Author: Satyakam NewsDesk

  • ರಫ್ತು ಉತ್ತೇಜನೆಗೆ MSME ಕಾರ್ಯಾಗಾರ ಜು.29 ರಂದು

    ರಫ್ತು ಉತ್ತೇಜನೆಗೆ MSME ಕಾರ್ಯಾಗಾರ ಜು.29 ರಂದು

    • ಕೈಗಾರಿಕೋದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ : ಕಾಸಿಯಾ

    ಸತ್ಯಕಾಮ ವಾರ್ತೆ ಯಾದಗಿರಿ:

    ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಮತ್ತು ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರದ ಸಹಯೋಗದಲ್ಲಿ, “ರಫ್ತು, ಲೀನ್ ಯೋಜನೆ ಮತ್ತು ಝಡ್ ಪ್ರಮಾಣೀಕರಣ” ಕುರಿತ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇದೇ 29 ರಂದು ನಗರದ ಎಸ್.ಡಿ.ಎನ್. ರೆಸಿಡೆನ್ಸಿ (ಸರ್ಕಾರಿ ಪದವಿ ಕಾಲೇಜು ಹತ್ತಿರ)ನಲ್ಲಿ ಬೆಳಿಗ್ಗೆ 10.00 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾಸಿಯಾ ಅಧ್ಯಕ್ಷ ಬಿ.ಆರ್. ಗಣೇಶ್ ರಾವ್ ತಿಳಿಸಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಕಾರ್ಯಕ್ರಮವು ಎಂ.ಎಸ್.ಎಂ.ಇ.ಗಳ ಸ್ಪರ್ಧಾತ್ಮಕತೆ, ಉತ್ಪಾದನಾ ದಕ್ಷತೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಿರತೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಭಾರತ ಸರ್ಕಾರದ ವಾಣಿಜ್ಯ ಇಲಾಖೆ ಪ್ರೇರಿತ ಡಿಸ್ಟ್ರಿಕ್ಟ್ಸ್ ಅಸ್ ಎಕ್ಸ್ಪೋರ್ಟ್ ಹಬ್ಸ್ (DEH) ಉಪಕ್ರಮವು ಜಿಲ್ಲೆಯ ಮಟ್ಟದಲ್ಲಿ ರಫ್ತು ಉತ್ತೇಜನ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಚಟುವಟಿಕೆ ಬೆಳೆಸುವ ಗುರಿ ಹೊಂದಿದ್ದು, ಈ ಕಾರ್ಯಗಾರವೂ ಅದಕ್ಕೆ ಅನುಗುಣವಾಗಿದೆ ಎಂದರು.

    ಕಾರ್ಯಕ್ರಮವನ್ನು ಸಣ್ಣ ಕೈಗಾರಿಕೆಗಳ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಉದ್ಘಾಟನೆ ನೆರವೇರಿಸಲಿದ್ದು, ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

    ಅತಿಥಿಗಳಾಗಿ ವಿ.ಟಿ.ಪಿ.ಸಿ. ಕಲಬುರಗಿ ಶಾಖಾ ಕಛೇರಿ ಸಹಾಯಕ ನಿರ್ದೇಶಕ ಜಾಫರ್ ಖಾಸಿಂ ಅನ್ಸಾರಿ, ಯಾದಗಿರಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೆಶಕ ಬಿ. ಸತೀಶ್‌ಕುಮಾ‌ರ್, ಯಾದಗಿರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ದಿನೇಶ್ ಕುಮಾರ್ ಜೈನ್, ರೈಸ್ ಮಿಲ್ ಅಸೋಸಿಯೇಶನ್ ಯಾದಗಿರಿ ಅಧ್ಯಕ್ಷ ಹನುಮದಾಸ್ ಮುಂದಡಾ, ಸುರಪುರ ಕೈಗಾರಿಕೆಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಚೆಟ್ಟಿ, ಯಾದಗಿರಿ ಜಿಲ್ಲಾ ಹತ್ತಿ ಜಿನ್ನಿಂಗ್ ಮಿಲ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಗುರು ಮಣಿಕಂಟ ಭಾಗವಹಿಸಲಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಎಂ.ಎಸ್.ಎಂ.ಇ.ಗಳಿಗೆ ಉತ್ಪಾದನಾ ವೆಚ್ಚ ಕಡಿತ, ಗುಣಮಟ್ಟ ಸುಧಾರಣೆ ಮತ್ತು ಸಾಮರ್ಥ್ಯ ವೃದ್ಧಿಗೆ ನೆರವಾಗುವಂತೆ ರೂಪಿಸಲಾದ ಲೀನ್ ತಂತ್ರಗಳ ಕುರಿತು. ಹಾಗೂ ಶೂನ್ಯ ದೋಷ, ಶೂನ್ಯ ಪರಿಸರ ಹಾನಿಯತ್ತ ಎಂ.ಎಸ್.ಎಂ.ಇ.ಗಳನ್ನು ಒತ್ತಾಯಿಸುವ ಚಟುವಟಿಕೆ. ಮೌಲ್ಯಮಾಪನ, ತಾಂತ್ರಿಕ ಸಹಾಯ ಹಾಗೂ ಉತ್ತಮ ತಂತ್ರಗಳನ್ನು ಅಳವಡಿಸಲು ಝಡ್ ಪ್ರಮಾಣೀಕರಣ ಬಗ್ಗೆ ಮಾಹಿತಿ ಹಾಗೂ ಸ್ಥಳದಲ್ಲೇ ನೋಂದಣಿ ಸೌಲಭ್ಯವೂ ಲಭ್ಯವಿರುತ್ತದೆ. ಹೀಗಾಗಿ ಕೈಗಾರಿಕೋದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದ್ದಾರೆ.

  • ಕಾರ್ಯನಿರತ ಪತ್ರಕರ್ತ ಸಂಘದಿಂದ ಜಿಲ್ಲಾಧಿಕಾರಿಗೆ ಸನ್ಮಾನ.

    ಕಾರ್ಯನಿರತ ಪತ್ರಕರ್ತ ಸಂಘದಿಂದ ಜಿಲ್ಲಾಧಿಕಾರಿಗೆ ಸನ್ಮಾನ.

    ಸತ್ಯಕಾಮ ವಾರ್ತೆ ಯಾದಗಿರಿ : 

    ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಹರ್ಷಲ್ ಬೋಯರ್ ಅವರನ್ನು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಇಂಧುದರ ಸಿನ್ನೂರ್ ಅವರ ನೇತೃತ್ವದಲ್ಲಿ ಕಚೇರಿಗೆ ಭೇಟಿ ನೀಡಿ ಸನ್ಮಾನಿಸಲಾಯಿತು.

    ಜಿಲ್ಲೆಯ ಹಲವು ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್, ಇನ್ನಿತರ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಜರುಗಿಸಿ ಸಾರ್ವಜನಿಕರ ಅನುಕೂಲತೆಗೆ ಪರಿಹಾರ ನೀಡುವ ಭರವಸೆ ಜಿಲ್ಲಾಧಿಕಾರಿ ನೀಡಿದರು. ಈ ಸಂಧರ್ಭದಲ್ಲಿ ವಾರ್ತಾಧಿಕಾರಿ ಸುಲೇಮಾನ್ ನಾಧಾಫ್ ಹಿರಿಯ ಪತ್ರಕರ್ತರಾದ ಸಂಜೀವ್ ರಾವ್ ಕುಲಕರ್ಣಿ,ಶರಣು ಗೊಬ್ಬುರ್,ಎಸ್.ಎಸ್ ಮಠ್, ಆನಂದ್ ಎಮ್ ಸೌದಿ, ಹಣಮಂತು ಪಿ,ಅಂಬರೀಷ್ ಬಿಳಾರ್, ಆನಂದ ಗೊರ್ಕಲ್, ಎಸ್ ಎಸ್ ನಾಯಕ್, ಡಾ, ಭೀಮರಾಯ ಲಿಂಗೇರಿ, ನಾಗಪ್ಪ ಮಾಲಿ ಪಾಟೀಲ್, ರಫೀಕ್ ಸಾಬ್, ಅಮೀನ್ ಹೊಸೂರ್, ವಿಜಯಭಾಸ್ಕರ್ ರಡ್ಡಿ, ಸಾಗರ ದೇಸಾಯಿ, ರವಿರಾಜ್ ಕಂದಳ್ಳಿ, ರಾಜು ನಳ್ಳಿಕರ್, ಕುದಾನ್ ಸಾಬ್, ಶಿವಕುಮಾರ್, ಪರಶುರಾಮ್, ರೂಪೇಶ್ ಹುಲಿಕರ್, ಲಕ್ಷ್ಮಿ ಕಾಂತ್ ಲಿಂಗೇರಿ, ಎಮ್ ಡಿ ರಫೀಕ್, ಮಹೇಶ್ ಗಣೇರ್, ಶರಬು ನಾಟೆಕರ್, ಆಂಜನೇಯ ದೇವರಮನಿ, ಮಲ್ಲು ಕಾಮರಡ್ಡಿ,ಅರುಣ್ ಮಾಸ್ತರ್, ನಾಗರಾಜ, ಸುಧೀರ್ ಕೋಟೆ, ಸೇರಿದಂತೆ ಇನ್ನಿತರ ಪತ್ರಕರ್ತರು ಭಾಗವಹಿಸಿದ್ದರು.

  • ವಿಶೇಷ ಚೇತನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಲಿ

    ವಿಶೇಷ ಚೇತನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಲಿ

    ಸತ್ಯಕಾಮ ವಾರ್ತೆ ಯಾದಗಿರಿ : 

    ವಿಶೇಷ ಚೇತನರಲ್ಲಿರುವ ಆತ್ಮಶಕ್ತಿ ಅತ್ಯಂತ ಮಹತ್ವದ್ದಾಗಿದ್ದು, ಅದರಿಂದಲೇ ಅವರು ಸಮಾಜದಲ್ಲಿ ಅತ್ಯಂತ ಗೌರವದಿಂದ ಬದುಕುವಂತಾಗಿದೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.

    ಗುರುಮಠಕಲ್ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆರ್‌ಪಿಡಿ ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಗ್ರಾಮೀಣ ಹಾಗೂ ನಗರ ಅಂಗವಿಕಲರ ಪುನರ್ವಸ್ಥಿತಿ ಕಾರ್ಯಕ್ರಮದ ಸಂಯುಕ್ತ ಆಶ್ರಯದಲ್ಲಿ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ ೨೦೧೬ ಅರಿವು ವಿಕಲಚೇತನ ಹಾಕುತ್ತಾಯಿ ಸಮಾವೇಶ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಶೇಷ ಚೇತನರಿಗೆ ಅನುಕಂಪ ತೋರಿಸುವ ಬದಲು ಅವರಲ್ಲಿ ಆತ್ಮಸ್ಥೆರ್ಯ ತುಂಬುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.

    ಅಂಗವೈಕಲ್ಯ ಶಾಪವಲ್ಲ. ಅದು ಆಕಸ್ಮಿಕವಾಗಿ ಹುಟ್ಟಿನಿಂದ ಬರುತ್ತದೆ. ವಿಶೇಷ ಚೇತನರಿಗೆ ಅನುಕಂಪ ತೋರಿಸುವ ಬದಲು ವಿಶ್ವಾಸ ಹಾಗೂ ಅತ್ಮಸ್ಥೆöÊರ್ಯ ತುಂಬಿ ಇತರರಂತೆ ಬದುಕಲು ಅವಕಾಶ ನೀಡಬೇಕು ಎಂದರು.

    ಗುರುಮಠಕಲ್ ಖಾಸಮಠದ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಜಿಗಳು, ಸಾನ್ನಿಧ್ಯವಹಿಸಿದ್ದರು. ಆರ್.ಪಿ.ಡಿ ಕಾಯ್ದೆ ಕುರಿತು ನಾಗಪ್ಪಜಿ ಅವಟಿ ಉಪನ್ಯಾಸ ನೀಡಿದರು.

    ಎಲೇರಿಯ ವಿಕಲಚೇತನ ಸಂಘಕ್ಕೆ ೧೫೦೦೦೦ ಸಾವಿರ ಚೆಕ್ ವಿತರಣೆ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ಗುರುಮಠಕಲ್ ಅಧ್ಯಕ್ಷರಾದ ಸಿದ್ದನಗೌಡ ಪಾಟೀಲ್ ನಜರಾಪುರ್ ಉಪಾಧ್ಯಕ್ಷರಾದ ರೇಣುಕಾ ಪಡಿಗೆ, ಭಾರತಿ ದಂಡೋತಿ ತಹಸೀಲ್ದಾರ ಶಾಂತಗೌಡ ಬಿರಾದಾರ್, ಇಒ ಅಮರೇಶ್ ಪಾಟೀಲ್, ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಹನುಮಂತರೆಡ್ಡಿ ಎಪಿಡಿ ಸಂಸ್ಥೆ ಯಾದಗಿರಿ ವ್ಯವಸ್ಥಾಪಕರಾದ ಸಂಪ್ರಿತ ದೇವಪುತ್ರ ಸಂತೋಷ್ ನಿರೇಟಿ ತಾಲೂಕ ನೌಕರ ಸಂಘದ ಅಧ್ಯಕ್ಷರು ಗುರುಮಟ್ಕಲ್, ಉಮಾ ನಾಯಕ್ ಅಧ್ಯಕ್ಷರು ಆರ್ ಪಿ ಡಿ ಟಾಸ್ಕ್ ಪೋರ್ಸ್ ಯಾದಗಿರಿ ಸೇರಿದಂತೆ ಇತರರಿದ್ದರು.

  • ಸ್ವಚ್ಛತಾ ಅಭಿಯಾನಕ್ಕೇ ಸಾರ್ವಜನಿಕರು ಕೈಜೋಡಿಸಬೇಕು: ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ

    ಸ್ವಚ್ಛತಾ ಅಭಿಯಾನಕ್ಕೇ ಸಾರ್ವಜನಿಕರು ಕೈಜೋಡಿಸಬೇಕು: ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ

    ಸತ್ಯಕಾಮ ವಾರ್ತೆ ಯಾದಗಿರಿ:
    ನಗರ ಸ್ವಚ್ಛ ಇದ್ದರೇ ಪರಿಸರ ಚೆನ್ನಾಗಿ ಇರುತ್ತದೆ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸ್ವಚ್ಛತೆ ಮೊದಲ ಆದ್ಯತೆ ನೀಡಿ, ಪ್ಲಾಸ್ಟಿಕ್ ಬಳಕೆ ನಿಷೇದಿಸಿ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಹೇಳಿದರು.

    ನಗರಸಭೆ ವತಿಯಿಂದ ಮಂಗಳವಾರ ನಗರದಲ್ಲಿ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನ ಹಾಗೂ ಪ್ಲಾಸ್ಟಿಕ್ ನಿಷೇಧದ  ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ‌ ಮಾತನಾಡಿದರು. 
    ಸಾರ್ವಜನಿಕರು ಈ ಕೆಲಸಕ್ಕೆ ಕೈಜೋಡಿಸಿದಾಗ ಇದು ಯಶಸ್ಸಿಯಾಗುತ್ತದೆ. ಕೇವಲ ನಗರಸಭೆಯಿಂದ ಮಾತ್ರ ಸಾಧ್ಯವಿಲ್ಲ. ಸ್ವಯಃ ಪ್ರೇರಿತರಾಗಿ ಜನರು ಇದಕ್ಕೆ ಮುಂದಾಗಬೇಕೆಂದರು.

    ಪ್ರತಿಯೊಬ್ಬರು ತಮ್ಮ ಮನೆ ಮತ್ತು ಮನೆ ಮುಂದಿನ ಸ್ಥಳ ಶುಚಿ ಇಟ್ಟುಕೊಳ್ಳಬೇಕೆಂದರು. 
    ಕಸ ವಿಲೇವಾರಿಗೆ ಮನೆ ಬಾಗಿಲಿಗೆ ವಾಹನ ಬರುತ್ತವೆ. ಆಗ ಮಾತ್ರ ಕಸ ಅದರಲ್ಲಿ ಹಾಕಿ. ಎಲ್ಲೆಂದರಲ್ಲಿ ಕಸ ಹಾಕುವುದರಿಂದಲೇ ಪರಿಸರ ಹಾಳಾಗುತ್ತಿದೆ ಎಂದು ಅನಪುರ ವಿಷಾದ ವ್ಯಕ್ಯಪಡಿಸಿದರು. ಜನರೊಂದಿಗೆ ನಗರಸಭೆ ಇದೆ. ನೀವು ಅಷ್ಠೆ, ನಮ್ಮೊಂದಿಗೆ ಈ ಕೆಲಸಕ್ಕೇ ಕೈ ಜೋಡಿಸಿರಿ ಎಂದರು.
    ನಗರಸಭೆ ಸದಸ್ಯರಾದ ಮಂಜುನಾಥ್ ದಾಸನಕೇರಿ, ಹನುಮಂತ ನಾಯಕ್, ಪೌರಾಯುಕ್ತಾರು ಉಮೇಶ್ ಚವ್ಹಾಣ್, ಪರಿಸರ ಅಭಿಯಂತರ ಪ್ರಶಾಂತ, ಕಂದಾಯ ಅಧಿಕಾರಿ ಮಲ್ಲಿಕಾರ್ಜುನ, ಆರೋಗ್ಯ ನಿರಿಕ್ಷಕ ಪ್ರಶಾಂತ, ಸಿದ್ದಾರ್ಥ, ರಮೇಶ, ಶಂಭುಲಿಂಗ ಸೇರಿದಂತೆ ಮತ್ತಿತರರು ಇದ್ದರು
    —-
  • ಆಸ್ಪತ್ರೆಯ ಸುತ್ತ ಸ್ವಚ್ಛತೆ ಕಾಪಾಡಿ

    ಆಸ್ಪತ್ರೆಯ ಸುತ್ತ ಸ್ವಚ್ಛತೆ ಕಾಪಾಡಿ

    ಸತ್ಯಕಾಮ ವಾರ್ತೆ ಯಾದಗಿರಿ:

    ಆಸ್ಪತ್ರೆಯ ಸುತ್ತ ಸ್ವಚ್ಛತೆ ಕಾಪಾಡಿ ಜನತೆಗೆ ಉತ್ತಮ ಸೇವೆ ಒದಗಿಸಬೇಕಿದೆ. ಆಸ್ಪತ್ರೆಯ ಸುತ್ತಲಿನ ಪರಿಸರದ ಸ್ವಚ್ಛತೆಯ ಕಡೆಗೆ ಪ್ರತಿಯೊಬ್ಬರೂ ಗಮನಹರಿಸಬೇಕು, ಆಸ್ಪತ್ರೆಯ ಬಳಿ ನಾಗರೀಕರು ಕೂಡ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಗರಸಭೆ ಅಧ್ಯಕ್ಷೆ ಕು.ಲಲಿತಾ ಮೌಲಾಲಿ ಅನಪೂರ ಹೇಳಿದರು.

    ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಸ್ವಚ್ಚತೆ ಕುರಿತು ಆಸ್ಪತ್ರೆ ಸಿಬ್ಬಂದಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ಎಲ್ಲೆಂದರಲ್ಲಿ ಮನೆಯಿಂದ ತಂದ ಊಟ ಮಾಡಿ ಅಲ್ಲೇ ಉಳಿದ ಅನ್ನವನ್ನು ಬಿಸಾಡುವುದು, ಬಿಡಿ, ಸಿಗರೇಟ್ ಸೇದುವುದು, ತಂಬಾಕು ಗುಟಕಾ ತಿಂದು ಉಗುಳುವುದು ಯಾರೂ ಮಾಡಬಾರದು ನಮ್ಮ ಆಸ್ಪತ್ರೆ ಸ್ವಚ್ಚತೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲದೆ ಎಂದು ಹೇಳಿದರು.
    ಆಸ್ಪತ್ರೆ ಆವರಣದಲ್ಲಿ ಕಸ ಇದ್ದರೆ ಪ್ರತಿಯೊಬ್ಬರೂ ಮೂಗು ಮುಚ್ಚಿಕೊಂಡೇ ತಿರುಗುವಂತಹ ಪರಿಸ್ಥಿತಿ ಬರುತ್ತದೆ. ನಾಗರೀಕರ ನಿಷ್ಕಾಳಜಿಯೂ ಕೂಡ ಪರಿಸರ ಸ್ವಚ್ಚತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಪರಿಸರ ಅಭಿಯಂತ ಪ್ರಶಾಂತ, ಡಾ.ಅಂಗಡಿ, ಡಾ.ರಿಜ್ವಾನಾ, ಎಸ್.ಎ.ಶಿವಪುತ್ರ, ಮಾಜಿ ಸದಸ್ಯ ಅಬ್ದುಲ್ ಖರೀಂ ಸೇರಿದಂತೆ ಇತರರಿದ್ದರು.

    ಸರಕಾರಿ ಆಸ್ಪತ್ರೆಯ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಕಸದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಯಶಸ್ವಿ ಆಗ್ತೇವೆ. ಸಿಬ್ಬಂದಿಗೆ ಕಸವನ್ನು ಸರಿಯಾಗಿ ವಿಂಗಡಿಸುವ ಮಹತ್ವ ಹಾಗೂ ಪರಿಸರದ ಮೇಲೆ ಅದರ ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.

    ಕು.ಲಲಿತಾ ಮೌಲಾಲಿ ಅನಪೂರ, ನಗರಸಭೆ ಅಧ್ಯಕ್ಷರು, ಯಾದಗಿರಿ

  • ಕಾಡಮಗೇರಾ ಗ್ರಾಮದಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಹುಟ್ಟುಹಬ್ಬ ಆಚರಣೆ

    ಕಾಡಮಗೇರಾ ಗ್ರಾಮದಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಹುಟ್ಟುಹಬ್ಬ ಆಚರಣೆ

    ಸತ್ಯಕಾಮ ವಾರ್ತೆ ವಡಗೇರಾ:

    ಡಾ. ಮಲ್ಲಿಕಾರ್ಜುನ್ ಖರ್ಗೆ ಜಿ ರವರು ದೇಶ ಕಂಡ ಧೀಮಂತ ನಾಯಕ ಕಲ್ಯಾಣ ಕರ್ನಾಟಕ ಭಾಗಕ್ಕೆ  ಜೆ 371  ಕಲಾಂ ಜಾರಿಗೆ ತರುವ ಮೂಲಕ ಈ ಭಾಗದ ಜನರ ಬಾಳಿಗೆ ಬೆಳಕಾಗಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಸಾಬಣ್ಣ ಹಂಚಿನಾಳ ಹೇಳಿದರು.
    ತಾಲೂಕಿನ ಕಾಡಮಗೇರಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಡಾ. ಮಲ್ಲಿಕಾರ್ಜುನ್ ಖರ್ಗೆ ರವರ  83 ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದಾಖಲೆಯ ಹತ್ತು ಬಾರಿ ಶಾಸಕರಾಗಿ, ಮೂರು ಬಾರಿ ಸಂಸದರಾಗಿ, ಕೇಂದ್ರ, ರಾಜ್ಯ ಸಚಿವರಾಗಿ, ರಾಜ್ಯಸಭೆ, ಲೋಕಸಭೆ, ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಭಾರತಿಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕರಾಗಿ ಹಲವು ಉನ್ನತ ಹುದ್ದೆಗಳನ್ನು ನಿಭಾಯಿಸಿದ ಏಕೈಕ ವ್ಯಕ್ತಿ ಅಂದರೆ ತಪ್ಪಾಗಲಾಗದು ದೇವರು ಅವರಿಗೆ ಇನ್ನಷ್ಟು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಈ ಸಮಯದಲ್ಲಿ ಹಾರೈಸಿದರು.
    ಅವರ ಅಭಿಮಾನಿಗಳು  ಕೇಕ್ ಕತ್ತರಿಸಿ. ಮಲ್ಲಿಕಾರ್ಜುನ್ ಖರ್ಗೆ ಜಿ ರವರ ಬ್ಯಾನರ್ ಗೆ ಹಾಲಿನ ಅಭಿಷೇಕ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.
    ಈ ಸಂದರ್ಭದಲ್ಲಿ ಗ್ರಾಮದ ಕಾಂಗ್ರೆಸ್  ಮುಖಂಡರುಗಳಾದ ಚಂದ್ರಶೇಖರ್ ದೇಸಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ, ದೊಡ್ಡಪ್ಪ ಕಾಡಮಗೇರಾ, ನಾಗಪ್ಪ ಉಲ್ಟಿ ,ಮಲ್ಲು ಯಾದವ್, ರೆಡ್ಡಿ ಆನೂರ, ಹಣಮಂತ ನಾಟೇಕಾರ,  ದೇವೇಂದ್ರಪ್ಪ ದೊರೆ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು​.
  • ರಕ್ತದಾನ ಮಾಡಿ ಜೀವ ಉಳಿಸಿ : ಪಂಪನಗೌಡ ಕರೆ

    ರಕ್ತದಾನ ಮಾಡಿ ಜೀವ ಉಳಿಸಿ : ಪಂಪನಗೌಡ ಕರೆ

    ಸತ್ಯಕಾಮ ವಾರ್ತೆ ಯಾದಗಿರಿ:

    ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬೇಕೆಂದು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಪಂಪನಗೌಡ ಚನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.

    ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸೋಮವಾರ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಜನುಮ ದಿನವನ್ನು ಆಚರಿಸಿ, ರಕ್ತದಾನ ಶಿಬಿರಕ್ಕೆ‌ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ರಕ್ತಹಿನತೆಯಿಂದ ಬಳಲುವವರ ಸಂಖ್ಯೆ ಅಧಿಕವಾಗಿದೆ. ಅನಾರೋಗ್ಯದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೂ ರಕ್ತದ ಕೊರತೆ ಇದ್ದು, ಈ ಮೂಲಕ ರಕ್ತದಾನ ಶಿಬಿರ ಆಯೋಜಿಸಿ ಅನುಕೂಲ ಮಾಡಿಕೊಡಲಾಗುವುದೆಂದರು.
    ರಕ್ತ ನೀಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗಿ ಮನುಷ್ಯನಿಗೆ ಹೊಸ ಚೈತನ್ಯ ಬರುತ್ತದೆ. ಹೀಗಾಗಿ ರಕ್ತ ನೀಡಲು ಹಿಂಜರಿಕೆ ಮಾಡಬಾರದೆಂದು ಪಂಪನಗೌಡ ಹೇಳಿದರು.

    ಈ‌ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರಾದ ಬಸ್ಸುಗೌಡ ಬಿಳ್ಹಾರ್, ಮಲ್ಲಣ್ಣ ದಾಸನಕೇರಿ, ಅನೀಲ್ ಹೆಡಗಿಮದ್ರಿ, ಮರೆಪ್ಪ ಬಿಳ್ಹಾರ್, ಮಲ್ಲಿಕಾರ್ಜುನ ಈಟೆ,ಸುರೇಶ ಮಡ್ಡಿ, ತಿಮ್ಮಣ್ಣ ನಾಯಕ, ಸಾಬಣ್ಣ ಬಾಡಿಯಾಳ್,ಮಲ್ಲಯ್ಯ ಕಸಬಿ, ಬಸವರಾಜ ಬುಡಯಿ,ಗುರುನಾಥ ರೆಡ್ಡಿ,ಬಾಪು ಗೌಡ ಮಾಚನೂರ್, ಮೈನುದ್ದೀನ್ ಮಿರ್ಚಿ, ಸೋಮಶೇಖರ ಮಸಕನಳ್ಳಿ ಶರಣಗೌಡ ಮಾಲಿಪಾಟೀಲ್. ಅಮರೇಶ ಜಾಕಾ, ಜಿಲ್ಲಾ‌ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸಂಜೀವಕುಮಾರ ರಾಯಚೂರಕರ್, ತಾಲೂಕು‌ ಆರೋಗ್ಯ ಅಧಿಕಾರಿ ಡಾ. ಹಣಮಂತರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು‌.
    ಸುಮಾರು 25 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.

  • ಸಂಭ್ರಮದಿಂದ ಹೈಯ್ಯಾಳಲಿಂಗೇಶ್ವರ ಹಾಲಂಬಲಿ ಹಬ್ಬ ಆಚರಣೆ

    ಸಂಭ್ರಮದಿಂದ ಹೈಯ್ಯಾಳಲಿಂಗೇಶ್ವರ ಹಾಲಂಬಲಿ ಹಬ್ಬ ಆಚರಣೆ

    ಸತ್ಯಕಾಮ ವಾರ್ತೆ ವಡಗೇರಾ:

    ತಾಲೂಕಿನ ಹೈಯ್ಯಾಳ .ಬಿ ಗ್ರಾಮದ ಸಗರನಾಡಿನ ಆರಾಧ್ಯ ದೈವ ಶ್ರೀ ಹೈಯ್ಯಾಳಲಿಂಗೇಶ್ವರ ಹಾಲಂಬಲಿ ಹಬ್ಬದ ಕಾರ್ಯಕ್ರಮ ರವಿವಾರ ಸಂಜೆ ದೇವಸ್ಥಾನದ ಆವರಣದಲ್ಲಿ ಅತ್ಯಂತ ಸಂಭ್ರಮದಿಂದ ಜರುಗಿತು.

    ನೂಲ ಹುಣ್ಣಿಮೆಯ ಮುಂಚಿತವಾಗಿ ಹಾಲಂಬಲಿ ಹಬ್ಬ ಆಚರಿಸಿದ ದಿನದಿಂದಲೇ ಭಕ್ತರು 21 ದಿನಗಳ ಕಾಲ ವ್ರತ ಆರಂಭಿಸುವುದು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಪದ್ಧತಿಯಾಗಿದೆ ವೃತ ಹಿಡಿಯುವ ಭಕ್ತರು ದಿನನಿತ್ಯ ಸಾಯಂಕಾಲ ಹೈಯ್ಯಾಳ ಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿಸುವ ಸಂಪ್ರದಾಯವನ್ನು ಮಹಿಳೆಯರು ಮುಂದುವರಿಸಿಕೊಂಡು ಬರುತ್ತಿದ್ದಾರೆ.

    ಊರಿನ ಮತ್ತು ಸುತ್ತಮುತ್ತಲು ಗ್ರಾಮದ ಕುರಿಗಾಯಿಗಳು ತಮ್ಮ ಕುರಿಗಳನ್ನು ದೇವಸ್ಥಾನದ ಮುಂದೆ ಕರೆತರುವುದರ ಜೊತೆಗೆ ಕುರಿ ಕಾಯುವವರು ಪ್ರತಿ ವರ್ಷ ಹೊಸದಾದ ಕೋಲುಗಳನ್ನು ತಂದು ಹೊಸ ಮಣ್ಣಿನ ಗಡಿಗೆಯಲ್ಲಿ ಕುರಿ ಹಾಗೂ ಆಕಳು ಹಾಲು ತುಂಬಿಸಿ ಗರ್ಭಗುಡಿಯ ಮುಂದೆ ಕೋಲುಗಳನ್ನು ಇಟ್ಟು ಪೂಜೆ ಸಲ್ಲಿಸಿ ಕುರಿಗಳಿಗೆ ಯಾವುದೇ ರೀತಿಯ ರೋಗ ರುಜಿನೆ ಬಾರದಿರಲಿ ಕುರಿಗಳ ಸಂತತಿಯು ಸಮೃದದ್ಧಿಯಾಗಿರಲಿ ನಾಡಿನಾದ್ಯಂತ ಉತ್ತಮ ಮಳೆ ಬೆಳೆಯಾಗಲಿ ಎಂದು ಹೈಯಾಳಲಿಂಗೇಶ್ವರರಲ್ಲಿ ಬೇಡಿಕೊಂಡು ಏಳು ಕೋಟಿಗೆ ಏಳು ಕೋಟಿಗೆ ಅಂತಾ ಘೋಷಣೆ ಕೂಗಿ ಹಾಲು ಭಂಡಾರವನ್ನು ಮಿಶ್ರಣ ಮಾಡಿ ಗುಡಿಯ ಸುತ್ತಲೂ ಕುರಿಗಳ ಮೇಲೆ ಚರಗ ಚೆಲ್ಲಿ ಚಿಕ್ಕ ಮಕ್ಕಳನ್ನು ಬೆಕ್ಕುಗಳಾಗಿ ಮಾಡಿ ಅವರಿಗೆ ಹಾಲು ಕುಡಿಸುವುದು ತುಂಬಾ ವಿಶೇಷವಾಗಿದೆ ಮೂಲಕ ಈ ಹಾಲು ಹಬ್ಬವನ್ನು ಭಕ್ತರೆಲ್ಲರೂ ಸೇರಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ .ಭಂಡಾರ ಹಾಲು, ಪ್ರಕೃತಿ ಸಮೃದ್ಧಿಯ ಸಂಕೇತವಾಗಿವೆ ನಾಡಿನ ತುಂಬಾ ಉತ್ತಮ ಮಳೆ ಬೆಳೆ ಆರೋಗ್ಯ ಸಮೃದ್ಧಿಗಾಗಿ ಪ್ರತಿವರ್ಷ ಆಚರಿಸುವ ಹಬ್ಬವೇ ಹಾಲಹಬ್ಬ ಎಂದು ಹಿರಿಯರು ಹೇಳುತ್ತಾರೆ.

    ಹೈಯ್ಯಾಳ ಲಿಂಗೇಶ್ವರ ಜಾತ್ರೆಯು ನೂಲು ಹುಣ್ಣಿಮೆಯ ದಿನ ಜರಗುವ ಜಾತ್ರೆಯೆಂದು 21 ದಿನಗಳ ವ್ರತ ಮುಕ್ತಾಯಗೊಳಿಸಿ ಅಂದು ಮಹಿಳೆಯರು ಮನೆಯಲ್ಲಿ ನೈವೇದ್ಯ ರೂಪದಲ್ಲಿ ಹೋಳಿಗೆ ಕರ್ಜಿಕಾಯಿ ಕಡಬು ಇನ್ನಿತರ ಖ್ಯಾಧ್ಯಗಳನ್ನು ಮಾಡಿ ಬುಟ್ಟಿಯಲ್ಲಿ ತುಂಬಿಕೊಂಡು ದೇವರಿಗೆ ಅರ್ಪಿಸುವ ಪದ್ಧತಿ ಮೊದಲಿನಿಂದಲೂ ಇದೆ ಎಂದು ದೇವಸ್ಥಾನದ ಸಮಿತಿಯವರು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಪೂಜಾರಿಗಳು ಸುತ್ತಮುತ್ತಲು ಗ್ರಾಮದ ಭಕ್ತರು ಗ್ರಾಮಸ್ಥರು ಹಾಗೂ ಇನ್ನಿತರರು ಭಾಗವಹಿಸಿದ್ದರು

  • ಜುಲೈ 30 ರಂದು ಕುಂಟೋಜಿಗೆ ಬಸವಣ್ಣ ಹಾಗೂ ಸಂಗಮೇಶ್ವರನ ತೇರು ಆಗಮನ 

    ಜುಲೈ 30 ರಂದು ಕುಂಟೋಜಿಗೆ ಬಸವಣ್ಣ ಹಾಗೂ ಸಂಗಮೇಶ್ವರನ ತೇರು ಆಗಮನ 

    ಸತ್ಯಕಾಮ ವಾರ್ತೆ ಮುದ್ದೇಬಿಹಾಳ: 

    ಅಮರ ಶಿಲ್ಪಿ ಜಕಣಾಚಾರಿಯವರಿಂದ ನಿರ್ಮಿಸಲಾಗಿದೆ ಎಂದು ಪ್ರತೀತಿ ಹೊಂದಿರುವ ತಾಲೂಕಿನ ಕುಂಟೋಜಿ (ನಂದಿ) ಬಸವೇಶ್ವರ ಸಂಗಮೇಶ್ವರ ದೇವಸ್ಥಾನದ ಜಾತೆಯು ಪ್ರತಿ ಶ್ರಾವಣ ಮಾಸದ ಕೊನೆಯ ಸೋಮವಾರದಿಂದ 5 ದಿನಗಳವರೆಗೆ ನಡೆಯುತ್ತಾ ಬಂದಿದೆ.

    ಈ ವರ್ಷ ಇಲ್ಲಿನ ಜಾತ್ರೆಯು ಬಹಳ ವಿಶೇಷವಾಗಿ ನಡೆಯಲಿದೆ. ಈ ದೇವಸ್ಥಾನಕ್ಕೆ ಈ ವರ್ಷದಿಂದ ಅಂದರೆ ಮೊಟ್ಟ ಮೊದಲಬಾರಿಗೆ ಕುಂಟೋಜಿ ಬಸವೇಶ್ವರ (ನಂದಿ) ಹಾಗೂ ಸಂಗಮೇಶ್ವರ ರಥೋತ್ಸವ ಜರುಗಲಿದೆ. ಕುಂಟೋಜಿ ಗ್ರಾಮದ ಮತ್ತು ಸುತ್ತಮುತ್ತಲಿನ ಊರುಗಳು, ನಗರ ಮತ್ತು ಬೇರೆ ಬೇರೆ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಬಸವಣ್ಣನ ಭಕ್ತರು ಬಹಳ ಭಕ್ತಿಪೂರ್ವಕವಾಗಿ ದೇಣಿಗೆ ನೀಡಿ, ಕೊಪ್ಪಳದ ಜಕಣಾಚರ‍್ಯ ಮತ್ತು ಅಮೋಘವರ್ಷ ನೃಪತುಂಗ ಪ್ರಶಸ್ತಿ ವಿಜೇತರಾದ ರಥಶಿಲ್ಪಿ ಮಲ್ಲಪ್ಪ ಬಡಿಗೇರ ಇವರು ತಮ್ಮ ಎಂ.ಜಿ.ರಥಶಿಲ್ಪಿ ಕಲಾ ಕೇಂದ್ರದಲ್ಲಿ ಸಂಪೂರ್ಣ ಉಚಿತವಾಗಿ ನಿರ್ಮಿಸಿರುವ, ಸಾಗುವಾಣಿ ಮರದ ರಥವನ್ನು ಇದೇ ಜುಲೈ 30 ರಂದು ತಾಲೂಕಾ ಕೇಂದ್ರವಾದ ಮುದ್ದೇಬಿಹಾಳ ನಗರದ ಶ್ರೀದೇವಿ ಪಿಲೇಕೆಮ್ಮ ದೇವಿ ದೇವಸ್ಥಾನದಿಂದ ಕುಂಟೋಜಿ ಗ್ರಾಮದವರೆಗೆ ಭವ್ಯ ಮೆರವಣಿಗೆಯ ಮುಖಾಂತರ ಸ್ವಾಗತಿಸಲಿದ್ದಾರೆ.

    ಜುಲೈ 27 ರಂದು ರಥವನ್ನು ತರಲು ಕುಂಟೋಜಿಯಿAದ ಭಕ್ತರು ಮತ್ತು ದೇವಸ್ಥಾನ ಕಮೀಟಿಯವರು ಟ್ರಾö್ಯಕ್ಟರ್ ಮುಖಾಂತರ ಕೊಪ್ಪಳಕ್ಕೆ ತೆರಳಿಲಿದ್ದಾರೆ. ಜುಲೈ 29 ರಂದು ಬೆಳಿಗ್ಗೆ ಕೊಪ್ಪಳದಿಂದ ರಥವನ್ನು ತೆಗೆದುಕೊಂಡು ಹೊರಟು ಅಂದೇ ಸಂಜೆ ಮುದ್ದೇಬಿಹಾಳ ನಗರದ ಶ್ರೀ ದೇವಿ ಪಿಲೇಕೆಮ್ಮ ದೇವಾಸ್ಥಾನಕ್ಕೆ ಬಂದು ತಲುಪಲಿದೆ. ಮರುದಿನ 30 ರಂದು ಬೆಳಿಗ್ಗೆ ಪ್ರಥಮ ರಥವನ್ನು ಮತ್ತು ಅದರ ಜೊತೆಗೆ 21 ಕಿಲೋ ತೂಕದ ಬಸವಣ್ಣ ಮತ್ತು ಸಂಗಮೇಶ್ವರನ ಬೆಳ್ಳಿಯ ಮುಖವಾಡಗಳನ್ನು, ನಾಗರ ಹೆಡೆಯನ್ನು, ತೇರು ಎಳೆಯುವ ಹಗ್ಗ, ತೇರಿಗೆ ರುದ್ರಾಕ್ಷಿ ಮಾಲೆ, ಕಳಸ, ಇವುಗಳನ್ನು ಕುಂಟೋಜಿ ಮತ್ತು ಸುತ್ತಮುತ್ತಲ ಗ್ರಾಮಗಳ ಮಹಿಳಾ ಸಂಘಗಳ ನೇತೃತ್ವದಲ್ಲಿ ಸುಮಂಗಲೆಯರಿAದ ಭವ್ಯ ಕುಂಭ ಮೆರವಣಿಗೆ, ಮತ್ತು ಡೊಳ್ಳು, ಕರಡಿಮಜಲು, ಬೆಂಡುಬಾಜಿ, ಕೋಲಾಟ ನೃತ್ಯ ಸಂಗೀತಗಳ ಸಹಿತ ಸಾಂಪ್ರದಾಯಿಕ ವಾದನಗಳ ಭವ್ಯ ಮೆರವಣಿಗೆಯ ಜೊತೆಗೆ ಕುಂಟೋಜಿ ಗ್ರಾಮಕ್ಕೆ ಕರೆತರಲಾಗುತ್ತದೆ. ಮರುದಿನ ಜುಲೈ 31 ರಂದು ಬೆಳಿಗ್ಗೆ ಗೋಧೂಳಿ ಸಮಯದಲ್ಲಿ ಮುತೈದೆಯರಿಗೆ ಉಡಿ ತುಂಬುವ ಮೂಲಕ ರಥ ಜೋಡಿಸುವ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಆರಂಭಿಸಲಾಗುತ್ತದೆ. ಎಂದು ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ ಹೇಳಿದರು.

    ಅವರು ಶನಿವಾರ ಬೆಳಿಗ್ಗೆ ಕುಂಟೋಜಿ ಗ್ರಾಮದ ಗುರು ಹಿರಿಯರ ನೇತೃತ್ವದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಜಾತ್ರಾ ಮಹೋತ್ಸವ ಹಾಗೂ ರಥವನ್ನು ತರುವ ಕುರಿತು ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮಾಜಿ ಸೈನಿಕರಾದ ನಾಗಲಿಂಗಯ್ಯ ಮಠ, ರಥದ ಸ್ವಾಗತದ ಸಂದರ್ಭದಲ್ಲಿ ನಡೆಯವಬೇಕಾದ ಸಿದ್ಧತೆಗಳ ಕುರಿತು ಮಾರ್ಗದರ್ಶನ ನೀಡಿ ಮಾತನಾಡಿದರು.

    ಈ ಸಂದರ್ಭದಲ್ಲಿ ದೇವಸ್ಥನ ಕಮೀಟಿಯ ಉಪಾಧ್ಯಕ್ಷ ಆನಂದ ಗಸ್ತಿಗಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ನಾಟೀಕಾರ, ರಾಮಣ್ಣ ಹುಲಗಣ್ಣಿ, ಮಲ್ಲಿಕಾರ್ಜುನ ಹುಲಬೆಂಚಿ, ಗುರುಪಾದಪ್ಪ ಹೆಬ್ಬಾಳ, ಅಶೋಕ ಕಾಟಿ, ಈರನಗೌಡ ಬಿರಾದಾರ, ಬಸಲಿಂಗಪ್ಪಗೌಡ ಬಿರಾದಾರ, ಶರಣಬಸಪ್ಪ ಪಲ್ಲೇದ, ಸಂಗಮೇಶ ಕುಂಬಾರ, ಸಂಗನಗೌಡ ಪಾಟೀಲ, ಗುರುಪಾದಪ್ಪ ಹೆಬ್ಬಾಳ, ಶಿವಲಿಂಗಪ್ಪ ಗಸ್ತಿಗಾರ, ಬಸಪ್ಪ ಹೂಗಾರ, ಪ್ರಕಾಶ ಹೂಗಾರ, ಸಂಗಯ್ಯ ಮಠ, ಮಮಾತೆಪ್ಪ ಯರಝರಿ, ಮಲ್ಲನಗೌಡ ಬಿರಾದಾರ, ರಾಚಯ್ಯ ಮಠ, ಸಂಗಯ್ಯ ಮಠ, ಪವಾಡೆಪ್ಪ ತಾಂಬ್ರಳ್ಳಿ, ಸಂತೋಷ ಬಿರಾದಾರ, ಶಿವಪ್ಪ ಕೋಲಕಾರ, ಅಂಬ್ರೇಶ ಕಾಟಿ, ಶರಣಬಸ್ಸು ಫಣೇದಕಟ್ಟಿ, ಶರಣಗೌಡ ಬಿರಾದಾರ, ಮಂಜೂ ಅಬ್ಬಿಹಾಳಮಠ, ಶಿವು ಅಂದೇಲಿ, ಸಂಗಮೇಶ ಯರಝರಿ ಮತ್ತೀತರರು ಇದ್ದರು.

  • ನಲ್ ಜಲ್ ಮಿತ್ರ ಯೋಜನೆ ಸದುಪಯೋಗ ಪಡಿಸಿಕೊಳ್ಳಿ – ಸಿಇಒ ಲವೀಶ್ ಒರಾಡಿಯ

    ನಲ್ ಜಲ್ ಮಿತ್ರ ಯೋಜನೆ ಸದುಪಯೋಗ ಪಡಿಸಿಕೊಳ್ಳಿ – ಸಿಇಒ ಲವೀಶ್ ಒರಾಡಿಯ

    ಸತ್ಯಕಾಮ ವಾರ್ತೆ ಯಾದಗಿರಿ/ಕಡೆಚೂರು: 

    ಗ್ರಾಮೀಣ ಭಾಗದ ಮಹಿಳೆಯರು ನಲ್ ಜಲ್ ಮಿತ್ರ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಾಡಿಯ ಹೇಳಿದರು.

    ಕಡೆಚೂರು ಹೊರವಲಯದ ಕೈಗಾರಿಕ ಪ್ರದೇಶದಲ್ಲಿರುವ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ನಡೆದ ನಲ್ ಜಲ್ ಮಿತ್ರ ಯೋಜನೆಯ ನೀರು ವಿತರಣಾ ನಿರ್ವಾಹಕ ಬಹು ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ತರಬೇತಿಯಲ್ಲಿ ವಿತರಿಸಲಾಗುವ ಕಿಟ್ ಕುರಿತು ಸಂಪೂರ್ಣ ಮಾಹಿತಿ ಪಡೆಯಬೇಕು. ಇದರಿಂದ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುವಾಗ ಸಹಕಾರಿಯಾಗುತ್ತದೆ. ಮಹಿಳರಿಗೆ ನಲ್ಲಿ ನೀರಿನ ವಿತರಣಾ ವ್ಯವಸ್ಥೆ ಮತ್ತು ನೀರಿನ ಪ್ರಾಥಕ್ಷಿಕೆ ನೀಡಬೇಕು ಎಂದು ಹೇಳಿದರು.

    ಇದನ್ನೂ ಓದಿ: ಮುಖ್ಯೋಪಾಧ್ಯಾಯರು ಹಾಗೂ ಅಡುಗೆ ಸಹಾಯಕರ ಬದಲಾವಣೆಗೆ ಸೂಚನೆ

    ಈಗಾಗಲೇ ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರಿಗೆ ತರಬೇತಿ ನೀಡಿ ಸ್ವ ಉದ್ಯೋಗಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ನೀರು ವಿತರಣಾ ನಿರ್ವಾಹಕರಿಗೆ ಬಹು ಕೌಶಲ್ಯ ತರಬೇತಿ ನೀಡಲಾಗುತ್ತದೆ.ಮಹಿಳೆಯರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲ ರವಿಚಂದ್ರ ಮಾತನಾಡಿ, ಈ ಸಂಸ್ಥೆಯಲ್ಲಿ ತಮಗೆ ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತವೆ. ಗ್ರಾಮೀಣ ಭಾಗದ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಈ ವೇಳೆ ಯೋಜನಾ ನಿರ್ದೇಶಕ ಸಿಬಿ ದೇವರ ಮನೆ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಆನಂದ್ ನಲ್ ಜಲ್ ಮಿತ್ರ ಯೋಜನೆಯ ಅಧಿಕಾರಿಗಳಾದ ಗಿರೀಶ್, ಸುಮಂಗಲ,ರಮೇಶ್, ಕೇಂದ್ರದ ಸಿಬ್ಬಂದಿ ಮತ್ತು ಮಹಿಳೆಯರು ಉಪಸ್ಥಿತರಿದ್ದರು.