Author: Satyakam NewsDesk

  • ಜಿಲ್ಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ನೇರ ನೇಮಕಾತಿ ಪರೀಕ್ಷೆ

    ಜಿಲ್ಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ನೇರ ನೇಮಕಾತಿ ಪರೀಕ್ಷೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಜಿಲ್ಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ನೇರ ನೇಮಕಾತಿ ಪರೀಕ್ಷೆ 2024ರ ಅಕ್ಟೋಬರ್ 26 ರಂದು ಯಾದಗಿರಿ ನಗರದ 03 ಪರೀಕ್ಷಾ ಕೇಂದ್ರಗಳಲ್ಲಿ 1491 ವಿದ್ಯಾರ್ಥಿಗಳು ಮಧ್ಯಾಹ್ನ 2.30 ರಿಂದ ಸಂಜೆ 4.30ರ ವರೆಗೆ ಮತ್ತು 2024ರ ಅಕ್ಟೋಬರ್ 27 ರಂದು ಜಿಲ್ಲೆಯ 21 ಪರೀಕ್ಷಾ ಕೇಂದ್ರಗಳಲ್ಲಿ 8836 ವಿದ್ಯಾರ್ಥಿಗಳು ಬೆಳಿಗ್ಗೆ 10.30 ರಿಂದ 12.30 ಗಂಟೆಯ ವರೆಗೆ ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 4.30ರ ವರೆಗೆ 02 ಅವಧಿಗಳಲ್ಲಿ ಈ ಕೆಳಗಿನ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ತಿಳಿಸಿದ್ದಾರೆ.

     2153 ಸ ಪ ಪೂ ಕಾಲೇಜು ಯಾದಗಿರಿ, 2154–ಜವಹಾರ ಪ ಪೂ ಕಾಲೇಜು ಯಾದಗಿರಿ, 2155– ಬಾಲಕೀಯರ ಸರಕಾರಿ ಪದವಿ ಪೂರ್ವ ಕಾಲೇಜು ಯಾದಗಿರಿ, 2156–ನ್ಯೂ ಕನ್ನಡ ಪ ಪೂ ಕಾಲೇಜು ಯಾದಗಿರಿ, 2157–ಮಹಾತ್ಮ ಗಾಂಧಿ ಪ ಪೂ ಕಾಲೇಜು ಯಾದಗಿರಿ, 2158–ಡಾನ್ ಬಾಸ್ಕೊ ಪ ಪೂ ಕಾಲೇಜು ಯಾದಗಿರಿ, 2159–ಎಲ್‌ಕೆಇಟಿ ಬಾಲಕೀಯರ ಪ ಪೂ ಕಾಲೇಜು ಯಾದಗಿರಿ, 2160–ಸಭಾ ಪ ಪೂ ಕಾಲೇಜು ಯಾದಗಿರಿ, 2161–ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲೆ ವಿಭಾಗ) ಯಾದಗಿರಿ, 2162–ಸರಕಾರಿ ಪ್ರಥಮ ದರ್ಜೆ ಕಾಲೇಜು ಯಾದಗಿರಿ, 2163–ಬಾಲಕೀಯರ ಸರಕಾರಿ ಪ್ರಥಮ ದರ್ಜೆ ಕಾಲೇಜು ಯಾದಗಿರಿ, 2164–ಸ ಪ ಪೂ ಕಾಲೇಜು ಗುರುಮಿಠಕಲ್ , 2165-ಬಾಲಕೀಯರ ಸ ಪ ಪೂ ಕಾಲೇಜು ಗುರುಮಿಠಕಲ್ , 2166-ಸರಕಾರಿ ಪ್ರಥಮ ದರ್ಜೆ ಕಾಲೇಜು ಗುರುಮಿಠಕಲ್, 2167-ಸರಕಾರಿ ಪದವಿ ಪೂರ್ವ ಕಾಲೇಜು ಶಹಪ್ಮರ, 2168-ಎಸ್‌ಸಿ ಬಾಲಕೀರ ಪ ಪೂ ಕಾಲೇಜು ಶಹಪ್ಮರ, 2169–ಬಾಲಕೀಯರ ಸ ಪ ಪೂ ಕಾಲೇಜು ಶಹಪುರ, 2170-ಪ್ರಭು ಪ ಪೂ ಕಾಲೇಜು ಸುರಪ್ಮರ, 2171-ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪ ಪೂ ಕಾಲೇಜು ರಂಗAಪೇಟ, 2172–ಸ ಪ ಪೂ ಕಾಲೇಜು ರಂಗAಪ್ಭೆಟ, 2173-ಪ್ರೀಯದರ್ಶಿನಿ ಪ ಪೂ ಕಾಲೇಜು ರಂಗAಪೇಟ ಪರೀಕ್ಷೆ ಕೇಂದ್ರಗಳು ಇದೆ.

    ಪರೀಕ್ಷಾ ಕೇಂದ್ರಗಳ ಸೂತ್ತಲು 300 ಮೀಟರ ನಿಷೇದಿತ ಪ್ರದೇಶವೆಂದು ಘೋಷಿಸಲಾಗಿದೆ ಮತ್ತು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಅಳವಡಿಸಲಾಗಿ ಪರೀಕ್ಷೆಯ ಎಲ್ಲಾ ಮುಂಜಾಗೃತ ಕ್ರಮಗಳನ್ನು  ಕೈಗೊಳ್ಳಲಾಗಿದ್ದು ವಿಶೇಷವಾಗಿ ವಿದ್ಯಾರ್ಥಿಗಳು/ಪೋಷಕರ ಗಮನಕ್ಕೆ ಸದರಿ ಸ್ಪರ್ದಾತ್ಮಕ ಪರೀಕ್ಷೆಗೆ ವಸ್ತç ಸಂಹಿತೆ ಹಾಗೂ ವಿಶೇಷ ಸೂಚನೆಗಳು ಈ ಕೆಳಗಿನಂತಿರುತ್ತವೆ. ಪುರುಷ ಅಭ್ಯರ್ಥಿಗಳ ವಸ್ತç ಸಂಹಿತೆ ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಶರ್ಟ್ಗಳನ್ನು ಅನುಮತಿಸಲಾಗುವುದಿಲ್ಲವಾದ್ದರಿಂದ ಪುರಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್ಗಳನ್ನು ಧರಿಸುವುದು ಸಾದ್ಯವಾದಷ್ಟು ಕಾಲರ್‌ರಹಿತ ಶರ್ಟ್ಧರಿಸಲು ಆದ್ಯತೆ ನೀಡುವುದು. ಪ್ಯಾಂಟ್ ಮತ್ತು ಸರಳ ಪ್ಯಾಂಟ್ (ಜೇಬುಗಳು ಇಲ್ಲದಿರುವ/ಕಮ್ಮಿ ಜೇಬುಗಳಿರುವ) ಪುರುಷ ಅಭ್ಯರ್ಥಿಗಳಿಗೆ ಆದ್ಯತೆಯ ಡ್ರೆಸ್ ಕೋಡ್ ಆಗಿದೆ. ಕುರ್ತಾ ಪೈಜಾಮನ್ನು, ಜೀನ್ಸ್ ಪ್ಯಾಂಟ್ ಅನುಮತಿಸುವುದಿಲ್ಲ. ಪುರುಷ ಅಭ್ಯರ್ಥಿಗಳು ಧರಿಸುವ ಬಟ್ಟೆಗಳು ಹಗುರವಾಗಿರಬೇಕು ಅಂದರೆ ಜಿಪ್ ಪಾಕೆಟ್‌ಗಳು, ಪಾಕೆಟ್‌ಗಳು, ದೊಡ್ಡ ಬಟನ್‌ಗಳು ಮತ್ತು ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳು ಇರಬಾರದು. ಪರಿಕ್ಷಾ ಹಾಲ್ ಒಳಗೆ ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಸ್ಯಾಂಡಲ್ ಅಥವಾ ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸುವುದು ಸೂಕ್ತ. ಅಭ್ಯರ್ಥಿಗಳು ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣಗಳನ್ನು ಧರಿಸುವುದು ಅಥವಾ ಕಿವಿಯೋಲೆಗಳು, ಉಂಗುರಗಳು ಮತ್ತು ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ.

    ಮಹಿಳಾ ಅಭ್ಯರ್ಥಿಗಳ ವಸ್ತç ಸಂಹಿತೆ ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷೇಶಿಸಲಾಗಿದೆ. ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಪಟ್ಟೆಗಳನ್ನು/ಜೀನ್ಸ್ ಪ್ಯಾಂಟ್ ಧರಿಸಬಾರದು, ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಅವರಿಗೆ ಮುಜುಗರವಾಗದಂತೆ ಮತ್ತು ನಾವು ಉಲ್ಲೇಖಿಸಿರುವ ನಿಯಮದಂತೆ ಧರಿಸುವಂತೆ ನಿರ್ದೇಶಿಸಲಾಗಿದೆ.ಎತ್ತರವಾದ ಹಿಮ್ಮಡಿಯ ಶೂಗಳನ್ನು/ಚಪ್ಪಲಿಗಳನ್ನು ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂಗಳನ್ನಾಗಲಿ/ಚಪ್ಪಲಿಗಳನ್ನಾಗಲಿ ಧರಿಸಬಾರದು, ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸುವುದು ಕಡ್ಡಾಯವಾಗಿದೆ.ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಿದೆ. (ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ). ಪರೀಕ್ಷೆಯಲ್ಲಿ ಪರೀಕ್ಷಾ ದುರಾಚರಣೆಯನ್ನು ತಡೆಗಟ್ಟಲು ಪ್ರತಿ ಕೇಂದ್ರಕ್ಕೆ ವಿಶೇಷ ಜಾಗೃತದಳ ಮತ್ತು ವಿಕ್ಷಕರನ್ನು ನೇಮಿಸಿದೆ, ಪರೀಕ್ಷಾ ನಡೆಯುವ ದಿನಗಳಂದು ಯಿರಾಕ್ಸ ಅಂಗಡಿ, ಪುಸ್ತಕ ಮಳಿಗೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಪರೀಕ್ಷ ಕೇಂದ್ರಗಳಲ್ಲಿ ಯಾವುದೇ ತರಹದ ಎಲೆಕ್ಟಾçನಿಕ್ ವಸ್ತುಗಳು ಮೊಬೈಲ್, ಪೆನ್ ಡ್ರೆöÊವ್‌ಗಳು, ಇಯರ್ ಪೋನ್, ಮೈಕ್ರೋಪೋನ್‌ಗಳೂ, ಬ್ಲೂ ಟೂಥ್ ಸಾಧನಗಳು ಮತ್ತು ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿ ಒಳಗೆ ಅನುಮತಿಸಲಾಗುವುದಿಲ್ಲ. ಪರೀಕ್ಷೆಗಳನ್ನು ಪಾರದರ್ಶಕವಾಗಿ ಕೈಗೊಳ್ಳಲು ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಜಿಲ್ಲೆಯ  ಸಮಗ್ರ ಅಭಿವೃದ್ಧಿಗೆ ಬದ್ಧ – ಸಂಸದ ಜಿ ಕುಮಾರ ನಾಯಕ

    ಜಿಲ್ಲೆಯ  ಸಮಗ್ರ ಅಭಿವೃದ್ಧಿಗೆ ಬದ್ಧ – ಸಂಸದ ಜಿ ಕುಮಾರ ನಾಯಕ

    ಸತ್ಯಕಾಮ ವಾರ್ತೆ ರಾಯಚೂರು:

    ಜಿಲ್ಲೆಯ ಜನರು ಅಭಿವೃದ್ಧಿಗಾಗಿ ಕೆಲಸ  ಮಾಡುವ ಅವಕಾಶ ನೀಡಿದ್ದು ಜಿಲ್ಲೆಯಲ್ಲಿ ಜನಪರ ಸೇವೆಯನ್ನು ನೀಡಿಲು ಸಿದ್ದನಿದ್ದೇನೆ, ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವ ಜತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿರುವೆ ಎಂದು ಸಂಸದ ಜಿ ಕುಮಾರ್‌ ನಾಯಕ್‌ ಹೇಳಿದರು.

     

    ನಗರದ ಎಪಿಎಂಸಿ ಆವರಣದಲ್ಲಿನ ರೈತ ಭವನದಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವತಿಯಿಂದ ಆಯೋಜಿಸಿದ್ದ ನೂತನ ಸಂಸದರಾದ ಜಿ ಕುಮಾರ ನಾಯಕ ಹಾಗೂ ವಿಧಾನಪರಿಷತ್ ಸದಸ್ಯರಾದ ಎಂ ವಸಂತ ಕುಮಾರವರಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು  ಮಾತನಾಡಿದರು ಈ ಹಿಂದೆ ಜಿಲ್ಲಾಧಿಕಾರಿ ಸೇವೆ ಸಲ್ಲಿಸಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಕೂಡ ಸೇವೆಯನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ಅನೇಕ ಕಡತಗಳ ಪರಿಶೀಲನೇಯ ಅನುಭವವಿದೆ ವಿಶೇಷವಾಗಿ ಈ ರಾಯಚೂರು ನನ್ನ ಕರ್ಮ ಭೂಮಿಯಾಗಿದ್ದು ಈ ಭಾಗದ ಸಂಪೂರ್ಣ ಅಭಿವೃದ್ಧಿ ನನ್ನ ಧ್ಯೇಯವಾಗಿದೆ ಎಂದರು.

    ಈ ಸಂದರ್ಭದಲ್ಲಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಸನಗೌಡ ದದ್ದಲ್ ರವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಪಾಟೀಲ ಇಟಗಿ ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಗಳಾದ ಕೆ ಶಾಂತಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಹಿಳಾ ಘಟಕದ ಅಧ್ಯಕ್ಷರು ಕಾರ್ಯಕರ್ತರು ಅಭಿಮಾನಿಗಳು ಸಾರ್ವಜನಿಕ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

  • ವಿಮಾನ ನಿಲ್ದಾಣದ ಕನಸು ನನಸು : ಸಂಸದ ಜಿ ಕುಮಾರ್ ನಾಯಕ್

    ವಿಮಾನ ನಿಲ್ದಾಣದ ಕನಸು ನನಸು : ಸಂಸದ ಜಿ ಕುಮಾರ್ ನಾಯಕ್

    ಸತ್ಯಕಾಮ ವಾರ್ತೆ ರಾಯಚೂರು:

    ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ವಿಮಾನ ನಿಲ್ದಾಣದ ಕನಸಿಗೆ ಈಗ ನನಸಾಗಿದೆ ಹಲವಾರು ತೊಡಕುಗಳಿದ್ದ ಕಾರಣ ಈವರೆಗೆ ಸೈಟ್‌ ಕ್ಲಿಯರೆನ್ಸ್‌ ಸಿಕ್ಕಿರಲಿಲ್ಲ. ಈಗ ಅದು ದೊರೆತಿರುವುದು ಸಂತಸದ ಸಂಗತಿ ಎಂದು ರಾಯಚೂರು-ಯಾದಗಿರಿ ಲೋಕಸಭಾ ಸಂಸದರಾದ ಜಿ ಕುಮಾರ್‌ ನಾಯಕ್‌ ಅವರು ಹೇಳಿದರು.

     

    ಬಹುದಿನದ ಬೇಡಿಕೆಯಾದ ರಾಯಚೂರಿನ ವಿಮಾನ ನಿಲ್ದಾಣಕ್ಕೆ ಕೇಂದ್ರದ ಸಮ್ಮತಿ ದೊರೆತಿರುವ ಹಿನ್ನೆಲೆಯಲ್ಲಿ ಗುರವಾರ ರಾಯಚೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರಾಯಚೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಸಂಬಂಧ ಕೇಂದ್ರ ವಿಮಾನಯಾನ ಸಚಿವರಾದ ಶ್ರೀ ರಾಮ ಮೋಹನ್‌ ನಾಯ್ಡು ಅವರನ್ನು ಎರಡು ಬಾರಿ ಭೇಟಿಯಾಗಿ ಯೋಜನೆಯ ಪ್ರಾಮುಖ್ಯತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆ. ಇದರ ಪರಿಣಾಮವಾಗಿ ಇಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ಅವರಿಂದ ಸೈಟ್ ಕ್ಲಿಯರೆನ್ಸ್ ಬಗ್ಗೆ ದಾಖಲೆಗಳನ್ನು ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

  • ಅ.26 ರಂದು ಅಭಾವೀಲಿಂ ಮಹಾಸಭಾದ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

    ಅ.26 ರಂದು ಅಭಾವೀಲಿಂ ಮಹಾಸಭಾದ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

    ಸತ್ಯಕಾಮ ವಾರ್ತೆ ಯಾದಗಿರಿ:

    ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಯಾದಗಿರಿ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅರ್ಥಪೂರ್ಣವಾಗಿ ಬಹು ವಿಜೃಂಭಣೆಯಿಂದ ಇದೇ ಶನಿವಾರ 26 ರಂದು ಬೆಳಿಗ್ಗೆ 10-30 ಕ್ಕೆ ಯಾದಗಿರಿ ನಗರದ ಚಿತ್ತಾಪೂರ ರಸ್ತೆಯಲ್ಲಿರುವ ಸಪ್ತಪದಿ ಕನ್ವೆಷನ್ ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಸಿದ್ದರಾಜರೆಡ್ಡಿ ತಿಳಿಸಿದರು.

    ಯಾದಗಿರಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ಮಾಹಿತಿ ನೀಡಿ ಮಾತನಾಡುತ್ತಾ, ಅಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಯಾದಗಿರಿ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಬ್ಬೆತುಮಕೂರು ವಿಶ್ವಾರಾಧ್ಯರ ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮೀಜಿಗಳು, ನಾಲವಾರ ಕೋರಿಸಿದ್ದೇಶ್ವರ ಮಠದ ಷ.ಬ್ರ. ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಗುರುಮಠಕಲ್ ಖಾಸಾಮಠದ ಪೀಠಾಧಿಪತಿ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮೀಜಿಗಳು ಮತ್ತು ಹೆಡಗಿಮದ್ರಾ ಶಾಂತಶಿವಯೋಗಿ ಮಠದ ಪೀಠಾಧಿಪತಿ ಷ.ಬ್ರ. ಶಾಂತಮಲ್ಲಿಕಾರ್ಜುನ ಪಂಡಿತಾರಾದ್ಯ ಮಹಾಸ್ವಾಮೀಜಿಗಳು ಪಾವನ ಸಾನಿಧ್ಯವನ್ನು ವಹಿಸಲಿದ್ದಾರೆ.

    ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಆಗಮಿಸಲಿದ್ದಾರೆ.

    ವಿಶೇಷ ಸನ್ಮಾನಿತರಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷರಾದ ನಿವೃತ್ತ ಐಪಿಎಸ್ ಅಧಿಕಾರಿ ಡಾ. ಶಂಕರ ಮಹಾದೇವ ಬಿದರಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ, ನೇತೃತ್ವವನ್ನು ಅ.ಭಾ.ವೀ.ಲಿಂ ಮಹಾಸಭಾ ಯಾದಗಿರಿ ನೂತನ ಜಿಲ್ಲಾಧ್ಯಕ್ಷರಾದ ಚನ್ನಪ್ಪಗೌಡ ಮೋಸಂಬಿ, ತಾಲೂಕಾಧ್ಯಕ್ಷರಾದ ರಾಜಶೇಖರ್ ಸಿ ಪಾಟೀಲ್ ಚಾಮನಳ್ಳಿ ಇವರು ವಹಿಸುವರು.

    ಸುದ್ದಿಗೋಷ್ಠಿ ವೀಡಿಯೋ ನೋಡಲು ಈ ಲಿಂಕ್ ಕ್ಲಿಕ್‌ ಮಾಡಿ

    ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಮಾಜಿ ಸಚಿವರಾದ ಡಾ. ಎಬಿ. ಮಾಲಕರೆಡ್ಡಿ, ಮಾಜಿ ಶಾಸಕರಾದ ಗುರುಪಾಟೀಲ ಶಿವಾಳ, ಸಮಾಜದ ಹಿರಿಯ ಮುಖಂಡರಾದ ರಾಚನಗೌಡ ಮುದ್ನಾಳ್, ಸಮಾಜದ ಮುಖಂಡರು ಹಿರಿಯ ನ್ಯಾಯವಾದಿಗಳಾದ ಎಸ್‌ಬಿ ಪಾಟೀಲ್, ಉದ್ಯಮಿಗಳು ಹಾಗೂ ಸಮಾಜದ ಮುಖಂಡರಾದ ಶರಣಪ್ಪಗೌಡ ಮಲ್ಹಾರ್, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ವಿನಾಯಕ ಮಾಲಿಪಾಟೀಲ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಜಿಲ್ಲಾಧ್ಯಕ್ಷರಾದ ಬಸವರಾಜ ಜೈನ್, ಸಮಾಜದ ಮುಖಂಡರು ಹಾಗೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿದ್ದಪ್ಪ ಹೊಟ್ಟಿ, ಮಹಾಸಭಾ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಪಾರ್ವತಿ ಕರೆಡ್ಡಿ ಮಲ್ಹಾರ್, ತಾಲೂಕು ವೀರಶೈವ ಸಮಾಜದ ಅಧ್ಯಕ್ಷರಾದ ಅಯ್ಯಣ್ಣ ಹುಂಡೇಕಾರ, ಅ.ಭಾ.ವೀ.ಲಿಂ ಮಹಾಸಭಾದ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಸೋಮಶೇಖರ್ ಮಣ್ಣೂರ್, ನಿಕಟಪೂರ್ವ ತಾಲೂಕಾಧ್ಯಕ್ಷ ಆರ್. ಮಹಾದೇವಪ್ಪ ಅಬ್ಬೆತುಮಕೂರು ಆಗಮಿಸುವರು. ವಿಶೇಷ ಆಹ್ವಾನಿತರಾಗಿ ಮಹಾಸಭಾ ಶಹಾಪೂರ ತಾಲೂಕಾಧ್ಯಕ್ಷ ಸಿದ್ದಣ್ಣ ಆರಬೋಳ,ಸುರಪುರ ತಾಲೂಕಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಆಗಮಿಸುವರು.

    ಇದೇ ವೇಳೆ ಯಡಿಯೂರುಸಿರಿ ಸಂಗೀತ ಪಾಠಶಾಲೆ ಯಾದಗಿರಿ ಇವರಿಂದ ವಚನ ಗಾಯನ ನಡೆಯಲಿದೆ.

    ಸಮಾಜೋದ್ದಾರಕ, ಗುರುಪರಂಪರೆಯ ತಿಲಕ ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸ್ವಾಮೀಜಿಯವರು ಸ್ಥಾಪನೆ ಮಾಡಿದಂತಹ ಅಖಿಲ ವೀರಶೈವ ಲಿಂಗಾಯತ ಮಹಾಸಭಾಕ್ಕೆ ನಾಡಿನಲ್ಲಿ ಮಹೊನ್ನತ ಇತಿಹಾಸ, ಪರಂಪರೆ ಹೊಂದಿದೆ. ಸಂಸ್ಥಾಪಕ ಪೂಜ್ಯರ ಆಶಯದಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಧ್ಯೇಯೋದ್ದೇಶವನ್ನು ಪಾಲಿಸಿಕೊಂಡು ಸಮಾಜವನ್ನು ಅಖಂಡವಾಗಿ ಒಗ್ಗೂಡಿಸಿಕೊಂಡು ಹೋಗುವ ದಿಸೆಯಲ್ಲಿ ಸಮಾಜ ಸಂಘಟನೆಯ ಕಾರ್ಯ ಜಿಲ್ಲೆಯಲ್ಲಿ ನಿರಂತರವಾಗಿ ನಡೆಸಿಕೊಂಡು ಬರಲಾಗಿದೆ. ಜಿಲ್ಲೆಯ ಸಮಸ್ತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜದ ಬಾಂಧವರು ಈ ಪದಗ್ರಹಣ ಸಮಾರಂಭದಲ್ಲಿ ನಿಗಧಿತ ಸಮಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

    ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ತಾಲ್ಲೂಕಾಧ್ಯಕ್ಷ ರಾಜಶೇಖರ ಪಾಟೀಲ ಚಾಮನಹಳ್ಳಿ,ಕೋಶಾಧ್ಯಕ್ಷ ಬಸನಗೌಡ ಕನ್ಯಾಕೋಳೂರ, ಅನ್ನಪೂರ್ಣ ಜವಳಿ, ವೀರಭದ್ರಪ್ಪ ಮೋಟಾರ್, ಜಗದೀಶ್ ಪಾಟೀಲ್, ಶರಣಪ್ಪ ಜಾಕ ಸೇರಿದಂತೆ ಇನ್ನಿತರರು ಹಾಜರಿದ್ದರು.
    ==================

    ಯಾದಗಿರಿ ಜಿಲ್ಲಾ ಘಟಕ ರಚನೆ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷರು, ಚನ್ನಪ್ಪಗೌಡ ಮೋಸಂಬಿ ಯಾದಗಿರಿ ಮತ್ತು ಉಪಾಧ್ಯಕ್ಷರುಗಳು ಸಂಗಾರೆಡ್ಡಿಗೌಡ ಪೋಲೀಸ್ ಪಾಟೀಲ ಮಲ್ಲಾರ ಯಾದಗಿರಿ, ಅಡಿವೆಪ್ಪ ಜಾತಾ ಶಹಾಪೂರ, ಶ್ರೀಮತಿ ಅನ್ನಪೂರ್ಣ ಡಾ. ಸಿ.ಎಂ. ಪಾಟೀಲ ಯಾದಗಿರಿ, ನರಸರೆಡ್ಡಿ ಪಾಟೀಲ ನಜರಾಪೂರ, ಪ್ರಧಾನ ಕಾರ್ಯದರ್ಶಿ ಡಾ. ಸಿದ್ಧರಾಜರೆಡ್ಡಿ ಯಾದಗಿರಿ, ಕೋಶಾಧ್ಯಕ್ಷರು ಬಸಣ್ಣಗೌಡ ಮಾಲಿ ಪಾಟೀಲ ಕನ್ಯಕೋಳೂರು ಯಾದಗಿರಿ, ಕಾರ್ಯದರ್ಶಿಗಳು ಚನ್ನಮಲ್ಲಿಕಾರ್ಜುನ ಅಕ್ಕಿ ಯಾದಗಿರಿ, ಬಸವರಾಜ ಅರುಣಿ ಶಹಾಪೂರ, ಶ್ರೀಮತಿ ಡಾ. ಕಮಲಾ ಇಂದೂಧರ ಶಿನ್ನೂರ ಯಾದಗಿರಿ, ಮಹೇಶ್ಚಂದ್ರ ಅನೇಗುಂದಿ ಶಹಾಪೂರ.

    ಕಾರ್ಯಕಾರಿ ಸದಸ್ಯರುಗಳು: ಬಸವಂತ್ರಾಯಗೌಡ ಮಾಲಿ ಪಾಟೀಲ ಯಾದಗಿರಿ, ವೀರಭದ್ರಯ್ಯಸ್ವಾಮಿ ಜಾಕಾಮಠ ಯಾದಗಿರಿ, ಶಂಕ್ರಪ್ಪಗೌಡ ಗೋನಾಲ ಯಾದಗಿರಿ, ರುದ್ರಗೌಡ ಪಾಟೀಲ ಮಲ್ಲಾಬಿ ಯಾದಗಿರಿ, ವೀರಭದ್ರಪ್ಪ ಮೋಟರ ಯಾದಗಿರಿ, ಬಸವರಾಜ ರಾಯಕೋಟಿ ಚಂಡ್ರಿಕಿ, ಚಂದ್ರಶೇಖರ ಅರಳಿ ಯಾದಗಿರಿ, ಚೇತನ ಪಾಟೀಲ ಬಾನಾ, ಸಿದ್ದಲಿಂಗಪ್ಪ ದೇಶಮುಖ ಶಹಾಪೂರ, ಶರಣಪ್ಪ ಗುರಪ್ಪ ಜಾಕಾ ಯಾದಗಿರಿ, ನಾಗಣ್ಣ ಶೀಲವಂತಪ್ಪ ಸಾಹು ಶಹಾಪೂರ, ಬಸವರಾಜ ಹೇರುಂಡಿ ಶಹಾಪೂರ, ಭೀಮರಡ್ಡಿ ಚಂದ್ರಾಯಗೌಡ ಪಾಟೀಲ ಗೋಗಿ, ಉಮೇಶ್ಚಂದ್ರ ಶೀಲವಂತಪ್ಪ ಗೋಗಿ, ಅನ್ನಪೂರ್ಣ ಜವಳಿ ಯಾದಗಿರಿ, ಸವಿತಾ ಶರಣಗೌಡ ಮಾಲಿ ಪಾಟೀಲ ಯಾದಗಿರಿ, ದೀಪಾ ಶಂಕ್ರಪ್ಪ ಅರುಣಿ ಯಾದಗಿರಿ, ಮೇಘಾ ಶರಣಗೌಡ ಹೋತಪೇಟ್, ಮಂಜುಳಾ ಆರ್.ಪಾಟೀಲ ಯಾದಗಿರಿ, ಮೀನಾಕ್ಷಿ ಭೀಮಾಶಂಕರ ಮುತ್ತಗಿ ಗುರುಮಠಕಲ್, ಜೋತಿ ಚನ್ನನಗೌಡ ಶಹಾಪೂರ, ಅನ್ನಪೂರ್ಣ ಸುಧಾಕರ ಗುಡಿ ಶಹಾಪೂರ.

     

    ಯಾದಗಿರಿ ತಾಲೂಕು ಘಟಕ ರಚನೆ:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಯಾದಗಿರಿ ತಾಲೂಕು ಘಟಕದ ಅಧ್ಯಕ್ಷರು ರಾಜಶೇಖರ ಸಿ.ಪಾಟೀಲ ಚಾಮನಹಳ್ಳಿ ಯಾದಗಿರಿ ಮತ್ತು ಉಪಾಧ್ಯಕ್ಷರುಗಳು ಶ್ರೀನಾಥ ಮಲ್ಲಕಾರ್ಜುನಪ್ಪ ಜೈನ ಯಾದಗಿರಿ, ಸ್ವಪ್ಪಾ ಮಂಜುನಾಥ ಲೇವಡಿ ಯಾದಗಿರಿ, ಪ್ರಧಾನ ಕಾರ್ಯದರ್ಶಿ ಅಯ್ಯಣ್ಣಗೌಡ ಮಲ್ಲಣ್ಣಗೌಡ ಕ್ಯಾಸಪ್ಪನಹಳ್ಳಿ, ಕೋಶಾಧ್ಯಕ್ಷರು ರಾಜಶೇಖರ ಮಹಾದೇವಪ್ಪ ಉಪ್ಪಿನ ಯಾದಗಿರಿ, ಕಾರ್ಯದರ್ಶಿಗಳು ಬಸರಡ್ಡಿ ಮಲ್ಲರಡ್ಡಿ ಪಾಟೀಲ ಎಂ.ಟಿ.ಪಲ್ಲಿ ಗುರುಮಠಕಲ್, ವಿಜಯಲಕ್ಷ್ಮೀ ಶಿವರಾಜ ಶಾಸ್ತ್ರೀ ಯಾದಗಿರಿ.

    ಕಾರ್ಯಕಾರಿ ಸದಸ್ಯರುಗಳು: ರಮೇಶ ಗುರುನಾಥರಡ್ಡಿ ದೊಡ್ಡಮನಿ ಯಾದಗಿರಿ, ರಾಮರಡ್ಡಿ ಶಿವರಡ್ಡಿ ಯಾದಗಿರಿ, ಶರಣಬಸಪ್ಪ ಬಸವರಾಜಪ್ಪ ಅವಂಟಿ ಇಡ್ಲೂರು, ನಾಗಪ್ಪ ಶರಣಪ್ಪ ಸಜ್ಜನ ಯಾದಗಿರಿ, ರವೀಂದ್ರ ಜಾಕಾ ಯಾದಗಿರಿ, ಜಗದೀಶ ಪಾಟೀಲ ಆಶನಾಳ, ಜಗದೀಶ ದುಂಡಪ್ಪಗೌಡ ಪಾಟೀಲ ಯಾದಗಿರಿ, ನೂರಂದಪ್ಪ ಲೇವಡಿ ಯಾದಗಿರಿ, ಡಾ. ವಿನಾಯಕ ಸಿ. ಪಾಟೀಲ ಅಬ್ಬೆತುಮಕೂರ, ನಿರ್ಮಲಾ ಸುಭಾಶ್ಚಂದ್ರ ಕೌಲಗಿ ಯಾದಗಿರಿ, ಪ್ರಮಿಳಾದೇವಿ ಡಾ. ಪ್ರಕಾಶ ರಾಜಾಪೂರ, ವೀಣಾ ಚಂದ್ರಶೇಖರ ಸೌದ್ರಿ ಯಾದಗಿರಿ,ವೇದಾ ಬಸವಂತರಡ್ಡಿ ಕರಡ್ಡಿ ಮಲ್ಲಾರ ಯಾದಗಿರಿ,ಸುಧಾ ಆನಂದರಡ್ಡಿ ವಡವಟ್ ಯಾದಗಿರಿ.

  • ಮಳೆಗೆ ಬೆಳೆ ಹಾನಿ: ಸೂಕ್ತ ಪರಿಹಾರಕ್ಕೆ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಆಗ್ರಹ.

    ಮಳೆಗೆ ಬೆಳೆ ಹಾನಿ: ಸೂಕ್ತ ಪರಿಹಾರಕ್ಕೆ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಆಗ್ರಹ.

    ಸತ್ಯಕಾಮ ವಾರ್ತೆ ವಡಗೇರಾ:
    ವರುಣನ ಅವಾಂತರಕ್ಕೆ ವಡಗೇರಾ ತಾಲೂಕು ಮತ್ತು ಜಿಲ್ಲೆಯ ರೈತರು ತತ್ತರಿಸಿ ಹೋಗಿದ್ದಾರೆ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಆಗ್ರಹಿಸಿದ್ದಾರೆ.

     

    ಯಾದಗಿರಿ ಜಿಲ್ಲೆಯಲ್ಲಿ ಮಳೆಯು ಮುಂದುವರೆದಿದ್ದು ಅಪಾರ ಪ್ರಮಾಣದ ಬೆಳೆಗಳು ಹಾನಿಯಾಗಿವೆ ಮಳೆ ಅವಾಂತರಿAದ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಭತ್ತ ಹಾಗೂ ಹತ್ತಿ ಬೆಳೆಯು ಹಾನಿಯಾಗಿದೆ. ಬಿರುಗಾಳಿ ಸಹಿತ ಮಳೆಗೆ ಜಿಲ್ಲೆಯ ವಡಗೇರಾ ತಾಲೂಕಿನ ಗೋಡಿಹಾಳ,ನಾಯ್ಕಲ್, ಬೂದಿನಾಳ,ಬಿಳ್ಹಾರ ಸೇರಿದಂತೆ ಮೊದಲಾದ ಕಡೆ ಸಾವಿರಾರು ಎಕರೆ ಪ್ರದೇಶದ ಭತ್ತದ ಬೆಳೆ ನೆಲಕಚ್ಚಿ ಹಾನಿಯಾಗಿದೆ. ತೆನೆ ಕಟ್ಟಿರುವ ಭತ್ತವು ಈಗ ಹಾಸಿಗೆಯಂತೆ ನೆಲಕ್ಕೆ ಬಿದ್ದಿದೆ. ಇನ್ನೇನು 15 ದಿನಗಳಲ್ಲಿ ಹತ್ತಿ ಬಿಡಿಸುವುದು ಮತ್ತು ಭತ್ತ ಕಟಾವು ಮಾಡಬೇಕೆನ್ನುವಷ್ಟರಲ್ಲಿ ಭತ್ತ ಹಾನಿಯಾಗಿದೆ. ಅದೆ ರೀತಿ ಹತ್ತಿ ಬೆಳೆಯಲ್ಲಿ ನೀರು ಸಂಗ್ರಹವಾಗಿ ಹತ್ತಿ ಬೆಳೆಯು ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿದೆ.ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಭತ್ತ,ಹತ್ತಿ, ಹಾನಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

     

    ಬೆಳೆ ಹಾನಿಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ರೈತ ಸಂಗಾರೆಡ್ಡಿ ಗೋಡಿಹಾಳ ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಮಳೆಗೆ ಹಾನಿಗೊಳಗಾದ ರೈತರ ಹೊಲಗಳ ಸಮೀಕ್ಷೆ ಮಾಡಿ ಜಿಲ್ಲಾಡಳಿತ ಮತ್ತು ಸರಕಾರ ಹೆಚ್ಚಿನ ಪರಿಹಾರ ನೀಡಬೇಕು ಒಂದು ವೇಳೆ ವಿಳಂಬ ಮಾಡಿದ್ದಲ್ಲಿ ರಾಜ್ಯ ರೈತ ಸಂಘದ ವತಿಯಿಂದ ಉಗ್ರ ಹೋರಾಟ ಮಾಡುವದಾಗಿ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ, ಗುರುನಾಥ ರೆಡ್ಡಿ ಹದನೂರ, ನೂರ ಅಹ್ಮದ, ಶಿವಶರಣಪ್ಪ ಸಾಹುಕಾರ ತಡಿಬಿಡಿ, ವೆಂಕೂಬ್ ಕಟ್ಟಿಮನಿ, ವಿದ್ಯಾಧರ್ ಜಾಕ, ಶರಣು ಜಡಿ, ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

  • ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು: ನೀಲಹಳ್ಳಿ ಅಭಿನಂದನೆ.

    ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರು: ನೀಲಹಳ್ಳಿ ಅಭಿನಂದನೆ.

    ಸತ್ಯಕಾಮ ವಾರ್ತೆ ವಡಗೇರಾ:
    ರಾಯಚೂರು ಜಿಲ್ಲೆಯಲ್ಲಿ ನೂತನವಾಗಿ ಸ್ಥಾಪಿತವಾಗಿರುವ ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ನಾಮಕರಣ ಘೋಷಣೆ ಮಾಡಿದ್ದು ಹಾಗೂ ಎಸ್ ಟಿ ವಸತಿ ಶಾಲೆಗಳಿಗೆ ವಾಲ್ಮೀಕಿ ಹೆಸರಿಡುವುದಾಗಿ ತಿಳಿಸಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರಕ್ಕೆ ಕಾಂಗ್ರೆಸ್ ಮುಖಂಡ ಹಾಗೂ ವಾಲ್ಮೀಕಿ ಸಮಾಜದ ಹಿರಿಯ ಮುಖಂಡರಾದ ಬಸವರಾಜ ನೀಲಹಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು ವಾಲ್ಮೀಕಿ ಸಮಾಜ ಹಾಗೂ ಈ ಭಾಗದ ಜನರ ಆಶಯದಂತೆ ಈ ನಾಮಕರಣ ಮಾಡಿರುವುದಾಗಿ ತಿಳಿಸಿದ್ದು. ನಮಗೆಲ್ಲಾ ಸಂತಸ ತಂದಿದೆ ಮಹರ್ಷಿ ವಾಲ್ಮೀಕಿ ರವರು ರಾಮಾಯಣದಂತ ಮಹಾಕಾವ್ಯ ಬರೆದು ದೇಶದ ಕೀರ್ತಿ ಹೆಚ್ಚಿಸಿದ್ದಾರೆ ಅವರು ಸತ್ಯ ಸ್ಮರಣೀಯರು ಮಹಾನ್ ಶರಣರು ಅವರ ಆದರ್ಶಗಳು ಚಿರಕಾಲ ಉಳಿಯಲಿ ಮಕ್ಕಳಿಗೆ ದಾರಿದೀಪವಾಗಲಿ ಎಂಬ ಉದ್ದೇಶದಿಂದ ರಾಯಚೂರಿನ ವಿವಿಯನ್ನು ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯವನ್ನಾಗಿ ನಾಮಕರಣ ಮಾಡಿದ್ದಾಗಿ ನುಡಿದ ಅವರು ರಾಯಚೂರು ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿ ಹೆಸರಿಡುವಲ್ಲಿ ಹಗಲಿರುಳು ಶ್ರಮಿಸಿದಂತ ಶಾಸಕರು ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಸನಗೌಡ ದದ್ದಲ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ, ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಹಾಗೂ ಸರಕಾರಕ್ಕೂ ವಾಲ್ಮೀಕಿ ಸಮಾಜದ ವತಿಯಿಂದ ಅಭಿನಂದನೆ ತಿಳಿಸಿದ್ದಾರೆ.

  • ಒಂದು ವಾರದಲ್ಲಿ ತಗ್ಗು,ಗುಂಡಿಗಳು ಮುಚ್ಚಲಾಗುವುದು:ಕು. ಲಲಿತಾ ಅನಪುರ.

    ಒಂದು ವಾರದಲ್ಲಿ ತಗ್ಗು,ಗುಂಡಿಗಳು ಮುಚ್ಚಲಾಗುವುದು:ಕು. ಲಲಿತಾ ಅನಪುರ.

    ಸತ್ಯಕಾಮ ವಾರ್ತೆ ಯಾದಗಿರಿ :
    ನಗರದ ರಸ್ತೆಗಳಲ್ಲಿ ಬಿದ್ದಿರುವ ತಗ್ಗು, ಗುಂಡಿಗಳನ್ನು ಮುಚ್ಚಿ ಡಾಂಬರಿಕರಣ ಮಾಡಲು ನಗರಸಭೆ ಮುಂದಾಗಿದೆ ಎಂದು ಅಧ್ಯಕ್ಷೆ ಕು. ಲಲಿತಾ ಅನಪುರ ಹೇಳಿದರು.

     

    ಶುಕ್ರವಾರ ನಗರದಲ್ಲಿ ಹದಗೆಟ್ಟ ವಿವಿಧ ರಸ್ತೆಗಳನ್ನು ಸದಸ್ಯರ ಹಾಗೂ ಅಧಿಕಾರಿಗಳ ತಂಡದೊಂದಿಗೆ ವಿಕ್ಷೀಸಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಏಳು ಲಕ್ಷ ರೂ.ಅಂದಾಜು ಪಟ್ಟಿ ತಯಾರಿಸಲಾಗಿದೆ. ಇನ್ನೂ ಹೆಚ್ಚಿಗೆ ಬೇಕಾದರೂ ಸಹ ಖರ್ಚು ಮಾಡಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದೆಂದರು.

     

    ನಗರದ ಮೈಲಾಪುರ ಅಗಸಿ, ಗಾಂಧಿ ಚೌಕ್, ಕನಕ ವೃತ್ತ, ಲುಂಬಿಣಿ ಉದ್ಯಾನದ ಮಾರ್ಗ, ಗಂಜ ರಸ್ತೆ, ಲಕ್ಷ್ಮಿ ಗುಡಿ ರಸ್ತೆ ಸೇರಿದಂತೆಯೇ ಸುಮಾರು ಐದಾರು ಕಿಮೀ ರಸ್ತೆಗಳಲ್ಲಿ ಎಲ್ಲ ತಗ್ಗು, ಗುಂಡಿಗಳನ್ನು ಮುಚ್ಚಿಸಲಾಗುವು, ಇದಿನಿಂದಲೇ  ಕೆಲಸ ಆರಂಭಿಸಲಾಗಿದೆ. ಈಗ ಮಳೆ ಬರುತ್ತಿರುವುದರಿಂದ ಒಂದೆರಡು ದಿನ ವಿಳಂಬವಾಗಬಹುದು, ಆದರೂ ಒಂದು ವಾರದಲ್ಲಿ ಈ ಕೆಲಸ ಪೂರ್ಣಗೊಳಿಸಲಾಗುವುದೆಂದರು.

     

    ನಗರಸಭೆ ಪೌರಯುಕ್ತ ರಜನಿಕಾಂತ ಕೆಲಸದ ಬಗ್ಗೆ ಮಾಹಿತಿ ನೀಡಿದರು.

     

    ನಗರಸಭೆ ಸದಸ್ಯ ಮತ್ತು ಜಿಲ್ಲಾ ವಕ್ತಾರ ಹಣಮಂತ ಇಟಗಿ,ಮಂಜು ದಾಸನಕೇರಿ,ಮಹೇಶ ಕುರಕುಂಬಾ, ಗುತ್ತಿಗೆದಾರ ಪೀರ್ ಅಹ್ಮದ್ ಸೇರಿದಂತೆಯೇ ಇತರರಿದ್ದರು.

    ——–
    ನಗರದ ಈ ಹದಗೆಟ್ಟ ರಸ್ತೆಗಳು ನಗರಸಭೆ ವ್ಯಾಪ್ತಿಗೆ ಬರದಿದ್ದರೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನೀಗಿಸಲು ಈ ತುರ್ತು ಕ್ರಮ ತೆಗೆದುಕೊಳ್ಳಲಾಗುತ್ತಿದೆ.

    ಕು.ಲಲಿತಾ ಅನಪುರ
    ಅಧ್ಯಕ್ಷರು, ನಗರಸಭೆ ಯಾದಗಿರಿ.

  • ಮಹಾ ಮಳೆಗೆ ಮನೆ ಕುಸಿದು ಮಹಿಳೆ ಸಾವು

    ಮಹಾ ಮಳೆಗೆ ಮನೆ ಕುಸಿದು ಮಹಿಳೆ ಸಾವು

    ಸತ್ಯಕಾಮ ವಾರ್ತೆ ಗುರುಮಠಕಲ್ :

    ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಹಾ ಮಳೆಗೆ ತಾಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಜರುಗಿದೆ.

    ಗುಂಜಲಮ್ಮ ಗಂಡ ಚಂದಪ್ಪ (58) ಮೃತ ದುರ್ದೈವಿಯಾಗಿದ್ದೂ, ಮನೆಯಲ್ಲಿದ್ದ ಗುಂಜಲಮ್ಮ ಅವರ ಸಹೋದರ ಚಂದ್ರಪ್ಪ ಅಮ್ಮಣ್ಣೋರ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

    ಘಟನೆಯು ಮಧ್ಯರಾತ್ರಿ 3 ಘಂಟೆ ಸುಮಾರಿಗೆ ಜರುಗಿದೆ ಎಂದು ಸ್ಥಳೀಯರು ತಿಳಿಸಿದ್ದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

  • ಗೋಲ್ಡನ್ ಹವರ್ ನಲ್ಲಿ ಚಿಕಿತ್ಸೆಯಿಂದ 3 ಜೀವ ರಕ್ಷಣೆ: ಡಾ|| ಅಮೋಘ ಸಿದ್ದೇಶ್ವರ

    ಗೋಲ್ಡನ್ ಹವರ್ ನಲ್ಲಿ ಚಿಕಿತ್ಸೆಯಿಂದ 3 ಜೀವ ರಕ್ಷಣೆ: ಡಾ|| ಅಮೋಘ ಸಿದ್ದೇಶ್ವರ

    ಸತ್ಯಕಾಮ ವಾರ್ತೆ ಯಾದಗಿರಿ:

    ತುರ್ತು ಪರಿಸ್ಥಿತಿಯಲ್ಲಿ ಕಲ್ಬುರ್ಗಿ, ರಾಯಚೂರು ಮುಖಮಾಡುವ ಪರಿಸ್ಥಿತಿ ಇರುವ ವೇಳೆ ನಗರದಲ್ಲಿ ಸಿಪಾಕಾದೊಂದಿಗೆ ಆರಂಭಿಸಿದ 24*7 ಸೇವೆ ನೀಡುವ ಐಸಿಯು ಸೇವೆ ಹಾಗೂ (ಸುವರ್ಣ ತಾಸುಗಳ) ಗೋಲ್ಡನ್ ಹವರ್ (Golden Hour)ಅವಧಿಯ ಚಿಕಿತ್ಸೆಯಿಂದ ಮೂರು ಅಮೂಲ್ಯ ಜೀವ ಉಳಿದಿವೆ ಎಂದು ಇಲ್ಲಿನ ವಿಬಿಆರ್ ಮುದ್ನಾಳ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ವೈದ್ಯರಾದ ಡಾ. ಅಮೋಘ ಸಿದ್ದೇಶ್ವರ ನರಸಣಗಿ ಹೇಳಿದರು.

    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಹಿಂದೆ ಕರ್ನಾಟಕದ ಮೊದಲ ಸಿಪಾಕಾ ಜಾಗತಿಕ ಗುಣಮಟ್ಟದ ಐಸಿಯು ಸೇವೆಯ ಸೌಲಭ್ಯ ಆರಂಭಿಸಿದ ನಂತರ ಅನೇಕ ಜನತೆಗೆ ಇದರಿಂದ ಉಪಯೋಗವಾಗಿದೆ.

    ಅದರಲ್ಲೂ ವಿಶೇಷವಾಗಿ ಕಳೆದ ತಿಂಗಳೊಪ್ಪತ್ತಿನಲ್ಲಿ ಮೂರು ವಿಶಿಷ್ಟ ಸವಾಲಿನ ಪ್ರಕರಣಗಳು ಯಶಸ್ವಿಯಾಗಿ ನಿಭಾಯಿಸಿ ಜೀವ ಉಳಿಸಿದ ಘಟನೆಗಳು ನಡೆದಿವೆ ಎಂದು ವಿವರಿಸಿದ ಅವರು, ಬೆನ್ನು ಮೂಳೆ ನರ ಅಪ್ಪಚ್ಚಿಯಾಗಿದ್ದ ಪ್ರಕರಣವನ್ನು ಶಸ್ತçಚಿಕಿತ್ಸೆ ಮೂಲಕ ಗುಣಪಡಿಸಿದ್ದಲ್ಲದೇ ಕೇವಲ 6 ತಾಸಿನಲ್ಲಿಯೇ ರೋಗಿ ಐಸಿಯುನಿಂದ ಸಾಮಾನ್ಯ ನಂತೆ ನಡೆದುಕೊಂಡು ಹೋಗುವಂತೆ ಮಾಡಿದ ಪ್ರಕರಣ ಯಶಸ್ವಿಯಾಗಿತ್ತು ಎಂದು ತಿಳಿಸಿದರು.

    ಎರಡನೇ ಪ್ರಕರಣದಲ್ಲಿ ರೋಗಿ 15 ಬಿಪಿ ಮಾತ್ರೆ ಸೇವಿಸಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಸಂದರ್ಭದಲ್ಲಿ ತಕ್ಷಣವೇ ಗೋಲ್ಡನ್ ಹವರ್ಸ್ ನಲ್ಲಿ ಐಸಿಯುಗೆ ಸೇರಿಸಿ ಚಿಕಿತ್ಸೆ ಕೊಟ್ಟ ಪರಿಣಾಮ ಬಹುತೇಕ ಸತ್ತೇ ಹೋಗಿದ್ದ ವ್ಯಕ್ತಿ 4 ದಿನಗಳಲ್ಲಿ ಬಿಪಿ ಹತೋಟಿಗೆ ತಂದು ಪುನರ್ಜನ್ಮದೊಪಾದಿಯಲ್ಲಿ ಬದುಕಿದ ಪ್ರಕರಣ ದಾಖಲಾಯಿತು ಎಂದು ತಿಳಿಸಿದರು.

    ಜೊತೆಗೆ ಹೊಲದಲ್ಲಿ ಕ್ರಿಮಿನಾಶಕ ಸಿಂಪಡನೆ ವೇಳೆ ಅಪಾಯಕಾರಿ ಕ್ರಿಮಿನಾಶಕ ದೇಶ ಸೇರಿದ ಕೆವಲ ಅರ್ಧ ತಾಸಿನಲ್ಲಿ ಐಸಿಯುಗೆ ಸೇರಿಸಿ ಚಿಕಿತ್ಸೆ ನೀಡಿದ್ದರಿಂದ ಆ ರೋಗಿಯೂ ಪ್ರಾಣ ಉಳಿಸಿದ ಪ್ರಕರಣ ಯಶಸ್ವಿಯಾಗಿ ನಿಭಾಯಿಸಲಾಯಿತು ಎಂದು ವಿವರಣೆ ನೀಡಿದರು.

    ಮೂರು ಪ್ರಕರಣಗಳಿಂದ ಗೋಲ್ಟನ್ ಹವರ್ ಎಂತಹ ಪವಾಡ ಮಾಡುತ್ತದೆ ಎಂಬುದು ನಮ್ಮ ಭಾಗದ ಜನತೆಗೆ ತಿಳಿಸುವ ಅಗತ್ಯತೆ ಮನಗಂಡು ಮಾಧ್ಯಮಗಳ ಮುಂದೆ ಬಂದುದಾಗಿ ಹೇಳಿದ ಅವರು, ಜಿಲ್ಲೆಯಲ್ಲಿ ವಿಶೇಷವಾಗಿ ಅಪಘಾತ, ಗರ್ಭಿಣಿಯರಿಗೆ ಹೆರಿಗೆ ಸಂದರ್ಭದಲ್ಲಿ ಬರುವ ತುರ್ತು ಸಂದರ್ಭಗಳಲ್ಲಿ ಗೋಲ್ಡನ್ ಹವರ್ ನ ಸದುಪಯೋಗಕ್ಕೆ ಚೆನ್ನೆöÊನ ಸಿಪಾಕಾ ನೆರವಿನೊಂದಿಗೆ ಆರಂಭಿಸಿದ ಐಸಿಯು ನಲ್ಲಿ ಯುಕೆ (ಲಂಡನ್) ನ ಗುಣಮಟ್ಟದ ಮಾರ್ಗದರ್ಶಿ ಸೂತ್ರಗಳನ್ವಯ ಕಾರ್ಯನಿರ್ವಹಣೆಯಿಂದಾಗಿ ಅಮೂಲ್ಯ ಮೂರು ಜೀವಗಳು ಉಳಿಸಲು ಸಾದ್ಯವಾಯಿತು ಎಂದು ವಿವರಿಸಿದರು.

    ಈ ಸಂದರ್ಭದಲ್ಲಿ ಮಾರುತಿ ಕಲಾಲ್, ಭೀಮು ಹಾಗೂ ಗುಣಮುಖರಾದ ರೋಗಿಗಳ ಕುಟುಂಬದವರು ಇನ್ನಿತರರು ಇದ್ದರು.

  • ಪಗಲಾಪುರ – ಭೀಮನಬಂಡಿ ಸೇತುವೆಗೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್ ಭೇಟಿ 

    ಪಗಲಾಪುರ – ಭೀಮನಬಂಡಿ ಸೇತುವೆಗೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್ ಭೇಟಿ 

    • ಪಗಲಾಪುರ – ಭೀಮನಬಂಡಿ ಹಳ್ಳ ಸೇತುವೆ ಕುಸಿತ: ಸಂಪರ್ಕ ಕಡಿತ
    • ಸ್ಥಳಕ್ಕೆ ಶಾಸಕರ ಭೇಟಿ- ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ

    ಸತ್ಯಕಾಮ ವಾರ್ತೆ ಯಾದಗಿರಿ:

    ಕಳೆದ ಮೂರು ದಿನಗಳ ಹಿಂದೆ ಕುಸಿದು ಬಿದ್ದಿರುವ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಗಲಾಪುರ-ಭೀಮನದಡ್ಡಿ ರಸ್ತೆ ಸಂಪರ್ಕ ಕಲ್ಪಿಸುವ ಸೇತುವೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ್ ಪರಿಶೀಲಿಸಿದರು.

    ಅತ್ಯಂತ ಹಳೆ ಸೇತುವೆಯಾಗಿರುವ ಇದು ಸುಮಾರು ಹದಿನೈದು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿದ್ದು, ಹರಿದು ಬಂದ ಮಳೆ ನೀರಿನ‌ ಒತ್ತಡ ತಾಳದೆ ಸೇತುವೆ ಕುಸಿದಿದೆ.

    ಇದರಿಂದ ಜನಸಂಪರ್ಕಕ್ಕೆ ತುಂಬಾ ತೊಂದರೆಯಾಗಿದ್ದು, ಇದನ್ನು ಕೂಡಲೇ ದುರಸ್ತಿ ಕಾರ್ಯ ಮಾಡಿಸಲಾಗುವುದೆಂದು ಶಾಸಕರು ಹೇಳಿದರು.

    ಸೋಮವಾರ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿದ ಶಾಸಕರು ಸುಮಾರು ಅರ್ಧ ಗಂಟೆಗಳ ಕಾಲ ಕುಸಿದು ಬಿದ್ದಿರುವ ಸೇತುವೆ ಪರಿಶೀಲಿಸಿದರು. ಆಗ ಸುತ್ತ ಮುತ್ತಲಿನ ಜನರು ಆ ರಸ್ತೆ ಮೇಲಿಂದಲೇ ವಾಹನಗಳ ಕೈಯಲ್ಲಿ ಹಿಡಿದು ನಡೆದುಕೊಂಡು ದಾಟುತ್ತಿರುವ ದೃಶ್ಯ ಕಂಡ ಶಾಸಕರು, ಇದು ಅಪಾಯಕಾರಿ ಸೂಚನೆ, ದಯವಿಟ್ಟು ಕೆಲ ದಿನಗಳ ಮಟ್ಟಿಗೆ ಈ ಸೇತುವೆ ರಸ್ತೆ ಉಪಯೋಗಿಸಬಾರದು, ಕಾರಣ ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವಕ್ಕೆ ತೊಂದರೆ ಇದೆ ಎಂದು ಹೇಳಿ ನಾಳೆಯಿಂದ ಈ ರಸ್ತೆ ಸಂಪರ್ಕ ಬಂದ್ ಮಾಡುವಂತೆಯೆ ಅಧಿಕಾರಿಗಳಿಗೆ ಸೂಚಿಸಿದರು. ತಕ್ಷಣವೇ ಈ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸುವಂತೆ ಪಿಎಸ್ಐ ಬಂಕಲಗಿಗೆ ಶಾಸಕರು ಹೇಳಿದರು.

    ಈ ವೇಳೆ ಗ್ರಾಮದ ಬಸವರಾಜಪ್ಪ ಗೌಡ ದಳಪತಿ, ಇಂಜಿನಿಯರ್ ಶ್ರೀಧರ ಸಾರ್ವಜನಿಕರು ಇದ್ದರು.

    ಈ ಸೇತುವೆ ಮೂಲಕ ಚಟಗೇರಾ, ಮಷ್ಠುರ್, ಕೌಳೂರು, ಸಾವುರು, ಮಲ್ಹಾರ್, ಹೆಗ್ಗಣದೊಡ್ಡಿ, ಯಾತನಾಳ, ಸೈದಾಪುರ ಹಾಗೂ ಲಿಂಗೇರಿ, ನಾಗರಬಂಡಾ, ಗೌಡಗೇರಿ, ಕಿಲ್ಲನಕೇರಾ, ಸೇರಿದಂತೆಯೇ ವಿವಿಧ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

     

    ಮಳೆ ನಿಂತ ಕೂಡಲೇ ದುರಸ್ತಿ ಕಾರ್ಯ ಆರಂಭಿಸಲಾಗುವುದು. ಅಲ್ಲಿಯವರೆಗೂ ಸಂಪರ್ಕ ಬಂದ್ ಮಾಡಲಾಗುವುದು.‌ ಇಲ್ಲಿಯೇ ಹೊಸ ಸೇತುವೆ ನಿರ್ಮಾಣಕ್ಕೆ 8 ಕೋಟಿ ರೂ. ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುಮೊದನೆ ಸಿಕ್ಕ ಕೂಡಲೇ ಕೆಲಸ ಆರಂಭಿಸಲಾಗುವುದು.

    ಚನ್ನಾರಡ್ಡಿ ಪಾಟೀಲ್ ತುನ್ನೂರ್, ಶಾಸಕರು, ಯಾದಗಿರಿ ಮತಕ್ಷೇತ್ರ