Author: Satyakam NewsDesk

  • ನಾಳೆ ಯಾದಗಿರಿ ಜಿಲ್ಲಾ ಕಛೇರಿಗೆ ಮುತ್ತಿಗೆ ಹಾಕುವುದರ ಮೂಲಕ ಪ್ರತಿಭಟನೆ MRPS ಅಧ್ಯಕ್ಷ ರವಿ ಬುರನ್ನೊಳ್

    ನಾಳೆ ಯಾದಗಿರಿ ಜಿಲ್ಲಾ ಕಛೇರಿಗೆ ಮುತ್ತಿಗೆ ಹಾಕುವುದರ ಮೂಲಕ ಪ್ರತಿಭಟನೆ MRPS ಅಧ್ಯಕ್ಷ ರವಿ ಬುರನ್ನೊಳ್

    ಸತ್ಯಕಾಮ ವಾರ್ತೆ ಗುರುಮಠಕಲ್:

    ಪಟ್ಟಣದ ಇಂದಿರಾ ನಗರ ಬಡಾವಣೆಯ ಅಲೆಮಾರಿ ಜನಾಗಂದ ಬುಡಗ ಜಂಗಮ ಜಾತಿಯ ಸಾಯಮ್ಮ ತಂ/ ಭೀಮಪ್ಪ ಸಿರಿಗಿರಿ ವಯಸ್ಸು ೧೫ ವರ್ಷ ಮತ್ತು ಶ್ಯಾಮಮ್ಮ ತಂ/ ಯಲ್ಲಪ್ಪ ಇಬ್ಬರು ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ಇಬ್ಬರ ಸಾವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಈ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿ ಸಂತ್ರಸ್ತ ಕುಟುಂಬಕ್ಕೆ ಕಾನೂನ ಪ್ರಕಾರ ನ್ಯಾಯ ಒದಗಿಸಿ ಕೊಡಲು ಈ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

    ಗುರುಮಠಕಲ್ ಮಾದಿಗ ದಂಡೋರ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಹಾಗೂ ಕರ್ನಾಟಕ ಅಲೆಮಾರಿ ಬಡ್ಗ ಜಂಗಮ ಹಕ್ಕುಗಳ ಹೋರಾಟ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸುಭಾಷ್ ವೃತದಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವ ಮೂಲಕ ಸರಕಾರಕ್ಕೆ ಮತ್ತು ಅಧಿಕಾರಿಗಳ ಗಮನ ಸೆಳೆಯಲಿದ್ದೇವೆ ಎಂದರು.

    ಸಂತ್ರಸ್ತ ಕುಟುಂಬಕ್ಕೆ ಈ ಕೊಡಲೇ ಸರಕಾರದಿಂದ ಬರುವ ಎಲ್ಲಾ ಪರಿಹಾರವನ್ನು ಒದಗಿಸಿಕೊಡುವದರ ಜೊತೆಗೆ ಆರೋಪಿಗಳಿಗೆ ಗಲ್ಲುಶಿಕ್ಷೆ ಮಾಡಬೇಕು ಎಂಬ ಧ್ಯೆಯದೊಂದಿಗೆ ಒತ್ತಾಯಸಿಲಿದ್ದೇವೆ ಎಂದು ಅವರು ಹೇಳಿದರು.

     

  • ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಜನ್ಮ ದಿನ : ಕಲಿಕಾ ಸಲಕರಣೆ ವಿತರಣೆ

    ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಜನ್ಮ ದಿನ : ಕಲಿಕಾ ಸಲಕರಣೆ ವಿತರಣೆ

    ಸತ್ಯಕಾಮ ವಾರ್ತೆ ಗುರುಮಠಕಲ್:

    ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ 58 ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳ ಬಳಗದ ಅಧ್ಯಕ್ಷ ನರಸಿಂಹಲು ಗಂಗನೋಳ್ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಪರೀಕ್ಷಾ ಪ್ಯಾಡ್ ವಿತರಣೆ ಮಾಡಲಾಯಿತು.

    ಇಲ್ಲಿನ ಬಾಲಕೀಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ) ವಿಭಾಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕ ಭೀಮಶಪ್ಪ ಮನ್ನೆ ಮಾತನಾಡಿ, ವಿದ್ಯಾರ್ಥಿಗಳ ಪರೀಕ್ಷೆಗೆ ಅನುಕೂಲವಾಗಲು ಪ್ಯಾಡ್ ವಿತರಣೆ ಕಾರ್ಯ ಶ್ಲಾಘಿಸಿದರು.

    ಸಾಕಷ್ಟು ಜನರಲ್ಲಿ ಸಾಕಷ್ಟು ಇದೆ. ಆದರೆ ಕೊಡುವ ಮನಸ್ಸು ದೊಡ್ಡದು. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳ ಬೇಕು ಎಂದರು.

    ಉಪನ್ಯಾಸಕ ನವಾಜರೆಡ್ಡಿ ಮಾತನಾಡಿ, ಒಳ್ಳೆ ಕೆಲಸ ಮಾಡುವ ಮನಸ್ಸು ಇರಬೇಕು. ಸಮಾಜ, ದೇಶ ಸೇವೆ ಮಾಡಿದವರ ಹೆಸರು ಇತಿಹಾಸ ಪುಟದಲ್ಲಿರುತ್ತದೆ. ಇಂತಹ ಆದರ್ಶ ಯುವ ಮುಖಂಡರಿಗೆ ನಾವೆಲ್ಲ ಪ್ರೋತ್ಸಾಹ ನೀಡಬೇಕು. ಸಾಮಾಜಿಕ ಕಾರ್ಯಗಳಿಗೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

    ಯಾದಗಿರಿಧ್ವನಿ.ಕಾಮ್ ಸಂಪಾದಕ ಅನೀಲ ಎನ್. ಬಸೂದೆ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗಾಗಿ ಗುರುಗಳು ಕೆಲವೊಮ್ಮೆ ಬೈದು ಹೇಳಬಹುದು ಹಾಗಾಗಿ ಅನ್ಯಥಾ ಭಾವಿಸಬಾರದು.

    ತಪ್ಪು ತಿದ್ದಿಕೊಂಡು ಉತ್ತಮ ವ್ಯಾಸಾಂಗ ಮಾಡಿ ಪಾಲಕರು, ಶಾಲೆಗೆ ಕೀರ್ತಿ ತರಬೇಕು. ತಂತ್ರಜ್ಞಾನವನ್ನು ಶೈಕ್ಷಣಿಕವಾಗಿ ಯಶಸ್ಸು ಸಾಧಿಸಲು ಬಳಕೆ ಮಾಡಿಕೊಂಡು ಸಫಲರಾಗಲು ಸಲಹೆ ನೀಡಿದರು.

    ಜನಾರ್ಧನ ರೆಡ್ಡಿ ಅಭಿಮಾನಿಗಳ ಸಂಘದ ಅಧ್ಯಕ್ಷ ನರಸಿಂಹಲು ಗಂಗನೋಳ್ ಮಾತನಾಡಿ. ಕಲಿಕ ಸಲಕರಣೆಗಳು ಉಪಯೋಗ ಪಡಿಸಿಕೊಂಡು, ಕೀರ್ತಿ ತರಬೇಕು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ತೇರ್ಗಡೆಯಾದವರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದರು.

    ಅಧ್ಯಕ್ಷತೆವಹಿಸಿದ್ದ ಪ್ರ.ಪ್ರಾಂಶುಪಾಲರಾದ ಈರಮ್ಮ ಮಾತನಾಡಿ, ಒಬ್ಬೊಬ್ಬರಲ್ಲಿ ಒಂದೊಂದು ಪ್ರತಿಭೆ ಅಡಗಿದೆ. ಇಂದು ಶಿಷ್ಯರ ಜೊತೆ ವೇದಿಕೆ ಹಂಚಿಕೊಂಡಿದ್ದು, ತಮ್ಮ ಕೈಯಲ್ಲಿ ಕಲಿತವರು ಸಮಾಜದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆ ಪಡುವ ಸಂಗತಿ. ಮಕ್ಕಳು ಜೀವನದಲ್ಲಿ ಗುರಿ ಸಾಧಿಸಲು ಶ್ರಮಿಸಲು ಕರೆ ನೀಡಿದರು.

    ವೇದಿಕೆ ಮೇಲೆ ಚನಬಸರೆಡ್ಡಿ, ಶಿಕ್ಷಕ ಲಿಂಗಾನಂದ ಗೋಗಿ ನಿರೂಪಿಸಿದರು. ಶರಣಪ್ಪ ಚಿಂತಕುಂಟಾ, ಆಂಜನೇಯ, ಭಾಗ್ಯಲಕ್ಷ್ಮೀ, ಹೇಮಲತಾ, ರಾಮಲಿಂಗಮ್ಮ, ಬಾಲಮಣಿ, ಅಲಿ ಮೌಲಾನಾ ಇದ್ದರು.

  • ಜೆಡಿಎಸ್ ಮುಖಂಡ ವೀರೇಶ ವಿಶ್ವಕರ್ಮ ಸಂಗಡಿಗರಿಂದ ಮುಗಳಖೋಡಕ್ಕೆ ಪಾದಯಾತ್ರೆ.

    ಜೆಡಿಎಸ್ ಮುಖಂಡ ವೀರೇಶ ವಿಶ್ವಕರ್ಮ ಸಂಗಡಿಗರಿಂದ ಮುಗಳಖೋಡಕ್ಕೆ ಪಾದಯಾತ್ರೆ.

    ಸತ್ಯಕಾಮ ವಾರ್ತೆ ಗುರುಮಠಕಲ್:

    ವಿಧಾನಸಭಾ ಚುನಾವಣೆಯಲ್ಲಿ ಶರಣಗೌಡ ಕಂದಕೂರ ಅವರು ಶಾಸಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಬುದೂರು ಗ್ರಾಮದ ಶಿವಾಲಯ ದೇವಸ್ಥಾನದಿಂದ ಮುಗಳಖೋಡಕ್ಕೆ ಪಾದಯಾತ್ರೆ ಕೈಗೊಳ್ಳಲಾಗಿದೆ.

  • ಕೃಷಿ ಇಲಾಖೆಯಿಂದ ಕೊಡಮಾಡುವ ರೈತರ ಸಲಕರಣೆಗಳು ಕಳಪೆ, ಕಂಪೆನಿಗಳಿದ ರೈತರಿಗೆ ಭಾರಿ ವಂಚನೆ;

    ಕೃಷಿ ಇಲಾಖೆಯಿಂದ ಕೊಡಮಾಡುವ ರೈತರ ಸಲಕರಣೆಗಳು ಕಳಪೆ, ಕಂಪೆನಿಗಳಿದ ರೈತರಿಗೆ ಭಾರಿ ವಂಚನೆ;

    ಸತ್ಯಕಾಮ ವಾರ್ತೆ ಯಾದಗಿರಿ:

    ಜಿಲ್ಲಾದ್ಯಂತ ಕಳಪೆ ಗುಣಮಟ್ಟದ ನೀರಾವರಿ ಸ್ಪಿಂಕ್ಲರ್ ಪೈಪ್ ಗಳನ್ನು ವಿವಿಧ ಕಂಪನಿಯವರು ಪೂರೈಸಿದ್ದು ಈ ಬ್ರಷ್ಟಾಚಾರದ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘದ ವಾಸುದೇವ ಮೇಟಿ ಬಣದ ಜಿಲ್ಲಾದ್ಯಕ್ಷ ಮಲ್ಲನಗೌಡ ಹಗರಟಗಿ ಒತ್ತಾಯಿಸಿದ್ದಾರೆ.

     

    ಈ ಕುರಿತು ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿರುವ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕೃಷಿ ಇಲಾಖೆಯವರ ಮೂಲಕ ಜಿಲ್ಲಾದ್ಯಂತ ರೈತರಿಗೆ ರಿಯಾಯತಿ ದರದಲ್ಲಿ ವಿತರಿಸುತ್ತಿರುವ ಸ್ಪಿಂಕ್ಲರ್ ಪೈಪ್ ಗಳು ಕಳಪೆ ಮಟ್ಟದಿಂದ ಕೂಡಿವೆ ಇದರಿಂದಾಗಿ ಸರ್ಕರಗಳ ಯೋಜನೆಗಳು ರೈತರಿಗೆ ತಲುಪುವ ವೇಳೆಗೆ ಅತ್ಯಂತ ಬ್ರಷ್ಟಾಚಾರ ನಡೆದು ರೈತರಿಗೆ ಕಳಪೆ ಸಾಮಗ್ರಿಗಳು ಪೂರೈಕೆ ಯಾಗುತ್ತಿವೆ.

     

    ವಿಶೇಷವಾಗಿ ವಿಶಕರ್ಮ ಡೀಲರ್ಸ್, ಪ್ರಗತಿ ಡೀಲರ್ಸ್ ಮತ್ತು ಕೆ.ಎಸ್.ಆಯ್ ಡೀಲರ್ಸ್ ರವರು ಜಿಲ್ಲೆಯ ರೈತರನ್ನು ವಂಚಿಸುತ್ತಿದ್ದಾರೆ. ಒಮ್ಮೆ ರೈತರಿಗೆ ಸಬ್ಸಿಡಿ ದರದಲ್ಲಿ ವಿತರಿಸಿದರೆ ಪುನಃ 7 ವರ್ಷಗಳವರೆಗೆ ಸ್ಪಿಂಕ್ಲರ್ ಪೈಪ್ ಗಳನ್ನು ಸರ್ಕಾರ ವಿತರಿಸುವದಿಲ್ಲ. ಈಗ ರೈತರಿಗೆ ವಿತರಿಸುತ್ತಿರುವ ಸ್ಪಿಂಕ್ಲರ್ ಪೈಪ್‌ಗಳು ತಿಂಗಳು ಹೆಚ್ಚೆಂದರೆ 1 ವರ್ಷಗಳವರೆಗೆ ಮಾತ್ರ ಬಾಳಿಕೆ ಬರುತ್ತವೆ. ಮುಂದೆ ರೈತರು ಹೊರಗಡೆ ಮಾರುಕಟ್ಟೆಯಲ್ಲಿ ದುಬಾರಿ ಹಣ ಕೊಟ್ಟು ಖರೀದಿ ಮಾಡಬೇಕಾಗುತ್ತದೆ. ಮೊದಲೇ ಬರಗಾಲದಿಂದ ತತ್ತರಿಸಿದ ರೈತರಿಗೆ ಕಳಪೆ ಸ್ಪಿಂಕರ್ ಪಂಪ್ ಗಳನ್ನು ತಯಾರಿಸಿ ಕೊಡುತ್ತಿರುವ ಕಂಪನಿಗಳಿAದ ರೈತರಿಗೆ ಭಾರಿ ಮೋಸ ವಂಚನೆಯಾಗುತ್ತಿದೆ.

     

    ಇತ್ತೀಚೆಗೆ ಸಿಂಕರ್ ಪೈಪ್‌ಗಳು ಕಂಪನಿಗಳು ನಾಯಿಕೊಡೆಗಳಂತೆ ಬೆಳೆಯುತ್ತಿವೆ. ಹೊಸದಾಗಿ ಹೆಚ್ಚು ಕಂಪನಿಗಳು ಹುಟ್ಟಿಕೊಳ್ಳುತ್ತಿರುವದರಿಂದ ಕಳಪೆ ಮಟ್ಟದ ಸ್ಪಿಂಕರ್ ಪೈಪ್‌ಗನ್ನು ಸಬ್ಸಿಡಿ ರೂಪದಲ್ಲಿ ಅನ್ನದಾತರಿಗೆ ಒದಗಿಸಲು ಕಂಪನಿಗಳು ವ್ಯವಸ್ಥಿತ ರೀತಿಯಲ್ಲಿ ಲೂಟಿ ಮಾಡಲು ಮುಂದಾಗಿವೆ. ಇದು ಕೆಲವಲ ಯಾದಗಿರಿ ಜಿಲ್ಲೆಗೆ ಸೀಮಿತವಲ್ಲ ಇದು ರಾಜ್ಯಾದ್ಯಂತ ನಡೆಯುತ್ತಿರುವ ಬ್ರಹ್ಮಾಂಡ ಬ್ರಷ್ಟಾಚಾರದ ಕೂಪವಾಗಿದೆ ಎಂದು ಅವರು ದೂರಿದ್ದಾರೆ.

     

    ರೈತ ಸಂಪರ್ಕ ಕೇಂದ್ರದಿAದ ಕೃಷಿ ಇಲಾಖೆಯವರು ನೇರವಾಗಿ ರೈತರಿಗೆ ರೈತರು ತಂದ ವಾಹನಗಳಲ್ಲಿ_ ಸರಬರಾಜು ಮಾಡುವುದು ಕಾನೂನು ಬಾಹೀರವಾಗಿದೆ. ಕೃಷಿ ಇಲಾಖೆಯ ನಿಯಮದ ಪ್ರಕಾರ ರೈತರ ಜಮೀನಿಗೆ ತೆರಳಿ ಪೂರ್ವ ಸಮೀಕ್ಷೆ ಮಾಡಿ ನಂತರ ನಿಯಮಾನುಸಾರ ಸ್ಪಿಂಕ್ಲರ್ ಪೈಪ್ ಗಳ ರೈತರ ಹೊಲದಲ್ಲಿ ಅಳವಡಿಸಿ ಜಿ.ಪಿ.ಎಸ್ ಮಾಡಬೇಕು ಮತ್ತೆ ಮುಂದೆ ಮುಂದಿನ ಸಮೀಕ ಮಾಡಿ ಸ್ಪಿಂಕ್ಲರ್ ಪೈಪ್ ಗಳು ಕಾರ್ಯ ನಿರ್ವಹಣೆ ಸಂತೃಪ್ತಿ ಇರುವದನ್ನು ರೈತರಿಂದ ಖಾತಿ ಪಡೆಸಿಕೊಂಡು ಸ್ಪಿಂಕ್ಲರ್ ಪೈಪ್‌ಗಳು ತಯಾರಿಸಿ ಸರಬರಾಜು ಮಾಡಿದ ಕಂಪನಿಗಳಿಗೆ ನಂತ ಬಿಲ್ಲನ್ನು ಪಾವತಿಸಬೇಕೆಂಬ ನಿಯಮವಿದೆ. ಆದರೆ ಇಲ್ಲಿ ರಾಜಾರೋಷವಾಗಿ ನಿಯಮ ಉಲ್ಲಂಘಿಸುತ್ತಿರುವ ಅಧಿಕಾರಿಗಳಿಂದಾಗಿ ರೈತರಿಗೆ ಘೋರ ಅನ್ಯಾಯ ಆಗುತ್ತಿದೆ.

     

    ಆದರೆ ಇಲ್ಲಯವರೆಗೂ ಜಿಲ್ಲೆಯ ಎಲ್ಲ ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ಕಂಪನಿಗೆ ಬೇಟಿ ನೀಡಿ ವೈಪ್‌ಗಳು ಕಚ್ಚಾ ವಸ್ತುಗಳ ಬಿ.ಎಸ್.ಬಿ. ಬಿಲೆಗಳನ್ನು ಮತ್ತು ಕಂಪನಿಯವರು ಉಪಯೋಗಿಸುತ್ತಿರುವ ಕಚ್ಚಾವಸ್ತುಗಳ ಮಾದರಿ ಕಲೆ ಹಾಕಿ ಸಿವೆಟ್ ಸಂಸ್ಥೆಗೆ ಕಳುಹಿಸಿರುವ ಉದಾಹರಣೆಯೇ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

    ಆಗ್ರಹ:

    • 1 ಸ್ಪಿಂಕ್ಲರ್ ಪೈಪ್‌ಗಳು ಕಂಪನಿಗಳು ಮತ್ತು ಕೃಷಿ ಇಲಾಖೆಯವರು ಜಂಟಿಯಾಗಿ ರೈತರ ಸಮ್ಮುಖದಲ್ಲಿ & ಕನ್ಸೆಕ್ಷನ್ ಮತ್ತು ಜೊತೆಯಾಗಿ ರೈತನ ಜೊತೆ ಜಿ.ಪಿ.ಎಸ್ ಸಹಿತ ಭಾವಚಿತ್ರ ತೆಗೆದುಕೊಳ್ಳಬೇಕು.
    • 2) ಪೈಪ್‌ಗಳು ಕಂಪನಿಯವರು ಸ್ಪಿಂಕರ್ ಪೈಪ್ ಗಳು ಮತ್ತು ಇತರೆ ಎಲ್ಲ ಸಲಕರಣೆಗಳನ್ನು ಖುದ್ದು ರೈತರ ಹೊಲಕ್ಕೆ ಹೋಗಿ ಅಳವಡಿಸಿ, ವೈಪ್‌ಗಳ ನಿರ್ವಹಣಿ ತೃಪ್ತಿಕರವಾಗಿರುವುದನ್ನು ರೈತರ ಸಮ್ಮುಖದಲ್ಲಿ ಖಾತ್ರಿ ಮಾಡಿಕೊಂಡು ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಅರ್ಹ ರೈತನ ಜೊತೆ ಜಿ.ಪಿ.ಎಸ್ ಸಹಿತ ಭಾವಚಿತ್ರವನ್ನು ತೆಗೆದುಕೊಳ್ಳಬೇಕು.
    • 3. ಕಂಪನಿಯವರು ಸ್ಪಿಂಕರ್ ಪೈವ್ ಗಳನ್ನು ಅಳವಡಿಸಿ ಸಿಂಕರ್ ಪೈಪ್ ಗಳು ಮತ್ತು ಸಲಕರಣೆಗಳು ತೃಪ್ತಿಕರವಾಗಿ ಕೆಲಸ ನಿರ್ವಹಿಸಿದ ನಂತರ ಪ್ರತಿ ರೈತರ ಹೆಸರಿನಲ್ಲಿ ಪ್ರತ್ಯೇಕವಾಗಿ ಇವೇ ಬಿಲನ್ನು ನಿಯಮಾನುಸಾರ ಕೃಷಿ ಇಲಾಖೆಗೆ ಬದಲಿಸಬೇಕು.
    • 4) ಯಾವುದೇ ಕಾರಣಕ್ಕೂ ಕಂಪನಿಯವರು ರೈತ ಸಂಪರ್ಕ ಕೇಂದ್ರಕ್ಕೆ ತಮ್ಮ ತಮ್ಮ ಸ್ವಿಂಕಲ್ ಪೈಪ್ ಗಳ ದಾಸ್ತಾನು ಮಾಡಬಾರದು. ನಿಯಮಾನುಸಾರ ಪ್ರಕಾರ ಅರ್ಹ ರೈತರ ಹೊಲಕೆ, ನೇರವಾಗಿ ಸದರಿ ಕಂಪನಿಯವರು ಸ್ಪಿಂಕ್ಲರ್ ಪೈಪ್ ಗಳನ್ನು ಒದಗಿಸಿ ನಿಯಮಾನುಸಾರ ರೈತರ ಹೊಲದಲ್ಲಿಯೇ ಅಳವಡಿಸಬೇಕು. ಮತ್ತು ಅದರ ನಿರ್ವಹಣೆ ತೃಪ್ತಿಕರವಾಗಿರುವುದನ್ನು ಸದರಿ ರೈತರ ಸಮ್ಮುಖದಲ್ಲಿ ಖಾತ್ರಿ ಪಡಿಸಿಕೊಳ್ಳಬೇಕು. ರೈತ ಸಂಪರ್ಕದವರು ಯಾವುದೇ ಕಾರಣಕ್ಕೂ ಸ್ಪಿಂಕ್ಲರ್ ಪೈನ್‌ಗಳ ದಾಸ್ತಾನು ಮಾಡಬಾರದು ಮತ್ತು ಕಂಪನಿಗಳು ಕೃಷಿ ಇಲಾಖೆ ಅಧಿಕಾರಿ ಎ.ಡಿ.ಎ ಹೆಸರಿನಲಿ ಬಿಲನ್ನು ಪಡೆಯುತ್ತಿರುವುದು ಕಾನೂನು ಬಾಹಿರವಾಗಿದೆ. ಕರ್ನಾಟಕ ಫ್ರಾನ ಪರೆನ್ಸಿ ತನ್ ಪಬ್ಲಿಕ್ ಪ್ರಾಕ್ಯೂರಮೆಂಟ್ ಆಕ್ಸ್ 1000 ಮತ್ತು ಬಿ.ಎಸ್. ಕಾನೂನ ವಿರುದ್ಧವಾಗಿದೆ
    • 5) ಕೇಂದ್ರ ಮತ್ತು ರಾಜ್ಯ ಕೃಷಿ ಇಲಾಖೆ ನಿಯಮಾನುಸಾರ ಸ್ಪಿಂಕ್ಲರ್ ಸೈಸ್ ಗಳ ಗುಣಮಟ್ಟ ಪರ್ಲಕ್ಷೆಯಲ್ಲಿ ವಿಫಲವಾದಲ್ಲಿ 1) ಒಂದು ಸಲ ಗುಣಮಟ್ಟ ಪಲಂಕ್ಷೆಯಲ್ಲಿ ವಿಫಲವಾದರೆ (ಎಚ್ಚರಿಕೆ ಪತ್ರ ಮತ್ತು ಸದಲ ಗುಣಮಟ್ಟ ಸಲಪಡಿಸರ್ಬೇಕು), 2) ಎರಡನೇಯ ಪಾಲ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದರೆ ( ಪ್ರತಿಶತ 10% ದಂಡ ಮತ್ತು ಎಚ್ಚರಿಕೆ ಪತ್ರ) 3) ಮೂದನೆ ಬಾಲ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದರೆ (ಪ್ರತಿಶತ 25% ದಂಡ ಮತ್ತು ಎಚ್ಚರಿಕೆ ಪತ್ರ) 4) ನಾಲ್ಕನೇಯ ಬಾರಿ ಗುಣಮಟ್ಟ ವಲಂಣೆಯಲ್ಲಿ ವಿಫಲವಾದರೆ ಸದರಿ ಕಂಪನಿಯನ್ನು ಕಪ್ಪು ಪಟ್ಟಿಗೆ ಎಸ್.ಎಲ್.ಎಲ್.ಸಿ ಯಲ್ಲಿ ನಿರ್ಣಯ ಮಾಡುವುದರ ಜೊತೆಗೆ ದಂಡವನ್ನು ಸಹ ಹಾಕಲೇಬೇಕು. ಸ್ಪಿಂಕ್ಲರ್ ಪೈಪ್ ಗಳ ಒಂದೇ ಪ್ಯಾಚ್ ನಲ್ಲಿ ಸಾವಿರಾರು ಸ್ಪಿಂಕ್ಲರ್ ಪೈಪ್ ಗಳ ಸೆಟ್ ಅನ್ನು ಉತ್ಪಾದನೆ ಮಾತ್ತು ಸರಬರಾಗಿರುತ್ತದೆ. ಇದರಲ್ಲಿ ಒಂದು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದರೆ, ಉಳಿದೆಲ್ಲವೂ ವಿಫಲವಾಗಿವೆ ಎಂದರ್ಥ ಅಥವಾ ಎಲ್ಲವನ್ನು ಗುಣಮಟ್ಟ ಪರೀಕ್ಷೆಗೆ ಒಳಪಡಿಸಿಲ್ಲ ಎಂದರ್ಥ
    • 6) ಕೃಷಿ ಇಲಾಖೆ ಎ.ಡಿ.ಎ ಹೆಸರಿನಲ್ಲಿ ಕಂಪನಿಗಳು ನಕಲಿ ಜಿಲ್ಲುಗಳನ್ನು ಒದಗಿಸುತ್ತಿರುವುದ. ಕಾನೂನಿನ ವಿರುದ್ಧವಾಗಿದೆ. ಒಂದು ವೇಳೆ ಕೃಷಿ ಇಲಾಖೆಯ ಎ.ಡಿ.ಎ ಅಧಿಕಾರಿ ಹೆಸರಿನಲ್ಲಿ ಕಂಪುರಿಗಳು ಬಿಲ್ಲನ್ನು ಮಾಡಿದ್ದೆ ಆದರೆ, ಸದಲ ಕೃಷಿ ಇಲಾಖೆಯು ಜಿ.ಎಸ್.ಟಿ ಯನ್ನು ಕಟ್ಟಬೇಕ ಮತ್ತು ಜಿ.ಎಸ್.ಬಿ ಫೈಲಿಂಗ್ ಸಹ ಮಾಡಬೇಕು. ಆದರೆ ಕೇಂದ್ರ ಮತ್ತು ರಾಜು ಸರಕಾರದ ನಿಯಮಾವಣ ಪ್ರಕಾರ ಯಾವುದೇ ಕಾರಣಕ್ಕೂ ಕೃಷಿ ಇಲಾಖೆ ಅಧಿಕಾರಿ ಎ.ಡಿ.ಎ ಹೆಸರಿನಲ್ಲಿ ಬಿಲ್ಲನ್ನು ತೆಗೆದುಕೊಳ್ಳಲು ಅವಕಾಶವೇ ಇದುವುದಿಲ್ಲ
    • 7) ರೂ.5000/- ಕ್ಕಿಂತ ಹೆಚ್ಚು ಬೆಲೆ ಬಾಳುವ ಕೃಷಿಗೆ ಸಂಬAಧಪಟ್ಟ ಸಲಕರಣೆಗಳನ್ನು ರೈತ್ಯ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಮಾಡಲೇಬಾರದು ಎಂಬ ನಿಯಮವಿದೆ. ಒಂದು ವೇಣಿ ದಾಸ್ತಾನು ಮಾಡಿದ್ರೆ ಆದಲ್ಲಿ ಕೇಂದ್ರ ರಾಜ್ಯ ಸರಕಾರದ ಮತ್ತು ಕರ್ನಾಟಕ ಟಾನ ಪರೆನ್ಸಿ ಇನ್ ಪಬ್ಲಿಕ್ ಪ್ರಾಕ್ಯೂರಮೆಂಟ್ ಆಕ್ಟ್ 1990 ಕಾನೂನುಗಳ ವಿರುದ್ಧವಾಗಿರುತ್ತದೆ.
    • 8) ಗುಣಮಟ್ಟ ನಿಯಂತ್ರಣ ಮತ್ತು ಪರೀಕ್ಷೆ
    • 9. ಕಳಪೆ ಗುಣಮಟ್ಟದ ಸ್ಪಿಂಕರ್ ಪೈಪ್ ಗಳನ್ನು ವಾಸನೆ ಗ್ರಹಿಸಿದರೆ ಅಥವಾ ಸುಟ್ಟರೆ ಅದರ ಗುಣಮಟ್ಟ ಗೊತ್ತಾಗುತ್ತದೆ. ಅದೇ ಒಳ್ಳೆಯ ಕಚ್ಚಾ ವಸ್ತುಗಳಿಂದ ಉತ್ಪಾದರೆ ಮಾಡಿದ್ರೆ ಆದರೆ ಯಾವುದೇ ಉತಿಯ ವಾಸನೆ ಬರುವುದಿಲ್ಲ ಇದು ಸಾಮಾನ್ಯರಿಗೂ ಸಹ ಗೊತ್ತಾಗುವಂತಹ ವಿಷಯ

    ಈ ಮೇಲ್ಕಾಣಿಸಿದ ಅಂಶಗಳನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡು ತನಿಖೆ ಮಾಡಿ ತಪ್ಪಿತಸ್ಸ ಸಿಂಕರ್, ಪೈಪ್ ತಯಾರಿಸುವ ನೋಂದಾಯಿತ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದು, ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಿಒಓ ಕಚೇರಿ ಮುಂದೆ ಪ್ರತಿಭಟನೆ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

  • ಪಿಡಿಓ’ಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಳ್ಳಿಗಳಲ್ಲಿ ವಾಸಿಸಬೇಕು; ಲೋಕಾಯುಕ್ತ ಬಿ.ಎಸ್ ಪಾಟೀಲ್

    ಪಿಡಿಓ’ಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಳ್ಳಿಗಳಲ್ಲಿ ವಾಸಿಸಬೇಕು; ಲೋಕಾಯುಕ್ತ ಬಿ.ಎಸ್ ಪಾಟೀಲ್

    ಅಂಬೇಡ್ಕರ್ ವೃತ್ತ ಅರ್ಧ ಕಾಮಗಾರಿ, ಪುರಸಭೆ ಮುಖ್ಯಾಧಿಕಾರಿ ವಿರುದ್ಧ ದೂರು

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ: 

    ಇಲ್ಲಿನ ಕರ್ನಾಟಕ ಕೋ-ಆಪರೇಟಿವ್ ಬ್ಯಾಂಕ್ ಸಭಾ ಭವನದಲ್ಲಿ ಸಾರ್ವಜನಿಕರಿಂದ ಕೆಲ ಇಲಾಖೆಗಳ ವಿರುದ್ಧ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ಸೋಮವಾರ ಕರ್ನಾಟಕ ಲೋಕಾಯುಕ್ತ ಬಿ.ಎಸ್. ಪಾಟೀಲ್ ಅವರು ಅಹವಾಲು ಸ್ವೀಕರಿಸಿದರು.

    ಜಿಲ್ಲೆಯಲ್ಲಿಯೇ ಮುದ್ದೇಬಿಹಾಳ ಹಿಂದೂಳಿದ ತಾಲೂಕು ಆಗಿದೆ. ಕೆಲ ಹಳ್ಳಿಗಳಿಗೆ ಸರಿಯಾದ ಬಸ್, ವಿದ್ಯುತ್ ಸೌಕರ್ಯ ಇರಲಿಲ್ಲ. ಆಗ ನಾಲ್ಕೈದು ಕಿಲೋ ಮೀಟರ್ ನಡೆದು ಕೊಂಡು ಶಾಲೆಗೆ ಹೋಗುತ್ತಿದ್ದೇವು. ಈಗ ಎಲ್ಲವೂ ಸೌಕರ್ಯವನ್ನು ಸರ್ಕಾರ ಕೋಟ್ಯಾಂತರ ಹಣವನ್ನು ಶಿಕ್ಷಣ, ಆರೋಗ್ಯ, ಮೂಲಸೌಕರ್ಯಕ್ಕೆ ಬಿಡುಗಡೆ ಮಾಡುತ್ತಿದೆ. ಅಧಿಕಾರಿಗಳು ಸರಿಯಾಗಿ ಅನುದಾನವನ್ನು ಯಾವುದರಲ್ಲಿ ಬಳಸಬೇಕು ಎಂಬುವ ಪರಿಕಲ್ಪನೆ ಇರಬೇಕು ಎಂದರು.

    ಸ್ವಚ್ಚತೆ, ಆರೋಗ್ಯ, ಶೈಕ್ಷಣಿಕವಾಗಿ ಈ ಭಾಗ ಹಿಂದುಳಿದಿದೆ. ಮನುಷ್ಯ ಅತೀ ಆಸೆಗೆ ಬಿದ್ದು ಚಪಲಕ್ಕೆ ಬಿದ್ದಿದ್ದಾನೆ ಬಡವರಿಗೆ ಬೇಕಾದಂತಹ ಸೌಕರ್ಯ ಆರ್ಥಿಕವಾಗಿ ಮುಂದಿರುವವರಿಗೆ ಸಿಗುತ್ತಿದೆ. ಇದರಿಂದ ಭ್ರಷ್ಟಾಚಾರ ವ್ಯಾಪಕವಾಗಿ ಜಾಸ್ತಿಯಾಗುತ್ತಿದೆ.

    ಈ ಭಾಗದ ಹಳ್ಳಿಗಳನ್ನು ಬೇರೆ ಬೇರೆ ಕೂಡ ಹೋಲಿಸಿ ನೋಡಬೇಕು. ಹಳ್ಳಿಗಳಲ್ಲಿ ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಿಸಲಾಗಿದೆ‌. ಇದನ್ನು ಸಾರ್ವಜನಿಕರು ಬಳಕೆ ಮಾಡುತ್ತಿಲ್ಲ. ಜಿಲ್ಲಾಧಿಕಾರಿಗಳು, ಸಿಇಓ ಹಾಗೂ ಅಧಿಕಾರಿಗಳು ಪಟ್ಟಣ ಸರಿ ಮಾಡಿದ್ರೆ ಸಾಲದು ಹಳ್ಳಿಗಳಲ್ಲಿ ಚರಂಡಿ, ರಸ್ತೆ, ಆರೋಗ್ಯಕ್ಕೆ ಬೇಕಾದ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದಂತಹ ಯೋಜನೆ ಸಿದ್ಧಪಡಿಸಬೇಕು ಎಂದು ರಾಜ್ಯ ಲೋಕಾಯುಕ್ತರು ಹೇಳಿದರು. ಈ ವೇಳೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಸಿಇಓ ಉತ್ತರಿಸಿದರು.

    ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಧಿಕ ಹಣ ತೆಗೆದುಕೊಳ್ಳಲಾಗುತ್ತಿದೆ‌‌. ಹೀಗಾಗಿ ಸರ್ಕಾರಿ ಆಸ್ಪತ್ರೆಗಳನ್ನು ಉನ್ನತ ಮಟ್ಟಕ್ಕೆ ಕೊಂಡ್ಯೊಯ್ದರೆ ಬಡ ಜನರಿಗೆ ಅನುಕೂಲ ವಾಗುತ್ತದೆ. ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಯಾವುದೇ ಅರ್ಜಿಯ ಮಾಹಿತಿ ಕೇಳಿದರೂ ಕೊಡಲು ಸಿದ್ಧ ಇರಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

    ಪಿಡಿಓಗಳು ಜಿಲ್ಲಾ ಮಟ್ಟದಲ್ಲಿ ವಾಸಿಸುತ್ತಾರೆ ಎಂದು ದೂರುಗಳು ಬಂದಿವೆ. ಈ ಭಾಗದ ಗ್ರಾ.ಪಂ ಸಮೀಪದಲ್ಲಿಯೇ ಖಾಯಂ ಆಗಿ ಪಿಡಿಓಗಳು ವಾಸಿಸಬೇಕು. ರಸ್ತೆಗಳಲ್ಲಿ ಅಕ್ರಮವಾಗಿ ಕಟ್ಟಿದ ಕಟ್ಟಡವನ್ನು ತೆರವುಗೊಳಿಸಬೇಕು. ಕಾನೂನು ಉಲ್ಲಂಘಿಸಿದವರಿಗೆ ಪಿಡಿಓಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ ನೀವು ಸಹ ಅಕ್ರಮ ಕಟ್ಟದಲ್ಲಿ ಭಾಗಿದಾರರು ಆದಂತೆ. ಎಲ್ಲರೂ ಕಾನೂನು ಪಾಲಿಸಬೇಕು ಹೊರತು ಉಲ್ಲಂಘಿಸಬಾರದು. ಹಳ್ಳಿಗಳಲ್ಲಿ ಪಿಡಿಓಗಳು ಚರಂಡಿ ನಿರ್ಮಾಣ ಮಾಡಿಕೊಡಲ್ಲ. ಇದರಿಂದ ರೋಗಗಳು ಬರದೇ ಇರುತ್ತಾವಾ? ಎಲ್ಲಾ ಗ್ರಾಮಗಳಲ್ಲಿ ಸುಸಜ್ಜಿತ ಅಭಿವೃದ್ಧಿಯನ್ನು ಮಾಡಲು ಗ್ರಾ.ಪಂ ಮಾಡಲಾಗಿದೆ. ಇದನ್ನು ಈಗ ಪಿಡಿಓಗಳು ಅಧೋಗತಿ ತಂದಿದ್ದಾರೆ.

    ಮನೆ, ನೀರು, ಆಸ್ತಿ ತೆರಿಗೆ ಹೀಗೆ ಯಾವ ಅನುದಾನಲ್ಲಿ ತೆರಿಗೆ ಎಷ್ಟು ಬಂದಿದೆ ಎಂಬುದನ್ನು ಸರಿಯಾಗಿ ನಿರ್ವಹಣೆಯ ಹಾಜರಾತಿ ಪುಸ್ತಕ ಮಾಡಬೇಕು. ಇದ್ಯಾವುದನ್ನು ಅಧಿಕಾರಿಗಳು ಪಾಲಿಸದಿದ್ದರೆ ನಿಮ್ಮ ವಿರುದ್ಧ ಕೇಸ್ ದಾಖಲಿಸವುದಲ್ಲದೇ, ನಿಮ್ಮ ವಿರುದ್ದ ಲೋಕಾಯುಕ್ತ ಅಧಿಕಾರಿಗಳು ಹಿಂಬಾಲು ಬೀಳುತ್ತಾರೆ.

    ಗ್ರಾಮಗಳಲ್ಲಿ ಕೆಲವು ಪ್ರಾಣಿಗಳು ಸಾವಿಗೀಡಾದರೆ ಮೂರು ನಾಲ್ಕು ದಿನ ಕಳೆದರೂ ಅವುಗಳನ್ನು ಸರಿಯಾಗಿ ವಿನಿಯೋಗಿಸುವುದಿಲ್ಲ. ದೇಶದಲ್ಲಿ ಬಹುತೇಕವಾಗಿ ಹೆಚ್ಚಿನ ಜನಸಂಖ್ಯೆ ಹಳ್ಳಿಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಹಳ್ಳಿಗಳು ಅಭಿವೃದ್ಧಿಗೊಂಡಾಗ ಮಾತ್ರ ದೇಶ ಅಭಿವೃದ್ಧಿ ಯಾದಂತೆ. ಹಳ್ಳಿಗರು ಮುಗ್ದರು, ಸರಿಯಾಗಿ ಅವರಿಗೆ ತಿಳುವಳಿಕೆ ಇರುವುದಿಲ್ಲ. ಸರಿಯಾಗಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಖೀತು ಮಾಡಲಾಯಿತು.

    ಹಳ್ಳಿ ಜನರಿಗೆ ಸರಿಯಾದ ಶಿಕ್ಷಣ ನೀಡುವಲ್ಲಿ ಡಿಡಿಪಿಓ, ಬಿಇಓ ಪಾತ್ರ ಬಹಳವಿದೆ. ಶಾಲೆಗಳಲ್ಲಿ ಸ್ವಚ್ಛತೆಗೆ ಬಹಳ ಮಹತ್ವ ಕೊಡಿ, ತಾಲೂಕಿನಲ್ಲಿ 66 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಪ್ರತಿ ಹಳ್ಳಿಗಳಲ್ಲಿ ಪ್ರಾಥಮಿಕ ಶಾಲೆ ಇವೆ. ಕಳಪೆ ಗುಣಮಟ್ಟದ ಶಾಲೆಗಳು ನಿರ್ಮಾಣವಾದ ದೂರುಗಳು ಬಂದಿವೆ ಎಂದರು. ಈ ವೇಳೆ ಬಿಇಓ ಬಸವರಾಜ ಸಾವಳಗಿ ಉತ್ತರಿಸಿ 97 ಶಾಲೆಗಳಲ್ಲಿ 225 ಶಾಲೆಗಳು ಕೊಠಡಿಗಳು ಶೀಥಲಗೊಂಡಿವೆ. ಇದಕ್ಕೆ ಈಗಾಗಲೇ ವರದಿ ನೀಡಲಾಗಿದೆ ಎಂದರು. ಆಗ ಲೋಕಾಯುಕ್ತರು ಮಾತನಾಡಿ ಹಾಗಾಗ ವರದಿಯನ್ನು ಮೇಲಿನ ಅಧಿಕಾರಿಗಳಿಗೆ ಪ್ರಸ್ತಾಪಿಸಬೇಕು‌. ಆಗಲೂ ಹಾಗದಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಬಿಡುವುದಿಲ್ಲ ಎಂದರು.

    ಪ್ರತಿಯೊಬ್ಬ ಪಿಡಿಓಗಳು ಸಮಯ ಹಾಕಿಕೊಂಡು ಪ್ರತಿದಿನ ಒಂದೊಂದು ಬಡವಾಣೆ ಆಯ್ದುಕೊಂಡು ಸ್ವಚ್ಛತೆ ಮಾಡಬೇಕು. ಪ್ರತಿ ಜಿಲ್ಲೆಯಲ್ಲಿ ಎಸ್.ಪಿ ಇದ್ದಾರೆ ಎರಡು ವಾರಕ್ಕೊಮ್ಮೆ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ. ಉನ್ನತವಾದ ಅಭಿವೃದ್ಧಿ ಮಾಡಿದ ಪಿಡಿಓಗಳನ್ನು ಗುರುತಿಸಿ ಪ್ರಶಂಸಾನ ಪತ್ರ ನೀಡಲಾಗುತ್ತದೆ‌. ಪಂಚಾಯತಿ ಅಧಿಕಾರಿಗಳು ಟ್ಯಾಕ್ಸ್ ಮೆಂಟೆನೆನ್ಸ್ ಪುಸ್ತಕ ಮಾಡದಿದ್ದರೆ ನೀವು ಈ ಹುದ್ದೆಗೆ ಯೋಗ್ಯರಲ್ಲವೆಂದು ಅತಿ ಶೀಘ್ರದಲ್ಲಿ ನಮ್ಮ ಇಲಾಖೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದರು.

    ಗ್ರಾ.ಪಂ ಸದಸ್ಯರಿಗೆ, ಅಧ್ಯಕ್ಷರಿಗೆ ಪಿಡಿಓಗಳು ಹೆದರುವ ಅವಶ್ಯಕತೆ ಇಲ್ಲ. ನೀವು ಯಾವುದೇ ಬಿಲ್ ನ್ನು ತಪ್ಪು ಬರಿಯದೇ ಖಂಡಿಸುವ ಗುಣ ಹೊಂದಿರಬೇಕು ಎಂದರು.

    ಈ ವೇಳೆ ಇಓ ಎನ್.ಎಸ್ ಮಸಳಿ ಮಾತನಾಡಿ, ಪ್ರತಿಶತ 5೦% ಕ್ಕಿಂತ ಹೆಚ್ಚಿಗೆ ಸಂಗ್ರಹಿಸಲಾಗಿದೆ. ಆರ್ ಓ(ಕುಡಿಯುವ ನೀರಿನ) ಘಟನೆಗಳು ಹಾಳು ಆಗಿದ್ದರಿಂದ ಅದಕ್ಕೆ ಬಳಸಬೇಕು ಯೋಜನೆ ಇದೆ ಎಂದು ಸಿಇಓ ಹೇಳಿದರು.

    ಜಲಜೀವನ ಮಿಶನ್ ಅಡಿಯಲ್ಲಿ ಮನೆಗಳಿಗೆ ಕುಡಿಯುವ ನೀರಿನ್ನು ಒದಗಿಸಬೇಕು. ತಾಲೂಕು ಎಇಇ ಹಿರೇಗೌಡ ಅಷ್ಟೇನೂ ನೀವು ಕ್ರೀಯಶೀಲರಿಲ್ಲ‌. ನೀವು ಆದಷ್ಟು ಬೇಗನೆ ನೀವು ಹಳ್ಳಿಗಳಿಗೆ ಹೋಗಿ ಜಲಮಿಶನ್ ಅಡಿ ನೀರು ಸರಿಯಾಗಿ ಗ್ರಾಮಸ್ಥರಿಗೆ ಹೋಗುತ್ತಿದೆ ಎಂಬುದನ್ನು ಪರೀಶಿಲಿಸಬೇಕು ಎಂದರು.

    ಸಾರ್ವಜನಿಕರ ಅಧಿಕಾರಿಗಳ ಹತ್ತಿರ ಸಮಸ್ಯೆ ಹೇಳಿಕೊಂಡು ಬಂದರೆ ಸರಿಯಾದ ಒಂದೆರೆಡು ಮಾತುಗಳನ್ನು ಆಡಬೇಕು. ಅದರಿಂದಲೇ ಕೆಲವು ಸಮಸ್ಯೆಗಳು ಪರಿಹಾರವಾಗುತ್ತವೆ. ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಬೇಕು. ಸರಿಯಾಗಿ ಅಧಿಕಾರಿಗಳು ಹಣದ ರಜಿಸ್ಟರ್ ಮಾಡಬೇಕು. ಆಗ ನಮ್ಮ ಅಧಿಕಾರಿಗಳು ಬಂದು ದಾಳಿಮಾಡಿದರೆ ನಿಮ್ಮ ಹತ್ತಿರ ಹಣ ಸಿಕ್ಕರೆ ಕೇಸ್ ದಾಖಲಾಗುತ್ತದೆ. ಈ ವೇಳೆ ನನ್ನ ಮಗನಿಗೆ ಫೀಸ್ ನೀಡಬೇಕಿತ್ತು, ಮನೆಯ ದುಡ್ಡು ಅಂದರೆ ಯಾವುದನ್ನು ನಾವು ಕೇಳುವುದಿಲ್ಲ‌. ಶಾಲೆಗಳಲ್ಲಿ 5 ರಿಂದ 10 ಸಾವಿರ ರೂಗೆ ಶಿಕ್ಷಕರ ನ್ನು ತಂದು ಶಿಕ್ಷಣವನ್ನು ನೀಡಲಾಗುತ್ತಿದೆ. ಅವರಿಗೆ ಸರಿಯಾದ ಶಿಕ್ಷಣ ಹಾಗೂ ತರಬೇತಿ ಇರುವುದಿಲ್ಲ ಅವರು ಏನು ಶಿಕ್ಷಣ ನೀಡುತ್ತಾರೆ. ಇದು ನಿಲ್ಲಬೇಕು ಎಂದು ಲೋಕಾಯುಕ್ತರು ಹೇಳಿದರು.

    ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಎಸ್ ವಸತಿ ನಿಲಯದ ಕೋಣೆಗಳಲ್ಲಿ 20 ಜನ ವಿದ್ಯಾರ್ಥಿಗಳನ್ನು ಹಾಕಲಾಗುತ್ತದೆ. ಇದು ದೌರ್ಬಾಗ್ಯ ಇದರ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ.

    ಕೃಷಿ ತೊಗರಿ ಬೆಳೆ ನಕಲಿ ಬಂದಿರುವುದಕ್ಕೆ ಏನು ಕ್ರಮ ಕೈಗೊಂಡಿದ್ದಿರಿ ಎಂಬುದಕ್ಕೆ ಹವಾಮಾನ ವೈಪರಿತ್ಯ ಮಂಜು ಬಿದ್ದಿರುವುದರಿಂದ ಇದಕ್ಕೆ ಇಳುವರಿ ಕಡಿಮೆಯಾಗಿದೆ. ಬಿಜೋಪಚಾರ ಮಾಡುವಾಗ ಅಂತರ ಕಾಯ್ದುಕೊಳ್ಳದೇ ಇರುವುದಕ್ಕೆ ಇಳುವರಿ ಕಡಿಮೆಯಾಗಿದೆ ಎಂದು ಧಾರವಾಡ ಹಾಗೂ ರಾಯಚೂರದಿಂದ ಕೃಷಿ ವಿಜ್ಞಾನಿಗಳು ವರದಿ ನೀಡಿದ್ದಾರೆ. ಬಗ್ಗೆ ವರದಿ ಕೂಡ ನೀಡಲಾಗಿದೆ ಎಂದು ತಾಲೂಕು ಕೃಷಿ ಅಧಿಕಾರಿ ಸುರೇಶ್ ಭಾವಿಕಟ್ಟಿ ಹೇಳಿದರು. ಹಳ್ಳಿಗಳಲ್ಲಿ ಅಲ್ಲಲ್ಲಿ ರೈತರ ಬೆಳೆಗಳನ್ನು ಪರಿಶೀಲನೆ ಮಾಡಲಾಗಿದೆ. ಬೆಳೆಗಳಿಗೆ ವಿಮಾ ಕಟ್ಟಿದ್ದರೆ ಅವರಿಗೆ ಕಂಡಿತವಾಗಿ ಬೆಳೆ ವಿಮಾವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

    ತಾಳಿಕೋಟಿ, ಮುದ್ದೇಬಿಹಾಳದಲ್ಲಿ 33 ಹಾಗೂ 12 ಕೆರೆಗಳು ಇವೆ. ಇದರಲ್ಲಿ 13 ಮುದ್ದೇಬಿಹಾಳದಲ್ಲಿ, 3 ತಾಳಿಕೋಟಿ ವ್ಯಾಪ್ತಿಯ ಕೆರೆಗಳು ಒತ್ತುವರೆಯಾಗಿವೆ.ಈ ಕೂಡಲೇ ತೆರವು ಗೊಳಿಸಲು ಕ್ರಮ ಕೈಗಳ್ಳಬೇಕು. ಈಗ ರೈತರು ಭಿತ್ತನೆ ಮಾಡಿದ್ದರಿಂದ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಬೆರಳೆಣಿಕೆಯಷ್ಟು ಇರುವ ಕೆರೆಗಳನ್ನು ಉಳಿಸಬೇಕು. ರೈತರು ಮನೆ ಇನ್ನೀತರ ಅಕ್ರಮಿಸಿರುವುದನ್ನು ಮೊದಲು ಒತ್ತುವರಿ ತೆರವುಗೊಳಿಸಬೇಕು ಎಂದರು.

    ಮುದ್ದೇಬಿಹಾಳ 42 ಸಾವಿರ ಜನಸಂಖ್ಯೆ ಇದ್ದು, ರಸ್ತೆಗಳಲ್ಲಿ ಶುಭಾಶಯ ಕೋರುವ ಪ್ಲೇಕ್ಸ್ ಹಾಕಲಾಗಿದೆ ಇವುಗಳನ್ನು ತೆರವುಗೊಳಿಸಬೇಕು. ಇದು ಸುಪ್ರೀಂ ಆದೇಶವಿದೆ. ಮುಂದೆ ಪ್ಲೆಕ್ಸ್ ಗಳು ಕಂಡರೆ ನಿಮ್ಮ ಮೇಲೆ ಕೇಸ್ ದಾಖಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ಬಿರಾದಾರಗೆ ಸೂಚಿಸಲಾಯಿತು.

    ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ ಒಟ್ಟು 18 ಕಸದ ವಾಹನಗಳು ಇವೆ. ಪ್ರತಿ ದಿನ 12 ಟನ್ ಕಸ ಸಂಗ್ರಹಿಸಲಾಗುತ್ತಿದೆ. ಪ್ರತಿ ದಿನ ಒಂದೊಂದು ವಾಹನಗಳು ನಾಲ್ಕು ಟ್ರಿಪ್ ಆಗುತ್ತಿದ್ದು, ಇದರಿಂದ ಹಣ ಪೋಲಾಗುತ್ತಿದೆ. ಇದನ್ನು ಅರಿತು ಬರುವ ದಿನಗಳಲ್ಲಿ ಟಾಟಾ ಎಸ್ ನಿಂದ ಪಟ್ಟಣದಲ್ಲಿತೇ ಟಿಪ್ಪರ್ ಹಾಕಿ ಈ ಮೂಲಕ ಕಸವನ್ನು ತೆಗೆದುಕೊಂಡು ಹೋಗುವ ಚಿಂತನೆ ಇದೆ ಎಂದರು.

    ದೂರುಗಳು

    ಪಟ್ಟಣದಲ್ಲಿ ಮನೆಕಟ್ಟಲು ಮುಖ್ಯಾಧಿಕಾರಿ ಲಂಚ ತೆಗೆದುಕೊಂಡಿದ್ದಾರೆ ಎಂದು ಪರಶುರಾಮ ಲೋಕಾ ಯುಕ್ತರಿಗೆ ದೂರು ಬಂದರೆ, ಅದೇ ರೀತಿ ಎಸ್.ಸಿ ಎಸ್.ಪಿ, ಟಿಎಸ್.ಪಿ ಹಣ ದುರುಪಯೋಗ, ಜಲ ಜೀವನ ಮಿಶಿನ್, ಹೊಲದ ದಾರಿಗಳ ಸಮಸ್ಯೆ, ಆಸ್ತಿ ಬೇರೆವರಿಗೆ ವರ್ಗಾವಣೆ ಬಗ್ಗೆ, ಮುದ್ದೇಬಿಹಾಳದ ಅಂಬೇಡ್ಕರ್ ವೃತ್ತ ಅರ್ಧ ಕಾಮಗಾರಿ ಕುರಿತು, ಅನಧಿಕೃತ ಕಟ್ಟಡಕ್ಕೆ ಅನುಮತಿ ನೀಡಿದ ಪುರಸಭೆ ಹಾಗೂ ತಾ.ಪಂ ವಿರುದ್ಧ ದೂರುಗಳು ಕೇಳಿಬಂದವು.

    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ಸಿಇಓ ರಿಷಿ ಆನಂದ, ಲೋಕಾಯುಕ್ತ ಎಸ್.ಪಿ ಟಿ ಮಲ್ಲೇಶ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

     

  • ವಿವೇಕಾನಂದರ ಬೋಧನೆ ಯುವ ಜನತೆಗೆ ಸ್ಫೂರ್ತಿ

    ವಿವೇಕಾನಂದರ ಬೋಧನೆ ಯುವ ಜನತೆಗೆ ಸ್ಫೂರ್ತಿ

    ಸತ್ಯಕಾಮ ವಾರ್ತೆ ಗುರುಮಠಕಲ್‌ :

    ಸ್ವಾಮಿ ವಿವೇಕಾನಂದರ ಬೋಧನೆಗಳು ಜಗತ್ತಿನಾಧ್ಯಾಂತ ಲಕ್ಷಾಂತರ ಜನರಿಗೆ, ಅದರಲ್ಲೂ ವಿಶೇಷವಾಗಿ ಯುವ ಜನತೆಗೆ ಸ್ಪೂರ್ತಿ ನೀಡುತ್ತಲೇ ಇದೆ ಗಣೇಶ್ ಬುರಗಪಲ್ಲಿ ಅಭಿಪ್ರಾಯಪಟ್ಟರು.

    ಪಟ್ಟಣಕ್ಕೆ ಹತ್ತಿರದಲ್ಲಿರುವ ಬುರಗಪಲ್ಲಿ ಗ್ರಾಮದಲ್ಲಿ ವಿವೇಕಾನಂದರ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇಶದಾದ್ಯಂತ ಮಹಾನ್ ಅಧ್ಯಾತ್ಮಿಕ ನಾಯಕ, ತತ್ವಜ್ಞಾನಿ, ಚಿಂತಕ ಹಾಗೂ ವಿಶ್ವ ಸನ್ಯಾಸಿ ಸ್ವಾಮಿ ವಿವೇಕಾನಂದರ 162 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಚಿಂತನೆಗಳು ಯಾವಾಗಲೂ ಯುವಕರನ್ನು ಪ್ರೇರೇಪಿಸುವಂತಿವೆ. ಜೊತೆಗೆ ಅವರಲ್ಲಿ ಹೊಸ ಶಕ್ತಿ ಮತ್ತು ಪ್ರಜ್ಞೆಯನ್ನು ತುಂಬುತ್ತಿವೆ ಎಂದರು.

    ಸ್ವಾಮಿ ವಿವೇಕಾನಂದರನ್ನು ಜಗತ್ತಿಗೆ ಪರಿಚಯಿಸಿದ ಚಿಕಾಗೋ ಭಾಷಣ


    ಸ್ವಾಮಿ ವಿವೇಕಾನಂದರು 1863 ರ ಜನವರಿ 12 ರಂದು ಕೋಲ್ಕತ್ತಾದಲ್ಲಿ ಜನಿಸಿದ್ದರು. 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನಲ್ಲಿ ಭಾಷಣದ ಮೂಲಕ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರು. ವಿವೇಕಾನಂದರ ಅಂದಿನ ಭಾಷಣ ಇತಿಹಾಸದಲ್ಲಿ ಅವರ ಅತ್ಯಂತ ಪ್ರಸಿದ್ದ ಕ್ಷಣಗಳಲ್ಲಿ ಒಂದಾಗಿದೆ. ತಮ್ಮ ಭಾಷಣದ ಆರಂಭದಲ್ಲಿ ಸ್ವಾಮಿ ವಿವೇಕಾನಂದರು, ‘ಅಮೆರಿಕದ ಸಹೋದರ ಸಹೋದರಿಯರೇ’ ಎಂದು ಹೇಳಿದಾಗ ಸದನವು ಎರಡು ನಿಮಿಷಗಳ ಕಾಲ ಚಪ್ಪಾಳೆಯನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿತ್ತು. ಅಂದಿನಿಂದ, ಭಾರತ ಮತ್ತು ಭಾರತೀಯ ಸಂಸ್ಕೃತಿಗೆ ಪ್ರಪಂಚದಾದ್ಯಂತ ಮಾನ್ಯತೆ ಸಿಕ್ಕಿತು. ಕೇವಲ 30ನೇ ವಯಸ್ಸಿನಲ್ಲಿ, ವಿವೇಕಾನಂದರು ಹಿಂದುತ್ವದ ದೃಷ್ಟಿಕೋನದಿಂದ ಸಹೋದರತ್ವದ ಪಾಠವನ್ನು ಜಗತ್ತಿಗೆ ಕಲಿಸಿದರು. ಧರ್ಮಗಳ ಸಂಸತ್ತಿನಲ್ಲಿ ಈ ಯುವ ಸನ್ಯಾಸಿ ಮಾಡಿದ ಭಾಷಣದಿಂದ ಇಡೀ ಜಗತ್ತು ಮಂತ್ರಮುಗ್ಧವಾಯಿತು.

    ಈ ಸಂಧರ್ಭದಲ್ಲಿ ಮಹೇಂದ್ರ , ನರಸಿಂಹಲು , ಬ್ರಹ್ಮನಂದ, ಕೃಷ್ಣ , ಪರುಶುರಾಮ, ರಮೇಶ್, ಗಣೇಶ್, ರಾಜು,ಶಿವು, ವೆಂಕಟ, ದಸ್ತಪ್ಪ ಉಪಸ್ಥಿತರಿದ್ದರು.

  • ಬೋರಬಂಡ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಣೆಗೆ ನಿರ್ಧಾರ

    ಬೋರಬಂಡ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಣೆಗೆ ನಿರ್ಧಾರ

    ಸತ್ಯಕಾಮ ವಾರ್ತೆ ಗುರುಮಠಕಲ್:

    ವೈಭವಯುತವಾಗಿ ವೈಕುಂಠ ಏಕಾದಶಿ ಹಿನ್ನೆಲೆ ಬೋರಬಂಡ ಲಕ್ಷ್ಮಿ ತಿಮ್ಮಪ್ಪ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ ಎಂದು ದೇವಸ್ಥಾನ ವ್ಯವಸ್ಥಾಪಕ ನರೇಂದ್ರ ರಾಠೋಡ ಹೇಳಿದರು.

    ಪಟ್ಟಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಗಳಿಗೆ ಏಕಾದಶಿ ಪವಿತ್ರ ದಿನವಾಗಿದ್ದು, ಇದರ ಮಹತ್ವವನ್ನು ಜನರಿಗೆ ಸಾರುವ ಉದ್ದೇಶದಿಂದ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

    ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ನಿಮಿತ್ತ ವೈಕುಂಠದ್ವಾರವನ್ನು ಯಾದಗಿರಿ ಅಪಾರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

    ಜ.೧೦ರಂದು ಬೆಳಿಗ್ಗೆ ೫;೩೦ ಸುಪ್ರಭಾತ ಸೇವೆ ನಂತರ ೯ಗಂಟೆಗೆ ವೈಕುಂಠದ್ವಾರ ಉದ್ಘಾಟನೆ. ಸಂಜೆ ೬ಗಂಟೆಯಿಂದ ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀ ಲಕ್ಷಿö್ಮ ತಿಮ್ಮಪ್ಪ ದೇವರಿಗೆ ಪಲ್ಲಕಿ ಸೇವೆ ಬಳಿಕ ಮಹಾಮಂಗಳ ಆರತಿ ನೆರವೇರಲಿದೆ ಎಂದು ವಿವರಿಸಿದರು.

    ಹಿಂದುಗಳ ಪವಿತ್ರ ದಿನವಾದ ಏಕಾದಶಿಯಂದು ಗುರುಮಠಕಲ್, ಯಾದಗಿರಿ, ರಾಯಚೂರ, ಬೀದರ ಸೇರಿದಂತೆ ನೆರೆಯ ತೆಲಂಗಾಣದಿಂದಲೂ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನಿತರಾಗಬೇಕು ಎಂದು ತಿಳಿಸಿದರು.

  • ನಿವೃತ್ತಿಗೊಂಡ ಸಹಾಯಕ ಆಡಳಿತಾಧಿಕಾರಿಗೆ ಆರೋಗ್ಯ ಇಲಾಖೆ ಶಾಕ್: ದೂರು ದಾಖಲು

    ನಿವೃತ್ತಿಗೊಂಡ ಸಹಾಯಕ ಆಡಳಿತಾಧಿಕಾರಿಗೆ ಆರೋಗ್ಯ ಇಲಾಖೆ ಶಾಕ್: ದೂರು ದಾಖಲು

    ಸತ್ಯಕಾಮ ವಾರ್ತೆ ಶಹಾಪುರ:

    ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಏಪ್ರಿಲ್ ತಿಂಗಳಲ್ಲಿ ನಿವೃತ್ತಿ ಹೊಂದಿದ್ದ ರುಕ್ಮೀಣಿ ಎಂ. ಅವರಿಗೆ ಆರೋಗ್ಯ ಇಲಾಖೆ ಶಾಕ್ ನೀಡಿದ್ದೂ ಇದೀಗ ಆಕೆಯ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

     

    ಸಹಾಯಕ ಆಡಳಿತಾಧಿಕಾರಿಯಾಗಿ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರುಕ್ಮೀಣಿ ಎಂ. ಅವರು ಆರೋಗ್ಯ ಇಲಾಖೆಯ ನೇಮಕಾತಿಯ ಸಂದರ್ಭದಲ್ಲಿ ತಮ್ಮ ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿದ್ದ ದಿ;24/04/1961ರ ಜನ್ಮ ದಿನಾಂಕವನ್ನು ದಿ: 24/04/1964 ಅಂತ ತಿದ್ದುಪಡಿ ಮಾಡಿ 1985 ನೇ ಸಾಲಿನಲ್ಲಿ ಬೆಂಗಳೂರ ನೇಮಕಾತಿ ಪ್ರಾಧಿಕಾರಿ ಮುಖ್ಯ ಕಛೇರಿಯಲ್ಲಿ ತಿದ್ದುಪಡಿ ದಾಖಲೆ ಸಲ್ಲಿಸಿ ಕೆಲಸ ಗಿಟ್ಟಿಸಿಕೊಂಡಿದ್ದರು.

    ಈ ಬಗ್ಗೆ ವಿಚಾರಣೆ ನಡೆಸಿದ ಆರೋಗ್ಯ ಇಲಾಖೆಗೆ ರುಕ್ಮಿಣಿ ಅವರು ತಮ್ಮ ಎಸ್.ಎಸ್.ಎಲ್.ಸಿ ಅಂಕಪಟ್ಟಿ ತಿದ್ದುಪಡಿ ಮಾಡಿ ತನ್ನ ಸ್ವಂತ ಲಾಭಕ್ಕಾಗಿ ಇಲಾಖೆಯಲ್ಲಿ ಮೂರು ವರ್ಷಗಳ ಕಾಲ ಹೆಚ್ಚಿಗೆ ಕರ್ತವ್ಯ ಮಾಡಿರುತ್ತಾರೆ ಎಂಬ ಅಂಶಗಳು ಬೆಳಕಿಗೆ ಬಂದಿದ್ದೂ, ವರದಿ ಆಧಾರದ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಯಾದಗಿರಿ ರವರ ಸೂಚನೆ ಮೇರೆಗೆ ಪ್ರಭಾರ ಮುಖ್ಯ ವೈದ್ಯಾಧಿಕಾರಿ ಡಾ:ಯಲ್ಲಪ್ಪ ಅವರು ನಿವೃತ್ತಿ ಹೊಂದಿರುವ ರುಕ್ಮೀಣಿ ಎಂ. ಅವರ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

     

    ಕಲಂ:409, 420, 465, 468, 471 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಶಹಾಪುರ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ ಎಂದು ಸತ್ಯಕಾಮ ಪತ್ರಿಕೆಗೆ ಪೊಲೀಸ್ ಮೂಲಗಳು ತಿಳಿಸಿವೆ.

  • ಜನರ ಧ್ವನಿಯಾಗಿ ನಾ ವಿಧಾನಸೌಧದಲ್ಲಿ ಮಾತಾಡಿನಿ

    ಜನರ ಧ್ವನಿಯಾಗಿ ನಾ ವಿಧಾನಸೌಧದಲ್ಲಿ ಮಾತಾಡಿನಿ

    ಸತ್ಯಕಾಮ ವಾರ್ತೆ ಯಾದಗಿರಿ:

    ರಾಜಕೀಯದಲ್ಲಿ ವಿರೋಧ ಸಾಮಾನ್ಯ, ವಿಧಾನಸೌಧದಲ್ಲಿ ನಾ ಮಾತಾಡ್ತಿನಿ ಅಂದ್ರ ಅದು ನಿಮ್ಮಾಶೀರ್ವಾದದಿಂದ ಮಾತ್ರ, ಜನರ ಧ್ವನಿಯಾಗಿ ನಾ ವಿಧಾನಸೌಧದಲ್ಲಿ ಮಾತಾಡಿನಿ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

    ತಾಲೂಕಿನ ಹೊನಗೇರಾ ಗ್ರಾಮದಲ್ಲಿ ಶಾಸಕ ಶರಣಗೌಡ ಕಂದಕೂರ ಅಭಿನಂದನಾ ಸಮಾರಂಭ ಹಾಗೂ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸುಭಾಶ್ಚಂದ್ರ ಕಟಕಟಿಯವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಎಪಿಎಂಸಿ ಸೇರಿದಂತೆ ಮುಂದೆ ಹಲವು ಚುನಾವಣೆಗಳು ಬರಲಿವೆ, ಪಕ್ಷ ಸಂಘಟನೆಗೆ ಇನ್ನೂ ಹೆಚ್ಚಾಗಿ ಆಗಬೇಕಿದೆ, ಪಕ್ಷ ಉಳಿದರೆ ನಾವು ನೀವು ಉಳಿಯೋದು ಸಾಧ್ಯ ಅದನ್ನರಿತು ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.

    ಗುರುಮಠಕಲ್ ಮುಖಂಡರಾದ ಬಸಣ್ಣ ದೇವರಳ್ಳಿ ಮಾತನಾಡಿ, ನಾಲ್ಕು ದಶಕಗಳ ದಲಿತರ ಕನಸು ಗುರುಮಠಕಲ್ ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಪುತ್ಥಳಿ ಅನಾವರಣ ಮಾಡಿ ದಲಿತರ ಕನಸು ನನಸು ಮಾಡಿದ್ದಾರೆ ಎಂದರು.

    ಸನ್ಮಾನ ಸಮಾರಂಭದಲ್ಲಿ ಕಟಕಟಿ ಬಾವುಕ

    ಅಣ್ಣಾ ಇವತ್ತು ನನ್ನ ಕುಟುಂಬಕ್ಕೆ ನಿಮ್ಮ ಕುಟುಂಬದ ಆಶೀರ್ವಾದ ಸದಾ ಇದೆ. ಊರಿಗೆ ಒಳ್ಳೆಯದನ್ನು ಮಾತ್ರ ನಾ ಮಾಡಿನಿ ಅದಕ್ಕಾಗಿ ಕಂದಕೂರ ಕುಟುಂಬದ ಆಶೀರ್ವಾದ ಇದೆ.ಕಂದಕೂರ ಕುಟುಂಬಕ್ಕೆ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಹುದ್ದೆ ನಿಭಾಯಿಸುತ್ತೇನೆ.

    – ಸುಭಾಷ ಕಟಕಟಿ, ಜೆಡಿಎಸ್ ಜಿಲ್ಲಾಧ್ಯಕ್ಷರು, ಯಾದಗಿರಿ

     

    ಶರಣಗೌಡ ಕಂದಕೂರ ಅವರು ಗುರುಮಠಕಲ್‌ಗೆ ಶಾಶ್ವತ ಶಾಸಕರು ಕಳೆದ ನಾಲ್ಕು ದಶಕಗಳಿಂದಾಗ ಅಭಿವೃದ್ಧಿಯನ್ನು ಮಾಡಿದ್ದಾರೆ. ಹಳ್ಳಿಗಳ ಪ್ರತಿಯೊಂದು ಕುಟುಂಬದ ಜೊತೆ ಸಂಪರ್ಕದಲ್ಲಿದ್ದು, ಅವರ ಕಷ್ಟ, ನೋವು ನಲಿವುಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.

    ಶಾಸಕ ಕಂದಕೂರ ಅವರಿಗೆ ಅದ್ದೂರಿ ಮೆರವಣಿಗೆ

    ಗುರುಮಠಕಲ್ ಮತಕ್ಷೇತ್ರದ ಹೊನಗೇರಾ ಗ್ರಾಮದಲ್ಲಿ ಶಾಸಕ ಶರಣಗೌಡ ಕಂದಕೂರ ಅಭಿನಂದನಾ ಸಮಾರಂಭ ಹಾಗೂ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸುಭಾಶ್ಚಂದ್ರ ಕಟಕಟಿಯವರಿಗೆ ಸನ್ಮಾನ ಸಮಾರಂಭದ ನಿಮಿತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು.

    ಈಶಪ್ಪ ರ‍್ಯಾಕಾ ಪ್ರಾಸ್ತಾವಿಕ ಮಾತನಾಡಿ, ಕಂದಕೂರ ಕುಟುಂಬದಿAದ ಯಾದಗಿರಿ ಜಿಲ್ಲೆಯಲ್ಲಿ ಜೆಡಿಎಸ್ ಜೀವಂತವಾಗಿದೆ. ನಮ್ ನಾಯಕರು ಬರಿ ಹೇಳೋದಲ್ಲ ಕೆಲಸ ಮಾಡಿ ತೋರಸ್ತಾರ ಜೆಡಿಎಸ್ ನಲ್ಲಿ ಲಾಬಿ ಇಲ್ಲ ನಿಷ್ಠೆಗೆ ಮಾತ್ರ ಹುದ್ದೆ ಎನ್ನುವದನ್ನು ಮತ್ತೊಮ್ಮೆ ನಿಷ್ಠಾವಂತ ಕಾರ್ಯಕರ್ತರಿಗೆ ಜಿಲ್ಲಾಧ್ಯಕ್ಷ ಹುದ್ದೆ ಕೊಟ್ಟಿರುವುದೇ ಸಾಕ್ಷಿಯಾಗಿದೆ. ನಮ್ಮೂರಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಹುದ್ದೆಯ ಜವಾಬ್ದಾರಿ ಕೊಟ್ಟು ಮೊತ್ತೊಮ್ಮೆ ಹೊನಗೇರಾ ಗ್ರಾಮದ ಕೈ ಶಾಸಕ ಶರಣಗೌಡ ಕಂದಕೂರ ಅವರು ಹಿಡಿದಿದ್ದಾರೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ದೊಡ್ಡನಾಗಪ್ಪ ಬೋವಿ, ಜಿ.ತಮ್ಮಣ್ಣ, ಮಲ್ಲಣಗೌಡ ಕೌಳೂರ, ಶರಣು ಆವಂಟಿ, ಭೋಜನಗೌಡ ಯಡ್ಡಳ್ಳಿ, ಪ್ರಕಾಶ ನಿರೆಟಿ, ಬಸಣ್ಣ ದಢವರಳ್ಳಿ, ಕೃಷ್ಣಾರಡ್ಡಿ, ಪಾಪಣ್ಣ ಮನ್ನೆ, ನಾಗರಾಜ ದೇಶಮುಖ, ಅಜಯರಡ್ಟಿ ಎಲ್ಹೇರಿ, ರವಿ ಪಾಟೀಲ, ರಾಮಣ್ಣ ಬಳಿಚಕ್ರ, ಸಣ್ಣಪ್ಪ ಕೋಟಗೇರಾ, ಗಿರಿನಾಥರಡ್ಡಿ, ನಾಗರಡ್ಡಿ ಮೋಟ್ನಳ್ಳಿ, ಮಾರ್ಥಂಡಪ್ಪ ಮಾನೇಗಾರ, ತಾಯಪ್ಪ ಬದ್ದೇಪಲ್ಲಿ, ಈಶ್ವರ ನಾಯಕ, ನರಾಪ್ಪ ಕವಡೆ, ಹಣಮಂತ ಬಂದಳ್ಳಿ, ತಿಪ್ಪಾರಡ್ಡಿ, ಶರಣಗೌಡ ಮೋಟ್ನಳ್ಳಿ, ಸೋಮನಗೌಡ ಬೆಳಗೇರಾ, ಗುರುನಾಥರಡ್ಡಿ ಸೈದಾಪೂರ, ಅಮೀನರಡ್ಡಿ, ಮಲ್ಲಣಗೌಡ ಹತ್ತಿಕುಣಿ ಇದ್ದರು.

     

    ಕಂದಕೂರ ಮಂತ್ರಿ ಖಚಿತ

    ರಾಜ್ಯ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಮತ್ತೇ ಬರ್ತದಾ ಶರಣಗೌಡ ಕಂದಕೂರ ಮಂತ್ರಿ ಆಗೋದು ಖಚಿತ.

  • ತಾಲೂಕ ನ್ಯಾಯಾಲಯಕ್ಕೆ ಆಗ್ರಹಿಸಿ ಡಿ 23 ರಂದು ಪ್ರತಿಭಟನೆ- ಸಿ. ಎಸ್. ಮಾಲಿಪಾಟೀಲ್ 

    ತಾಲೂಕ ನ್ಯಾಯಾಲಯಕ್ಕೆ ಆಗ್ರಹಿಸಿ ಡಿ 23 ರಂದು ಪ್ರತಿಭಟನೆ- ಸಿ. ಎಸ್. ಮಾಲಿಪಾಟೀಲ್ 

    ಸತ್ಯಕಾಮ ವಾರ್ತೆ ಗುರುಮಠಕಲ್ :

    ಪಟ್ಟಣವು ತಾಲೂಕ ಕೇಂದ್ರವಾಗಿ ಆರು ವರ್ಷ ಕಳೆದರೂ ತಾಲೂಕಿಗೆ ಸಂಬಂಧ ಪಟ್ಟ ಇಲಾಖೆಗಳು ಸೇರಿದಂತೆ ತಾಲೂಕು ನ್ಯಾಯಾಲಯ ಸ್ಥಾಪನೆ ಆಗದೆ ಇರುವದಕ್ಕೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ. ಎಸ್. ಮಾಲಿಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

     

    ಪಟ್ಟಣದ ಸರ್ಕಿಟ್ ಹೌಸ್‌ನಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಗುರುಮಠಕಲ್‌ನಲ್ಲಿ ತಾಲೂಕು ನ್ಯಾಯ ಲಯ ಸ್ಥಾಪನೆಗೆ ಆಗ್ರಹಿಸಿ ಹೋರಾಟದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಡಿಸೆಂಬರ್ 23 ರಂದು ಗಾಂಧಿ ಮೈದಾನದಿಂದ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.

    ಪಕ್ಷ ಬೇಧ ಮರೆತು ಇಂದು ಗಡಿಭಾಗದ ತಾಲೂಕಿನ ಮೂಲಭೂತ ಸೌಕರ್ಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳು, ಸರ್ವ ಸಂಘ ಸಂಸ್ಥೆಗಳು ಹೋರಾಟಕ್ಕೆ ಹೊಂದಾಗಬೇಕು ಎಂದು ವೀರಪ್ಪ ಪ್ಯಾಟಿ ಅಭಿಪ್ರಾಯಪಟ್ಟರು.

    ವಕೀಲ ಗುರುನಾಥ ಅನಪುರ ಮಾತನಾಡಿ, ಹೈಕೋರ್ಟ್ ಈಗಾಗಲೇ ಸ್ಪಷ್ಟವಾಗಿ ನಿರ್ದೇಶಿಸಿದ್ದರು ಫಿಠೋಪಕರಣದ ಸಿದ್ಧತೆಗಾಗಿ ಬಿಡುಗಡೆಯಾಗಬೇಕಾದ ಹಣವನ್ನು ವಿವಿಧ ಇಲಾಖೆ ಹಾಗೂ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದಾಗಿ ಬಾರದಿರಿವಿದು ಮಲತಾಯಿ ದೋರಣೆ ಮಾಡುತ್ತಿದ್ದಂತೆ ಕಾಣುತ್ತಿದೆ, ನ್ಯಾಯ ದೊರಕುವ ವರೆಗೂ ಹೋರಾಟ ನಿಲ್ಲದು ಎಂದು ಅವರು ಹೇಳಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಚಾಪೆಟ್ಲಾ ಮಾತನಾಡಿ, ಪ್ರಿಯಾಂಕ ಖರ್ಗೆ ಅವರು ಸಂಬಂಧ ಪಟ್ಟ ಇಲಾಖೆಗೆ ಫಿಠೋಪಕರಣಕ್ಕೆ ಅವಶ್ಯಕತೆಯ ಹಣವನ್ನು ಶಿಫಾರಸ್ಸು ಮಾಡಿದ್ದಾರೆ, ಮುಂದಿನ ದಿನಗಳಲ್ಲಿ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರ ನೇತೃತ್ವದಲ್ಲಿ ಒತ್ತಡ ಹೇರೋಣ ಎಂದರು.

    ಜೆಡಿಎಸ್ ನ ಮುಖಂಡ ಜಿ. ತಮ್ಮಣ್ಣ, ವಕೀಲ ಸಾಯಬಣ್ಣ ಗಣಾಪುರ, ಅನಂತಪ್ಪ ಯಾದ್ಲಾಪುರ ಮಾತನಾಡಿದರು.

    ಪ್ರತಿಭಟನೆಗೆ ಖಾಸಾಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಬೆಂಬಲ ನೀಡಿ ಸಭೆಯಲ್ಲಿ ಭಾಗವಹಿಸಿದ್ದರು. ಅವರು ಇಲ್ಲಿನ ಜನರು ತಾಲ್ಲೂಕು ಕೇಂದ್ರವಾದರೂ ಜಿಲ್ಲಾ ಕೇಂದ್ರಕ್ಕೆ ಅಲೆದಾಡುವುದು ತಪ್ಪುತ್ತಿಲ್ಲ. ಇಲ್ಲಿಯೇ ನ್ಯಾಯಾಲಯವಾದಲ್ಲಿ ಜನರ ಸಮಸ್ಯೆಗೆ ಇಲ್ಲಿಯೇ ಪತಿಹಾರ ಸಿಗುವುದು ಅನುಕೂಲವಾಅಗುವುದು ಎಂದು ಹೇಳಿದರು. ಈ ಸಂಧರ್ಭದಲ್ಲಿ ರಾಜ ರಮೇಶ ಗೌಡ, ಖಜಾಂಚಿ ಸಾಬಣ್ಣ, ಕಿಷ್ಟಪ್ಪ ಪುರುಷೋತ್ತಮ್, ಕೃಷ್ಣ ಮೇದಾ, ಗುರುನಾಥ ರೆಡ್ಡಿ ಅನಪುರ, ವೀರಪ್ಪ ಪ್ಯಾಟಿ, ವಿಶ್ವನಾಥ ರೆಡ್ಡಿ, ಜಿ.ತಮ್ಮಣ್ಣ, ಕೃಷ್ಣ, ಸಂಜೀವ ಕುಮಾರ ಚಂದಾಪುರ, ನರಸಿಂಹಲು ನಿರೇಟಿ, ಆಶಣ್ಣ ಬುದ್ದ, ಮೋಹನ ಕುಮಾರ್ ಗಜಾರೆ, ಕೃಷ್ಣ ಪಂಚಾಲ, ಅನಂತಪ್ಪ ಬೋಯಿನ್ ಯಾದ್ಲಾಪುರ, ಆಶೋಕ್ ಗುಮಡಾಲ್, ನಾಗೇಶ ಗದ್ದಿಗಿ, ಮರಳಿಧರ್ ಮೌರ್ಯ, ಜ್ಞಾನೇಶ್ವರ ರೆಡ್ಡಿ, ರಾಮಯ್ಯ ಗೌಡ, ದಂತಾಪೂರ, ಅಶೋಕ್ ಶನಿವಾರಂ, ಭೀಮಶಪ್ಪ ಶನಿವಾರಂ, ರಂಗಸ್ವಾಮಿ, ಚನ್ನಬಸಪ್ಪ, ಮೊಗುಲಪ್ಪ ಯಾದ್ಲಾಪುರ, ಫಯಾಜ್ ಅಹ್ಮದ್, ಮೌನೇಶ್ ಕೊಂಕಲ್, ಲಾಲಪ್ಪ ತಲಾರಿ, ವಿವಿಧ ಸಂಘಟನೆಗಳ ಮುಖಂಡರು ಇದ್ದರು.

     

    ಗುರುಮಠಕಲ್ ತಾಲೂಕ ಕೇಂದ್ರವಾಗಿ 6 ವರ್ಷವಾದರು ಅಭಿವೃದ್ಧಿ ಮರೀಚಿಕೆಯಾಗಿದೆ, ಸರಕಾರದ ಮಲತಾಯಿ ಧೋರಣೆ ವಿರುದ್ಧ ಹಾಗೂ ಜನರಿಗೆ ಅನುಕೂಲವಾಗುವಂತೆ ಕೋರ್ಟ್ ಕಛೇರಿಗಳ ಸ್ಥಾಪನೆ ಪ್ರಯುಕ್ತ ತಾಲೂಕಿನ ಎಲ್ಲಾ ಹಳ್ಳಿ ಜನರು, ರಾಜಕೀಯ ಪಕ್ಷದ ಕಾರ್ಯಕರ್ತರು, ವರ್ತಕರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡು ಬೇಡಿಕೆ ಸಲ್ಲಿಸೋಣ.

    ಆನಂದ ರಾವ್ ನೀರೇಟಿ, ವಕೀಲರು.