವಿನಾಶ ಕೊಳ್ಳೂರ, ಸಂಘಟನಾ ಕಾರ್ಯದರ್ಶಿಗಳಾಗಿ ಬಾಲಾಜಿ ಚಿತ್ತೇಕರ, ಅನೀಲ ಕಪನೂರ ಮತ್ತು ರಾಜ್ಯ ಸಮಿತಿಯ ಹಿರಿಯ ಸಲಹೆಗಾರರಾಗಿ ಸಿದ್ದಣ್ಣ ಮಾಲಗಾರ, ಶಿವರಾಯ ದೊಡ್ಮನಿ, ದೇವೇಂದ್ರಪ್ಪ ಕಪನೂರ, ಶಂಕರ ಕೋಡ್ಲಾ, ಮತ್ತು ಬಿ.ವ್ಹಿ.ಚಕ್ರವರ್ತಿಯವರನ್ನು ಆಯ್ಕೆ ಮಾಡಲಾಗಿದೆ.‌ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಬಸವ ಬಾಗಲವಾಡ, ರಾಜ್ಯ ಖಜಾಂಚಿ ಖಾನಸಾಬ ಮೋಮಿನ, ರಾಜ್ಯ ಕಾರ್ಯದರ್ಶಿ ಸುರೇಶ ಶಿಂಧೆ ಮತ್ತು ರಾಜ್ಯ ಸಹ ಕಾರ್ಯದರ್ಶಿ ಬೌದ್ಧಪ್ರಿಯ ನಾಗಸೇನ ಮತ್ತಿತರರು ಉಪಸ್ಥಿತರಿದ್ದರೆಂದು ನೂತನ ಜಿಲ್ಲಾ‌ ಪ್ರಧಾನ ಕಾರ್ಯದರ್ಶಿ ಆನಂದ‌ ಪಿ. ಮಣ್ಣೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಎಸ್.ಎಸ್.ಎಲ್.ಸಿ. ಪರೀಕ್ಷೆ ನಕಲು,ಇಬ್ಬರ ಶಿಕ್ಷಕರ ಅಮಾನತ್ತು

     

    ಸತ್ಯಕಾಮ ವಾರ್ತೆ ಯಾದಗಿರಿ:
    ಜಿಲ್ಲೆಯಾದ್ಯಂತ ಎಸ್.ಎಸ್.ಎಲ್. ಸಿ ಪರೀಕ್ಷೆ ಆರಂಭವಾಗಿದ್ದು, ಸೋಮವಾರ ನಡೆದ ಪ್ರಥಮ ಭಾಷೆ ಪರೀಕ್ಷೆಯಲ್ಲಿ ನಕಲು ಮಾಡಲು ಸಹಕರಿಸಿದ ಆರೋಪದ ಮೇರೆಗೆ ಇಬ್ಬರು ಸಹ ಶಿಕ್ಷಕರನ್ನು ಅಮಾನತ್ತುಗೊಳಿಸಿ ಡಿ.ಡಿ.ಪಿ.ಐ
    ಮಂಜುನಾಥ ಎಚ್.ಟಿ. ಅವರು ಆದೇಶ ಹೊರಡಿಸಿದ್ದಾರೆ.

    ಸುರಪುರ ತಾಲೂಕಿನ ಹುಣಸಗಿ ಸರಕಾರಿ ಪದವಿ ಪೂರ್ವ ಕಾಲೇಜು (ಬಾಲಕರ) ಮತ್ತು ಸುರಪುರ ಪದವಿ ಪೂರ್ವ ಕಾಲೇಜು (ಬಾಲಕರ) ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರದಲ್ಲಿ ಕ್ರಮವಾಗಿ ಸುರಪುರ ತಾಲೂಕಿನ ಏವೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸಾಹೇಬಗೌಡ ಉಕ್ಕಾಲಿ ಮತ್ತು ಸುರಪುರ ತಾಲೂಕಿನ ಝಂಡದಕೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಹಣಮಂತ್ರಾಯ ಇವರು ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ವಿಫಲರಾದ ಕಾರಣ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು-1957 ನಿಯಮ 10(1) ರನ್ವಯ ಅಮಾನತ್ತು ಮಾಡಲಾಗಿದೆ.

    ಯಾದಗಿರಿ ಜಿಲ್ಲಾ ಪಂಚಾಯತ ಸಿ.ಇ.ಓ ಅವರು ವೆಬ್ ಕಾಸ್ಟಿಂಗ್ ಸಿ.ಸಿ. ಕ್ಯಾಮರಾ ವೀಕ್ಷಣೆ ಮಾಡಿದಾಗ ಹುಣಸಗಿ ಮತ್ತು ಸುರಪುರ ಈ ಪರೀಕ್ಷಾ ಕೇಂದ್ರದಲ್ಲಿ ನಕಲು ನಡೆಯುತ್ತಿದರು, ಕೊಠಡಿ ಮೇಲ್ವಿಚಾರಕರು ಯಾವುದೇ ಕ್ರಮ‌ ಕೈಗೊಳ್ಳದ ಕಾರಣ ಕೊಠಡಿ ಮೆಲ್ವಿಚಾರಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿ.ಡಿ.ಪಿ.ಐ ಅವರಿಗೆ ಸೂಚಿಸಿದರು.

    ನೌಕರರು ಕರ್ನಾಟಕ‌ ನಾಗರಿಕ ಸೇವಾ ನಿಯಮ-98ರಂತೆ ಜೀವನಾಂಶ ಭತ್ಯೆ ಪಡೆಯಲು ಅರ್ಹರಿದ್ದು, ಸಕ್ಷಮ ಪ್ರಾಧಿಕಾರಿಯ ಲಿಖಿತ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

  • ಸತ್ಯಕಾಮ ವರದಿ ಫಲಶ್ರುತಿ : ಗುತ್ತಿಗೆದಾರರಿಂದ ಹಣ ಪಡೆದ ಮೀನಾಕ್ಷಿ ಅಮಾನತ್ತು

    ಸತ್ಯಕಾಮ ವರದಿ ಫಲಶ್ರುತಿ : ಗುತ್ತಿಗೆದಾರರಿಂದ ಹಣ ಪಡೆದ ಮೀನಾಕ್ಷಿ ಅಮಾನತ್ತು

     

    *ಸತ್ಯಕಾಮ ವಾರ್ತೆ ಯಾದಗಿರಿ:*
    ಶಹಾಪುರ ತಾಲೂಕು ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕಿ ಮೀನಾಕ್ಷಿ ಎಂಬುವವರು ಗುತ್ತಿಗೆದಾರರಿಂದ 14 ಸಾವಿರ ರೂ ಹಣ ಪಡೆದಿರುವ ಬಗ್ಗೆ ಸತ್ಯಕಾಮ ವೆಬ್ ಮತ್ತು ಪತ್ರಿಕೆಯಲ್ಲಿ ವರದಿ ಪ್ರಕಟಿಸಿಲಾಗಿತ್ತು, ವರದಿ ಪ್ರಕಟವಾದ ಬೆನ್ನಲೇ ಜಿಲ್ಲಾಪಂಚಾಯತ್ ಸಿಇಒ ಗರಿಮಾ ಪನ್ವಾರ್ ಕಿರಿಯ ಲೆಕ್ಕ ಸಹಾಯಕಿ ಮೀನಾಕ್ಷಿಯವರನ್ನು ಅಮಾನತ್ತು ಮಾಡಿ ಆದೇಶಿಸಿದ್ದಾರೆ.

    ಪ್ರಸ್ತುತ ತಾಲ್ಲೂಕು ಪಂಚಾಯತ ಕಾರ್ಯಾಲಯ ಶಹಾಪೂರನಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಮೀನಾಕ್ಷಿಯವರು ಗುತ್ತಿಗೆದಾರರಿಂದ ಹಣ ಪಡೆದಿರುವುದು ಸರ್ಕಾರಿ ನೌಕರನಿಗೆ ತಕ್ಕುದಲ್ಲದ ರೀತಿಯಲ್ಲಿ ನಡೆದುಕೊಂಡು ದುರ್ನಡತೆಯನ್ನು ಎಸಗಿರುವುದರಿಂದ ಹಾಗೂ ಕರ್ನಾಟಕ ನಾಗರೀಕ ಸೇವಾ(ನಡತೆ) ನಿಯಮಗಳು 2021, ನಿಯಮ 3ರ ನಿಯಮ (i) (ii) (iii) ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ, ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು * ಮೇಲ್ಮನವಿ) ನಿಯಮಗಳು, 1957 ರ ನಿಯಮ 10(1)(ಡಿ) ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ.

    ಸದರಿಯವರು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ. ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮಗಳು, 1957 ರ ನಿಯಮ 98 ರ ಅನುಸಾರ ಜೀವನ ನಿರ್ವಹಣೆ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಎಂದು ಸಿಇಒ ಗರಿಮಾ ಪನ್ವಾರ್ ಅವರು ಆದೇಶಿಸಿದ್ದಾರೆ.

  • ಹತ್ತನೇ ತರಗತಿ ಪರೀಕ್ಷೆ ಬರೆದ ತಾಯಿ- ಮಗ

    ಹತ್ತನೇ ತರಗತಿ ಪರೀಕ್ಷೆ ಬರೆದ ತಾಯಿ- ಮಗ

    ಸತ್ಯಕಾಮ ವಾರ್ತೆ ಶಹಾಪುರ:
    ಎಸ್,ಎಸ್.ಎಲ್ ಸಿ.ಪರೀಕ್ಷೆಯ ಮೊದಲ ದಿನವಾದ ಸೋಮವಾರದಂದು ತಾಲೂಕಿನಾದ್ಯಂತ ಸುಗಮವಾಗಿ ನಡೆದಿದ್ದು.ಅದರಲ್ಲೂ ತಾಲೂಕಿನ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮಗನೊಂದಿಗೆ ಇಂದು ತಾಯಿ ಹತ್ತನೇ ತರಗತಿಯ ಪರೀಕ್ಷೆ ಬರೆಯಲು ಆಗಮಿಸಿದ್ದು ವಿಶೇಷವಾಗಿತ್ತು.ಒಟ್ಟು ಈ ಪರೀಕ್ಷಾ ಕೇಂದ್ರದಲ್ಲಿ 17 ಬ್ಲಾಕ್ ಗಳಿದ್ದು 387 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು,14 ವಿದ್ಯಾರ್ಥಿಗಳು ಗೈರು ಹಾಜರಿದ್ದರು.

    33 ವರ್ಷದ ಗಂಗಮ್ಮ ಎಂಬ ಮಹಿಳೆ ಉತ್ಸಾಹದಿಂದ ಪರೀಕ್ಷೆ ಬರೆಯಲು ಆಗಮಿಸಿದ್ದರು, ಎಸ್.ಎಸ್,ಎಲ್,ಸಿ ಪರೀಕ್ಷೆ ಬರೆಯುವ ಮೂಲಕ ರಾಜ್ಯದಾದ್ಯಂತ ಗಮನ ಸೆಳೆದಿದ್ದಾರೆ,ನನಗೆ ಓದಬೇಕೆಂಬ ಬಯಕೆ ತುಂಬಾ ಇತ್ತು ಆದರೆ ಮನೆಯಲ್ಲಿ ಬಡತನ ಹಾಗೂ ನನಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿಕೊಟ್ಟ ಕಾರಣದಿಂದಾಗಿ ನನಗೆ ವಿದ್ಯಾಭ್ಯಾಸ ಮೂಟಕು ಗೊಳಿಸಲು ಕಾರಣವಾಯಿತು,ಈಗ ನನಗೆ ಅವಕಾಶ ಸಿಕ್ಕಿದೆ,ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕಷ್ಟಪಟ್ಟು ಓದಿ 10ನೇ ತರಗತಿ ಪಾಸ್ ಮಾಡಿ ಯಾವುದಾದರೂ ಸರ್ಕಾರಿ ಹುದ್ದೆ ಪಡಿಯಬೇಕೆಂಬ ಆಸೆ ನನ್ನೊಳಗೆ ಚಿಗುರೊಡೆದ ಕಾರಣ ಇಂದು ನನ್ನ ಮಗ ಮಲ್ಲಿಕಾರ್ಜುನ ಜೊತೆಗೆ ನಾನು ಹತ್ತನೇ ತರಗತಿಯ ಪರೀಕ್ಷೆ ಬರೆಯುತ್ತಿದ್ದೇನೆ ಎಂದರು.

    ಮನೆಯಲ್ಲಿ ತನ್ನ ಮಗನೊಂದಿಗೆ ಸತತ ಅಭ್ಯಾಸ ಮಾಡಿ ತನಗಿಂತ ಹದಿನೈದು ವರ್ಷದ ಕಿರಿಯ ವಿದ್ಯಾರ್ಥಿಗಳ ಜೊತೆಗೆ ಇಂದು ಪರೀಕ್ಷೆ ಬರೆಯಲು ತುಂಬಾ ನನಗೆ ಖುಷಿ ನೀಡುತ್ತಿದೆ ಎಂದು ಮುಗುಳ್ನಕ್ಕರು ಕಾರಣ ಇಷ್ಟೇ. ನನ್ನಂತ ಅದೆಷ್ಟೋ ಜನ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ,ಅವರನ್ನೆಲ್ಲರನ್ನು ಪ್ರೇರೇಪಿಸುತ್ತಾ,ಶಾಲೆಗೆ ಕರೆ ತರುವುದೇ ನನ್ನ ಮುಖ್ಯ ಉದ್ದೇಶವಾಗಿದೆ.ಕಲಿಯುವವರಿಗೆ ಯಾವುದೇ ಸಮಯ ಹಾಗೂ ವಯಸ್ಸಿನ ಮಿತಿ ಇಲ್ಲ ಎಂಬ ಮಾತನ್ನು ಗಂಗಮ್ಮಳು ಮತ್ತೊಮ್ಮೆ ಸಾಬೀತು ಮಾಡಿದ್ದಾಳೆ.

    ಅಭ್ಯಾಸಕ್ಕೆ ವಯಸ್ಸಿನ ಹಂಗಿಲ್ಲ ಎಂಬ ಮಾತಿಗೆ ಗಂಗಮ್ಮಳೆ ಸಾಕ್ಷಿ, ಇಂಥ ವಯಸ್ಸಿನಲ್ಲೂ ಮಗನೊಂದಿಗೆ ಪರೀಕ್ಷೆ ಬರೆಯಲು ಮುಂದಾಗಿದ್ದು ನಿಜಕ್ಕೂ ಇವರ ಕಾರ್ಯ ಶ್ಲಾಘನೀವಾದದ್ದು,ಎಂದು ಗ್ರಾಮದ ನಾಗರಿಕರು,ಪ್ರಗತಿಪರ ಚಿಂತಕರು ಹರ್ಷ ಭಕ್ತ ಪಡಿಸಿದ್ದಾರೆ ಶಿಕ್ಷಣ ವಂಚಿತ ಮಹಿಳೆಯರಿಗೆ ಇವರೇ ಮಾದರಿ ಎಂಬುವುದು ತೋರಿಸಿಕೊಟ್ಟಿದ್ದಾರೆ.ಹಲವಾರು ಜವಾಬ್ದಾರಿಗಳ ನಡುವೆ ಶ್ರದ್ಧೆಯಿಂದ ಮಾಡಿದ ಸಾಧನೆ ನಮ್ಮ ಮಕ್ಕಳಿಗೆ ಮಾದರಿಯಾದರೆ ಎಷ್ಟೊಂದು ಒಳ್ಳೆಯದು ಎಂದೆನಿಸುತ್ತಿದೆ.

  • ಗುತ್ತಿಗೆದಾರರಿಂದ 14 ಸಾವಿರ ಹಣ ಪಡೆದ ದ್ವಿತೀಯ ದರ್ಜೆ ಸಹಾಯಕಿ

    ಗುತ್ತಿಗೆದಾರರಿಂದ 14 ಸಾವಿರ ಹಣ ಪಡೆದ ದ್ವಿತೀಯ ದರ್ಜೆ ಸಹಾಯಕಿ

    *ಸತ್ಯಕಾಮ ವಾರ್ತೆ ಯಾದಗಿರಿ:*
    ಶಹಾಪುರ ತಾಲೂಕು ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕಿ ಮಿನಾಕ್ಷಿ ಎಂಬುವವರು ಗುತ್ತಿಗೆದಾರರಿಂದ 14ಸಾವಿರ ರೂ ಲಂಚವನ್ನು ರಾಜಾರೋಷವಾಗಿ ಪಡೆದಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗಗೊಂಡಿದೆ.

    ಕಳೆದ ನಾಲ್ಕೈದು ದಿನಗಳಯಿಂದಷ್ಟೇ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದೂ, ತಾಲೂಕು ಪಂಚಾಯಿತಿ ಕಚೇರಿಯೊಳಗೆ ದ್ವಿತೀಯ ದರ್ಜೆ ಸಹಾಯಕಿ ಗುತ್ತಿಗೆದಾರರು ಮಾತುಕತೆ ನಡೆಸಿ 14ಸಾವಿರ ರೂಪಾಯಿ ಹಣ ನೀಡಿರುವ 6ನಿಮಿಷ 50 ಸೆಕೆಂಡ್ ಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆ ವಿಡಿಯೋದಲ್ಲಿ ಸರ್ ಗೆ 3% ಎಂದು ಹೇಳಲಾಗಿದ್ದು ಆ ಸರ್ ಯಾರು ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ತಾ. ಪಂಚಾಯತಿಯಲ್ಲಿ ಕಾಮಗಾರಿ ಟೆಂಡರ್ ಪಡೆಯಬೇಕಾದರೆ 4% ಲಂಚ ಅಧಿಕಾರಿಗಳ ಜೇಬಿಗೆ ತುಂಬಿಸಬೇಕಾ ಎಂದು ಸಾರ್ವಜನಿಕರು ಮಾತನಾಡಿಕೊಳ್ಳತ್ತಿದ್ದಾರೆ.

  • ಕರ್ನಾಟಕದ ೨೦ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್​ ಘೋಷಣೆ: ೯ ಹಾಲಿ ಸಂಸದರಿಗೆ ಕೊಕ್​, ಜಾಧವ್ ಮತ್ತೆ ಕಣಕ್ಕೆ

    ಕರ್ನಾಟಕದ ೨೦ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್​ ಘೋಷಣೆ: ೯ ಹಾಲಿ ಸಂಸದರಿಗೆ ಕೊಕ್​, ಜಾಧವ್ ಮತ್ತೆ ಕಣಕ್ಕೆ


    ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕದ ೨೮ ಲೋಕಸಭೆ ಕ್ಷೇತ್ರಗಳ ಪೈಕಿ ೨೦ ಕ್ಷೇತ್ರಗಳಿಗೆ ಟಿಕೆಟ್​ ಪ್ರಕಟಿಸಲಾಗಿದೆ. ಕೆಲ ಹಾಲಿ ಸಂಸದರಿಗೆ ಕೊಕ್ ಕೊಡಲಾಗಿದೆ. ಹೊಸಬರಿಗೆ ಅವಕಾಶ ನೀಡಲಾಗಿದೆ. ವಿರೋಧದ ನಡುವೆಯೂ ಕೆಲವರಿಗೆ ಮಣೆ ಹಾಕಲಾಗಿದ್ದು, ಬಿಜೆಪಿ ಸದಸ್ಯತ್ವ ಪಡೆಯದೇ ಇರುವ ಡಾ. ಮಂಜುನಾಥ್ ಅವರಿಗೂ ಟಿಕೆಟ್ ಪ್ರಕಟಿಸಲಾಗಿದ್ದು, ಕಲಬುರಗಿಯಿಂದ ಉಮೇಶ್ ಜಾಧವ್ ಮತ್ತೆ ಕಣಕ್ಕಿಳಿದಿದ್ದಾರೆ.
    ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ ೯೫,೪೫೨ ಮತಗಳಿಂದ ಖರ್ಗೆ ಅವರನ್ನು ಸೋಲಿಸಿದ್ದರು. “ಸೋಲಿಲ್ಲದ ಸರದಾರ” ಎಂದು ಜನಪ್ರಿಯವಾಗಿ ಕರೆಯಲ್ಪಡುವ (ಸೋಲದ ನಾಯಕ), ಇದು ಹಲವಾರು ದಶಕಗಳ ಕಾಲದ ಖರ್ಗೆಯವರ ರಾಜಕೀಯ ಜೀವನದಲ್ಲಿ ಮೊದಲ ಚುನಾವಣಾ ಸೋಲಾಗಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
    ಕಟೀಲ್, ಪ್ರತಾಪ್, ಡಿವಿಎಸ್​ಗೆ ಕೊಕ್: ೨೦ ಕ್ಷೇತ್ರಗಳ ಪೈಕಿ ೯ ಜನ ಹಾಲಿ ಸಂಸದರಿಗೆ ಟಿಕೆಟ್​ ಕೈತಪ್ಪಿದೆ. ಇದರಲ್ಲಿ ಚಾಮರಾಜನಗರದ ವಿ ಶ್ರೀನಿವಾಸ್​ ಪ್ರಸಾದ್​, ತುಮಕೂರಿನ ಎಲ್​ ಬಸವರಾಜ್, ಹಾವೇರಿ ಶಿವಕುಮಾರ್ ಉದಾಸಿ ಈ ಹಿಂದೆ ಸ್ಪರ್ಧೆ ಮಾಡುವುದಿಲ್ಲವೆಂದು ಘೋಷಿಸಿದ್ದರು. ಅದರಂತೆಯೇ ಈ ಕ್ಷೇತ್ರಗಳಿಗೆ ಹೊಸಬರಿಗೆ ಮಣೆ ಹಾಕಲಾಗಿದೆ. ಹಾವೇರಿ ಕ್ಷೇತ್ರದಲ್ಲಿ ತಮ್ಮ ​ಪುತ್ರನಿಗೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ನಿರಾಸೆ ಉಂಟಾಗಿದೆ. ಈ ಕ್ಷೇತ್ರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕೆ ಇಳಿಸಲಾಗಿದೆ.
    ಮತ್ತೊಂದೆಡೆ ತುಮಕೂರಿನಲ್ಲಿ ಹಿರಿಯ ನಾಯಕ ವಿ ಸೋಮಣ್ಣ ಅವರಿಗೆ ಟಿಕೆಟ್​ ಘೋಷಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಸೋತಿದ್ದರು. ನಿರೀಕ್ಷೆಯಂತೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಮೈಸೂರು ಸಂಸದ ಪ್ರತಾಪ್ ಸಿಂಹ, ಬೆಂಗಳೂರು ಉತ್ತರ ಕ್ಷೇತ್ರದ ಡಿ.ವಿ. ಸದಾನಂದ ಗೌಡ ಅವರಿಗೆ ಟಿಕೆಟ್​ ನಿರಾಕರಿಸಲಾಗಿದೆ. ಮೈಸೂರಿನಲ್ಲಿ ಪ್ರತಾಪ್​ ಸಿಂಹ ಬದಲಿಗೆ ಯದುವೀರ್ ಒಡೆಯರ್ ಅವರಿಗೆ ಅವಕಾಶ ನೀಡಲಾಗಿದೆ.
    ಇದೇ ವೇಳೆ ವಿರೋಧದ ನಡುವೆಯೂ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ್ ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಅವರನ್ನು ಕಣಕ್ಕೆ ಇಳಿಸಲಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಲಾಗಿದೆ. ದಕ್ಷಿಣ ಕನ್ನಡ ಕ್ಷೇತ್ರದಿಂದ ಕಟೀಲ್​ ಬದಲಿಗೆ ಬ್ರಿಜೇಶ್​ ಚೌಟ ಅವರಿಗೆ ಟಿಕೆಟ್​ ಘೋಷಿಸಲಾಗಿದೆ.
    ಬೆಂಗಳೂರು ಕೇಂದ್ರದಿAದ ಪಿ.ಸಿ.ಮೋಹನ್ ಅವರಿಗೆ ಟಿಕೆಟ್​ ಕೈ ತಪ್ಪಲಿದೆ ಎಂಬ ವದಂತಿ ನಡುವೆಯೂ ಅವರು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಚಿಕ್ಕೋಡಿ ಕ್ಷೇತ್ರದಲ್ಲಿ ರಮೇಶ್ ಕತ್ತಿ ಬಿಗಿ ಪಟ್ಟಿನ ನಡುವೆಯೂ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ಸಿಕ್ಕಿದೆ. ಬೆಂಗಳೂರು ಗ್ರಾಮೀಣ ಕ್ಷೇತ್ರದಿಂದ ಜಯದೇವ ಆಸ್ಪತ್ರೆ ಮಾಜಿ ನಿರ್ದೇಶಕ ಡಾ.ಮಂಜುನಾಥ್ ಅವರಿಗೆ ಬಿಜೆಪಿ ಮಣೆ ಹಾಕಿದೆ.
    ಕ್ಷೇತ್ರವಾರು ಅಭ್ಯರ್ಥಿಗಳ ಮಾಹಿತಿ ಈ ಕೆಳಗಿನಂತಿದೆ.
    ಚಿಕ್ಕೋಡಿ – ಅಣ್ಣಾಸಾಹೇಬ್ ಜೊಲ್ಲೆ
    ಬಾಗಲಕೋಟೆ – ಪಿ.ಸಿ. ಗದ್ದಿಗೌಡರ್
    ವಿಜಯಪುರ – ರಮೇಶ ಜಿಗಜಿಣಗಿ
    ಕಲಬುರಗಿ – ಉಮೇಶ್ ಜಾಧವ್
    ಬೀದರ್ – ಭಗವಂತ್ ಖೂಬಾ
    ಕೊಪ್ಪಳ – ಡಾ. ಬಸವರಾಜ್ ಕ್ಯಾವತ್ತೂರು
    ಬಳ್ಳಾರಿ – ಬಿ. ಶ್ರೀರಾಮುಲು
    ಹಾವೇರಿ – ಬಸವರಾಜ ಬೊಮ್ಮಾಯಿ
    ಧಾರವಾಡ – ಪ್ರಹ್ಲಾದ್ ಜೋಶಿ
    ದಾವಣಗೆರೆ – ಗಾಯತ್ರಿ ಸಿದ್ದೇಶ್ವರ್
    ಶಿವಮೊಗ್ಗ – ಬಿ.ವೈ. ರಾಘವೇಂದ್ರ
    ಚಿಕ್ಕಮಗಳೂರು – ಉಡುಪಿ – ಕೋಟ ಶ್ರೀನಿವಾಸ್ ಪೂಜಾರಿ
    ದಕ್ಷಿಣ ಕನ್ನಡ – ಬ್ರಿಜೇಶ್​ ಚೌಟ
    ತುಮಕೂರು – ವಿ. ಸೋಮಣ್ಣ

  • ಮಾದಕ  ದ್ರವ್ಯ ಮುಕ್ತ ಗುರಿಯನ್ನು ಸಾಧಿಸುವೆಡೆ ಭಾರತ ವೇಗವಾಗಿ ಸಾಗುತ್ತಿದೆ – ಅಮಿತ್ ಶಾ

    ಮಾದಕ ದ್ರವ್ಯ ಮುಕ್ತ ಗುರಿಯನ್ನು ಸಾಧಿಸುವೆಡೆ ಭಾರತ ವೇಗವಾಗಿ ಸಾಗುತ್ತಿದೆ – ಅಮಿತ್ ಶಾ

    ನವ ದೆಹಲ್ಲಿ: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಾದಕವಸ್ತು ವ್ಯಾಪಾರ ಮತ್ತು ಅದರ ದುಷ್ಪರಿಣಾಮಗಳನ್ನು ಎದುರಿಸುವಲ್ಲಿ ಮೋದಿ ಸರ್ಕಾರದ ಯಶಸ್ಸಿನ ಕುರಿತು ಮೂರು ವೀಡಿಯೊಗಳನ್ನು ಬಿಡುಗಡೆ ಮಾಡಿದರು. ದೇಶದಲ್ಲಿ ಡ್ರಗ್ಸ್ ಪತ್ತೆ, ಜಾಲಗಳ ನಾಶ, ಅಪರಾಧಿಗಳ ಬಂಧನ ಮತ್ತು ಮಾದಕ ವ್ಯಸನಿಗಳ ಪುನರ್ವಸತಿ ಮೂಲಕ, ಮಾದಕ ದ್ರವ್ಯ ಮುಕ್ತ ಭಾರತದ ಗುರಿಯನ್ನು ಸಾಧಿಸುವತ್ತ ಮೋದಿ ಸರ್ಕಾರ ವೇಗವಾಗಿ ಸಾಗುತ್ತಿದೆ. ಮೋದಿಯವರ ನಾಯಕತ್ವ ಮತ್ತು ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಮಾದಕ ದ್ರವ್ಯ ಮುಕ್ತ ಭಾರತವು ಮುಂಬರುವ ಪೀಳಿಗೆಗೆ ಬಹುದೊಡ್ಡ ಕೊಡುಗೆಯಾಗಲಿದೆ.

    ಸ್ವಾತಂತ್ರ್ಯದ ಸುವರ್ಣ ಯುಗದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಕಟ್ಟುನಿಟ್ಟಿನ ಧೋರಣೆ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ, ಮಾದಕ ದ್ರವ್ಯ ವ್ಯಾಪಾರವನ್ನು ತಡೆಗಟ್ಟಲು ಸಿದ್ಧತೆಗಳು ಭರದಿಂದ ನಡೆಯುತ್ತಿವೆ, ಈ ಕ್ರಮಗಳ ಮೂಲಕ ಮಾದಕ ದ್ರವ್ಯಗಳ ಜಫ್ತಿ ಮತ್ತು ಬಂಧನಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಶಾ ಅವರ ನಿಷ್ಠುರ ನೀತಿಗಳಿಂದಾಗಿ, ಸರ್ಕಾರಗಳು ಮತ್ತು ಏಜೆನ್ಸಿಗಳ ನಡುವಿನ ಸಮನ್ವಯ, ಸಹಕಾರ ಮತ್ತು ಸಹಯೋಗದ ಮೂಲಕ, ಮಾದಕವಸ್ತು ವಶಪಡಿಸಿಕೊಳ್ಳುವಿಕೆಯಲ್ಲಿ ಮತ್ತು ಪ್ರಕರಣಗಳ ದಾಖಲೆಗಳಲ್ಲಿ ವೃದ್ಧಿಯಾಗಿದೆ.
    ಮೋದಿಯವರ ನಾಯಕತ್ವ ಮತ್ತು ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಗೃಹ ಸಚಿವಾಲಯವು ಅಕ್ರಮ ಮಾದಕ ದ್ರವ್ಯದ ವ್ಯಾಪಾರವನ್ನು ತಡೆಯಲು ನಡೆಸಿದ ಬಹುಮುಖ ಪ್ರಯತ್ನಗಳಿಂದ, ವಶಪಡಿಸಿಕೊಂಡ ಮಾದಕವಸ್ತುಗಳ ಪ್ರಮಾಣವು ಸುಮಾರು 100% ಹೆಚ್ಚಾಗಿವೆ ಮತ್ತು ಅದನ್ನು ವ್ಯವಹರಿಸುವವರ ವಿರುದ್ಧ ದಾಖಲಾಗುವ ಪ್ರಕರಣಗಳು 152% ಹೆಚ್ಚಾಗಿವೆ.

    ಅಂಕಿಅಂಶಗಳ ಪ್ರಕಾರ, 2006 ರಿಂದ 2013 ರ ಅವಧಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 1257 ಇತ್ತು, ಇದು 2014-2023 ರ ಅವಧಿಯಲ್ಲಿ 3 ಪಟ್ಟು ಏರಿಕೆಯಾಗಿ 3755 ಕ್ಕೆ ತಲುಪಿದೆ. 2006-13 ರ ಅವಧಿಯಲ್ಲಿ 1363 ಬಂಧನಗಳಾಗಿದ್ದವು, ಇವು 4 ಪಟ್ಟು ಹೆಚ್ಚಿ 2014-23 ಅವಧಿಯಲ್ಲಿ ಬಂಧನಗಳ ಸಂಖ್ಯೆ 5745 ಕ್ಕೆ ತಲುಪಿದೆ. 2006-13ರಲ್ಲಿ ವಶಪಡಿಸಿಕೊಂಡಿದ್ದ 1.52 ಲಕ್ಷ ಕೆಜಿ ಡ್ರಗ್ಸ್ ಪ್ರಮಾಣ ಮೋದಿ ಆಡಳಿತದಲ್ಲಿ ದ್ವಿಗುಣಗೊಂಡು 3.95 ಲಕ್ಷ ಕೆಜಿಗೆ ತಲುಪಿದೆ. 2006-13ರ ಅವಧಿಯಲ್ಲಿ ವಶಪಡಿಸಿಕೊಂಡ ಡ್ರಗ್ಸ್ ಮೌಲ್ಯವು ರೂ.768 ಕೋಟಿಯಿತ್ತು, ಇದು ಮೋದಿ ಸರ್ಕಾರದ ಅವಧಿಯಲ್ಲಿ 30 ಪಟ್ಟು ಹೆಚ್ಚಾಗಿ ರೂ.22,000 ಕೋಟಿಗೆ ತಲುಪಿದೆ.

    ಮೋದಿಯವರ ನಾಯಕತ್ವ ಮತ್ತು ಶಾ ಅವರ ದೂರದೃಷ್ಟಿಯಿಂದಾಗಿ, ಮಾದಕ ದ್ರವ್ಯ ವಿರೋಧಿ ಸಂಸ್ಥೆಗಳು 12,000 ಕೋಟಿ ರೂಪಾಯಿ ಮೌಲ್ಯದ 12 ಲಕ್ಷ ಕಿಲೋಗ್ರಾಂಗಳಷ್ಟು ಡ್ರಗ್ಸ್ಅನ್ನು ನಾಶಪಡಿಸುವ ಅಭೂತಪೂರ್ವ ಕೆಲಸವನ್ನು ಮಾಡಿವೆ. ಮಾದಕ ದ್ರವ್ಯ ಮುಕ್ತ ಭಾರತದ ಕನಸನ್ನು ನನಸಾಗಿಸಲು ಕೇಂದ್ರ ಮತ್ತು ರಾಜ್ಯ ಮಾದಕ ದ್ರವ್ಯ ಕಾನೂನು ಜಾರಿ ಸಂಸ್ಥೆಗಳ ನಡುವೆ ಉತ್ತಮ ಒಗ್ಗಟ್ಟು ಮತ್ತು ಹೊಂದಾಣಿಕೆಗಾಗಿ 2019 ರಲ್ಲಿ ನಾಲ್ಕು ಹಂತದ NCORD ಕಾರ್ಯವಿಧಾನವನ್ನು ಬಲಪಡಿಸಲಾಯಿತು.

    ಮೋದಿ ಸರಕಾರದಲ್ಲಿ, ಮಾದಕ ವ್ಯಸನ ಮುಕ್ತ ನವ ಭಾರತ ನಿರ್ಮಾಣಕ್ಕೆ ಅಮಿತ್ ಶಾ ಅವರ ತಂತ್ರಗಾರಿಕೆಗಳು ಫಲ ನೀಡುತ್ತಿರುವುದಕ್ಕೆ ಕೇವಲ ನಮ್ಮ ದೇಶವಲ್ಲದೇ ಜಗತ್ತಿನಾದ್ಯಂತದ ಜನರು ಸಾಕ್ಷಿಯಾಗಿದ್ದಾರೆ.

  • ದಿ|| ಮಾಜಿ ಅಧ್ಯಕ್ಷನಿಗೆ ಅಗೌರವ ತಂದ ಮಹಾನ್ ಸಾಹಿತಿಗಳ ವೇದಿಕೆ

    ದಿ|| ಮಾಜಿ ಅಧ್ಯಕ್ಷನಿಗೆ ಅಗೌರವ ತಂದ ಮಹಾನ್ ಸಾಹಿತಿಗಳ ವೇದಿಕೆ


    ಕಲಬುರಗಿ: ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದ ಬಂಡಾಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ ವೇದಿಕೆಯಲ್ಲಿ ಫೆ.೨೬ ಹಾಗೂ ೨೭ರಂದು ನಡೆದ ೨೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಿ|| ಮಾಜಿ ಕಸಾಪ ಅಧ್ಯಕ್ಷ ಪಿ. ಎಂ ಮಣ್ಣೂರು ಅವರಿಗೆ ನುಡಿ ನಮನ ಸಲ್ಲಿಸದೆ ಕಾರ್ಯಕ್ರಮ ನಡೆಸಿರುವುದು ವಿಪರ್ಯಾಸ.
    ಸಾಹಿತ್ಯ ಸಮ್ಮೇಳನ ಆರಂಭಕ್ಕೂ ಮೊದಲು ದಿವಂಗತರಿಗೆ ಗೌರವ ನಮನ ಸಲ್ಲಿಸಿ ತದನಂತರ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ಮಾಡಬೇಕಾಗಿತ್ತು. ಆದರೆ ಕಸಾಪ ಈ ಕೆಲಸ ಮಾಡದೆ ಅಗೌರವ ತೋರಿರುವುದು ಸಾಹಿತಿಕಾರರಿಗೆ ಹಾಗೂ ಕನ್ನಡಾಭಿಮಾನಿಗಳಲ್ಲಿ ಬೇಸರ ತರಿಸಿದೆ.
    ಹೌದು ದಿ|| ಮಾಜಿ ಕಸಾಪ ಅಧ್ಯಕ್ಷ ಪಿ. ಎಂ ಮಣ್ಣೂರರವರು ಸಾಹಿತ್ಯ ಪರಿಷತ್ತಿಗೆ ನೀಡಿರುವ ಕೊಡುಗೆ ಅಪಾರ, ೧೯೯೫ರಲ್ಲಿ ಕಲ್ಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಅವಧಿಯಲ್ಲಿ ಹೆಸರಾಂತ ಸಾಹಿತಿಗಳಿಗೆ ಸರ್ವಾಧ್ಯಕ್ಷ ಪಟ್ಟವನ್ನು ಕಟ್ಟಿ ಕನ್ನಡದ ತೆರನ್ನು ಎಳೆದವರು. ಅಲ್ಲದೆ ಕನ್ನಡದ ಕಂಪು ಕಲ್ಬುರ್ಗಿಯ ಜನರಿಗೆ ಉಣಬಡಿಸಿದರು, ಸುಸಜ್ಜಿತವಾದ ಕಟ್ಟಡವನ್ನು ಕಟ್ಟಿಸಿ ಕಚೇರಿಯನ್ನಾಗಿ ಮಾಡುವುದರ ಜೊತೆಗೆ ಈಗಿರುವ ದಿ|| ಬಾಪುಗೌಡ ರಂಗಮಂದಿರಕ್ಕೆ ಭೂಮಿ ಪೂಜೆ ಆದದ್ದು ಕೂಡ ಇವರ ಕಾಲದಲ್ಲಿ ಎಂಬುದು ಈಗಿನ ಸಾಹಿತಿಗಳು ತಿಳಿದು ಕೊಳ್ಳಬೇಕು.
    ಸಾಹಿತ್ಯ ಸಮ್ಮೇಳನವು ಕನ್ನಡ ಭಾಷೆಯ ಹಿರಿಮೆ ಗರಿಮೆಯ ಕನ್ನಡಿಗರ ಐಕ್ಯತೆಯ ಕನ್ನಡದ ಅಳಿವು ಉಳಿವಿನ ಕೋಟಿ ಲೆಕ್ಕದ ವೇದಿಕೆಯಾಗಬೇಕು. ಭಾಷೆಯೊಂದಕ್ಕೆ ಇಂತಹ ಅತೀ ದೊಡ್ಡ ಮನ್ನಣೆ ಸಿಗುತ್ತಿರುವಾಗ ಅದೊಂದು ರಾಜಕೀಯ ಜಾತ್ರೆಯಂತಾಗಿದ್ದು ಬೇಸರ.
    ಒಂದರ್ಥದಲ್ಲಿ ರಾಜಕೀಯ ಅಸ್ಪೃಶ್ಯತೆ ಕೂಡ ಸಾಹಿತ್ಯ ಲೋಕದಲ್ಲಿ ನುಸುಳಿದೆ ಎಂದು ಹೇಳಬಹುದು. ಸಾಹಿತ್ಯ ಕ್ಷೇತ್ರವನ್ನು ಕಟ್ಟುತ್ತಿರುವುದು ಕವಿಗಳು ಮತ್ತು ಸಾಹಿತಿಗಳೆ ಹೊರತು ರಾಜಕೀಯದವರಲ್ಲ ಎಂಬುದನ್ನು ಮನದಟ್ಟಣೆ ಮಾಡಿಕೊಳ್ಳಬೇಕು. ಈ ಬೆಳವಣಿಗೆ ಸಾಹಿತ್ಯ ಲೋಕವನ್ನು ಮತ್ತು ಹಿರಿಯ ಸಾಹಿತಿಗಳನ್ನು ಬಹುಬೇಗಾ ದೂರತಳ್ಳುತ್ತಿರುವ ಮುನ್ಸೂಚನೆ ಕಂಡಬರುತ್ತಿದೆ.

  • ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಇನ್ನಿಲ್ಲ

    ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಇನ್ನಿಲ್ಲ

    *ಸತ್ಯಕಾಮ ವಾರ್ತೆ ಬೆಂಗಳೂರು*
    ಯಾದಗಿರಿ ಜಿಲ್ಲೆಯ ಸುರಪುರದ ಕಾಂಗ್ರೆಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ(67) ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ.

    ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಘಾತದಿಂದ ಕೊನೆಯುಸಿರೆಳಿದಿದ್ದಾರೆ.ಮೊನ್ನೆಯಷ್ಟೇ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಅವರು,ಕಾಂಗ್ರೆಸ್ ನಿಂದಲೇ ರಾಜಕೀಯ ಜೀವನ ಆರಂಭಿಸಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಈವರೆಗೆ ನಾಲ್ಕು ಶಾಸಕರಾಗಿದ್ದರು.

    2023ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಸುರಪುರ ಎಸ್​ಟಿ ಮೀಸಲು ಕ್ಷೇತ್ರದಿಂದ ಬಿಜೆಪಿಯ ರಾಜುಗೌಡ ಅವರನ್ನು ರಾಜಾ ವೆಂಕಟಪ್ಪ ನಾಯಕ್​ ಮಣಿಸಿದ್ದರು. ಈ ಮೂಲಕ ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಅಲ್ಲದೇ ಈ ಬಾರಿ ಸಚಿವ ಸ್ಥಾನಕ್ಕೆ ಕಸರತ್ತು ನಡೆಸಿದ್ದರು. ಆದ್ರೆ, ಹೈಕಮಾಂಡ್​ ರಾಜಾ ವೆಂಕಟಪ್ಪ ನಾಯಕ ಅವರಿಗೆ ಉಗ್ರಾಣ ನಿಗಮ ನೀಡಲಾಗಿತ್ತು. ಅದರಂತೆ ಮೊನ್ನೇ ಅಷ್ಟೇ ಅವರು ಉಗ್ರಾಣ ನಿಗಮ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.