ಸತ್ಯಕಾಮ ವಾರ್ತೆ ವಡಗೇರಾ:
Author: Satyakam NewsDesk
-

ಹಿಂದುಳಿದ ವಸತಿ ನಿಲಯದಲ್ಲಿ ಕಳಪೆ ಕಾಮಗಾರಿ: ಆರೋಪ
ಪಟ್ಟಣದ ಹಿಂದುಳಿದ ವರ್ಗದ ವಸತಿ ನಿಲಯದ ಸ್ನಾನಗೃಹ ಹಾಗೂ ಶೌಚಾಲಯ ಕಳಪೆ ಮಟ್ಟದ ಕಾಮಗಾರಿ ಮಾಡಿದ್ದಾರೆ ಎಂದು ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಮರೇಪ್ಪ ಊಳ್ಳೆಸೂಗುರ ಆರೋಪಿಸಿದ್ದಾರೆ.ಸರಕಾರ ಬಡ ಮಕ್ಕಳ ಅನುಕೂಲಕ್ಕಾಗಿ ಲಕ್ಷಾನುಗಟ್ಟಲೆ ಹಣ ಖರ್ಚು ಮಾಡಿ ಸ್ನಾನ ಗ್ರಹ ಹಾಗೂ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದೆ ಆದರೆ ಗುತ್ತಿಗೆದಾರರು ಅಧಿಕಾರಿಗಳ ನಿರ್ಲಕ್ಷದಿಂದ ಸಮರ್ಪಕ ಕಾಮಗಾರಿ ನಡೆದಿಲ್ಲ ಅಲ್ಲಿ ಸರಿಯಾದ ನೀರಿನ ವ್ಯವಸ್ಥೆ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳನ್ನು ನೀಡದೆ ಮೋಸ ಮಾಡಿ ಬೋಗಸ್ ಬಿಲ್ ಎತ್ತಿಕೊಂಡಿದ್ದಾರೆ ಇದರಿಂದ ಅಲ್ಲಿನ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಲು ತುಂಬಾ ತೊಂದರೆ ಆಗಿದೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳಿಗೆ ಸಮರ್ಪಕ ಮೂಲಭೂತ ಸೌಕರ್ಯಗಳು ಒದಗಿಸಬೇಕು ಒಂದು ವೇಳೆ ನಿರ್ಲಕ್ಷ ಮಾಡಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಮರೇಪ್ಪ ಊಳ್ಳೆಸೂಗೂರು ಎಚ್ಚರಿಸಿದ್ದಾರೆ. -

ಗುಣಮಟ್ಟದ ರಸ್ತೆ ನಿರ್ಮಿಸಿ : ಶಾಸಕ ಶರಣಗೌಡ ಕಂದಕೂರ
ಸತ್ಯಕಾಮ ವಾರ್ತೆ ಯಾದಗಿರಿ:
ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಗುಣಮಟ್ಟದ ರಸ್ತೆಗಳ ಸುಧಾರಣೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಕ್ಷೇತ್ರ ವ್ಯಾಪ್ತಿಯ ಕೆಟ್ಟು ಹೋದ ರಸ್ತೆಗಳನ್ನು ಮರು ನಿರ್ಮಿಸಲಾಗುತ್ತಿದೆ. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಗುತ್ತಿಗೆದಾರರು ಆದ್ಯತೆ ನೀಡಬೇಕು, ಅಧಿಕಾರಿಗಳು ಹಾಗಾಗ ಪರಿಶೀಲಿಸಬೇಕು, ೬ ತಿಂಗಳ ಗಡುವಿನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ಗುರುಮಠಕಲ್ ತಾಲೂಕಿನ ಮಾಧ್ವಾರ ಗ್ರಾಮದಲ್ಲಿ ಮುಧೋಳ – ಯಲಗೇರಾ ಆಂಧ್ರ ಬಾರ್ಡ್ರ್ ವರೆಗೆ೪ ಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಮತಕ್ಷೇತ್ರದ ಎಲ್ಲ ಸಮುದಾಯವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು, ಸಿಸಿ ರಸ್ತೆ ಸೇರಿದಂತೆ ಗುಣಮಟ್ಟದ ರಸ್ತೆಗಳ ಸುಧಾರಣೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯಿಂದ ಮಾತ್ರ ಹಳ್ಳಿಗಳ ಪ್ರಗತಿ ಸಾಧ್ಯವಿದ್ದು, ತಾಲೂಕಿನ ಎಲ್ಲಾ ಗ್ರಾಮಗಳಿಗೂ ಪಕ್ಕಾ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು. ರಸ್ತೆ ಸುಧಾರಣೆ ಕಾರ್ಯ ನಡೆಯುವಾಗ ಯಾವುದೇ ತೊಂದರೆಯಾಗದAತೆ ಸಾರ್ವಜನಿಕರೂ ಸಹ ಸಹಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಪಿಡಬ್ಲುಡಿ ಎಇಇ ಪರಶುರಾಮ ಮುಷ್ಟೂಕರ್, ತಾಪಂ ಇಒ ಅಮರೇಶ ಪಾಟೀಲ, ಅಮರನಾಥರಡ್ಡಿ ವಂಕಸAಬ್ರ, ಬನ್ನಪ್ಪಗೌಡ ವಂಕಸAಬ್ರ, ಶಂಕ್ರಪ್ಪ ಕಾಳಗಿ, ಶರಣಗೌಡ, ಸಾಯಪ್ಪ, ಗೋಪಾಲ, ಶಿವರಾಜ, ಜಾನಪ್ಪ, ಶಂಕರರಡ್ಡಿ ಯಲಸತ್ತಿ, ವೀರೇಂದ್ರರಡ್ಡಿ ಯಲಸ್ತಿ÷್ತ, ರಾಘವೇಂದ್ರ ರಡ್ಡಿ ವಡವಟ್, ಆನಂದ ವಡವಟ್, ಗುರುನಾಥರಡ್ಡಿ, ಮಲ್ಲಿಕಾರ್ಜುನ ಅರುಣಿ, ನರಸಪ್ಪ ಕವಡೆ, ಪರ್ವತರಡ್ಡಿ ಕಾಳಬೆಳಗುಂದಿ, ರಾಘವೇಂದ್ರ ಜೈಗ್ರಾಮ, ಭೀಮರಾಯ ಗುಡ್ಲಗುಂಟಾ ಸೇರಿದಂತೆ ಇತರರಿದ್ದರು.
ಮಾಧ್ವಾರ ಗ್ರಾಮದಲ್ಲಿ ಜನರ ಸಮಸ್ಯೆ ಆಲಿಸಿದ ಶಾಸಕ ಕಂದಕೂರ
ಸತ್ಯಕಾಮ ವಾರ್ತೆ ಯಾದಗಿರಿ:
ಯಾದಗಿರಿ : ಮಾಧ್ವಾರ ಗ್ರಾಮದ ವಾರ್ಡ್ ನಂ ೧ರಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಮಳೆ ಬಂದರೆ ಸಾಕು ಇಡಿ ಅಂಗನವಾಡಿಯಲ್ಲಿ ನೀರು ನಿಲ್ಲುತ್ತವೆ. ಇದರಿಂದ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಶಾಸಕ ಶರಣಗೌಡ ಕಂದಕೂರ ಅವರಲ್ಲಿ ಮನವಿ ಮಾಡಿದರು.ಇದೇ ವೇಳೆ ತಾಪಂ ಇಒ ಅವರಿಗೆ ಕ್ರಮಕೈಗೊಳ್ಳುವಂತೆ ಸೂಚಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗೆ ಪೋನ್ ಮಾಡಿ ಅಂಗನವಾಡಿ ಸಮಸ್ಯೆಯನ್ನು ಪರಿಶೀಲಿಸಿ, ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದರು. ಅಧಿಕಾರಿಗಳು ಬಂದು ಪರಿಶೀಲಿಸಿದ ನಂತರ ಹೊಸ ಅಂಗನವಾಡಿ ಕಟ್ಟಡ ಕಟ್ಟಬೇಕಾದ್ರು ಕಟ್ತಿವಿ ಅಥವಾ ಅದನ್ನೇ ಮೇಲ್ದಜೇಗೇರಿಸಬೇಕಾದರು ಅದನ್ನು ಮಾಡ್ತಿವಿ ಒಟ್ಟಿನಲ್ಲಿ ನಿಮ್ಮೂರಿನ ಅಂಗನವಾಡಿ ಸಮಸ್ಯೆ ಬಗೆಹರಿಸ್ತೇನೆ ಎಂದು ಹೇಳಿದರು.
ಗ್ರಾಮೀಣ ಭಾಗದ ಪ್ರತಿಯೊಂದು ಹಳ್ಳಿಗಳಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮಕೈಗೊಳ್ಳಬೇಕಿದೆ, ಪಿಡಿಒಗಳು ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು, ಪ್ರತಿಯೊಂದು ಹಳ್ಳಿಯಲ್ಲಿನ ಆರ್‌ಒ ಪ್ಲಾಂಟ್ ಪರಿಶೀಲಿಸಬೇಕು, ಆರ್‌ಡಬ್ಲುಎಸ್‌ಗೆ ಹೇಳಿದೆ, ತಾಪಂ ಗೆ ಹೇಳಿದೆ ಅಂತ ಸಬೂಬು ಹೇಳಬೇಡಿ ಪೈಲ್ ಕಳಿಸಿ ಕೂಡಬೇಡಿ ಎಲ್ಲಾ ವಾಟರ್ ಪ್ಲಾಂಟ್‌ಗಳನ್ನು ಪರಿಶೀಲಿಸಿ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು, ತಾಪಂ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು ಎಂದು ತಾಕಿತು ಮಾಡಿದರು.
ಕಳೆದ ೨ ವರ್ಷಗಳಿಂದ ಹಲವು ಗ್ರಾಮ ಮತ್ತು ತಾಂಡಾಗಳಲ್ಲಿ ಶಾಲೆ, ಆಸ್ಪತ್ರೆ, ಅಂಗನವಾಡಿ ನಿರ್ಮಾಣ ಮಾಡಿದ್ದೇವೆ, ಆದರೂ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾಮಗಾರಿಗಳನ್ನು ನಿರ್ವಹಿಸುತ್ತೇವೆ, ಮುಂದಿನ ದಿನಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಹಲವು ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ನೀಡುತ್ತೇನೆ ಎಂದು ಹೇಳಿದರು.
ವಂಕ್ರಸAಬ್ರ ಗ್ರಾಮದ ಜನರ ಮನವಿ ಆಲಿಸಿದ ಶಾಸಕರು, ಕೂಡಲೇ ವಿದ್ಯುತ್ ಸಮಸ್ಯೆ ನಿವಾರಿಸಬೇಕು ಎಂದು ಜೆಸ್ಕಾಂ ಅಧಿಕಾರಿ ರಾಠೋಡ ಅವರಿಗೆ ಸೂಚಿಸಿದರು.
—————— -

ರಕ್ತದಾನ ಮಾಡಲು ಯುವಕರು ಮುಂದಾಗಬೇಕು
ಯಾದಗಿರಿ : ಜೂನ್ 17, (ಕ.ವಾ) : ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕೆಂದು ಪ್ರೇರೆಪಿಸಿದರು, ಇದರಲ್ಲಿ ವೈದ್ಯ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿರುತ್ತದೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲವೀಶ್ ಒರಡಿಯಾ ಅವರು ಹೇಳಿದರು.ಯಾದಗಿರಿ ನಗರದಲ್ಲಿ ಜೂ.17ರ ಮಂಗಳವಾರ ರಂದು ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯಾದಗಿರಿ ಜಿಲ್ಲೆಯಲ್ಲಿ ರಕ್ತ ಕೇಂದ್ರ ಆರಂಭವಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕೆಂದು ಪ್ರೇರೆಪಿಸಿದರು, 2025ರ ಜೂನ್ 14 ರಂದು ವಿಶ್ವದ್ಯಾಂತ ರಕ್ತದಾನಿಗಳ ದಿವಸ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆ 2025ರ ಜೂನ್ 17 ರಂದು ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವಿಶ್ವ ರಕ್ತದಾನಿಗಳ ದಿನ ಆಚರಣೆಯ ವೈದ್ಯ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿರುತ್ತದೆ ಎಂದು ಹೇಳಿದರು.ಯಾದಗಿರಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸಂಜೀವಕುಮಾರ ರಾಯಚೂರಕರ್ ಅವರು ಮಾತನಾಡಿ, 17 ರಿಂದ 65 ವರ್ಷ ಒಳಗಿರುವ ಆರೋಗ್ಯವಂತ ವ್ಯಕ್ತಿಗಳು ವರ್ಷಕ್ಕೆ 2 ಬಾರಿ ರಕ್ತದಾನ ಮಾಡಬಹುದು, ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಿದರೆ ಅವರ ದೇಹದಲ್ಲಿ ಹೊಸ ರಕ್ತ ಉಂಟಾಗಲು ಪ್ರಚೋದನೆಯಾಗುತ್ತದೆ ಯಾವುದೇ ತರಹದ ಆಪತ್ತು ಬರುವುದಿಲ್ಲ ಬದಲಾಗಿ ಹೊಸ ಚೈತನ್ಯ ಮೂಡುತ್ತದೆ. ರಕ್ತದಾನ ಮಾಡುವವರಿಗೆ ಬಿ.ಪಿ ಹಿಮೊಗ್ಲೋಬಿನ್, ಹೆಚ್.ಐ.ವಿ ಹೆಚ್.ಬಿ.ಐ.ಜಿ, ಸಿಫಲೀಸ್ ಇನ್ನೀತರ ಪರೀಕ್ಷೆ ಮಾಡಿದ ನಂತರವೇ 350 ರಿಂದ 450 ಎಂ.ಎಲ್ ರಕ್ತ ಪಡೆಯಲಾಗುತ್ತದೆ, ಅಪಘಾತ ಹೊಂದಿ ರಕ್ತಸ್ರಾವ ಆದವರಿಗೆ ಅನಿಮೀಯಾದಿಂದ ಬಳಲುತ್ತಿರುವ ಬಾಣಂತಿಯರಿಗೆ ದೊಟ್ಟ ಪ್ರಮಾಣದ ಶಾಸ್ತ್ರ ಚಿಕಿತ್ಸೆಗಳಿಗಾಗಿ, ಥಲಸಿಮೀಯಾ ಮತ್ತು ಹೀಮಿಫೆಮಿಯಾ ರೋಗಿಗಳಿಗೆ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುತ್ತದೆ ಎಂದು ತಿಳಿಸಿದರು.ಯಿಮ್ಸ್ ವೈದ್ಯಕೀಯ ನಿರ್ದೇಶಕರು ಡಾ.ಸಂದೀಪ.ಹೆಚ್ ಅವರು ಮಾತನಾಡಿ ಪ್ರತಿಯೊಬ್ಬ ವೈದ್ಯಕೀಯ ವಿದ್ಯಾರ್ಥಿ ರಕ್ತದಾನ ಮಾಡಲು ಮುಂದೆ ಬಂದು ಸಮಾಜದಲ್ಲಿ ಒಂದು ಪ್ರೇರಣೆ ಆಗಬೇಕು ಎಂದು ಹೇಳಿದರು. ಯಾದಗಿರಿಯಲ್ಲಿ ರಕ್ತಕೇಂದ್ರ ಆರಂಭವಾಗಿದ್ದು ತುಂಬಾ ಜನರ ರಕ್ತದಾನದ ಅವಶ್ಯಕತೆ ಇದೆ ಎಂದು ಹೇಳಿದರು.ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಪಾಟೀಲ್, ಅವರು ಮಾತನಾಡಿದರು, ಕರ್ನಾಟಕದಲ್ಲಿ ಶೇ.1 ರಷ್ಟು ಜನರಿಗೆ ಪ್ರತಿ ವರ್ಷ ರಕ್ತದಾನದ ಅವಶ್ಯಕತೆ ಇದೆ ಆದರೆ 0.5 ಶೇಕಡಾ ಕೂಡ ರಕ್ತದಾನಿಗಳು ತುರ್ತು ಸಂದರ್ಭದಲ್ಲಿ ಲಭ್ಯವಿರುವುದಿಲ್ಲ ಕಾರಣ ರಕ್ತದಾನ ಒಂದು ಮಹಾ ಪುಣ್ಯದ ಕೆಲಸ ಜೀವ ಉಳಿಸುವ ಕಾರ್ಯ. ರಕ್ತವನ್ನು ಕೃತ್ರಿಮವಾಗಿ ತಯಾರಿಸಲು ಸಾದ್ಯವಿಲ್ಲ ಅದು ಕೇವಲ ಮಾನವನ ದೇಹದಲ್ಲಿ ಮಾತ್ರ ಉತ್ಪತ್ತಿಯಾಗುತ್ತದೆ. ಆದ ಕಾರಣ ಇನ್ನೀತರರ ಜೀವದ ಬಗ್ಗೆ ಕಾಳಜಿ ಇರುವವರು ರಕ್ತದಾನ ಮಾಡಬೇಕೆಂದು ಹೇಳಿದರು.ಯಾದಗಿರಿ ಯಿಮ್ಸ್ ರಕ್ತ ಕೇಂದ್ರ ವೈದ್ಯಕೀಯ ಅಧಿಕಾರಿ ಡಾ.ಸಿದ್ದಲಿಂಗರೆಡ್ಡಿ ಅವರು ಮಾತನಾಡಿ, ರಕ್ತ ಕೇಂದ್ರ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ವಿವರ ನೀಡಿದರು.ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳಾದ ಯಿಮ್ಸ್ ನಿರ್ದೇಶಕರು ಡಾ.ಸಂದೀಪ.ಹೆಚ್ ಅವರು ಶ್ರೀ ನಿಂಗಪ್ಪ ಜಡಿ, ಅಭಿಲಾಷ ಮತ್ತು ಸುಪ್ರೀತ ಇವರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಲಾಯಿತು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವತಿಯಿಂದ ರಕ್ತದಾನ ಶಿಬಿರದಲ್ಲಿ 34 ಜನ ರಕ್ತದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಯಾದಗಿರಿ ಯಿಮ್ಸ್ ಪ್ರಾಂಶುಪಾಲರು ಡಾ.ನವಾಜ್ ಉಮರ್, ಯಾದಗಿರಿ ಯಿಮ್ಸ್ ಹಣಕಾಸು ಸಲಹೆಗಾರರು ಶ್ರೀ ಕಾಶಿನಾಥ ಜಿಲ್ಲಾ ಶಾಸ್ತ್ರ ಚಿಕಿತ್ಸಕರು ಡಾ.ರಿಜ್ವಾನಾ ಆಫ್ರೀನ್, ಡಾ.ಮಾನಸಾ ದಾಸ, ಡಾ.ಶಿವಕುಮಾರ, ಡಾ.ಮಲ್ಲಪ್ಪ, ಡಾ.ಪದ್ಮಾನಂದ ಗಾಯಕವಾಡ್, ಡಾ.ಹಣಮಂತರೆಡ್ಡಿ, ಯಿಮ್ಸ್ ಭೋದಕ ಸಿಬ್ಬಂದಿ ಜಿಲ್ಲಾ ಡ್ಕಾಪ್ಕೋಯೋ ಮತ್ತು ಕ್ಷಯರೋಗ ಘಟಕದ ಸಿಬ್ಬಂದಿಗಳು, ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. -

ಚಾಡಿ ಹೇಳುವ ಸಂಸ್ಕೃತಿ ನಮ್ಮದಲ್ಲ, ನಿಮ್ಮದು
ಸತ್ಯಕಾಮ ವಾರ್ತೆ ಯಾದಗಿರಿ:
ಈ ಹಿಂದೆ ಜನತಾ ಪರಿವಾರದಲ್ಲಿದ್ದಾಗ ನಮ್ಮ ನಾಯಕರಾದ ಸದಾಶಿವರಡ್ಡಿ ಕಂದಕೂರ ರವರ ಬಗ್ಗೆ ಚಾಡಿ ಹೇಳಿ ಅವರಿಗೆ ಅಧಿಕಾರಿ ತಪ್ಪಿಸಿದವರು ಯಾರು?, ಕಾಂಗ್ರೆಸ್‌ನಲ್ಲಿದ್ದಾಗ ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿಯವರ ಬಗ್ಗೆ ಹಿರಿಯ ನಾಯಕರಿಗೆ ಕಿವಿ ಊದಿ ಟಿಕೆಟ್ ತಪ್ಪಿಸಿದ್ದು ಯಾರೆಂಬದು ಯಾದಗಿರಿ ಜಿಲ್ಲೆಯ ಜನರಿಗೆ ಗೊತ್ತಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ ರವರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಯಾದಗಿರಿ ಶಾಸಕ ಚನ್ನಾರಡ್ಡಿ ತುನ್ನೂರ ರವರು ಕುಮಾರಸ್ವಾಮಿಯವರ ಹೇಳಿಕೆಗೆ ಸಂಬAಧಿಸಿದAತೆ ನೀಡಿದ ಪ್ರತಿಕ್ರಿಯೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇನ್ನೊಬ್ಬರ ಬಗ್ಗೆ ಚಾಡಿ ಹೇಳುವ ಸಂಸ್ಕೃತಿ ನಮ್ಮ ನಾಯಕರದ್ದಲ್ಲ ಎನ್ನುವುದು ಜನರಿಗೆ ಗೊತ್ತಿದೆ, ತಾವುಗಳು ಇನ್ನೊಬ್ಬರ ಬಗ್ಗೆ ಚಾಡಿ ಹೇಳಿ ಪಕ್ಷಗಳಲ್ಲಿ ಗುರುತಿಸಿಕೊಂಡು ಅಧಿಕಾರ ಪಡೆಯುವ ಹಂತಕ್ಕೆ ಬಂದಿದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರಾಗಿದ್ದ ಹೆಚ್.ಡಿ.ಕುಮಾರಸ್ವಾಮಿಯವರು ಯಾರೋ ಚಾಡಿ ಹೇಳಿದ್ದನ್ನು ಕೇಳಿ ಪ್ರತಿಕ್ರೀಯಿಸಿದ್ದಲ್ಲ, ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡಿದ್ದನ್ನು ಗಮನಿಸಿ, ಅಷ್ಟು ವರ್ಷಗಳಿಂದ ಇರದ ಅಭಿವೃದ್ಧಿ ಕಾಳಜಿ ಈಗ ಬಂದಿತೆ ಎಂದು ಹೇಳಿಕೆ ನೀಡಿದ್ದಾರೆ, ಅಷ್ಟೇ ಅಲ್ಲದೇ ಕುಮಾರಸ್ವಾಮಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಚಂಡ್ರಿಕಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾಗ ಇಲ್ಲಿನ ಅಭಿವೃದ್ಧಿಯನ್ನು ಕಣ್ಣಾರೆ ಕಂಡಿದ್ದಾರೆ ಹಾಗಾಗಿ ಖರ್ಗೆಯವರ ಬೆಂಗಳೂರು ಮೈಸೂರು ಹೇಳಿಕೆಗೆ ಪ್ರತಿಕ್ರೀಯಿಸಿದ್ದಾರೆ ಎಂದಿದ್ದಾರೆ.
ನಿಮ್ಮ ನಾಯಕರು ಕಳೆದ ೫೦ ವರ್ಷಗಳಲ್ಲಿ ಗುರುಮಠಕಲ್ ಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ಗೊತ್ತಿದೆ, ಅವರು ಮಾಡಿದ ಅಭಿವೃದ್ಧಿಯಿಂದಲೇ ಇನ್ನೂ ನಮ್ಮ ಭಾಗದ ಜನತೆ ಗುಳೆ ಹೋಗುವುದು ತಪ್ಪುತ್ತಿಲ್ಲ, ನಮ್ಮ ಜನರು ಬದುಕಲು ಗುಳೆ ಹೋಗುವಂತಹ ವಾತಾವರಣ ಮಾಡಿದ್ದು ನಿಮ್ಮ ನಾಯಕರ ಅಭಿವೃದ್ಧಿಯೇ ಎಂದು ವ್ಯಂಗವಾಡಿದ್ದಾರೆ.
ಚಾಡಿ ಹೇಳುವ ಸಂಸ್ಕೃತಿ ಮತ್ತು ಇನ್ನೊಬ್ಬರನ್ನು ಓಲೈಕೆ ಮಾಡುವ ಸಂಸ್ಕೃತಿ ಬಿಟ್ಟು ಜನರ ಅಭಿವೃದ್ಧಿಗೆ ಶ್ರಮಿಸಿ, ತಾವು ಬಾಯಿ ಚಪಲಕ್ಕೆ ಯಾರದ್ದೋ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದನ್ನು ಬಿಡಿ, ೫೦ ವರ್ಷಗಳಲ್ಲಿ ಅಭಿವೃದ್ಧಿ ಎಷ್ಟಾಗಿದೆ ಎನ್ನುವುದು ಜನರಿಗೆ ಗೊತ್ತಿದೆ, ತಾವು ಭ್ರಷ್ಟಾಚಾರದ ಜನಕರಾಗಿದ್ದೀರಿ ನಿಮ್ಮ ಅವಧಿಯಲ್ಲಿ ಒಂದೊAದು ಇಲಾಖೆಯಲ್ಲಿ ನಿಮ್ಮ ಭ್ರಷ್ಟಾಚಾರದ ಮೇನು ಕಾರ್ಡ್ ಅತ್ಯಂತ ಜನಪ್ರೀಯವಾಗಿದ್ದು, ಅದನ್ನು ಮುಚ್ಚಿಕೊಳ್ಳಲು ತಾವು ಆಗಾಗ ಇನ್ನೊಬ್ಬರ ಬಗ್ಗೆ ಹೇಳಿಕೆ ಕೊಟ್ಟು ಜನರಲ್ಲಿ ಪರಿಚಿತರಾಗಲು ಪ್ರಯತ್ನಿಸುವುದನ್ನು ಬಿಡಿ ಎಂದು ಸಲಹೆ ನೀಡಿದ್ದಾರೆ.
ಬೇರೆಯವರ ಅಕ್ಕಪಕ್ಕ ಕುಳಿತು ಯಾರನ್ನೋ ಖುಷಿ ಪಡಿಸಲು ಚಾಡಿ ಹೇಳುವುದು ನಿಮ್ಮ ಸಂಸ್ಕೃತಿ ನಮ್ಮ ನಾಯಕರ ಸಂಸ್ಕೃತಿಯಲ್ಲ ಅದನ್ನು ಬಿಟ್ಟು ಯಾದಗಿರಿ ಜನರ ಒಳಿತಿಗಾಗಿ ಕೆಲಸ ಮಾಡಿ ಎಂದು ತಿವಿದಿದ್ದಾರೆ. -

ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮನವಿ
ಸತ್ಯಕಾಮ ವಾರ್ತೆ ಯಾದಗಿರಿ:ನಾಳೆ ಜನಾಕ್ರೋಶ ಯಾತ್ರೆ ಯಾದಗಿರಿ ನಗರಕ್ಕೆ ಆಗಮಿಸಲಿದ್ದು ಯಾದಗಿರಿ ಮತಕ್ಷೇತ್ರದಿಂದ ಅತೀ ಹೆಚ್ಚು ಕಾರ್ಯಕರ್ತರು ಈ ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ದ್ವನಿಮೊಳಗಿಸಬೇಕೆಂದು ಬಿಜೆಪಿ ಮುಖಂಡ ಚೆನ್ನಾರೆಡ್ದಿಗೌಡ ಬಿಳ್ಹಾರ್ ಮನವಿ ಮಾಡಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪೇಟ್ರೋಲ್, ಡಿಸೇಲ್ ಹಿಡಿದು ಹಾಲು ಮೊಸರು, ಟೋಲ್ ಶುಲ್ಕ, ವಿದ್ಯುತ್ ದರ, ಕಾರು ವಾಣಿಜ್ಯ, ಒಳಗೊಂಡು ಎಲ್ಲದರ ಬೆಲೆಯನ್ನು ಏರಿಸುವಂತಹ ಕಾರ್ಯ ಕಾಂಗ್ರೇಸ್ ಸರ್ಕಾರ ಮಾಡಿದೆ ದಿನನಿತ್ಯ ಬಡವರಿಂದ ಹಿಡಿದು ಎಲ್ಲರಿಗೂ ಅವಶ್ಯವಾಗಿರುವ ಹಾಲಿನ ದರ ಪ್ರತಿ ಲೀಟರ್‌ಗೆ ೪ ರೂ. ಹೆಚ್ಚಳ ಮಾಡಿದ್ದಾರೆ ಇದರಿಂದ ಪ್ರತಿ ತಿಂಗಳಿಗೆ ೧೨೦ ರೂ.ಗೂ ಅಧಿಕ ಹೊರೆ ಬಡವರಿಗೆ ಬಿಳ್ಳಲಿದೆ ಗ್ಯಾರೆಂಟಿ ಯೋಜನೆಗಳಿಂದ ಯಾರಿಗೂ ಉಪಯೋಗವಾಗುತ್ತಿಲ್ಲಾ ಹೆಂಡತಿಗೆ ಕೊಟ್ಟು ಗಂಡನಿAದ ಕಸಿದುಕೊಳ್ಳುವಂತಹ ಕೆಲಸ ಕಾಂಗ್ರೇಸ್ ಸರ್ಕಾರದಿಂದ ನಡೆದಿದೆ ಒಂದೆಡೆ ಮಹಿಳೆಯರಿಗೆ ಬಸ್ ಪ್ರೀ ಎಂದು ಇನ್ನೊಂದೆಡೆ ಬಸ್ ದರ ಏರಿಕೆ ಮಾಡಲಾಗಿದೆ ವಿದ್ಯುತ್ ಪ್ರೀ ಎಂದು ಕೊಟ್ಟು ವಿದ್ಯುತ್ ದರ ಏರಿಸಲಾಗಿದೆ ೧೦೦ ಬಾಂಡ್ ಇಂದು ೫೦೦ ರೂ. ಏರಿಸಲಾಗಿದೆ ಬಡವರು ಮಧ್ಯಮವರ್ಗದವರು ಜೀವನ ನಡೆಸುವದೇ ದುಸ್ಥರವಾಗಿದೆ ಎಂದಿದ್ದಾರೆ.ರಾಜ್ಯ ಸರ್ಕಾರವು ತನ್ನ ಗ್ಯಾರೆಂಟಿ ಯೋಜನೆಗಳ ಉಳಿಸಿಕೊಳ್ಳುವ ನೆಪದಲ್ಲಿ ದಿನಬಳಕೆ ವಸ್ತುಗಳಿಂದ ಹಿಡಿದು ಎಲ್ಲದರ ಮೇಲೆ ತೇರಿಗೆ ಹೆಚ್ಚಿಸಿ ಬಡವರ ಗಾಯದ ಮೇಲೆ ಬರೆ ಎಳೆಯುವಂತಹ ಕಾರ್ಯ ಮಾಡುತ್ತಿದೆ, ಅದರಲ್ಲೂ ರಾಜ್ಯದಲ್ಲಿ ಅಭಿವೃದ್ದಿ ಎಂಬುದು ನಿಂತ ನೀರಾಗಿದೆ ಅಭಿವೃದ್ದಿ ಎಂಬುದು ಶೂನ್ಯವಾಗಿ ಬಿಟ್ಟಿದೆ ೨ ವರ್ಷಗಳಿಂದ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲಾ ರಾಜ್ಯ ಸರ್ಕಾರವು ಇಂದು ೬೦% ಸರ್ಕಾರವೆಂಬುದು ಸಾಬೀತು ಪಡಿಸಿದೆ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮೊಳಗಿರುವ ರಾಜ್ಯ ಸರ್ಕಾರವು ಎಂದು ತೊಲಗಿ ಹೋಗುತ್ತದೆ ಎಂದು ಜನರು ಹಿಡಿ ಶಾಪ ಹಾಕಲಿಕ್ಕೆ ಹತ್ತಿದ್ದಾರೆ ಇಂತಹ ದುರಾಡಳಿತ ಸರ್ಕಾರದ ವಿರೂದ್ದ ಪ್ರತಿಯೊಬ್ಬರೂ ಪ್ರತಿಭಟಿಸುವದು ಅಗತ್ಯವಾಗಿದೆ ಎಂದರು.ಹೀಗಾಗಿ ಇದೇ ದಿ.23 ರಂದು ನಗರಕ್ಕೆ ಜನಾಕ್ರೋಶ ಯಾತ್ರೆ ಆಗಮಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. -

ಗ್ರಾಹಕರು ನಿಗದಿತ ವೇಳೆಯಲ್ಲಿ ಬಿಲ್ ಪಾವತಿಸಿ: ಜೆಸ್ಕಾಂ
ಮಸ್ಕಿ: ಮಸ್ಕಿ ತಾಲೂಕಿನ ವಿದ್ಯುತ್ ಗ್ರಾಹಕರಿಗೆ ಮಾಸಿಕ ವಿದ್ಯುತ್ ಬಿಲ್ಲನ್ನು ನಿಗದಿತ ದಿನಾಂಕದೊಳಗೆ ಪಾವತಿ ಮಾಡಬೇಕು, ಇಲ್ಲವಾದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುವುದು ಎಂದು ಜೆಸ್ಕಾಂನ ಮಸ್ಕಿ ಕಾರ್ಯ ಮತ್ತು ಪಾಲನೆ, ಉಪ-ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸದ್ದಾರೆ.
ಈಗಾಗಲೇ ತುಂಬಾ ದಿನಗಳಿಂದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಜೆಸ್ಕಾಂ ಸಿಬ್ಬಂದಿ ಬಿಲ್ ಪಾವತಿ ಮಾಡಲು ತಿಳಿಸಿದ್ದಾರೆ. ಗ್ರಾಹಕರು ಕೂಡಲೇ ವಿದ್ಯುತ್ ಬಿಲ್‌ನ್ನು ಪಾವತಿ ಮಾಡದೇ ಇದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಸ್ಥಾವರದ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುವುದು. ಆದ್ದರಿಂದ ನಿಗದಿತ ಸಮಯದಲ್ಲಿ ವಿದ್ಯುತ್ ಬಿಲ್‌ನ್ನು ಜೆಸ್ಕಾಂ ಕ್ಯಾಷ್ ಕೌಂಟರ್/ಆನ್‌ಲೈನ್/ ಮೊಬೈಲ್ ಅಪ್ಲಿಕೇಷನ್ ಮೂಲಕ ಬಿಲ್ ಪಾವತಿ ಮಾಡಿ.
ವಿದ್ಯುತ್ ಸಂಪರ್ಕದ ಅವಶ್ಯಕತೆ ಇದ್ದಲ್ಲಿ ಅಧಿಕೃತವಾಗಿ ಸಂಪರ್ಕ ಪಡೆದುಕೊಂಡು ಬಳಕೆ ಮಾಡಬೇಕು. ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಬಳಕೆ ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ವಿದ್ಯುತ್ ಕಳ್ಳತನ ಪ್ರಕರಣವನ್ನು ದಾಖಲೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
-

ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಗೆ ಒಗ್ಗಟ್ಟಾಗಿ ಕೆಲಸ ಮಾಡಿ: ಬಿಎನ್. ವಿಶ್ವನಾಥ ನಾಯಕ
ಯಾದಗಿರಿ: ನಾಡು ನುಡಿ ನೆಲ ಜಲ ರಕ್ಷಣೆ ಮಾಡಲು ಹೋರಾಟ ಮಾಡಿ ಜಯ ಕರ್ನಾಟಕ ಸಂಘಟನೆ ಬಲಪಡಿಸುವಂತೆ ಜಿಲ್ಲಾಧ್ಯಕ್ಷ ಬಿಎನ್. ವಿಶ್ವನಾಥ ನಾಯಕ ಕರೆ ನೀಡಿದರು.
ವಡಗೇರಿ ಪಟ್ಟಣದಲ್ಲಿ ಜರುಗಿದ ಜಿಲ್ಲಾ ಸಮಿತಿ ಸಭೆಯಲ್ಲಿ ವಡಗೇರಿ ತಾಲ್ಲೂಕಿನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿದ ಮಾತನಾಡಿದರು.
ಹೊಸದಾಗಿ ರಚನೆಯಾದ ತಾಲ್ಲೂಕಿನಲ್ಲಿ ಹತ್ತು ಹಲವು ಜ್ವಲಸಂತ ಸಮಸ್ಮೆಗಳಿದ್ದು ಅವುಗಳ ನಿವಾರಣೆಗೆ ಹೋರಾಟ ರೂಪಿಸಬೇಕು ಮತ್ತು ತಂಡವನ್ನು ರೂಪಿಸಿಕೊಂಡು ಸಂಘಟಿತ ಹೋರಾಟ ನಡೆಸುವಂತೆ ತಿಳಿಸಿದರು.
ಅತ್ಯಂತ ಹಿಂದುಳಿದ ತಾಲ್ಲೂಕು ಆಗಿರುವ ವಡಗೇರಿಯಲ್ಲಿ ಸಂಘಟಿತ ಹೋರಾಟದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸಂಘಟನೆಯ ಧ್ಯೆಯೋದ್ದೇಶಗಳನ್ನು ತಿಳಿಸಿ ಪ್ರಮಾಣಿಕ ಪ್ರಯತ್ನ ಮಾಡಿದಲ್ಲಿ ಫಲಿತಾಂಶ ಇದ್ದೇಇರುತ್ತೆ ಎಂಬುದನ್ನು ಅರಿಯಬೇಕು ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ನೂತನ ತಾಲ್ಲೂಕು ಅಧ್ಯಕ್ಷ ಭೀಮಣ್ಣ ಕರೆಪ್ಪ ಬುದಿನಾಳ, ಸಹ ಕಾರ್ಯದರ್ಶಿಯಾಗಿ ನೇಮಕವಾದ ಶರಣಪ್ಪ ಹೈಯಾಳಪ್ಪ ಕುರಿಕಳ್ಳಿ ಇವರಿಗೆ ಪ್ರಮಾಣ ಪತ್ರ ವನ್ನು ಜಿಲ್ಲಾಧ್ಯಕ್ಷ ಬಿಎನ್. ವಿಶ್ವನಾಥ ನಾಯುಕ ವಿತರಿಸಿದರು.
ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಮೊಗದಂಪುರ, ಶಿವರಾಜ ಗುತ್ತೇದಾರ, ವಿಶ್ವಾರಾಧ್ಯ ಹುಲಕಲ್, ನವಾಜ ಖಾದ್ರಿ, ಅಮೀರ್ ಖಾನ್, ಅಬ್ದುಲ್ ಕತ್ತಾರಿ, ಬಸಣ್ಣಗೌಡ ಜಡಿ, ಬಸವರಾಜ ಡೌನ್, ಶರಣು ನಾಯಕ ಇಟಗಿ, ರಾಮಣ್ಣ ನಾಯಕ, ದೇವು ಜಡಿ, ಮರೆಪ್ಪ ಬಾಡದ, ಸಿದ್ದು ಜಡಿ, ರವಿ ನಸಲ್ವಾಯಿ, ಮಲ್ಲಪ್ಪ ಕಾಡಂನೋರ್, ನಿಂಗಣ್ಣ ಜಡಿ, ಪೋಲಪ್ಪ ಹಿರಿಮೇಟಿ, ಜಲಾಲ್ ಸಾಬ ಕೋನಳ್ಳಿ, ಮಾಳಿಂಗರಾಯ ಕೋನಳ್ಳಿ, ಮಲ್ಲಪ್ಪ, ಸಂತೋಷ ಬೊಜ್ಜಿ ವಡಗೇರಿ, ಶರಬು ಕುರಿ ಇನ್ನಿತರರು ಇದ್ದರು.
-

ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡಿ: ಶಾಸಕ ಚನ್ನಾರಡ್ಡಿ ಪಾಟೀಲ್ ಸೂಚನೆ
ಸತ್ಯಕಾಮ ವಾರ್ತೆ ಯಾದಗಿರಿ:ನಿಗದಿತ ಅವಧಿಯಲ್ಲಿ ಕಾಮಗಾರಿಮುಗಿಸಬೇಕು ಮತ್ತು ಗುಣಮಟ್ಟದಲ್ಲಿ ಆಗಬೇಕು. ಈ ಕಟ್ಟಡ ಬಹುಕಾಲ ಬಾಳಿಕೆ ಬರುವಂತೆಯೇ ನಿರ್ಮಿಸಿ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ರಾಮಸಮುದ್ರದಲ್ಲಿಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ 2023-24 ನೇ ಸಾಲಿನ ಆರ್ ಡಿಪಿಐ ಯೋಜನೆಯಡಿ ಸುಮಾರು 47.79 ಲಕ್ಷ ರೂ.ವೆಚ್ಚದ ಪಶು ಚಿಕಿತ್ಸಾಲಯದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಹಳ್ಳಿಗಳ ರೈತಾಪಿ ವರ್ಗದ ಜಾನುವಾರುಗಳಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗಬೇಕು. ಇಲಾಖೆ ವೈದ್ಯಕೀಯ ಸೌಲಭ್ಯವಿರುವ ವಾಹನಗಳೊಂದಿಗೆ ವೈದ್ಯರು ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು. ರಾಜ್ಯ ಸರ್ಕಾರ ಕೃಷಿ ಮತ್ತು ಪಶು ಇಲಾಖೆಗೆ ಸಾಕಷ್ಟು ಅನುದಾನ ನೀಡುತ್ತಿದೆ. ಇದರ ಉಪಯೋಗ ಮಾಡಿಕೊಳ್ಳಬೇಕು ಮತ್ತು ಅಧಿಕಾರಿಗಳು ಸಹ ಸೌಲಭ್ಯಗಳನ್ನು ಕಾಲ,ಕಾಲಕ್ಕೆ ಮುಟ್ಟಿಸಬೇಕೆಂದು ಶಾಸಕರು ಹೇಳಿದರು.ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಂದಮ್ಮ, ಹಿರಿಯ ಮುಖಂಡ ಡಾ.ಶರಣಭೂಪಾಲರಡ್ಡಿ ಪಾಟೀಲ್, ಇಲಾಖೆ ಅಧಿಕಾರಿ ಡಾ.ದೇಶಮುಖ್, ಪ್ರಚಾರ ಸಮಿತಿ ಅಧ್ಯಕ್ಷ ಮರೆಪ್ಪ ಬಿಳಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಚಮರಡ್ಡಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಈಟೆ, ದೇವೆಂದ್ರಪ್ಪ, ಹಣಮಂತ, ರಾಮು, ಸೇರಿದಂತೆಯೆ ಇತರರಿದ್ದರು. -

ಗರೂರ ಬಿ ಗ್ರಾಮದಲ್ಲಿ ದೈತ್ಯಾಕಾರದ ಮೊಸಳೆ ಪತ್ತೆ
ವರದಿ : ಸುರೇಶ ಕೊಟಗಿ.
ಸತ್ಯಕಾಮ ವಾರ್ತೆ ಕಲಬುರಗಿ:
ಅಫ್ಜಲಪುರ ತಾಲೂಕಿನ ಗರೂರ್ (ಬಿ) ಗ್ರಾಮದ ಹಳ್ಳ ಒಂದರಲ್ಲಿ ದೈತ್ಯಾಕಾರದ ಮೊಸಳೆ ಗುರುವಾರ ಬೆಳಗಿನ 3:00ಗೆ ದಿಡೀರನೆ ಪ್ರತ್ಯಕ್ಷವಾಗಿದ್ದ ಹಿನ್ನೆಲೆ ಗ್ರಾಮಸ್ಥರು ಹಾ+ಗೂ ರೈತರು ತುಂಬಾ ಭಯಭೀತರಾದ ಪ್ರಕರಣ ಒಂದು ಜರುಗಿದೆ.
ಗ್ರಾಮಸ್ಥರು ಗುಲ್ಬರ್ಗ ವಿದ್ಯುತ್ ಶಕ್ತಿ ಸರಬರಾಜು ಕಂಪನಿ 33/11 ಕೆವಿ ಉಪವಿದ್ಯುತ್ ವಿತರಣಾ ಕೇಂದ್ರ ಗೊಬ್ಬುರ್ ತಾಲೂಕ ಆಫ್ಜಲ್ಪುರ್ ಕಾರ್ಯಾಲಯ ಸಮ್ಮುಖದಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ಜಮಾಯಿಸಿ ವಿದ್ಯುತ್ ಸರಬರಾಜು ಇಲಾಖೆ ವಿರುದ್ಧ ರಸ್ತೆ ತಡೆ ನಡೆಸಿದರು. ವಿದ್ಯುತ್ ನಿಯಮಿತವಾಗಿ ಸರಬರಾಜು ಆಗದೆ ಇದ್ದ ಕಾರಣ ಹೊಲಗಳಲ್ಲಿ ರಾತ್ರಿ ಕತ್ತಲಲ್ಲಿ ನೀರಿಗಾಗಿ ಕೆಲಸ ಮಾಡಬೇಕಾಗುತ್ತದೆ.ಇಲಾಖೆಯವರು ಸರಬರಾಜು ಸಮಯ ರೈತರ ಗಮನಕ್ಕೆ ತರದೆ ಬದಲಾಯಿಸುವುದರಿಂದ ರೈತರಿಗೆ ಅನಾನುಕೂಲ ಹಾಗೂ ತೊಂದರೆ ಯಾಗುವುದು ಕಟ್ಟಿಟ್ಟ ಬುತ್ತಿ.
ಈ ಸಂಬಂಧ ಗ್ರಾಮಸ್ಥರು ಹಾಗೂ ರೈತರು ಎತ್ತಿನ ಬಂಡಿಯಲ್ಲಿ ಬಂಧಿಸಿದ ಮೊಸಳೆ ಸಮೇತ ಉಪಕೇಂದ್ರಕ್ಕೆ ಆಗಮಿಸಿ ಚಳುವಳಿಗೆ ಧುಮುಕಿದರು. ಸುದ್ದಿ ತಿಳಿದ ಗಾಣಿಗಪುರ್ ಠಾಣೆಯ ಪಿಎಸ್ಐ ರಾಹುಲ್ ಘಟನಾ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ಆಗಮಿಸಿ ಪರಿಸ್ಥಿತಿ ಬಿಗಡಾಯಿಸದಂತೆ ಬಂದೋಬಸ್ತ್ ಮಾಡಿದರು ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮೋಸಳೆಯನ್ನು ಹಸ್ತಾಂತರಿಸಲಾಯಿತು.
ಕೆಇಬಿ ಇಲಾಖೆಯವರು ವಿದ್ಯುತ್ ಸರಬರಾಜು ಸಮಯ ಶಿಫ್ಟ್ ಬದಲಾಯಿಸಬೇಕಾದರೆ ಮಾಧ್ಯಮದ ಮೂಲಕ ಅಥವಾ ಗ್ರಾಮದಲ್ಲಿ ಡೊಂಗುರ ಹೊಡೆಸಿ ರೈತರ ಗಮನಕ್ಕೆ ತಂದು ಬದಲಾವಣೆ ಮಾಡಬೇಕು ಆದರೆ ಇಲಾಖೆಯ ಜವಾಬ್ದಾರಿ ಅಧಿಕಾರಿಗಳಾದ ಸಹಾಯಕ ಇಂಜಿನಿಯರ್, ಜೂನಿಯರ್ ಇಂಜಿನಿಯರ್, ಎ ಇ ಇ ಯಾವುದೇ ಮುಂಜಾಗ್ರತೆ ಕ್ರಮವಹಿಸದೆ ಶಿಫ್ಟ್ ಬದಲಾಯಿಸುವುದು ಮಾಡಿದಲ್ಲಿ ಗಮನಕ್ಕೆ ಬಾರದ ರೈತರ ಜೀವಕ್ಕೆ ಅಪಾಯ ಸಂಭವಿಸಿದರೆ ಇದಕ್ಕೆ ಯಾರು ಹೊಣೆಗಾರರು? ಇನ್ನು ಮುಂದೆಯಾದರೂ ಇಲಾಖೆಯವರು ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ರೈತರು ಸತ್ಯಕಾಮ ಮೂಲಕ ಮನವಿ ಮಾಡಿದ್ದಾರೆ.
-

ಶಾಲಾ ಮಕ್ಕಳ ಜೀವದ ಜೋತೆಗೆ ಚೆಲ್ಲಾಟವಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು..!
ವರದಿ: ಕುದಾನ್ ಸಾಬ್
ಸತ್ಯಕಾಮ ವಾರ್ತೆ ಯಾದಗಿರಿ:
ಮಕ್ಕಳು ಯಾವುದೇ ಸಮಸ್ಯೆ ಇಲ್ಲದೆ ಶಾಲೆಯನ್ನು ತಲುಪುತ್ತಾರೆ ಎಂದು ಶಾಲಾ ಬಸ್ ನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಾರೆ, ಆದರೆ ಪೋಷಕರಿಗೆ ವಾಹನದಲ್ಲಿ ಓಡಾಡುವ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಮೂಡಿಸುವ ವಾತಾವರಣ ಜಿಲ್ಲೆಯಲ್ಲಿ ಸೃಷ್ಟಿಯಾಗಿದ್ದೂ ಅನೇಕ ಖಾಸಗಿ ಶಾಲೆಯ ವಾಹನಗಳು ಸರಿಯಾದ ದಾಖಲೆ ಪತ್ರಗಳು ಇಲ್ಲದೇ ಇರುವುದು ಬಹಿರಂಗವಾಗಿದೆ.

ಹೌದು ನೂರಾರು ಕನಸುಗಳನ್ನು ಹೊತ್ತು ಶಿಕ್ಷಣ ಪಡೆಯಲು ಗ್ರಾಮೀಣ ಪ್ರದೇಶದ ಅನೇಕ ಮಕ್ಕಳನ್ನು ಪಾಲಕರು ಶಾಲಾ ವಾಹನಗಳಲ್ಲಿ ಕಳುಹಿಸುತ್ತಾರೆ, ಆದರೆ ಅದೆಷ್ಟೂ ವಾಹನಗಳು ಸುರಕ್ಷಿತವಾಗಿದೆ ಎಂದು ಪ್ರಜ್ಣಾನವಂತ ಪಾಲಕರು ಮಣನೆ ಮಾಡಿಕೋಳ್ಳುವಂತಾಗಿದೆ, ಇದಕ್ಕೆ ಪುಷ್ಠಿಕರಿಸುವಂತೆ ಇತ್ತಿಚಿಗೆ ಮಾನ್ವಿಯಲ್ಲಿ ಶಾಲಾ ಬಸ್ ಅಪಘಾತವಾಗಿ ಹತ್ತಾರು ವಿದ್ಯಾರ್ಥಿಗಳು, ತಮ್ಮ ಚಿಕ್ಕ ವಯಸ್ಸಿನಲ್ಲೇ ವಿಕಲ ಚೇತನರಾದರೇ, ಇನ್ನೂ ಕೆಲವು ಮಕ್ಕಳು ಉಸಿರು ಚೆಲ್ಲಿದರು.

ಇಂಗ್ಲಿಷ್ ವ್ಯಾಮೋಹದಿಂದಾಗಿ ಇಂದು ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆ ಬದಲಿಗೆ ಖಾಸಗಿ ಶಾಲೆಗಳು ಅದೆಷ್ಟೇ ದೂರದಲ್ಲಿದ್ದರೂ ಅದಕ್ಕೆ ದಾಖಲಿಸುತ್ತಾರೆ. ಇದಕ್ಕೆ ಮುಖ್ಯವಾಗಿ ಮಕ್ಕಳ ಸಂಚಾರಕ್ಕಾಗಿ ವಸತಿ ನಿಲಯದ ಪರ್ಯಾಯವಾಗಿ ಶಾಲಾ ಬಸ್ಗಳಿಗೆ ಪಾಲಕರು ಮೊರೆಹೋಗುತ್ತಾರೆ, ಆದರೆ ಜಿಲ್ಲೆಯಲ್ಲಿನ ಬಹುತೇಕ ಖಾಸಗಿ ಶಾಲೆಯ ವಾಹನಗಳು ಒಂದಿಲ್ಲೋಂದಾದ ಇನ್ಸೂರೆನ್ಸ್, ರಸ್ತೆ ತೆರಿಗೆ, ಪಿಟೆನೆಸ್ ಸೇರಿದಂತೆ ಹಲವು ಧಾಖಲೆಗಳನ್ನು ಖಾಸಗಿ ಶಾಲೆಯ ಆಡಳಿತ ಸಂಸ್ಥೆಗಳು ಪಾಲಿಸುತ್ತಿಲ್ಲ, ಇದ್ದರಿಂದ ಪಾಲಕರು ತಮ್ಮ ಮಕ್ಕಳ ಜೀವ ಭಯದಲ್ಲಿ ಶಾಲೆಗಳಿಗೆ ಕಳುಹಿಸುವಂತ ದಿನಗಳು ಇವೆ.

ಅದರಲ್ಲೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಗೆ ಮಕ್ಕಳ ಪೋಷಕರಿಂದ ವಸೂಲಿ ಮಾಡುವ ಶುಲ್ಕದ ಕುರಿತಷ್ಟೇ ಆಸಕ್ತಿಯಿದೆ.ಆದರೆ ಅವರನ್ನೆ ನಂಬಿ ಪೋಷಕರು ಕಳಿಸುವ ಮಕ್ಕಳ ಬಗ್ಗೆ ಶಾಲೆ ಸಂಸ್ಥೆಗಳು ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ, ಇದು ಬಹುತೇಕ ಖಾಸಗಿ ಶಾಲೆಗಳ ವಾಸ್ತವ ಇದೇ ರೀತಿ ಇವೆ. ಪ್ರತಿನಿತ್ಯ ಮುಂಜಾನೆ ಮಕ್ಕಳು ಶಾಲೆಯ ವಾಹನ ಹತ್ತಿದ ಬಳಿಕ ಮರಳಿ ಮನೆ ಸೇರಿಸುವವರೆಗೆ ಮಗುವಿನ ಸುರಕ್ಷತೆ ಹೊಣೆ ತಮ್ಮದು ಎಂಬ ಪ್ರಜ್ಞೆಯೇ ಶಾಲೆಗಳ ಆಡಳಿತ ಮಂಡಳಿಗಳಿಗೆ ಇಲ್ಲದಿರುವುದು ದುರಂತ.
ವಿದ್ಯಾರ್ಥಿಗಳು ಸಂಚರಿಸುವ ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್, ವಿವರವಾದ ಮಾರ್ಗದರ್ಶಿ ಸೂತ್ರ ರಚಿಸಿದೆ. ಆದರೆ, ಬಹುತೇಕ ಶಾಲೆಗಳಲ್ಲಿ ಇವುಗಳಲ್ಲಿ ಯಾವುದೇ ಒಂದೂ ಪಾಲನೆಯಾಗುತ್ತಿಲ್ಲ. ಶಾಲಾ ವಾಹನಗಳಲ್ಲಿನ ಸುರಕ್ಷತಾ ನಿಯಮಗಳ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕಾದ ಸಾರಿಗೆ ಇಲಾಖೆ ಅಧಿಕಾರಿಗಳು ದಿವ್ಯ ಮೌನ ವಹಿಸಿರುವುದು ಹಲವು ಸಂಶಯಗಳನ್ನು ಹುಟ್ಟು ಹಾಕಿರುವುದಂತೂ ಸುಳ್ಳಲ್ಲ.
ಒಟ್ಟಿನಲ್ಲಿ ಮಸ್ಕಿಯಲ್ಲಾದ ಶಾಲಾ ವಾಹನದ ದುರ್ಘಟನೆ ಯಾದಗಿರಿಯಲ್ಲಿ ಸಂಭವಿಸದಂತೆ ಇಲ್ಲಿನ ಸಾರಿಗೆ ಇಲಾಖೆ ಅಧಿಕಾರಿಗಳು ಈಗಲಾದರೂ ಇಂತಹ ಸರಿಯಾದ ದಾಖಲೆಇರದ ಶಾಲಾವಾಹನಗಳನ್ನು ಯಾವುದೇ ಮುಲ್ಲಾಜಿಲ್ಲದೇ ವಶಪಡಿಸಿಕೋಂಡು ಮುಂದಾಗುವ ಅನಾಹುತವನ್ನು ತಪ್ಪಿಸಬೇಕು,ಇಲ್ಲದಿದ್ದರೇ ಆರ್.ಟಿ.ಒ ಅಧಿಕಾರಿಗಳ ಬೇಜವಬ್ದಾರಿತನಕ್ಕೆ ಅಪಾಘತಗಳಿಗೆ ತಾವೇ ಹೋಣೆಯಾಗಬೇಕಾತ್ತದೆ, ಇದಕ್ಕೆ ಶಾಲಾ ಆಡಳಿತಮಂಡಳಿಯು ಜವಬ್ದಾರಿಯಾಗುತ್ತದೆ.
ನಮ್ಮ ಮಕ್ಕಳನ್ನು ಖಾಸಗಿ ಶಾಲೆ ದಾಖಲಾತಿ ಮಾಡಿದ್ದೂ, ಆದರೆ ಶಾಲಾ ಸಂಸ್ಥೆಗಳು ಶಾಲಾ ವಾಹನಗಳನ್ನು ಯಾವುದೇ ದಾಖಲೆ ಪತ್ರಗಳಿಲ್ಲದೇ ಓಡಿಸುತ್ತಾರೆ, ಹೀಗಾಗಿ ನಾವು ನಮ್ಮ ಮಕ್ಕಳು ಸಂಜೆ ಮನೆ ಸೇರುವವರೆಗೆ ಜೀವ ಕೈಯಲ್ಲಿ ಹಿಡಿದುಕೊಂಡು ಕಾಯುವಂತಾಗಿದೆ. ಯಾವುದೇ ಅನಾಹುತಗಳು ಸಂಭವಿಸಿದರೆ ಇದಕ್ಕೆ ಯಾರು ಹೋಣೆಯಾಗುತ್ತಾರೆ,
-ಹೆಸರೇಳಲಿಚ್ಚಿಸದ ಪಾಲಕರು