Author: Satyakam NewsDesk

  • ಅರಕೇರಾ(ಕೆ) ವಸತಿ ಶಾಲೆಗೆ ನ್ಯಾ. ಮರಿಯಪ್ಪ ಭೇಟಿ.

    ಅರಕೇರಾ(ಕೆ) ವಸತಿ ಶಾಲೆಗೆ ನ್ಯಾ. ಮರಿಯಪ್ಪ ಭೇಟಿ.

    • ಮುಖ್ಯೋಪಾಧ್ಯಾಯರು ಹಾಗೂ ಅಡುಗೆ ಸಹಾಯಕರ ಬದಲಾವಣೆಗೆ ಸೂಚನೆ
    • ಮಕ್ಕಳಿಂದ ಸಮಸ್ಯೆ ಆಲಿಕೆ – ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ.

    ಸತ್ಯಕಾಮ ವಾರ್ತೆ ಯಾದಗಿರಿ: 

    ಮಕ್ಕಳಿಂದಲೇ ಶೌಚಾಲಯ ಸ್ವಚ್ಛಗೊಳಿಸಲಾಗಿದೆ ಎಂದು ಇದೇ ಬುಧವಾರ 16 ರಂದು ಪತ್ರಿಕೆಯಲ್ಲಿ ಸುದ್ದಿಯಾಗಿದ್ದ ತಾಲೂಕಿನ ಅರಕೇರಾ(ಕೆ) ಗ್ರಾಮದ ಕಸ್ತೂರಿ ಬಾ ಗಾಂಧಿ ವಸತಿ ಶಾಲೆಗೆ ಶನಿವಾರ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮರಿಯಪ್ಪ ಭೇಟಿ ನೀಡಿ ಅಲ್ಲಿನ ಎಲ್ಲವೂ ಸಮಗ್ರ ಪರಿಶೀಲನೆ ನಡೆಸಿದರು.

    ವಸತಿ ನಿಲಯ, ಅಡುಗೆ ಕೋಣೆ, ಶೌಚಾಲಯ ಸ್ಥಳ, ಶಾಲಾ ಕೋಣೆ ಹೀಗೆ ಎಲ್ಲ ಕಡೆ ಸಂಚರಿಸಿ ಅಲ್ಲಿನ ಪೂರಕ ವಾತವರಣ ವಿಕ್ಷೀಕಿಸಿದರು.

    ಇದೇ ವೇಳೆ ವಸತಿ ನಿಲಯದ ಮಕ್ಕಳನ್ನು ಮಾತನಾಡಿಸಿದ ನ್ಯಾಯಾಧೀಶರಾದ ಮರಿಯಪ್ಪ ಅವರಿಗೆ ಮಕ್ಕಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳು ಕಣ್ಣಿಗೆ ಕಟ್ಟಿದಂತಾದವು. ಶೌಚಾಲಯ ಶುಚಿಗೊಳಿಸಲು ಯಾರು ಇಲ್ಲ. ಕಳೆದ ಫೆಬ್ರವರಿ ತಿಂಗಳಿಂದ ಮಾಸಿಕವಾಗಿ ನೀಡುವ ಉಪಯುಕ್ತ ವಸ್ತುಗಳ ಕಿಟ್ ವಿತರಿಸಿಲ್ಲ, ತರಕಾರಿ ಎಲ್ಲೆಂದರಲ್ಲಿ ಚೆಲ್ಲುವ ವಿಷಯ, ಕೆಟ್ಟಿರುವ ಇನ್ನವೇಟರ್, ಗುಡ್ಡಕ್ಕೆ ಹೊಂದಿಕೊಂಡಿರುವ ಈ ಸ್ಥಳಕ್ಕೆ ಆಗಾಗ ಕಾಣಿಸಿಕೊಳ್ಳುವ ಹಾವು, ಚೇಳುಗಳು, ಕಸದ ರಾಶಿ ಹಾಕಿರುವ ಬಗ್ಗೆ ಹೀಗೆ ಹಲವು ಸಮಸ್ಯೆಗಳು ಮಕ್ಕಳಿಂದ ಕೇಳಿದ ಅವರು ಕೆಲ ಕಾಲ ದಂಗಾದರು.

    ಈ ಎಲ್ಲವೂ ಕೇಳಿಸಿಕೊಂಡ ಅವರು, ಈ ಸಮಸ್ಯೆಗಳ ನಡುವೆ ಮಕ್ಕಳು ಹೇಗೆ ಇರಬೇಕು, ಹೇಗೆ ಅಭ್ಯಾಸ ಮಾಡಬೇಕೆಂದು ಪ್ರಶ್ನಿಸಿ, ಇದೆಲ್ಲವೂ ಒಂದು ವಾರದಲ್ಲಿ ಬಗೆಹರಿಸಬೇಕೆಂದು ಡಿಡಿಪಿಐ ಸಿ.ಎಸ್.ಮುದೋಳ್ ಅವರಿಗೆ ಸೂಚಿಸಿದರು.

    ಈ ವಸತಿ ಸಹಿತ ಶಾಲಾ ಕಟ್ಟಡ ಮತ್ತು ವಾತವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನ್ಯಾಯಧಿಶರು, ಇದರ ಉಸ್ತುವಾರಿ ಸರಿಯಿಲ್ಲದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು. ಒಗ್ಗಟನಿಂದ ಇದ್ದು ಎಲ್ಲವೂ ಕೆಲಸ ಮಾಡಿ, ಆದರೆ ಆ ವಾತವರಣ ಇಲ್ಲಿ ಕಾಣಿಸುತ್ತಿಲ್ಲ ಎಂದರು. ಇಲ್ಲಿನ‌ ಉಸ್ತುವಾರಿಗಳಾದವರೂ ಎಲ್ಲವೂ‌ ಗಮನಿಸಿ ಮಕ್ಕಳ ಹಿತ ಕಾಪಾಡಬೇಕೆಂದರು.

    ಒಂದು ವಾರದ ನಂತರ ಮತ್ತೇ ಭೇಟಿ ನೀಡುತ್ತೆನೆ. ಅಷ್ಟರಲ್ಲಿಯೇ ಎಲ್ಲವೂ ಸರಿ ಆಗಬೇಕೆಂದು ಮರಿಯಪ್ಪ ಹೇಳಿದರು.

    ಇದೇ ವೇಳೆ ಮುಖ್ಯೋಪಾಧ್ಯಾಯರು ಹಾಗೂ ಅಡುಗೆ ಸಹಾಯಕರ ಕಾರ್ಯವೈಖರಿ ತೀರಾ ಅಸಮರ್ಪಕವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಈ ಇಬ್ಬರ ಬದಲಾವಣೆಗೆ DDPI ಯವರಿಗೆ ಸೂಚನೆ ನೀಡಿಲಾಗಿದೆ ಎಂದು ತಿಳಿದು ಬಂದಿದೆ.

    ಡಿಡಿಪಿಐ ಸಿ.ಎಸ್.ಮುದೋಳ್, ಬಿಇಒ ಜಾನೆ, ಬಿಆರ್ ಸಿ, ಮುಖ್ಯಗುರು ನಿವೇದಿತಾ ಪಟ್ಟೇದಾರ, ಎಸ್ ಡಿಎಸ್ ಸಿ ಅಧ್ಯಕ್ಷರು, ಸದಸ್ಯರು ಸೇರಿದಂತೆಯೇ ಇತರರಿದ್ದರು.

    ಕಿಟ್ ಗಳ ವಿತರಣೆ.

    ಸ್ಥಳದಲ್ಲಿಯೆ ಕಿಟ್ ಗಳ ವ್ಯವಸ್ಥೆ ಮಾಡಿದ ಡಿಡಿಪಿಐ ಮುದೋಳ್ ಅವರು, ಶೌಚಾಲಯ ಸ್ವಚ್ಚತೆಗೆ ನೇಮಕ ಮಾಡಿಕೊಳ್ಳಲಾಗುವುದೆಂದರು.

     

    ಆಯುಕ್ತರಿಗೆ ವರದಿ ಸಲ್ಲಿಕೆ.

    ಮಕ್ಕಳಿಂದ ಶೌಚಾಲಯ ಸ್ವಚ್ಚತೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆಯೇ ವರದಿ ತರಿಸಿ ಸೂಕ್ತ ಕ್ರಮಕ್ಕಾಗಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಕಳುಹಿಸಲಾಗಿದೆ.

    ಸಿ.ಎಸ್.ಮುದೋಳ್

    ಡಿಡಿಪಿಐ ಯಾದಗಿರಿ.

     

  • ಐತಿಹಾಸಿಕ ಕೆರೆಯ ಸಂರಕ್ಷಣೆ ಮತ್ತು ಉದ್ಯಾನವನದ ರಕ್ಷಣೆಗಾಗಿ ಕರವೇ ಒತ್ತಾಯ

    ಐತಿಹಾಸಿಕ ಕೆರೆಯ ಸಂರಕ್ಷಣೆ ಮತ್ತು ಉದ್ಯಾನವನದ ರಕ್ಷಣೆಗಾಗಿ ಕರವೇ ಒತ್ತಾಯ

    ಸತ್ಯಕಾಮ ವಾರ್ತೆ ಲಿಂಗಸುಗೂರು:

    ನೂರಾರು ವರ್ಷಗಳ ಇತಿಹಾಸ ಹೊಂದಿರುವ ಲಿಂಗಸುಗೂರಿನ ಐತಿಹಾಸಿಕ ಕೆರೆ ಸಂಪೂರ್ಣ ನಿರ್ಲಕ್ಷೆಯಿಂದ ದುರಾವಸ್ಥೆಗೆ ತುತ್ತಾಗಿದ್ದು, ಸುತ್ತಮುತ್ತ ಬೆಳೆದಿರುವ ಮುಳ್ಳು ಗಿಡಗಳು ಹಾಗೂ ಹೂಳು ನಾಶ ಮಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಘಟಕವು ಪುರಸಭೆ ಅಧ್ಯಕ್ಷರಿಗೆ ಮನವಿಯನ್ನು ನೀಡಿದರು.

    ಕರವೇ ತಾಲೂಕು ಘಟಕದ ಅಧ್ಯಕ್ಷರಾದ ಆಂಜನೇಯ.ಹೆಚ್.ಭಂಡಾರಿ “ಈ ಐತಿಹಾಸಿಕ ಕೆರೆಯ ನೀರನ್ನು ಬ್ರಿಟಿಷರ ಕಾಲದಲ್ಲಿ ಕೂಡ ಕುಡಿಯಲು
    ಬಳಸಲಾಗುತ್ತಿತ್ತು. ಆದರೆ ಇಂದು ಜಾನುವಾರುಗಳು ಕೂಡ ನೀರು ಕುಡಿಯಲು ಹಿಂದೇಟು ಹಾಕುವಂತಾಗಿದೆ. ಸುತ್ತಲಿನ ಭೂಮಿ ಕೂಡ ಒತ್ತುವರಿಯಿಂದ ಕೆರೆಯ ಗಾತ್ರ ಹದಗೆಟ್ಟಿದೆ.ಅಲ್ಲದೆ, ಕೆರೆಯ ದಡದಲ್ಲಿರುವ ಲಕ್ಷಾಂತರ ವೆಚ್ಚದ ಪಟ್ಟಣದ ಏಕೈಕ ಉದ್ಯಾನವನ ನಿರ್ವಹಣೆಯ ಕೊರತೆಯಿಂದ ಹಾಳಾಗುತ್ತಿದೆ. ಕಲ್ಲಿನ ಬೆಂಚುಗಳು ಮುರಿದಿರುವುದು, ಕಸದ ಗುಂಡಿಯಾಗಿ ಉದ್ಯಾನವು ಮಾರ್ಪಟ್ಟಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.
    ಪುರಸಭೆಗೆ ಮನವಿ ಸಲ್ಲಿಸಿ, ಕೆರೆ ಸುತ್ತಲಿನ ಗಿಡಗಂಟಿ ತೆರವುಗೊಳಿಸಿ, ಹೂಳು ಸ್ವಚ್ಛಗೊಳಿಸಿ, ಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಮತ್ತು ಉದ್ಯಾನವನದ ನಿರ್ವಹಣೆಗಾಗಿ ಪ್ರತ್ಯೇಕ ಅನುದಾನ ನೀಡಬೇಕು ಎಂದು ಒತ್ತಾಯಿಸಿದೆ.

    ಈ ಸಂದರ್ಭದಲ್ಲಿ ಕರವೇ ಕಾರ್ಯ ಕರ್ತರು ಇದ್ದರು.

  • ನಾರಾಯಣಪೂರ ಕೆಬಿಜೆಎನ್ಎಲ್ ಅಧಿಕಾರಿಗಳ ಮೊಂಡಾಟ : ರೈತರ ನಿತ್ಯ ಅಲೆದಾಟ

    ನಾರಾಯಣಪೂರ ಕೆಬಿಜೆಎನ್ಎಲ್ ಅಧಿಕಾರಿಗಳ ಮೊಂಡಾಟ : ರೈತರ ನಿತ್ಯ ಅಲೆದಾಟ

    ನೀರು ಬಳಕೆ ಪ್ರಮಾಣ ಪತ್ರ ಪಡೆಯಲು ರೈತರು ನಿತ್ಯ ಅಲೆದಾಟ


    ವರದಿ: ಕುದಾನ್‌ ಸಾಬ್
    ಸತ್ಯಕಾಮ ವಾರ್ತೆ ಯಾದಗಿರಿ:

    ನಾರಾಯಣಪುರ ಆಣೆಕಟ್ಟು ಹಿನ್ನೀರಿನ ನೀರು ಬಳಕೆ  ಪ್ರಮಾಣ ಪತ್ರ ಪಡೆಯಲು ಇನ್ನೀತರ ದಾಖಲಾತಿಗಳನ್ನು ಪಡೆಯಲು ತಿಂಗಳುಗಟ್ಟಲೇ ರೈತರನ್ನು ಅಧಿಕಾರಿಗಳು ಅಲೆದಾಡಿಸುವ ಪರಿಸ್ಥಿತಿ ನಿರ್ಮಾಣ ವಾಗಿರುವುದರಿಂದ ರೈತರಿಗೆ ನೀರಿನ ಪತ್ರದ ಸವಾಸನೆ ಬೇಡ ಎನ್ನುವಂತಾಗಿದೆ.

    ಹೌದು.. ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರದಲ್ಲಿರುವ ಕೆಬಿಜೆಎನ್ಎಲ್ ಪರಿಸ್ಥಿತಿವಿದು. ನಾರಾಯಣಪುರ ಆಣೆಕಟ್ಟು ಹಿನ್ನೀರು ಬಳಕೆ ಮಾಡಲು ಈ ಕಚೇರಿಯು 5 ತಾಲೂಕಿನ ರೈತರಿಗೆ ಪ್ರಮಾಣ ಪತ್ರವನ್ನು ನೀಡುತ್ತದೆ. ಪ್ರಮಾಣ ಪತ್ರಕ್ಕೆ ರೈತರಿಂದ ಕೆಲವು ಅಧಿಕಾರಿಗಳು ಹಣ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಹಣ ನೀಡದೇ ಇರುವ ರೈತರನ್ನು ಕುಂಟುನೆಪ ಹೇಳಿ ಅಲೆದಾಡಿಸಲಾಗುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬಂದಿವೆ.

    ನಾರಾಯಣಪೂರ ಕೆಬಿಜೆಎನ್ಎಲ್ ನಂ.3 ಕಚೇರಿ ಕಾರ್ಯನಿರ್ವಾಹಕ ಅಭಿಯಂತರರು ಹೆಚ್.ಬಿ ಕೊಣ್ಣೂರ ಅವರಿಗೆ ಈ ಬಗ್ಗೆ ರೈತರು ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಬಳಕೆ ಪ್ರಮಾಣ ಪತ್ರ ನೀಡಲು ನಮಗೆ ಬರುವುದಿಲ್ಲ ಮುಖ್ಯ ಇಂಜಿನಿಯರ್ ಮಂಜುನಾಥ್ ಆರ್ ಅವರಿಗೆ ಬರುತ್ತದೆ ಎಂದು ತಾಳ್ಮೆಯಿಂದ ಜಾರಿಕೊಳ್ಳುವ ಕಾರ್ಯವನ್ನು ಈ ಅಧಿಕಾರಿ ರೂಢಿಸಿಕೊಂಡಿದ್ದಾರೆ.

    ಪ್ರಮಾಣ ಪತ್ರ ಕುರಿತು ನಾರಾಯಣಪುರ ಕೆಬಿಜೆಎನ್ಎಲ್ ಮುಖ್ಯ ಇಂಜಿನಿಯರ್ ಮಂಜುನಾಥ್ ಆರ್ ಅವರಿಗೆ ಈ ಕುರಿತು ಗಮನಕ್ಕೆ ತಂದ ವೇಳೆಯಲ್ಲಿ, ಕೆಳ ದರ್ಜೆಯ ಅಧಿಕಾರಿಗಳು ರೈತರಿಗೆ ಸರಿಯಾದ ಸಮಯದಲ್ಲಿ ನೀರು ಬಳಕೆ ಪ್ರಮಾಣ ಪತ್ರ ನೀಡದೇ ರೈತರನ್ನು ಪರದಾಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂಬುದು ರೈತರಿಗೆ ಮನದಟ್ಟಾಯಿತು.

    ಇನ್ನು ರೈತರಿಗೆ ಅಲೆದಾಡಿಸುವ ಕೆಲಸವನ್ನು ಇಲ್ಲಿನ ಅಧಿಕಾರಿಗಳು ಮಾಡುತ್ತಿದ್ದು, ರೈತರ ಕೆಲಸ ಮಾಡಿಕೊಡುವಂತೆ ಮುಖ್ಯ ಇಂಜಿನಿಯರ್ ಹೇಳಿದರು ಕೂಡ ಸಿಬ್ಬಂದಿ ಶಿವನಗೌಡ ಅವರು ಪತ್ರ ನೀಡದೆ ರೈತರನ್ನು ಅಲೆದಾಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮೇಲಾಧಿಕಾರಿಗಳು ಶಿವನಗೌಡ ಅವರಿಗೆ ರೈತರಿಗೆ ಪ್ರಮಾಣ ನೀಡಲು ತಾಕೀತು ಮಾಡಿದರು ಪ್ರಮಾಣ ಪತ್ರ ನೀಡದ ತಮ್ಮ ಮೊಂಡತನವನ್ನು ಮತ್ತೆ ಮುಂದುವರೆಸಿದ್ದಾರೆ.

    ಒಟ್ಟಾರೆಯಾಗಿ ನಾರಾಯಣಪುರ ಆಣೆಕಟ್ಟು ಕೆಬಿಜೆಎನ್ಎಲ್ ಕಚೇರಿಯಲ್ಲಿ ನೀರು ಬಳಕೆ ಪ್ರಮಾಣ ಪತ್ರ ಪಡೆಯಬೇಕೆಂದರೆ ಕನಿಷ್ಠ ಐದಕ್ಕಿಂತ ಹೆಚ್ಚು ಬಾರಿ ಕಚೇರಿಗೆ ಅಲೆದಾಡಬೇಕು. ಇಲ್ಲದಿದ್ದರೆ ರೈತರಿಗೆ ಪ್ರಮಾಣ ಪತ್ರ ಸಿಗುವುದೇ ಅಪರೂಪ ಎನ್ನುವಂತೆ ರೈತರ ಆಶಾಭಾವವಾಗಿದೆ. ಈ ಕೂಡಲೇ ಇಂತಹ ಅಧಿಕಾರಿಗಳ ಬಗ್ಗೆ ಮುಖ್ಯ ಇಂಜಿನಿಯರ್ ಮಂಜುನಾಥ್ ಆರ್ ಅವರು ಸೂಕ್ತ ಕ್ರಮಕೈಗೊಂಡು ರೈತರಿಗೆ ಸುಲಭ ಹಾಗೂ ವಿಳಂಬ ನೀತಿ ಅನುಸರಿಸದೇ ಸರಿಯಾದ ವೇಳೆಯಲ್ಲಿ ಪ್ರಮಾಣ ಪತ್ರ ರೈತರಿಗೆ ಸಿಗುವಂತಾಗಲಿ ಎನ್ನುವುದೇ ಸತ್ಯಕಾಮ ದಿನಪತ್ರಿಕೆ ಆಶಯ.

  • ದೊಡ್ಡ ಕೆರೆಯಿಂದ ಅಪಾಯ ತಪ್ಪಿಸಲು ತಡೆಗೊಡೆ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷರ ಸೂಚನೆ

    ದೊಡ್ಡ ಕೆರೆಯಿಂದ ಅಪಾಯ ತಪ್ಪಿಸಲು ತಡೆಗೊಡೆ ನಿರ್ಮಾಣಕ್ಕೆ ನಗರಸಭೆ ಅಧ್ಯಕ್ಷರ ಸೂಚನೆ

    ವಾರ್ಡ ನಂ 5 ರಲ್ಲಿ ಲಲಿತಾ  ಅನಪುರ  ಮಿಂಚಿನ ಸಂಚಾರ.

    ಸತ್ಯಕಾಮ ವಾರ್ತೆ ಯಾದಗಿರಿ:
    ತಾವು ಪ್ರತಿನಿಧಿಸುವ ವಾರ್ಡ ನಂ 5 ರ ದೊಡ್ಡ ಕೆರೆ ಏರಿಯಾ ಮತ್ತು ದುರ್ಗಾ ನಗರದ ವಿವಿಧಡೆ ಬುಧವಾರ ಮಿಂಚಿನ ಸಂಚಾರ ನಡೆಸಿದ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು, ಅಲ್ಲಿನ ದೊಡ್ಡಕರೆ ಮಳೆ ಬಂದರೆ ನೀರು ಶಾಲೆಗೆ ಹಾಗೂ ಅಕ್ಕ,ಪಕ್ಕದ ಮನೆಗಳಿಗೆ ನುಗ್ಗುತ್ತಿದ್ದು, ಕೂಡಲೇ ತಡೆಗೊಡೆ ನಿರ್ಮಿಸಲು ಅಂದಾಜು ವೆಚ್ಚ ತಯಾರಿಸುವಂತೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.


    ಅದೇ ವಾರ್ಡನ ದುರ್ಗಾ ನಗರದ ಸ್ಲಂ ಏರಿಯಾಕ್ಕೂ ಭೇಟಿ ನೀಡಿದ ಅವರು,ಅಕ್ಕ,ಪಕ್ಕ ಮನೆಗಳಿಗೆ ನೀರು ನುಗ್ಗಬಾರದು ಮತ್ತು ತಾಂಬರ್ ಕೆರೆ ಪಕ್ಕದಲ್ಲಿ ರಸ್ತೆ ಹಾಳಾಗಬಾರದೆಂದು  ಸ್ಟೋನ್ ಪೆಚಿಂಗ್ ಮಾಡಲು ಸಹ ಹೇಳಿದರು.

    ಪ್ರಕೃತಿ ವಿಕೋಪ ನಿಧಿಯಡಿ ಮಂಜೂರು ಆಗಿರುವ 25 ಲಕ್ಷ ರೂ.ದಲ್ಲಿ ಈ ಎರಡು ಕೆಲಸ ಜೊತೆಗೆ ಸಣ್ಣ,ಪುಟ್ಟ ಕೆಲಸಗಳನ್ನು ಮಾಡಲು ಅಧ್ಯಕ್ಷರು ಸೂಚಿಸದರು. ಸುಮಾರು ಒಂದು ತಾಸು ತಮ್ಮ ವಾರ್ಡಿನ ವಿವಿಧಡೆ ಸಂಚರಿಸಿದ ಅವರು ಅಲ್ಲಿನ ಕೆಲ ಸ್ಥಳಗಳಲ್ಲಿ ವಿದ್ಯುತ್ ಕಂಬಗಳು ಚರಂಡಿ ಒಳಗಡೆ ಹೂತಿದ್ದ ಗಮನಿಸಿದ ಅವರು ಅವುಗಳನ್ನು ಸ್ಥಳಾಂತರಿಸಲು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

    ಶಾಲೆಯ ಮುಂಭಾಗದಲ್ಲಿರುವ ಕಂಬಕ್ಕೆ ದೀಪ ಹಾಕಲು ಸೂಚನೆ ನೀಡಿದರು.

    ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವಿಶ್ವನಾಥ ಪಾಟೀಲ್,  ನಗರಸಭೆ ನಾಮ ನಿರ್ದೇಶಕ ಸದಸ್ಯರಾದ ವೆಂಕಟೇಶ ನಾಗುಂಡಿ, ನಿಂಗಪ್ಪ ಜಾಲಗಾರ್, ದುರ್ಗಪ್ಪ, ಸುಗಪ್ಪ ಸೇರಿದಂತೆಯೇ ಇತರರಿದ್ದರು.
  • ಹದಗೆಟ್ಟ ರಸ್ತೆಗೆ ಕಾಂಕ್ರಿಟ್ ಹಾಕಿಸಿ, ಚರಂಡಿ ನಿರ್ಮಿಸಿ ಅನುಕೂಲ ಮಾಡಿಕೊಟ್ಟ ನಗರಸಭೆ ಅಧ್ಯಕ್ಷೆ

    ಹದಗೆಟ್ಟ ರಸ್ತೆಗೆ ಕಾಂಕ್ರಿಟ್ ಹಾಕಿಸಿ, ಚರಂಡಿ ನಿರ್ಮಿಸಿ ಅನುಕೂಲ ಮಾಡಿಕೊಟ್ಟ ನಗರಸಭೆ ಅಧ್ಯಕ್ಷೆ

    ಸತ್ಯಕಾಮ ವಾರ್ತೆ ಯಾದಗಿರಿ: 

    ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಹೋಗುವ ಶಾಸ್ತ್ರಿ ಸರ್ಕಲ್  ಪಕ್ಕದ ರಸ್ತೆ ಹಾಗೂ ಬಾಲಾಜಿ ದೇವಸ್ಥಾನ ಹಿಂಭಾಗದಲ್ಲಿರುವ‌ ರಸ್ತೆಯ ಸಂಚಾರಕ್ಕೆ ಅಡಚಣೆ  ಉಂಟಾಗಿದ್ದ ರಸ್ತೆ ಮೇಲಿನ ನೀರು ಹಾಗೂ ಚರಂಡಿ ನೀರನ್ನು ಸರಾಗವಾಗಿ ಹರಿಯುವ ಹಾಗೂ ನಿಲ್ಲದಂತೆಯೇ ಸೂಕ್ತ ವ್ಯವಸ್ಥೆ ಕಲ್ಪಿಸುವ ಮೂಲಕ  ಸಾರ್ವಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು ಕಾಮಗಾರಿ ಮಾಡಿಸಿದ್ದಾರೆ.

    ಚರಂಡಿ ‌ಸ್ವಚ್ಚಗೊಳಿಸಿ ಅಗತ್ಯ ಕಾಮಗಾರಿ ಕೈಗೊಂಡು ಚರಂಡಿ ನಿರ್ಮಿಸಿ ನೀರು‌ ಸರಾಗವಾಗಿ ಮುಂದೇ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ,
    ರೈಲ್ವೆ ಸ್ಟೇಷನ್ ಹೋಗುವ ರಸ್ತೆಯಲ್ಲಿ ಸ್ವಲ್ಪ ಮಳೆ ಬಂದರೂ  ನೀರು ನಿಂತು ಸಂಚಾರಕ್ಕೆ ಅನಾನೂಕುಲವಾಗುತ್ತಿತ್ತು.ಇದನ್ನು ಮನಗಂಡ ಅಧ್ಯಕ್ಷೆ  ಅನಪೂರ ಅವರು, ಕಾಂಕ್ರೀಟ್ ಹಾಕುವ ಮೂಲಕ ‌ಸಂಚಾರಕ್ಕೆ ಅನುಕೂಲ ಮಾಡಿದ್ದಾರೆ.

    ಸುಮಾರು ದಿನಗಳಿಂದ ಮಳೆ ಬರುತ್ತಲೇ ರಸ್ತೆಯ ಮೇಲೆ ನೀರು ನಿಂತು ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿರುವುದನ್ನು ಖುದ್ದಾಗಿ ಗಮನಿಸಿದ ಅಧ್ಯಕ್ಷರು,  ರಸ್ತೆ ದುರಸ್ತಿ ಹಾಗೂ ಚರಂಡಿ ನಿರ್ಮಾಣ ಮಾಡುವ ಮೂಲಕ ಸುಲಭ ಸಂಚಾರಕ್ಕೆ ಅನುಕೂಲ‌ಮಾಡಿದ್ದಾರೆ.

    ಈ ಸಂದರ್ಭದಲ್ಲಿ ಪ್ರಭಾರಿ ಕಿರಿಯ ಅಭಿಯಂತರರಾದ ಅಂಬಿಕೇಶ್ವರ ಹೊನಕೇರಿ ಸೇರಿದಂತೆಯೇ ಇತರರಿದ್ದರು.
  • ರೈತರು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲಾ-ಸಂಗಮೇಶ ಸಗರ

    ರೈತರು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲಾ-ಸಂಗಮೇಶ ಸಗರ

    • ಬೂದಿಹಾಳ ಪೀರಾಪೂರ ಏತ ನೀರಾವರಿ ಹೋರಾಟಕ್ಕೆ ರೈತ ಸಂಘಟನೆಯ ಬೆಂಬಲ

    ಸತ್ಯಕಾಮ ವಾರ್ತೆ ತಾಳಿಕೋಟೆ:

    ಬೂದಿಹಾಳ ಪೀರಾಪೂರ ಏತ ನೀರಾವರಿ ಕಾಮಗಾರಿಗೆ ಸಂಬಂದಿಸಿ ಕಳೆದ ೪ ದಿನಗಳಿಂದಲೂ ರೈತ ಸಂಘಟನೆಯ ನೇತೃತ್ವದಲ್ಲಿ ಸಾವಿರಾರು ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಾ ಸಾಗಿದರೂ ಯಾವೊಬ್ಬ ಸರ್ಕಾರದ ಜನಪ್ರತಿನಿಧಿ ಬೆಟ್ಟಿ ನೀಡದಿರುವದು ಅವರ ರೈತಪರ ಕಾಳಜಿ ಎತ್ತಿ ತೋರಿಸುತ್ತಿದೆ ರೈತರೆಲ್ಲರೂ ಒಗ್ಗಟ್ಟಾಗಿ ದ್ವನಿಗೂಡಿಸದಿದ್ದರೆ ರೈತ ಕುಲಕ್ಕೆ ಉಳಿಗಾಲವಿಲ್ಲಾವೆಂದು ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ ಅವರು ಹೇಳಿದರು.

    ಮಂಗಳವಾರರಂದು ತಾಲೂಕಿನ ಕೊಡಗಾನೂರ ಕ್ರಾಸ್‌ನಲ್ಲಿ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಗೆ ಸಂಬಂಧಿಸಿದ ಕೊನೆ ಹಂತದ ಎಫ್.ಐ.ಸಿ (ಹೊಲ ಗಾಲುವೆ) ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ೩೮ ಗ್ರಾಮಗಳ ರೈತಾಪಿ ಜನರು ನಡೆಸಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಬೆಟ್ಟಿ ನೀಡಿ ತಮ್ಮ ರೈತ ಸಂಘ ಹಸಿರುಸೇನೆ ಸಂಘಟನೆಯ ವತಿಯಿಂದ ಬೆಂಬಲ ಸೂಚಿಸಿ ಮಾತನಾಡುತ್ತಿದ್ದ ಅವರು ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಯ ಕಾಮಗಾರಿಗೂ ಈಗಾಗಲೇ ಅವೈಜ್ಞಾನಿಕವಾಗಿ ಕೈಗೊಳ್ಳಲಾಗಿದೆ ಓರಪ್ಲೋ ಡಬ್ಬಿಗಳನ್ನು ಎಲ್ಲಿ ಕೂಡಿಸಬೇಕಿತ್ತು ಅಲ್ಲಿ ಕೂಡಿಸಿಲ್ಲಾ ರಾಜಕೀಯ ಒತ್ತಡಕ್ಕೆ ಮಣಿದು ಮನಸ್ಸಿಚ್ಚೆಯಂತೆ ಕೂಡಿಸಲಾಗಿದೆ ಇದರಿಂದ ರೈತರ ಜಮೀನುಗಳಿಗೆ ನೀರು ಬರುವದು ಕಡಿಮೆ ಎಂದು ಹೇಳಲಾಗುತ್ತಿದೆ ದೇಶಕ್ಕೆ ಅನ್ನ ನೀಡುವ ರೈತರ ಭವಣೆಗೆ ಸರ್ಕಾರಗಳು ಸ್ಪಂದಿಸಬೇಕು ಆದರೆ ಈಗೀನ ಕಾಂಗ್ರೇಸ್ ಸರ್ಕಾರ ಗ್ಯಾರೆಂಟಿ ನಿದ್ರೆಯಲ್ಲಿ ಜಾರಿದೆ ಅವರಿಗೆ ಯಾರೂ ಕಾಣುತ್ತಿಲ್ಲಾವೆಂದು ಹರಿಹಾಯ್ದ ಅವರು ರೈತರಿಗೆ ಯಾವುದೇ ಜಾತಿ ಪಕ್ಷವೆಂಬುದು ಇಲ್ಲಾ ಅವರಿಗೆ ಕೇವಲ ಬೆಳೆ ಬೆಳೆಯಬೇಕು ಎಂಬ ಚಿಂತೆಯಲ್ಲಿರುತ್ತಾರೆ ಬೂದಿಹಾಳ-ಫೀರಾಪೂರ ಯೋಜನೆಗೆ ಸಂಬಂದಿಸಿ ಡಬ್ಬಿಗಳು ಇನ್ನೂ ೫೦೦ ಕ್ಕೂ ಅಧಿಕ ಕೂಡಬೇಕಾಗಿದೆ ಈಗಾಗಲೇ ಹಾಕಲಾದ ಪೈಪುಗಳು ಪಿಡಬ್ಲುಡಿ ರಸ್ತೆಯಲ್ಲಿ ಹಾಕಿದ್ದಾರೆ ರೈತರೆಲ್ಲರೂ ಒಗ್ಗೂಡಿ ದ್ವನಿಗೂಡಿಸಬೇಕೆಂದು ಅವರು ಇಂಡಿ ಪಟ್ಟಣಕ್ಕೆ ಮುಖ್ಯಮಂತ್ರಿಗಳು ಬೆಟ್ಟಿ ನೀಡಿದಾಗ ನಮ್ಮ ರೈತ ಸಂಘದ ವತಿಯಿಂದ ಬೂದಿಹಾಳ-ಫೀರಾಪೂರ ಏತನೀರವಾರಿ ಯೋಜನೆಯ ಮುಕ್ತಾಯ ಹಂತದ ಕಾಮಗಾರಿ ಕೈಗೊಳ್ಳಲು ಮನವಿ ಸಲ್ಲಿಸಿದ್ದೇವೆ ಕೂಡಲೇ ಸ್ಪಂದಿಸುವ ಬರವಸೆ ನೀಡಿದ್ದಾರೆ ಅವರು ನೀಡಿದ ಬರವಸೆ ಬರವಸೆಯಾಗಿ ಉಳಿಯದಂತೆ ನಾವೇಲ್ಲಾ ರೈತರ ಉಗ್ರ ಸ್ವರೂಪದ ಹೋರಾಟಕ್ಕೆ ಅಣಿಯಾಗಬೇಕೆಂದರು.

    ಇನ್ನೋರ್ವ ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘಟನೆ ಶ್ರೀಮತಿ ಸುಜಾತಾ ಅಸ್ಕಿ ಅವರು ಮಾತನಾಡಿ ಕಾಂಗ್ರೇಸ್ ಸರ್ಕಾರವು ತನ್ನ ಅಂಗೈ ತೋರಿಸಿದರೆ ಅವಲಕ್ಷಣ ಕಳೆದುಕೊಳ್ಳಲಿದೆ ಬ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರ ರೈತರ ಸಂಕಷ್ಟವೆಂಬುದು ಕಾಣುತ್ತಿಲ್ಲಾ ಕಳೆದ ೪ ದಿನಗಳಿಂದ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಯ ಮುಕ್ತಾಯ ಹಂತದ ಕಾಮಗಾರಿ ಕೈಗೊಳ್ಳಲು ಸಾವಿರಾರು ರೈತರು ಹೋರಾಟಕ್ಕೆ ಇಳಿದಿದ್ದರೂ ಕೂಡಾ ಜಿಲ್ಲಾ ಉಸ್ತುವಾರಿ ಮಂತ್ರಿಗಳು ನಿದ್ರೆಗೆ ಜಾರಿರುವದು ಅವರ ನಿಸ್ಕಾಳಜಿ ತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದ ಅವರು ಕೂಡಲೇ ಸರ್ಕಾರದ ಜನಪ್ರತಿನಿಧಿಗಳು ಸ್ಪಂದಿಸಿ ಹೋರಾಟಕ್ಕೆ ಸ್ಪಂದಿಸುವ ಕೆಲಸ ಮಾಡಲಿ ಎಂದರು.

    ಇನ್ನೋರ್ವ ರೈತ ಮುಖಂಡ ಪ್ರಭುಗೌಡ ಮದರಕಲ್ಲ, ಹಣಮಗೌಡ ಗೂಗಲ್ಲ, ಚಿನ್ನಪ್ಪಗೌಡ ಮಾಳಿ, ರವಿಗೌಡ ಪಾಟೀಲ ಅವರು ಮಾತನಾಡಿ ಈ ಭಾಗದ ರೈತರ ಜೀವನಾಡಿಯಾಗಲಿರುವ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಬೇಕಾಗಿದೆ ರೈತರು ಕೈಗೊಂಡಿರುವ ಹೋರಾಟಕ್ಕೆ ನಮ್ಮ ಬೆಂಬಲ ಅವರಿಗೆ ಸದಾ ವಿದೆ ಎಂದರು.

    ಅಖಂಡ ಕರ್ನಾಟಕ ರೈತ ಸಂಘಟನೆಯ ರಾಜ್ಯ ಪ್ರದಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿದರು.

    ಈ ಸಮಯದಲ್ಲಿ ರೈತ ಮುಖಂಡ ಪ್ರಭುಗೌಡ ಬಿರಾದಾರ, ಶಿವಪುತ್ರಪ್ಪ ಚೌದ್ರಿ, ಗುರುರಾಜ ಪಡಶೆಟ್ಟಿ, ರಾಯಪ್ಪಗೌಡ ಪಾಟೀಲ, ಸಾಹೇಬಗೌಡ ಯಾಳಗಿ, ಬಸನಗೌಡ ಯಾಳವಾರ, ಬಸನಗೌಡ ಚೌದ್ರಿ, ನಾನಾಗೌಡ ಬಿರಾದಾರ, ಎಚ್.ಎನ್.ಬಿರಾದಾರ, ಸುರೇಶಕುಮಾರ ಇಂಗಳಗೇರಿ, ಡಾ.ಪ್ರಭುಗೌಡ ಬಿರಾದಾರ(ಅಸ್ಕಿ), ಮಹಾದೇವ ಅಸ್ಕಿ, ಪರಶುರಾಮ ತಳವಾರ, ಪರಶುರಾಮ ನಾಲತವಾಡ, ಬಾಬುಗೌಡ ಬಿರಾದಾರ, ಚಿದುಗೌಡ ಬಿರಾದಾರ, ಶಂಕ್ರಗೌಡ ದೇಸಾಯಿ, ಬಸವರಾಜ ಹೊಸಳ್ಳಿ, ಡಿಎಸ್‌ಎಸ್ ಅಂಬೇಡ್ಕರ್ ದಾರಿ ಸಂಘಟನೆಯ ರಾಜ್ಯಾಧ್ಯಕ್ಷ ಬಸವರಾಜ ಕಟ್ಟಿಮನಿ, ಮುಖಂಡರುಗಳಾದ ಶಿವಶಂಕರ ಕಟ್ಟಿಮನಿ, ಸಿದ್ದಪ್ಪ ಹೊಸಮನಿ, ಶಾಂತಪ್ಪ ಕೊಡಗಾನೂರ, ಸಿದ್ದಪ್ಪ ಬಸರಿಕಟ್ಟಿ, ಬಸವರಾಜ ತಳವಾರ, ಕಾಶೆಪ್ಪ ತೊಗರಿ, ಒಳಗೊಂಡು ನಾವದಗಿ, ನೀರಲಗಿ, ಗೊಟಗುಣಕಿ, ಗುಂಡಕನಾಳ, ಫೀರಾಪೂರ, ಕಾರನೂರ, ಕೊಡಗಾನೂರ, ಅಸ್ಕಿ, ಗ್ರಾಮ ಒಳಗೊಂಡು ೩೮ ಗ್ರಾಮಗಳ ರೈತಾಪಿ ಜನರು ಪಾಲ್ಗೊಂಡಿದ್ದರು.

  • ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹ ಎಲ್ಲಾ ಫಲಾನುಭವಿಗಳಿಗೆ ನೀಡಿ:ಬಸವರಾಜಪ್ಪ ಭಾಗ್ಲಿ

    ಗ್ಯಾರಂಟಿ ಯೋಜನೆಗಳ ಸೌಲಭ್ಯ ಅರ್ಹ ಎಲ್ಲಾ ಫಲಾನುಭವಿಗಳಿಗೆ ನೀಡಿ:ಬಸವರಾಜಪ್ಪ ಭಾಗ್ಲಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳ ಸೌಲಭ್ಯ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ
    ಸಮರ್ಪಕವಾಗಿ ತಲುಪಿಸಬೇಕು ಹಾಗೂ ಸೌಲಭ್ಯ ವಂಚಿತ ಫಲಾನುಭವಿಗಳ ಮನೆ ಮನೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು
    ಮುಂದಿನದಿನಗಳಲ್ಲಿ ಬಡ ಜನರ ಮನೆಯ ಬಾಗಿಲಿಗೆ ಮುಟ್ಟಿಸುವ ಕೆಲಸ ತಾಲೂಕು ಮಟ್ಟದ ಅಧಿಕಾರಿಗಳು
    ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ
    ಬಸವರಾಜ ಭಾಗ್ಲಿ ಅವರು ಹೇಳಿದರು.

    ಕರ್ನಾಟಕ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಜು.16 ರಂದು ಯಾದಗಿರಿ ತಾಲೂಕ ಪಂಚಾಯತ
    ಸಭಾಂಗಣದಲ್ಲಿ ನಡೆದ ತಾಲೂಕ ಮಟ್ಟದ ಪ್ರಗತಿ ಪರಿಶೀಲನ ಸಭೆಯ ಅಧ್ಕಕ್ಷತೆ ವಹಿಸಿ ಅವರು ಮಾತನಾಡಿದರು.
    ಗ್ರಾಮೀಣ ಮಟ್ಟದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಅಧಿಕಾರಿಗಳಲ್ಲಿ ಸೇವಾ
    ಮನೋಭಾವ ಇರಬೇಕು. ಸಮಾಜದಲ್ಲಿ ಇನ್ನು ಅನೇಕರು ಅಗತ್ಯ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬುದನ್ನು
    ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳಿಗೆ
    ಸೂಚಿಸಿದರು.

    ಸರಕಾರ ಗೃಹಜ್ಯೋತಿ ಯೋಜನೆಯಡಿ ನೀಡಿದ 200 ಯುನಿಟ್ ಮಿತಿಯೋಳಗೆ ವಿದ್ಯುತ್ ಬಳಕೆ ಮಾಡುವ ಗ್ರಾಹಕರ ಸಂಖ್ಯೆ
    ಹೆಚ್ಚಿರುವದರಿಂದ, ಪ್ರತಿ ಮನೆಗೂ ಮೀಟರ್ ಅಳವಡಿಕೆ ಮಾಡಿಕೊಳ್ಳುವಂತೆ ಗ್ರಾಹಕರಿಗೆ ಮನವರಿಕೆ ಮಾಡುವ ಮೂಲಕ ವಿದ್ಯುತ್
    ಸೋರಿಕೆಯನ್ನು ತಡೆಯಬಹುದು ಎಂದು ವಿದ್ಯುತ್ ಇಲಾಖೆಯ ಅಧಿಕಾರಿಗೆ ಸೂಚಿಸಿದರು.

    ಪಡಿತರ ಚೀಟಿ ನೋಂದಣಿ ನಿಯಮಾನುಸಾರ ನೋಂದಣಿಯಾಗಬೇಕು ಮತ್ತು ಪಾರದರ್ಶಕವಾಗಿ ನೋಂದಣಿ ಮಾಡಿಕೋಳ್ಳಬೇಕು
    ಎಕೆಂದರೆ ಸರ್ಕಾರದ ಬೇರೆ ಯೋಜನೆಗಳ ಸೌಲಭ್ಯ ಪಡೆದುಕೋಳ್ಳಲು ಈ ಪಡಿತರ ಚೀಟಿಯನ್ನೆ ಕುಟುಂಬ ಎಂದು ಗುರುತಿಸಿ
    ಸೌಲಭ್ಯ ಪಡೆಯಲಾಗುವುದು.ಎಲ್ಲಾ ಪಡಿತರ ಚೀಟಿ ಹೊಂದಿದ ಫಲಾನುಭವಿಗಳಿಗೆ 10 ಕೆ.ಜಿ ಅಕ್ಕಿಯ ಪಡಿಯುತ್ತಿದಾರೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದರು.

    ಅಧ್ಯಕ್ಷರು ಕೆಲವು ನ್ಯಾಯಾಬೇಲೆ ಅಂಗಡಿಗಳಲ್ಲಿ ಆಹಾರ ಧಾನ್ಯಗಳು ಕಡಿತ ಮಾಡಿಕೊಳ್ಳುತ್ತಿದ್ದು ತಾವುಗಳು ಪ್ರತಿ ನ್ಯಾಯಾಬೆಲೆ
    ಅಂಗಡಿಗಳಿಗೆ ಬೇಟಿ ನೀಡಿ ಪರಿಶೀಲಿಸಿ ಇನ್ನುಳಿದ ಫಲಾನುಭವಿಗಳ ಮನೆಗೆ ಭೆಟಿ ನೀಡಿ ದಾಖಲಾತಿಗಳನ್ನಿ ಸರಿಪಡಿಸಿಕೋಂಡು
    ಮುಂದಿನ ತಿಂಗಳಿನಿAದ ಅವರಿಗೆ ಸೌಲಭ್ಯ ದೊರಕುವಂತೆ ಮಾಡಬೇಕೆಂದು ಹೇಳಿದರು.

    ಯುವನಿಧಿ 2022-23 ಮತ್ತು 2023-24 ನೇ ಸಾಳಿನಲ್ಲಿ ಉತ್ತಿರ್ಣರಾದ ಡಿಪ್ಲೋಮೊ ಹಾಗೂ ಪದವಿದರರಿಗೆ ಆರು ತಿಂಗಳವರೆಗೆ
    ಯಾವುದೇ ಸರ್ಕಾರಿ ಅರೇ ಅರ್ಕಾರಿ ಹಾಗೂ ಬ್ಯಾಂಕಿನಿAದ ಸಾಲ ಪಡೆದು ವ್ಯಾಪಾರ ವಹಿವಾಟು ಮಾಡದೆ ಇರುವ ಪದವಿದರರಿಗೆ ಡಿಪ್ಲೋಮೊ ೧೫೦೦ ಹಾಗೂ ಪದವಿದರರಿಗೆ ೩೦೦೦ ರೂ. ನೀಡಲಾಗುವುದು. ಪ್ರಸ್ತುತ ಜಿಲ್ಲೆಯಲ್ಲಿ1652 ಜನರಿಗೆ ಈ ಸೌಲಭ್ಯ ಪಡೆಯುತ್ತಿದ್ದಾರೆ.

    ಮಹಿಳೆಯರು ರಾಜ್ಯದ ಮೂಲೆ-ಮೂಲೆಗಳಿಗೆ ಉಚಿತ ಪ್ರವಾಸ ಮಾಡುತಿದ್ದಾರೆ. ವಿದ್ಯಾರ್ಥಿನಿಯರೂ ಸೇರಿದಂತೆ ಎಲ್ಲ ವರ್ಗಗಳ
    ಮಹಿಳೆಯರಿಗೆ ಅಂತರ್ ರಾಜ್ಯ ಸಾರಿಗೆ ಬಸ್, ಎಸಿ ಹಾಗೂ ಲಕ್ಷುರಿ ಬಸ್‌ಗಳನ್ನು ಹೊರತುಪಡಿಸಿ ಇತರ ಎಲ್ಲ ಬಸ್‌ಗಳಲ್ಲಿ
    ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ನೀಡಿದ್ದು, ಆದಾರ್ ಕಾರ್ಡ್ ತೋರಿಸಿ ಮಹಿಳಾ ಪ್ರಯಾಣಿಕರು ಬಸ್‌ಗಳಲ್ಲಿ
    ಉಚಿತವಾಗಿ ಪ್ರಯಾಣಿಸಲು ಕ್ರಮವಹಿಸಿ ಎಂದು ಸಾರಿಗೆ ಇಲಾಖೆಯ ಅಧಿಕಾರಿಗೆ ನಿರ್ದೇಶಿಸಿದರು.

    ಅಧ್ಯಕ್ಷರು ಹಾಗೂ ಸದಸ್ಯರು ನಿರ್ವಾಹಕರು ಹಾಗೂ ಚಾಲಕರು ಮಹಿಳಾ ಪ್ರಯಾಣಿಕರನ್ನು ಗೌರವದಿಂದ ನೋಡಿಕೊಳ್ಳಲು
    ಅಧಿಕಾರಿಗೆ ಸೂಚಿಸಿದರು.

    ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನ ಮಾಡುವ ನಿಟ್ಟಿನಲ್ಲಿ ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ,
    ಯಾವ ಕಾರಣಕ್ಕಾಗಿ ಸೌಲಭ್ಯ ದಕ್ಕುತ್ತಿಲ್ಲದ ಫಲಾನುಭವಿಗಳ ಮನೆಗೆ ಭೇಟಿ ನೀಡಿ ದಾಖಲಾತಿಗಳನ್ನು ತೆಗೆದುಕೊಂಡು ಮುಂದಿನ
    ದಿನಗಳಲ್ಲಿ ಸೌಲಭ್ಯಗಳು ಸಿಗುವಂತೆ ಮಾಡಬೇಕು. ಎಂದು ಸಭೆಯಾಲ್ಲಿ ಪ್ರಾಸ್ತಾಪ ಆಗಿರುವ ಎಲ್ಲ ಸಮಸ್ಯೆಗಳಿಗೆ ಮುಂದಿನ ಸಭೆ
    ಹೊತ್ತಿಗೆ ಸಂಪೂರ್ಣ ಮಾಹಿತಿಯೊಂದಿಗೆ ಪ್ರತಿ ಇಲಾಖಾ ಅಧಿಕಾರಿಗಳು ಹಾಜರಾಗುವಂತೆ ಸೂಚಿಸಿದರು.

    ಈ ವೇಳೆ ಯಾದಗಿರಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾದೇವ ಬಾಬಳಗಿ, ವ್ಯವಸ್ಥಾಪಕರು ಶಿವರಾಯ ಗುಂಡಗುರ್ತಿ, ಐದು ಗ್ಯಾರಂಟಿ ಯೋಜನೆಗಳ ತಾಲೂಕ ಸಮಿತಿ ಸದಸ್ಯರುಗಳು ಹಾಗೂ ಐದು ಇಲಾಖೆಯ
    ಅಧಿಕಾರಿಗಳು ಭಾಗವಹಿಸಿದ್ದರು.

  • ಜಯ ಕರ್ನಾಟಕ ಸಂಘಟನೆ ಮನವಿಗೆ ಪುರಸಭೆ ಟೆಂಡ‌ರ್ ಗಳ ಮುಂದೂಡಿಕೆ!

    ಜಯ ಕರ್ನಾಟಕ ಸಂಘಟನೆ ಮನವಿಗೆ ಪುರಸಭೆ ಟೆಂಡ‌ರ್ ಗಳ ಮುಂದೂಡಿಕೆ!

    ಸತ್ಯಕಾಮ ವಾರ್ತೆ ಗುರುಮಠಕಲ್:

    ಪುರಸಭೆ ವತಿಯಿಂದ ವಿವಿಧ ಟೆಂಡರ್‌ಗಳಿಗೆ ಆಹ್ವಾನ ನೀಡಿದ್ದು ಕೆಲವು ಟೆಂಡರ್ ಗಳಿಗೆ ತಾಲೂಕ ಜಯ ಕರ್ನಾಟಕ ಸಂಘಟನೆ ಆಕ್ಷೇಪ ಸಲ್ಲಿಸಿ ಮನವಿ ನೀಡಿದ ನಂತರ ಟೆಂಡರ್ ಗಳು ಮುಂದೂಡಿಕೆ ಮಾಡಲಾಗಿರುವ ಘಟನೆ ಬುಧುವಾರ ಜರುಗಿತು.

    ಪಟ್ಟಣದ ಅಭಿವೃದ್ಧಿಗಾಗಿ ಮತ್ತು ಪುರಸಭೆ ಕರ ವಸೂಲಿ ಸಂಗ್ರಹಕ್ಕಾಗಿ, ತರಕಾರಿ ಮಾರುಕಟ್ಟೆ ಕರ, ಶುದ್ಧ ಕುಡಿಯುವ ನೀರಿನ ಘಟಕದ ಲೀಲಾವು, ಖಸಾಯಿಖಾನೆ ಕರ ಲೀಲಾವುಗಳಿಗೆ ಬುಧುವಾರದಂದು ಟೆಂಡರ್ ಪ್ರಕ್ರಿಯೆಗೆ ಪುರಸಭೆ ಚಾಲನೆ ನೀಡಲಾಗಿತ್ತು. ತಾಲೂಕ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ನಾಗೇಶ ಗದ್ದಿಗಿ ನೇತೃತ್ವದಲ್ಲಿ ಮಂಗಳವಾರದಂದು ಪುರಸಭೆ ಮುಖ್ಯಾಧಿಕಾರಿಗೆ ಖಸಾಯಿಖಾನೆ ಕರ ಲೀಲಾವು ಟೆಂಡ‌ರ್ ರದ್ದು ಪಡಿಸಲು ಆಗ್ರಹಿಸಿತ್ತು.

    ನಂತರ ಜಯ ಕರ್ನಾಟಕ ಅಧ್ಯಕ್ಷ ನಾಗೇಶ ಗದ್ದಿಗೆ ಹಾಗೂ ಸಂಘಟನೆ ಪದಾಧಿಕಾರಿಗಳೊಂದಿಗೆ ತಹಸೀಲ್ದಾರ ಶಾಂತಗೌಡ ಬೀರಾದರ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿ, ಪಟ್ಟಣದ ಪ್ರವೇಶ ದ್ವಾರದಲ್ಲಿ ಮಾಂಸದ ಅಂಗಡಿಗಳು ತಲೆಎತ್ತಿವೆ, ಇದರಿಂದ ಜನರಿಗೆ ಸುಗಮ ಸಂಚಾರಕ್ಕಾಗಿ ತೊಂದರೆಯಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಮಾಂಸದ ಅಂಗಡಿಗಳ ಅಕ್ಕ ಪಕ್ಕದಲ್ಲಿ ಆಂಜನೇಯ ಹಾಗೂ ಗುಡ್ಡದ ದೇವಸ್ಥಾನವಿದೆ. ಇದರಿಂದ ಸಾಮಾಜೀಕ ಸಾಮರಸ್ಯ ಹಾಳಾಗುವ ಸಂಭವನೀಯತೆ ಇರುತ್ತದೆ. ಮಾಂಸದ ಅಂಗಡಿಯವರು ಪುರಸಭೆ ವತಿಯಿಂದ ಯಾವುದೇ ಪರವಾನಿಗೆ ಪಡೆಯದೇ ಅನಾಧಿಕೃತವಾಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ. ಹಲವು ಸಲ ನಮ್ಮ ಸಂಘಟನೆ ಸೇರಿ ಬೇರೆ ಸಂಘಟನೆಯವರು ಕ್ರಮ ಕೈಗೊಳ್ಳಲು ಮನವಿ ನೀಡಿದರೂ ಸಹ ಪುರಸಭೆ ಇದುವರೆಗೂ ಕ್ಯಾರೇ ಎಂದಿಲ್ಲ. ಮಾಂಸದ ಅಂಗಡಿಗಳಿಗಾಗಿ ಪುರಸಭೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಬೇಕು ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ತದನಂತರವೇ ಖಸಾಯಿ ಖಾನೆ ಕರ ಟೆಂಡ‌ರ್ ಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.

    ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಪುರಸಭೆ ಅಧ್ಯಕ್ಷೆ ಜಯಶ್ರೀ ಪಾಟೀಲ್ ಹಾಗೂ ಸದಸ್ಯರು ಸ್ಪಂದಿಸಿ ಮತ್ತು ಚರ್ಚಿಸಿ ಟೆಂಡರ್ ಒಂದು ವಾರಗಳ ಕಾಲ ಮುಂದೂಡಿಕೆ ಮಾಡಲಾಗಿದೆ’ ಎಂದು ಟೆಂಡರ್ ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಜಯಶ್ರೀ ಪಟೇಲ್ ಘೋಷಿಸಿದರು. ಇದೇ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ನಾಗೇಶ್ ಗದ್ದಿಗಿ ಗೌರವ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕಾಕಲವಾರ, ಉಪಾಧ್ಯಕ್ಷರಾದ ಕಾಶಪ್ಪ ದೊರೆ, ರೈತ ಮೋರ್ಚಾ ಅಧ್ಯಕ್ಷ ರಾಮುಲು ಕೊಡಿಗಂಟಿ, ರವಿ ವಾರದ, ನಿಖಿಲ್ ಡಗೆ, ಯಲ್ಲೂ ಪೂಜಾರಿ, ಹಣಮಂತ ತಾತಾಳಗೇರಿ ಭಗವಂತ ಆಯಾಝ್, ಸೇರಿದಂತೆ ಇನ್ನಿತರ ಭಾಗವಹಿಸಿದ್ದರು

  • ತಾಲೂಕಿನಲ್ಲಿ ಪೌತಿಖಾತೆ ಆಂದೋಲನ : ತಹಶೀಲ್ದಾರ್ ಸತ್ಯಮ್ಮ

    ತಾಲೂಕಿನಲ್ಲಿ ಪೌತಿಖಾತೆ ಆಂದೋಲನ : ತಹಶೀಲ್ದಾರ್ ಸತ್ಯಮ್ಮ

    ಸತ್ಯಕಾಮ ವಾರ್ತೆ ಲಿಂಗಸುಗೂರ:

    ರಾಜ್ಯ ಸರಕಾರ ಎಲ್ಲಾ ರೈತ ಬಾಂಧವರಿಗೆ ಉಪಯೋಗವಾಗುವ ಸಲುವಾಗಿ ಪೌತಿ ಖಾತಿ ಆಂದೋಲನ(ಇ-ಪತಿ)ಜಾರಿಗೆ ತಂದಿದ್ದು, ಲಿಂಗಸುಗೂರ ತಾಲೂಕಿನಲ್ಲಿ 11 ಸಾವಿರ ಪೌತಿ ಖಾತೆದಾರರಿರುವ ಮಾಹಿತಿ ಇರುವದರಿಂದ ತಾಲೂಕಿನ ಎಲ್ಲಾ ಗ್ರಾಮದ ರೈತರು ತಮ್ಮ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ ಪೌತಿ ಖಾತ ಮಾಡಿಸಿಕೊಳ್ಳಬೇಕು ಎಂದು ತಹಶೀಲ್ದಾರ ಸತ್ಯಮ್ಮ ತಿಳಿಸಿರುವರು.

    ಪಹಣಿ ಪತ್ರಿಕೆಯಲ್ಲಿ ಪೌತಿ ಆದಂತಹ ಖಾತೆದಾರರ ಹೆಸರನ್ನು ತೆಗೆದು ಅವರ ವಂಶಸ್ಥರ ಹೆಸರನ್ನು ವಂಶವೃಕ್ಷ ಪ್ರಮಾಣಪತ್ರದ ದಾಖಲು ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ರೈತರು ಬ್ಯಾಂಕ ಸಾಲ ಪಡೆಯಲು. ಬೆಳ ವಿಮೆ, ತಲುಪಬೇಕಾದಂತಹ ಸರಕಾರಿ ಸೌಕರ್ಯಗಳನ್ನು ಹಾಗೂ ಮುಂತಾದ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಿರುತ್ತದೆ. ಕಾರಣ ಎಲ್ಲಾ ರೈತರು ಪೌತಿಖಾತೆ ಮಾಡಿಸಿಕೊಳ್ಳಲು ತಿಳಿಸಿರುವರು.

    ಪೌತಿಖಾತೆ ಮಾಡಿಸಲು ಬೇಕಾಗಿರುವ ದಾಖಲಾತಿಗಳು ಪೌತಿದಾರರ ಮರಣ ಪ್ರಮಾಣಪತ್ರ, ವಂಶವೃಕ್ಷ ಪ್ರಮಾಣ ಪತ್ರ, ಚಾಲ್ತಿ ಪಹಣಿ, ಪೌತಿ ಖಾತೆ ಅರ್ಜಿ, ವಂಶವೃಕ್ಷದಲ್ಲಿರುವ ಎಲ್ಲರ ಆಧಾರ ಕಾರ್ಡ ಸಲ್ಲಿಸಿ ಪೌತಿ ಖಾತೆ ಮಾಡಿಸಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಿರುವರು.

  • ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ನಾಳೆ ಕತ್ತೆ ಮೆರವಣಿಗೆ

    ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ನಾಳೆ ಕತ್ತೆ ಮೆರವಣಿಗೆ

    ಸತ್ಯಕಾಮ ವಾರ್ತೆ ತಾಳಿಕೋಟೆ:

    ಬೂದಿಹಾಳ-ಪೀರಾಪೂರ ಏತ ನೀರಾವರಿ ಕಾಮಗಾರಿಗೆ ಸಂಬಂದಿಸಿ ಮುಕ್ತಾಯ ಹಂತದ ಕಾಮಗಾರಿಗೆ ರಾಜ್ಯ ಕಾಂಗ್ರೇಸ್ ಸರ್ಕಾರ ಹಣ ಬಿಡುಗಡೆಗೊಳಿಸದಿರುವದನ್ನು ಖಂಡಿಸಿ ಬುಧವಾರರಂದು ತಾಳಿಕೋಟೆ ಪಟ್ಟಣದಲ್ಲಿ ಕತ್ತೆಗಳ ಮೇರವಣಿಗೆ ನಡೆಸಲಾಗುವದೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅವರು ಹೇಳಿದರು.

    ಮಂಗಳವಾರರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಬೂದಿಹಾಳ-ಫೀರಾಪೂರ ಏತ ನೀರಾವರಿ ಎಫ್‌ಐಸಿ ಒಳಗಾಲುವೆ ಪೂರ್ಣಗೊಳಿಸುವ ಕುರಿತು ಕಳೆದ ೪ ದಿನಗಳಿಂದಲೂ ಕೊಡಗಾನೂರ ಕ್ರಾಸ್‌ನಲ್ಲಿ ಸಾವಿರಾರು ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಕೂಡಾ ಸರ್ಕಾರದ ಯಾವ ಜನಪ್ರತಿನಿಧಿಗಳು ಬೆಟ್ಟಿ ನೀಡಿಲ್ಲಾ ಈ ಯೋಜನೆಗೆ ಸಂಪೂರ್ಣ ಮುಕ್ತಾಯಕ್ಕೆ ಸಂಬಂದಿಸಿ ಉಸ್ತುವಾರಿ ಮಂತ್ರಿ ಎಂ.ಬಿ.ಪಾಟೀಲರೂ ಕೂಡಾ ಚಕಾರ ಶಬ್ದವನ್ನು ಎತ್ತುತ್ತಿಲ್ಲಾ ಹೀಗಾಗಿ ರೈತರೆಲ್ಲರ ಒಮ್ಮತದ ನಿರ್ಣಯದೊಂದಿಗೆ ಕತ್ತೆ ಚಳುವಳಿ ಮಾಡಬೇಕೆಂದು ತಿರ್ಮಾಣ ಕೈಗೊಂಡಿದ್ದೇವೆ ಅಂದು ಬೆಳಿಗ್ಗೆ ೧೧ ಗಂಟೆಗೆ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ತಾಳಿಕೋಟೆ ಪಟ್ಟಣದ ಬಸವೇಶ್ವರ ವೃತ್ತದಿಂದ ಕತ್ತೆಗಳ ಮೇರವಣಿಗೆ ಪ್ರಾರಂಭಗೊಳ್ಳಲಿದ್ದು ಬಸ್ ನಿಲ್ದಾಣದ ರಸ್ತೆಯ ಮೂಲಕ ಪ್ರಮುಖ ರಸ್ತೆಗಳಲ್ಲಿ ಹಾಯ್ದು ಮರಳಿ ಬಸವೇಶ್ವರ ಸರ್ಕಲ್‌ಗೆ ಮುಕ್ತಾಗೊಳ್ಳಲಿದ್ದು ಈ ಪ್ರತಿಭಟನೆಯ ನಂತರ ಸರ್ಕಾರಕ್ಕೆ ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಲಾಗುವದೆಂದು ಹೇಳಿದರು.

    ಇನ್ನೋರ್ವ ಅಖಂಡ ಕರ್ನಾಟಕ ರೈತ ಸಂಘದ ತಾಲೂಕಾ ಅಧ್ಯಕ್ಷ ಬಾಲಪ್ಪಗೌಡ ಪಾಟೀಲ ಅವರು ಮಾತನಾಡಿ ಬೂದಿಹಾಳ-ಫೀರಾಪೂರ ಏತ ನೀರಾವರಿಗೆ ಸಂಬಂದಿಸಿ ಈಗಾಗಲೇ ೧೫೦೦ ಕೋಟಿಗೂ ಅಧಿಕ ಹಣ ವೆಚ್ಚ ಮಾಡಲಾಗಿದೆ ಕಾಮಗಾರಿ ಮುಕ್ತಾಯಗೊಂಡು ೨ ವರ್ಷಗಳೇ ಘತಿಸಿ ಹೋಗಿದೆ ಆದರೆ ಸದ್ಯ ಕೊನೆಯ ಹಂತರ ಕಾಮಗಾರಿಗೆ ಕೇವಲ ೧೭೦ ಕೋಟಿ ರೂ. ಅವಶ್ಯವಿದೆ ಈ ಹಣ ಸರ್ಕಾರ ಬಿಡುಗಡೆ ಮಾಡುವಲ್ಲಿ ವಿಳಂಬತೆ ಅನುಸರಿಸುತ್ತಾ ಸಾಗಿದೆ ಕೂಡಲೇ ಕೊನೆಯ ಹಂತದ ಕಾಮಗಾರಿಗೆ ಹಣ ಬಿಡುಗಡೆ ಮಾಡದೇ ಹೋದಲ್ಲಿ ಈ ಹಿಂದೆ ಕೈಗೊಂಡ ೧೫೦೦ ಕೋಟಿ ರೂ. ವೆಚ್ಚದ ಕಾಮಗಾರಿಯೂ ಹಳ್ಳದಲ್ಲಿ ಹುಣಸೇಹಣ್ಣು ತೊಳೆದಂತಾಗಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಜಲಸಂಪನ್ಮೂಲ ಸಚೀವ ಡಿಕೆ ಶಿವಕುಮಾರ ಅವರು ರೈತರ ಸಂಕಷ್ಟದ ಪರಸ್ಥಿತಿಯನ್ನು ಅರೀತು ಮುಂದುವರೆದ ಕಾಮಗಾರಿಗೆ ಡಿಪಿಆರ್ ತಯಾರಿಸಿ ಕೂಡಲೇ ಹಣ ಬಿಡುಗಡೆ ಮಾಡಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿದೆ ಈ ವಿಷಯಕ್ಕೆ ಸಂಬಂದಿಸಿ ರೈತರೆಲ್ಲರೂ ಅಹೋರಾತ್ರಿ ಧರಣಿ ನಡೆಸುತ್ತಿರುವ ವಿಷಯ ಜಿಲ್ಲಾ ಉಸ್ತುವಾರಿ ಮಂತ್ರಿ ಎಂ.ಬಿ.ಪಾಟೀಲರಿಗೆ ಗೊತ್ತಿದ್ದರೂ ಕೂಡಾ ರಾಜ್ಯಪ್ರವಾಸದಲ್ಲಿ ಮುಂದಾಗಿರುವದು ಇವರ ರೈತಪರ ನಿಲುವು ಎಷ್ಟೆಂಬುದು ಗೊತ್ತಾಗುತ್ತಾ ಸಾಗಿದೆ ಎಂದರು.

    ಇನ್ನೋರ್ವ ರೈತ ಮುಖಂಡ ಪ್ರಭುಗೌಡ ಬಿರಾದಾರ(ಅಸ್ಕಿ) ಅವರು ಮಾತನಾಡಿ ಈ ಕತ್ತೆ ಚಳುವಳಿಕೆ ಸರ್ಕಾರವು ಬಗ್ಗದೇ ಇದ್ದಲ್ಲಿ ನೂರಾರು ಎತ್ತಿನ ಬಂಡೆಗಳೊಂದಿಗೆ ಬಾರಕೋಲ ಚಳುವಳಿ ನಡೆಯಲಿದೆ ಇದಕ್ಕೂ ಸ್ಪಂದಿಸದಿದ್ದರೆ ಈ ಯೋಜನೆ ಅನುಷ್ಠಾನಕ್ಕೆ ಸಂಬಂದಿಸಿ ಸರ್ಕಾರದ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚೀವರು ಹಾಗೂ ಜಿಲ್ಲಾ ಉಸ್ತುವಾರಿ ಸಚೀವರನ್ನೋಳಗೊಂಡು ಕಾಂಗ್ರೇಸ್ ಸರ್ಕಾರವು ರೈತರ ಪಾಲಿಗೆ ಸತ್ತಿದೆ ಎಂದು ತಿಳಿದು ಅಹೋರಾತ್ರಿ ಧರಣಿ ಸತ್ಯಾಗ್ರಹದ ಸ್ಥಳದಲ್ಲಿ ಎಲ್ಲರ ಭಾವಚಿತ್ರಗಳನ್ನಿಟ್ಟು ಪಿಂಡ ಪ್ರಧಾನ ಕಾರ್ಯಕ್ರಮ ನಡೆಸಲು ತಿರ್ಮಾನಿಸಿದ್ದೇವೆಂದು ಹೇಳಿದರು.

    ಇನ್ನೋರ್ವ ರೈತ ಮುಖಂಡ ಶಿವಪುತ್ರಪ್ಪ ಚೌದ್ರಿ ಅವರು ಮಾತನಾಡಿ ಸಾವಿರಾರು ಕೋಟಿ ರೂ. ಖರ್ಚು ಮಾಡಿ ರೈತರ ಹಿತಕ್ಕಾಗಿ ಬೂದಿಹಾಳ-ಫೀರಾಪೂರ ಯೋಜನೆಯನ್ನು ಕೈಗೊಳ್ಳಲಾಗಿದೆ ಕಾಂಗ್ರೇಸ್‌ನವರು ಚುನಾವಣೆ ಸಮಯದಲ್ಲಿ ಕಾಂಗ್ರೇಸ್‌ವರು ಈಗೀನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡಿಗೆ ಕೃಷ್ಣೆಯ ಕಡೆಗೆ ಎಂಬ ಪಾದಯಾತ್ರೆಯನ್ನು ಮಾಡಿದರು ಆದರೆ ಸದ್ಯ ಅಧಿಕಾರದ ಖುರ್ಚಿಯ ಮೇಲೆ ಕುಳಿತ ನಂತರ ಕೃಷ್ಣೆಯನ್ನು ರೈತರನ್ನು ಮರೆತ್ತಿದ್ದಾರೆ ಜಿಲ್ಲೆಯ ಇಂಡಿ ಮತಕ್ಷೇತ್ರಕ್ಕೆ ೫ ಸಾವಿರ ಕೋಟಿಯಷ್ಟು ಹಣವನ್ನು ನೀಡಿರುವ ಮುಖ್ಯಮಂತ್ರಿಗಳು ರೈತರಿಗಾಗಿ ಕೇವಲ ೨೦೦ ಕೋಟಿ ಕೊಡಲು ಮೀನ ಮೇಷ ಏಣಿಸುತ್ತಿರುವದು ಇವರ ರೈತರ ಮೇಲಿನ ಪ್ರೀತಿ ಏಷ್ಟಿದೆ ಎಂಬುದು ತೋರಿಸುತ್ತಿದೆ ಎಂದರು.

    ಈ ಸಮಯದಲ್ಲಿ ರೈತ ಸಂಘದ ತಾಲೂಕಾ ಉಪಾಧ್ಯಕ್ಷ ರಾಮನಗೌಡ ಹಾದಿಮನಿ, ರೈತ ಮುಖಂಡರುಗಳಾದ ಗುರುರಾಜ ಪಡಶೆಟ್ಟಿ, ಸುರೇಶಕುಮಾರ ಇಂಗಳಗೇರಿ, ನಿಂಗು ಚೌದ್ರಿ, ಚಂದ್ರಶೇಖರ ಸಜ್ಜನ, ಅಶೋಕ ಉಪ್ಪಲದಿನ್ನಿ, ಬಸನಗೌಡ ಹಳ್ಳಿಪಾಟೀಲ, ಶಂಕರಗೌಡ ದೇಸಾಯಿ, ಮಹಾದೇವಪ್ಪ ಅಸ್ಕಿ, ಬಸನಗೌಡ ಪಾಟೀಲ, ಮಂಜು ಬಡಿಗೇರ, ಶಿವನಗೌಡ ಜಾಲಿಕಟ್ಟಿ, ರಮೇಶ ಮದ್ದರಕಿ, ಅಶೋಕ ಕಾಮರಡ್ಡಿ, ಚನ್ನಬಸುಗೌಡ ಹೊಸಳ್ಳಿ, ಮೊದಲಾದವರು ಇದ್ದರು.